ಟಿವಿ ಮಾಧ್ಯಮಗಳು: ಕಳ್ಳನನ್ನು ಹಿಡಿದ ಪೊಲೀಸರನ್ನೇ ಶಿಕ್ಷಿಸಿದ ಕತೆ…
-ಚಂದ್ರಶೇಖರ್ ಮಂಡೆಕೋಲು
ಕಳ್ಳನನ್ನು ಹಿಡಿದ ಪೊಲೀಸರನ್ನೇ ಕಿತ್ತು ಹಾಕುವ ಯೋಜನೆಗೆ ನಮ್ಮ ಆಳುವವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ಹೇಸಿಗೆ ಮಾಡಿದ್ದನ್ನು ಯಾವ ನಾಚಿಕೆಯೂ ಇಲ್ಲದೆ ಸಮಥ್ರಿಸಿಕೊಳ್ಳುವವರು ನಮ್ಮೆದುರಿದ್ದಾರೆ ಎಂದರೆ ಏನೆನ್ನಲಿ? ಬಹುಶಃ ಇವೆಲ್ಲದಕ್ಕೂ ಹದಗೆಡುತ್ತಿರುವ ರಾಜಕಾರಣಿಗಳ ನೈತಿಕತೆಗಿಂತಲೂ, ಮಾಧ್ಯಮಗಳ ಕಟ್ಟೆಚ್ಚರವೇ ಕಾರಣ ಎಂದು ನಂಬಿದಂತಿದೆ ನಮ್ಮ ಸರಕಾರ. ಹೋದಲ್ಲೆಲ್ಲ ಹಿಂಬಾಲಿಸುತ್ತಲೇ, ತಮ್ಮ ಅನೈತಿಕತೆಯನ್ನು ಜಗತ್ತಿನೆದುರು ಸಾರಾಸಗಟಾಗಿ ಅನಾವರಣಗೊಳಿಸುತ್ತಿರುವ ಮಾಧ್ಯಮಗಳ ಗುಮ್ಮಕ್ಕೆ ಸರಕಾರ ಬೆದರಿದೆಯೇ? ಸದನ ಕಲಾಪವನ್ನು ಬಿತ್ತರಿಸಲು ಪ್ರತ್ಯೇಕ ಸರಕಾರಿ ಚಾನೆಲ್ ಪ್ರಸ್ತಾವ ಮುಂದಿಟ್ಟಿರುವುದು ಈ ಗುಮಾನಿ ಮೂಡಲು ಕಾರಣ.
ಲೋಕಸಭೆ, ರಾಜ್ಯ ಸಭೆಗಳ ಅಧಿವೇಶನವನ್ನು ಬಿತ್ತರಿಸಲು ಕೇಂದ್ರದಲ್ಲೊಂದು ಪ್ರತ್ಯೇಕ ಚಾನೆಲ್ ಇದೆ ಸರಿ. ಅಲ್ಲಿ ಅಂಥ ಚಾನೆಲ್ ಆರಂಭಿಸಿರುವುದಕ್ಕೂ ಒಂದು ಗಟ್ಟಿ ಕಾರಣ ಇದೆ. ದೇಶದ ಕೇಂದ್ರ ಬಿಂದುವಂತಿರುವ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನು ದೇಶ ಬಾಂಧವರೆಲ್ಲಾ ನೋಡಬೇಕು. ಅವಷ್ಟನ್ನೂ ಪ್ರಸಾರಿಸಲು ನವದೆಹಲಿಯಲ್ಲಿರುವ ಚಾನೆಲ್ಗಳು, ಎಲ್ಲಾ ರಾಜ್ಯಗಳಲ್ಲಿರುವ ಸ್ಥಳೀಯ ಚಾನೆಲ್ ಪ್ರತಿನಿಧಿಗಳು ತಮ್ಮ ಕ್ಯಾಮರಾ ಸಮೇತ ಸಂಸತ್ತಿನಲ್ಲಿ ಸ್ಟ್ಯಾಂಡ್ ಊರಿದರೆ ಜಾಗ ಎಲ್ಲಿ ಸಾಕಾದೀತು? ಈ ಪ್ರಮುಖ ಉದ್ದೇಶದಿಂದ ಸಂಸತ್ ಕಲಾಪದ ಪ್ರಸಾರಕ್ಕೆಂದು ಪ್ರತ್ಯೇಕ ಚಾನೆಲನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅದಕ್ಕೆ ಬೇಕಾದಷ್ಟು ದುಡ್ಡೂ ಕೇಂದ್ರದಲ್ಲಿತ್ತು. ಯಶಸ್ವಿಯಾುತು ಕೂಡಾ. ಆದರೆ ರಾಜ್ಯದಲ್ಲಿ ಇಂಥ ದದ್ರು ಇದೆಯಾ? ನಮ್ಮಲ್ಲಿರುವ ಆರೇಳು ಚಾನೆಲ್ಗಳ ಕ್ಯಾಮರಾ ಸ್ಟ್ಯಾಂಡ್ ಊರುವುದಕ್ಕೆ ಕೆಂಪೇಗೌಡರು ಕಟ್ಟಿಸಿದ ನಮ್ಮ ಹೆಮ್ಮೆಯ, ಅಷ್ಟು ದೊಡ್ಡ ಸೌಧದಲ್ಲಿ ಜಾಗ ಸಾಕಾಗದಾ?
ವೊನ್ನೆ ಮಾಸ್ಟರ್ ಹಿರಣ್ಣಯ್ಯ ಅವರು ವಾಹಿನಿಯ ಕಾಯ್ರಕ್ರಮವೊಂದರಲ್ಲಿ ಹೇಳಿದ್ದರು- ಕಾಲ ಕೆಟ್ಟು ಹೋಗಿದೆ ಸ್ವಾಮೀ, ಸದನದಲ್ಲೇ ಹುಡುಗಿಯನ್ನು ರೇಪ್ ಮಾಡುವ ಕಾಲ ದೂರದಲ್ಲೇನೂ ಇಲ್ಲ, ನೋಡ್ತಿರಿ ಅಂತ. ಈಗ ಅಲ್ಲಿ ಬ್ಲೂ ಫಿಲಂ ನೋಡಿದ್ದಾರೆ, ಇನ್ನೇನೇನು ಮಾಡ್ತಾರೋ? ಇವೆಲ್ಲದರ ಅರಿವಿದ್ದೂ ನಮ್ಮ ಸರಕಾರ ಮಾಧ್ಯಮಗಳ ಕ್ಯಾಮರಾ ಲೆನ್್ಸಗೆ ಬೆದರಿ ಇಂಥ ನಿಧ್ರಾರಕ್ಕೆ ಬಂದಿದೆಯೇ? ಸರಕಾರಿ ಚಾನೆಲ್ ಎಂದ ಮೇಲೆ ಅವರು ಏನು ಮಾಡಿದ್ರೂ ನಮಗೆ ತೋರಿಸುತ್ತಾರಾ?
ಇಲ್ಲವೆಂದರೆ ಅದ್ಯಾವ ಪುರುಷಾಥ್ರಕ್ಕೆ ಕಲಾಪ ಪ್ರಸಾರದ ಚಾನೆಲ್ ಆರಂಭಿಸುತ್ತಿದೆ ಸರಕಾರ? ಅದಕ್ಕೆ 25 ಕೋಟಿ ರೂ. ಬೇಕಂತೆ. ಅಷ್ಟೊಂದು ದುಡ್ಡು ಇದೆಯಾ? ನಮ್ಮಲ್ಲಿ ಎಷ್ಟೋ ಖಾಸಗಿ ಚಾನೆಲ್ಗಳಿವೆ. ಇಷ್ಟರವರೆಗೆ ಸದನ ಕಲಾಪದ ಪ್ರಸಾರದಲ್ಲಿ ಅವೇನೂ ತಪ್ಪು ಮಾಡಿಲ್ಲ. ಸದನದ ಘನತೆಗೆ ಕುಂದು ತಂದಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮಥ್ರವಾಗಿ ಕಾಯ್ರನಿವ್ರಹಿಸಿದೆ. ಹಾಗಿದ್ದೂ, ಯಾಕೆ ನೈತಿಕತೆಗೆ ಪೆಟ್ಟಾದಾಗಲೆಲ್ಲಾ ಎಚ್ಚರಿಸುವ ಖಾಸಗಿ ಚಾನೆಲ್ಗಳನ್ನು ವಿಧಾನಸೌಧದಿಂದ ಓಡಿಸಲಾಗುತ್ತಿದೆ? ವೊನ್ನೆಯ ಪ್ರಕರಣದಲ್ಲಿ ಕತ್ರವ್ಯ ಭ್ರಷ್ಟರಾದದ್ದು ಯಾರು? ಮಾಧ್ಯಮದ್ದು ಏನು ತಪ್ಪಿತ್ತು ಅಲ್ಲಿ?
ಸರಕಾರ ಅಂಥ ಚಾನೆಲ್ ಆರಂಭಿಸಿದ್ದಲ್ಲಿ ಇನ್ನು ಮುಂದೆ ಸದನದಲ್ಲಿ ನಿದ್ದೆಗೆ ಜಾರಬಹುದು, ಕುಚ್ರಿ ಎಳೆದಾಡಬಹುದು, ಶಟ್್ರ ಕಳಚಿ ಅರೆಬೆತ್ತಲಾಗಬಹುದು, ಬೀದಿ ಭಾಷೆಯಲ್ಲಿ ಜರೆಯಬಹುದು. ಸರಕಾರಿ ಅಧಿಕಾರಿಗಳು ಅವೆಲ್ಲವನ್ನೂ ಕಟ್ ಮಾಡಿ ಪ್ರಸಾರಿಸುತ್ತಾರೆ. ಅಂಥ ಪವಿತ್ರ ಜಾಗದಲ್ಲಿ ಏನು ಮಾಡಿದರೂ ನಡೆಯುತ್ತದೆ.
ತಿದ್ದಬೇಕಾದದ್ದು, ಅಂಕುಶ ಹಾಕಬೇಕಾದ್ದು ನೇರ ಅಥವಾ ಪರೋಕ್ಷವಾಗಿ ಜನಪ್ರತಿನಿಧಿಗಳ ಅನೈತಿಕತೆಗೆ. ಮಾಧ್ಯಮಗಳ ಕತ್ರವ್ಯಕ್ಕಲ್ಲ. ಅಲ್ಲಾರೀ, ಆ ಸಚಿವ ಅಂಥ ಘನತೆಯುಳ್ಳ ಜಾಗದಲ್ಲೇ ಕಾಲಗಲಿಸಿ ಆರಾಮದಲ್ಲಿ ಕೂತು ಬ್ಲೂ ಫಿಲಂ ನೋಡುತ್ತಾನೆಂದರೆ ಎಂಥ ಅಧೋಗತಿ ಇದು? ಅಲ್ಲೇ ಸದನದ ಬಾವಿಯಲ್ಲಿ ಕೂತಿರುವ ಹೆಣ್ಮಕ್ಕಳ ಗತಿ ಏನಾಗಬೇಕು? ಆತ ಆ ಕ್ಲಿಪ್ಪಿಂಗ್ ನೋಡ್ತಾ ಯಾವ ಹುಡುಗಿಯನ್ನು ಮನದಲ್ಲಿ ಚಪ್ಪರಿಸಿದ್ದಿರಬಹುದು? ನಾವು ಸಿನಿಮಾಗಳಲ್ಲಿ ಜನನಾಯಕರ ಕೆಟ್ಟ ಚಾರಿತ್ರ್ಯವನ್ನು ನೋಡಿದ್ದೇವೆ. ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ ಇವರೆಲ್ಲ ಅಂಥ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಂದು ನಿಜ ಬದುಕಲ್ಲೇ ಹಸಿ ಹಸಿಯಾಗಿ ನೋಡುತ್ತಿದ್ದೇವೆ. ಸಿನಿಮಾ ಬೇಕಾಗಿಲ್ಲ, ಸುದ್ದಿ ಚಾನೆಲ್ಗಳ ದಿನ ಉದ್ದದ ಪ್ರತೀ ಪ್ರಸಾರದಲ್ಲೂ ಕಂಡು ಬರುವ ಘಟನೆಗಳ ವರದಿ ಯಾವ ಸಿನಿಮಾ ಪ್ರದಶ್ರನಕ್ಕೂ ಕಡಿಮೆುಲ್ಲ.
ಕ್ಷಣಾಧ್ರದಲ್ಲಿ ಜಗತ್ತಿನ ತುಂಬೆಲ್ಲಾ ಸಚಿವರು ಬ್ಲೂ ಫಿಲಂ ನೋಡುತ್ತಿರುವ ಸ್ಪಷ್ಟ ಸಾಕ್ಷ್ಯ ಪ್ರಸಾರವಾುತು. ಆದರೂ ಅವರು ನಾವು ತಪ್ಪೇ ಮಾಡಿಲ್ಲ ಎಂದರು. ಯಾವ ಕಳ್ಳನೂ ಪೊಲೀಸರು ಹಿಡಿದಾಗ ತಾನು ಕದ್ದೇ ಇಲ್ಲ ಎನ್ನುತ್ತಾನಲ್ಲಾ. ಅದೊಂದು ಕಾಲ ಇತ್ತು. ನಾಯಕರು ಹೇಳಿದ್ದನ್ನು ಜನ ನಂಬುತ್ತಿದ್ದರು. ದಂಗೆಯೇಳುತ್ತಿರಲಿಲ್ಲ. ಇಂದು ಜನ ಎಲ್ಲವನ್ನೂ ಅಥ್ರೈಸಬಲ್ಲರು. ಹಳ್ಳಿ ಮೂಲೆಗೂ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿದೆ. ಪೇಪರ್ ಬಂಡಲ್ಗಳನ್ನು ಗೂಂಡಾಗಳು ತಡೆದರೂ ಆ ಸುದ್ದಿಯನ್ನು ಹೇಗಾದರೂ ಜನ ತಿಳಿದುಕೊಳ್ಳುತ್ತಾರೆ. ನಾಯಕ ನಿಬ್ಬೆರಗುಗೊಳ್ಳುವಷ್ಟು ಎಚ್ಚೆತ್ತುಕೊಳ್ಳುತ್ತಿದ್ದಾರೆ ಜನ.
ಭ್ರಷ್ಟರೆಲ್ಲಾ ನೆನಪಿನ ಆಯಸ್ಸು ತುಂಬಾ ಕಡಿಮೆ ಎಂದು ನಂಬಿದಂತಿದೆ. ಭಾಗಶಃ ಅದು ನಿಜವಿರಬಹುದು. ಜನರ ಮನಸ್ಸಲ್ಲಿ ಮಸಿ ಮೆತ್ತಿದ್ದನ್ನು ಮತ್ತೆ ಯಾವತ್ತೂ ಅಳಿಸಲಾಗದು. ಇದರ ನಡುವೆ ಅಂಗೈ ಹುಣ್ಣಿನ ತನಿಖೆಗೆ ಸಮಿತಿ ಮಾಡಿ ವರದಿಗಾಗಿ ಕಾಯುತ್ತಿದ್ದೇವೆ.
ಆ ಸಚಿವನ ಖಾತೆಯ ಹೆಸರು `ಮಹಿಳೆ ಮತ್ತು ಮಕ್ಕಳ ಕಲ್ಯಾಣ’ವಂತೆ. ವೊನ್ನೆ ಎಷ್ಟೋ ಮಕ್ಕಳು `ಬ್ಲೂ ಫಿಲಂ’ ಅಂದ್ರೆ ಏನಮ್ಮಾಂತ ಖಂಡಿತಾ ಕೇಳಿರುತ್ತಾರೆ, ಬಹುಶಃ ಈ ಘಟನೆ ಅವರೆಲ್ಲರಿಗೂ ಅವನ್ನು ನೋಡುವಂತೆ ಕುತೂಹಲ ಮೂಡಿಸಿದೆ. ಇಡೀ ಸಮೂಹವನ್ನೇ ಒಂದು ಕೆಟ್ಟ ಹಾದಿಗೆ ದೂಡಿದುದಕ್ಕಿಂತ ಕೆಟ್ಟ ಘಟನೆ ಯಾವುದಿದೆ?
**************
asiaindiafocus.wordpress.com





ನೀವು ಮಾಧ್ಯಮದೋರು ಮಾಡುವ ಮನೆಹಾಳು ಕೆಲಸಗಳನ್ನು ಹೇಳಿಲ್ಲ. ಅರ್ಧ ಸತ್ಯವನ್ನು ಮಾತ್ರ ಹೇಳಿದ ಲೇಖನ ಇದು.
ಲೋಕೇಶ್
ಈ ಬೆತ್ತಲೆ ರಾಜ್ಯದೊಳಗೆ ಮೈಮುಚ್ಚಿದವ ಚೋರನಾಗುವ
ಈ ಕತ್ತಲೆ ಕೂಪದೊಳಗೆ ಬೆಳಕನಿತ್ತವ ದ್ರೋಹಿಯಾಗುವ
ಅಂತ ಹಾಡಿದೆ ನೋಡಿ.ಈ ಮೂರು ಬಿಟ್ಟೂ ನಿಂತವರಿಗೆ ಹೊಂದಬಹುದು.ತಮ್ಮ ತಪ್ಪನ್ನ ಮುಚ್ಚಿಡಲು ಜನರ ತೆರಿಗೆ ಹಣ,ಯಾರಪ್ಪನ ಮನೆ ದುಡ್ಡು ಹೇಳಿ ಸರ್ಕಾರಿ ಚಾನೆಲ್ ಮಾಡೋಕೆ?
ನಿಜವಾದ ಮಾತು ರಾಕೇಶ್,,, ಆದರೆ ಮಾದ್ಯಮಗಳು ವರ್ತಿಸಿದ ರೀತಿ ಸರಿಯೇ??? ಪೋಲಿ ರಾಜಕಾರನಿಗಳ ಭಂಡತನವನ್ನು ಅನಾವರಣಗೊಳಿಸುವ ನೆಪದಲ್ಲಿ ಮಾದ್ಯಮಗಳ ಭಂಡತನ ಎಲ್ಲೆ ಮೀರಲಿಲ್ಲವೇ??? ಪೋಲಿ ಚಿತ್ರವನ್ನು ಇಡೀ ರಾಜ್ಯದ ಜನತೆಗೆ ತೋದಿಸಿದ ರೀತಿ ಒಪ್ಪಬಹುದೇ…..ಇದು ಒಂದು ಅತ್ಯಂತ ಬೇಜವದಾರಿ ಕೆಲಸವಲ್ಲವೇ??