ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 8, 2012

33

ಕೇಸರಿಕರಣ ಅಂದರೆ ಕೇಸರಿ ಬಣ್ಣದ ಪುಸ್ತಕವೇ?

‍ನಿಲುಮೆ ಮೂಲಕ

– ಅಶ್ವಿನ್ ಅಮೀನ್

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ‘ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್’ ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ ‘ಕೇಸರೀಕರಣ’ ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ ‘ಕೇಸರಿ’ ಎಂಬ ಕಲರ್ ಕೋಡ್ ಕೊಟ್ಟವರು ಯಾರು?… ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ ‘ಭಾರತೀಯ’ ದೊರೆ ‘ಪೌರವ’ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಔರಂಗಜೇಬನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ ‘ಹಸಿರೀಕರಣ’ವಾಗದೆ?!!!! ಅದಕ್ಕೇಕೆ ನೀವು ‘ಹಸಿರು’ ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೇಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ ‘ಶತ್ರು’ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು ‘ಶತ್ರು’ ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ ‘ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ’ ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ ‘ಅನಗತ್ಯ’ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ ‘ಸುಳ್ಳಿನ ಇತಿಹಾಸ’ವೇ ಇಷ್ಟವೆನಿಸಿರಬೇಕು.

ಈ ಹಿಂದೆ ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ ‘ಕುಟುಂಬ, ಸಮುದಾಯ ಮತ್ತು ಸಮಾಜ’ ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ ‘ಕುಟುಂಬ, ಸಮುದಾಯ ಮತ್ತು ಸಮಾಜ’ ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?
ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. ‘ಮತಾಂತರವೆಂದರೆ ರಾಷ್ಟ್ರಾಂತರ’ ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು’ವೇದಕಾಲದ ಭಾರತ’ ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ ‘ವೇದಕಾಲದ ಭಾರತ’ ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ ‘ಅಖಂಡ ಭಾರತ’ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..!

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ ‘ಅಮೇರಿಕ’ ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ ‘ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?’ ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು.

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ ‘ನೈಜ್ಯ’ ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು ‘ಕೇಸರಿ’ ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು ‘ಕೇಸರಿ’ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು ‘ಕೇಸರಿ’ ಬಣ್ಣವನ್ನೇ ಬಳಸದಿರಬಹುದು..!

ಚಿತ್ರ ಕೃಪೆ : http://library.thinkquest.org/

33 ಟಿಪ್ಪಣಿಗಳು Post a comment
  1. Balachandra's avatar
    Balachandra
    ಫೆಬ್ರ 8 2012

    Very Good article. Thanks..

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ಧನ್ಯವಾದಗಳು…:)

      ಉತ್ತರ
  2. Pavan's avatar
    Pavan
    ಫೆಬ್ರ 8 2012

    Very good Article… I want to give this article to someone in the face book.. searching but I am not getting that guy…

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ಧನ್ಯವಾದಗಳು Pavan…:)

      ಉತ್ತರ
  3. Kashyap's avatar
    Kashyap
    ಫೆಬ್ರ 8 2012

    ತುಂಬಾ ಒಳ್ಳೆಯ ಲೇಖನ…. ಆ ಮೂರ್ಖನ ಬರಹಕ್ಕೆ ತಕ್ಕ ಉತ್ತರ ನೀಡಿದ್ದೀರೀ ಅಶ್ವಿನ್…..

    ಈ ದ್ವಾರಕಾ-ನಾತ ಒಬ್ಬ ಕೆಲಸವಿಲ್ಲದ ತಿಪ್ಪೇಗುಂಡಿಯ ಅತ್ತರ್ (Attar)…. ಹಿಂದುಳಿದವರನ್ನು ತನ್ನ ಮೆಟ್ಟಿಲಾಗಿ ಬಳಿಸಿ ಪ್ರಚಾರಕ್ಕಾಗಿ ತನ್ನ ಕೆಲವು ತಿಕ್ಕಲು ಸಂಸ್ಕೃತಿಯ ಬೆಂಬಲಿಗರೊಂದಿಗೆ ಯಾವಾಗಲೂ ಕಿರುಚಾಡೊ ಕಾಗೆ…. ಅದರಲ್ಲೂ Sonia ಹಾಗು ಇನ್ನೂ ಹಲವು ಹಿಂದು ವಿರೋಧಿ ದೇಶ ದ್ರೊಹಿಗಳನ್ನು ಹೊಗಳಿ Bucket ಹಿಡಿಯುವ ಕೆಲಸಾ ಶುರುಮಾಡಿದ್ದಾನೇ…..

    ಇನ್ನು ಅವನು ಬರೆದ ಲೇಖನಕ್ಕೆ ಬಗ್ಗೆ ನಮ್ಮ ಮನಸ್ಸಿನ ಮಾತನ್ನು ನೀವೇ ಹೇಳಿದ್ದೀರೀ….

    ಕೇಸರಿ ಪಡೆಯ ಹಿಂದೆ ಬಿದ್ದಿರುವ ಈ ದ್ವಾರಕಾ-ನಾತ ತಾನು ಪ್ರಚಾರ ಗಿಟ್ಟಿಸಿಕೊಳ್ಳಲು ಯಾವ ಕೀಳು ಮಟ್ಟಕ್ಕೆ ಬೇಕಾದ್ರೂ ಇಳಿಯಬಲ್ಲ…. ಉದಾಹರಣೆಗೆ :- “ನಾಳೆಯಿಂದ ರಾಜ್ಯವ್ಯಾಪಿ ಕೇಸರಿಬಾತ್ ಗೆ ಕೇಸರಿ ಬಣ್ಣ ಹಾಕುವುದನ್ನು ನಿಶೇದಿಸಬೇಕು ಹಾಗು ಅದಕ್ಕೆ ಕೇಸರಿ-ಬಾತ್ ಎಂದು ಕರೆಯಬಾರದೂ…. ಇದು ದಲಿತ ವಿರೋಧಿ…. ಇದಕ್ಕೆಲ್ಲಾ RSS ಕಾರಣ…. ಅಂತ ದರಣಿ ಮಾಡಿ ಸಾಮಾನ್ಯ ಜನರಿಗೆ ತೊಂದರೆ ಕೊಟ್ಟು ವಿಕೃತ ಖುಷಿ ಪಡುತ್ತಾನೆ”…. ಇನ್ನು ಇವನ ಹಿಂಬಾಲಕರು ಹಾಗು ಬೆ**ಸಿ ಬಳಗದವರು ದ್ವಾರಕಾ-ನಾತ ಹೇಳುವುದು ಸರಿ ಇದು ಕನ್ನಡ ವಿರೋಧಿ ಕೆಲಸ ಎನ್ನುತ್ತಾ ಅವನ ಬೆಂಬಲಕ್ಕೆ ನಿಲ್ಲುತ್ತಾರೇ….

    “ದೇಶದ್ರೋಹಿ ದ್ವಾರಕಾ-ನಾತ ಮತ್ತು ಬೆಂಬಲಿಗರಿಗೆ ವಿಶೇಶ ಸೂಚನೆ :- ಕೇಸರಿ ಬಣ್ಣ ಹಿಂದು ಧರ್ಮದ ಸಂಕೇತವಾದರೂ…. ನಿಮ್ಮ ಹೆಂಡತಿ ಮತ್ತು ಮಕ್ಕಳು ಕೇಸರಿ ಬಣ್ಣದ ಬಟ್ಟೆ ಹಾಕಿದಾಗ ಹರಿದು ಅವರ ಮಾನ ತೆಗೆಯಬಾರದೆಂದು ನಮ್ಮೆಲ್ಲರ ವಿನಂತಿ”….

    ಅಶ್ವಿನ್ ಬರೆದ ಈ ಲೇಖನ ನಮ್ಮಮುಂದಿರಿಸಿದ ನಿಲುಮೆ-ಗೆ ಧನ್ಯವಾದಗಳು….

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ಧನ್ಯವಾದಗಳು ಕಶ್ಯಪ್..:) ನಿಮ್ಮ ವ್ಯಂಗ್ಯಭರಿತ ಮಾತುಗಳು ಒಳ್ಳೆ ಚಾಟಿಯೇಟಿನಂತಿವೆ..:)

      ಉತ್ತರ
  4. Rajesh Vitla's avatar
    Rajesh Vitla
    ಫೆಬ್ರ 8 2012

    Tumba olleya baraha ashwin.. Nimagiruva deshada bageging kaalaji aa dwarakanathanige bega barali endu prarthisuttene. Haageye Kashyap avara vyanga comment hidisitu..

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ಧನ್ಯವಾದಗಳು Rajesh

      ಉತ್ತರ
  5. LOHITH's avatar
    LOHITH
    ಫೆಬ್ರ 8 2012

    ಧರ್ಮಾಂಧರ ಓಲೈಕೆಗಾಗಿ ಹಾಗೂ ಅವರ ಅಧಿಕಾರಾವಧಿಯಲ್ಲಿ ತುಂಡು ಭಿಕ್ಷೆಯನ್ನು ಪಡೆಯುವ ಸಲುವಾಗಿ ಈ ರೀತಿಯ ಹಿಂದೂ ಮತ್ತು ಭಾರತೀಯ ಸಂಸ್ಕೃತಿ ವಿರೋಧಿ ಲೇಖನವನ್ನು ಬರೆಯುವ ದ್ವಾರಕನಾಥ ನಿಜವಾಗಿಯೂ ಒಬ್ಬ ದೇಶಧ್ರೋಹಿಯೇ ಸರಿ.

    ಉತ್ತರ
  6. vk's avatar
    vk
    ಫೆಬ್ರ 8 2012

    ಸ್ವಾತಂತ್ರ್ಯ ಸಿಕ್ಕಿದ ತಕ್ಷಣ ಅಖಂಡ ಭಾರತ ಅಲ್ಪಸಂಖ್ಯಾತರೆನಿಸಿಕೊಂಡವರು ಭಾರತೀಯರು ಎಂಬ ಭಾವನೆಗಳಿಗೆ ಬೆಲೆ ಕೊಡದೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯನ್ನಿಟ್ಟರಲ್ಲದೆ ಅದನ್ನು ಪಡೆದರು ಕೂಡಾ… ಇದನ್ನು ಸಮರ್ಥಿಸಿಕೊಳ್ಳುವ ಮಂದಿ ಹೇಗೆ ಭಾರತೀಯರಾಗುತ್ತಾರೆ??? ಇದರ ಬಗ್ಗೆ ಬರೆದರೆ ಅದನ್ನು ಕೇಸರೀಕರಣ ಅಂತ ಕೂಗಾಡುವ ಭಾರತೀಯರು (?) ಇರುವ ತನಕ ಭಾರತ ಬದಲಾಗದು…..

    ಉತ್ತರ
  7. Mahesh's avatar
    ಫೆಬ್ರ 8 2012

    ಅಶ್ವಿನ್ ರವರೇ,

    ತುಂಬಾ ಚೆನ್ನಾಗಿದೆ. ಧರ್ಮಾಂಧತೆ ಎಂದಿಗೂ ಒಳ್ಳೆಯದಲ್ಲ. ಈ ಹೊಸ ಕಾಲದ ಸೆಕ್ಯುಲರ್ ವಾದವೆಂಬ ಹೊಸ ಧರ್ಮದ ಧರ್ಮಾಂಧತೆಗೆ ಸಿಲುಕಿದವರ ಮನಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ.

    ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ಸ್ವರಾಜ್ಯದ ಕಲ್ಲನೆಯನ್ನು ಸುಂದರವಾಗಿ ವಿವರಿಸುವ, ಸುಪ್ರಸಿದ್ಧವಾದ ‘ಹಿಂದ್ ಸ್ವರಾಜ್’ http://www.mkgandhi.org/swarajya/coverpage.htm ನನಗೆ ತುಂಬಾ ಪ್ರಸ್ತುತವೆನಿಸುತ್ತದೆ. ಸೆಕ್ಯುಲರ್ ಧರ್ಮಾಂಧರು ಓದಲೇಬೇಕಾದ ಪುಸ್ತಕವಿದು.

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ಮೆಚ್ಚುಗೆಗಾಗಿ ಹಾಗು ಗಾಂಧಿಯವರ ಲೇಖನದ ಲಿಂಕ್ ಗಾಗಿ ಧನ್ಯವಾದಗಳು ಮಹೇಶ್..:) ನಿಮ್ಮ ಪ್ರೋತ್ಸಾಹ ಸದಾ ಇರಲಿ..:)

      ಉತ್ತರ
  8. Santhosh Kumar PK,'s avatar
    Santhosh Kumar PK,
    ಫೆಬ್ರ 8 2012

    ಅಶ್ವಿನ್ ರವರೆ

    ನಿಮ್ಮ ಲೇಖನ ಚೆನ್ನಾಗಿದೆ. ಸೆಕ್ಯುಲರಿಸಂನ್ನು ಬಂಡವಾಳವಾಗಿಸಿಕೊಂಡು ಬಡಾಯಿಸುವವರಿಗೆ ತಕ್ಕುದಾದದ ಉತ್ತರ. ನಿಜವಾಗಿ ನೋಡಿದರೆ ಸೆಕ್ಯುಲರಿಸಂ ಹೆಸರಿನಲ್ಲಿ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿರುವ ರಾಜಕೀಯ ಪಕ್ಷ ಮತ್ತು ಅದರ ಬುದ್ದಿಜೀವಿಗಳು ನಮ್ಮ ಸಂಸ್ಕೃತಿಗೆ ಕಂಟಕಪ್ರಾಯರಾಗಿದ್ದಾರೆ.

    ಉತ್ತರ
    • Ashwin S.Amin's avatar
      Ashwin S.Amin
      ಫೆಬ್ರ 8 2012

      ವಂದನೆಗಳು ಸಂತೋಷ್..:)

      ಉತ್ತರ
  9. Chandrashekhar's avatar
    ಫೆಬ್ರ 8 2012

    ಇವೆಲ್ಲಾ ಇಸಂಗಳು ಇಲ್ಲದ ಹೊತ್ತಲ್ಲಿ ಬಣ್ಣಗಳನ್ನು ಇಷ್ಟಪಡುತ್ತಿದ್ದೆವು. ಧಮ೵ಕ್ಕೊಂದು, ಜಾತಿಗೊಂದು, ಪಕ್ಷಕ್ಕೊಂದು ಎಂಬಂತೆ ಬಣ್ಣಗಳಲ್ಲೂ ಭೇದ ಮಾಡಿ ನಮ್ಮೊಳಗಿನ ಸೌಂದಯ೵ಪ್ರಜ್ಞೆಯನ್ನೇ ಕಲುಷಿತಗೊಳಿಸಿದ ಸೋ ಕಾಲ್ಡ್ ಬುದ್ದಿಜೀವಿಗಳಿಗೆಲ್ಲಾ ಧಿಕ್ಕಾರ. ಬಣ್ಣಗಳನ್ನು ಕೇವಲ ಬಣ್ಣವೆಂದೇ ನೋಡಿ ಸವಿಯುವುದಕ್ಕಾಗದೇ?
    ಚಂದ್ರಶೇಖರ್ ಮಂಡೆಕೋಲು

    ಉತ್ತರ
  10. karth's avatar
    karth
    ಫೆಬ್ರ 8 2012

    ಒಬ್ಬ ಹಿಂದೂ ಹಾಗು ದೇಶ ಪ್ರೇಮಿ, ನೇರವಾಗಿ ಉಗಿಯಬೇಕಾದದ್ದನ್ನು , ನೀವು ನಯವಾಗಿಯೇ ಚಪ್ಪಲಿಗೆ ಬಟ್ಟೆಯನ್ನು ಸುತ್ತಿಕೊಂಡು ಹೊಡೆದಿದ್ದೀರಿ…ಭೇಷ್ !!! ಹೋಗಲಿ, ನಮ್ಮ ಭಾರತಕ್ಕೆ “ಕೇಸರಿ ” ಬಣ್ಣದ ಮಹತ್ವ ಬಂದದ್ದಾದರು ಹೇಗೆ ??? “ಬಿಳಿ” ಬಣ್ಣದ ದರ್ಮವಾದ “christian ” ಗಳು, ಹಾಗು ” ಹಸಿರು” ಬಣ್ಣದ ಧರ್ಮ ದವರಾದ “ಮುಸಲ್ಮಾನ” ರನ್ನು ನಮ್ಮ ದೇಶದ ಒಳಗೆ ಬಿಟ್ಟುಕೊಂಡು, ಎಲ್ಲರನ್ನು ಒಂದೇ ಏನು ಕಂಡು, ಇವಿಷ್ಟೂ ಮೂರು ಬಣ್ಣ ಗಳನ್ನೂ ಒಂದು ಗೂಡಿಸಿ ” ತ್ರಿ ವರ್ಣ ” ದ್ವಜ ವನ್ನಾಗಿಸಿ, ಒಂದೇ ಮಾತರಂ ಎಂದು ಹೇಳಿದ ಮುಗ್ದ ಹಿಂದುಸ್ತಾನವನ್ನು , ನುಚ್ಚು ನೂರು ಮಾಡುವ ಮುಸಲ್ಮಾನರು , ಹಾಗು ಮುಗ್ದ ಜನರನ್ನು ಪರಿವರ್ತಿಸಿಕೊಲ್ಲುತ್ತಿರುವ “christian ” missionary ಗಳನ್ನೂ ಇಷ್ಟು ದಶಕ ಗಳು ಸಹಿಸಿಕೊಂದದ್ದಕ್ಕೆ ಇಂದು ” ಕೇಸರಿ ” ಬಣ್ಣದ ಕೂಗು ಬರುತ್ತಿದೆ….

    ಉತ್ತರ
  11. ರಾಕೇಶ್ ಶೆಟ್ಟಿ's avatar
    ಫೆಬ್ರ 8 2012

    ಈಗ ಆಗುತ್ತಿರುವುದು ಕೇಸರಿಕರಣವಾದರೇ, ಇಷ್ಟು ದಿನ ನಾವು ಕಲಿತ ಪಠ್ಯ ಯಾವ ಬಣ್ಣದಲ್ಲಿತ್ತು…!? ಸುಭಾಷ್ ಬಗ್ಗೆ ಶುರುವಾಗುತ್ತಲೇ ಮುಗಿಯುತಿದ್ದ ಇತಿಹಾಸದ ಪಾಠ ಓದಿ ಬೆಳೆದವರು ನಾವು… ಸುಭಾಷರಿಲ್ಲದ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ನೋಡಿದರೆ ತಿಳಿಯುತ್ತದೆ… ನಮ್ಮ ಮಕ್ಕಳ ಕರ್ಮ… ಒಂದೆಡೆ ಕಾಂಗ್ರೆಸ್ಸ್ ಇತಿಹಾಸ ಇನ್ನೊಂದೆಡೆ ಆರ್.ಎಸ್.ಎಸ್ ಇತಿಹಾಸ…. ನಿಜವಾದ ಇತಿಹಾಸ ಎಲ್ಲಿ ಮುದುಡಿ ಮಲಗಿದೆಯೋ ಯಾವನಿಗ್ಗೊತ್ತು…!?

    ಉತ್ತರ
    • ಅವಿ's avatar
      ಅವಿ
      ಫೆಬ್ರ 9 2012

      ಪರ್ವಾಗಿಲ್ಲ ಶೆಟ್ರೆ,, ಕೊನೆ ಪಕ್ಷ ಕಾಂಗ್ರೆಸ್ ಮತ್ತು ಆರ್.ಎಸ್.ಎಸ್ ಎರಡೂ ಮಾಡ್ತಿರುವುದು ಶಿಕ್ಷಣವನ್ನು ಗಬ್ಬೆಬ್ಬಿಸುವ ಕೆಲಸ ಅಂತ ಒಂದೇ ಉಸಿರಲ್ಲಿ ಹೇಳಿದ್ರಲ್ಲ. ನಾನು ನಿಮ್ಮ ಪಕ್ಷಾತೀತ ನಿಲುವು ಪ್ರಶ್ನಿಸಿದ್ದಕ್ಕೆ ಆರ್.ಎಸ್.ಎಸ್ ಅನ್ನು ಇಲ್ಲಿ ಸೇರಿಸಿಲ್ಲ ತಾನೇ? 🙂 ಶಾಲೆಯಲ್ಲಿ ಮಕ್ಕಳಿಗೆ ಕಿಚ್ಚನ್ರ ಧರ್ಮದಲ್ಲಿ ಯೇಸು ಇದ್ದ,, ಅವರು ಹಿಂಗದ್ರು, ಅಂಗದ್ರು ಅನ್ನೋದು,, ಇಲ್ಲಾ ಇಸ್ಲಾಂನಾಗೇ ಇದೈತೆ,, ಹಿಂದು ಧರ್ಮದಲ್ಲಿ ಇದೈತೆ ಅಂತೆಲ್ಲ ಅನ್ನೋದು ಮಕ್ಕಳಿಗೆ ಯಾಕ್ ಬೆಕೈತೆ ಹೇಳಿ ಸ್ವಾಮಿ? ಶಾಲೆಯಿಂದ ಎಲ್ಲ ಧರ್ಮ ಬದಿಗಿಟ್ಟು ಸಂವಿಧಾನವೇ ನಮ್ಮ ಭಾರತ ದೇಶದ ಧರ್ಮ ಅಂತ ಹೇಳ್ಕೊಟ್ರೆ ಒಳ್ಳೆದಲ್ವಾ ಸ್ವಾಮಿ?

      ಉತ್ತರ
      • ರಾಕೇಶ್ ಶೆಟ್ಟಿ's avatar
        ಫೆಬ್ರ 9 2012

        ನಿಮ್ ನವೆ ಏನು ಅನ್ನೋದೆ ಅರ್ಥವಾಗುತ್ತಿಲ್ಲ ನನಗೆ… ಮಡೆ ಸ್ನಾನದ ವಿಷಯದಲ್ಲಿ ನೇರಾ ನೇರ ಬರೆದಿದ್ದು ನಿಮ್ಮ ಮರ್ಮಕ್ಕೆ ತಾಗಿರಬೇಕು… ಸ್ವಲ್ಪ ಸಮಾಧಾನ ಮಾಡಿಕೊಳ್ಳಿ… 🙂

        ಉತ್ತರ
      • ರವಿ's avatar
        ರವಿ
        ಫೆಬ್ರ 10 2012

        ಧರ್ಮ ಮಾತ್ರ ಹೇಗೆ ತೆಗೆಯುವುದು ಅವಿಯವರೇ?.. ದೇಶದ ಇತಿಹಾಸ ಓದುವಾಗ ಧರ್ಮ ಬಂದೇ ಬರುತ್ತದೆ. ಚಿ ಮೂ, ಭೈರಪ್ಪರಿಗೆ ಒಂದು ಸತ್ಯ, ಕಲ್ಬುರ್ಗಿಯವರಿಗೊಂದು ಸತ್ಯ ಸಿಕ್ಕೇ ಸಿಗುತ್ತದೆ. ಸತ್ಯವೋ ಸುಳ್ಳೋ ಏನು ಓದಿದರೂ ದ್ವೇಷವೇ ಹರಡುವುದು. ಸುಳ್ಳೇ ಪಳ್ಳೇ ಇತಿಹಾಸ ಓದುವುದಕ್ಕಿಂತ, ಇತಿಹಾಸ ವಿಷಯವನ್ನೇ ತೆಗೆದು ಬಿಡೋಣ. ಮಕ್ಕಳಿಗೂ ಇಸವಿ ನೆನಪಿಡುವ ಕಷ್ಟ ಇರುವುದಿಲ್ಲ. 🙂

        ಉತ್ತರ
        • ಅವಿ's avatar
          ಅವಿ
          ಫೆಬ್ರ 10 2012

          ಬೋ ಸಂದಾಕೇಳಿದ್ರಿ ಸೋಮಿ,, ಅಂಗ್ ಮಾಡೋದೆ ವಾಸಿ ಈ ಕೇಸರಿ, ಹಸಿರು ಜನರ ನಡ್ವಿನ ಕಿತ್ತಾಟ್ವ ನೋಡಾಕಿನ್ನ.. ಮಕ್ಳು ಸಂದಾಕಿರ್ತವೆ..

          ಉತ್ತರ
          • ಸುರೇಶಮೂರ್ತಿ's avatar
            ಸುರೇಶಮೂರ್ತಿ
            ಫೆಬ್ರ 10 2012

            ಆದ್ರೆ ಸೋಮಿ, ಹಾಗಾಗ್ಬುಟ್ರೆ ನಿಮಗೆ ಮಾಡಲಿಕ್ಕೆ ಕೆಲಸ ಇರಲ್ಲೆನೊ ಅಂತ, ಮನೇಲಿ ಹೆಂಡ್ರು-ಮಕ್ಳು ತಾವಾ ನಿಮ್ಮ ಬುದ್ಧಿ ತೋರ್ಬೆಕಾಗತ್ತೆ, ಹೊಡೆತ ತಿನ್ಬೇಕಾಗುತ್ತೆ. ಯಾವ್ದಕ್ಕೂ ಇನ್ನೊಂದ ಸರ್ತಿ ಯಿಚಾರಾ ಮಾಡಿ ಸೇಟಮೆಂಟು ಕೊಡಿ.

            ಉತ್ತರ
            • ಅವಿ's avatar
              ಅವಿ
              ಫೆಬ್ರ 10 2012

              ಅನುಭವದ ಮಾತು ತಿಳಿಸಿಕೊಟ್ಟಿದ್ದಕ್ಕೆ ಬೋ ತ್ಯಾಂಕ್ಸು ಸುರೇಶಣ್ಣ..

              ಉತ್ತರ
  12. Balachandra's avatar
    Balachandra
    ಫೆಬ್ರ 9 2012

    ಈ ಬುದ್ಧಿಜೀವಿಗಳು ಎಷ್ಟು ಭಯಂಕರ ಅಂದ್ರೆ ಮುಂದೊಂದು ದಿನ ಭಾರತವನ್ನು ‘ಭಾರತ’ ಎಂದು ಕರೆಯುವದು ಕೇಸರೀಕರಣ ಎನ್ನಬಹುದು. ಅದೇನೇ ಇರಲಿ, ಇತ್ತೀಚಿಗೆ ಪ್ರಕಾಶ್ ಕಾರಟ್(ಸಿಪಿಎಂ ಮುಖಂಡ) exhibition ಸಂದರ್ಭದಲ್ಲಿ Jesus ಮೂರ್ತಿಯನ್ನು ಇರಿಸಿಕೊಂಡಿದ್ದು ಕ್ರಾಂತಿಕಾರಿ ನೀತಿ ಎಂದು ಹೇಳಿಕೊಂಡಿದ್ದ. ಈ ಪಾಟಿ ಹೂವು ಮುಡಿಸ್ತಾರಾ ಪೊಳ್ಳು ಜಾತ್ಯಾತೀತವಾದಿಗಳು?
    ಇನ್ನು ಕೆಲವು ಜಾತ್ಯಾತೀತವಾದಿಗಳದ್ದು ಇನ್ನೊಂದು ಟ್ರೆಂಡ್ ಏನೆಂದರೆ ನಮ್ಮ ಗೆಳೆಯರು ಈಗಾಗಲೇ ಹೇಳಿದಂತೆ, ದಲಿತರನ್ನು ಸೋಪಾನವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವದು. ಬಸವಣ್ಣ, ವಿವೇಕಾನಂದ, ದಯಾನಂದ ಸರಸ್ವತಿಯರಂತಹ ನಿಜವಾದ ಜಾತ್ಯಾತೀತರು ದಲಿತರ ಸಲುವಾಗಿ ಶ್ರಮಿಸಿದರು. ಆದರೆ ಇವುರುಗಳು ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಅಸಹ್ಯವಾಗಿ ಮುಖವಾದ ಧರಿಸುತ್ತಾರಲ್ಲ. ಛೆ.

    ಉತ್ತರ
  13. adarsh's avatar
    adarsh
    ಫೆಬ್ರ 15 2012

    ದ್ವಾರಕನಾಥ್ರವರೂ, ಸ್ವತಂತ್ರವಾಗಿ ಜಾತ್ಯಾತೀತ ಚಿಂತನೆಯಿಂದ ಬರೆದರೆ, ಮಿಸ್ಟರ್ ಅಶ್ವಿನ್ ಜಾತ್ಯಾತೀತರನ್ನು ಒಡೆದು ಕೋಮುವಾದಿಗಳ ಥರ ಬರೆದಿದ್ದಾರೆ ಅಷ್ಟೇ. ಕೇಸರೀಕರಣದ ಅರ್ಥ ಅಂದರೆ ಬಿಳಿಯಾಗಿರುವ, ಸ್ವಚ್ಛ ಭಾರತ ರಾಷ್ಟ್ರವನ್ನ ಹಿಂದಿನ ತಲೆಮಾರಿನಲ್ಲಿ ಲುಚ್ಚರೂ, ಷಂಡ ದೊರೆಗಳ ಪುಕ್ಕಲೂ ತನದಿಂದ ಘೋರಿ ಘಜನಿ ಮೊಹಮ್ಮದರನ್ನ ಎದುರಿಸಲೂ ಧೈರ್ಯ ಸಾಕಾಗದೆ ತಮ್ಮ ತಲೆಯನ್ನ ಅವರ ಕಾಲಿನಡಿಯಲ್ಲಿ ಇಟ್ಟು ಹೋರಾಡದೆ ತಮ್ಮ ಐಶ್ವರ್ಯಗಳನ್ನು ಜೀವಕ್ಕಾಗಿ ಕಪ್ಪ ಕಾಣಿಕೆಗಳಂತೆ ಕೊಟ್ಟು ತಮ್ಮ ಜೀವ ಉಳಿಸಿಕೊಂಡ ರಾಜರ ಕಥೆಗಳನ್ನು, ಈಗಿನ ತಲೆಮಾರಿನ ಮಕ್ಕಳಿಗೆ ವಿಷಪೂರಿತವಾಗಿ ವಿವರಿಸಿ, ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿ ಇಡಿ ದೇಶವನ್ನು ರಕ್ತ ಸಿಕ್ತ ಮಾಡುವ ಪ್ರಯತ್ನವೇ ಪುಸ್ತಕದ ಕೇಸರೀಕರಣ ಅನ್ನೋದು. ಇನ್ನು ವಿವರಣೆ ಬೇಕಿದ್ದರೆ ಕೇಳಿ ಇನ್ನು ವಿವರಿಸಬಲ್ಲೆ.

    ಉತ್ತರ
    • ಬಸವಯ್ಯ's avatar
      ಬಸವಯ್ಯ
      ಫೆಬ್ರ 15 2012

      ತಾವು ಹೀಗೆ ನಿಗೂಢವಾಗಿ ಮಾತನಾಡಿ, ಏನನ್ನೂ ಹೇಳದೇ ಕೊನೆಯಲ್ಲಿ ‘ಇನ್ನು ವಿವರಣೆ ಬೇಕಿದ್ದರೆ ಕೇಳಿ ಇನ್ನು ವಿವರಿಸಬಲ್ಲೆ.’ ಎಂದದ್ದು ಈಗಾಗ್ಲೆ ಸಾಕಷ್ಟು ಹೇಳಿಬಿಟ್ಟಿದ್ದಿನಿ ಅನ್ನೋರ ಹಾಗಿತ್ತು!. ತಾವು ಸ್ವಲ್ಪ ವಿವರಿಸಿ ಹೇಳಿ, ಜಾತ್ತತೀತ ಮನಸ್ಸಿನ ಇತಿಹಾಸವನ್ನು ತಿಳಿಸಿಕೊಟ್ಟಿದ್ದರೆ ‘ಕೋಮುವಾದಿ’ ಇತಿಹಾಸ ಓದೋ ಸಾಕಷ್ಟು ಜನ ತಿದ್ಕೊತಿದ್ದರು. ನಾಡಿಗೆ ಉಪಕಾರವಾಗ್ತಿತ್ತು.

      ಉತ್ತರ
    • Manjuanth Reddy's avatar
      ಫೆಬ್ರ 17 2012

      ಹೇಳಿದ್ದು ನಾಲ್ಕು ಸಾಲು ಅದರಲ್ಲೇ ಗೊತ್ತಾಗುತ್ತೆ ಚಿಂತನಾ ಲಹರಿ

      ಉತ್ತರ
  14. subhash's avatar
    subhash
    ಫೆಬ್ರ 15 2012

    idannu hinduism annuvudakkinta ratstreeyate anta karedare olle artha iratteb ansatte.
    Innu mundadaru naavu idannu tilidukondalli sarihogabahuden0?
    Yavude hinduvanna keli ni yarendu? ava modalu tilia sodu na BHARATEEYA aendu. Innarannadru keli gottagutte ava aen tilistane anta?

    ಉತ್ತರ
  15. umesh desai's avatar
    ಫೆಬ್ರ 16 2012

    sir, this article was shared in FB. i put a comment there, and against which a mr. KANTHARAJU RAJU
    also commented. the exchange went on he was like all ” TRUE PSEUDO SECULARS” taking a convinient stand, criticising SAVARKAR as he was a Brahmin, and Shivaji because he was king and so on… . everywhere these seculars are performing why pay attention to them.

    ಉತ್ತರ
  16. Deepak's avatar
    Deepak
    ಫೆಬ್ರ 17 2012

    ದೇಶ ಪ್ರೇಮ ಇರುವ್ವರು ಯಾರು ಇದ್ದನು ಕೇಸರಿಕರಣ ಅ೦ತ ಅನ್ನುವುದೀಲ್ಲ ಯಾಕೆ ಅ೦ದರೆ ಕೇಸರಿಕರಣ ಅನ್ನುವರು ದೇಶದ್ರೂಹಿಗಳು, ಬರಿ ಗಾ೦ದಿ ನೆಹರು ಬಗ್ಗೆ ಕೇಳಿ ಕೇಳಿ ಕಿವಿ ತೂತು ಬಿದ್ದಿದೆ, ಪಾಕಿಸ್ತಾನಕ್ಕೆ ಗಾ೦ದಿ ತೇಗೆದುಕೂ೦ಡ ಕೋಟಿಗಟ್ಟಲೇಹಣ ಅದು ನೆಹರು ಮನೆಗೆ ಹೋದ್ದದು , ಪಾಕಿಸ್ತಾನಕ್ಕೆ ಅಲ್ಲ , ಅದ್ದಕೆ ನೆಹರು ವ೦ಶದವರು ಗಾ೦ದಿ ಮನೆತನದ ಹೇಸರು ಇಟ್ಟುಕೂ೦ಡಿರುವುದು ಕಳ್ಳ ಒಬ್ಬ ಮಳ್ಳ ಒಬ್ಬ

    ಉತ್ತರ
  17. Shripad hegde's avatar
    Shripad hegde
    ಫೆಬ್ರ 17 2012

    Very good article and they should do self realisation on this issue. By hook or cook they want to rule the country for another 100 years to doom the nation by keeping muslim happy for their vote. Pls unit all true Indians for the cause of our country and vote right party at national level.

    ಉತ್ತರ
  18. Manjuanth Reddy's avatar
    ಫೆಬ್ರ 17 2012

    ಹಳದಿ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿಯೇ.. ಆದರೆ ಕೆಲವರಿಗೆ ಎಲ್ಲಾ ಕೇಸರಿಮಯ ಅನಿಸುತ್ತೆ.. ಕೇಸರಿ ಯಾವತ್ತಿದ್ದರೂ ದೇಶಪ್ರೇಮದ ಸಂಕೇತವೇ ಹೊರತು ಹಸಿರಲ್ಲ.. __ದ್ದಿ ಜೀವಿಗಳೆನಿಸಿಕೊಳ್ಳಬೇಕಾದರೆ ಕೆಲವರಿಗೆ ಸುಲಭವಾಗಿ ತೆಗಳಲು ಸಿಗುವುದು ಕೇಸರಿ ಬಣ್ಣವೇ.. ಅಂತಹವರಿಗೆ ನನ್ನ ಧಿಕ್ಕಾರ

    ಉತ್ತರ
  19. vedasudheHariharapurasridhar's avatar
    ಫೆಬ್ರ 21 2012

    ಸ್ಪಷ್ಟ ಅಭಿಪ್ರಾಯ ತಿಳಿಸಲೂ ತಾಕತ್ ಬೇಕು. ಆ ತಾಕತ್ ಲೇಖಕರಿಗಿದೆ.ಧನ್ಯವಾದಗಳು ಅಶ್ವಿನ್

    ಉತ್ತರ

Leave a reply to ಸುರೇಶಮೂರ್ತಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments