ವಿಷಯದ ವಿವರಗಳಿಗೆ ದಾಟಿರಿ

Archive for

16
ಫೆಬ್ರ

ಟಿವಿ ಮಾಧ್ಯಮಗಳು: ಕಳ್ಳನನ್ನು ಹಿಡಿದ ಪೊಲೀಸರನ್ನೇ ಶಿಕ್ಷಿಸಿದ ಕತೆ…

-ಚಂದ್ರಶೇಖರ್ ಮಂಡೆಕೋಲು

ಕಳ್ಳನನ್ನು ಹಿಡಿದ ಪೊಲೀಸರನ್ನೇ ಕಿತ್ತು ಹಾಕುವ ಯೋಜನೆಗೆ ನಮ್ಮ ಆಳುವವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ಹೇಸಿಗೆ ಮಾಡಿದ್ದನ್ನು ಯಾವ ನಾಚಿಕೆಯೂ ಇಲ್ಲದೆ ಸಮಥ್ರಿಸಿಕೊಳ್ಳುವವರು ನಮ್ಮೆದುರಿದ್ದಾರೆ ಎಂದರೆ ಏನೆನ್ನಲಿ? ಬಹುಶಃ ಇವೆಲ್ಲದಕ್ಕೂ ಹದಗೆಡುತ್ತಿರುವ ರಾಜಕಾರಣಿಗಳ ನೈತಿಕತೆಗಿಂತಲೂ, ಮಾಧ್ಯಮಗಳ ಕಟ್ಟೆಚ್ಚರವೇ ಕಾರಣ ಎಂದು ನಂಬಿದಂತಿದೆ ನಮ್ಮ ಸರಕಾರ. ಹೋದಲ್ಲೆಲ್ಲ ಹಿಂಬಾಲಿಸುತ್ತಲೇ, ತಮ್ಮ ಅನೈತಿಕತೆಯನ್ನು ಜಗತ್ತಿನೆದುರು ಸಾರಾಸಗಟಾಗಿ ಅನಾವರಣಗೊಳಿಸುತ್ತಿರುವ ಮಾಧ್ಯಮಗಳ ಗುಮ್ಮಕ್ಕೆ ಸರಕಾರ ಬೆದರಿದೆಯೇ? ಸದನ ಕಲಾಪವನ್ನು ಬಿತ್ತರಿಸಲು ಪ್ರತ್ಯೇಕ ಸರಕಾರಿ ಚಾನೆಲ್ ಪ್ರಸ್ತಾವ ಮುಂದಿಟ್ಟಿರುವುದು ಈ ಗುಮಾನಿ ಮೂಡಲು ಕಾರಣ.

ಲೋಕಸಭೆ, ರಾಜ್ಯ ಸಭೆಗಳ ಅಧಿವೇಶನವನ್ನು ಬಿತ್ತರಿಸಲು ಕೇಂದ್ರದಲ್ಲೊಂದು ಪ್ರತ್ಯೇಕ ಚಾನೆಲ್ ಇದೆ ಸರಿ. ಅಲ್ಲಿ ಅಂಥ ಚಾನೆಲ್ ಆರಂಭಿಸಿರುವುದಕ್ಕೂ ಒಂದು ಗಟ್ಟಿ ಕಾರಣ ಇದೆ. ದೇಶದ ಕೇಂದ್ರ ಬಿಂದುವಂತಿರುವ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನು ದೇಶ ಬಾಂಧವರೆಲ್ಲಾ ನೋಡಬೇಕು. ಅವಷ್ಟನ್ನೂ ಪ್ರಸಾರಿಸಲು ನವದೆಹಲಿಯಲ್ಲಿರುವ ಚಾನೆಲ್ಗಳು, ಎಲ್ಲಾ ರಾಜ್ಯಗಳಲ್ಲಿರುವ ಸ್ಥಳೀಯ ಚಾನೆಲ್ ಪ್ರತಿನಿಧಿಗಳು ತಮ್ಮ ಕ್ಯಾಮರಾ ಸಮೇತ ಸಂಸತ್ತಿನಲ್ಲಿ ಸ್ಟ್ಯಾಂಡ್ ಊರಿದರೆ ಜಾಗ ಎಲ್ಲಿ ಸಾಕಾದೀತು? ಈ ಪ್ರಮುಖ ಉದ್ದೇಶದಿಂದ ಸಂಸತ್ ಕಲಾಪದ ಪ್ರಸಾರಕ್ಕೆಂದು ಪ್ರತ್ಯೇಕ ಚಾನೆಲನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅದಕ್ಕೆ ಬೇಕಾದಷ್ಟು ದುಡ್ಡೂ ಕೇಂದ್ರದಲ್ಲಿತ್ತು. ಯಶಸ್ವಿಯಾುತು ಕೂಡಾ. ಆದರೆ ರಾಜ್ಯದಲ್ಲಿ ಇಂಥ ದದ್ರು ಇದೆಯಾ? ನಮ್ಮಲ್ಲಿರುವ ಆರೇಳು ಚಾನೆಲ್ಗಳ ಕ್ಯಾಮರಾ ಸ್ಟ್ಯಾಂಡ್ ಊರುವುದಕ್ಕೆ ಕೆಂಪೇಗೌಡರು ಕಟ್ಟಿಸಿದ ನಮ್ಮ ಹೆಮ್ಮೆಯ, ಅಷ್ಟು ದೊಡ್ಡ ಸೌಧದಲ್ಲಿ ಜಾಗ ಸಾಕಾಗದಾ?
ವೊನ್ನೆ ಮಾಸ್ಟರ್ ಹಿರಣ್ಣಯ್ಯ ಅವರು ವಾಹಿನಿಯ ಕಾಯ್ರಕ್ರಮವೊಂದರಲ್ಲಿ ಹೇಳಿದ್ದರು- ಕಾಲ ಕೆಟ್ಟು ಹೋಗಿದೆ ಸ್ವಾಮೀ, ಸದನದಲ್ಲೇ ಹುಡುಗಿಯನ್ನು ರೇಪ್ ಮಾಡುವ ಕಾಲ ದೂರದಲ್ಲೇನೂ ಇಲ್ಲ, ನೋಡ್ತಿರಿ ಅಂತ. ಈಗ ಅಲ್ಲಿ ಬ್ಲೂ ಫಿಲಂ ನೋಡಿದ್ದಾರೆ, ಇನ್ನೇನೇನು ಮಾಡ್ತಾರೋ? ಇವೆಲ್ಲದರ ಅರಿವಿದ್ದೂ ನಮ್ಮ ಸರಕಾರ ಮಾಧ್ಯಮಗಳ ಕ್ಯಾಮರಾ ಲೆನ್್ಸಗೆ ಬೆದರಿ ಇಂಥ ನಿಧ್ರಾರಕ್ಕೆ ಬಂದಿದೆಯೇ? ಸರಕಾರಿ ಚಾನೆಲ್ ಎಂದ ಮೇಲೆ ಅವರು ಏನು ಮಾಡಿದ್ರೂ ನಮಗೆ ತೋರಿಸುತ್ತಾರಾ? ಮತ್ತಷ್ಟು ಓದು »

16
ಫೆಬ್ರ

ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ್ಲ

-ರಾಕೇಶ್ ಎನ್ ಎಸ್

 
ಭಾರತದ ರಾಷ್ಟ್ರಪತಿ ಹುದ್ದೆ, ಮುಖ್ಯ ನ್ಯಾಯಾಧೀಶ ಸ್ಥಾನ ಹೀಗೆ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ದಲಿತರು ಒಂದಿಲ್ಲ ಒಂದು ಕಾಲಘಟ್ಟದಲ್ಲಿ ಅಲಂಕರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಹುದ್ದೆ ಮಾತ್ರ ಅವರಿಗೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಲ್ಲವೂ ಲೆಕ್ಕಾಚಾರ, ಸಾಮರ್ಥ್ಯ ಮತ್ತು ಪ್ರತಿಭೆಗನುಗುಣವಾಗಿ ನಡೆದಿದ್ದರೆ ಇಂದು ಲೋಕಸಭೆಯ ಸ್ಪೀಕರ್ ಆಗಿರುವ ಮೀರಾಕುಮಾರ್‌ರವರ ತಂದೆ, ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ೮೦ರ ದಶಕದ ಅಸುಪಾಸಿನಲ್ಲೇ ಈ ದೇಶದ ಮೊದಲ ದಲಿತ ಪ್ರಧಾನಿಯಾಗಬೇಕಿತ್ತು. ಆದರೆ ಆಗಲಿಲ್ಲ, ಆಗಲೂ ಬಿಡಲಿಲ್ಲ! ಕಾರಣ ಅವರ ಮಗ, ಮೀರಕುಮಾರ್‌ರ ಸೋದರ ಸುರೇಶ್ ರಾಮ್‌ನ ಚಿತ್ರ ೧೯೭೮ರಲ್ಲಿ ಮಾಸಿಕ ಪತ್ರಿಕೆಯೊಂದರಲ್ಲಿ ಒಬ್ಬಳು ಮಹಿಳೆಯ ಜೊತೆ ಪ್ರಕಟಗೊಂಡು ಲೈಂಗಿಕ ಹಗರಣದ ಕಿಡಿ ಹೊತ್ತಿಸಿದ್ದು. ಈ ರೀತಿ ಭಾರತ ಕಂಡ ಒಬ್ಬ ಧೀಮಂತ ನಾಯಕನ ರಾಜಕೀಯ ಅಧಃಪತನಕ್ಕೆ ಆತನ ಮಗನೇ ಮುನ್ನುಡಿಯಾದ.ಇಂದು ಭಾರತೀಯ ರಾಜಕಾರಣದಲ್ಲಿ ಜಗ ಜೀವನ್ ರಾಮ್‌ರ ಪರಂಪೆಯನ್ನು ಬಳವಳಿಯಾಗಿ ಪಡೆದವರು ದುರ್ಬಿನಿಟ್ಟು ಹುಡುಕಿದರು ಸಿಗುವುದು ಅನುಮಾನ. ಆದರೆ ಅವರ ಮಗನಂತವರ ಸಂತತಿ ಸಾವಿರ ಸಾವಿರವಾಗಿ ದೇಶದ ಬಹುತೇಕ ಎಲ್ಲ ಶಾಸನ ಸಭೆಗಳೊಳಗೆ ನುಸುಳಿ ಬಿಟ್ಟಿವೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಉತ್ತರಖಂಡ, ಜಾರ್ಖಂಡ್, ರಾಜಸ್ತಾನ ಹೀಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಶಾಸನ ಸಭೆಗಳಲ್ಲಿ ದುಶ್ಯಾಸನರು ಆಸೀನರಾಗಿದ್ದಾರೆ. ಮತ್ತೊಂದು ಸಂಗತಿಯೆಂದರೆ ಈ ದುಶ್ಯಾಸನರು ಉತ್ತರದ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳಲ್ಲಿದ್ದು ಪಕ್ಷಾತೀತ ರಾಜ(ಕಾಮ)ಕಾರಣ ಮಾಡುತ್ತಿದ್ದಾರೆ. ಮತ್ತಷ್ಟು ಓದು »
16
ಫೆಬ್ರ

ರುದ್ರಾಕ್ಷಿ

-ಸುಗುಣ ಮಹೇಶ್

“ರುದ್ರಾಕ್ಷಿ” ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ. “ರುದ್ರ್ಚ ಮತ್ತು ಅಕ್ಷ” ಎಂಬ ಎರಡು ಶಬ್ಧಗಳಿಂದಾದ  ರೂಪವೇ ರುದ್ರಾಕ್ಷಿ. “ರುದ್ರ” ಎಂದರೆ ಶಿವನ ಮತ್ತೊಂದು ಹೆಸರು. “ಅಕ್ಷ” ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ.
ರುದ್ರ್ಚ ಅಕ್ಷ ಎಂಬುದಕ್ಕೆ ಬಹಳ ಅರ್ಥಗಳೇ ಇವೆ… “ರುದ್ರ ಎಂದರೆ! ‘ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ’ ಅಂದರೆ ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ’ ಎಂಬ ಅರ್ಥ”  ಶಿವ ತನ್ನ ಮೂರನೇ ಕಣ್ಣಿನಿಂದ ಎಲ್ಲವನ್ನೂ ನೋಡಬಲ್ಲ ಆ ಕಣ್ಣು ಅಕ್ಷರೇಖೆಯ ಸುತ್ತ ಸುತ್ತುತ್ತಲಿರುತ್ತದೆ ಆದ್ದರಿಂದಲೇ “ಅಕ್ಷ” ಎಂದು ಕರೆಯುತ್ತಾರೆ. ಮತ್ತೊಂದು ಅರ್ಥವನ್ನು ಎಲ್ಲೋ ಓದಿದ ನೆನಪು ಅ- ಎಂದರೆ ತೆಗೆದುಕೊಳ್ಳುವುದು ಮತ್ತು ಕ್ಷ- ಎಂದರೆ ಕೊಡುವುದು ಎಂದರ್ಥ, “ಅಕ್ಷ” ಎಂದರೆ ತೆಗೆದುಕೊಳ್ಳುವುದು ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ನಮ್ಮ ದುಃಖವನ್ನು ತೆಗೆದುಕೊಂಡು ಸುಖವನ್ನು ಕೊಡುವ ಕ್ಷಮತೆ ಇರುವುದೆಂದು ಸಹ ಹೇಳುತ್ತಾರೆ.
ತಾರಕಾಕ್ಷ ಮತ್ತು ಕಮಲಾಕ್ಷರೆಂಬ ತಾರಕಪುತ್ರರು ಅಧರ್ಮಗಳ ಆಚರಣೆಯಲ್ಲಿ ತೊಡಗಿಸಿಕೊಂಡಿರುವಾಗ ಅತಿ ವಿಷಾದದಿಂದ ಅಶ್ರುಗಳಿಂದ ತುಂಬಿದ್ದ ಶಿವನ ನೇತ್ರದಿಂದ ಕೆಲವು ಕಂಬನಿಗಳು ಭುವಿಯ ಮೇಲೆ ಬಿದ್ದ ಪರಿಣಾಮದಿಂದಲೇ “ರುದ್ರಾಕ್ಷಿ ವೃಕ್ಷ” ಹುಟ್ಟಿತೆಂದು ಹೇಳಲಾಗುತ್ತದೆ.