ರವಿ ಬೆಳಗೆರೆ ಎಂಬ ಕಿಲಾಡಿ ಮಾಂತ್ರಿಕನ ಮಾಯಾ ಬುಟ್ಟಿಯಿಂದ!
-ಕಾಲಂ ೯
ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆಯನ್ನು ಹಿಂದೆ ಸಂಪಾದಕೀಯದಲ್ಲಿ ಓದಿರಬಹುದು. ಇದೀಗ ಅದಕ್ಕೆ ಸಂಬಂಧವಿಲ್ಲದ ಒಂದಷ್ಟು ವಿಚಾರಗಳು:
ಪತ್ರಕರ್ತ ರವಿ ಬೆಳಗೆರೆ ಇತ್ತೀಚಿಗೆ SM ಕೃಷ್ಣರೊಂದಿಗೆ ಇಸ್ರೇಲ್ ಯಾತ್ರೆಗೆ ಹೋಗಿದ್ದರು. ಅವರೇ ಬರೆದುಕೊಂಡಂತೆ ಅದು ಕಾಡಿ, ಬೇಡಿ ಗಿಟ್ಟಿಸಿಕೊಂಡ ಬಿಟ್ಟಿ ಅವಕಾಶ. ಜೊತೆಯಲ್ಲಿಯೇ ವಿಶ್ವೇಶ್ವರ ಭಟ್ಟರೂ ಹೋಗಿದ್ದಿದ್ದು ಭಟ್ಟರ ಲೇಖನಗಳನ್ನು ಓದುವವರಿಗೆ ತಿಳಿದಿರಬಹುದು. ಇಸ್ರೇಲ್ ಜೊತೆಗೆ ಪಾಕ್, ಇಟೆಲಿ, ಮತ್ತು ಸ್ವಿಜಲ್ಯಾಂಡ್ ಪಕ್ಕದ ದೇಶವೊಂದರ ಪ್ರವಾಸದ ಅನುಭವವನ್ನೂ ಸೇರಿಸಿ ಮುಸಲ ಯುದ್ಧದಲ್ಲಿ ಹಿಮಾಗ್ನಿ ಎಂಬ ಕಾದಂಬರಿ ಬರೆದಿದ್ದಾರೆ. ಮೈನೋ ಗಾಂಧಿ ಎಂಬ ಪಾತ್ರದ ಸುತ್ತ ಭಯೋತ್ಪಾದನೆ ಮತ್ತು ಕಪ್ಪುಹಣಗಳ ಬಗ್ಗೆ ಕಥೆ ಸಾಗುತ್ತದೆ. ಹೆಚ್ಚು ವಿವಾದವದಲ್ಲಿರುವ ವಸ್ತುಗಳನ್ನು ಆರಿಸಿ ಬರೆಯುವುದರಲ್ಲಿ ನಿಸ್ಸೀಮರಾದ ಬೆಳಗೆರೆ, ಮುಖಪುಟದಲ್ಲಿ ಸೋನಿಯಾ ಚಿತ್ರವನ್ನೂ ಸೇರಿಸಿ ಕುತೂಹಲ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಸಲ್ಮಾನ್ ರಶ್ದಿ/ತಸ್ಲೀಮಾ ಆಗುವ ಪ್ರಯತ್ನ ಅವರಲ್ಲಿ ಕಾಣಬಹುದು.
“ಇಲ್ಲಿ ಬರುವ ಪಾತ್ರ ಹಾಗೂ ಘಟನೆಗಳು ಕಾಲ್ಪನಿಕ. ಯಾವುದೇ ಸಾಮ್ಯತೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ” ಎಂಬ ಎಚ್ಚರಿಕೆಯೂ ಆ ಪುಸ್ತಕದಲ್ಲಿದೆ!
ಇದರ ಜೊತೆ ಉಡುಗೊರೆ, ಅಮ್ಮ ಸಿಕ್ಕಿದ್ದು ಎಂಬ ಪುಸ್ತಕಗಳು ಮತ್ತೆರಡು ಸಿಡಿಗಳು ಭಾನುವಾರ ಬಿಡುಗಡೆಯಾದವು. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – 22 – ಭಾರತೀಯ ಸಂಸ್ಕೃತಿಗೆ ಗ್ರಹಣ ಹಿಡಿಸಿದ ವಸಾಹತು ಪ್ರಜ್ಞೆ
-ರಮಾನಂದ ಐನಕೈ
ಸುಮಾರು 35 ವರ್ಷಗಳ ಹಿಂದಿನ ನೆನಪು. ನಾವು ಹೈಸ್ಕೂಲಿಗೆ ಹೋಗುತ್ತಿರುವ ದಿನಗಳು. ಒಂದು ರೀತಿಯ ವಿಚಿತ್ರ ಸಭ್ಯತೆಯನ್ನು ಬೆನ್ನಟ್ಟಿ ಹೊರಟಿರುವ ಕಾಲ. ಮೇಸ್ಟ್ರಗಳು ಕ್ಲಾಸಿಗೆ ಬಂದರೆ ಜೀವನದ ‘ಗುರಿ’ಯ ಕುರಿತಾಗೆ ಮೊದಲ ಪ್ರಶ್ನೆ ಕೇಳುತ್ತಿದ್ದರು. ಯಾರು ಅತ್ಯುತ್ತಮ ಗುರಿಯನ್ನು ಹೇಳಿದರೋ ಅವರಿಗೆ ‘ವ್ಹೆರಿ ಗುಡ್’ ಅನ್ನುತ್ತಿದ್ದರು. ಮುಂದೆ ಜೀವನದಲ್ಲಿ ಮನುಷ್ಯ ಮಾಡಬಹು ದಾಂತಹುದು ಇಂತಿಂಥದಿದ್ದೆ ಎಂದು ನಮಗೆ ಗೊತ್ತಾಗಿದ್ದೇ ಈ ಪ್ರಶೆಗಳಿಗೆ ಉತ್ತರ ಹುಡುಕುವ ಮೂಲಕ. ನಾವು ಮಾಡುವ ಕಾರ್ಯಗಳಿಗೆ ಉದ್ದೇಶ ಇದ್ದರೆ ಮಾತ್ರ ಅದು ಗುರಿ ತಲುಪುತ್ತದೆ. ಕ್ರಿಯೆಗೂ ಉದ್ದೇಶಕ್ಕೂ ಸಂಬಂಧ ಇರಬೇಕು. ಆದ್ದರಿಂದ ಗುರಿ ಅಂದರೆ ಉದ್ದೇಶ. ಗುರಿಯ ದಾರಿ ಯಲ್ಲಿ ಹೋದರೆ ಗುರಿ ಸಿಗುತ್ತದೆ. ಈ ರೀತಿಯ ಚಿಂತನೆ ಇದ್ದ ಕಾಲ ಅದು.
ಇಂಥ ಚಿಂತನೆಗಳು ಎಲ್ಲಿಂದ ಬಂದವು? ಕೇಳಿದರೆ, ದಾರ್ಶನಿಕರಿಂದ, ಪುರಾಣಗಳಿಂದ, ಪ್ರಾಚೀನ ಜನರ ಜೀವನಾನುಭವದಿಂದ ಇತ್ಯಾದಿ ಯಾಗಿ ಮನಸ್ಸಿಗೆ ಕಂಡಂತೆ ಹೇಳುತ್ತೇವೆ. ಯಾರಿಂದಲೂ ಅಲ್ಲ. ನಾವು ಕಲ್ಪಿಸುತ್ತಿರುವ ಸೀಮಿತ ಅರ್ಥದ ಗುರಿ ನಮ್ಮಲ್ಲಿ ಹುಟ್ಟಿದ್ದೇ ಪಾಶ್ಚಾತ್ಯ ಪ್ರಭಾವದಿಂದ. ವಸಾಹತುಶಾಹಿ ಪ್ರಜ್ಞೆ ಯಿಂದ. ಏಕೆಂದರೆ ಅವರ ಅಷ್ಟೂ ಚಿಂತನೆಗಳು ಅರಳುವುದು ಕಾರಣ ಮತ್ತು ಉದ್ದೇಶಗಳ ಮೇಲೆ. ಏಕೆಂದರೆ ಪಾಶ್ಚಾತ್ಯ ಪುರಾಣ ಕಟ್ಟಲ್ಪಟ್ಟಿದ್ದೇ ಈ ಪರಿಕಲ್ಪನೆಯ ಮೇಲೆ. ಅನೇಕ ಸಂದರ್ಭಗಳಲ್ಲಿ ಅದು ನಮ್ಮಲ್ಲಿ ಅರ್ಥ ಕೊಡಲಾರದು.
ಗೂಪಿ ಬಾಘ
–ನಟರಾಜು ಎಸ್ ಎಂ
ಕುರಿ ಮತ್ತು ನಾನು
-ಸತೀಶ್ ರಾಮನಗರ
ಮನೆಯ ಕಾಂಪೌಂಡ್ ಇಷ್ಟೊಂದು ದೊಡ್ಡದಾಗಿದೆ. ಒಂದು ಚಿಕ್ಕ ಕುರಿಮರಿ ತನ್ನಿ ಸಾಕೋಣ. ಸುತ್ತಾ ಮುತ್ತಾ ಇರುವ ಹುಲ್ಲನ್ನು ತಿಂದುಕೊಂಡು ಬೆಳೆಯುತ್ತೆ. ಮೇಯಿಸಲು ಹೊರಗಡೆ ಹೋಗುವ ಅವಶ್ಯಕತೆಯಿರುವುದಿಲ್ಲ. ನನಗು ಮನೆಯಲ್ಲಿ ಸುಮ್ಮನೆ ಕೂತು ಕಾಲ ಕಳೆಯುವುದು ತಪ್ಪುತ್ತದೆ ಎಂಬ ಅಮ್ಮನ ಮಾತಿಗೆ ಬೆಲೆ ಕೊಟ್ಟು ಅಪ್ಪಾ ಒಂದು ಸಣ್ಣನೆಯ ಕುರಿಮರಿಯನ್ನು ಮಾರನೆಯ ದಿನವೇ ತಂದರು. ನಾನು ಶಾಲೆಯಲ್ಲಿ ಕುಳಿತಿದ್ದರು ಕುರಿಮರಿಯದೆ ಧ್ಯಾನ. ಬೆಲ್ಲು ಎಷ್ಟು ಬೇಗ ಹೊಡೆಯುವುದೋ ಎಂಬ ನಿರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ ಪಾಠ ತಲೆಗೆ ಸೇರುತ್ತಿರಲಿಲ್ಲ.
ಶಾಲೆ ಬಿಟ್ಟ ತಕ್ಷಣ ಓಡುವುದಕ್ಕೆ ಶುರುಮಾಡಿದರೆ ಮನೆಯ ಬಳಿ ಬಂದಾಗಲೇ ನನ್ನ ಕಾಲಿಗೆ ಬ್ರೇಕ್ ಬೀಳುತಿದ್ದುದ್ದು. ಕುರಿಮರಿಯನ್ನು ಒಮ್ಮೆ ಮುದ್ದಾಡಿ, ಅದರ ಪಿಳಿ ಪಿಳಿ ಕಣ್ಣುಗಳನ್ನು ನೋಡುತ್ತಾ ಮತ್ತೊಮ್ಮೆ ಅದರ ಮೈದಡವಿದರೆ ಸಾಕು, ಕುರಿಮರಿ ಚಂಗನೆ ಮೇಲಕ್ಕೆಗರಿ ಸುತ್ತಲು ಕುಣಿದು ಕುಪ್ಪಳಿಸುತಿತ್ತು. ನನ್ನಷ್ಟೇ ಆಸಕ್ತಿಯಿಂದ ಕುರಿಮರಿಯ ಬಾಲಲೀಲೆಯನ್ನು ನೋಡಲು ಕಣ್ಣರಳಿಸಿಕೊಂಡು ಬರುತ್ತಿದ್ದಳು ನನ್ನ ಚಿಕ್ಕ ಮುದ್ದು ತಂಗಿ. ಹೀಗೊಂದು ದಿನ ಕಾಣದ ಹಾಗೆ ಅಪ್ಪನ ಜೇಬಿನಿಂದ ಕದ್ದ ಕಾಸಿನಿಂದ ಒಂದು ಚಿಕ್ಕ ಗಂಟೆಯನ್ನು ಕೊಂಡು ತಂದು ಕುರಿಮರಿಯ ಕೊರಳಿಗೆ ಕಟ್ಟಿದೆ. ಅದು ಚಂಗನೆ ನೆಗೆದಾಗ ಹೊಮ್ಮುತಿದ್ದ ಗಂಟೆಯ ಕಿಣಿ ಕಿಣಿ ಶಬ್ದ ಕೇಳಿದಾಗ ಎಂತಹುದೋ ಸಾರ್ಥಕ ಭಾವ ನನ್ನ ಮನದಲ್ಲಿ.
ಜೊಳ್ಳೇ ಎಲ್ಲ – ಇದು ಸಿದ್ಲಿಂಗು ಸಿನಿಮಾ ಕಣ್ಲಾ
ಫಿಲ್ಮಿ ಪವನ್
ಬಹಳ ದಿನದಿಂದ ಸಿದ್ಲಿಂಗು ನೋಡ್ಬೇಕು ಅಂತ ಕಾದಿದ್ದೆ, ಮೆಜೆಸ್ಟಿಕ್ ತನಕ ಹೋಗಿ ಪಿಕ್ಚರ್ ನೋಡೋ ಅಷ್ಟು ಸಮಯ ಸಿಕ್ಲೆ ಇಲ್ಲ, ಅದಕ್ಕೆ ನಮ್ಮೂರಲ್ಲೇ ಹಾಕಲಿ ಅಂತ ಕಾಯ್ತಾ ಇದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗೋವಾಗ ಬ್ಹೊಜಣ್ಣನ ಟೀ ಅಂಗಡಿ ಹತ್ರ ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿ ಆಗೋಯ್ತು. ಸಂಜೆ ಏನೇ ಅಗಲಿ ಮಿಸ್ ಮಾಡಬಾರದು ಅಂತ ನಮ್ ಮ್ಯಾನೇಜರ್ ಗೆ ಹೇಳದೇನೆ ಅರ್ಧ ಘಂಟೆ ಮುಂಚೆನೇ escape ಆಗ್ಬಿಟ್ಟೆ. ಆಫಿಸ್ ಗೇಟ್ ಇಂದಾನೆ ದೋಸ್ತ್ ಯಾದವ್ ಗೆ ಫೋನ್ ಹಾಕಿ ಮಗಾ bioscope ಅಂದೆ. ಅವ್ನು ನಾನೆ ಫೋನ್ ಮಡ್ಬೇಕಂದಿದ್ದೆ ಬಾ ಥಿಯೇಟರ್ ಹತ್ರ ಸಿಕ್ತೀನಿ ಅಂದ, ಆಟೋ ಬಸ್ಸು ಎಲ್ಲ ಹಿಡ್ಕೊಂಡು ೫ ನಿಮಿಷ ಮುಂಚೆನೇ ಅರ್ಧ ಪ್ಯಾಕ್ ಕಿಂಗ್ ಮತ್ತೆ ೨೦೦ gm ಚಿಪ್ಸ್ ತೊಗೊಂಡು ಗೇಟ್ ಮುಂದೆ ಹಾಜರ್ ಆದೆ. ಆಗಲೇ ಯಾದವ್ ಟಿಕೆಟ್ ತೊಗೊಂಡಿದ್ದ ಒಳಗೋಗಿ ಮರದ ಬೆಂಚ್ ಮೇಲೆ ಕೂತಿದ್ದೆ ಕೂತಿದ್ದು bioscope ಶುರು ಆಗೋಯ್ತು.
petrOmax ಪುರಾಣ ಹೇಳ್ಕೊಂಡು ಶುರು ಆಗೋ ಕಥೆ, ಪುಟ್ಟ ಹುಡುಗನ ಕಾರ್ ಪ್ರೀತಿ ತೋರುಸ್ತ ಕಾರ್ ಗಾಗಿ classmate ನ dove ಹೊಡೆಯೋ ತನಕ ತಂದು ನಿಲ್ಸುತ್ತೆ, ನಿಜಕ್ಕೂ dove ಹೊಡ್ಯೋದು ಕಾರ್ ಗೋಸ್ಕರ ಆದ್ರು ನಿಜವಾಗೆ ಪ್ರೀತಿ ಮುಡಿರುತ್ತೆ. ಆದ್ರೆ ಆ ಪ್ರೀತಿ ಬಹಳ ದಿನ ಉಳ್ಯಲ್ಲ. ಅದೇ ನೋವಲ್ಲೆ ಬೆಳೆದ ಸಿದ್ಲಿಂಗು ಕಾರ್ ಗೋಸ್ಕರ ಅಂತಾನೆ ಟೀಚರ್ ಹಿಂದಿಂದೆ ತಿರ್ಗಾಡ್ತಾನೆ, ಗಂಡ ಇಲ್ಲದ ಟೀಚರ್ ಸಿದ್ಲಿಂಗು ನ ಆಕಸ್ಮಿಕವಾಗಿ ಉಪಯೋಗಿಸಿಕೊಂಡುಬಿಡುತ್ತಾಳೆ. ಅಷ್ಟರಲ್ಲೇ ಮತ್ತೊಂದು ಆಕಸ್ಮಿಕ, ಸಿದ್ಲಿಂಗು ತಂದೆ ತಾಯಿ ನ ಕಳ್ಕೊತಾನೆ. ಇನ್ನೂ ಓದಿ ದಬ್ಬಕೊದೇನು ಅಂತ ದುಡಿಮೆ ಮಾಡಕ್ಕೆ ಸಿಟಿ ಗೆ ಪ್ರಯಾಣ. ಅಲ್ಲಿಂದ ಕಾರ್ ಪ್ರೀತಿ ಬದುಕಲ್ಲಿ ಎನೆನಲ್ಲ ಮಾಡ್ಸುತ್ತೆ. ಯಾರ ಯಾರನ್ನೆಲ್ಲಾ ಪರಿಚಯ ಮಾಡ್ಸುತ್ತೆ, ಆಕಸ್ಮಿಕಗಳು ಹೇಗೆಲ್ಲ ನಡೆಯುತ್ತೆ ಅನ್ನೋದೇ ಸೀಡ್ಲೆಸ್ಸ್ ಕಡ್ಲೆಕಾಯಿ ಸಿದ್ಲಿಂಗು ಪುರಾಣ.
ಸಿದ್ಲಿಂಗು – ಚಿತ್ರ ವಿಮರ್ಶೆ
-ಹೇಮಾ ಪವಾರ್
ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು.
ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.
ತುರ್ತಾಗಿ ಬೇಕಾಗಿದ್ದಾರೆ- ಎಂ ಐ ಎಸ್ ಸ್ಪೆಷಲಿಸ್ಟ್
-ಅರವಿಂದ್
ಕನ್ನಡಿಗರಿಗೆ ಮಾತ್ರವೇ ಆದ್ಯತೆ
ಕೆಲಸದ ರೀತಿ : ಹೊರಗುತ್ತಿಗೆ
ಮೇಲ್ವಚಾರಕರು : ಹಣಕಾಸು ಮತ್ತು ಲೆಕ್ಕ ಅಭಿಯಂತರರು
ಕೆಲಸದ ಸ್ಥಳ : ರಿನೆಸೆಸ್ ಮೊಬ್ಯೆಲ್ ಇಂಡಿಯಾ ಪ್ರ್ಯೆ ಲಿ, ಬೆಂಗಳೂರು
ನಿಮ್ಮ ಗಣಕವನ್ನು ಆನ್ಲೈನ್ ಪರೀಕ್ಷಕಗಳ ಮೂಲಕ ಪರೀಕ್ಷಿಸಿ
-ಆದೇಶ್ ಕುಮಾರ್
ನಿಮ್ಮ ಗಣಕಯಂತ್ರದಲ್ಲಿ ವೈರಸ್ ಸೇರಿಕೊಂಡಿದೆಯೆಂದೊ ಅಥವಾ ಯಾವುದಾದರೂ ಕಡತ ವೈರಸ್ ಸೋಂಕಿತ ಎಂಬ ಅನುಮಾನ ನಿಮ್ಮಲಿದ್ದು, ಮತ್ತು ನಿಮ್ಮಲ್ಲಿರುವ ಯಾವುದೇ ವೈರಸ್ ನಿರೋಧಕ ತಂತ್ರಾಂಶ ಕೆಲಸ ಮಾಡುತ್ತಿಲ್ಲವೆಂದರೆ, ಕೆಳಗೆ ನೀಡಿರುವ ವೆಬ್ಸೈಟ್ ಗಳಿಗೆ ಹೋಗಿ ಒಮ್ಮೆ ಪರೀಕ್ಷಿಸಿ.
ಈ ಆನ್ಲೈನ್ ವೈರಸ್ ಸ್ಕ್ಯಾನರ್ ಗಳಲ್ಲಿ ನೀವು ಯಾವುದೇ ಶುಲ್ಕವಿಲ್ಲದೇ ಕಡತಗಳನ್ನು ಪರೀಕ್ಞಿಸಬಹುದು.
ಕೇವಲ ನಿಮ್ಮ ಕಡತವನ್ನು ಆ ವೈರಸ್ ಸ್ಕ್ಯಾನರ್ ಗಳಲ್ಲಿ ಸೇರಿಸಿ ಮತ್ತು ನಿಮ್ಮ ಕಡತದಲ್ಲಿ ವೈರಸ್ ಸೇರಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.
ಅಳಿದ ಬಳಿಕ ಚಿಂತಿಸಿ ಫಲವೇನು?
–ವಿಷ್ಣುಪ್ರಿಯ
ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ?
ಇದ್ದಾಗ ಗೊತ್ತಾಗದ ಮೌಲ್ಯ ಸತ್ತ ಮೇಲೆ ಗೊತ್ತಾಗುತ್ತದೆಯಂತೆ! ಇದು ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾತು. ಅದು ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ ಯಾವ ಜೀವಿಯೇ ಆದರೂ ಆದು ಇಲ್ಲದಿದ್ದಾಗಲೇ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಮಾತು ಡೈನೋಸಾರ್ ಗಳ ವಿಚಾರದಲ್ಲಿ ಸಮರ್ಪಕವಾಗಿ ಅನ್ವಯವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗುವಂಥ ಡೈನೋಸಾರ್ ಗಳು ಹೇಗಿದ್ದವು? ಅವುಗಳ ಶಾರೀರಿಕ ರಚನೆ ಹೇಗಿತ್ತು? ಅವುಗಳು ನಾವಂದುಕೊಂಡಿರುವಂತೆಯೇ ಕ್ರೂರ ಮೃಗಗಳಾಗಿದ್ದವೇ? ಡೈನೋಸಾರ್ ಗ ಳ ಬಗೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗಿ ದಶಕಗಳೇ ಕಳೆದವು. ಸಮರ್ಪಕವಾದ ಉತ್ತರಗಳಿಗೆ ಮಾತ್ರ ಇನ್ನೂ ಹುಡುಕಲಾಗುತ್ತಿದೆ. ಡೈನೋಸಾರ್ ಗಳ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸುತ್ತಿದ್ದಾರೆ.
ಕರ್ನಾಟಕ ಬಿ.ಜೆ.ಪಿ ನಾಯಕರೇ ಏನ್ರೀ ನಿಮ್ ಅವಸ್ಥೆ…?
ಅತೀ ಪ್ರಸಿದ್ದಿ ಪಡೆದ ಗಾದೆ ಮಾತೊಂದಿದೆ “ನಾಯಿ ಬಾಲ ಯಾವತ್ತಿದ್ರೂ ಡೊಂಕೆ ” ಈ ಮಾತು ಕರ್ನಾಟಕದ ಬಿ.ಜೆ.ಪಿ ನಾಯಕರಿಗೆ ಅತ್ಯಂತ ಹತ್ತಿರದ ಗಾದೆ ಮಾತು .. ಒಂದೇ ಒಂದು ವ್ಯತ್ಯಾಸ ಅಂದ್ರೆ ಇಲ್ಲಿ ನಾಯಿಯ ಬಾಲ ಮಾತ್ರ ಡೊಂಕು ಅಲ್ಲರೀ.. ನಾಯಿಯೇ ಡೊಂಕಾಗಿಬಿಟ್ಟಿದೆ. ಇವರ ಸ್ಟೋರಿನೇ ವಿಚಿತ್ರ ಮಾದ್ಯಮಗಳಿಗೆ ಏನ್ ನ್ಯೂಸ್ ಸಿಕ್ಕಿಲ್ಲ ಅಂದ್ರೆ, ಯಾಕ್ರಿ ಸುಮ್ನೆ ಕುತ್ಕೊತಿರಾ ನಿಮಗೆ ನ್ಯೂಸ್ ತಾನೇ …? ನಾವ್ ಕೊಡ್ತಿವ್ರಿ ಅಂತ ಬರೋ ವಿಶಾಲ ಮನಸ್ಸಿನ ನಾಚಿಕೆ ಇಲ್ಲದ ನಾಯಕರು.ಪಾಪ ನಮ್ ಜನ ಬಿ.ಜೆ.ಪಿ ಯವರನ್ನ ವಿರೋದ ಪಕ್ಷದಲ್ಲಿ ನೋಡಿ ನೋಡಿ ಬೇಸತ್ತು ಇವರು ಒಂದು 5 ವರ್ಷ ಆಡಳಿತ ಮಾಡ್ಲಿ ಬಿಡಿ… ಅಂಥ ಇವರನ್ನ ಆಡಳಿತಕ್ಕೆ ತಂದ್ರು, ಆದರೆ ಈ ನಾಯಕರು ಕೊಟ್ಟ ಆಡಳಿತ 100 ವರುಷ ಕಳೆದರೂ ಮರೆಯಲು ಸಾದ್ಯವಾಗದ ಆಡಳಿತ. (ದಯವಿಟ್ಟು ಕ್ಷಮಿಸಿ ಓದುಗರೇ “ಅವರು-ಇವರು” ಪದವನ್ನ ಇಲ್ಲಿ ಬಳಸಿದರೆ ಆ ಪದಕ್ಕೆ ಇರುವ ಗೌರವ ಸ್ವಲ್ಪ ಕಡಿಮೆ ಆಗಬಹುದು ಅದ್ದರಿಂದ ಈ ಪದವನ್ನ ಇಲ್ಲಿ ನಿಷೇದಿಸಲಾಗಿದೆ) ಇವರಲ್ಲಿ ಒಬ್ಬ ಬರೋಬ್ಬರಿ ರಾಜ್ಯದ ಸಂಪತ್ತನ್ನ ದೋಚುತ್ತಾನೆ. ಇನ್ನೊಬ್ಬ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಮಾಡುತ್ತಾನೆ, ಇನ್ನೊಬ್ಬ ನರ್ಸ್ ಜೊತೆ ಮೊಬೈಲ್ ನಲ್ಲಿ ಹರಿದಾಡುತ್ತಾನೆ.
ಇವರೆಲ್ಲಾ ನಮ್ ನಾಯಕ್ರು. ಕುಟುಂಬ ಕಲ್ಯಾಣ ಯೋಜನೆಯನ್ನ ಪಾಲಿಸುವವನು ರಾಜ್ಯದ ಸಂಪತ್ತನ್ನ ತನ್ನ ಪ್ರೀತಿಯ ಕುಟುಂಬದವರ ಹೆಸರಲ್ಲಿ ಮಾಡಿ ಕೊಟ್ಟಂತಹ ಪುಣ್ಯಾತ್ಮ, ಇದೆಲ್ಲವನ್ನು ದಾಟಿ ನಿನ್ನೆ ನಮ್ಮ ತ್ರಿಮೂರ್ತಿ ಮಂತ್ರಿಗಳು ಸದನದ ಕಲಾಪ ನಡಯುತ್ತಿದ್ದ ಸಂದರ್ಭದಲ್ಲೇ “ಬ್ಲೂ ಫಿಲಂ” ನೋಡಿ ಸಿಕ್ಕಿಬಿದ್ದ ನಾಮಧೇಯ ನಾಯಕ್ರು.. ಯಾಕ್ರಿ ಹಿಂಗ್ ಮಾಡ್ತಿದ್ದೀರ..? ಯಾವಾಗ ಸಾರ್ ನೀವೆಲ್ಲಾ ಸರಿ ಆಗ್ತೀರಾ ? ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪಾಯಿ ಕಟ್ಟಿ ಬೆಳೆಸಿದ ಬಿ.ಜೆ.ಪಿ ಪಕ್ಷವನ್ನ ಯಾವ ಮಟ್ಟಕ್ಕೆ ತಂದು ಬಿಟ್ರಿ ನೀವು.. ನಿಮ್ಮನ್ನ ಒಂದು ವಿಷಯದಲ್ಲಂತೂ ಅಭಿನಂಧಿಸಬೇಕ್ರಿ.,!! 50 ವರುಷದಲ್ಲಿ ಮಾಡಬೇಕಾದ ಸಾಧನೆಯನ್ನ ಕೇವಲ 3 ವರುಷದಲ್ಲೇ ಸಾಧಿಸಿದ್ದೀರ, ಅಭಿನಂದನೆಗಳು ಬಿ.ಜೆ.ಪಿ ನಾಯಕರೇ ಅಭಿನಂದನೆಗಳು..!! ಮತ್ತಷ್ಟು ಓದು 







