ವಿಷಯದ ವಿವರಗಳಿಗೆ ದಾಟಿರಿ

Archive for

22
ಫೆಬ್ರ

ವಿಶ್ವಕ್ಕೆ ಸೆಡ್ಡು ಹೊಡೆದು ನಿಂತಿರುವ ಇರಾನ್ ಎಂಬ ಪರಾಕ್ರಮಿ

-ನಿತಿನ್ ರೈ ಕುಕ್ಕುವಳ್ಳಿ
ಒಂದು ಕಾಲದಲ್ಲಿ ಇರಾಕ್ ಅನ್ನೋ ರಾಷ್ಟ್ರ ಅಮೆರಿಕ ಸೇರಿದಂತೆ ಇಡೀ ವಿಶ್ವಕ್ಕೆ ಸವಾಲೆಸೆದಿತ್ತು. ಆದರೆ ಆ ದೇಶದ ಬತ್ತಳಿಕೆಯಲ್ಲಿ ಅಷ್ಟೊಂದು ಅಸ್ತ್ರಗಳಿರಲಿಲ್ಲ. ಆದರೆ ಇರಾನ್ ಅನ್ನೋ ದೇಶ ಇದೀಗ ಪೂರ್ಣ ಸಿದ್ದತೆಯ ಜೊತೆ ವಿಶ್ವದ ಮುಂದೆ ನಾನೆಷ್ಟು ಪರಾಕ್ರಮಿ ಅನ್ನೋದನ್ನ ತೋರಿಸಿದೆ.

ನಿನ್ನೆ ಅಂದರೆ ಬುಧವಾರ ಇರಾನ್ ಪ್ರಥಮ ಬಾರಿಗೆ ದೇಶೀಯವಾಗಿ ನಿರ್ಮಿಸಿರುವ ಪರಮಾಣು ಇಂಧನದ ಸರಳುಗಳನ್ನು ಸಂಶೋಧನಾ ಸ್ಥಾವರಗಳಿಗೆ ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ತನ್ನ ತಾಕತ್ತನ್ನ ಹಾಗು “ತನ್ನನ್ನ ಮುಟ್ಟಿದರೆ ತಟ್ಟದೆ ಬಿಡೆನು” ಅನ್ನೋ ಎಚ್ಚರಿಕೆಯನ್ನ ಅಮೆರಿಕ ಸೇರಿದಂತೆ ಎಲ್ಲಾ ಪಾಶ್ಚಾತ್ಯ ದೇಶಗಳಿಗೆ ರವಾನೆ ಮಾಡಿದೆ. ಟೆಹರಾನ್ ಉತ್ತರ ಭಾಗದಲ್ಲಿರುವ ಸ್ಥಾವರಕ್ಕೆ ಸಲಾಕೆಗಳನ್ನ ಅಳವಡಿಸುವ ಮೂಲಕ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿ ನೆಜಾದ್ ಚಾಲನೆ ನೀಡಿದರು. ಇದರ ಜೊತೆ ಮತ್ತೊಂದು ಆಘಾತ ನೀಡಿದ ಇರಾನ್ ಅದ್ಯಕ್ಷ ನೆದರ್ಲ್ಯಾಂಡ್ಸ್, ಸ್ಪೇನ್, ಇಟಲಿ, ಫ್ರಾನ್ಸ್, ಗ್ರೀಸ್, ಪೋರ್ಚುಗಲ್‌ಗಳಿಗೆ ಇಂಧನ ರಫ್ತು ನಿಲ್ಲಿಸಲಾಗಿದೆ ಎಂದು ಘೋಷಣೆ ಮಾಡುವ ಮೂಲಕ ತಾನು ಯುದ್ದಕ್ಕೆ ಸಿದ್ದ ಅನ್ನೋದನ್ನ ಪರೋಕ್ಷವಾಗಿ ಜಗತ್ತಿಗೆ ಎಚ್ಚರಿಕೆಯ ಗಂಟೆಯನ್ನ ಹೊಡೆದರು. ತದ ನಂತರ ಮಾತನಾಡಿದ ಈ ಪರಾಕ್ರಮಿ “ನಮ್ಮವಿರೋಧಿಗಳೇನು ಬಲಾಢ್ಯರಲ್ಲ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ” ಎಂದು ಅಮೆರಿಕಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.

ಮತ್ತಷ್ಟು ಓದು »

22
ಫೆಬ್ರ

ಪತ್ರಕರ್ತರ ಕೊರಳಿಗೆ ಗಂಟೆ ಕಟ್ಟುವರು ಯಾರು?

– ಪೂರ್ಣಚಂದ್ರ

ಬಡವರಿಗೆ ಬಣ್ಣದ ಟಿವಿ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸಿದಾಗ, ಪತ್ರಕರ್ತರು ಇದೊಂದು ಜನಪ್ರಿಯ ಘೋಷಣೆ ಎಂದು ಗೇಲಿ ಮಾಡಿದರು. ಸರಕಾರಗಳು ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ಗೇಲಿ ಮಾಡುವುದು, ವಿಶ್ಲೇಷಿಸುವುದು ಅವರ ಕರ್ತವ್ಯ ಅವರು ಮಾಡಿದರು. ಆದರೆ, ಅಂತಹ ಜನಪ್ರಿಯ ಘೋಷಣೆಯ ಫಲಾನುಭವಿಗಳೇ ತಾವೇ ಆಗಿಬಿಟ್ಟರೆ !
ಕರ್ನಾಟಕದ ಬಿಜೆಪಿ ಸರಕಾರ ರಾಜ್ಯದ ಎಲ್ಲ ಪತ್ರಕರ್ತರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದು ಎಂಬ ಆದೇಶವನ್ನು ಸದ್ಯದಲ್ಲಿಯೇ ಹೊರಡಿಸಲಿದೆಯಂತೆ. ಇದು ಕೂಡ ಜನಪ್ರಿಯ ಘೋಷಣೆಯೇ. ಆದರೆ, ಅದೇಕೋ ಹೆಚ್ಚು ಪತ್ರಕರ್ತರು ಈ ಬಗ್ಗೆ ಮಾತನಾಡುತ್ತಿಲ್ಲ.
ಈ ಬಗ್ಗೆ ಪೂರ್ಣಚಂದ್ರ ಬರೆದಿದ್ದಾರೆ.

ಬೀದರ್‌ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ಮಾನ್ಯತೆ ಪಡೆದ ಪತ್ರಕರ್ತರು ಈಗ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಎಲ್ಲಿ ಬೇಕಾದರಲ್ಲಿ ಓಡಾಡಬಹುದು !

ನಾನಾ ಆರೋಪಗಳನ್ನು ಹೊತ್ತು ಮನೆಗೆ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬೆಂಗಳೂರು ಪತ್ರಕರ್ತರಿಗಷ್ಟೇ ದಯಪಾಲಿಸಿದ್ದ ಈ ಕೊಡುಗೆಯನ್ನು, ನಗುಮೊಗದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ರಾಜ್ಯದ ಎಲ್ಲ ಪತ್ರಕರ್ತರಿಗೂ ವಿಸ್ತರಿಸಲಿದ್ದಾರೆ ಎಂಬ ವರ್ತಮಾನ ಬಂದಿದೆ.
ಅದೂ, ರಾಜಹಂಸ, ವೋಲ್ವೋ ಸಹಿತ ಎಲ್ಲ ಬಸ್‌ಗಳಲ್ಲೂ ! ಮತ್ತಷ್ಟು ಓದು »