ಟಿವಿ ಮಾಧ್ಯಮಗಳು: ಕಳ್ಳನನ್ನು ಹಿಡಿದ ಪೊಲೀಸರನ್ನೇ ಶಿಕ್ಷಿಸಿದ ಕತೆ…
-ಚಂದ್ರಶೇಖರ್ ಮಂಡೆಕೋಲು
ಕಳ್ಳನನ್ನು ಹಿಡಿದ ಪೊಲೀಸರನ್ನೇ ಕಿತ್ತು ಹಾಕುವ ಯೋಜನೆಗೆ ನಮ್ಮ ಆಳುವವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ಹೇಸಿಗೆ ಮಾಡಿದ್ದನ್ನು ಯಾವ ನಾಚಿಕೆಯೂ ಇಲ್ಲದೆ ಸಮಥ್ರಿಸಿಕೊಳ್ಳುವವರು ನಮ್ಮೆದುರಿದ್ದಾರೆ ಎಂದರೆ ಏನೆನ್ನಲಿ? ಬಹುಶಃ ಇವೆಲ್ಲದಕ್ಕೂ ಹದಗೆಡುತ್ತಿರುವ ರಾಜಕಾರಣಿಗಳ ನೈತಿಕತೆಗಿಂತಲೂ, ಮಾಧ್ಯಮಗಳ ಕಟ್ಟೆಚ್ಚರವೇ ಕಾರಣ ಎಂದು ನಂಬಿದಂತಿದೆ ನಮ್ಮ ಸರಕಾರ. ಹೋದಲ್ಲೆಲ್ಲ ಹಿಂಬಾಲಿಸುತ್ತಲೇ, ತಮ್ಮ ಅನೈತಿಕತೆಯನ್ನು ಜಗತ್ತಿನೆದುರು ಸಾರಾಸಗಟಾಗಿ ಅನಾವರಣಗೊಳಿಸುತ್ತಿರುವ ಮಾಧ್ಯಮಗಳ ಗುಮ್ಮಕ್ಕೆ ಸರಕಾರ ಬೆದರಿದೆಯೇ? ಸದನ ಕಲಾಪವನ್ನು ಬಿತ್ತರಿಸಲು ಪ್ರತ್ಯೇಕ ಸರಕಾರಿ ಚಾನೆಲ್ ಪ್ರಸ್ತಾವ ಮುಂದಿಟ್ಟಿರುವುದು ಈ ಗುಮಾನಿ ಮೂಡಲು ಕಾರಣ.
ಲೋಕಸಭೆ, ರಾಜ್ಯ ಸಭೆಗಳ ಅಧಿವೇಶನವನ್ನು ಬಿತ್ತರಿಸಲು ಕೇಂದ್ರದಲ್ಲೊಂದು ಪ್ರತ್ಯೇಕ ಚಾನೆಲ್ ಇದೆ ಸರಿ. ಅಲ್ಲಿ ಅಂಥ ಚಾನೆಲ್ ಆರಂಭಿಸಿರುವುದಕ್ಕೂ ಒಂದು ಗಟ್ಟಿ ಕಾರಣ ಇದೆ. ದೇಶದ ಕೇಂದ್ರ ಬಿಂದುವಂತಿರುವ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನು ದೇಶ ಬಾಂಧವರೆಲ್ಲಾ ನೋಡಬೇಕು. ಅವಷ್ಟನ್ನೂ ಪ್ರಸಾರಿಸಲು ನವದೆಹಲಿಯಲ್ಲಿರುವ ಚಾನೆಲ್ಗಳು, ಎಲ್ಲಾ ರಾಜ್ಯಗಳಲ್ಲಿರುವ ಸ್ಥಳೀಯ ಚಾನೆಲ್ ಪ್ರತಿನಿಧಿಗಳು ತಮ್ಮ ಕ್ಯಾಮರಾ ಸಮೇತ ಸಂಸತ್ತಿನಲ್ಲಿ ಸ್ಟ್ಯಾಂಡ್ ಊರಿದರೆ ಜಾಗ ಎಲ್ಲಿ ಸಾಕಾದೀತು? ಈ ಪ್ರಮುಖ ಉದ್ದೇಶದಿಂದ ಸಂಸತ್ ಕಲಾಪದ ಪ್ರಸಾರಕ್ಕೆಂದು ಪ್ರತ್ಯೇಕ ಚಾನೆಲನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅದಕ್ಕೆ ಬೇಕಾದಷ್ಟು ದುಡ್ಡೂ ಕೇಂದ್ರದಲ್ಲಿತ್ತು. ಯಶಸ್ವಿಯಾುತು ಕೂಡಾ. ಆದರೆ ರಾಜ್ಯದಲ್ಲಿ ಇಂಥ ದದ್ರು ಇದೆಯಾ? ನಮ್ಮಲ್ಲಿರುವ ಆರೇಳು ಚಾನೆಲ್ಗಳ ಕ್ಯಾಮರಾ ಸ್ಟ್ಯಾಂಡ್ ಊರುವುದಕ್ಕೆ ಕೆಂಪೇಗೌಡರು ಕಟ್ಟಿಸಿದ ನಮ್ಮ ಹೆಮ್ಮೆಯ, ಅಷ್ಟು ದೊಡ್ಡ ಸೌಧದಲ್ಲಿ ಜಾಗ ಸಾಕಾಗದಾ?
ವೊನ್ನೆ ಮಾಸ್ಟರ್ ಹಿರಣ್ಣಯ್ಯ ಅವರು ವಾಹಿನಿಯ ಕಾಯ್ರಕ್ರಮವೊಂದರಲ್ಲಿ ಹೇಳಿದ್ದರು- ಕಾಲ ಕೆಟ್ಟು ಹೋಗಿದೆ ಸ್ವಾಮೀ, ಸದನದಲ್ಲೇ ಹುಡುಗಿಯನ್ನು ರೇಪ್ ಮಾಡುವ ಕಾಲ ದೂರದಲ್ಲೇನೂ ಇಲ್ಲ, ನೋಡ್ತಿರಿ ಅಂತ. ಈಗ ಅಲ್ಲಿ ಬ್ಲೂ ಫಿಲಂ ನೋಡಿದ್ದಾರೆ, ಇನ್ನೇನೇನು ಮಾಡ್ತಾರೋ? ಇವೆಲ್ಲದರ ಅರಿವಿದ್ದೂ ನಮ್ಮ ಸರಕಾರ ಮಾಧ್ಯಮಗಳ ಕ್ಯಾಮರಾ ಲೆನ್್ಸಗೆ ಬೆದರಿ ಇಂಥ ನಿಧ್ರಾರಕ್ಕೆ ಬಂದಿದೆಯೇ? ಸರಕಾರಿ ಚಾನೆಲ್ ಎಂದ ಮೇಲೆ ಅವರು ಏನು ಮಾಡಿದ್ರೂ ನಮಗೆ ತೋರಿಸುತ್ತಾರಾ? ಮತ್ತಷ್ಟು ಓದು 
ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ್ಲ
-ರಾಕೇಶ್ ಎನ್ ಎಸ್

ರುದ್ರಾಕ್ಷಿ
-ಸುಗುಣ ಮಹೇಶ್
“ರುದ್ರಾಕ್ಷಿ” ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ. “ರುದ್ರ್ಚ ಮತ್ತು ಅಕ್ಷ” ಎಂಬ ಎರಡು ಶಬ್ಧಗಳಿಂದಾದ ರೂಪವೇ ರುದ್ರಾಕ್ಷಿ. “ರುದ್ರ” ಎಂದರೆ ಶಿವನ ಮತ್ತೊಂದು ಹೆಸರು. “ಅಕ್ಷ” ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ.





