ಯಶಸ್ಸಿನ ಹೋರಾಟದ ನಡುವೆ ಇನ್ನೊಂದು ಟಿವಿ
-ಕಾಲಂ ೯
HR ರಂಗನಾಥ್‍ರವರ ಬಹು ನಿರೀಕ್ಷಿತ ಪಬ್ಲಿಕ್ ಟಿವಿಯ ಆರಂಭದೊಂದಿಗೆ ಕನ್ನಡ ಮಾಧ್ಯಮ ಜಗತ್ತು ಒಂದು ಸುತ್ತಿ ಪೂರ್ಣಗೊಳಿಸಿದಂತಾಗಿದೆ. ‘ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ’ ಇದು ಕೇವಲ ಘೋಷಣೆಯ ಮಾತಲ್ಲ, ರಂಗನಾಥ್ ತಮ್ಮ ಚಾನೆಲ್ಗಾಗಿ ಹಣ ಹೂಡಿದವರ ವಿವರವನ್ನೂ ಕೊಡುವುದಾಗಿ ಹೇಳಿಕೊಂಡಿದ್ದಾರೆ.
ರಂಗನಾಥ್ ಪುನರಾಗಮನದೊಂದಿಗೆ ಪಕ್ಕಕ್ಕೆ ಸರಿದವರೆಲ್ಲ ಮಾಧ್ಯಮದ ಮುಖ್ಯ ಭೂಮಿಕೆಗೆ ಬಂದಂತಾಗಿದೆ. ರಂಗನಾಥ್, ದೈತೋಟ, ವಿಶ್ವೇಶ್ವರ ಭಟ್, ಶಿವಸುಬ್ರಹ್ಮಣ್ಯ, ಜೋಗಿ, ರವಿ ಹೆಗಡೆ, ಜಿ ಎನ್ ಮೋಹನ್, ತಿಮ್ಮಪ್ಪ ಭಟ್, ಪೂರ್ಣಿಮಾ ಹೀಗೆ ಕಳೆದ ವರ್ಷ ಪಕ್ಕಕ್ಕೆ ಸರಿದವರ ಉದ್ದದ ಪಟ್ಟಿಯೇ ಇತ್ತು. ಈಗ ಈಶ್ವರ ದೈತೋಟ ಬಿಟ್ಟರೆ ಮತ್ತೆಲ್ಲರೂ ಮಾಧ್ಯಮದ ಮುಖ್ಯ ಜವಾಬ್ದಾರಿಗಳಿಗೆ ಬಂದಂತಾಗಿದೆ. ವರ್ಷವಿಡೀ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಗಿದ್ದ ಕನ್ನಡ ಮಾಧ್ಯಮ ಜಗತ್ತು ಇದೀಗ ಸ್ಥಿರಗೊಂಡಿದೆ ಎನ್ನಬಹುದು. ನಿಜವಾದ ಪೈಪೋಟಿಯ ದಿನಗಳನ್ನು ಮುಂದೆ ನಿರೀಕ್ಷಿಸಬಹುದು.
ಕಳೆದ ಐದು ವರ್ಷಗಳ ಮಾಧ್ಯಮ ಬೆಳವಣಿಗೆಯನ್ನು ಗಮನಿಸಿದರೆ ಅನೇಕ ಹೊಸ ಸುದ್ದಿವಾಹಿನಿಗಳು ಬಂದಿವೆ. ದಿನಪತ್ರಿಕೆಗಳ ಹೊಸ ಎಡಿಷನ್‍ಗಳು ಆರಂಭಗೊಂಡಿವೆ. ಪೂರ್ಣ ಪ್ರಮಾಣದ ಯಶಸ್ಸಿನ ಕಥೆಯಾಗಿ ಎಲ್ಲರೆದುರು ನಿಂತಿರುವುದು ವಿಜಯ ಕರ್ನಾಟಕ, ಟಿವಿ9 ಮಾತ್ರ. ಸುವರ್ಣ ಸ್ಯೂಸ್ ಸಕಷ್ಟು impact ಮಾದಿದರೂ ‘ಯಶಸ್ಸಿನ ಕಥೆ’ ಎಂದು ಹೇಳುವಂತಿಲ್ಲ.
ವಿ. ಭಟ್ಟರ ಕನ್ನಡಪ್ರಭ, ರವಿ ಹೆಗಡೆಯವರ ಉದಯವಾಣಿ, ಜಿಎನ್ ಮೋಹನ/ಶಿವಪ್ರಸಾದರ ಸಮಯ, ಅನಂತ ಚಿನೆವಾರರ ಜನಶ್ರೀ ಅನೇಕ ಭಿನ್ನ ಪ್ರಯೋಗಗಳ ನಂತರವೂ ನಿಜವಾದ ನೆಗೆತವನ್ನು ಧಕ್ಕಿಸಿಕೊಳ್ಳುವುದು ಇನೂ ಸಾಧ್ಯವಾಗಿಲ್ಲ.
ಇದೀಗ ತೆರೆಗೆ ಬಂದಿರುವ ಪಬ್ಲಿಕ್ ಟಿವಿ ಹಾಗೂ ಇನ್ನೇನು ಬರಲಿರುವ ವಿಜಯವಾಣಿಯ ಎದುರು ಈ ಯಶಸ್ಸಿನ ಕಥೆಯಾಗುವ ಸವಾಲಿದೆ.
‘ಯಶಸ್ಸಿನ ಕಥೆ’ಗೆ ಕೇವಲ ನೇತೃತ್ವ ಸಾಕಾಗೋಲ್ಲ. ಹಲವು ಸಂಗತಿಗಳು ಜೊತೆಗೂಡಬೇಕು. ಪಕ್ಕಕ್ಕೆ ಸರಿದವರೆಲ್ಲ ಮುಖ್ಯರಂಗಕ್ಕೆ ಬಂದಿದ್ದಾರೆ. ಮಾತ್ರವಲ್ಲ ಸಾಧಿಸಿ ತೋರಿಸಲೇ ಬೇಕಾದ ಒತ್ತಡದಲ್ಲೂ ಇದ್ದಾರೆ.
***************





ಈಶ್ವರ ದೈತೋಟರ ಜೊತೆ ಜೊತೆಗೆ ಶಶಿಧರ್ ಭಟ್ಟರನ್ನು ಮರೆತಿರಾ?
ಕನ್ನಡಪ್ರಭ ಸುವರ್ಣ ನ್ಯೂಸ್ನ ಟಿಶ್ಯೂ ಪೇಪರ್ನಂತಾಗಿದೆ.
HR ರಂಗನಾಥ್ suvarna newsnalli iddaga bari sadistic age mathdtha idru. igaldaru vyangya,huli mathu bittu sari hogli antha ashisona.
ಹೆಚ್ ಅರ್ ರ೦ಗನಾಥ್ ರವರಿಗೆ ನನ್ನ ಹೄದಯಪೂರ್ವಕ ಅಬಿನ೦ದನೆಗಳು ನಿಮ್ಮ ಯಶಸ್ಸು ಸಾದನೆಗೆ ದೇವರು ಕೈ ಹಿಡಿಯಲಿ ನ೦ ೧ ಮಾಧ್ಯಮವಾಗಿ ಹೊರಹೊಮ್ಮಲಿ ಇ೦ತಿ ನಿಮ್ಮ್ ತಮ್ಮ ಕಲ೦ದರ ಅರ್ ಜಿ ಹಳ್ಳಿ