ವಿಶ್ವಕ್ಕೆ ಸೆಡ್ಡು ಹೊಡೆದು ನಿಂತಿರುವ ಇರಾನ್ ಎಂಬ ಪರಾಕ್ರಮಿ
ಒಂದು ಕಾಲದಲ್ಲಿ ಇರಾಕ್ ಅನ್ನೋ ರಾಷ್ಟ್ರ ಅಮೆರಿಕ ಸೇರಿದಂತೆ ಇಡೀ ವಿಶ್ವಕ್ಕೆ ಸವಾಲೆಸೆದಿತ್ತು. ಆದರೆ ಆ ದೇಶದ ಬತ್ತಳಿಕೆಯಲ್ಲಿ ಅಷ್ಟೊಂದು ಅಸ್ತ್ರಗಳಿರಲಿಲ್ಲ. ಆದರೆ ಇರಾನ್ ಅನ್ನೋ ದೇಶ ಇದೀಗ ಪೂರ್ಣ ಸಿದ್ದತೆಯ ಜೊತೆ ವಿಶ್ವದ ಮುಂದೆ ನಾನೆಷ್ಟು ಪರಾಕ್ರಮಿ ಅನ್ನೋದನ್ನ ತೋರಿಸಿದೆ.ನಿನ್ನೆ ಅಂದರೆ ಬುಧವಾರ ಇರಾನ್ ಪ್ರಥಮ ಬಾರಿಗೆ ದೇಶೀಯವಾಗಿ ನಿರ್ಮಿಸಿರುವ ಪರಮಾಣು ಇಂಧನದ ಸರಳುಗಳನ್ನು ಸಂಶೋಧನಾ ಸ್ಥಾವರಗಳಿಗೆ ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ತನ್ನ ತಾಕತ್ತನ್ನ ಹಾಗು “ತನ್ನನ್ನ ಮುಟ್ಟಿದರೆ ತಟ್ಟದೆ ಬಿಡೆನು” ಅನ್ನೋ ಎಚ್ಚರಿಕೆಯನ್ನ ಅಮೆರಿಕ ಸೇರಿದಂತೆ ಎಲ್ಲಾ ಪಾಶ್ಚಾತ್ಯ ದೇಶಗಳಿಗೆ ರವಾನೆ ಮಾಡಿದೆ. ಟೆಹರಾನ್ ಉತ್ತರ ಭಾಗದಲ್ಲಿರುವ ಸ್ಥಾವರಕ್ಕೆ ಸಲಾಕೆಗಳನ್ನ ಅಳವಡಿಸುವ ಮೂಲಕ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿ ನೆಜಾದ್ ಚಾಲನೆ ನೀಡಿದರು. ಇದರ ಜೊತೆ ಮತ್ತೊಂದು ಆಘಾತ ನೀಡಿದ ಇರಾನ್ ಅದ್ಯಕ್ಷ ನೆದರ್ಲ್ಯಾಂಡ್ಸ್, ಸ್ಪೇನ್, ಇಟಲಿ, ಫ್ರಾನ್ಸ್, ಗ್ರೀಸ್, ಪೋರ್ಚುಗಲ್‌ಗಳಿಗೆ ಇಂಧನ ರಫ್ತು ನಿಲ್ಲಿಸಲಾಗಿದೆ ಎಂದು ಘೋಷಣೆ ಮಾಡುವ ಮೂಲಕ ತಾನು ಯುದ್ದಕ್ಕೆ ಸಿದ್ದ ಅನ್ನೋದನ್ನ ಪರೋಕ್ಷವಾಗಿ ಜಗತ್ತಿಗೆ ಎಚ್ಚರಿಕೆಯ ಗಂಟೆಯನ್ನ ಹೊಡೆದರು. ತದ ನಂತರ ಮಾತನಾಡಿದ ಈ ಪರಾಕ್ರಮಿ “ನಮ್ಮವಿರೋಧಿಗಳೇನು ಬಲಾಢ್ಯರಲ್ಲ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ” ಎಂದು ಅಮೆರಿಕಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.
ಯುದ್ದ ನಡೆದರೆ ಏನಾಗಬಹುದು – ಸುತ್ತಲು ಶತ್ರುಗಳನ್ನ ಹೊಂದಿರುವ ರಾಷ್ಟ್ರ ಇರಾನ್, ಇರಾನ್ ಮೇಲೆ ತನ್ನ ನೆರೆಯ ಇಸ್ರೇಲ್ ಈಗಲೂ ಯುದ್ದಕ್ಕೊಸ್ಕರ ಹಾತೊರೆಯುತ್ತಿದೆ. ಯುದ್ದ ಪ್ರಾರಂಭಗೊಂಡರೆ ಅಮೆರಿಕಕ್ಕೆ ಮೊದಲು ಸಾಥ್ ನೀಡುವುದು ಇಸ್ರೇಲ್, ಇಸ್ರೇಲ್ ಕೂಡ ಅಷ್ಟೇ ಪರಾಕ್ರಮಿ ಇಸ್ರೇಲಿನಲ್ಲಿ ಪ್ರತಿಯೊಬ್ಬರೂ ಯೋಧರೇ. ಕಾರಣ ಇಸ್ರೇಲಿ ಪ್ರಜೆಯಾಗಿ ಹುಟ್ಟಿದವರು ತಮ್ಮ ಜೀವಿತ ಅವಧಿಯಲ್ಲಿ ಎರಡು ವರ್ಷ ಸೇನೆಯಲ್ಲಿ ಕೆಲಸ ಮಾಡಲೇಬೇಕು. ಹೈಸ್ಕೂಲ್ ಶಿಕ್ಷಣ ಮುಗಿಸಿದ ಬಳಿಕ ಎರಡು ವರ್ಷ ಕಡ್ಡಾಯವಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕೆಂದು ಆ ದೇಶದ ಕಾನೂನು ಹೇಳುತ್ತದೆ. ಯಾವುದೇ ಸಬೂಬು ಹೇಳುವಂತಿಲ್ಲ. ದೇಶ ಕಾಯುವುದು ಬರೀ ಸೈನಿಕರ ಕೆಲಸ ಮಾತ್ರ ಅಲ್ಲ. ಅದು ಪ್ರತಿಯೊಬ್ಬರ ಕರ್ತವ್ಯ ಅನ್ನೋದು ಇಸ್ರೇಲಿ ಸರಕಾರದ ನೀತಿ. ಅದ್ದರಿಂದ ಇಸ್ರೇಲ್ ಬೆಂಬಲ ಪಡೆಯುವ ಅಮೆರಿಕ ತನ್ನ ಸೇನಾನೆಲೆಯನ್ನ ಇಸ್ರೇಲ್ ನಲ್ಲಿ ಸ್ಥಾಪಿಸುವುದಂತು ಖಂಡಿತ.
ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿಗೆ ದೆಹಲಿ, ಬ್ಯಾಂಕಾಕ್ ಹಾಗು ಜಾರ್ಜಿಯಾದಲ್ಲಿ ಇರುವ ತನ್ನ ರಾಯಭಾರಿ ಕಛೇರಿಗಳ ಸ್ಪೋಟ ಯತ್ನದ ರೂವಾರಿ ಇರಾನ್ ಅನ್ನೋದು ಇಸ್ರೇಲ್ ನ ನೇರ ಆರೋಪ. ಏನೇ ಇರಲಿ ಇರಾನ್ ನ ಈ ನಡೆ ವಿಶ್ವಮಟ್ಟದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕ ಇನ್ನು ಕೂಡ ತನ್ನ ಪ್ರತಿಕ್ರಿಯೆಯನ್ನ ಹೊರಡಿಸಿಲ್ಲ. ಈ ಯುದ್ದ ನಡೆದರೆ ಕಂಡು ಕೇಳರಿಯದ ಘನಘೋರ ಯುದ್ದಕ್ಕೆ ಸಾಕ್ಷಿಯಗುವುದಂತೂ ನಿಶ್ಚಿತ.
* * * * * * *
ಚಿತ್ರಕೃಪೆ : irdial.com





ಮೂರನೇ ಮಹಾಯುದ್ಧ ನೀರಿಗಾಗಿ ಅಂತ ಕೇಳಿದ್ದೇನೆ. ಈ ಲೇಖನವನ್ನು ಓದಿದ್ಮೇಲೆ ಅನ್ಸಿದ್ದು, ಪೆಟ್ರೋಲ್, ಡಿಸೇಲ್ಗಾಗಿಯೂ ಯುದ್ಧ ಆಗಬಹುದೇನೋ ಎಂದು ನನ್ನ ಅನಿಸಿಕೆ.
ಇಂದಿನ ಇರಾನ್, ಒಂದು ಮತಾಂಧ ಭಯೋತ್ಪಾದಕ ದೇಶ.
ಅದು ಎಷ್ಟೇ ಪರಾಕ್ರಮಿಯಾಗಿದ್ದರೂ, ಈ ಸತ್ಯ ಬದಲಾಗುವುದಿಲ್ಲ.
ಹೀಗಾಗಿ ಇರಾನ್ ಅನ್ನು ಒಂದು ಹೀರೋವಿನಂತೆ ತೋರಿಸುವುದು ವಿವೇಕವಲ್ಲ.
ಹಾಗೆಂದು ಅಮೆರಿಕವೇನೂ ಸಾಧುವಲ್ಲ. ಆದರೆ, ಅಮೆರಿಕವನ್ನು ವಿರೋಧಿಸುವುದಕ್ಕಾಗಿ ಇರಾನ್ ಅನ್ನು ಸಮರ್ಥಿಸುವುದು ಸಲ್ಲದು.
ಇರಾನಿಗೆ ಚೈನಾ ದೇಶವು ಬೆಂಬಲ ನೀಡುತ್ತದೆ. ಪಾಕಿಸ್ತಾನ ಹಾಗೂ ಆಫ಼್ಘಾನಿಸ್ತಾನಗಳೂ ಇರಾನಿನ ಜೊತೆಗಿವೆ.
ಸೋತು ಸುಣ್ಣವಾಗಿದ್ದರೂ ಇರಾಕ್ ದೇಶವು ಇರಾನ್ ಅನ್ನೇ ಸಮರ್ಥಿಸುತ್ತದೆ.
ಇನ್ನು ಅಮೆರಿಕಕ್ಕೆ ಯೂರೋಪ್ ಹಾಗೂ ಇಸ್ರೇಲಿನ ಬೆಂಬಲವಿದೆ.
ಇವೆಲ್ಲವೂ ಹೊಡೆದಾಟಕ್ಕೆ, ಪರಸ್ಪರ ಮೇಲಾಟಕ್ಕೆ ನಿಂತರೆ ಯಾರಿಗೆ ತಾನೇ ಲಾಭ?
ಸರ್ ಭಾರತದಲ್ಲಿ ಪೆಟ್ರೋಲ್ ಗೆ ೭೧ ರೂಪಾಯಿ … ಎಲ್ಲ ರಾಷ್ಟ್ರಗಳಿಗಿಂತ ಭಾರತಕ್ಕೆ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶ ಇರಾನ್ ಸರ್ … ಅತಿ ಮಿತ್ರ ರಾಷ್ಟ್ರ ಕೂಡ .. ಸರ್ ನೀವು ನಿನ್ನೆ ಯ ನ್ಯೂಸ್ ಪೇಪರ್ ನೋಡಿದ್ರೆ ಗೊತ್ತಿರಬಹುದು ಅಮೆರಿಕ ಭಾರತ ವಿರುದ್ದ ತಿರುಗಿ ಬಿದ್ದಿದೆ ಭಾರತ ಇರಾನ್ ಜೊತೆ ಸ್ನೇಹ ಮುಂದುವರಿಸುವ ತಿರ್ಮಾನ ಕೈಗೊಂಡಿದ್ದೆ .. ಇರಾನ್ ಭಾರತಕ್ಕೆ ತೈಲ ರಫ್ತು ಮಾಡದೆ ಇದ್ರೆ ಪೆಟ್ರೋಲ್ ಬೆಲೆ ೨೦೦ ಕಂಡಿತ .
ಮಾನ್ಯರೇ, ಸಾಮಾನ್ಯವಾಗಿ ಆರ್ಥಿಕವಾಗಿ ಅಥವಾ ಸಂಪತ್ತು ಇರುವ ದೇಶಗಳು ಕೊಟ್ಟು ಕೊಡುವ ಪದ್ದತಿಯಿಂದ ದೇಶವನ್ನು ಸುರಕ್ಷಿತವಾಗಿತ್ತುಕೊಂಡು. ಪ್ರಜೆಗಳಿಗೆ ಉತ್ತಮ ಸೌಲಭ್ಯ ಕೊಟ್ಟು ಪ್ರಪಂಚಕ್ಕೆ ಮಾದರಿಯಾಗಿ ಬದುಕಬಹುದು. ಹೀಗೆ ವಿನಾಕಾರಣ ಅನಿವಾರ್ಯವಾಗಿ ಬೇಕಾಗಿರುವ ಇನ್ದನವಿದೆ ಎಂದು ಕಾಲು ಕೆರೆಯುವುದು ಸೂಕ್ತವಲ್ಲ. ಇದರಿಂದ ಎರಡು ಮದದಾನೆಗಳು ಹೋರಾಟಕ್ಕೆ ನಿಂತರೆ. ಕಡು ಹಾಲಾಗುವುದುಅಲ್ಲದೆ. ಪರಿಸರವು ಹಾಳಾಗುತ್ತದೆ. ಇದರ ಪರಿವೆ ಮದದಾನೆಗಲಿಗಿರುವುದಿಲ್ಲ. ಪ್ರತಿಷ್ಥೆಗಾಗಿ ಎರಡು ದೇಶಗಳು ಉದ್ದಕ್ಕೆ ನಿಂತರೆ. ನೆರೆ ದೇಶಗಳು ವಿನಾಕಾರಣ ಎಲ್ಲ ರೀತಿಯ ಸಂಕಷ್ಟಕ್ಕೆ ಇದಾಗಬೇಕಾಗುತ್ತದೆ. ಇದಕ್ಕೆ ವಿಶ್ವ ಸಂಸ್ತೆಯು ಕಾರ್ಯಪ್ರವುತ್ತವಾಗಬೇಕು. ಅಲ್ಲವೇ? ವಂದನೆಗಳೊಡನೆ
ಇರಾನನ್ನೂ ಪರಾಕ್ರಮಿ ಅನ್ನೊದು, ಇಸ್ರೇಲನ್ನೂ ಪರಾಕ್ರಮಿ ಅನ್ನೊದು, ಆಮೇಲೆ ನೀವು ಕುತೂಹಲದಿಂದ ಮುಂದೇನಾಗುತ್ತೊ ಅಂತ ನೋಡ್ತಾ ಕಾದಿರೋದು ನೋಡಿದ್ರೆ , ಅಲ್ಲ ಸ್ವಾಮಿ, ನೀವೇನಾದ್ರೂ ಕ್ರಿಕೇಟ್ ಮ್ಯಾಚ್ ಅಥವಾ ಫುಟ್ಬಾಲ್ ಮ್ಯಾಚ್ ಆಡಿಸ್ತಿದಿರ?
ಈ ಅಮೇರಿಕ, ಆ ಇರಾನ ಎರಡೂ ದರಿದ್ರ ರಾಷ್ಟ್ರಗಳೇ, ಎರಡೂ ವಿಶ್ವಶಾಂತಿಗೆ ಮಾರಕಗಳು.
ಪ್ರಪಂಚದಲ್ಲಿ ಯಾರು ಪರಕ್ರಮಿಗಳಲ್ಲ ಪ್ರಳಯ ಅಂದರೆ ಇದೇನೆ ……. ಇಲ್ಲಿ ಯಾವ ಕ್ರಿಕೆ ಮ್ಯಾಚ್ ನಡೆಯುತ್ತಿಲ್ಲ ಸ್ವಾಮಿ … ನೀವು ಅದೇ ಗುಂಗಿನಲ್ಲಿದ್ದಿರ … ಅಮೆರಿಕ ವಸ್ ಇರಾನ್ ಅನ್ನೋ ರಾಷ್ಟ್ರ ದ ನಡುವೆ ಯುದ್ದ ಪ್ರರಂಬ ನಡೆದರೆ ಅತಿ ನಷ್ಟ ಅನುಭವಿಸುವ ರಾಷ್ಟ್ರ ಅಂದರೆ ………… ಭಾರತ …….. ಪೆಟ್ರೋಲ್ ಪೆಟ್ರೋಲ್ ಪೆಟ್ರೋಲ್ ಮತ್ತೊಮ್ಮೆ ದುಬಾರಿ ಯಾಗಲಿದೆ ಸರ್ ನಾನು ಒಂದು ಒಮ್ನಿ ಕಾರ್ ಕರಿದಿಸಿದ್ದಿನಿ ಅದಕ್ಕೆ ೭೧ ರೂಪಾಯಿ ಪೆಟ್ರೋಲ್ ಕುಡಿಸಿ ಕುಡಿಸಿ ಸುಸ್ತಾಗಿದ್ದೀನಿ ಇನ್ನು ಇರಾನ್ ಯುದ್ದ ನಡೆದರೆ ನನ್ನ ಒಮ್ನಿ ಗತಿ ಏನು ಅನ್ನೋದೇ ಯೋಚನೆ ಆಗಿದೆ …
ಆಹಾ ಎಷ್ಟು ಚೆನ್ನಾಗಿರುತ್ತೆ ಅಗ ಅಲ್ಲವೆ? ಮತ್ತೆ ಜನ ಎಲ್ಲ ಸೈಕಲ್ ತುಳಿತಾರೆ, ಹಳ್ಳಿಗಳಲ್ಲಿ ಎತ್ತಿನ ಗಾಡಿ ಕಟ್ಟುತ್ತಾರೆ, ವಾಯು ಮಾಲಿನ್ಯ ಕಾಡಿಮೆ ಆಗುತ್ತೆ, ಮೈಸೂರಿನಲ್ಲಿ ಟಾಂಗಾ ಮತ್ತೆ ಮೆರುಗು ಪಡ್ಕೊಳುತ್ತೆ, ಆ ದಿನ ಬೇಗ ಬರಲಿ ಅಂತ ಆಶಿಸುತ್ತೇನೆ 😉
ಉತ್ತಮ ಮಾಹಿತಿಯುಕ್ತ ಲೇಖನ ಗೆಳೆಯರೆ,
1971 ರ ಇಂಡಿಯಾ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಎಲ್ಲ ಮುಸ್ಲಿಂ ರಾಷ್ಟ್ರಗಳ ವಿರೋಧದ ಮಧ್ಯೆಯೂ ಸದ್ದಾಂ ಭಾರತಕ್ಕೆ ತೈಲ ಟ್ಯಾಂಕರ್ ಗಳನ್ನು ಕಳಿಸಿಕೊಟ್ಟಿದ್ದ. ಕೃತಘ್ನ ಭಾರತ ಅವನ ನೇಣುಕುಣಿಕೆಯ ವಿರುದ್ಧ ಕ್ಷೀಣವಾಗಿ ಕುಯ್ ಗುಟ್ಟಿತಷ್ಟೇ!
ಒಂದೋ ತೈಲಕ್ಕಾಗಿ ಮುಸ್ಲಿಂ ರಾಷ್ಟ್ರಗಳನ್ನು ಓಲೈಸಬೇಕು. ಅಥವಾ ಡಾಲರ್ ಗಾಗಿ ಅಮೆರಿಕವನ್ನು ಓಲೈಸಬೇಕು. ಎರಡೂ ಆತ್ಮಹತ್ಯಾತ್ಮಕ ನಡೆಗಳೇ!!
ಕ್ಯೂಬಾದ ಜನ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಸುಖವಾಗಿ ಬಾಳುತ್ತಿದ್ದಾರೆ ಯಾರ ಹಂಗೂ ಇಲ್ಲದೇ..ಅದೇ ನಮಗೆ ಒಳ್ಳೆಯ ದಾರಿ!!!
http://en.wikipedia.org/wiki/The_Power_of_Community:_How_Cuba_Survived_Peak_Oil
http://en.wikipedia.org/wiki/The_Power_of_Community:_How_Cuba_Survived_Peak_Oil
ಯಾವ ದೇಶವೂ ಇವುಗಳ ಈ ಕಿತಾಪತಿಯಿಂದ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಇರಾನ್ ಮತ್ತು ಅಮೆರಿಕಾ ಮಹಾನ ಸ್ವಾರ್ಥಿಗಳು. ಭಾರತ ಸ್ಪಶ್ಟ ಹೆಜ್ಜೆ ಇಟ್ಟರೆ ಒಳ್ಳೇಯದು
ಅಮೇರಿಕಾ ಕೂತರು,ಇಸ್ರೇಲ್ ಕೈ ಕಟ್ಟಿ ಕೂರುವಂತದ್ದಲ್ಲ.ಇನ್ನ ಇರಾನ್ ಎಷ್ಟು ಅಂತ ಮಿಸುಕಾದಬಲ್ಲದು ? ಚೀನಾ ಅನ್ನುವ ದೇಶ ತನಗೆ ಲಾಭವಿಲ್ಲದೆ ಏನು ಮಾಡುವುದಿಲ್ಲ, ಅವರಿಂದ,ಅಮೇರಿಕಾ ವಿರೋಧಿ ಪಾಳಯದಲ್ಲಿದೆ ಅಂತಲೇ ಇರಾನ್ ಬೆನ್ನಿಗೆ ನಿಲ್ಲುವ ರಷ್ಯನ್ನರದೂ ಅದೇ ಕತೆ.ಆದರೂ ಖುದ್ದು ಲಕ್ಷಾಂತರ ಮುಗ್ದರನ್ನ ಕೊಂದ ಕೊಲೆಗಡುಕ ಅಮೇರಿಕಾ ಬುದ್ದಿ ಹೇಳುವುದು ನೋಡಿದರೆ ಗುಲಗಂಜಿಯ ನೆನಪಾಗುತ್ತದೆ…
ಭಾರತ ಯಥಾ ಪ್ರಕಾರ ಅಡ್ಡ ಗೋಡೆಯ ಮೇಲೆ ದೀಪ ಇಡುವುದೇ ಒಳ್ಳೆಯದು… ಬಡಿದಾಡುವವರು ಬಡಿದಾಡಿಕೊಂಡು ಸಾಯಲಿ