ವಿಷಯದ ವಿವರಗಳಿಗೆ ದಾಟಿರಿ

Archive for

29
ಫೆಬ್ರ

“ಸ್ಥಾನ” ಕೇಳಿಕೊಂಡು ಹೋಗಿ “ಮಾನ” ಕಳೆದುಕೊಂಡ ಯಡಿಯೂರಪ್ಪ

 ನಿತಿನ್ ರೈ ಕುಕ್ಕುವಳ್ಳಿ
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಶ್ರೀಯುತ ಯಡಿಯೂರಪ್ಪನವರು ಈನ್ನ ಪಕ್ಷದ ಹೈಕಮಾಂಡ್ ಗೆ ಬೇಡವಾಗಿದ್ದಾರೆ. ಅಕ್ರಮ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಸಿಲುಕಿ ಜೈಲು ಊಟದ ರುಚಿ ಸವಿದು ಹೊರಬಂದಿರುವ ಯಡ್ಡಿ ಅವರಿಗೆ ಮತ್ತೊಮ್ಮೆ ಬಿ ಜೆ ಪಿ ಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ರಾಷ್ಟೀಯ ಅದ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅವರನ್ನ ಬೇಟಿಯಾದ ಯಡ್ಡಿಯವರು “ಗಡ್ಕರಿ ಸಾಹೇಬ್ರೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ರು ನಡಿತ್ರಿ ಆದ್ರೆ ರಾಜ್ಯಾದ್ಯಕ್ಷ ಸ್ಥಾನ ಕೊಡಿ ಸರ್ ” ಎಂದು ಗೋಗರೆದರು, ಆದರೆ ನಮ್ಮ ರಾಷ್ಟ್ರದ್ಯಕ್ಷರು ಸರ್ ನಿಮ್ಮ ಸಾಧನೆ ಅಪಾರ ನಿಮ್ಮ ನೇತೃತ್ವದಲ್ಲಿ ನಮ್ಮ ಮಂತ್ರಿಗಳ ಸಾಧನೆ ದೇಶ ವಿದೇಶದ ಪೇಪರ್ ಗಳ ಮುಖ್ಯಪುಟದಲ್ಲಿ ಬಂದಿದೆ ಹಾಗೆ ಒಬ್ಬ ಜೈಲ್ ನಿಂದ ಹೊರಬಂದರೆ ಮತ್ತೊಬ್ಬ ಜೈಲ್ ಕಡೆ ಹೋಗುತ್ತಿದ್ದ ಆದ್ದರಿಂದ ಸರ್ ನೀವ್ ಆರಾಮವಾಗಿ ವಿಶ್ರಾಂತಿ ಪಡೆದು ಮೊಮ್ಮಕ್ಕಳ ಜೊತೆ ಆಟಡ್ತಿರಿ ರಾಜಕೀಯ ಸಾಕು. ನಮ್ಮ ಸದಾನಂದ ಗೌಡರು ಬಿ ಜೆ ಪಿ ಯನ್ನ ಅಧಿಕಾರದಲ್ಲಿ ಮುಂದುವರಿಸಲಿ ಎಂದು ಹೇಳಿದ್ದೆ ತಡ ಯಡ್ಡಿ ಸಾಹೇಬರು ಬಲ ಪ್ರದರ್ಶನಕ್ಕೆ ತನ್ನ ಹುಟ್ಟು ಹಬ್ಬದ ದಿನ 70 ಕೆಜಿ ಕೇಕ್ ರೆಡಿ ಮಾಡಿಬಿಟ್ರು .. ಅದನ್ನ ತನ್ನ ಬೆಂಬಲಿಗರ ಹಾಗು ಅಭಿಮಾನಿ ದೇವರುಗಳ ಮುಂದೆ ಚೂರಿಯಿಂದ ಕಟ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಬಹಳ ಜೋರಾಗೆ ನಡಿತು ಸ್ವಾಮೀಜಿಗಳು ಕೆಲವೊಂದು ಶಾಸಕರು ಆಪ್ತರು ಸೇರಿಕೊಂಡು ಹ್ಯಾಪಿ ಬರ್ತ್ ಡೇ ಹಾಡಿದ್ದೆ ಹಾಡಿದ್ದು ಯಡ್ಡಿ ಫುಲ್ ಕುಶಿ.

ಆದರೆ ಬರ್ತ್ ಡೇ ಪಾರ್ಟಿಗೆ ಬಂದವರೆಷ್ಟು ಜನ ? ಯಡಿಯೂರಪ್ಪ ಅವರಿಂದ ಎಲ್ಲ ರೀತಿಯ ಸಹಾಯ ಪಡೆದ ಅವರ ಆಪ್ತ ನೆಂಟರು ಯಡ್ಡಿ ಅವರನ್ನ ನಡು ಬೀದಿಯಲ್ಲಿ ಬಿಟ್ಟು ಹೋದರೆ ? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ..ರಾಜಕೀಯ ಅನ್ನೋದು ಅಧಿಕಾರ ಇರುವ ತನಕ ಅಷ್ಟೇ ಅನ್ನೋದಕ್ಕೆ ಯಡ್ಡಿ ಅವರ ಜೀವನವೇ ಸಾಕ್ಷಿ ..ರಾಜಕೀಯದಲ್ಲಿ ಸ್ವಲ್ಪ ಯಾಮಾರಿದರು ತನ್ನ ಹಿಡಿತ ಸಡಿಲಗೊಳ್ಳುವುದು ಅನ್ನೋದಕ್ಕೆ ಯಡ್ಡಿ ಸಾಹೇಬರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸುತ್ತೆ .ಯಡಿಯೂರಪ್ಪ ಎಷ್ಟಾದರೂ ಸುಮ್ಮನೆ ಕೂರುವ ಮನುಷ್ಯನಲ್ಲ ರಾಜಕೀಯ ಆಟ ಯಡ್ಡಿ ಅವರಿಗೆ ಹುಟ್ಟಿನಿಂದಲೇ ಬಂದ ಕಲೆಯಾಗಿದೆ ಸದಾನಂದ ಗೌಡ ರ ಕುರ್ಚಿಯನ್ನ ಅಲುಗಾಡಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುದರಲ್ಲಿ ನೋ ಡೌಟ್. Read more »

29
ಫೆಬ್ರ

ಗಡಾಫಿಯಿಲ್ಲದ ಲಿಬಿಯಾ

-ಉದಯ್ ಇಟಗಿ

ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.

ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. Read more »