ಕಾಂಗ್ರೆಸಿಗರು ತಮ್ಮ ’ಕೈ’ಯಲ್ಲಿ ತೊಳದದ್ದೇನನ್ನು ಹಾಗು ಬಳಿದದ್ದೇನನ್ನು ?
-ಅರುಣ್ ಕಶ್ಯಪ್
ಬಿಜೆಪಿ ಸಚಿವತ್ರಯರ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ವಿಧಾನಸೌಧದ ಚಿತ್ರದ ಬದಲಾಗಿ, ಅದೇ ರೀತಿ ಕಾಣುವ ಮೈಸೂರಿನ ಲಲಿತ ಮಹಲ್ ಅರಮನೆಯ (ಹೋಟೆಲ್) ಚಿತ್ರವನ್ನು ಶುಚಿಗೊಳಿಸಿ ಪ್ರತಿಭಟನೆ ನಡೆಸಿದರು. !!! ಪ್ರತಿಭಟನೆ ನಡೆಸಿದವರನ್ನು ಕೇಳಿದರೆ ಈ ಚಿತ್ರವನ್ನು ಮಂಗಳೂರಿನ ಲ್ಯಾಬ್ ಒಂದರಿಂದ ಕಾರ್ಯಕರ್ತರೊಬ್ಬರು ತೆಗೆದುಕೊಂಡು ಬಂದಿದ್ದರು. ಗೂಗಲ್ ನಲ್ಲಿ ವಿಧಾನಸೌಧಕ್ಕೆ ಸಂಬಂಧಿಸಿದ 14 ಬೇರೆ ಬೇರೆ ಮಾದರಿಯ ಚಿತ್ರಗಳಿದ್ದು ಅದರಿಂದ ಒಂದನ್ನು ಆಯ್ದು ಮುದ್ರಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಸದನದಲ್ಲೇ ಇವರ ನಾಯಕರು ಮಾಂಸದೂಟ ಮಾಡಿ ಅಗೌರವ ತೋರಿದ ಮೇಲೆ ಇನ್ನು ಇವರ ಬೆಂಬಲಿಗರಿಗೆ ವಿಧಾನಸೌಧ ಪಂಚತಾರ ಹೋಟೇಲ್ ನಂತೆ ಕಾಣುತ್ತಿರುವುದು ತಪ್ಪೇನಿಲ್ಲ ಬಿಡಿ.
ಹಾಗು….
ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವ ಸಿ. ಸಿ. ಪಾಟೀಲ್ ನಿಂತ ಭಂಗಿಯಲ್ಲಿರುವ ಇಲಾಖಾ ಪ್ರಚಾರ ಭಾವಚಿತ್ರಕ್ಕೆ ಟಾರು ಬಳಿದು ವಿರೂಪಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ರಸ್ತೆಗೆ ಹಾಕಲು ಡಾಂಬರ್ ಇಲ್ಲದಿರುವಾಗ ಇವರು ನಗರಸಭಾ ಆವರಣದಿಂದ ಡಾಂಬರು ತಂದು ಹೀಗೆ ಸಿಕ್ಕ ಸಿಕ್ಕ ಭಾವಚಿತ್ರಕ್ಕೆ ಬಳಿದು ಸಾರ್ವಜನಿಕರ ಹಣ ಹಾಳುಮಾಡಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಹೇಳಿ…. ???
ನನ್ನೆಯ ದಿನ (10-02-2012) ಪ್ರವಾಸೋದ್ಯಮದ ಹೆಸರಿನಲ್ಲಿ ಮಲ್ಪೆ ಕಡಲ ತೀರದಲ್ಲಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿದೇಶಿಯರ ರೇವ್ ಪಾರ್ಟಿಯನ್ನು ಖಂಡಿಸಿ ಮಂಗಳೂರಿನ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಸೈಂಟ್ ಮೇರೀಸ್ ದ್ವೀಪವನ್ನು ತೀರ್ಥ ಪ್ರೋಕ್ಷಣೆ ಮಾಡಿ ಶುಚಿಗೊಳಿಸಿ ಅಲ್ಲಿ ಗಣಹೋಮವನ್ನು ಮಾಡಿದರು.ಈ ಹಿಂದೆ….
(27.7.2011) ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ಚಾಮುಂಡಿ ಬೆಟ್ಟದ 1001 ಮೆಟ್ಟಿಲುಗಳನ್ನು ಹತ್ತಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದರು. ಪೂಜೆ ಸಲ್ಲಿಸಿವುದು ಅವರ ವೈಯಕ್ತಿಕ ವಿಚಾರ… ಅದು ಅವರ ಭಕ್ತಿ, ನಂಬಿಕೆಗೆ ಸಂಬಂಧಪಟ್ಟ ವಿಷಯ. ಹಾಗಿರುವಾಗ ರಾಜಕೀಯ ದುರುದ್ದೇಶದಿಂದ ಮಹಿಳಾ ಕಾಂಗ್ರೆಸ್ ಮುಖಂಡರು ಮರುದಿನ ಶೋಭ ಅವರ ಹೆಜ್ಜೆಯನ್ನು ತಮ್ಮ ’ಕೈ’ಯಲ್ಲೇ ಸ್ವಚ್ಛಗೊಳಿಸಿದ್ದರು…. ಶೋಭಾ ಅವರು ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಿದರು ಎಂಬುದು ಸಮಂಜಸವೇ…. ???
ವಿಧಾನಸಭೆಯ ಪ್ರತಿಪಕ್ಷದ ನಾಯಕರು “ಕಾಂಗ್ರೆಸ್ ನಡಿಗೆ… ಹಳ್ಳಿಯ ಕಡೆಗೆ” ಜಾಥಾದಲ್ಲಿ ಕಿಕ್ಕಿರುದು ತುಂಬಿದ ಸಭೆಯಲ್ಲಿ “ಇಲ್ಲಿ ಯಾರಿದ್ದೀರೀ ರಂ…. ಮುಂ…. ’ಕೈ’ ಎತ್ತಿ” ಎಂದು ಬಾಯಿ ಬಡಿದುಕೊಂಡಾಗ ಈ ಕಾಂಗ್ರೆಸ್ ಮಹಿಳಾ ಮಣಿಗಳ ಪಾವಿತ್ರ್ಯ ಹಾಳಾಗಲಿಲ್ಲವೇ….. ???
ಈ ತರಹ ಹೊದಲ್ಲಿ ಬಂದಲ್ಲಿ ನೀರು ಹಾಕಿ ತೊಳೆಯುವಂತದ್ದು ಅಸ್ಪ್ರುಶ್ಯತೆಯ ಆಚರಣೆಯ ಇನ್ನೊಂದು ಭಾಗವಲ್ಲವೇ… ಇದು ಸಂವಿಧಾನ ವಿರೊಧಿಯಲ್ಲವೇ…. ಇದೂ ಕೂಡ ವೈದಿಕಶಾಹಿಯಲ್ಲವೇ…. ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಇವರು ಸಂವಿಧಾನವನ್ನು ಮರೆತಿದ್ದೇಕೆ,
ಜನ ಬೇಸತ್ತು… ಮತದಾನ ಮಾಡದೆ ತಮ್ಮ ’ಕೈ’ ತೊಳೆದುಕೊಳ್ಳುವ ಮೊದಲು ಇವರೆಲ್ಲಾ ತಮ್ಮ ತಮ್ಮ ಬಾಯಿಗಳನ್ನು ಶಿದ್ದಿಗೊಳಿಸಿಕೊಳ್ಳಲೀ… ಈ ರಾಜಕಾರಣಿಗಳು ತಮ್ಮ ಕೊಳಕು ರಾಜ್ಕೀಯದ ಮಲಿನ ತೊಳೆದು, ತಮ್ಮೆಲ್ಲರ ಮನಸ್ಸುಗಳನ್ನು ಶುಚಿಗೊಳಿಸಿಕೊಳ್ಳಲಿ.





Superb…!!!
ಧನ್ಯವಾದಗಳು Ganesha Belthangady ಅವರೇ….
lalithamahal torisi vidhanasoudha anta helidre adu karnatakakke avamana allave? ellidare adara bagge matanaduavaru?
ತಮ್ಮ ತಮ್ಮ ಕ್ಷೇತ್ರದ ಅಭಿವೃದ್ದಿಯನ್ನು…. ಮತದಾರರನ್ನು ಮರೆತು ಇನ್ನೇನನ್ನು ತೊಳೆಯಬೇಕು ಅನ್ನೊ ಹುಡುಕಾಟದಲ್ಲಿದ್ದಾರೇ ಇವರೆಲ್ಲಾ…..
ಮಾಂಸದೂಟ ಮಾಡಿದರೆ ಅಗೌರವ ತೋರಿದ ಹಾಗೆ ಹೇಗೆ ಆಗುತ್ತೆ ಸ್ವಾಮಿ? ವಿಧಾನಸೌಧ ಏನು ಬರೀ ಪುಳ್ಚಾರು ತಿನ್ನುವವರಿಗೆ ಮೀಸಲಾಗಿದ್ದಲ್ಲ.. ಅಲ್ಲಿ ಮಾಂಸ ತಿನ್ನಬಾರದು ಅಂತ ಸಂವಿಧಾನದಲ್ಲಿದೆಯೇ? ಇಲ್ಲ ಯಾವುದು ಸನಾತನ ಪುರಾಣದಲ್ಲಿದೆಯೋ?
ನಾಳೆ ಎಣ್ಣೆ ಹೊಡೆಯೊದು ತಪ್ಪಾ ಅಂತ ವಿಧಾನಸೌದಕ್ಕೆ ಕುಡ್ಕೊಂಡ್ ಬರ್ತೀರಾ….. “ಮಾಂಸದೂಟ ಮಾಡಿದವರಿಗೆ ವಿಧಾನಸೌಧ ಪಂಚತಾರ ಹೋಟೇಲ್ ನಂತೆ ಕಾಣುತ್ತಿರುವುದು ತಪ್ಪೇನಿಲ್ಲ” ಅಂತ ಅಲ್ಲಿ ನಾ ಹೇಳಿದ್ದ್ದುನಿಮಗೆ ಅರ್ಥ ಆಗಿಲ್ಲಾ… ಸುಮ್ಮನೆ ವಿಶಯಾಂತರ ಮಾಡ್ಬೇಡಿ…
ಕಾಂಗ್ರೆಸ್ಸಿನವರು ಸೆಗಣಿ ತಿಂತಾರೆ,, ನಮ್ಮ ಬಗ್ಗೆ ಮಾತಾಡೊಕೆ ಅವರಿಗೇನು ಅರ್ಹತೆ ಇದೆ – ಬಿಜೆಪಿ..
ಅದರರ್ಥ,, ಅವರು ತಿಂದಿಲ್ವಾ,, ನಾವು ತಿಂತೀವಿ.. ಏನ್ ತಪ್ಪು ಅನ್ನುವ ಭಂಡತನ..
ಕಾಂಗ್ರೆಸ್ಸು ಸರಿಯಿಲ್ಲ ಅಂತಲೇ ಅಲ್ವಾ ಇವರನ್ನು ವಿಧಾನಸೌಧಕ್ಕೆ ಕಳಿಸಿದ್ದು.. 🙂
ರಾಕೇಶ್ ಶೆಟ್ರೆ,, ಎಲ್ಲಿದ್ದೀರಿ? ನೀವು ಮೀನು ಮಾಂಸ ತಿನ್ನುವವರು ಅಲ್ಲವೇ? ನಾಳೆ ನೀವು ಬಿಜೆಪಿಯಿಂದ ಎಮ್.ಎಲ್.ಎ ಆದಾಗ ಇವರೆಲ್ಲ ಸೇರಿ ವಿಧಾನಸೌಧದಲ್ಲಿ ಚಿಕನ್ ಕಬಾಬ್ ತಿನ್ನಬಾರದು ಅಂದ್ರೆ ಅದು ನಿಮ್ಮ ಆಹಾರ ಸಂಸ್ಕೃತಿಯ ಮೇಲೆ ಈ ಸನಾತನಿಗಳು ಮಾಡುತ್ತಿರುವ ದಾಳಿಯಲ್ಲವೇ? ಎಂಟೆದೆ ’ಬಂಟ’ರಾದ ನೀವು ಈ ಪುಳ್ಚಾರು ಗ್ಯಾಂಗ್ ಜೊತೆ ಸೇರಿ ಅವರ ತರಹ ಆಡಬೇಡಿ.. ,ಮಾತಾಡಿ ಸ್ವಾಮಿ…
ಮಾಂಸ ತಿಂದ ತಕ್ಷಣ ಅಪವಿತ್ರ ಆಗುತ್ತೆ ಅಂದ್ರೆ, ಚೇರ್ ಮೇಲಿಂದ ಜುಂಪ್ ಹೊಡೆದು ನಗಾಡ್ಬೇಕು ಅಷ್ಟೇ, ಆದ್ರೆ ಸೋಬಕ್ಕನ ವಿಸಯಕ್ಕೆ ಸ್ವಲ್ಪ ಕನಿಕರ ಬತ್ತು ಬಿಡಿ:) 🙂 ರಾಜಕೀಯ ಅಂದ್ರೆ ಇಷ್ಟೇ ಅನ್ಸತ್ತೆ ಅವ್ರು ಮಾಡಿದ ತಪ್ಪು ಇವ್ರು ತೋರ್ಸೋದು ಇವ್ರು ಮಾಡಿದ ತಪ್ಪು ಅವ್ರು ತೋರ್ಸೋದು, ಇಲ್ಲ ಅಂದ್ರೆ ಹೀಗೆ, ಅವರು ೧೦೦ ರು ಕದ್ದವ್ರೆ ನಾವು ಬರಿ ೫೦ ಕದ್ದಿದ್ದಿವಿ ಅದಕ್ಕೆ ನಾವೇ ಒಳ್ಳೆಯವರು ಅವರಿಗಿಂತ ಅಂತ ಹೇಳ್ಕೊಳೋದು ದಾದಗೆ ತುಂಬಾ ಬೇಜಾರಾಗುತ್ತಪ್ಪ 😦 😦 ಇಷ್ಟಕ್ಕೂ ರಾಕೇಶ್ ಶೆಟ್ರು ಯಾಕೆ ಮಧ್ಯದಲ್ಲಿ ?? 😉 😉
@Sourav:
ನಗೊದಕ್ಕೆ “ಚೇರ್ ಮೇಲಿಂದ ಜುಂಪ್ ಹೊಡೆಯೊದು ಯಾಕೆ”… ಹಾಗೆ ನಗಬಹುದಲ್ಲಾ…..
“ಸದನದಲ್ಲೇ ಮಾಂಸದೂಟ ಮಾಡಿ ಅಗೌರವ ತೋರಿದ್ರೂ” ಅಂತ ನಾ ಹೇಳಿದ್ದು…. ಅವರ ಮನೆಯಲ್ಲಿ ತಿನ್ನೊಕ್ಕೆ ಯಾರೂ ಬೇಡ ಅಂತಿಲ್ವಲ್ಲಾ…. ಮನೆಯಲ್ಲಿ ಏನು ಬೇಕಾದ್ರೂ ಬಡಿದು ಬಾಯಿಗೆ ಹಾಕೆಕೊಳ್ಳಲೀ….
ಅವಿ ಎಂಬ ಪುಳ್ಚರು ಸಾಹೇಬರೆ, ರಾಕೇಶ್ ಶೆಟ್ರು ಮೀನು ತಿಂದ್ರೆ ನಿಮಗೆ ಏನೂ ಕಷ್ಟ ಸ್ವಾಮಿ. ನಿಮ್ಮಂಥ ಇನ್ನೊಬ್ಬರ ಆಹಾರದ ಬಗ್ಗೆ ತಿರಸ್ಕಾರ ಇರೋದ್ರಿಂದಲೇ ನಮ್ಮ ದೇಶದಲ್ಲಿ ಕೋಮುವಾದ ಜಾಸ್ತಿ ಆಗಿರೋದು. ವಸಿ ಬೇರೆರೋನ್ನು ಮನುಶ್ಯರು ಅಂತ ತಿಳ್ಕೊಳ್ಳಿ. ನಿಮ್ಮಂಥ ಪುಳ್ಚರುಗಳಿಂದಲೇ ನಮ್ಮ ದೇಶ ಹಾಳಾಗಿ ಹೋಗಿರೋದು. ನಿಮ್ಮ ಮಾತುಗಳಿಂದನೇ ನೀವು ಮಾಂಸಹಾರಿಗಳ ಬಗ್ಗೆ ಎಷ್ಟು ತಿರಸ್ಕಾರ ಇಟ್ಟುಕೊಂಡಿದ್ದಿರ ಅಂತ ಗೊತ್ತಗುತ್ತೆ.
ಸಿದ್ದರಾಮು, ಬೆಂಡೇಗೆರೆ
ಸಿದ್ದರಾಮು ಅವರೇ,, ನಾವು ಜಾತಿಯಿಂದ ಥ್ರೆಡ್ಡು,, ಆದ್ರೆ ಕೋಳಿನೇ ನಮ್ಮ ಫುಡ್ಡು ಸ್ವಾಮಿ.. 🙂 ಏನ್ ರುಚಿ ರೀ ಕೋಳಿಯೂಟ.. ಒಮ್ಮೆ ಕೆ.ಎಫ್.ಸಿ ಚಿಕನ್ ತಿನ್ನಿ ಅಂಗೆ ಬಾಯಲ್ಲಿ ಚುಳ್ ಅಂತ ನೀರೂರುತ್ತೆ.. ನೀವು ಈ ಸನಾತನಿಗಳ ಕೈಲಿ ಸಿಕ್ಕಿ ಹಾಕಿಕೊಳ್ಳಬೇಡಿ ಸಿದ್ರಾಮಣ್ಣ,,.. ಯಾರಿಗೆ ಏನ್ ಬೇಕೊ ಅದನ್ನ ತಿಂದುಕೊಂಡು ಹಾಯಾಗಿ ಇರಿ ಅಂತ ತಾನೇ ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟಿದ್ದು.. ಇಲ್ಲಿ ನೋಡಿದ್ರೆ ಕಶ್ಯಪ್ ಸಾಹೇಬ್ರು ಕಾಂಗ್ರೆಸ್ಸು ಮಡಿ ಕೆಡಿಸಿಬಿಡ್ತು ಅಂತ ತಣ್ಣೀರು ಸ್ನಾನ ಮಾಡಿಕೊಂಡು ಬಂದು ಇಲ್ಲಿ ಬ್ಲಾಗ್ ಬರಿತಾ ಇದ್ದಾರೆ.. ಮೀನು ಕೋಳಿ ಕುರಿ ಹಂದಿ ಮಾಂಸ ತಿನ್ನುವ ನಮ್ಮ ರಾಕೇಶ್ ಶೆಟ್ರು ಅವರ ಆಹಾರ ಸಂಸ್ಕೃತಿಯ ಮೇಲೆ ಅವರ ನಿಲುಮೆಯಲ್ಲಿ ಆಗುತ್ತಿರುವ ಅಪಚಾರ ನೋಡಿಯೂ ಸುಮ್ಮನಿದ್ದಾರಲ್ಲ,, ನಮ್ದುಕೆ ಬೇಜಾರ್ ಗೆ ಆಗ್ ಬಿಟ್ಟೈತೆ..
ನೀವು ಬೇಕಾದ್ದ್ದು ತಿನ್ರಿ ಅದ್ರೆ ರಾಕೆಶ್ ಶೆಟ್ರು ತಿನ್ತಾರೆ ಅನ್ನೊದನ್ನು ಯಾಕೆ ಹೈಲೈಟ್ ಮಾಡ್ತಾ ಇದ್ದಿರಾ? ನೀವು ಬೇಕಾದರೆ ಯಾರು ತಿನ್ನದೇ ಇರೋದನ್ನೆ ತಿನ್ನಿ. ಹೀಗೆಲ್ಲೆ ಇನ್ನೊಬ್ಬರ ಊಟದ ಬಗ್ಗೆ ಮಾತಾಡದೇ ಇದ್ರೆ ನಿಮ್ಮ ಥ್ರೆಡ್ಡಿಗೆ ಒಳ್ಳೆದು. ಇಲ್ಲದಿದ್ರೆ ಥ್ರೆಡ್ಡು ತಪ್ಪಿದ ಗಾಳಿ ಪಟದ ತರ ಆಗಬಹ್ದುಉ.
ಮೀನಿನ ರುಚಿ ತಿಂದೋರಿಗೆ ಗೊತ್ತು ಬಿಡಿ ಮಿ.ಡ್ಯುಪ್ಲಿಕೇಟ್… ಸಿದ್ದಾರಮ್ಮು ಹೇಳ್ದಂಗೆ ಪುಳ್ಚಾರ್ ಆದ ತಮ್ಗೆ ಹೆಂಗ್ ಗೊತ್ತಗಾಬೇಕು ಬಿಡಿ ಪಾಪ.ನಿಮ್ ಪಾರ್ಟಿಗೆ ಸೇರ್ತಾ ಇಲ್ಲಾಂತ ನನ್ ಮೇಲೆ ಪಾಪ ತಮ್ಗೇ ಅದೇನ್ ಕೋಪ ಬಂದಿದೆ ನೋಡಿ ಅದಿಕ್ಕೆ ಪ್ರತಿ ಕಮೆಂಟಿನಲ್ಲೂ ನನ್ನ ನಾಮಸ್ಮರಣೆ ಮಾಡುತಿದ್ದೀರಾ… ಮಾಡಿ ಮಾಡಿ ನನ್ನ ನಾಮ ಜಪದಿಂದಲಾದರೂ ನಿಮ್ಮ ತಂದಿಡೋ ಬುದ್ದಿ ನಿಂತರು ನಿಲ್ಲಬಹುದು 🙂
ನೀವು ವಸಿ ಕಣ್ ಬುಟ್ಟು ನೋಡಿ ಶೆಟ್ರೆ,, ನಿಮ್ಮೂರಾಗಿನ ಭೂತದ ಕೋಲಾ, ಭೂತಾರಾಧನೆ ನಿಮ್ಮ ಸಂಸ್ಕೃತಿಯೇ ಹೊರತು ಈ ಮಡಿ ಮಡಿಕೋರರು ಹೇಳೋ ಹಂಗೆ ವೇದಾ ಒಂದೇ ನಿಮ್ಮ ಸಂಸ್ಕೃತಿ ಅಲ್ಲ.. ವಸಿ ಕಣ್ ಬುಡಿ ಶೆಟ್ರೆ.. ಸ್ವಾಮಿ ವಿವೇಕಾನಂದರು ಹೇಳಿದ ಹಂಗೆ ಯಾರನ್ನ ಹೆಂಗಿದೆಯೇ ಹಂಗೆ ಒಪ್ಕೊಳ್ಳೊರು ಹಿಂದು ಧರ್ಮವೇ ಹೊರತು ಈ ಜನಗಳು ಹೇಳೊ ವೈದಿಕತೆಯೊಂದೇ ಅಲ್ಲ ಶೆಟ್ರೆ.. ಧರ್ಮದ ಬಗ್ಗೆ ವೈಚಾರಿಕತೆಯ ಕಣ್ಣಿಂದ ನೋಡಿ,, ಇವರ ಬೂಟಾಟಿಕೆಯೆಲ್ಲ ಕಾಣ್ಸುತ್ತೆ.. ಆಮೇಲೆ ನಿಮ್ಗೆ ಗೊತ್ತಾಯ್ತದೆ,, ನಿಮ್ಮ ಭಾಷೆ, ನಿಮ್ಮ ಆಚರಣೆ, ನಿಮ್ಮ ಆಹಾರ ಇವೇ ನಿಮ್ಮ ಗುರುತುಗಳೇ ಹೊರತು ಇವರು ಹೇಳೊ ಕಟ್ಟು ಕತೆಯಲ್ಲ ಅಂತ.. ನೀವು ಬುದ್ದಿವಂತ್ರು ಶೆಟ್ರೆ,, ಈ ಹುಚ್ ನನ್ ಮಕ್ಳ ಸಾವಾಸದಿಂದ ವಸಿ ಆಚೆ ಬಂದ್ ನೋಡಿ..
ತಾವ್ ನಮ್ಗೆ ಹೇಳಿರೋ ಮಾತನ್ನ ತಾವ್ ಪಾಲಿಸಿದರೆ ಹಿಂಗೆ ಡ್ಯುಪ್ಲಿಕೇಟ್ ಹೆಸರಲ್ಲಿ ಬರ್ಯೋ ತಾಪತ್ರಯ ಇರ್ತಾ ಇರ್ಲಿಲ್ಲ ಬಿಡಿ…
ನಿಮ್ಗೆ ಗೊತ್ತಿರ್ಲಿ ಅಂತ ಹೇಳ್ತಾ ಇದ್ದೀನಿ..ಕೆ.ಎಫ಼್.ಸಿ ಲಿ ಸಿಗೋದು ಚಿಕನ್ ಅಲ್ಲ… ಬೇಕಿದ್ರೆ ಗೂಗಲ್ ದೇವ್ರನ್ನ ಕೇಳಿ ನೋಡಿ… ಬೇಳೆ ಸಾರು ತಿನ್ಕೊಂಡು ಕೆ.ಎಫ಼್.ಸಿ ಆಡ್ ನೋಡಿ ಸುಳ್ ಸುಳ್ಳೇ ಮಾಂಸಹಾರಿಯಾಗ ಹೊರಟ್ರೆ ಹಿಂಗೇಯಾ ಆಗೋದು 🙂
@ಅವಿ:
“ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟಿದ್ದು.. ” ????
ಈ ಮಾತಲ್ಲಿ ನಿಮ್ಮ ಮನಸ್ಥಿತಿ ಏನು ಅಂತ ಅರ್ಥವಾಯ್ತು ಬಿಡಿ…. ದೇಶಪ್ರೇಮ ನಿಮಗೆ ಎಷ್ಟು ಇದೇ ಅಂತ ತೊರಿಸಿದ್ದೀರೀ…..
ಏನೊ ನಾನು ಸ್ನಾನ ಮಾಡ್ತೀನಿ…. ನೀವೂ ಸ್ನಾನ ಮಾಡೊ ಅಭ್ಯಾಸ ಮಾಡ್ಕೊಳೀ ಸಾಹೇಬ್ರೇ…. ನಿಮ್ಮ ಸ್ನೇಹಿತರಿಗೂ ನಿಮ್ಮ ಅಕ್ಕ ಪಕ್ಕದವರಿಗೂ ಸ್ವಲ್ಪ ಖುಶಿಯಾಗುತ್ತೇ…
’ಆಹಾರ ಸಂಸ್ಕೃತಿಯ’ ಬಗ್ಗೆ ಈ ಲೇಖನದಲ್ಲಿ ನಾನೆಲ್ಲೂ ಪ್ರಸ್ತಾಪಿಸಿಲ್ಲಾ… ಇಲ್ಲಿ ಯಾರೂ ಮೇಲೂ ವಯಕ್ತಿಕವಾಗಿ ಬರೆದಿಲ್ಲಾ….. ಹೀಗೆ ನಮ್ಮಲ್ಲಿಯೇ ಜಗಳ ತಂದಿಟ್ಟು ಮಜಾ ತಗೊಳ್ಳೊ ವಿಫಲ ಪ್ರಯತ್ನದಲ್ಲಿರೊ ನೀವು ಲೇಖನದಲ್ಲಿರೊ ಬೇರೆ ವಿಶಯದ ಬಗ್ಗೆ ಮಾತಾಡ್ರೀ ವಿಶಯಾಂತರ ಮಾಡ್ಬೇಡಿ….
ಉಡದಾರ ಹಾಕೊರೆಲ್ಲಾ ಅಯ್ನೊರ್ ಆಗಲ್ಲಾ ಕಣ್ಲಾ…. ನಾವ್ ಹೆಗಲಿಗೆ ಹಾಕೊದು ಬಿಳೀದು… ನೀವ್ ಸೊಂಟಕ್ಕೆ ಹಾಕೊದು ಕಪ್ಪದು… ಏನೊ ನೀನೂ ಇಲ್ ಬಂದು ನಾವೂ ಅಯ್ನೊರು ಅಂತ ಹೇಳ್ಕೊಡ್ ಆಸೆ ತೀರಿಸ್ಕೊತಿದ್ಯಾ ಅಷ್ಟೆ…. ಸ್ಪಷ್ಟೀಕರಣಕ್ಕೂ ಬಯೊದಕ್ಕೂ ನಿಂಗ್ ಅರ್ಥ ಗೊತ್ತಾಗಲ್ಲಾ ಬಿಡೂ….
ಕಾಂಗ್ರೆಸ್-ನವರ ಹತ್ತಿರ ೫೦ – ೧೦೦ ಕಿತ್ತ್ಕೊಂಡ್ ಬಂದು ರಾಜಕೀಯ ಮಾಡ್ತಿದ್ದೀಯಾ ಇಲ್ಲಿ…. ಚರ್ಚೆ ಮಾಡದೆ ಜಾತಿ ಬೇದ ಮಾಡಿ ಜಗಳ ತಂದಿಡೊ ನಿಮಗೆಲ್ಲಾ ಮೈಲಾರಲಿಂಗ ಬೇಗ ಬುದ್ದು ಬೆಳೆಸಲೀ….
ತಿನ್ನೊ ವಿಶಯಾ ಬಿಟ್ಟು ಕೆಲಸ ನೋಡು ಕಳ್ ಮುಂಡೇದೆ….
ಎರಡು ತಪ್ಪುಗಳು ಸೇರಿ ಒಂದು ಸರಿ ಆಗುತ್ತೇನ್ರಿ? ಕಾಂಗ್ರೆಸ್ಸು, ದಳದವರ ಕೆಟ್ಟ ಆಡಳಿತ ನೋಡಿ ಅಲ್ಲವೇ ನನ್ನಂತಹ ಮಲೆನಾಡಿನವರು ಬಿಜೆಪಿಗೆ ಮತ ಹಾಕಿದ್ದು.. ಅವರು ಕಾಂಗ್ರೆಸ್ಸು,ದಳಕ್ಕಿಂತಲೂ ಕೆಟ್ಟದಾಗಿ ಆಡಳಿತ ಮಾಡಿದರೆ ಅದನ್ನು ಪ್ರಶ್ನಿಸದೇ ವಿರೋಧ ಪಕ್ಷದಲ್ಲಿರುವ ಕೆಲಸಕ್ಕೆ ಬಾರದವರನ್ನು ಗುರಿ ಮಾಡುವುದು ಏನು ತೋರಿಸುತ್ತೆ ಸ್ವಾಮಿ? ರಾಕೇಶ್ ಶೆಟ್ರ ಜೊತೆ ಅರುಣ್ ಕಶ್ಯಪ್ ಅವರಿಗೂ ಮುಂದಿನ ಬಾರಿ ಬಿಜೆಪಿ ಟಿಕೆಟ್ ಗ್ಯಾರಂಟಿ.. ಆಮೇಲೆ ಈ ತರಹ ಬ್ಲಾಗ್ ಬರೆಯುವುದೆಲ್ಲ ಬಿಟ್ಟು ವಿಧಾನಸೌಧದಲ್ಲಿ ಸಿದ್ರಾಮಣ್ಣ, ಡಿಕೆಶಿ, ಕುಮ್ಮಿ, ತರಹದ ಮಾಂಸ ತಿನ್ನುವವರನ್ನು ಅಲ್ಲೇ ವಿಚಾರಿಸಿಕೊಳ್ಳಿ.. ಜೈ ಭಾರತ ಮಾತೆ… ಜೈ ಕರ್ನಾಟಕ,, ಜೈ ರಾಕೇಶ್ ಶೆಟ್ರು,, ಜೈ ಅರುಣ್ ಕಶ್ಯಪ್ … ಜೈ ಜೈ ಜೈ…
ಏನೊ ಚೆನ್ನಾಗಿ joke ಮಾಡ್ತೀರಾ…. ನಿಮ್ comment ಓದಿ ತುಂಬಾ ಖುಶಿ ಆಯ್ತು 🙂
@Avi.. Sir, Freedom is not Given, it is taken. Swathanthrya Britishara bhikshe alla. Baale hannu sulidashtu sulabhavagi namage swathathrya dakkilla. 6.5 lakshakku adhika deshabhaktha horatagarara balidanadinda prapthavagirodu idu.
ಈ ವಯ್ಯನೋರು ಆವಿನೊ, ಕಾವಿನೊ ಗೊತ್ತಾಯ್ತಾಯಿಲ್ಲ. ಉಳಿದವರು ಈ ಪಕ್ಸ , ಈ ಪಂಗಡ ಅಂತ ಹಲುಬತಾನೆ ಇರೋದಕಿಂತಾ ಮೊದಲು ತಾವು ಏನು ಅಂತ ಸ್ಪಸ್ಟಪಡ್ಸಲಿ. ಹೀಗೆ ಸುಮ-ಸುಮ್ಮನೆ ಕಿರಿ ಕಿರಿ ಎಬ್ಸೊದಕಿಂತ ಇರೊ ಥ್ರೆಡ್ ನಾ ಕುತ್ತಿಗೆಗೆ ಸುತ್ಕೊಂಡು ……………………..ಪಾದಾ ಸೇರಲಿ!
ನಾವು ಮನುಷ್ಯರ ಪರವಾಗಿರೋರು ಮೂರ್ತಿಗಳೇ.. ಇಲ್ಲಿ ಮಡಿ ಹೋಯ್ತು ಅಂತ ತಣ್ಣೀರು ಮಿಂದುಕೊಂಡು ಬಂದೋರು ಇದ್ದಾರಲ್ಲ ಅವರಿಗೆ ವಸಿ ಹೇಳಿ ಸ್ವಾಮಿ,, ಗಬ್ಬೆದ್ದು ನಾರುತ್ತಿರುವ ಜಾತಿವಾದಿಗಳನ್ನ ಪ್ರಶ್ನಿಸಿದರೆ ಅದು ಕಿರಿಕಿರಿ,, ಆದ್ರೆ ಅದೇ ಜಾತಿವಾದಿಗಳು, ಕೋಮುವಾದಿಗಳು ಮಾಡ್ತಿರೊ ಗಬ್ಬೆಬ್ಬಿಸುವ ಕೆಲಸ ನಿಮ್ಮ ಕಣ್ಣಿಗೆ ಕಾಣ್ಸಲ್ಲ ಅಂದ್ರೆ ತಾವು ಇದೇ ಪಂಗಡವೋ? ಯೆ,, ಬುಡಿ ಸೋಮಿ,, ಏನ್ ಬತ್ತದೆ ಹಿಂಗ್ ಜಾತಿ, ಧರ್ಮ ಅಂತ ಬಡಕಂಡ್ರೆ,, ಮೆಚ್ಚಾಕಿಲ್ಲ ನಮ್ಮ ಮೈಲಾರಲಿಂಗಾ..
CORRECT… ಅಂತೂ ಒಪ್ಪಿಕೊಂಡೆ ನೀನು…. “ಪುಳ್ಚಾರು ತಿನ್ನೋರಿಗೆ ದೇವಸ್ಥಾನದ ಗರ್ಬಗುಡಿ ತರಹ ಕಾಣುತ್ತೆ…” ಅಂತ….
ಇನ್ನು ನೀವು ವಿಧಾನಸೌಧನ ಹೇಗೆ ನೋಡ್ತೀರಾ ಅನ್ನೊದು ಎಲ್ಲರಿಗೂ ಗೊತ್ತಾಯ್ತೂ…