ವಿಷಯದ ವಿವರಗಳಿಗೆ ದಾಟಿರಿ

Archive for

25
ಫೆಬ್ರ

267 ನೇ ನಂಬರಿನ ಕೋಣೆ

-ವಸಂತ್ ಕುಮಾರ್ ಆರ್ ಕೋಡಿಹಳ್ಳಿ

ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ?. ಗೋಡೆಗೆ ಕೈ ತಾಗಿಸುತ್ತೇನೆ, ತುಂಬಾ ಒರಟಾಗಿದೆ, ಅಲ್ಲಲ್ಲಿ ಕೆಂಪು ಕಲೆಗಳ ಗುರುತುಗಳಿವೆ. ಆ ಮಂದ ಬೆಳಕಿನಲ್ಲಿ ಗಾಯದ ಗುರುತುಗಳಂತೆ ಕಾಣುತ್ತವೆ. ಅವು ಕೆಂಪು ಕಲೆಯ ಗುರುತುಗಳೇ ಆದರೆ ಅವು ಇನ್ನೂ ಅಸಿಯಾಗಿ ಕೈಗೆ ಅಂಟುವ ಸ್ಥತಿಯಲ್ಲಿವೆ. ಬಹುಷಃ ಯಾರದೋ ರಕ್ತದ ಕಲೆಗಳಿರಬೇಕು. ಮುಂದೊಂದು ಭಾಗದ ಅಡಿಯಲ್ಲಿ ಎಂಥದ್ದೋ ಕಾಗದದ ಚೂರುಗಳು ಕೈತಾಗುತ್ತಿವೆ. ಇನ್ನೂ ಸ್ವಲ್ಪ ಹುಡುಕಿದಾಗ ಕಬ್ಬಿಣದ ಬಾಗಿಲೊಂದು ಸ್ವರ್ಷಿಸುತ್ತದೆ. ತುಂಬಾ ಉದ್ದವಾಗಿದೆ ಅದರ ಸರಳುಗಳುಗಳು. ಬಲಿಷ್ಟವಾದ ಕಬ್ಬಿಣದ ಬಾಗಿಲು. ಏನೂ ಅರ್ಥವಾದ ಸ್ಥತಿಯಿಂದ ನೋಡುತ್ತಿದ್ದೇನೆ. ಇಲ್ಲಿ ಕಬ್ಬಿಣದ ಬಾಗಿಲಾಕಿದೆ ಯಾವುದೀ ಕೋಣೆ ?

ಇಂಥ ಕೋಣೆಯನ್ನು ನನ್ನ ಜೀವಮಾನದಲ್ಲೇ ಎಲ್ಲೂ ನೋಡಲಿಲ್ಲವಲ್ಲ. ಇದಕ್ಕೆ ಉತ್ತರಿಸಲು ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ನನ್ನ ಕೋಣೆಯ ತುಂಬಾ ಪುಸ್ತಕಗಳು ತುಂಬಿರುತ್ತಿದ್ದವು, ಕಬ್ಬಿಣದ ಕುರ್ಚಿಯೊಂದಿರಬೇಕಿತ್ತು. ಅದರ ಪಕ್ಕದಲ್ಲಿ ಮರದ ಪೆಟ್ಟಿಗೆ. ಅದರ ಕೊನೆಯಲ್ಲೊಂದು ಗಾಜಿನ ಶೀಷೆ, ಅಂದರೆ ನನ್ನ ಲೇಖನಿಗೆ ಮಸಿಯನ್ನು ತುಂಬಿಸುತ್ತಿದ್ದ ಶೀಷೆ. ಮೇಲೊಂದು ಸೀಮೆ ಎಣ್ಣೆಯ ದೀಪ. ಕರೆಂಟ್ ಇಲ್ಲಾದಾಗ ಅಚ್ಚುತ್ತಿದ್ದ ದೀಪ. ಗೋಡೆಗೆ ತಗುಲಿಸಿದ್ದ ಕ್ಯಾಲೆಂಡರ್ರು. ಮಧ್ಯಭಾಗದಲ್ಲಿ ಹಳೆಯ ಎರಡು ಮಣ್ಣಿನ ಕಪಾಟುಗಳು, ಅದರೊಳಗೆ ಮುಚ್ಚಿಟ್ಟಿದ್ದ ಚಿಲ್ಲರೆ ನಾಣ್ಯಗಳು. ಕಥೆ ಕವನ ಬರೆದಿಡುತ್ತಿದ್ದ ಹಾಳೆಗಳು. ಯಾವೂದೂ ಸಹ ಕಾಣುತ್ತಿಲ್ಲ. ನನ್ನ ಕೋಣೆಯಲ್ಲಿ ಮಂದವಾಗಿ ಬೆಳಗುತ್ತಿದ್ದ ಹೈಮಾಸ್ ದೀಪ, ರೋಸ್ ಹುಡ್ ಮರದಿಂದ ತಯಾರಿಸಿದ್ದ ಮರದ ಬಾಗಿಲು ಯಾವುದೂ ಇಲ್ಲ.ಈ ಸ್ಥಳ ನನಗೆ ತೀರ ಹೊಸದಂತಿದೆ. ಅಂದರೆ ನಾನು ಓದುತ್ತಿದ್ದ (julius fuchik) “ಜ್ಯೂಲಿಯಸ್ ಫ್ಯೂಚಿಕ್ ”ರ ಕಥೆಯನ್ನು ನೆನಪಿಸುವ ಕೋಣೆಯ ಹಾಗೆ. ಅವರ 267 ನೇ ನಂಬರಿನ ಖಾರಾಗೃಹದ ಕೋಣೆಯಯಂತೆ. ಹೌದು ಅದು ತುಂಬಾ ಭಯಾನಕ ಕೋಣೆ. ಜೂಲಿಯಸ್ಸರನ್ನು ಕ್ಷಣ ಕ್ಷಣವೂ ಹಿಂಸಿಸಿ ವಧೆಮಾಡಿದ ಕೋಣೆ. ಖಂಡಿತ ಅದು ಸಾವಿನ ಕೋಣೆ. ಅವರ ಪುಸ್ತಕದಲ್ಲೇ ಓದಿದ್ದೇನೆ. ಅದು 267 ನೇ ನಂಬರಿನ ಕೋಣೆ. ಜೂಲಿಯಸ್ಸರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣಗಳನ್ನು ಆ ಕೋಣೆಯಲ್ಲೇ ಕಳೆದಿದ್ದರು. ತುಂಬಾ ದಯಾನೀಯ ಸ್ಥಿತಿಯಲ್ಲೂ. ಅವರು ಸಾವನ್ನೂ ಸಹ ಸರಳವಾಗಿ ತೆಗೆದುಕೊಂಡಂತ ಮಹಾತ್ಮರು. ಅವರ ನೋವು – ಕಷ್ಟಗಳು ಯಾವುದನ್ನೂ ಲೆಕ್ಕಿಸದೆ. ಪಾನ್ ಕ್ರಾಟ್ ಜೈಲಿನಲ್ಲಿ “ಕೊನ್ ಲಿಕ್ಸಿ” ಎಂಬ ಕಾವಲುಗಾರನ ಸಹಾಯದೊಂದಿಗೆ ರಹಸ್ಯವಾಗಿ ತರಿಸಿಕೊಂಡ “ಪೆನ್ಸಿಲ್ ಮತ್ತು ಕಾಗದ”ದ ಚೂರುಗಳಿಂದ ನಾಜಿ ಜೈಲೆಂಬ ಪಿಶಾಚ ಗೃಹದಲ್ಲಿನ ಕಂಡುಂಡ ಪ್ರತ್ಯಕ್ಷ ಅನುಭವದ ದಾಖಲು. ತನ್ನ ಕಟ್ಟ ಕಡೆಯ ದಿನಗಳ ಯಾತನಾ ದಿನಚರಿಯ ಟಿಪ್ಪಣಿಗಳ ಸಂಗ್ರಹ. ತನ್ನ ಪತ್ನಿಯಾದ ಆಗಸ್ಟಿನಾ ಫ್ಯೂಚಿಕ್ ಪ್ರಕಟಿಸಿದ್ದ ಪುಸ್ತಕ. ಹೌದು ಅದೇ ಪುಸ್ತಕದಲ್ಲಿ ಬರುವಂತ ಕೋಣೆ. ಅದರಲ್ಲಿ ಕೆಲವು ಘಟನೆಗಳು ನನ್ನ ಕಣ್ಣಮುಂದೆ ಸುಳಿದಾಡಿತ್ತವೆ ಜೂಲಿಯಸ್ ಫ್ಯೂಚಿಕ್ ರು ತಮ್ಮ ಸಮಗ್ರ ಬದುಕನ್ನೇ ಸಮರ್ಪಿಸಿಕೊಂಡ ಮಹಾ ಕೃತಿಯ ಕೊನೆಯ ಭಾಗದ ಅಧ್ಯಾಯವದು. ಆ ಪುಸ್ತಕವನ್ನು ಓದುತ್ತಿದ್ದ ಪ್ರತಿ ಬಾರಿಯೂ ನನ್ನ ಕಣ್ಣುಗಳು ಹನಿಗೂಡುತ್ತವೆ. ಕಾರಣ ಅವರನ್ನು ಅಷ್ಟೊಂದು ದಾರುಣ ಹಿಂಸೆಗೆ ಗುರಿಪಡಿಸಿ, ಪ್ರತಿಬಾರಿಯೂ ಚಿತ್ರ ವಧೆಮಾಡಿ, ಪ್ರಜ್ಞಾಶೂನ್ಯ ಸ್ಥಿತಿಯ ತನಕ ಬಡಿದು, ಕೊನೆಗೆ ಸಾಯಿಸಿಯೇ ಬಿಟ್ಟದ್ದು. ಆ ಘನ ಘೋರ ಚಿತ್ರವಧೆಯನ್ನು ನೆನೆಪಿಸಿಕೊಂಡರೆ ಹೃದಯ ತುಂಬಿಬರುತ್ತದೆ. ಯಾವುದೇ ಎದುರಾಳಿಗಳಿಗೂ ಅಂಥ ಗತಿ ಬರಬಾರದೆಂದುಕೊಳ್ಳುತ್ತೇನೆ. ನಿಮಗೆ ಗೊತ್ತಿಲ್ಲವೇನೋ!.

ಮತ್ತಷ್ಟು ಓದು »

25
ಫೆಬ್ರ

ಸ್ಕ್ಯಾನ್ ಮಾಡಿರುವ ಕಡತ ಅಥ್ವಾ ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸಿ

-ಆದೇಶ್ ಕುಮಾರ್

ಇದನ್ನು ಉಪಯೋಗಿಸಲು ನೀವು ನಿಮ್ಮ ಗಣಕದಲ್ಲಿ ಮೈಕ್ರೊಸಾಫ್ಟ್ Office 2007 ಅನ್ನು ಇನ್ಸ್ಟಾಲ್ ಮಾಡಿರಬೇಕು

25
ಫೆಬ್ರ

ಹರೆಯದ ಗಾಳಕ್ಕೆ ಸಿಕ್ಕ ಮೀನು

– ಪ್ರಸಾದ್.ಡಿ.ವಿ,  ಮೈಸೂರ್
ಹೌದು ಆಕೆ ಆಗಷ್ಟೆ ತನ್ನ ಹರೆಯದ ಹುಚ್ಚು ಆಸೆಗಳಿಗೆ ತನ್ನ ಮನಸ್ಸನ್ನು ಪರದೆಯಾಗಿಸಿದ್ದಳು, ಹೆಸರು ಬಿಂದು. ಮೈನೆರೆದು ಏಳೆಂಟು ತಿಂಗಳುಗಳು ಕಳೆದಿದ್ದರಬಹುದು. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳು ಗರಿಗೆದರಿದ್ದವು. ಕನಸುಗಳಲ್ಲಿಯೂ ಕಚಗುಳಿ ಇಡುವ ಅವಳ ರಾಜಕುಮಾರನ ಕಲ್ಪನೆಗಳು ಅವಳನ್ನು ರೋಮಾಂಚನಗೊಳಿಸುತ್ತಿದ್ದವು. ಆಗಷ್ಟೇ ಹತ್ತನೆ ತರಗತಿ ಓದುತ್ತಿದ್ದರೂ ಕಾಣುವ ಕನಸುಗಳಿಗೇನೂ ಕಡಿಮೆಯಿರಲಿಲ್ಲ. ಅಷ್ಟಲ್ಲದೆ ದ.ರಾ.ಬೇಂದ್ರೆಯವರು ’ಹುಚ್ಚುಕೋಡಿ ಮನಸು, ಹದಿನಾರರ ವಯಸು’ ಎಂದು ಹೇಳಿದ್ದಾರೆಯೇ.ಮನೆ ಕಡೆ ಆಗರ್ಭ ಶ್ರೀಮಂತರಲ್ಲದಿದ್ದರೂ ಅವಳ ತಂದೆ ಮಗಳಿಗೇನೂ ಕಡಿಮೆ ಮಾಡಿರಲಿಲ್ಲ. ತಂದೆಯದು ಸ್ವಂತ ಉದ್ಯಮವಾದುದ್ದರಿಂದ ತಾಯಿ ಕೂಡ ಅವರಿಗೆ ಹೆಗಲು ಕೊಟ್ಟಿದ್ದಳು. ಈ ಕಾರಣದಿಂದಲೇ ಏನೋ ಬಿಂದುವಿಗೆ ಸ್ವಲ್ಪ ಅತಿಯೆನಿಸುವಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಅವಳ ದೇಹದಲ್ಲಾದ ಬದಲಾವಣಿಗೆಗಳು ಆ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳೆಂದು ಆಕೆಯನ್ನು ಪ್ರೇರೇಪಿಸುತ್ತಿದ್ದವು. ಕನಸ್ಸಿನಲ್ಲಿನ ರಾಜಕುಮಾರನನ್ನು ಈಗ ಎದುರಿಗೆ ಸಿಗುತ್ತಿದ್ದ ಹುಡುಗರ ಚರ್ಯೆಯಲ್ಲಿ ಹುಡುಕುತ್ತಿದ್ದಳು. ಅವಳ ವಯಸ್ಸಿನ ಅಪ್ರಬುದ್ಧತೆಯೋ ಏನೋ ಸ್ವಲ್ಪ ಸಿನಿಮೀಯ ಹೀರೋಹಿಸಂ ತೋರಿಸಿದ ಹುಡುಗರೆಲ್ಲಾ ಅವಳ ಕನಸಿನ ರಾಜಕುಮಾರನಿಗೆ ತಾಳೆಯಾಗುತ್ತಿದ್ದರು ಅವಳ ಶಾಲೆಯಲ್ಲಿಯೇ ಕಲಿತ ಹಳೆಯ ವಿದ್ಯಾರ್ಥಿ ಮಿಲನ್, ಸ್ವಲ್ಪ ಒರಟು ಸ್ವಭಾವದ ಹುಡುಗ ಆದರೆ ಎತ್ತರದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದನು. ಅವನಿಗೆ ಕ್ರಿಕೆಟ್ ಎಂದರೆ ಒಂದು ರೀತಿಯ ಹುಚ್ಚು, ತಕ್ಕ ಮಟ್ಟಿಗೆ ಒಳ್ಳೆಯ ಆಟಗಾರನೆ. ಆ ಕ್ರಿಕೆಟ್ ಹುಚ್ಚಿನಿಂದಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು, ಈಗ ಬೀದಿ ಅಲೆಯುತ್ತಿದ್ದ. ಅವನ ಹಿಂದೆ ಅವನಂತವರ ದೊಡ್ಡ ದಂಡೇ ಇತ್ತು. ಅವನಿಂದಾಗಿ ಅವರೆಲ್ಲಾ ಕೆಟ್ಟಿದ್ದರೋ, ಇಲ್ಲ ಅವರೆಲ್ಲರಿಂದಾಗಿ ಅವನು ಕೆಟ್ಟಿದ್ದನೋ ತಿಳಿಯದು. ಮತ್ತಷ್ಟು ಓದು »