ವಿಷಯದ ವಿವರಗಳಿಗೆ ದಾಟಿರಿ

Archive for

4
ಮಾರ್ಚ್

ಧರ್ಮದ ಅರ್ಥ ಮತ್ತು ಅದರ ಮೇಲಿನ ಹಣದ ಸಂಬಂಧ

-ನವೀನ್ ನಾಯಕ್

ಧರ್ಮಧರ್ಮದ ವ್ಯಾಖ್ಯಾನವನ್ನು ದೀನ್ ದಯಾಳ್ ಉಪಾಧ್ಯಾಯರವರು ಹೀಗೆ ವಿವರಿಸುತ್ತಾರೆ.
” ಯತೋಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮ ” ಅಂದರೆ ಯಾವುದರಿಂದ ಐಹಿಕ ಮತ್ತು ಪಾರಲೌಕಿಕ ಉನ್ನತಿ ದೊರೆಯುವುದೋ ಅದು ಧರ್ಮ. ಮುಂದುವರೆಸಿ ಹೇಳುತ್ತಾರೆ ,
ಮಹರ್ಷಿ ಚಾಣಕ್ಯರವರ ಪ್ರಕಾರ ” ಸುಖಸ್ಯ ಮೂಲಂ ಧರ್ಮಃ, ಧರ್ಮಸ್ಯ ಮೂಲಂ ಅರ್ಥಃ “( ಸುಖವು ಧರ್ಮದ ಮೂಲಕವಾದರೆ ಧರ್ಮವು ಅರ್ಥಮೂಲ ) , ಇಲ್ಲಿ ಹಣವಿಲ್ಲದೇ ಧರ್ಮವೂ ನಿಲ್ಲುವುದಿಲ್ಲ ಎಂಬ ಸೂಚನೆ ಇದೆ.
ಅಂದರೆ ಭಾರತದಲ್ಲಿ ಭೌತಿಕ ಆಧ್ಯಾತ್ಮಿಕ ಜಗತ್ತಿನ ಕುರಿತಲ್ಲದೇ ಹಣ- ಸಂಪತ್ತುಗಳ  ಬಗೆಗೂ ವಿಚಾರ ಮಾಡಲಾಗಿದೆ. ಇದನ್ನು ಅರ್ಥೈಸಿಕೊಳ್ಳುವಾಗ ಧರ್ಮದ ವ್ಯಾಪಕ ಪರಿಭಾಷೆಯನ್ನು ತೆಗೆದುಕೊಳ್ಳಬೇಕು. ಅಂದರೆ  ಮತ , ಪಂಥ, ಅಥವಾ ರಿಲಿಜನ್ ಎಂದು ಭಾವಿಸುವ ಸಂಕುಚಿತ ಅಥವ ಆಧುನಿಕ ಭ್ರಮಾಯುಕ್ತ ಅರ್ಥವನಲ್ಲ.
ಸಮಾಜವನ್ನು ಧರಿಸಿರುವುದು ,  ಐಹಿಕ ಮತ್ತು ಪಾರಲೌಕಿಕ ಉನ್ನತಿಗೆ ಸಹಾಯಕವಾಗುವಂತಹದು, ಮಾನವನ ಕರ್ಮಗಳನ್ನು ನಿರ್ಧಾರ ಮಾಡಿ ಅವನು ಕರ್ತವ್ಯದ ಸೂಚನೆಯನ್ನು ಪಡೆಯಲು ಕಾರಣವಾಗುವಂತಹುದು, ವ್ಯಕ್ತಿಯು ತನ್ನ ಎಲ್ಲ ಪ್ರಕಾರದ ಉನ್ನತಿಗಳನ್ನು ಮಾಡಿಕೊಳ್ಳುವತ್ತ, ಸಮಷ್ಟಿಯ ಉದ್ಧಾರದಲ್ಲಿ ಸಹಾಯಕವಾಗಲು ಸಾಧ್ಯವಾಗುವಂತಹುದು. ಒಟ್ಟಾರೆಯಾಗಿ ಇಂಥಹ ನಿಯಮ ವ್ಯವಸ್ತೆ ಹಾಗೂ ಅದರಲ್ಲಿ ಅಡಗಿದ ಭಾವವೇ ಧರ್ಮ.