ಯಶಸ್ಸಿನ ಹೋರಾಟದ ನಡುವೆ ಇನ್ನೊಂದು ಟಿವಿ
-ಕಾಲಂ ೯
HR ರಂಗನಾಥ್‍ರವರ ಬಹು ನಿರೀಕ್ಷಿತ ಪಬ್ಲಿಕ್ ಟಿವಿಯ ಆರಂಭದೊಂದಿಗೆ ಕನ್ನಡ ಮಾಧ್ಯಮ ಜಗತ್ತು ಒಂದು ಸುತ್ತಿ ಪೂರ್ಣಗೊಳಿಸಿದಂತಾಗಿದೆ. ‘ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ’ ಇದು ಕೇವಲ ಘೋಷಣೆಯ ಮಾತಲ್ಲ, ರಂಗನಾಥ್ ತಮ್ಮ ಚಾನೆಲ್ಗಾಗಿ ಹಣ ಹೂಡಿದವರ ವಿವರವನ್ನೂ ಕೊಡುವುದಾಗಿ ಹೇಳಿಕೊಂಡಿದ್ದಾರೆ.
ರಂಗನಾಥ್ ಪುನರಾಗಮನದೊಂದಿಗೆ ಪಕ್ಕಕ್ಕೆ ಸರಿದವರೆಲ್ಲ ಮಾಧ್ಯಮದ ಮುಖ್ಯ ಭೂಮಿಕೆಗೆ ಬಂದಂತಾಗಿದೆ. ರಂಗನಾಥ್, ದೈತೋಟ, ವಿಶ್ವೇಶ್ವರ ಭಟ್, ಶಿವಸುಬ್ರಹ್ಮಣ್ಯ, ಜೋಗಿ, ರವಿ ಹೆಗಡೆ, ಜಿ ಎನ್ ಮೋಹನ್, ತಿಮ್ಮಪ್ಪ ಭಟ್, ಪೂರ್ಣಿಮಾ ಹೀಗೆ ಕಳೆದ ವರ್ಷ ಪಕ್ಕಕ್ಕೆ ಸರಿದವರ ಉದ್ದದ ಪಟ್ಟಿಯೇ ಇತ್ತು. ಈಗ ಈಶ್ವರ ದೈತೋಟ ಬಿಟ್ಟರೆ ಮತ್ತೆಲ್ಲರೂ ಮಾಧ್ಯಮದ ಮುಖ್ಯ ಜವಾಬ್ದಾರಿಗಳಿಗೆ ಬಂದಂತಾಗಿದೆ. ವರ್ಷವಿಡೀ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಗಿದ್ದ ಕನ್ನಡ ಮಾಧ್ಯಮ ಜಗತ್ತು ಇದೀಗ ಸ್ಥಿರಗೊಂಡಿದೆ ಎನ್ನಬಹುದು. ನಿಜವಾದ ಪೈಪೋಟಿಯ ದಿನಗಳನ್ನು ಮುಂದೆ ನಿರೀಕ್ಷಿಸಬಹುದು.
ಕಳೆದ ಐದು ವರ್ಷಗಳ ಮಾಧ್ಯಮ ಬೆಳವಣಿಗೆಯನ್ನು ಗಮನಿಸಿದರೆ ಅನೇಕ ಹೊಸ ಸುದ್ದಿವಾಹಿನಿಗಳು ಬಂದಿವೆ. ದಿನಪತ್ರಿಕೆಗಳ ಹೊಸ ಎಡಿಷನ್‍ಗಳು ಆರಂಭಗೊಂಡಿವೆ. ಪೂರ್ಣ ಪ್ರಮಾಣದ ಯಶಸ್ಸಿನ ಕಥೆಯಾಗಿ ಎಲ್ಲರೆದುರು ನಿಂತಿರುವುದು ವಿಜಯ ಕರ್ನಾಟಕ, ಟಿವಿ9 ಮಾತ್ರ. ಸುವರ್ಣ ಸ್ಯೂಸ್ ಸಕಷ್ಟು impact ಮಾದಿದರೂ ‘ಯಶಸ್ಸಿನ ಕಥೆ’ ಎಂದು ಹೇಳುವಂತಿಲ್ಲ. ಮತ್ತಷ್ಟು ಓದು
ಕಾಂಗ್ರೆಸಿಗರು ತಮ್ಮ ’ಕೈ’ಯಲ್ಲಿ ತೊಳದದ್ದೇನನ್ನು ಹಾಗು ಬಳಿದದ್ದೇನನ್ನು ?
-ಅರುಣ್ ಕಶ್ಯಪ್
ಬಿಜೆಪಿ ಸಚಿವತ್ರಯರ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ವಿಧಾನಸೌಧದ ಚಿತ್ರದ ಬದಲಾಗಿ, ಅದೇ ರೀತಿ ಕಾಣುವ ಮೈಸೂರಿನ ಲಲಿತ ಮಹಲ್ ಅರಮನೆಯ (ಹೋಟೆಲ್) ಚಿತ್ರವನ್ನು ಶುಚಿಗೊಳಿಸಿ ಪ್ರತಿಭಟನೆ ನಡೆಸಿದರು. !!! ಪ್ರತಿಭಟನೆ ನಡೆಸಿದವರನ್ನು ಕೇಳಿದರೆ ಈ ಚಿತ್ರವನ್ನು ಮಂಗಳೂರಿನ ಲ್ಯಾಬ್ ಒಂದರಿಂದ ಕಾರ್ಯಕರ್ತರೊಬ್ಬರು ತೆಗೆದುಕೊಂಡು ಬಂದಿದ್ದರು. ಗೂಗಲ್ ನಲ್ಲಿ ವಿಧಾನಸೌಧಕ್ಕೆ ಸಂಬಂಧಿಸಿದ 14 ಬೇರೆ ಬೇರೆ ಮಾದರಿಯ ಚಿತ್ರಗಳಿದ್ದು ಅದರಿಂದ ಒಂದನ್ನು ಆಯ್ದು ಮುದ್ರಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಸದನದಲ್ಲೇ ಇವರ ನಾಯಕರು ಮಾಂಸದೂಟ ಮಾಡಿ ಅಗೌರವ ತೋರಿದ ಮೇಲೆ ಇನ್ನು ಇವರ ಬೆಂಬಲಿಗರಿಗೆ ವಿಧಾನಸೌಧ ಪಂಚತಾರ ಹೋಟೇಲ್ ನಂತೆ ಕಾಣುತ್ತಿರುವುದು ತಪ್ಪೇನಿಲ್ಲ ಬಿಡಿ.
ಹಾಗು….
ಮತ್ತಷ್ಟು ಓದು
ರವಿ ಬೆಳಗೆರೆ ಎಂಬ ಕಿಲಾಡಿ ಮಾಂತ್ರಿಕನ ಮಾಯಾ ಬುಟ್ಟಿಯಿಂದ!
-ಕಾಲಂ ೯
ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆಯನ್ನು ಹಿಂದೆ ಸಂಪಾದಕೀಯದಲ್ಲಿ ಓದಿರಬಹುದು. ಇದೀಗ ಅದಕ್ಕೆ ಸಂಬಂಧವಿಲ್ಲದ ಒಂದಷ್ಟು ವಿಚಾರಗಳು:
ಪತ್ರಕರ್ತ ರವಿ ಬೆಳಗೆರೆ ಇತ್ತೀಚಿಗೆ SM ಕೃಷ್ಣರೊಂದಿಗೆ ಇಸ್ರೇಲ್ ಯಾತ್ರೆಗೆ ಹೋಗಿದ್ದರು. ಅವರೇ ಬರೆದುಕೊಂಡಂತೆ ಅದು ಕಾಡಿ, ಬೇಡಿ ಗಿಟ್ಟಿಸಿಕೊಂಡ ಬಿಟ್ಟಿ ಅವಕಾಶ. ಜೊತೆಯಲ್ಲಿಯೇ ವಿಶ್ವೇಶ್ವರ ಭಟ್ಟರೂ ಹೋಗಿದ್ದಿದ್ದು ಭಟ್ಟರ ಲೇಖನಗಳನ್ನು ಓದುವವರಿಗೆ ತಿಳಿದಿರಬಹುದು. ಇಸ್ರೇಲ್ ಜೊತೆಗೆ ಪಾಕ್, ಇಟೆಲಿ, ಮತ್ತು ಸ್ವಿಜಲ್ಯಾಂಡ್ ಪಕ್ಕದ ದೇಶವೊಂದರ ಪ್ರವಾಸದ ಅನುಭವವನ್ನೂ ಸೇರಿಸಿ ಮುಸಲ ಯುದ್ಧದಲ್ಲಿ ಹಿಮಾಗ್ನಿ ಎಂಬ ಕಾದಂಬರಿ ಬರೆದಿದ್ದಾರೆ. ಮೈನೋ ಗಾಂಧಿ ಎಂಬ ಪಾತ್ರದ ಸುತ್ತ ಭಯೋತ್ಪಾದನೆ ಮತ್ತು ಕಪ್ಪುಹಣಗಳ ಬಗ್ಗೆ ಕಥೆ ಸಾಗುತ್ತದೆ. ಹೆಚ್ಚು ವಿವಾದವದಲ್ಲಿರುವ ವಸ್ತುಗಳನ್ನು ಆರಿಸಿ ಬರೆಯುವುದರಲ್ಲಿ ನಿಸ್ಸೀಮರಾದ ಬೆಳಗೆರೆ, ಮುಖಪುಟದಲ್ಲಿ ಸೋನಿಯಾ ಚಿತ್ರವನ್ನೂ ಸೇರಿಸಿ ಕುತೂಹಲ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಸಲ್ಮಾನ್ ರಶ್ದಿ/ತಸ್ಲೀಮಾ ಆಗುವ ಪ್ರಯತ್ನ ಅವರಲ್ಲಿ ಕಾಣಬಹುದು.
“ಇಲ್ಲಿ ಬರುವ ಪಾತ್ರ ಹಾಗೂ ಘಟನೆಗಳು ಕಾಲ್ಪನಿಕ. ಯಾವುದೇ ಸಾಮ್ಯತೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ” ಎಂಬ ಎಚ್ಚರಿಕೆಯೂ ಆ ಪುಸ್ತಕದಲ್ಲಿದೆ!
ಇದರ ಜೊತೆ ಉಡುಗೊರೆ, ಅಮ್ಮ ಸಿಕ್ಕಿದ್ದು ಎಂಬ ಪುಸ್ತಕಗಳು ಮತ್ತೆರಡು ಸಿಡಿಗಳು ಭಾನುವಾರ ಬಿಡುಗಡೆಯಾದವು. ಮತ್ತಷ್ಟು ಓದು
ಸಂಸ್ಕೃತಿ ಸಂಕಥನ – 22 – ಭಾರತೀಯ ಸಂಸ್ಕೃತಿಗೆ ಗ್ರಹಣ ಹಿಡಿಸಿದ ವಸಾಹತು ಪ್ರಜ್ಞೆ
-ರಮಾನಂದ ಐನಕೈ
ಸುಮಾರು 35 ವರ್ಷಗಳ ಹಿಂದಿನ ನೆನಪು. ನಾವು ಹೈಸ್ಕೂಲಿಗೆ ಹೋಗುತ್ತಿರುವ ದಿನಗಳು. ಒಂದು ರೀತಿಯ ವಿಚಿತ್ರ ಸಭ್ಯತೆಯನ್ನು ಬೆನ್ನಟ್ಟಿ ಹೊರಟಿರುವ ಕಾಲ. ಮೇಸ್ಟ್ರಗಳು ಕ್ಲಾಸಿಗೆ ಬಂದರೆ ಜೀವನದ ‘ಗುರಿ’ಯ ಕುರಿತಾಗೆ ಮೊದಲ ಪ್ರಶ್ನೆ ಕೇಳುತ್ತಿದ್ದರು. ಯಾರು ಅತ್ಯುತ್ತಮ ಗುರಿಯನ್ನು ಹೇಳಿದರೋ ಅವರಿಗೆ ‘ವ್ಹೆರಿ ಗುಡ್’ ಅನ್ನುತ್ತಿದ್ದರು. ಮುಂದೆ ಜೀವನದಲ್ಲಿ ಮನುಷ್ಯ ಮಾಡಬಹು ದಾಂತಹುದು ಇಂತಿಂಥದಿದ್ದೆ ಎಂದು ನಮಗೆ ಗೊತ್ತಾಗಿದ್ದೇ ಈ ಪ್ರಶೆಗಳಿಗೆ ಉತ್ತರ ಹುಡುಕುವ ಮೂಲಕ. ನಾವು ಮಾಡುವ ಕಾರ್ಯಗಳಿಗೆ ಉದ್ದೇಶ ಇದ್ದರೆ ಮಾತ್ರ ಅದು ಗುರಿ ತಲುಪುತ್ತದೆ. ಕ್ರಿಯೆಗೂ ಉದ್ದೇಶಕ್ಕೂ ಸಂಬಂಧ ಇರಬೇಕು. ಆದ್ದರಿಂದ ಗುರಿ ಅಂದರೆ ಉದ್ದೇಶ. ಗುರಿಯ ದಾರಿ ಯಲ್ಲಿ ಹೋದರೆ ಗುರಿ ಸಿಗುತ್ತದೆ. ಈ ರೀತಿಯ ಚಿಂತನೆ ಇದ್ದ ಕಾಲ ಅದು.
ಇಂಥ ಚಿಂತನೆಗಳು ಎಲ್ಲಿಂದ ಬಂದವು? ಕೇಳಿದರೆ, ದಾರ್ಶನಿಕರಿಂದ, ಪುರಾಣಗಳಿಂದ, ಪ್ರಾಚೀನ ಜನರ ಜೀವನಾನುಭವದಿಂದ ಇತ್ಯಾದಿ ಯಾಗಿ ಮನಸ್ಸಿಗೆ ಕಂಡಂತೆ ಹೇಳುತ್ತೇವೆ. ಯಾರಿಂದಲೂ ಅಲ್ಲ. ನಾವು ಕಲ್ಪಿಸುತ್ತಿರುವ ಸೀಮಿತ ಅರ್ಥದ ಗುರಿ ನಮ್ಮಲ್ಲಿ ಹುಟ್ಟಿದ್ದೇ ಪಾಶ್ಚಾತ್ಯ ಪ್ರಭಾವದಿಂದ. ವಸಾಹತುಶಾಹಿ ಪ್ರಜ್ಞೆ ಯಿಂದ. ಏಕೆಂದರೆ ಅವರ ಅಷ್ಟೂ ಚಿಂತನೆಗಳು ಅರಳುವುದು ಕಾರಣ ಮತ್ತು ಉದ್ದೇಶಗಳ ಮೇಲೆ. ಏಕೆಂದರೆ ಪಾಶ್ಚಾತ್ಯ ಪುರಾಣ ಕಟ್ಟಲ್ಪಟ್ಟಿದ್ದೇ ಈ ಪರಿಕಲ್ಪನೆಯ ಮೇಲೆ. ಅನೇಕ ಸಂದರ್ಭಗಳಲ್ಲಿ ಅದು ನಮ್ಮಲ್ಲಿ ಅರ್ಥ ಕೊಡಲಾರದು.