ವಿಷಯದ ವಿವರಗಳಿಗೆ ದಾಟಿರಿ

Archive for

6
ಫೆಬ್ರ

ಭಾರತೀಯ ಸೇನೆಯಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಉದ್ಯೋಗ

ಕೃಪೆ : ಭಾರತೀಯ ಸೇನೆ

ಪ್ರಪಂಚದಲ್ಲೇ ಅತಿ ಉನ್ನತವಾದ ಸೇನಾ ಬಲವನ್ನು, ತಾಂತ್ರಿಕತೆಯನ್ನು ಹೊಂದಿರುವ ಭಾರತೀಯ ಸೇನೆ ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಗುಜರಾಯಿಸಲು ಕೊನೆ ದಿನಾಂಕ ಮಾರ್ಚ್ ೧ ೨೦೧೨. ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಕೊಂಡಿಯನ್ನು ಅನುಸರಿಸಿ.

ಭಾರತೀಯ ಸೇನೆ

 

 

 

6
ಫೆಬ್ರ

ದೇಶ – ಭಾಷೆಗಳ ನಡುವೆ

– ರಾಕೇಶ್ ಶೆಟ್ಟಿ

ಆಗ ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಗಳು.ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!

ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ “ಚಿಂತನಗಂಗಾ” ಪುಸ್ತಕದ ಸುತ್ತ ಅಂತರ್ಜಾಲದಲ್ಲಿ ನಡೆಯುತ್ತಿರುವ ಚರ್ಚೆ ಫ಼ಾಲೋ ಮಾಡುವಾಗ “ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ” ಎನ್ನುವ ಪದ ಬಳಕೆ ನೋಡಿ ನಗು ಬಂತು.ಅಸಲಿಗೆ ಯಾವುದೇ ಸಂಘಟನೆ,ಸ್ವಸ್ಥ ಸಮಾಜದಲ್ಲಿ ವಿಚಾರ ಸ್ವಾತಂತ್ರ್ಯವಿರಲೇಬೇಕು ಅದು ಇರಲಿ ಅಂತ ಕೇಳುವುದು ತಪ್ಪೇನು ಅಲ್ಲ.ಆದರೆ ವಿಚಾರ ಸ್ವಾತಂತ್ರ್ಯದ ಬಗ್ಗೆ ಕೇಳಿದವರು ಯಾರು ಅನ್ನುವುದು ಮುಖ್ಯವಾಗುತ್ತದಲ್ಲವೇ? ವೇದಾಂತ ಇರೋದು ಬೇರೆಯವ್ರಿಗೆ ಹೇಳೋಕ್ ಮಾತ್ರ ಅಂದುಕೊಂಡವರಿಗಾಗಿಯೇ ಗಾಂಧೀಜಿಯವರು ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’  ಅಂದಿದ್ದು.

ಮತ್ತಷ್ಟು ಓದು »

6
ಫೆಬ್ರ

ಸಂಸ್ಕೃತಿ ಸಂಕಥನ – 21 – ಬುದ್ಧ ಬ್ರಾಹ್ಮಣ ವಿರೋಧಿಯೇ?

-ರಮಾನಂದ ಐನಕೈ

ನಿಜಕ್ಕೂ  ಇದು ಕುತೂಹಲದ ಪ್ರಶ್ನೆ. ಈ ಕುರಿತು ಸಂಶೋಧನೆ ಮಾಡಿದ ಬಾಲಗಂಗಾಧರರ ಅಭಿಪ್ರಾಯಗಳು ನಮಗೆ ಹೊಸತೊಂದು ಸತ್ಯದ ಲೋಕವನ್ನು ತೆರೆದುಕೊಡುತ್ತದೆ. ಬುದ್ಧ ವರ್ಣ ವ್ಯವಸ್ಥೆಯನ್ನು ದ್ವೇಷಿಸಿದ್ದು ನಿಜವೇ? ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡೆ ಆತ ಬ್ರಾಹ್ಮಣತ್ವವನ್ನು ಚರ್ಚೆಗೆ ಎಳೆಯುತ್ತಾನೆ. ಇದು ಹೇಗೆ ಸಾಧ್ಯ? ನಮ್ಮ ದೇಶದ ದಲಿತರು ಬುದ್ಧಿಸಂನ್ನು ಆರಾಧಿಸು ವುದು ಅದು ನಿಜವಾದ ಮಾನವೀಯ ಧರ್ಮ ಅಂತಲೋ ಅಥವಾ ಬುದ್ಧಿಸಂ ಬ್ರಾಹ್ಮಣರನ್ನು ದ್ವೇಷಿಸುತ್ತದೆ ಎಂಬ ಕಲ್ಪಿತ ಕಥೆಯ ಪ್ರೇರಣೆ ಯಿಂದಲೋ?

ಹಿಂದೂಯಿಸಂ ಹಾಗೆ ಬುದ್ಧಿಸಂ ಕುರಿ ತಾಗಿಯೂ ವರ್ಣರಂಜಿತ ಕಥೆ ಕಟ್ಟಿದವರೂ ಐರೋಪ್ಯರೆ. ಏಕೆಂದರೆ ಬುದ್ಧಿಸಂನ್ನು ಕೂಡಾ ಅವರು ತಮ್ಮ ಕನ್ನಡಕದಿಂದಲೇ ನೋಡಿದರು. ಜೊತೆ ಜೊತೆಗೆ ಹಿಂದೂಯಿಸಂ ಕುರಿತಾದ ಕೆಲವು ಕಗ್ಗಂಟುಗಳಿಂದ ತಪ್ಪಿಸಿಕೊಳ್ಳಲು ಬುದ್ಧಿಸಂನ್ನು ವೈಭವೀಕರಿಸುವ ಅಗತ್ಯ ಅವರಿಗಿತ್ತು. ಬುದ್ಧಿಸಂ ಅನ್ನುವುದು ಹಿಂದೂಯಿಸಂಗಿಂತ ಉತ್ತಮವಾದ ರಿಲಿಜನ್ ಎಂದು ಭಾವಿಸಲು ಅವರಲ್ಲಿ ಸಾಕಷ್ಟು ಸಮರ್ಥನೆಗಳಿದ್ದವು. ಬುದ್ಧಿಸಂ ಏಕದೇವನ ಕಲ್ಪನೆಯಲ್ಲಿದೆ. ತ್ರಿಪಿಟಕಗಳು ಅವರ ಸ್ಕ್ರಿಪ್ಚರ್ಗಳು. ಮತಾಂತರಕ್ಕ ಮಾನ್ಯತೆ ಇದೆ. ಹಾಗಾಗಿ ಬುದ್ಧಿಸಂ ಅನ್ನುವುದು ಒಂದು ಶುದ್ಧವಾದ ರಿಲಿಜನ್ ಅಂದು ಕೊಂಡರು.

ಮತ್ತಷ್ಟು ಓದು »