ಹಾಳು ರಾಜಕೀಯ ಸಾಕು… ದಕ್ಷ ಲೋಕಾಯುಕ್ತರು ಬೇಕು…
-ನಿಲುಮೆ
ಆ ತಾಯಿ ಅಂದು ತನ್ನ ಮಗುವನ್ನು ಬದುಕಿಸಿಕೊಡು ಅಂದಾಗ, ‘ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ನಿನ್ನ ಮಗನನ್ನು ಬದುಕಿಸುತ್ತೇನೆ’ ಅಂದಿದ್ದ ಬುದ್ಧ. ಬಹುಷಃ ಇಂದಿಗೆ ಆ ತಾಯಿ ಬಂದು ಕೇಳಿದ್ದರೆ ’ಭ್ರಷ್ಟಾಚಾರವಿಲ್ಲದ ಭಾರತದ ಪಕ್ಷವೊಂದರ ಹೆಸರು ಹೇಳಿಬಿಡು ಬದುಕಿಸಿಬಿಡುತ್ತೇನೆ’ ಅನ್ನುತಿದ್ದನೋ ಏನೋ…? ಇಂಥ ಪಕ್ಷಗಳನ್ನು, ಕರ್ನಾಟಕಕ್ಕೊಬ್ಬ ‘ದಕ್ಷ ಲೋಕಾಯುಕ್ತರ’ ನೇಮಕ ಮಾಡಿ ಅಂತ ಕೇಳಬೇಕಾಗಿದೆ…!
ಕಳೆದ ಆಗಸ್ಟಿನವರೆಗೂ ಕರ್ನಾಟಕ ಲೋಕಾಯುಕ್ತದ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತಿತ್ತು. ಈಗಲೂ ಆಗುತ್ತಿದೆ.ಆದರೆ ಸುದ್ದಿಯಾಗುತ್ತಿರುವ ವಿಷಯ,ಕಾಲ,ಕಾರಣಗಳು ಬದಲಾಗಿದೆ…!
ಲೋಕಾಯುಕ್ತ ಅನ್ನುವ ಸಂಸ್ಥೆಯೊಂದಿದೆ ಅನ್ನುವುದು ಕರ್ನಾಟಕದ ಜನತೆಗೆ ತಿಳಿದಿದ್ದೆ ನ್ಯಾ.ವೆಂಕಟಾಚಲ ಅವರು ಕ್ಯಾಮೆರಾ ಸಮೇತ ಭ್ರಷ್ಟರ ಹಿಡಿದು, ಅದೇ ಕ್ಯಾಮೆರಾ ಮುಂದೆ ಅವರಿಗೆ ಹಿಗ್ಗಾ-ಮುಗ್ಗಾ ಬೈಯ್ಯುವಾಗಲೇ. ಅವರು ಬೈಯ್ಯುವುದನ್ನೂ ಆ ಪುಡಿ ಕಳ್ಳರು ಅವರಿಂದ ಉಗಿಸಿಕೊಳ್ಳುವುದನ್ನು ನೋಡುವುದೇ ಒಂಥರ ಧಾರಾವಾಹಿಯಾಗಿತ್ತು ಆಗ. ಕಡೆಗೆ ವೆಂಕಟಾಚಲರ ಅವಧಿ ಮುಗಿಯಿತು. ಇನ್ಯಾರು ಬರುತ್ತಾರೋ ಅನ್ನುವ ಕುತೂಹಲದ ನಡುವೆ ಬಂದವರು ನ್ಯಾ.ಸಂತೋಷ್ ಹೆಗ್ಡೆ.
ಲೋಕಾಯುಕ್ತರು ಏನು ಮಾಡಬಲ್ಲರು ಅಂತ ದೇಶದ ಜನತೆಗೆ ಗೊತ್ತಾಗಿದ್ದು ನ್ಯಾ.ಸಂತೋಷ್ ಹೆಗ್ಡೆಯವರು ಬಂದ ನಂತರವೇ. ಇಬ್ಬರ ವರ್ಕಿಂಗ್ ಶೈಲಿಯೂ ಬೇರೆ ಬೇರೆ ತರಹ. ಬರುತ್ತಲೇ ನನ್ನ ವರ್ಕಿಂಗ್ ಶೈಲಿ ಬೇರೆ ಅಂದವರು ಮೊದಲಿಗೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡರು. ವೆಂಕಟಾಚಲರ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ಅವರ ಮೇಲೆ ಗರಂ ಆಗಿದ್ದರು. ಆದರೆ,ಹೆಗ್ಡೆಯವರ ಕಾಲದಲ್ಲಿ ರಾಜಕಾರಣಿಗಳು ಮೈ ಪರಚಿಕೊಳ್ಳುತಿದ್ದರು. ಶಾಸಕರ ಭವನದಲ್ಲಿ ಸಂಪಂಗಿಯನ್ನ ಹಿಡಿದಾಗ ಜನ ಬಹಳ ಖುಷಿ ಪಟ್ಟಿದ್ದರು. ಆಮೇಲೆ ಗಣಿ ಹಗರಣವೆದ್ದು ಕಡೆಗೆ ಹೆಗ್ಡೆಯವರು ರೋಸಿ ಹೋಗಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಡ್ವಾಣಿಯವರ ಮಧ್ಯಸ್ಥಿಕೆ ಫಲವಾಗಿ ರಾಜಿನಾಮೆ ಹಿಂಪಡೆದರು. ಆ ನಂತರ ಗಣಿ ಹಗರಣದ ವರದಿ ಸಲ್ಲಿಸಿ ಯಡ್ಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ್ದೆಲ್ಲ ಈಗ ಇತಿಹಾಸ. ಕರ್ನಾಟಕ ಲೋಕಾಯುಕ್ತದ ಸಂತೋಷದ ದಿನಗಳು ಹೆಗ್ಡೆಯವರ ಹಿಂದೆಯೇ ಹೋಗಿಬಿಟ್ಟಿತಾ? ಮತ್ತಷ್ಟು ಓದು
ಮುಳುಗದಿರು ಕರುವೇ!
-ಪುಷ್ಪರಾಜ್ ಚೌಟ
ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ
ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!
ಆವೇಶಕ್ಕೆ ಬಲಿಯಾದ ಕಂದ
-ಸತೀಶ್ ರಾಮನಗರ
ಆಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎಂಬುದನ್ನು ಕೇಳಿ ಒಂದು ಕ್ಷಣ ಆಶ್ಚರ್ಯಚಕಿತನಾದೆ. ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿರುವುದು ಆಕೆಯ ಪತಿಯೇ. ಈಗ ಆರೋಪಿತಳನ್ನು ಬೇರೆಯವರ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವುದು ಕೂಡ ಆಕೆಯ ಪತಿಯೇ.
ಮಾದಣ್ಣ ಹಾಗು ಗೌರಮ್ಮನವರದು ಇಬ್ಬರು ಮಕ್ಕಳೊಂದಿಗಿನ ಮಧ್ಯಮ ವರ್ಗದ ಸಂತೃಪ್ತಿ ಸಂಸಾರ. ಮಗ ರಮೇಶನಿಗೆ 5 ವರ್ಷ. ಮಗಳು ಲಕ್ಷ್ಮಿಗೆ 7 ವರ್ಷ. ಇಬ್ಬರ ಮುಖ್ಯ ಕಸುಬು ವ್ಯವಸಾಯ.
ನಾಳೆಯ ಲಕ್ಷ್ಮಿ ಪೂಜೆಗೆ ಮನೆಯಲ್ಲವನ್ನು ಶುಚಿಗೊಳಿಸಿ, ಗೌರಮ್ಮ ಗಂಡನ ದಾರಿ ಕಾಯುತಿದ್ದಳು. ಮಾದಣ್ಣ ಮನೆಗೆ ಬಂದ ತಕ್ಷಣವೇ, ನಾಳೆ ಹಬ್ಬಕ್ಕೆ ನನಗೆ ಸೀರೆ, ಮಕ್ಕಳಿಗೆ ಹೊಸ ಬಟ್ಟೆ ಜೊತೆಗೆ ಗಿರವಿ ಅಂಗಡಿಯಲ್ಲಿಟ್ಟಿರುವ, ನನ್ನ ಓಲೆ ಜುಮುಕಿ, ಮಾಂಗಲ್ಯ ಸರವನ್ನು ನಾಳೆ ಬೆಳಿಗ್ಗೆ ಬಿಡಿಸಿಕೊಂಡು ತರಲೇ ಬೇಕು ಎಂದು ತಾಕೀತು ಮಾಡಿದಳು. ಮಾದಣ್ಣ ಸರಿ ಎಂದು ತಲೆಯಲ್ಲಾಡಿಸಿ ಊಟ ಮಾಡಿ ಮಲಗಿದ.
ಮಾದಣ್ಣ, ಬೆಳಿಗ್ಗೆ ತನ್ನ ಬಳಿಯಲ್ಲಿದ್ದ ಚೂರು ಪಾರು ಹಣವನ್ನೆಲ್ಲ ಒಟ್ಟುಗೂಡಿಸಿ, ಆ ಹಣದಲ್ಲಿ ಮಕ್ಕಳಿಗೆ ಬಟ್ಟೆ ಹಾಗು ಹೆಂಡತಿಗೆ ಸೀರೆಯನ್ನು ತರಲಷ್ಟೇ ಸಾಧ್ಯವಾಯಿತು. ತನ್ನ ಗಂಡ ವಡವೆಗಳನ್ನು ಬಿಡಿಸಿಕೊಂಡು ತರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಗೌರಮ್ಮ ನಿಗೆ ಬಟ್ಟೆಗಳನ್ನಷ್ಟೇ ನೋಡಿ ನಿರಾಶೆಯಾಯಿತು. ವಡವೆಗಳಿಲ್ಲದೆ ಲಕ್ಷ್ಮಿ ಪೂಜೆ ಹೇಗೆ ಮಾಡುವುದೆಂಬ ಚಿಂತಯಿಂದ ಮೌನವಾದಳು. ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಸಂಜೆ ಮನೆಗೆ ಲಕ್ಷ್ಮಿ ಪೂಜೆಗೆ ಬರಲೇಬೇಕೆಂದು ಅದಾಗಲೇ ಹೇಳಿ ಬಂದಿದ್ದಳು. ಸಂಜೆ ಅವರುಗಳು ಮನೆಗೆ ಬಂದರೆ, ಯಾವ ಮುಖವನ್ನು ಹೊತ್ತುಕೊಂಡು ಪೂಜೆ ಮಾಡುತ್ತಿಲ್ಲ ಎಂದು ಹೇಳುವುದು ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು. ಮತ್ತಷ್ಟು ಓದು
ಶರಣಾಗತ..!!

ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು. ಮತ್ತಷ್ಟು ಓದು