ವಿಷಯದ ವಿವರಗಳಿಗೆ ದಾಟಿರಿ

Archive for

8
ಫೆಬ್ರ

ಸಕಲೇಶಪುರ ಹುಸೈನಾಕರೆ ಪ್ರಾಮಾಣಿಕತೆ

– ಅಶ್ರಫ್ ಮಂಜ್ರಾಬಾದ್. ಸಕಲೇಶಪುರ.

ರಥೋತ್ಸವತ್ತ್ಲ್ ಬೂಂತು ಕಿಟ್ಟಿಯೇ ಬಂಗಾರ್ ರೆ ಮಾಲೆ ವಾಪಾಸ್ ಕೊಡುತು ಪ್ರಾಮಾಣಿಕತೆ ಕಾಟಿಯೋ ಸಕಲೇಶಪುರತ್ತೆ ಹುಸೈನಾಕ:

ಸಕಲೇಶಪುರ : ವರ್ಷ ಪ್ರತೀ ನಡಕ್ಕ್ ರೆ ಪೋಲೆ ಫೆಬ್ರವರಿ 8 ತಾರೀಖ್ ರೆಂಡ್ ಸಕಲೇಶಪುರತ್ತೆ ಸಕಲೇಶ್ವರ ಸ್ವಾಮೀ ದೇವಸ್ಥಾನತ್ತೆ ವಾರ್ಷಿಕ ರಥೋತ್ಸವ ಆಯೋಜನೆ  ಆಯಿಂತ್ತ್.  ಊಡ್ರೆ ವಲಳಹಳ್ಳಿ  ಚೊಲ್ಲುರೆ ರಾಯತ್ತೆ  ರಮೇಶ್ ಚೊಲ್ಲುರೆ ಆಲ್ ಅಯಾಲ್ರೆ ಉಮ್ಮರೆ ಒಟ್ಟಿಗೆ ರಥೋತ್ಸವತ್ತೆ ಅಂಡ್ ಪೂಜೆ ಆಕೊನುಗು ಬಂತಿಂತ್ತ್. ಲಬಾಬಿನ್ ಪಳ್ಳಿರೆ ಮುಟ್ಟ ಕಾರ್ ಪಾರ್ಕ್ ಆಕಿತ್ತ್ ಪೂಜೆ ಆಕೊನುಗು ಪೊಂಬೋ ಅಯಾಲ್ರೋ ಕಲ್ತ್ ಲ್ ಇನ್ನೆ ೩೬ ಗ್ರಾಮುರೆ ಬಂಗಾರ್ ರೆ ಮಾಲೆ ಕೀಲ್ ಬೂಂತು ಪೋಯಿತ್ತ್ .

ಆ ಮಾಲೆ ಆನೆಮಹಲ್ ಚೊಲ್ಲುರೆ ರಾಯತ್ತೆ ಕೂಲಿ ಕಾರ್ಮಿಕ ಹುಸೈನಾಕ ಚೊಲ್ಲುರೆ ಆಲ್ಗ್ ಕಿಟ್ಟಿತ್ತ್ . ಮಾಲೆ ಎಡ್ತೋ ಅಯಾಲ್ ಆದ್ರೆ ವಾರೀಸುದಾರರೆ ತೇಡಿತ್ತ್ ಆದ್ರೆ ಹಕ್ಕ್ ದಾರ ಆಯೋ ರಮೇಶ್ ಚೊಲ್ಲುರೆ ಆಲ್ಗ್ ವಾಪಾಸ್  ಕೊಡುತುತ್ತು. ತೆರುಳು ಕಿಟ್ಟಿಯೋ ಸುಮಾರು ಒರು ಲಾಕ್ ಉರುಪೆ ಮೌಲ್ಯ ತ್ತೋ ಬಂಗಾರ್ ವಾಪಾಸ್  ಆಕಿಯೋ ಹುಸೈನಾಕರೆ ಪ್ರಾಮಾಣಿಕತೆರೋ  ರಾಯತ್ತೋ ಆಲ್ಮಾ ರ್ ತಾರೀಫ್ ಆಕಿಯಾರ್ .

8
ಫೆಬ್ರ

ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ

ವಿಜಯ್ ಹೆರಗು

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ
ಸಂಪಾದಕ : ಹೇಳಿ ವಿಜಯ್
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ. ನಂದೊಂದು request ನೀವು ತೋರಿಸ್ತಾ ಇರೋ  ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ.
ಸಂ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ … blur ಮಾಡ್ಬೇಡಿ ಹಾಗೇ ತೋರಿಸಿ ಅಂತ.
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ಸಂ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ.
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ…….. ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ – ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ….. ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ.
ಸಂ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ …….
8
ಫೆಬ್ರ

ಅಪ್ಪು …

-ಹರೀಶ್ ಎಸ್ ಎಚ್

ಕಳೆದವು ಎಷ್ಟೋ ನಿದಿರೆ
ಬಾರದ ರಾತ್ರಿಗಳು ,
ಹುಡುಕುತಿವೆ ಕಣ್ಣುಗಳು
ಬರಲಿಲ್ಲ ನನ್ನವಳು ,
ಮನವ ಕಾಡುತಿವೆ
ನೆನ್ನೆಯ ನೆನಪುಗಳು ,
ಹೃದಯದಲಿ ಉಳಿದಿವೆ
ನನಸಾಗದ ಕನಸುಗಳು …

8
ಫೆಬ್ರ

ಕೇಸರಿಕರಣ ಅಂದರೆ ಕೇಸರಿ ಬಣ್ಣದ ಪುಸ್ತಕವೇ?

– ಅಶ್ವಿನ್ ಅಮೀನ್

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ‘ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್’ ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ ‘ಕೇಸರೀಕರಣ’ ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ ‘ಕೇಸರಿ’ ಎಂಬ ಕಲರ್ ಕೋಡ್ ಕೊಟ್ಟವರು ಯಾರು?… ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ ‘ಭಾರತೀಯ’ ದೊರೆ ‘ಪೌರವ’ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಔರಂಗಜೇಬನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ ‘ಹಸಿರೀಕರಣ’ವಾಗದೆ?!!!! ಅದಕ್ಕೇಕೆ ನೀವು ‘ಹಸಿರು’ ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೇಸರೀಕರಣವಾಗುತ್ತದೆ?

ಮತ್ತಷ್ಟು ಓದು »

7
ಫೆಬ್ರ

ಹುಟ್ಟೋ ಮಕ್ಕಳು ಪ್ರಪಂಚವನ್ನು ನೋಡಲಿ..

-ನಟರಾಜು ಎಸ್ ಎಂ

ಜೂನ್ ತಿಂಗಳ ಸಂಜೆ ಏಳರ ಸಮಯ ಅನಿಸುತ್ತೆ. ನನ್ನ ಮೊಬೈಲ್ಗೆ ಒಂದು ಮೆಸೇಜ್ ಬಂದಿತ್ತು. “ನಿಮ್ಮ ತಂಗೀನ ಆಟೋದಲ್ಲಿ ನಿಮ್ಮ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು” ಅಂತ ಮೆಸೇಜ್ ಮಾಡಿದ್ದವರು ನಾವು ಬಾಡಿಗೆಗಿದ್ದ ಮನೆ ಓನರ್ ಅವರ ಚಿಕ್ಕ ಮಗಳು. ನಾನು ತಕ್ಷಣ ನಮ್ಮ ಮನೆಯ ಮೊಬೈಲ್ ನಂಬರ್ಗೆ ಫೋನ್ ಮಾಡಿದಾಗ ಅತ್ತಲಿನ ನನ್ನ ತಾಯಿಯ ದನಿ ಕಂಡು ನಾನು ಒಂದು ಕ್ಷಣ ನಡುಗಿದ್ದೆ.
“ಅಪ್ಪಾ ಹೊಟ್ಟೆ ನೋವು ಇಲ್ಲ ಏನೂ ಇಲ್ಲ ಸಾಯಂಕಾಲದಿಂದ ಒಂದೇ ಸಮನೆ ರಕ್ತ ಹೋಗ್ತಾ ಅದೆ ಅಂತ ಒಂದು ಆಸ್ಪತ್ರೆಗೆ ಕರಕೊಂಡ್ ಹೋಗಿದ್ದೆ. ಅಲ್ಲಿ ಆಗಲ್ಲ ಅಂತ ದೊಡ್ಡಾಸ್ಪತ್ರೆಗೆ ಬರೆದವ್ರೆ ಕಣಪ್ಪ ನಂಗ್ಯಾಕೋ ಭಯ ಆಗ್ತದೆ” ಅಂತ ನನ್ನ ತಾಯಿ ಅಳುತ್ತಾ ಇತ್ತು. “ಒಂದಷ್ಟು ಹೊತ್ತು ಬಿಟ್ಟು ಫೋನ್ ಮಾಡಪ್ಪ ಆ ಆಸ್ಪತ್ರೆಗೆ ಹೋಗ್ತಾ ಇದ್ದೀವಿ” ಅಂತ ಹೇಳಿ ನಮ್ಮ ತಾಯಿ ಫೋನಿಟ್ಟಿತ್ತು. ಈಗಾಗಲೇ ಒಂದು ಜೀವವನ್ನು ಕಳೆದುಕೊಂಡಿದ್ದ ನಾವು ನಮ್ಮ ಮನೆಯ ಮತ್ತೊಂದು ಜೀವ ಜೀವನ್ಮರಣದ ಮಧ್ಯೆ ಹೋರಾಡ್ತಾ ಇದೆ ಅಂತ ಗೊತ್ತಾದಾಗ ಯಾಕೋ ನಾನು ತುಂಬಾ ಗಾಬರಿಯಾಗಿದ್ದೆ. ಮತ್ತೆ ಒಂದರ್ಧ ಗಂಟೆ ಬಿಟ್ಟು ಮತ್ತೆ ಫೋನ್ ಮಾಡಿದಾಗ “ಈ ದೊಡ್ಡಾಸ್ಪತ್ರೆಯಲ್ಲೂ ಆಗಲ್ಲ ಅಂದುಬುಟ್ರು ಕಣಪ್ಪ. ಎರಡು ಮಕ್ಕಳವೆ. ದಿನ ತುಂಬಿಲ್ಲ, ರಕ್ತ ಜಾಸ್ತಿ ಹೋಗದೆ ತಕ್ಷಣ ಆಪರೇಷನ್ ಮಾಡ್ಬೇಕು ಇಲ್ಲ ಅಂದ್ರೆ ತಾಯಿ ಮಕ್ಕಳು ಮೂರು ಜೀವಕ್ಕೂ ತೊಂದ್ರೆ ಅಂತ ಹೇಳುದ್ರು” ಅಂತ ನಮ್ಮ ತಾಯಿ ಗುಳೋ ಅಂತ ಅಳುತ್ತಿತ್ತು. ಆಗ ನಾನಿದ್ದುದು ದೂರದ ಕಲ್ಕತ್ತದಲ್ಲಿ. ನಮ್ಮ ತಾಯಿ ಮಾತನಾಡುತ್ತಿದುದು ಹೆರಿಗೆಗೆ ದೊಡ್ಡಾಸ್ಪತ್ರೆ ಅಂತ ಕರೆಯಲ್ಪಡುವ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮುಂಭಾಗದಿಂದ.
7
ಫೆಬ್ರ

ಆ ವಿಧಿಯಾಟವ ಬಲ್ಲವರಾರು ?

 –  ಪ್ರಸಾದ್.ಡಿ.ವಿ.

ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.

ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ತನ್ನ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, “ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?” ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, “ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ” ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.

ಮತ್ತಷ್ಟು ಓದು »

6
ಫೆಬ್ರ

ಭಾರತೀಯ ಸೇನೆಯಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಉದ್ಯೋಗ

ಕೃಪೆ : ಭಾರತೀಯ ಸೇನೆ

ಪ್ರಪಂಚದಲ್ಲೇ ಅತಿ ಉನ್ನತವಾದ ಸೇನಾ ಬಲವನ್ನು, ತಾಂತ್ರಿಕತೆಯನ್ನು ಹೊಂದಿರುವ ಭಾರತೀಯ ಸೇನೆ ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಗುಜರಾಯಿಸಲು ಕೊನೆ ದಿನಾಂಕ ಮಾರ್ಚ್ ೧ ೨೦೧೨. ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಕೊಂಡಿಯನ್ನು ಅನುಸರಿಸಿ.

ಭಾರತೀಯ ಸೇನೆ

 

 

 

6
ಫೆಬ್ರ

ದೇಶ – ಭಾಷೆಗಳ ನಡುವೆ

– ರಾಕೇಶ್ ಶೆಟ್ಟಿ

ಆಗ ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಗಳು.ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!

ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ “ಚಿಂತನಗಂಗಾ” ಪುಸ್ತಕದ ಸುತ್ತ ಅಂತರ್ಜಾಲದಲ್ಲಿ ನಡೆಯುತ್ತಿರುವ ಚರ್ಚೆ ಫ಼ಾಲೋ ಮಾಡುವಾಗ “ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ” ಎನ್ನುವ ಪದ ಬಳಕೆ ನೋಡಿ ನಗು ಬಂತು.ಅಸಲಿಗೆ ಯಾವುದೇ ಸಂಘಟನೆ,ಸ್ವಸ್ಥ ಸಮಾಜದಲ್ಲಿ ವಿಚಾರ ಸ್ವಾತಂತ್ರ್ಯವಿರಲೇಬೇಕು ಅದು ಇರಲಿ ಅಂತ ಕೇಳುವುದು ತಪ್ಪೇನು ಅಲ್ಲ.ಆದರೆ ವಿಚಾರ ಸ್ವಾತಂತ್ರ್ಯದ ಬಗ್ಗೆ ಕೇಳಿದವರು ಯಾರು ಅನ್ನುವುದು ಮುಖ್ಯವಾಗುತ್ತದಲ್ಲವೇ? ವೇದಾಂತ ಇರೋದು ಬೇರೆಯವ್ರಿಗೆ ಹೇಳೋಕ್ ಮಾತ್ರ ಅಂದುಕೊಂಡವರಿಗಾಗಿಯೇ ಗಾಂಧೀಜಿಯವರು ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’  ಅಂದಿದ್ದು.

ಮತ್ತಷ್ಟು ಓದು »

6
ಫೆಬ್ರ

ಸಂಸ್ಕೃತಿ ಸಂಕಥನ – 21 – ಬುದ್ಧ ಬ್ರಾಹ್ಮಣ ವಿರೋಧಿಯೇ?

-ರಮಾನಂದ ಐನಕೈ

ನಿಜಕ್ಕೂ  ಇದು ಕುತೂಹಲದ ಪ್ರಶ್ನೆ. ಈ ಕುರಿತು ಸಂಶೋಧನೆ ಮಾಡಿದ ಬಾಲಗಂಗಾಧರರ ಅಭಿಪ್ರಾಯಗಳು ನಮಗೆ ಹೊಸತೊಂದು ಸತ್ಯದ ಲೋಕವನ್ನು ತೆರೆದುಕೊಡುತ್ತದೆ. ಬುದ್ಧ ವರ್ಣ ವ್ಯವಸ್ಥೆಯನ್ನು ದ್ವೇಷಿಸಿದ್ದು ನಿಜವೇ? ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡೆ ಆತ ಬ್ರಾಹ್ಮಣತ್ವವನ್ನು ಚರ್ಚೆಗೆ ಎಳೆಯುತ್ತಾನೆ. ಇದು ಹೇಗೆ ಸಾಧ್ಯ? ನಮ್ಮ ದೇಶದ ದಲಿತರು ಬುದ್ಧಿಸಂನ್ನು ಆರಾಧಿಸು ವುದು ಅದು ನಿಜವಾದ ಮಾನವೀಯ ಧರ್ಮ ಅಂತಲೋ ಅಥವಾ ಬುದ್ಧಿಸಂ ಬ್ರಾಹ್ಮಣರನ್ನು ದ್ವೇಷಿಸುತ್ತದೆ ಎಂಬ ಕಲ್ಪಿತ ಕಥೆಯ ಪ್ರೇರಣೆ ಯಿಂದಲೋ?

ಹಿಂದೂಯಿಸಂ ಹಾಗೆ ಬುದ್ಧಿಸಂ ಕುರಿ ತಾಗಿಯೂ ವರ್ಣರಂಜಿತ ಕಥೆ ಕಟ್ಟಿದವರೂ ಐರೋಪ್ಯರೆ. ಏಕೆಂದರೆ ಬುದ್ಧಿಸಂನ್ನು ಕೂಡಾ ಅವರು ತಮ್ಮ ಕನ್ನಡಕದಿಂದಲೇ ನೋಡಿದರು. ಜೊತೆ ಜೊತೆಗೆ ಹಿಂದೂಯಿಸಂ ಕುರಿತಾದ ಕೆಲವು ಕಗ್ಗಂಟುಗಳಿಂದ ತಪ್ಪಿಸಿಕೊಳ್ಳಲು ಬುದ್ಧಿಸಂನ್ನು ವೈಭವೀಕರಿಸುವ ಅಗತ್ಯ ಅವರಿಗಿತ್ತು. ಬುದ್ಧಿಸಂ ಅನ್ನುವುದು ಹಿಂದೂಯಿಸಂಗಿಂತ ಉತ್ತಮವಾದ ರಿಲಿಜನ್ ಎಂದು ಭಾವಿಸಲು ಅವರಲ್ಲಿ ಸಾಕಷ್ಟು ಸಮರ್ಥನೆಗಳಿದ್ದವು. ಬುದ್ಧಿಸಂ ಏಕದೇವನ ಕಲ್ಪನೆಯಲ್ಲಿದೆ. ತ್ರಿಪಿಟಕಗಳು ಅವರ ಸ್ಕ್ರಿಪ್ಚರ್ಗಳು. ಮತಾಂತರಕ್ಕ ಮಾನ್ಯತೆ ಇದೆ. ಹಾಗಾಗಿ ಬುದ್ಧಿಸಂ ಅನ್ನುವುದು ಒಂದು ಶುದ್ಧವಾದ ರಿಲಿಜನ್ ಅಂದು ಕೊಂಡರು.

ಮತ್ತಷ್ಟು ಓದು »

5
ಫೆಬ್ರ

ಚಿಂತನಗಂಗಾ ಚರ್ಚೆಯ ಪ್ರತಿಕ್ರಿಯೆಗಳ ಸುತ್ತ…

(ಗೋಲ್ವಾಲ್ಕರ್ ಅವರ ಚಿಂತನಗಂಗಾ ಪುಸ್ತಕದ ಸುತ್ತ ಬನವಾಸಿ ಬಳಗದ ಮಿತ್ರರು ಶುರು ಮಾಡಿದ ಚರ್ಚೆಗೆ ನಿಲುಮೆಯಲ್ಲಿ ಅಶ್ವಿನ್ ಅಮೀನ್ ಅವರು ಪ್ರತಿಕ್ರಿಯೆ ನೀಡಿದ್ದರು.ಅಶ್ವಿನ್ ಅವರ ಪ್ರತಿಕ್ರಿಯೆಗೆ ಪ್ರಿಯಾಂಕ್ ,ಚೇತನ್ ಮತ್ತು ಮಂಜುನಾಥ್ ಅವ್ರು ಎತ್ತಿದ ಪ್ರಶ್ನೆಗಳು ಕೇವಲ ಪ್ರತಿಕ್ರಿಯೆಗಳಾಗಿ ಕಳೆದುಹೋಗದಿರಲಿ ಅನ್ನುವ ಉದ್ದೇಶದಿಂದ ಓದುಗರಿಗಾಗಿ ಪ್ರಕಟಿಸುತಿದ್ದೇವೆ – ನಿಲುಮೆ)

– ಪ್ರಿಯಾಂಕ್

ಇಲ್ಲಿ ಹೇಳಲಾಗಿರುವ ಕೆಲ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳು.

– ಗೋಲ್ವಾಲ್ಕರ್ ಅವರ ಚಿಂತನಗಂಗಾ ಹೊತ್ತಗೆಯೇ ಆರ್.ಎಸ್.ಎಸ್ಸಿನ ನಿಲುವುಗಳಲ್ಲ ಅಂತಲೂ ಕೆಲವರು ಹೇಳಿದ್ದರು. ನೀವು ಬರೆದಿರೋದು ನೋಡಿ, ಆರ್.ಎಸ್.ಎಸ್ಸಿನ ನಿಲುವುಗಳೆಲ್ಲವೂ ಗೋಲ್ವಾಲ್ಕರ್ ಅವರ ಮಾತುಗಳನ್ನು ಒಪ್ಪುತ್ತದೆ ಎನ್ನುವಂತಿದೆ.

– ಹಿಂದಿಯನ್ನು ರಾಷ್ಟ್ರಬಾಷೆ ಮಾಡಬೇಕಾಗಿ ಗಾಂಧಿ ಅವರೂ ಸೇರಿದಂತೆ, ಗೋಳ್ವಾಲ್ಕರ್ ಅವರೂ ಹೇಳಿದ್ದರು. ಅದಕ್ಕೆ ಕಾರಣಗಳೂ ಇದ್ದವು ಎಂದಿದೀರಿ. ಗಾಂಧಿ ಅವರು ಹೇಳಿದ್ದೂ ನಿಜವೇ. ಅದೆಲ್ಲವನ್ನೂ ಪ್ರಶ್ನಿಸಬೇಕಾಗಿದೆ. ಗೋಳ್ವಾಲ್ಕರ್ ಅವರ ಚಿಂತನೆಗಳೇ ಸಂಘದ ನಿಲುವಾಗಿದ್ದರೆ, ಇವತ್ತಿಗೂ ಸಂಘವು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದರ್ಥವಲ್ಲವೇ? ಎಲ್ಲಾರ ಮೇಲೆ ಹಿಂದಿ ಹೇರಿಕೆ ಮಾಡುವುದರ ಪರವಾಗಿ ಸಂಘವಿದೆ ಎಂಬರ್ಥವಲ್ಲವೇ? ಹಾಗೆ ಮಾಡುತ್ತಿದಾರೋ, ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.

ಮತ್ತಷ್ಟು ಓದು »