ವಿಷಯದ ವಿವರಗಳಿಗೆ ದಾಟಿರಿ

Archive for

21
ಫೆಬ್ರ

ಅವರು ನಿಷ್ಕ್ರಿಯರ ‘ಗಾಂಧಿ’ ಆಗಿರಲಿಲ್ಲ.. ಕ್ರೀಯಾಶೀಲರ ‘ನೇತಾಜಿ’ ಆಗಿದ್ದರು…

-ಅಶ್ವಿನ್ ಅಮೀನ್

ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಹೇಳ ಹೊರಟರೆ ಅದು ಇಂದು ನಾಳೆಗೆ ಮುಗಿಯುವಂತದ್ದಲ್ಲ.. ಆ ಪ್ರವಾಹೋಪಾದಿಯ ಘಟನೆಗಳೇ ಹಲವು ಕೋಟಿ ಪುಟಗಳ ಮಹಾ ಗ್ರಂಥವಾದೀತು.! ಆ ಸಮಯದಲ್ಲಿ ಭಾರತ ಮಾತೆಯ ಬಿಡುಗಡೆಗಾಗಿ ಹೋರಾಡಿದ ಮಹಾನ್ ನಾಯಕರುಗಳೆಷ್ಟೋ, ಹೋರಾಟಗಾರರೆಷ್ಟೋ.. ಅಂತಹ ಹಲವರ ಮದ್ಯೆ ಭಿನ್ನವಾಗಿ ನಿಲ್ಲುವ, ಅಹಿಂಸಾವಾದವನ್ನು ಬಹಿರಂಗವಾಗಿ ವಿರೋಧಿಸಿದ, ಭಗವದ್ಗೀತೆಯ ತಿರುಳಾದ ದುಷ್ಟದಮನ ಶಿಷ್ಟಪಾಲನವನ್ನು  ಅನುಷ್ಠಾನಕ್ಕೆ ತರಲು ಯತ್ನಿಸಿದ ಧೀಮಂತ ನಾಯಕ, ಕ್ರಾಂತಿ ಪುರುಷ ನೇತಾಜಿ ಸುಭಾಶ್ ಚಂದ್ರ ಬೋಸ್ ರ ಜನ್ಮ ದಿನ (ಜನವರಿ 23).

ನೇತಾಜಿಯವರ ಹೋರಾಟದ ದಿನಗಳು ರಾಷ್ಟ್ರೀಯ ಕಾಂಗ್ರೆಸ್ ನಿಂದ ಆರಂಭವಾಯಿತು. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ಆದರೆ ಗಾಂಧೀಜಿ ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ತಮ್ಮ ನಾಯಕತ್ವದ ಚಳುವಳಿಗಳಲ್ಲಿ  ಎಲ್ಲಾದರೂ ಹಿಂಸಾ ಘಟನೆಗಳು ನಡೆದರೆ ಅದನ್ನು ವಿರೋಧಿಸುತ್ತಿದ್ದರು. ಯಾಕೆಂದರೆ ಬ್ರಿಟಿಷರಿಗೆ ನೋವಾಗುವುದು ಗಾಂಧೀಜಿಯವರಿಗೆ ಇಷ್ಟವಿರಲಿಲ್ಲ. !!!! ಗಾಂಧೀಜಿಯವರ ಪ್ರತಿಯೊಂದು ಚಳುವಳಿಗಳಲ್ಲೂ ಇದು ಎದ್ದು ಕಾಣುತ್ತದೆ.! ಇದು ಬಿಸಿ ರಕ್ತದ ಯುವಕ ಸುಭಾಷ್ ಚಂದ್ರ ಬೋಸ್ ರಿಗೆ ಸಹ್ಯವಾಗಲಿಲ್ಲ. ಅದನೆಲ್ಲ ಒಪ್ಪಿಕೊಳ್ಳಲು ಅವರು ಗಾಂಧಿಯಾಗಿರಲಿಲ್ಲ..! ಅವರು ಸುಭಾಶ್ ಚಂದ್ರ ಬೋಸ್ ಆಗಿದ್ದರು..! ಕ್ರಾಂತಿ ಕ್ರಾಂತಿ ಎಂದು ಜಪಿಸುತಿದ್ದ ನೇತಾಜಿಯವರ ಮನಸ್ಸು ಈ ಗಾಂಧಿಯ  ಶಿಖಂಡಿತನವನ್ನು ಒಪ್ಪಿಕೊಳ್ಳುವುದಾದರೂ ಹೇಗೆ..?! ಮುಂದೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದರೂ ಗಾಂಧೀಜಿ ಸುಭಾಷರ ಜಯವನ್ನು ಒಪ್ಪದ ಕಾರಣ ಹಾಗು ತನ್ನ ಮನಸ್ಸಿಗೆ ವಿರುದ್ಧವಾದ ಭಾವನೆ ಹೊಂದಿರುವ ಗಾಂಧೀಜಿಯೊಡನೆ ಮುಂದುವರಿಯಲು ಸಾಧ್ಯವಾಗದ ಕಾರಣ ನೇತಾಜಿ ಕಾಂಗ್ರೆಸ್ ನಿಂದ ಅನಿವಾರ್ಯವಾಗಿ ಹೊರಬಂದರು. ಅಲ್ಲಿಂದ ಸುಭಾಷರ ಕ್ರಾಂತಿಯ ಜೀವನ ಆರಂಭವಾಯಿತು. ಜೊತೆಗೆ ಭಾರತದ ಕ್ರಾಂತಿಯ ಪುಟಕ್ಕೆ ಹೊಸ ತಿರುವು ಕೂಡ..!

ಮತ್ತಷ್ಟು ಓದು »

21
ಫೆಬ್ರ

ಎಷ್ಟು ಶುದ್ಧ ಮಾಡಿದರೂ ಕೊಚ್ಚೆ ಕೊಚ್ಚೆಯೇ

ವಿಷ್ಣುಪ್ರಿಯ

ತಾನು ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಮಾನವಭ್ರಮೆಗೆ ಪ್ರತಿ ಬಾರಿಯೂ ತಡೆ ಬೀಳುತ್ತಿದೆ ಎಂಬುದು ದಿಟವಾಯಿತು. ಪ್ರಕೃತಿಯ ನಿರ್ಧಾರಗಳ ಮೇಲೆ ಮಾನವ ತನ್ನ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಪ್ರಕೃತಿ ಮಾನವನಿಗಿಂತಲೂ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಕೂಡಾ ಸ್ಪಷ್ಟವಾಯಿತು.

ಈ ಚರಂಡಿಗಳಲ್ಲಿ ಹರಿಯುವ ನೀರನ್ನು ನೊಡಿದರೆ ಮೈಯೆಲ್ಲಾ ಜಿರಳೆ ಹರಿದಂತಾಗುತ್ತದೆ! ಬೆಂಗಳೂರಿಗರಿಗಂತೂ ಮಳೆ ಬಂದು ಚರಂಡಿಯಲ್ಲಿ ನೀರುಕ್ಕಿ ಹರಿದರೆ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಬಂದೀತು! ಬೆಂಗಳೂರಿನಲ್ಲಿ ಚರಂಡಿಗಳ ನೀರು ಅದ್ಯಾವ ಕೆರೆ ಸೇರುತ್ತದೆ ಎಂದು ನೋಡುವುದಕ್ಕೆ ಹೊರಟರೆ ಆ ಕೆರೆಯಿಂದಲೇ ನಮಗೆ ವಿತರಣೆಯಾಗುವಂಥ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ. ನಿರನ್ನು ಶುದ್ಧೀಕರಿಸಿಯೇ ಕೆರೆಗೆ ಬಿಡಲಾಗುತ್ತದೆ, ಕೆರೆಯ ನಿರನ್ನು ಶುದ್ಧೀಕರಿಸಿಯೇ ಕುಡಿಯುವುದಕ್ಕೆ ನೀಡಲಾಗುತ್ತದೆ. ಹೀಗಾಗಿ ಆ ನೀರಿನಿಂದ ಏನೂ ಸಮಸ್ಯೆ ಆಗದು ಎಂದು ಆಧಿಕಾರಿಗಳು ಹೇಳಿದರು ಎಂದಾದರೆ ಅವರ ಮಾತನ್ನು ನಂಬಬೇಡಿ. ಯಾಕೆಂದರೆ ಕೊಚ್ಚೆ ನೀರನ್ನು ಅದೆಷ್ಟೇ ಶುದ್ಧೀಕರಿಸಿದರೂ ಸಹ, ಅದ್ಯಾವ ಅತ್ಯಾಧುನಿಕ ತಂತ್ರಜ್ಞಾನದಿಂದ ಶುದ್ಧೀಕರಿಸಿದರೂ ಸಹ ಅದರಲ್ಲಿರುವ ವೈರಾಣುಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ ಎಂದು ವಿಜ್ಞಾನಿಗಳ ತಂಡವೊಂದರ ಸಂಶೋಧನೆ ಹೇಳುತ್ತಿದೆ.

ಯೂನಿವರ್ಸಿಟಿ ಆಫ್ ಮಿನೆಸೋಟಾದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಶುದ್ಧೀಕರಿಸಿದ ನೀರಿನಲ್ಲಿಯೂ ಸಹ ಬಹಳಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಇತರ ವೈರಾಣುಗಳು ಇರುತ್ತವೆ. ಈ ವೈರಾಣುಗಳು ಸೋಂಕು ನಿರೋಧಕಗಳು ಅಥವಾ ಆಂಟಿಬಯಾಟಿಕ್ ಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಇವುಗಳ ಕಾರಣದಿಂದಾಗಿಯೇ ಹಲವು ರೋಗಗಳು ಹರಡುತ್ತವೆ ಎಂಬ ವಾಸ್ತವಾಂಶ ತಿಳಿದುಬಂದಿದೆ.

ಮತ್ತಷ್ಟು ಓದು »