ಸಂಸ್ಕೃತಿ ಸಂಕಥನ – 23 – ಕಾನೂನು ಸಂಸ್ಕೃತಿಯನ್ನಾಧರಿಸಿ ಇರಬೇಕು
-ರಮಾನಂದ ಐನಕೈ
ಜಿಜ್ಞಾಸುಕೂಟ ಅಂತ ಸಮಾನ ಮನಸ್ಕರ ಸಂಘಟನೆಯೊಂದು ಶಿರಸಿಯಲ್ಲಿದೆ. ಅವರು ತಿಂಗಳಿಗೊಮ್ಮೆ ಸೇರಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಅವರು ಹಲವಾರು ವರ್ಷ ಗಳಿಂದ ಈ ಪ್ರವೃತ್ತಿಯನ್ನು ಉಳಿಸಿ ಬೆಳೆಸಿಕೊಡು ಬಂದಿದ್ದಾರೆ. ಮೊನ್ನೆ ಅಕ್ಟೋಬರ್ 1ಕ್ಕೆ ಅವರು ಚರ್ಚೆಗೆ ಇಟ್ಟುಕೊಂಡ ವಿಷಯ ‘ಜನಲೋಕ ಪಾಲ್ ಮಸೂದೆ’. ಈ ಚರ್ಚೆ ಶಿರಸಿಯ ವಿದ್ಯಾನಗರ ರುದ್ರಭೂಮಿ ಆವರಣದಲ್ಲಿರುವ ‘ನೆಮ್ಮದಿ’ ಕುಟಿರದಲ್ಲಿ ನಡೆಯಿತು. ಈ ಕುರಿತು ನ್ಯಾಯವಾದಿಗಳಾದ ಅನಂತ ಹೆಗಡೆ ಹೂಡ್ಲಮನೆ ಹಾಗೂ ಅರುಣಾಚಲ ಹೆಗಡೆ ಜಾನ್ಮನೆ ಜೊತೆಗೆ ಕಾನೂನು ಉಪ ನ್ಯಾಸಕರಾದ ಅರವರೆ ಅವರು ವಿಷಯ ಮಂಡಿಸಿದರು. ಸುದೀರ್ಘ ಚರ್ಚೆ ನಡೆಯಿತು. ಕೊನೆಗೂ ಒಂದು ಗೊಂದಲ ಉಳಿಯಿತು. ಅದನ್ನು ಚೌಧರಿ ಡಾಕ್ಟರ್ ಸ್ಪಷ್ಟಪಡಿಸಿದರು. ನಾವು ಕಾನೂನು ತಜ್ಞರನ್ನು ಕರೆಸಿದ್ದು ಭ್ರಷ್ಟಾ ಚಾರ ನಿವಾರಣೆಗೆ ಏನಾದರೂ ಮಾರ್ಗ ಸೂಚಿಸ ಬಹುದೆಂದು. ಆದರೆ ನೀವು ಮಾತನಾಡುವುದು ನೋಡಿದರೆ ಸರಕಾರವನ್ನೇ ಸಮರ್ಥಿಸುವಂತಿದೆ ಎಂದರು.
ಇದು ಭಾರತದಲ್ಲಿರುವ ಪ್ರತಿಯೊಬ್ಬರ ಸಮಸ್ಯೆ. ಯಾಕೆ ಹೀಗಾಗುತ್ತದೆ? ಕಾನೂನು ಅಂದರೆ ಹಿಂಬಡಿಗನ ಹಾವಿನಂತೆ ಎರಡೂ ಕಡೆ ತಲೆ ಇದ್ದಂತೆ ಕಾಣುತ್ತದೆ. ಕಾನೂನು ವಿಳಂಬ ನೀತಿ ಅನುಸರಿಸುವಂತೆ ಕಾಣುತ್ತದೆ. ನೂರು ಜನ ಅಪರಾಧಿಗಳು ಬಿಡುಗಡೆಯಾದರೂ ಅಡ್ಡಿಯಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಕಾನೂನಿನ ಆದರ್ಶವಾದರೆ ಈ ದೇಶದಲ್ಲಿ ನೂರಾರು ಅಪರಾಧಿಗಳು ತಪ್ಪಿಸಿಕೊಂಡು ಕೊನೆ ಗೊಬ್ಬ ನಿರಪರಾಧಿ ಸಿಕ್ಕಿಬೀಳುವ ಪರಿಸ್ಥಿತಿ ಎದು ರಾಗಿದೆ ಅನಿಸುತ್ತದೆ. ಜನರಿಗೆ ಕಾನೂನಿನ ಬಗ್ಗೆ ಭಯ ಇದೆ. ಆದರೆ ಗೌರವ ಇಲ್ಲ. ಈ ದೇಶದಲ್ಲಿ ಕಾನೂನಿನ ಸದುಪಯೋಗಕ್ಕಿಂತ ದುರುಪಯೋಗ ಆಗುತ್ತಿರುವುದೇ ಹೆಚ್ಚು. ಕಾನೂನಿಗೆ ಸಂಬಂಧ ಪಟ್ಟಂತಹ ಇಂತಹ ನೂರಾರು ಪ್ರಶ್ನೆಗಳಿಗೆಲ್ಲ ಕಾರಣ ಗಳೇನು?
ಹಾಳು ರಾಜಕೀಯ ಸಾಕು… ದಕ್ಷ ಲೋಕಾಯುಕ್ತರು ಬೇಕು…
-ನಿಲುಮೆ
ಆ ತಾಯಿ ಅಂದು ತನ್ನ ಮಗುವನ್ನು ಬದುಕಿಸಿಕೊಡು ಅಂದಾಗ, ‘ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ನಿನ್ನ ಮಗನನ್ನು ಬದುಕಿಸುತ್ತೇನೆ’ ಅಂದಿದ್ದ ಬುದ್ಧ. ಬಹುಷಃ ಇಂದಿಗೆ ಆ ತಾಯಿ ಬಂದು ಕೇಳಿದ್ದರೆ ’ಭ್ರಷ್ಟಾಚಾರವಿಲ್ಲದ ಭಾರತದ ಪಕ್ಷವೊಂದರ ಹೆಸರು ಹೇಳಿಬಿಡು ಬದುಕಿಸಿಬಿಡುತ್ತೇನೆ’ ಅನ್ನುತಿದ್ದನೋ ಏನೋ…? ಇಂಥ ಪಕ್ಷಗಳನ್ನು, ಕರ್ನಾಟಕಕ್ಕೊಬ್ಬ ‘ದಕ್ಷ ಲೋಕಾಯುಕ್ತರ’ ನೇಮಕ ಮಾಡಿ ಅಂತ ಕೇಳಬೇಕಾಗಿದೆ…!
ಕಳೆದ ಆಗಸ್ಟಿನವರೆಗೂ ಕರ್ನಾಟಕ ಲೋಕಾಯುಕ್ತದ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತಿತ್ತು. ಈಗಲೂ ಆಗುತ್ತಿದೆ.ಆದರೆ ಸುದ್ದಿಯಾಗುತ್ತಿರುವ ವಿಷಯ,ಕಾಲ,ಕಾರಣಗಳು ಬದಲಾಗಿದೆ…!
ಲೋಕಾಯುಕ್ತ ಅನ್ನುವ ಸಂಸ್ಥೆಯೊಂದಿದೆ ಅನ್ನುವುದು ಕರ್ನಾಟಕದ ಜನತೆಗೆ ತಿಳಿದಿದ್ದೆ ನ್ಯಾ.ವೆಂಕಟಾಚಲ ಅವರು ಕ್ಯಾಮೆರಾ ಸಮೇತ ಭ್ರಷ್ಟರ ಹಿಡಿದು, ಅದೇ ಕ್ಯಾಮೆರಾ ಮುಂದೆ ಅವರಿಗೆ ಹಿಗ್ಗಾ-ಮುಗ್ಗಾ ಬೈಯ್ಯುವಾಗಲೇ. ಅವರು ಬೈಯ್ಯುವುದನ್ನೂ ಆ ಪುಡಿ ಕಳ್ಳರು ಅವರಿಂದ ಉಗಿಸಿಕೊಳ್ಳುವುದನ್ನು ನೋಡುವುದೇ ಒಂಥರ ಧಾರಾವಾಹಿಯಾಗಿತ್ತು ಆಗ. ಕಡೆಗೆ ವೆಂಕಟಾಚಲರ ಅವಧಿ ಮುಗಿಯಿತು. ಇನ್ಯಾರು ಬರುತ್ತಾರೋ ಅನ್ನುವ ಕುತೂಹಲದ ನಡುವೆ ಬಂದವರು ನ್ಯಾ.ಸಂತೋಷ್ ಹೆಗ್ಡೆ.
ಲೋಕಾಯುಕ್ತರು ಏನು ಮಾಡಬಲ್ಲರು ಅಂತ ದೇಶದ ಜನತೆಗೆ ಗೊತ್ತಾಗಿದ್ದು ನ್ಯಾ.ಸಂತೋಷ್ ಹೆಗ್ಡೆಯವರು ಬಂದ ನಂತರವೇ. ಇಬ್ಬರ ವರ್ಕಿಂಗ್ ಶೈಲಿಯೂ ಬೇರೆ ಬೇರೆ ತರಹ. ಬರುತ್ತಲೇ ನನ್ನ ವರ್ಕಿಂಗ್ ಶೈಲಿ ಬೇರೆ ಅಂದವರು ಮೊದಲಿಗೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡರು. ವೆಂಕಟಾಚಲರ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ಅವರ ಮೇಲೆ ಗರಂ ಆಗಿದ್ದರು. ಆದರೆ,ಹೆಗ್ಡೆಯವರ ಕಾಲದಲ್ಲಿ ರಾಜಕಾರಣಿಗಳು ಮೈ ಪರಚಿಕೊಳ್ಳುತಿದ್ದರು. ಶಾಸಕರ ಭವನದಲ್ಲಿ ಸಂಪಂಗಿಯನ್ನ ಹಿಡಿದಾಗ ಜನ ಬಹಳ ಖುಷಿ ಪಟ್ಟಿದ್ದರು. ಆಮೇಲೆ ಗಣಿ ಹಗರಣವೆದ್ದು ಕಡೆಗೆ ಹೆಗ್ಡೆಯವರು ರೋಸಿ ಹೋಗಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಡ್ವಾಣಿಯವರ ಮಧ್ಯಸ್ಥಿಕೆ ಫಲವಾಗಿ ರಾಜಿನಾಮೆ ಹಿಂಪಡೆದರು. ಆ ನಂತರ ಗಣಿ ಹಗರಣದ ವರದಿ ಸಲ್ಲಿಸಿ ಯಡ್ಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ್ದೆಲ್ಲ ಈಗ ಇತಿಹಾಸ. ಕರ್ನಾಟಕ ಲೋಕಾಯುಕ್ತದ ಸಂತೋಷದ ದಿನಗಳು ಹೆಗ್ಡೆಯವರ ಹಿಂದೆಯೇ ಹೋಗಿಬಿಟ್ಟಿತಾ? ಮತ್ತಷ್ಟು ಓದು 
ಮುಳುಗದಿರು ಕರುವೇ!
-ಪುಷ್ಪರಾಜ್ ಚೌಟ
ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ
ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!
ಆವೇಶಕ್ಕೆ ಬಲಿಯಾದ ಕಂದ
-ಸತೀಶ್ ರಾಮನಗರ
ಆಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎಂಬುದನ್ನು ಕೇಳಿ ಒಂದು ಕ್ಷಣ ಆಶ್ಚರ್ಯಚಕಿತನಾದೆ. ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿರುವುದು ಆಕೆಯ ಪತಿಯೇ. ಈಗ ಆರೋಪಿತಳನ್ನು ಬೇರೆಯವರ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವುದು ಕೂಡ ಆಕೆಯ ಪತಿಯೇ.
ಮಾದಣ್ಣ ಹಾಗು ಗೌರಮ್ಮನವರದು ಇಬ್ಬರು ಮಕ್ಕಳೊಂದಿಗಿನ ಮಧ್ಯಮ ವರ್ಗದ ಸಂತೃಪ್ತಿ ಸಂಸಾರ. ಮಗ ರಮೇಶನಿಗೆ 5 ವರ್ಷ. ಮಗಳು ಲಕ್ಷ್ಮಿಗೆ 7 ವರ್ಷ. ಇಬ್ಬರ ಮುಖ್ಯ ಕಸುಬು ವ್ಯವಸಾಯ.
ನಾಳೆಯ ಲಕ್ಷ್ಮಿ ಪೂಜೆಗೆ ಮನೆಯಲ್ಲವನ್ನು ಶುಚಿಗೊಳಿಸಿ, ಗೌರಮ್ಮ ಗಂಡನ ದಾರಿ ಕಾಯುತಿದ್ದಳು. ಮಾದಣ್ಣ ಮನೆಗೆ ಬಂದ ತಕ್ಷಣವೇ, ನಾಳೆ ಹಬ್ಬಕ್ಕೆ ನನಗೆ ಸೀರೆ, ಮಕ್ಕಳಿಗೆ ಹೊಸ ಬಟ್ಟೆ ಜೊತೆಗೆ ಗಿರವಿ ಅಂಗಡಿಯಲ್ಲಿಟ್ಟಿರುವ, ನನ್ನ ಓಲೆ ಜುಮುಕಿ, ಮಾಂಗಲ್ಯ ಸರವನ್ನು ನಾಳೆ ಬೆಳಿಗ್ಗೆ ಬಿಡಿಸಿಕೊಂಡು ತರಲೇ ಬೇಕು ಎಂದು ತಾಕೀತು ಮಾಡಿದಳು. ಮಾದಣ್ಣ ಸರಿ ಎಂದು ತಲೆಯಲ್ಲಾಡಿಸಿ ಊಟ ಮಾಡಿ ಮಲಗಿದ.
ಮಾದಣ್ಣ, ಬೆಳಿಗ್ಗೆ ತನ್ನ ಬಳಿಯಲ್ಲಿದ್ದ ಚೂರು ಪಾರು ಹಣವನ್ನೆಲ್ಲ ಒಟ್ಟುಗೂಡಿಸಿ, ಆ ಹಣದಲ್ಲಿ ಮಕ್ಕಳಿಗೆ ಬಟ್ಟೆ ಹಾಗು ಹೆಂಡತಿಗೆ ಸೀರೆಯನ್ನು ತರಲಷ್ಟೇ ಸಾಧ್ಯವಾಯಿತು. ತನ್ನ ಗಂಡ ವಡವೆಗಳನ್ನು ಬಿಡಿಸಿಕೊಂಡು ತರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಗೌರಮ್ಮ ನಿಗೆ ಬಟ್ಟೆಗಳನ್ನಷ್ಟೇ ನೋಡಿ ನಿರಾಶೆಯಾಯಿತು. ವಡವೆಗಳಿಲ್ಲದೆ ಲಕ್ಷ್ಮಿ ಪೂಜೆ ಹೇಗೆ ಮಾಡುವುದೆಂಬ ಚಿಂತಯಿಂದ ಮೌನವಾದಳು. ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಸಂಜೆ ಮನೆಗೆ ಲಕ್ಷ್ಮಿ ಪೂಜೆಗೆ ಬರಲೇಬೇಕೆಂದು ಅದಾಗಲೇ ಹೇಳಿ ಬಂದಿದ್ದಳು. ಸಂಜೆ ಅವರುಗಳು ಮನೆಗೆ ಬಂದರೆ, ಯಾವ ಮುಖವನ್ನು ಹೊತ್ತುಕೊಂಡು ಪೂಜೆ ಮಾಡುತ್ತಿಲ್ಲ ಎಂದು ಹೇಳುವುದು ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು. ಮತ್ತಷ್ಟು ಓದು 
ಶರಣಾಗತ..!!
ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು. ಮತ್ತಷ್ಟು ಓದು 
ಐದು ತಿಂಗಳ ಹಸುಗೂಸಿಗೆ ಹೃದ್ರೋಗ, ಸಹಾಯ ಮಾಡಿ
– ದಟ್ಸ್ ಕನ್ನಡ.ಕಾಂ
ಬಡತನಕ್ಕೆ ನೂರಾರು ಕಷ್ಟಗಳು, ಆದರೆ ಎದುರಿಸುವ ತಾಕತ್ತು ಬೇಕು ಅಂತಾರೆ. ಈ ದಂಪತಿಗಳನ್ನು ನೋಡಿದರೆ ತಮ್ಮ ಮಗುವಿಗೆ ಇರುವ ಹೃದಯ ಸಂಬಂದಿ ಕಾಯಿಲೆಯನ್ನು ಎದುರಿಸುವ ತಾಕತ್ತು ಯಾವ ರೀತಿಯಲ್ಲೂ ಇಲ್ಲದಾಗಿ ಕಂಗಾಲಾಗಿದ್ದಾರೆ. ಕೇವಲ 5 ತಿಂಗಳ ಹಸುಗೂಸಿಗೆ ಚಿಕಿತ್ಸೆ ಕೊಡಿಸಲಾಗದೆ ಅಸಹಾಯಕರಾಗಿ ಕುಳಿತಿರುವ ಮನಮಿಡಿಯುವ ಕಥೆಯಿದು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮುದ್ದಪ್ಪ ಹಾಗೂ ನಿರ್ಮಲಾ ದಂಪತಿಗಳ ಏಕೈಕ ಮಗ ಶ್ರೀನಿವಾಸ (5 ತಿಂಗಳು) ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಜೀವನ ನಿರ್ವಹಣೆಗೆ ಕೂಲಿನಾಲಿ ಮಾಡಿಕೊಂಡಿರುವ ಈ ದಂಪತಿಗಳಿಗೆ ತಮ್ಮ ಮಗ ಜೀವ ಹಿಂಡುವ ರೋಗಕ್ಕೆ ತುತ್ತಾಗಿರುವುದು ಆಕಾಶ ಕಳಚಿ ಬಿದ್ದಂತಾಗಿದೆ.
ಹೊಟ್ಟೆಪಾಡಿಗಾಗಿ ಮುಂಬೈ, ಬೆಂಗಳೂರು, ಪೂನಾ, ಅಂತ ಊರೂರು ತಿರುಗುವ ಈ ದಂಪತಿಗಳಿಗೆ ವಾಸಕ್ಕೆ ಒಂದು ಯೋಗ್ಯ ಮನೆ ಹಾಗೂ ಉದ್ಯೋಗವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದು, ಈಗ ಮಗುವಿನ ಕಾಯಿಲೆ ಅವರನ್ನು ಇನ್ನಷ್ಟು ಕುಸಿಯುವಂತೆ ಮಾಡಿದೆ. ಅಲೆಮಾರಿಗಳಾದ್ದರಿಂದ ರೇಶನ್ ಕಾರ್ಡ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಉಚಿತ ವೈದ್ಯಕೀಯ ಸೌಕರ್ಯ ದೊರೆಯದೆ, ಹಣ ಹೊಂದಿಸಲು ಸಾಧ್ಯಾವಾಗದೆ ಕೈ ಸೋತು ಹೋಗಿವೆ ಅಂತಾರೆ ಮಗುವಿನ ತಂದೆ ಮುದ್ದಪ್ಪ.
ಕನ್ನಡಿಗರಿಗೆ ಮೋಸ ಮಾಡಿದ ಸಿಸಿಎಲ್ ಆಡಳಿತ ಮಂಡಳಿ !?
-ನಿತಿನ್ ರೈ ಕುಕ್ಕುವಳ್ಳಿ
ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಸರಿಸಾಟಿಯಾಗೆ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕೊನೆಯ ಹಂತದಲ್ಲಿ ವಿವಾದದ ಗೂಡಾಗಿ ಪರಿವರ್ತನೆಗೊಂಡು ವಿವಾದದಲ್ಲೇ ಅಂತ್ಯಗೊಂಡಿತು.
ಫೈನಲ್ ತನಕ ಅತ್ಯಂತ ಶುದ್ಧವಾಗಿ ನಡೆದುಕೊಂಡು ಬಂದ ಸಿಸಿಎಲ್ ಪಂದ್ಯಾವಳಿ ಫೈನಲ್ ನಲ್ಲಿ ಮಾತ್ರ ಆಡಳಿತ ಮಂಡಳಿ ನಡೆದುಕೊಂಡ ರೀತಿ ಕನ್ನಡಿಗರನ್ನ ಸೋಲಿಸಲು ಪೂರ್ವ ತಯಾರಿ ಮಾಡಿದಂತಿತ್ತು. ಪಂದ್ಯ ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆನೇ ಇದಕ್ಕೆಲ್ಲ ಸಿದ್ದತೆಗಳನ್ನ ಆಡಳಿತ ಮಂಡಳಿ ಮಾಡಿದಂತಿತ್ತು. ಪಂದ್ಯ ಸರಿಯಾದ ಸಮಯಕ್ಕಿಂತ ಸುಮಾರು ಎರಡು ತಾಸುಗಳಷ್ಟು ತಡವಾಗಿ ಪ್ರಾರಂಭಗೊಂಡದ್ದು, ಸುದೀಪ್ ಮತ್ತು ತಂಡ ಸರಿಯಾದ ಹೊತ್ತಿಗೆ ಬಂದು ಮೈದಾನದಲ್ಲಿ ಚೆನ್ನೈ ರೈನೋಸ್ ತಂಡದ ಆಟಗಾರರಿಗೆ ಕಾದು ಕುಳಿತು ಸುಸ್ತಾಗಿದ್ದರು. ಚೆನ್ನೈ ತಂಡ ಮೈದಾನ ಪ್ರವೇಶ ಮಾಡಿದ್ದು ಎರಡು ಗಂಟೆ ತಡವಾಗಿ ಇದರ ಬಗ್ಗೆ ಆಡಳಿತ ಮಂಡಳಿ ಕಿಂಚೀತು ಚಕಾರ ಎತ್ತಲಿಲ್ಲ ಯಾಕೆ ?, ಪಂದ್ಯ ಆರಂಭದ ನಂತರ ತಮಿಳು ನಟರ ತಂಡ ಪ್ರತಿ ಹಂತದಲ್ಲೂ ಕರ್ನಾಟಕದ ನಟರ ವಿರುದ್ದ ಜಿದ್ದಾಜಿದ್ದಿಗೆ ಬಿದ್ದಿತ್ತು. ಗುಂಪು ಸೇರಿ ಅಂಪೈರ್ ಗಳ ಮೇಲೆ ಒತ್ತಡ ತರುತ್ತಿದ್ದರು. ಸಕ್ರಮವಲ್ಲದ ರನೌಟ್ ತೀರ್ಪನ್ನು ಅಂಪೈರ್ ಗಳಿಂದ ಹೊರಡಿಸಿದ ನಂತರ, ಡೆಡ್ ಬಾಲ್ ಅನ್ನೋ ತೀರ್ಪಿಗೂ ಅವರು ಅವಕಾಶ ನೀಡಲಿಲ್ಲ. ಮತ್ತಷ್ಟು ಓದು 
ಮೀಡಿಯಾದಲ್ಲಿ ಮೌಢ್ಯ
-ದಿನೇಶ್ ಕುಮಾರ್ ಎಸ್.ಸಿ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮ…ಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ.
ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ. ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಮತ್ತಷ್ಟು ಓದು 
ಟಿವಿ ಮಾಧ್ಯಮಗಳು: ಕಳ್ಳನನ್ನು ಹಿಡಿದ ಪೊಲೀಸರನ್ನೇ ಶಿಕ್ಷಿಸಿದ ಕತೆ…
-ಚಂದ್ರಶೇಖರ್ ಮಂಡೆಕೋಲು
ಕಳ್ಳನನ್ನು ಹಿಡಿದ ಪೊಲೀಸರನ್ನೇ ಕಿತ್ತು ಹಾಕುವ ಯೋಜನೆಗೆ ನಮ್ಮ ಆಳುವವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ಹೇಸಿಗೆ ಮಾಡಿದ್ದನ್ನು ಯಾವ ನಾಚಿಕೆಯೂ ಇಲ್ಲದೆ ಸಮಥ್ರಿಸಿಕೊಳ್ಳುವವರು ನಮ್ಮೆದುರಿದ್ದಾರೆ ಎಂದರೆ ಏನೆನ್ನಲಿ? ಬಹುಶಃ ಇವೆಲ್ಲದಕ್ಕೂ ಹದಗೆಡುತ್ತಿರುವ ರಾಜಕಾರಣಿಗಳ ನೈತಿಕತೆಗಿಂತಲೂ, ಮಾಧ್ಯಮಗಳ ಕಟ್ಟೆಚ್ಚರವೇ ಕಾರಣ ಎಂದು ನಂಬಿದಂತಿದೆ ನಮ್ಮ ಸರಕಾರ. ಹೋದಲ್ಲೆಲ್ಲ ಹಿಂಬಾಲಿಸುತ್ತಲೇ, ತಮ್ಮ ಅನೈತಿಕತೆಯನ್ನು ಜಗತ್ತಿನೆದುರು ಸಾರಾಸಗಟಾಗಿ ಅನಾವರಣಗೊಳಿಸುತ್ತಿರುವ ಮಾಧ್ಯಮಗಳ ಗುಮ್ಮಕ್ಕೆ ಸರಕಾರ ಬೆದರಿದೆಯೇ? ಸದನ ಕಲಾಪವನ್ನು ಬಿತ್ತರಿಸಲು ಪ್ರತ್ಯೇಕ ಸರಕಾರಿ ಚಾನೆಲ್ ಪ್ರಸ್ತಾವ ಮುಂದಿಟ್ಟಿರುವುದು ಈ ಗುಮಾನಿ ಮೂಡಲು ಕಾರಣ.
ಲೋಕಸಭೆ, ರಾಜ್ಯ ಸಭೆಗಳ ಅಧಿವೇಶನವನ್ನು ಬಿತ್ತರಿಸಲು ಕೇಂದ್ರದಲ್ಲೊಂದು ಪ್ರತ್ಯೇಕ ಚಾನೆಲ್ ಇದೆ ಸರಿ. ಅಲ್ಲಿ ಅಂಥ ಚಾನೆಲ್ ಆರಂಭಿಸಿರುವುದಕ್ಕೂ ಒಂದು ಗಟ್ಟಿ ಕಾರಣ ಇದೆ. ದೇಶದ ಕೇಂದ್ರ ಬಿಂದುವಂತಿರುವ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನು ದೇಶ ಬಾಂಧವರೆಲ್ಲಾ ನೋಡಬೇಕು. ಅವಷ್ಟನ್ನೂ ಪ್ರಸಾರಿಸಲು ನವದೆಹಲಿಯಲ್ಲಿರುವ ಚಾನೆಲ್ಗಳು, ಎಲ್ಲಾ ರಾಜ್ಯಗಳಲ್ಲಿರುವ ಸ್ಥಳೀಯ ಚಾನೆಲ್ ಪ್ರತಿನಿಧಿಗಳು ತಮ್ಮ ಕ್ಯಾಮರಾ ಸಮೇತ ಸಂಸತ್ತಿನಲ್ಲಿ ಸ್ಟ್ಯಾಂಡ್ ಊರಿದರೆ ಜಾಗ ಎಲ್ಲಿ ಸಾಕಾದೀತು? ಈ ಪ್ರಮುಖ ಉದ್ದೇಶದಿಂದ ಸಂಸತ್ ಕಲಾಪದ ಪ್ರಸಾರಕ್ಕೆಂದು ಪ್ರತ್ಯೇಕ ಚಾನೆಲನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅದಕ್ಕೆ ಬೇಕಾದಷ್ಟು ದುಡ್ಡೂ ಕೇಂದ್ರದಲ್ಲಿತ್ತು. ಯಶಸ್ವಿಯಾುತು ಕೂಡಾ. ಆದರೆ ರಾಜ್ಯದಲ್ಲಿ ಇಂಥ ದದ್ರು ಇದೆಯಾ? ನಮ್ಮಲ್ಲಿರುವ ಆರೇಳು ಚಾನೆಲ್ಗಳ ಕ್ಯಾಮರಾ ಸ್ಟ್ಯಾಂಡ್ ಊರುವುದಕ್ಕೆ ಕೆಂಪೇಗೌಡರು ಕಟ್ಟಿಸಿದ ನಮ್ಮ ಹೆಮ್ಮೆಯ, ಅಷ್ಟು ದೊಡ್ಡ ಸೌಧದಲ್ಲಿ ಜಾಗ ಸಾಕಾಗದಾ?
ವೊನ್ನೆ ಮಾಸ್ಟರ್ ಹಿರಣ್ಣಯ್ಯ ಅವರು ವಾಹಿನಿಯ ಕಾಯ್ರಕ್ರಮವೊಂದರಲ್ಲಿ ಹೇಳಿದ್ದರು- ಕಾಲ ಕೆಟ್ಟು ಹೋಗಿದೆ ಸ್ವಾಮೀ, ಸದನದಲ್ಲೇ ಹುಡುಗಿಯನ್ನು ರೇಪ್ ಮಾಡುವ ಕಾಲ ದೂರದಲ್ಲೇನೂ ಇಲ್ಲ, ನೋಡ್ತಿರಿ ಅಂತ. ಈಗ ಅಲ್ಲಿ ಬ್ಲೂ ಫಿಲಂ ನೋಡಿದ್ದಾರೆ, ಇನ್ನೇನೇನು ಮಾಡ್ತಾರೋ? ಇವೆಲ್ಲದರ ಅರಿವಿದ್ದೂ ನಮ್ಮ ಸರಕಾರ ಮಾಧ್ಯಮಗಳ ಕ್ಯಾಮರಾ ಲೆನ್್ಸಗೆ ಬೆದರಿ ಇಂಥ ನಿಧ್ರಾರಕ್ಕೆ ಬಂದಿದೆಯೇ? ಸರಕಾರಿ ಚಾನೆಲ್ ಎಂದ ಮೇಲೆ ಅವರು ಏನು ಮಾಡಿದ್ರೂ ನಮಗೆ ತೋರಿಸುತ್ತಾರಾ? ಮತ್ತಷ್ಟು ಓದು 
ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ್ಲ
-ರಾಕೇಶ್ ಎನ್ ಎಸ್






