ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 13, 2012

4

ಸಂಸ್ಕೃತಿ ಸಂಕಥನ – 22 – ಭಾರತೀಯ ಸಂಸ್ಕೃತಿಗೆ ಗ್ರಹಣ ಹಿಡಿಸಿದ ವಸಾಹತು ಪ್ರಜ್ಞೆ

‍ನಿಲುಮೆ ಮೂಲಕ

-ರಮಾನಂದ ಐನಕೈ

ಸುಮಾರು 35 ವರ್ಷಗಳ ಹಿಂದಿನ ನೆನಪು. ನಾವು ಹೈಸ್ಕೂಲಿಗೆ ಹೋಗುತ್ತಿರುವ ದಿನಗಳು. ಒಂದು ರೀತಿಯ ವಿಚಿತ್ರ ಸಭ್ಯತೆಯನ್ನು ಬೆನ್ನಟ್ಟಿ ಹೊರಟಿರುವ ಕಾಲ. ಮೇಸ್ಟ್ರಗಳು ಕ್ಲಾಸಿಗೆ ಬಂದರೆ ಜೀವನದ ‘ಗುರಿ’ಯ ಕುರಿತಾಗೆ ಮೊದಲ ಪ್ರಶ್ನೆ ಕೇಳುತ್ತಿದ್ದರು. ಯಾರು ಅತ್ಯುತ್ತಮ ಗುರಿಯನ್ನು ಹೇಳಿದರೋ ಅವರಿಗೆ ‘ವ್ಹೆರಿ ಗುಡ್’ ಅನ್ನುತ್ತಿದ್ದರು. ಮುಂದೆ ಜೀವನದಲ್ಲಿ ಮನುಷ್ಯ ಮಾಡಬಹು ದಾಂತಹುದು ಇಂತಿಂಥದಿದ್ದೆ ಎಂದು ನಮಗೆ ಗೊತ್ತಾಗಿದ್ದೇ ಈ ಪ್ರಶೆಗಳಿಗೆ ಉತ್ತರ ಹುಡುಕುವ ಮೂಲಕ. ನಾವು ಮಾಡುವ ಕಾರ್ಯಗಳಿಗೆ ಉದ್ದೇಶ ಇದ್ದರೆ ಮಾತ್ರ ಅದು ಗುರಿ ತಲುಪುತ್ತದೆ. ಕ್ರಿಯೆಗೂ ಉದ್ದೇಶಕ್ಕೂ ಸಂಬಂಧ ಇರಬೇಕು. ಆದ್ದರಿಂದ ಗುರಿ ಅಂದರೆ  ಉದ್ದೇಶ. ಗುರಿಯ ದಾರಿ ಯಲ್ಲಿ ಹೋದರೆ ಗುರಿ ಸಿಗುತ್ತದೆ. ಈ ರೀತಿಯ ಚಿಂತನೆ ಇದ್ದ ಕಾಲ ಅದು.

ಇಂಥ ಚಿಂತನೆಗಳು ಎಲ್ಲಿಂದ ಬಂದವು? ಕೇಳಿದರೆ, ದಾರ್ಶನಿಕರಿಂದ, ಪುರಾಣಗಳಿಂದ, ಪ್ರಾಚೀನ ಜನರ ಜೀವನಾನುಭವದಿಂದ ಇತ್ಯಾದಿ ಯಾಗಿ ಮನಸ್ಸಿಗೆ ಕಂಡಂತೆ ಹೇಳುತ್ತೇವೆ. ಯಾರಿಂದಲೂ ಅಲ್ಲ. ನಾವು ಕಲ್ಪಿಸುತ್ತಿರುವ ಸೀಮಿತ ಅರ್ಥದ ಗುರಿ ನಮ್ಮಲ್ಲಿ ಹುಟ್ಟಿದ್ದೇ ಪಾಶ್ಚಾತ್ಯ ಪ್ರಭಾವದಿಂದ. ವಸಾಹತುಶಾಹಿ ಪ್ರಜ್ಞೆ ಯಿಂದ. ಏಕೆಂದರೆ ಅವರ ಅಷ್ಟೂ ಚಿಂತನೆಗಳು ಅರಳುವುದು ಕಾರಣ ಮತ್ತು ಉದ್ದೇಶಗಳ ಮೇಲೆ. ಏಕೆಂದರೆ ಪಾಶ್ಚಾತ್ಯ ಪುರಾಣ ಕಟ್ಟಲ್ಪಟ್ಟಿದ್ದೇ ಈ ಪರಿಕಲ್ಪನೆಯ ಮೇಲೆ. ಅನೇಕ ಸಂದರ್ಭಗಳಲ್ಲಿ ಅದು ನಮ್ಮಲ್ಲಿ ಅರ್ಥ ಕೊಡಲಾರದು.

ಉದಾಹರಣೆಗೆ ನಮ್ಮ ಹೈಸ್ಕೂಲಿನ ಗುರಿಯ ಕಡೆಗೇ ಹೋಗೋಣ. ನಮ್ಮ ಇಂಗ್ಲೀಶ್ ಮಾಸ್ತರು ‘ಐ ವಾಂಟು ಬಿಕಮ್’ ಎನ್ನುವುದನ್ನು ತುಂಬಾ ವೈವಿಧ್ಯಮಯ ಶೈಲಿಯಲ್ಲಿ ಹೇಳಿಕೊಡುತ್ತಿದ್ದರು. ನಮ್ಮಲ್ಲಿ ಅನೇಕರು ಆ ಶೈಲಿಯನ್ನು ರೂಢಿಸಿಕೊಳ್ಳು ವುದೇ ಗುರಿಯನ್ನು ತಲುಪಿದಂತೆ ಎಂದು ತಿಳಿದು ಕೊಂಡಿದ್ದರು. ಒಂದು ಸಾರಿ ಜನರಲ್ ಕಾರಿಯಪ್ಪ ನಮ್ಮ ಹೈಸ್ಕೂಲಿಗೆ ಬಂದರು. ಅವರು ಭಾರತದ ಮಾಜಿ ಮಹಾದಂಡನಾಯಕರು. ಅಜಾನು ಬಾಹು. ಅವರು ಒಬ್ಬೊಬ್ಬರನ್ನೇ ಕೇಳುತ್ತ ಹೋದರು ‘ವ್ಹಾಟ್ ಈಸ್ ಯುವರ್ ಎಂಬಿಶನ್?’ ಅಷ್ಟು ಕೇಳಿದ್ದೇ ಸರಿ ನಮ್ಮ ಇಂಗ್ಲೀಶ್ ಮಾಸ್ತರರ ಶೈಲಿ ಎಲ್ಲರ ಬಾಯಿಂದ ಪುಂಖಾನು ಪುಂಖವಾಗಿ ಹೊರಬಂತು. ಡಾಕ್ಟರ ಎಂದರು, ವಿಜ್ಞಾನಿ ಎಂದರು, ಇಂಜನಿಯರ್ ಅಂದರು, ಹೀಗೆ ಗುರಿಗಳ ಸುರಿಮಳೆ ಗರಿಯಿತು. ನಾನೂ ಕೂಡಾ ಡಾಕ್ಟರ್ ಆಗುತ್ತೇನೆ ಎಂದಿದ್ದೆ. ಆದರೆ ನಮ್ಮ ಕ್ಲಾಸಿನಲ್ಲಿ ಗಣಪತಿ ಎಂಬ ಹುಡುಗನಿದ್ದ. ಬಡವ, ಅವನ ಅಪ್ಪ ಕೂಲಿಕಾರ ಹಾಗೂ ಕೊನೆಗೌಡ. ಈ  ಗಣಪತಿ ಮಾತ್ರ ತುಂಬ ಬುದ್ಧಿವಂತನಾಗಿದ್ದ. ಅವನ ಅಕ್ಷರಗಳು ಮುತ್ತು ಪೋಣಿಸಿದಂತೆ ಇರುತ್ತಿದ್ದವು. ಅವನಿಗೆ ಅವನದೇ ಆದ ಕೀಳರಿಮೆ ಇತ್ತು. ಅವನು ಆ ದಿನ ನೀಡಿದ ಉತ್ತರ ವಿಚಿತ್ರವಾಗಿತ್ತು. ‘ನಾನು ತಂದೆಯಂತೆ ಕೊನೆಗೌಡ ಆಗುತ್ತೇನೆ’ ಅಂದ. ನಾವೆಲ್ಲ ಹೊ ಎಂದು ನಕ್ಕಿದ್ದೆವು. ಏಕೆಂದರೆ ಒಂದು ಉತ್ತಮ ಗುರಿಯನ್ನೇ ಹೊಂದಿರದ ಮನುಷ್ಯ ಎಂದು ನಮಗೆಲ್ಲ ಅನಿಸಿತ್ತು. ಆದರೆ ಇಂದು 35 ವರ್ಷಗಳು ಕಳೆದಿವೆ. ಡಾಕ್ಟರ್, ಇಂಜನಿಯರ್ ಆಗುತ್ತೇವೆಂದ ನಾವೆಲ್ಲ ದಿಕ್ಕಾಪಾಲಾಗಿದ್ದೇವೆ. ಜೀವನ ಮಾಡಲು ನಿತ್ಯ ಹೋರಾಡುತ್ತಿ ದ್ದೇವೆ. ನೀವು ನಂಬಲಿಕ್ಕಿಲ್ಲ. ನಮ್ಮ ಗಣಪತಿ ಎಂ.ಬಿ.ಬಿ.ಎಸ್ ಹಾಗೂ ಎಂ.ಎಸ್. ಮುಗಿಸಿ ಇಂದು ಪ್ರಸಿದ್ಧ ಡಾಕ್ಟರ್ ಆಗಿದ್ದಾರೆ.

ಬಾಯಲ್ಲಿ ಹೇಳಿದಾ ಕ್ಷಣ ಗುರಿ ತಲುಪಲಿ ಕ್ಕಾಗುತ್ತದೆಯೇ? ಹಾಗಾಗಿ ಉದ್ದೇಶ ಮಾತ್ರ ಕ್ರಿಯೆ ಯನ್ನು ನಿರ್ಣ ಯಿಸುತ್ತದೆ ಎಂಬುದು ನಮ್ಮ ದೇಶದ ಮಟ್ಟಿಗಂತೂ ಸುಳ್ಳು. ಒಳ್ಳೆ ಉದ್ದೇಶ ವನ್ನಿಟ್ಟುಕೊಂಡವನು ಮಾತ್ರ ಒಳ್ಳೆಯ ಕೆಲಸ ಮಾಡುತ್ತಾನೆಂಬುದೂ ನಮ್ಮ ಅನುಭವದಲ್ಲಿ ಸುಳ್ಳು, ನಮ್ಮ ಸಂಸ್ಕೃತಿಯಲ್ಲಿ ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಮಾಡಲಿಕ್ಕೆ ಉದ್ದೇಶಗಳು ಬೇಕಾಗಿಲ್ಲ. ಆದ್ದರಿಂದ ನಮ್ಮಲ್ಲಿ ಸರಿಯಾದ ಗುರಿಯತ್ತ ಹೋಗು ಅನ್ನುವುದಕ್ಕಿಂತ ಸರಿಯಾದ ಮಾರ್ಗದಲ್ಲಿ ಹೋಗು ಅನ್ನುತ್ತೇವೆ.

ಇದನ್ನೇ ಮಹಾತ್ಮಾ ಗಾಂಧೀಜಿ ‘ಮಾರ್ಗದ ಪರಿಶುದ್ಧತೆಯೇ ಗುರಿಯಾಗಬೇಕು’ ಅನ್ನುತ್ತಾರೆ. ಅವರಿಗೆ ಗುರಿಗಿಂತ ಮಾರ್ಗ ಹೆಚ್ಚು ಮುಖ್ಯ ವಾದದ್ದು. ಇದು ಭಾರತೀಯ ಸಂಸ್ಕೃ ತಿಯ ತಿರುಳು. ನಾವು ಎಲ್ಲಿಗೆ ತಲು ಪಬೇಕು ಅನ್ನುವು ದಕ್ಕಿಂತ ಹೇಗೆ ತಲುಪಬೇಕೆಂಬ ಬಗ್ಗೆ ವಿವರಣೆ ನೀಡುತ್ತಾರೆ. ನಾವು ಹೊರಟಿರುವ ಮಾರ್ಗವೇ ಒಂದು ಒಳ್ಳೆಯ ಗುರಿ ಯನ್ನು ತಲುಪಿಸು ತ್ತದೆ ಎಂಬುದು ಅವರ ನಂಬಿಕೆ. ದಕ್ಷಿಣ ಆಫ್ರಿಕಾ ದಿಂದ ಬರುವಾಗ ಗಾಂಧೀಜಿ 1947 ರಲ್ಲಿ ಸ್ವಾತಂತ್ರ್ಯ ಗಳಿಸಿಕೊಡಬೇಕೆಂಬ ಗುರಿ ಹಾಕಿಕೊಂಡು ಬಂದಿರ ಲಿಲ್ಲ. ಆದರೆ ಭಾರತಕ್ಕೆ ಬಂದು ತಮ್ಮ ಮಾರ್ಗ ಬದಲಿಸಿದರು. ಸೂಟು ಬೂಟು ಕಿತ್ತೆಸೆದರು. ಸದಾ ಸಂತರಂತೆ ಸನಾತನ ಜೀವನಶೈಲಿಗೆ ಬಂದರು. ಸತ್ಯಾಗ್ರಹದ ಮಂತ್ರ ಪಠಿಸಿದರು. ಫಲಿತಾಂಶ ನಮಗೆಲ್ಲ ಗೊತ್ತಿದೆ. ಅದೇ ನೆಹರೂ ಪಾಶ್ಚಾತ್ಯ ಶಿಕ್ಷಣ ಹಾಗೂ ಪ್ರಭಾವದಿಂದ ಗುರಿಯನ್ನು ಕಟ್ಟಿಕೊಂಡಿರು ವವರು. ಮಾತೆತ್ತಿದರೆ ಪಂಚವಾರ್ಷಿಕ ಯೋಜನೆ, ಸಮಾನತೆ ಇತ್ಯಾದಿ ಗುರಿಯ ಮಂತ್ರ. ಆದರೆ ಆದದ್ದೇನು? ದೇಶ ಸರ್ವನಾಶದ ಅಂಚಿಗೆ ಬಂದಿದೆ. ಗುರಿಯೇ ಪ್ರಗತಿ ಆಗಿದ್ದರೆ ದೇಶಕ್ಕೆ ಈ ಗತಿ ಬರುತ್ತಿತ್ತೇ?

ನಮ್ಮ ಸಂಸ್ಕೃತಿಯಲ್ಲಿ ರಾಮನ ಮಾರ್ಗ ಮತ್ತು ಕೃಷ್ಣನ ಮಾರ್ಗ ಎಂಬ ಎರಡು ಕಲ್ಪನೆಗಳಿವೆ. ಕೃಷ್ಣ ಕೇವಲ ಗುರಿಯನ್ನು ಕೇಂದ್ರವಾಗಿಟ್ಟುಕೊಳ್ಳುತ್ತಾನೆ ಎಂಬ ಆಕ್ಷೇಪ ಇದೆ. ಆದರೆ ಅದು ಸುಳ್ಳು. ರಾಮನ ಮಾರ್ಗ ಪರಿಶುದ್ಧತೆಯ ಸೂಚಕವಾದರೆ ಕೃಷ್ಣನ ಮಾರ್ಗ ಫಲಿತಾಂಶ ಸೂಚಕವಾಗಿದೆ. ಕೃಷ್ಣ ಕೂಡಾ ಮಾರ್ಗಕ್ಕೇ ಪ್ರಾಮುಖ್ಯತೆ ನೀಡುತ್ತಾನೆ. ರಾಮ ಮಾರ್ಗದ ಶುದ್ಧತೆಯಲ್ಲಿ ಹೋಗುತ್ತ ಸಂದಿಗ್ಧದಲ್ಲಿ ಸಿಕ್ಕಿಕೊಂಡರೆ ಕೃಷ್ಣ ಎದುರಾದ ಸಂದಿಗ್ಧತೆಯನ್ನೆಲ್ಲ ಬಿಡಿಸುತ್ತ ಮಾರ್ಗ ಸೃಷ್ಟಿಸುತ್ತ ಹೋಗುತ್ತಾನೆ. ಈ ಉದಾಹರಣೆ ನಮ್ಮ ಸಂಸ್ಕೃತಿಯ ಬಹುತ್ವ ವನ್ನು  ಅರ್ಥ ಮಾಡಿಕೊಳ್ಳಲು ಸಾಕು.

ಭಾರತೀಯ ಸಂಸ್ಕೃತಿಯ ಹರಿವು ಹಾಗೆಯೇ ಇದೆ. ಇಲ್ಲಿ ‘ಗುರಿ’ ಎಂಬ ಚೌಕಟ್ಟಿನಲ್ಲಿ ಹೋದವ ರೆಲ್ಲ ಯಶಸ್ವಿಯಾಗಿಲ್ಲ. ಯಶಸ್ವಿಯಾದ ಮನುಷ್ಯನಿಗೆ ಗುರಿಯ ಕಥೆ ಜೋಡಿಸ ಲಾಗುತ್ತಿದೆ ಅಷ್ಟೇ. ಮನಸ್ಸಿನ ಕಲ್ಪನೆ ಬೇರೆ ಬದುಕಿನ ವಾಸ್ತವ ಬೇರೆ ಎಂಬುದು ಇವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗೇ ಈ ದೇಶದಲ್ಲಿ ಸಾಧನೆ ಮಾಡುವ ಮನುಷ್ಯನಿಗೆ 45ರಿಂದ 50 ವಯಸ್ಸು ದಾಟಿರಬೇಕು. ಹಾಗೂ 70 ವರ್ಷದ ವರೆಗೆ ಆತ ವಯಸ್ಸಾದಂತೆ ಕಾಣಲಾರ. ಪೂರ್ವದಿಂದಲೂ ನಮ್ಮಲ್ಲಿ ಶ್ರದ್ಧೆ, ಪ್ರಯತ್ನ ಹಾಗೂ ಸಂಯಮದ ಪಾಠ ಮಾಡಿದರೇ ವಿನಾ ಗುರಿಯ ಪಾಠ ಮಾಡಿಲ್ಲ. ಅದಕ್ಕಾಗೇ ಇಲ್ಲಿ ಪ್ರತೀ ಮನುಷ್ಯ ಜೀವನ ಪ್ರವಾಹದಲ್ಲಿ ಎದ್ದುಬಿದ್ದು ತೇಲಿ ಬರುತ್ತಿ ದ್ದರೂ ಉತ್ಸಾಹ ಕಳೆದುಕೊಳ್ಳಲಾರ. ಭರವಸೆ ಕಳೆದುಕೊಳ್ಳಲಾರ. ‘ದೇವರು’ ಎಂಬ ನಂಬಿಕೆಯೇ ಆತ ನಿಗೆ ಆಸರೆಯಾಗು ತ್ತದೆ. ಗುರಿ ಎಂಬ ಕಲ್ಪನೆ ಬಂದದ್ದು ಕಳೆದ 300- 400 ವರ್ಷಗಳಿಂ ದೀಚೆಗೆ. ಅದರ ಜೊತೆಗೇ ಖಿನ್ನತೆ ಬಂತು. ಹತಾಶೆ ಬಂತು. ಬದುಕಿ ನಲ್ಲಿ ಸ್ವಾರಸ್ಯ ಕಳೆದು ಕೊಳ್ಳುವ ಸಂದರ್ಭ ಬಂತು.

ಸಭ್ಯತೆಯ ವಿಚಾರ ಬಂದಾಗ ಇನ್ನೊಂದು ಘಟನೆ ನೆನಪಿಗೆ ಬರುತ್ತದೆ. ನಾವು ಹೈಸ್ಕೂಲ್ ಹಾಗಿರಲಿ, ಪ್ರಾಥಮಿಕ ಶಾಲೆಗೆ ಹೋಗುವಾಗಲೇ ನಮ್ಮ ಮನೆಯ ಹಿರಿಯರು ಶಾಲೆಗೆ ಪ್ರವೇಶ ಮಾಡುವುದು ನಮಗೆ ಅವ ಮಾನದ ಸಂಗತಿ ಆಗಿತ್ತು. ನಾನು ಐದನೇ ಕ್ಲಾಸಿನಲ್ಲಿ ನಪಾಸಾದಾಗ ನನಗೆ ಕಿಂಚಿತ್ತೂ ಅವಮಾನ ಆಗಿಲ್ಲ. ಆದರೆ ಎಲ್ಲಾದರೂ ನನ್ನ ಅಜ್ಜಿ ಶಾಲೆಗೆ ಬಂದರೆ ಆ ದಿವಸ ವಿಪರೀತ ಅವಮಾನ ಪಡುತ್ತಿದ್ದೆ. ಆಕೆ ನನ್ನ ಮೇಲೆ ಪುಕಾರುಗಳನ್ನೇನೂ ತರುತ್ತಿರಲಿಲ್ಲ. ನೆಂಟರ ಮನೆಗೆ ಹೊರಟವಳು ಶಾಲೆಗೆ ಸುಮ್ಮನೇ ಭೇಟಿ ಕೊಡುತ್ತಿದ್ದಳು. ಆದರೂ ನನಗೆ ಮುಜುಗರ. ಏಕಿರಬಹುದು? ಈಗ ಅಲ್ಪಸ್ವಲ್ಪ ಅರ್ಥವಾಗು ತ್ತದೆ. ಬಹುಶಃ ಆಕೆಗೆ ನಾಗರಿಕ ಸಭ್ಯತೆ ಇಲ್ಲ. ಹಳ್ಳಿಯ ಶೈಲಿಯವಳು ಎಂಬ ಭಾವನೆಯೇ ನನ್ನ ಅವಮಾನಕ್ಕೆ ಕಾರಣ ಇರಬಹುದು. ಈ ಭಾವನೆ ನನಗೆ ಎಲ್ಲಿಂದ ಬಂತು? ನನ್ನ ಶಿಕ್ಷಣ ಹಾಗೂ ನನ್ನೆದುರು ತೆರೆದುಕೊಂಡಿರುವ ಆಧುನಿಕ ಪ್ರಪಂಚದ ತಿಳುವಳಿಕೆಯೇ ಕಾರಣ. ಏಕೆಂದರೆ ಬಹಳ ಪೂರ್ವದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಗುರು ಕುಲ ಪದ್ಧತಿ ನೋಡುತ್ತೇವೆ. ಪಂಚೆ ಉಟ್ಟು, ಜುಟ್ಟು ಬಿಟ್ಟು ಪಡೆಯುವ ಶಿಕ್ಷಣವಾಗಲಿ, ಗುರುಗಳ ದಾಸರಾಗಿ ಸೇವೆ ಮಾಡುತ್ತ ಪಡೆಯುವ ಶಿಕ್ಷಣವಾಗಲೀ ವಿದ್ಯಾಥರ್ಿಗಳಿಗೆ ಅವಮಾನಕರ ವಾಗಿರಲಿಲ್ಲ. ಅದೊದು ಚಾಲೆಂಜ್ ಆಗಿತ್ತು. ಆದರೆ ಈಗ ಸಮಾನತೆಗಾಗಿ ಎಲ್ಲ ಸಮವಸ್ತ್ರಗಳನ್ನು ಧರಿಸಿಯೂ ಸಂಸ್ಕೃತಿಗೆ ಸಂಬಂಧಪಟ್ಟ ವಿಷಯ ಗಳಿಂದ ನಾವು ಪರಕೀಯರಾಗಿ ಉಳಿಯುತ್ತೇವೆ. ಇದೇ ನಮ್ಮೊಳಗೆ ಸೇರಿಕೊಂಡ ತಪ್ಪು ತಿಳುವಳಿಕೆ ಎಂಬುದು ಬಾಲಗಂಗಾಧರರ ಧ್ವನಿ.

ಇದಕ್ಕೆ ಒಂದು ಅತ್ಯುತ್ತಮವಾದ ಉದಾ ಹರಣೆ ಇದೆ. ಹಲವು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಅಂತಾರಾಷ್ಟ್ರಿಯ ಸಮ್ಮೇಳನ ಜರುಗಿತ್ತು. ಅದರಲ್ಲಿ ಬಾಲಗಂಗಾಧರರೂ ಪಾಲ್ಗೊಂಡಿದ್ದರು. ಆ ಸಭಾಭವನದ ಎರಡೂ ಬದಿಯಲ್ಲಿ ಎರಡು ದೊಡ್ಡ ಮೂರ್ತಿಗಳಿದ್ದವು. ಒಂದು ನತರ್ಿಸು ತ್ತಿರುವ ದುಗರ್ೆ ಹಾಗೂ ಇನ್ನೊಂದು ನತರ್ಿಸುತ್ತಿ ರುವ  ಗಣೇಶ. ಆ ಕಾರ್ಯಕ್ರಮವನ್ನು ಸಂಯೋ ಜಿಸಿದ ಭಾರತೀಯ ಮಹಿಳೆಯ ಹತ್ತಿರ ವಿದೇಶಿ ಗರು ಈ ಮೂರ್ತಿಯನ್ನು ತೋರಿಸಿ ‘ಇದು ಏನು’ ಎಂದು ಕೇಳಿದಳು. ಆ ಮಹಿಳೆ ದುಗರ್ಾ ಮತ್ತು ಗಣೇಶನ ಮೂರ್ತಿ ಎಂದು ವಿವರಿಸಿದಳು. ಈ ಮೂರ್ತಿಗಳು ಏನನ್ನು ಮಾಡುತ್ತಿವೆ ಎಂದು ವಿದೇಶಿಗರು ಪುನಃ ಕೇಳಿದರು. ಮಹಿಳೆಗೆ ತಜಿ ಬಿಜಿಯಾಯಿತು. ‘ಇವುಗಳು ಕಲಾತ್ಮಕ ವಸ್ತುಗಳು’ ಎಂದು ಕೊಸರಾಡುತ್ತ ಹೇಳಿದಳು. ಆಗ ಬಾಲ ಗಂಗಾಧರರು ಮುಂದೆ ಬಂದು ‘ಈ ಮೂರ್ತಿ ಗಳು ಯಾವುದೇ ಕಲಾತ್ಮಕ ವಸ್ತುಗಳಲ್ಲ. ಅವುಗಳು ನಮ್ಮ ದೇವತೆಗಳು’ ಎಂದು ವಿವರಣೆ ನೀಡಿದರು.

ಇಲ್ಲಿ ನಮ್ಮ ಸಂಸ್ಕೃತಿಯನ್ನೇ ವಿರೂಪಗೊಳಿ ಸುವ ಕೆಲಸವನ್ನು ಈ ಮಹಿಳೆ ಮಾಡಿದ್ದಾಳೆ. ಆನೆಯ ತಲೆ, ದಪ್ಪ ಹೊಟ್ಟೆ ಮತ್ತು ಅನೇಕ ಕೈಗ ಳನ್ನು ಹೊಂದಿ ವಿರೂಪವಾಗಿ ನತರ್ಿಸುವುದನ್ನು ಭಾರತೀಯರು ಎಂದಿನಿಂದ ಸೌಂದರ್ಯ ಎಂದು ಪರಿಗಣಿಸಿದ್ದಾರೆ? ಯಾವ ಭಾರತೀಯ ನಾರಿ ಗಣೇಶನಂತೆ ಕಾಣುವವರನ್ನು ವಿವಾಹವಾಗಲು ಇಚ್ಛಿಸುತ್ತಾಳೆ? ದುಗರ್ಾ ಮತ್ತು ಗಣೇಶನ ಕುರಿ ತಾಗಿ ಇರುವ ಕಥೆಗಳನ್ನು ಹೇಳುವ ಬದಲು ಇಲ್ಲ ದ್ದನ್ನು ಹೇಳಿ ನಾವು ಅರಸಿಕ ಶಿಖಾಮಣಿಗಳು ಎಂಬುದನ್ನು ಸಾಬೀತು ಮಾಡುತ್ತಾರೆ. ಇಲ್ಲಿ ಮುಜುಗರ ಪಟ್ಟುಕೊಳ್ಳುವಂತಹದ್ದು ಏನಿದೆ? ನನ್ನ ಶಾಲೆಗೆ ನನ್ನಜ್ಜಿ ಬಂದರೆ ನಾನೇಕೆ ಮುಜುಗರ ಪಟ್ಟುಕೊಳ್ಳಬೇಕು! ಇದೇ ನಮ್ಮ ಸಂಸ್ಕೃತಿಗೆ ಗ್ರಹಣ ಹಿಡಿಸಿದ ವಸಾಹತು ಪ್ರಜ್ಞೆ.

* * * * * * *

 

4 ಟಿಪ್ಪಣಿಗಳು Post a comment
  1. ಗಿರೀಶ್'s avatar
    ಗಿರೀಶ್
    ಫೆಬ್ರ 13 2012

    ಓಹ್ ಇದೆಂತಹ ಅದ್ಭುತ ಬರಹ. ನೂರಾರು ವರ್ಷಗಳಿಂದ ನಾವು ಕಳೆದುಕೊಂಡಿದ್ದೇನು. ಕಳೆದ ೫೦-೬೦ ವರ್ಷಗಳಲ್ಲಿ ನಮ್ಮ ಮೇಲೆ ಹೇರಿದ್ದೇನು ಎನ್ನುವುದನ್ನು ಅದೆಷ್ಟು ಸರಳವಾಗಿ ವಿವರಿಸಿದ್ದೀರಿ. ಗ್ರೇಟ್ ರಮಾನಂದ ಅವರೆ, ಸಂಗ್ರಹ ಯೋಗ್ಯ ಬರಹ. ಪ್ರಕಟಿಸಿದ ನಿಲುಮೆ ತಂಡದವರಿಗೆ ಧನ್ಯವಾದಗಳು

    ಉತ್ತರ
  2. uma bhat's avatar
    ಫೆಬ್ರ 13 2012

    ಹೇ ರಮಾನಂದ, ನಿನ್ನ ಲೇಖನ ತುಂಬಾ ವೈಚಾರಿಕ ಪೂರ್ಣವಾಗಿದ್ದೋ .

    ಉಮಾ ಭಟ್ .

    ಉತ್ತರ
  3. ಅಶ್ವತ್ಥ್ (Ashwath)'s avatar
    ಫೆಬ್ರ 14 2012

    samavastra darisiyooo kaanada samanathe!!! waw .. thumba chennagide …

    ಉತ್ತರ
  4. Shreedhar Barki's avatar
    Shreedhar Barki
    ಫೆಬ್ರ 15 2012

    ªÀ¸ÁºÀvÀÄ ¥ÀæeÉÕ¬ÄAzÀ ¨sÁgÀwÃAiÀÄ ¸ÀA¸ÀÌøwAiÀÄ£ÀÄß £ÉÆÃqÀĪÀÅzÀjAzÁUÀĪÀ C£ÁºÀÄvÀ/UÀAqÁAvÀgÀUÀ¼À£ÀÄß £ÀªÀÄä C£ÀĨsÀªÀPÉÌ ¤®ÄPÀĪÀ zÀȵÁ×AvÀUÀ¼À ªÀÄÆ®PÀ «ªÀj¹¢Ýj. ºÁUÀÆ ¤ªÀÄä F ¯ÉÃR£À ¨sÁgÀwÃAiÀÄ ¸ÀA¸ÀÌøwAiÀÄ£ÀÄß CjAiÀÄĪÀ°è (¥Á±ÁÑvÀågÀ CzsÀåAiÀÄ£À ZËPÀnÖ£À°è ©A©vÀªÁVgÀĪÀ ¨sÁgÀwÃAiÀÄ ¸ÀA¸ÀÌøwAiÀÄ®è) MAzÀÄ ¸ÀÆPÀÛ ªÀiÁUÀð¸ÀÆaAiÀiÁVzÉ JA§ÄzÀÄ £À£Àß C©üªÀÄvÀ.

    ಉತ್ತರ

Leave a reply to ಅಶ್ವತ್ಥ್ (Ashwath) ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments