ಜೊಳ್ಳೇ ಎಲ್ಲ – ಇದು ಸಿದ್ಲಿಂಗು ಸಿನಿಮಾ ಕಣ್ಲಾ
ಫಿಲ್ಮಿ ಪವನ್
ಬಹಳ ದಿನದಿಂದ ಸಿದ್ಲಿಂಗು ನೋಡ್ಬೇಕು ಅಂತ ಕಾದಿದ್ದೆ, ಮೆಜೆಸ್ಟಿಕ್ ತನಕ ಹೋಗಿ ಪಿಕ್ಚರ್ ನೋಡೋ ಅಷ್ಟು ಸಮಯ ಸಿಕ್ಲೆ ಇಲ್ಲ, ಅದಕ್ಕೆ ನಮ್ಮೂರಲ್ಲೇ ಹಾಕಲಿ ಅಂತ ಕಾಯ್ತಾ ಇದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗೋವಾಗ ಬ್ಹೊಜಣ್ಣನ ಟೀ ಅಂಗಡಿ ಹತ್ರ ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿ ಆಗೋಯ್ತು. ಸಂಜೆ ಏನೇ ಅಗಲಿ ಮಿಸ್ ಮಾಡಬಾರದು ಅಂತ ನಮ್ ಮ್ಯಾನೇಜರ್ ಗೆ ಹೇಳದೇನೆ ಅರ್ಧ ಘಂಟೆ ಮುಂಚೆನೇ escape ಆಗ್ಬಿಟ್ಟೆ. ಆಫಿಸ್ ಗೇಟ್ ಇಂದಾನೆ ದೋಸ್ತ್ ಯಾದವ್ ಗೆ ಫೋನ್ ಹಾಕಿ ಮಗಾ bioscope ಅಂದೆ. ಅವ್ನು ನಾನೆ ಫೋನ್ ಮಡ್ಬೇಕಂದಿದ್ದೆ ಬಾ ಥಿಯೇಟರ್ ಹತ್ರ ಸಿಕ್ತೀನಿ ಅಂದ, ಆಟೋ ಬಸ್ಸು ಎಲ್ಲ ಹಿಡ್ಕೊಂಡು ೫ ನಿಮಿಷ ಮುಂಚೆನೇ ಅರ್ಧ ಪ್ಯಾಕ್ ಕಿಂಗ್ ಮತ್ತೆ ೨೦೦ gm ಚಿಪ್ಸ್ ತೊಗೊಂಡು ಗೇಟ್ ಮುಂದೆ ಹಾಜರ್ ಆದೆ. ಆಗಲೇ ಯಾದವ್ ಟಿಕೆಟ್ ತೊಗೊಂಡಿದ್ದ ಒಳಗೋಗಿ ಮರದ ಬೆಂಚ್ ಮೇಲೆ ಕೂತಿದ್ದೆ ಕೂತಿದ್ದು bioscope ಶುರು ಆಗೋಯ್ತು.
petrOmax ಪುರಾಣ ಹೇಳ್ಕೊಂಡು ಶುರು ಆಗೋ ಕಥೆ, ಪುಟ್ಟ ಹುಡುಗನ ಕಾರ್ ಪ್ರೀತಿ ತೋರುಸ್ತ ಕಾರ್ ಗಾಗಿ classmate ನ dove ಹೊಡೆಯೋ ತನಕ ತಂದು ನಿಲ್ಸುತ್ತೆ, ನಿಜಕ್ಕೂ dove ಹೊಡ್ಯೋದು ಕಾರ್ ಗೋಸ್ಕರ ಆದ್ರು ನಿಜವಾಗೆ ಪ್ರೀತಿ ಮುಡಿರುತ್ತೆ. ಆದ್ರೆ ಆ ಪ್ರೀತಿ ಬಹಳ ದಿನ ಉಳ್ಯಲ್ಲ. ಅದೇ ನೋವಲ್ಲೆ ಬೆಳೆದ ಸಿದ್ಲಿಂಗು ಕಾರ್ ಗೋಸ್ಕರ ಅಂತಾನೆ ಟೀಚರ್ ಹಿಂದಿಂದೆ ತಿರ್ಗಾಡ್ತಾನೆ, ಗಂಡ ಇಲ್ಲದ ಟೀಚರ್ ಸಿದ್ಲಿಂಗು ನ ಆಕಸ್ಮಿಕವಾಗಿ ಉಪಯೋಗಿಸಿಕೊಂಡುಬಿಡುತ್ತಾಳೆ. ಅಷ್ಟರಲ್ಲೇ ಮತ್ತೊಂದು ಆಕಸ್ಮಿಕ, ಸಿದ್ಲಿಂಗು ತಂದೆ ತಾಯಿ ನ ಕಳ್ಕೊತಾನೆ. ಇನ್ನೂ ಓದಿ ದಬ್ಬಕೊದೇನು ಅಂತ ದುಡಿಮೆ ಮಾಡಕ್ಕೆ ಸಿಟಿ ಗೆ ಪ್ರಯಾಣ. ಅಲ್ಲಿಂದ ಕಾರ್ ಪ್ರೀತಿ ಬದುಕಲ್ಲಿ ಎನೆನಲ್ಲ ಮಾಡ್ಸುತ್ತೆ. ಯಾರ ಯಾರನ್ನೆಲ್ಲಾ ಪರಿಚಯ ಮಾಡ್ಸುತ್ತೆ, ಆಕಸ್ಮಿಕಗಳು ಹೇಗೆಲ್ಲ ನಡೆಯುತ್ತೆ ಅನ್ನೋದೇ ಸೀಡ್ಲೆಸ್ಸ್ ಕಡ್ಲೆಕಾಯಿ ಸಿದ್ಲಿಂಗು ಪುರಾಣ.
ಕಥೆಯ ಮೊದಲಾರ್ಧದಲ್ಲಿ ಮೊದಲಾರ್ಧ ಹೀರೋ narrAtion ಮಾಡ್ಕೊಂಡು ಹೋಗೋ flAshback, ಎಲ್ಲೂ ಅಡೆ ತಡೆ ಇಲ್ದೆ ವೇಗವಾಗಿ ಓಡುತ್ತೆ. ಕಾರ್ ತೊಗೊಳೋ ಆಸೆಗೆ ಬೇರೆ ಬೇರೆ ಜನರ ಪರಿಚಯ ಆಗುತ್ತೆ. ಕಾರ್ owner ಅಮಾನುಲ್ಲ ಬೇಗ್ 60000 ಹೇಳಿರ್ತಾರೆ ಅದನ್ನ ಹೊಂದಿಸೋಕೆ ಸಿದ್ಲಿಂಗು ಪಡೋ ಕಷ್ಟ ಅಷ್ಟಿಷ್ಟಲ್ಲ. ಮನೆಯ ತಮಿಳ್ owner ಹತ್ರ ಅಷ್ಟು, ತನ್ನ ಚೈನ್ ಮಾಡಿ ಒಂದಷ್ಟು, ಮತ್ತೆ ಬಡ್ಡಿಗೆ ಅಂತ ಒಂದಷ್ಟು ಹೀಗೆ ಕುಡಿಸ್ತ ಇರ್ಬೇಕಾದ್ರೆನೆ ಮಂಗಳ ಟೀಚರ್ ಪರಿಚಯ. ಒಳ್ಳೆತನಕ್ಕೆ ಸ್ನೇಹಿತರು ಹೆಚ್ಚು ಅನ್ನೋ ಹಾಗೇ, ಸಿದ್ಲಿಂಗು ಎಲ್ಲೆಲ್ಲಿ ಕಾಲಿಡ್ತಾನೋ ಅಲ್ಲೆಲ್ಲ ಗೆಳೆತನ ಗೆಳೆಯರು. ಅವನ ಒಳ್ಳೆತನನೇ ಅವನು ಕಾರ್ ತೊಗೊಳೋ ಹಾಗೆ ಮಾಡುತ್ತೆ. ಕಾರ್ ಅಲ್ಲಿ ಬಿಂದಾಸ್ ಆಗಿ ತಿರುಗಾಡ್ತಾ ಹೆಣ್ಮಕ್ಳ ಹತ್ರ ಪೋಲಿ ಮಾತಾಡ್ತಾ ತಿರ್ಗಡ್ಕೊಂದಿರೋ ಸಿದ್ಲಿಂಗುಗೆ. ಅಮಾನುಲ್ಲ ಬೇಗ್ ಬಹಳ ಹತ್ತಿರ ಆಗ್ತಾರೆ. ಅಷ್ಟರಲ್ಲೇ ಮತ್ತೊಂದು ಆಕಸ್ಮಿಕ. ಮೊದಲಾರ್ಧ ಮುಕ್ತಾಯ. ಅಲ್ಲಿಗೆ ಅಂತ್ಯವಲ್ಲ ಆರಂಭ.
ದ್ವಿತಿಯಾರ್ಧದಲ್ಲಿ ಆಕಸ್ಮಿಕ ಟೀಚರ್ ಅಂಡಾಳಮ್ಮ ಮತ್ತೆ ಸಿಕ್ಕಿ, ಘಾಬರಿಲಿ ಕಾರ್ ಡಾಕುಮೆಂಟ್ ಕಳ್ಕೊಳೋ ಸಿದ್ಲಿಂಗು. ಪೋಲಿಸ್ ರ ಅತಿಥಿ ಅಗೋ ಪ್ರಸಂಗ ಬರ್ತದೆ. ಆಗ ಹೊಸ ಟ್ವಿಸ್ಟ್ ಬಂದು ಕಥೆ ಎಲ್ಲಿಂದ ಎಲ್ಲಿಗೋ ಹೋಗಿ. ಹೊಸ ಹೊಸ ಪಾತ್ರಗಳೆಲ್ಲ ಸೃಷ್ಟಿಯಾಗಿ, ಸ್ವಲ್ಪ ತಲೆ ಕೆರ್ಕೊಳೋ ಹಾಗೆ ಮಾಡಿ. ಆಮೇಲೆ ಎಲ್ಲ ಅರ್ಥ ಆಯಿತು ಇನ್ನೇನು ಏನೋ ಆಗುತ್ತೆ ಅಂದ್ಕೊಳೋ ಅಷ್ಟರಲ್ಲಿ ಏನೇನೋ ಆಗೋಗುತ್ತೆ. ಅಲ್ಲಿಗೆ ನಮಗೇ ಗೊತ್ತಿರಲ್ಲ ಸಿನಿಮಾ ಮುಗ್ದೊಗಿರುತ್ತೆ.
ಚಿತ್ರದ ಪ್ರಥಮರ್ಧದಲ್ಲಿರೋ ವೇಗ ದ್ವಿತಿಯಾರ್ಧದಲ್ಲಿಲ್ಲ. ಜನರನ್ನ ಪೂರ್ತಿ ಸಿನಿಮ ಹಿಡಿದಿಟ್ಟುಕೊಳ್ಳುತ್ತೆ ಅಂದ್ರೆ ಅದಕ್ಕೆ ಚಿತ್ರದಲ್ಲಿರುವ, handset , simcard , ಬಂದ್ರೆ ಬೆಟ್ಟ ಹೋದ್ರೆ ಟಾಟ, ಇಂತಹ ಬೇಜಾನ್ ಡಬಲ್ mEaning dialog ಗಳು. ಅವೆನಾದ್ರು ಇರದಿದ್ರೆ ಸಿನಿಮಾ ನೋಡಕ್ಕೆ ಖಂಡಿತ ಕಷ್ಟ ಆಗ್ತಿತ್ತು. ಒಂದೇ ಒಂದು ಕಾರ್ ನ ಹಿಡ್ಕೊಂಡು ಸ್ಕ್ರೀನ್ ಪ್ಲೇ ಮಾಡಿರೋ ನಿರ್ದೇಶಕ ವಿಜಯ್ ಪ್ರಸಾದ್ ಅವರಿಗೆ ಟೋಪಿ ತೆರೆದ ನಮನ. ನಿಜಕ್ಕೂ ಅಧ್ಬುತವಾದ ನಿರೂಪಣೆ. ಪುಟ್ಟ ಪುಟ್ಟ ಮಾನವೀಯ ಸಂಬಂಧಗಳನ್ನ ಮುದ್ದಾಗಿ ವ್ಯಕ್ತ ಪಡಿಸಿದ್ದಾರೆ. ಬಡ್ಡಿ ವ್ಯವಹಾರದ ಬಗ್ಗೆ ನಿರ್ದೇಶಕರಿಗೆ ಬಹಳ ಚೆನ್ನಾಗಿ ಗೊತ್ತಿದೆ ಅನ್ಸುತ್ತೆ. ನೈಜವಾಗಿ ಮೂಡಿಬಂದಿದೆ ಬಡ್ಡಿ ವ್ಯವಹಾರದ ದೃಶ್ಯಗಳು. ಚಿತ್ರ ನೈಜತೆಗೆ ಬಹಳ ಹತ್ತಿರವಾಗಿದೆ. ಎಲ್ಲ ದೃಶ್ಯಗಳು ನಮ್ಮನೆ ಪಕ್ಕ ನಡೆದಂತಿದೆ. ಆದ್ರೆ ಪೊಲೀಸರು ಅಷ್ಟು ಸಿಲ್ಲಿಯಾಗಿ ಇರ್ತಾರೆ ಅಂದ್ರೆ ನಂಬೋದು ಬಹಳ ಕಷ್ಟ.ಅದು ನೈಜತೆಗೆ ತುಂಬಾನೇ ದೂರ.
ಚಿತ್ರದ ಎಲ್ಲ ಕಲಾವಿದರು ಉತ್ತಮ ನಟರು, ಅಚ್ಯುತ್ ಕುಮಾರ್, ಶ್ರೀಕಾಂತ್, ಮಿಮಿಕ್ರಿ ದಯಾನಂದ್,ಗಿರಿಜಮ್ಮ, ಅವರೆಲ್ಲ ನಟಿಸ್ತಾರೆ ಅನ್ಸಲ್ಲ. ನಿಜವಾಗೆ ಪಾತ್ರವೇ ಅವ್ರು ಅನ್ಸಿಬಿಡುತ್ತೆ. ಜಮಾಲ್ ಪಾತ್ರ ಮಾಡಿರೋವ್ರಿಗೆ ಸ್ವಲ್ಪ ಬಿಲ್ಡ್ ಅಪ್ ಜಾಸ್ತಿ ಅನ್ಸುದ್ರು ಅದನ್ನ ಚೆನ್ನಾಗಿ carry ಮಾಡಿದ್ದಾರೆ. ರಮ್ಯ ಸೂಪರ್ ಸೂಪರ್, ಸದಾ ತರುಣಿ ಸುಮನ್ ರಂಗನಾಥ್ ಅಂಡಾಳಮ್ಮ ಚಿತ್ರಕ್ಕೆ ಟ್ವಿಸ್ಟ್ ಕೊಟ್ಟು ನೆನಪಲ್ಲಿ ಉಳಿತಾರೆ, ಮನೆ owner ಪಾತ್ರ ಪೋಲಿಸ್ ಪೇದೆಗಳ ಪಾತ್ರ ಎಲ್ಲವು ತುಂಬಾ ಚೆನ್ನಾಗಿದೆ. ಮುಖ್ಯ ವಿಷಯ ಅಂದ್ರೆ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವು ಮಾತಾಡುತ್ತೆ. ಯಾರು ವೇಸ್ಟ್ ಅನ್ಸಲ್ಲ. ಇನ್ನೂ ಯೋಗಿ ಬಗ್ಗೆ ಏನು ಹೇಳಲಿ. ನಾನು ಇಲ್ಲಿವರೆಗೂ ನೋಡಿದ ಯೋಗಿ ಚಿತ್ರಗಳೆಲ್ಲ ಒಂದು ಪಟ್ಟಾದರೆ ಸಿದ್ಲಿಂಗು ಒಂದು ಪಟ್ಟು. ಅವರ ಹತ್ರ ಅಷ್ಟು ಚೆನ್ನಾಗಿ ಕೆಲಸ ತೊಗೊಂಡಿರೋ ನಿರ್ದೇಶಕರು. ಯೋಗಿ ಹೀಗು ಮಾಡಬಲ್ಲ ಅಂತ ತೋರ್ಸಿದ್ದಾರೆ. ಸಂಗೀತ ಸಹ ಚೆನ್ನಾಗಿದೆ
ಒಟ್ಟಾರೆ ಸಿನಿಮಾ ಒಂದ್ಸಲಿ ನೋಡ್ಬೋದು, ಸ್ವಲ್ಪ ಸ್ಲೋ ಚಿತ್ರಕಥೆ, ಸೆಕೆಂಡ್ ಹಾಫ್ ಅಲ್ಲಲ್ಲಿ ಏಳಿತಿದ್ದಾರೆ ಅನ್ಸೋದು ಬಿಟ್ರೆ, ಕುತ್ಕೊಂಡು ೨ ಘಂಟೆ ಮನೋರಂಜನೆ ಪಡಿಬೋದು. ಹೋಗಿ ನೋಡ್ಕೊಂಡು ಬನ್ನಿ. ಆದ್ರೆ ನನಗು ಮತ್ತು ಯಾದವ್ ಗೆ ಸಿನಿಮಾ ಇಂದ ಆಚೆ ಬಂದಮೇಲೆ ಸ್ವಲ್ಪ ಬೇಸರ ಆಗಿದ್ದಂತೂ ನಿಜ. ಅದಕ್ಕೆ ಕಾರಣ ಸಿದ್ಲಿಂಗು ಮೇಲಿನ expectation. ಸೊ ಯಾವುದೇ expectAtion ಇಟ್ಕೊಂಡು ಸಿನಿಮಾಗೆ ಹೋಗಬೇಡಿ. ಆಮೇಲೆ ಮಕ್ಳನ್ನ ಕರೆದುಕೊಂಡು ಹೋದ್ರೆ ಅಷ್ಟೇ. ಅಪ್ಪ handset ಅಲ್ಲಿ ಸಿಂ ಕಾರ್ಡ್ ಹಾಕಿಲ್ಲ ಅಂದಿದ್ದಕ್ಕೆ ರಮ್ಯ ಅಕ್ಕ ಏನಕ ಹೊಡೆದಿದ್ದು ಅಂತ ನಿಮ್ಮನ್ ಕೇಳಿದ್ರೆ answer ಮಾಡೋದು ನಿಮ್ ಜವಾಬ್ದಾರಿ 🙂 🙂
* * * * * * *
ಚಿತ್ರಕೃಪೆ : ಆಂತರ್ಜಾಲ






i will definitely read more posts.
Thanku 🙂
ಪವನ್, ಸಿದ್ದ್ಲಿಂಗು ಚಿತ್ರದ ವಿವರಣೆಯನ್ನು ಸರಳವಾಗಿ ನಿರೂಪಿಸಿದ್ದೀರಿ. ನಾನಂತೂ ಚಲನ ಚಿತ್ರಗಳನ್ನು ನೋಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ. ಚಲನ ಚಿತ್ರಗಳ ಬಗ್ಗೆ ಬರುವ ಈ ರೀತಿಯ ವಿಮರ್ಶೆಗಳನ್ನು ಓದಿಯೇ ಕಣ್ಣನ್ನು ತುಂಬಿಸಿಕೊಳ್ಳುತ್ತೇನೆ. ಚಲನ ಚಿತ್ರವನ್ನು ಮನೋರಂಜನೆಯ ದೃಷ್ಟಿಯಿಂದ ನೋಡುವುದಕ್ಕೂ, ವಿಮರ್ಶೆ ಮಾಡುವ ಸಲುವಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ವಿಮರ್ಶೆ ಮಾಡುವಾಗ ಕಥೆ ಚಿತ್ರಕಥೆ ನಿರ್ದೇಶನ ಸಂಗೀತ ಛಾಯಾಗ್ರಹಣ ಸಂಕಲನ ಹೀಗೆ ತಾಂತ್ರಿಕ ವಿಭಾಗದ ಕಡೆಗೆಲ್ಲ ಕಣ್ಣನ್ನು ಹಾಯಿಸಬೇಕಾಗುತ್ತದೆ. ಕೇವಲ ಮನೋರಂಜನೆ ಒಂದನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ನೋಡಿದಾಗ ಚಿತ್ರವನ್ನು ನಾವು ಆಸ್ವಾಧಿಸುವ ರೀತಿಯೇ ಬೇರೆಯದಾಗಿರುತ್ತದೆ. ಅಂತೂ ನಿಮ್ಮಿಂದ ನಾನು ಸಿದ್ದ್ಲಿಂಗು ಚಿತ್ರ ನೋಡಿದೆ. ಧನ್ಯವಾದಗಳು.
DhanyavAdagalu