ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 14, 2014

35

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-1

‍CSLC Ka ಮೂಲಕ

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಭ್ರಷ್ಟಾಚಾರದ ನಿಗ್ರಹಕ್ಕೆ (ಲೋಕಪಾಲದಂತಹ) ಸಾರ್ವಭೌಮ ಕಾನೂನು/ಸಂಸ್ಥೆಗಳೇ ಪರಿಹಾರ ಎಂಬ ಸಾಮಾನ್ಯ ಗ್ರಹಿಕೆ ಇದೆ. ಇಂದು ಭ್ರಷ್ಟಾಚಾರ ಯಾವ ಸ್ವರೂಪದಲ್ಲಿದೆಯೋ ಮತ್ತು ಅದು ಎಷ್ಟರಮಟ್ಟಿಗೆ ವಿರಾಟ ಸ್ವರೂಪವನ್ನು ಪಡೆದಿದೆಯೋ ಅದಕ್ಕೆ ಈ ರೀತಿಯ ಸಾರ್ವಭೌಮ ಸಂಸ್ಥೆಗಳೇ ಕಾರಣವಾಗಿರುವ ಸಾಧ್ಯತೆಯ ಕುರಿತು ಯಾರೂ ಯೋಚಿಸಿದಂತಿಲ್ಲ. ಅಂದರೆ, ಓರ್ವ ಅಧಿಕಾರಿ ಅಥವಾ ರಾಜಕಾರಣಿ ಕೋಟಿಗಟ್ಟಲೆ ಸಂಪತ್ತನ್ನು ವಾಮಮಾರ್ಗದಲ್ಲಿ ಪಡೆಯಲು ಅವಕಾಶ ಹೇಗೆ ದೊರೆಯುತ್ತದೆ? ಕಾರ್ಪೋರೇಟ್ ಸೆಕ್ಟಾರ್ಗಳ ಲಾಭಿ ಎಂದು ಅಣ್ಣಾ ಹಜಾರೆಯವರ ಹೋರಾಟವನ್ನು ಟೀಕಿಸಿ ಅರುಂಧತಿ ರಾಯ್ರವರು ನೀಡುವ ವಿವರಣೆಗಳನ್ನೇ ಆಳವಾಗಿ ವಿಶ್ಲೇಷಿಸಿದರೆ ಇದಕ್ಕೆ ಭಾಗಶಃ ಉತ್ತರ ದೊರೆಯುತ್ತದೆ. ಒಂದು ಕಾರ್ಪೋರೇಟ್ ಸಂಸ್ಥೆ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂತು ಎಂದರೆ ಅದಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಸರ್ಕಾರವು ಒದಗಿಸಿಕೊಡಬೇಕು ಎಂಬುದು ಸರ್ಕಾರದ್ದೇ ನಿಯಮವಾಗಿದೆ. ಉದಾಹರಣೆಗೆ ಟಾಟಾದ ನ್ಯಾನೋ ಕಾರಿನ ಉಧ್ಯಮಕ್ಕೆ ಪಶ್ಚಿಮ ಬೆಂಗಾಲದ ಸರ್ಕಾರ ಸಿಂಗೂರಿನಲ್ಲಿ 997 ಎಕರೆ ಭೂಮಿಯನ್ನು 90 ವರ್ಷಗಳಿಗೆ ಗುತ್ತಿಗೆ ನೀಡಿತು. ಗುತ್ತಿಗೆ ಹಣವನ್ನು ಮೊದಲ 60ವರ್ಷಗಳು ಮುಗಿದ ಮೇಲೆ ಉಳಿದ 30 ವರ್ಷಗಳಲ್ಲಿ ವಾರ್ಷಿಕ ಕಂತಿನ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಆ ಭೂಮಿಯು ಆ ಕಂಪೆನಿಗೆ ಉಚಿತವಾದ ‘ಉಡುಗೊರೆ’ಯಾಗಿರುತ್ತದೆ. ಈ ಭೂಮಿಯಲ್ಲಿ ಶೇ 45ರಷ್ಟು ಭೂಮಿಯನ್ನು ಬಲವಂತವಾಗಿ ಸರ್ಕಾರ ರೈತರನ್ನು ತೆರವುಗೊಳಿಸಿ ಕೊಟ್ಟಿರುವುದನ್ನು ಸರ್ಕಾರವೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರ ಜೊತೆಗೆ ರಸ್ತೆ, ನೀರಿನ ಸೌಲಭ್ಯಗಳನ್ನು ಉಚಿತವಾಗಿ ನೀಡಿ ರಿಯಾಯಿತಿ ದರದಲ್ಲಿ ನಿರಂತರ ವಿದ್ಯುತ್ ನೀಡಬೇಕು. ಇಷ್ಟನ್ನು ಒಂದು ಖಾಸಗಿ ಕಂಪನಿಗೆ ಸರ್ಕಾರವು ಒದಗಿಸುತ್ತದೆ.

ಕಾನೂನಿನ ಪ್ರಕಾರ ಕೈಗಾರಿಕಾ ಅಭಿವೃದ್ದಿಗೆ ಈ ರೀತಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಇಲ್ಲಿ ಸರ್ಕಾರ ಅಂದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು. ಇಲ್ಲಿ ಅವರು ಯೋಚಿಸುವುದೇನೆಂದರೆ, ಸಾವಿರಾರು ಕೋಟಿ ಬೆಲೆಬಾಳುವ ಭೂಮಿ ಉಚಿತವಾಗಿ ಮತ್ತು ಉಳಿದ ಸೌಲಭ್ಯವನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪಡೆಯುವ ಕೈಗಾರಿಕೋದ್ದಿಮೆಗಳು ಅದರ ಆಧಾರದಲ್ಲಿ ಸಾವಿರಾರು ಕೋಟಿ ವ್ಯವಹಾರದ ಲಾಭಗಳಿಸಿಕೊಳ್ಳುತ್ತಾರೆ. ಇದರಿಂದ ನಮಗೆ ಏನು ಲಾಭ? ಆದ್ದರಿಂದ ಇಷ್ಟು ಸಂಪತ್ತನ್ನು ನೀವು ಪಡೆಯುವುದರಿಂದ ಕಾನೂನು ಪ್ರಕಾರ ಈ ಎಲ್ಲಾ ಸೌಲಭ್ಯ ಪಡೆಯಲು ನಮಗೂ ಅದರಲ್ಲಿ ಪಾಲು ನೀಡಬೇಕೆಂದು ಈ ಉದ್ಯಮಗಳಿಗೆ ಈ ಸೌಲಭ್ಯಗಳನ್ನು ಒದಗಿಸಿಕೊಡುವಾಗ ಬೇಡಿಕೆ ಮುಂದಿಟ್ಟು ಹಣ ಕೇಳುವ ಅವಕಾಶವೂ ಸೃಷ್ಟಿಯಾಗುತ್ತದೆ. ಒಂದು ಸಲ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಈ ರೀತಿಯ ಕೈಗಾರಿಕೆಗಳಿಗೆ ನೀಡುವ ಸೌಲಭ್ಯಗಳಿಂದ ಬರುವ ಹಣದ ರುಚಿ ನೋಡಿದ ಮೇಲೆ ಇವರೇ ಮುಂದೆ ನಿಂತು ಕೈಗಾರಿಕೋದ್ಯಮಿಗಳನ್ನು ಆಮಂತ್ರಿಸಿ ರೈತರ ಭೂಮಿಯನ್ನು ಸರ್ಕಾರದ ಬೊಕ್ಕಸ ಬಳಸಿ ಸಾವಿರಾರು ಕೋಟಿಗಳ ಸೌಲಭ್ಯಗಳನ್ನು ಒದಗಿಸಿ ಅದಕ್ಕೆ ಪ್ರತಿಫಲವನ್ನು ಪಡೆಯುವ ದಂಧೆಗೆ ಇಳಿಯುತ್ತಾರೆ. ಇಲ್ಲಿ ಕೈಗಾರಿಕೋಧ್ಯಮಿಗಳಿಗೆ ತಮಗೆ ಕಾನೂನಿನ ಪ್ರಕಾರ ಸಿಗಬೇಕಾದ ಸೌಲಭ್ಯಕ್ಕೆ ಹಣ ಕೇಳುತ್ತಿರುವುದು ಭ್ರಷ್ಟಾಚಾರ. ಅದೇ ಪುಕ್ಕಟೆಯಾಗಿ ನಮ್ಮ ಅಧಿಕಾರವನ್ನು ಬಳಸಿಕೊಂಡು ಕೈಗಾರಿಕೋದ್ದಿಮೆಗಳು ಲಾಭಮಾಡಿಕೊಳ್ಳುತ್ತಿರುವುದು ಅಧಿಕಾರಿ ಮತ್ತು ರಾಜಕಾರಣಿಗಳಿಗೆ ಮತ್ಸರ. ಇಷ್ಟು ದೊಡ್ಡ ಮಟ್ಟದ ವ್ಯವಹಾರ ನಡೆಸಲು ಅವಕಾಶ ಕೊಡುವುದು ಯಾರು? ಅದು ಇಂದು ನಾವು ಹೊಂದಿರುವ ರಾಜಕೀಯ ಪ್ರಭುತ್ವ ವ್ಯವಸ್ಥೆ! ಓರ್ವ ಮಂತ್ರಿ ಅಥವಾ ಮುಖ್ಯಮಂತ್ರಿ ಒಂದು ಆಜ್ಞೆಯ ಮೂಲಕ ರೈತರ ಅಥವಾ ಜನರ (ಖಾಸಗಿಯವರ) ನೂರಾರು-ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕೋದ್ದಿಮೆಗಳಿಗೆ ನೀಡಬಹುದು. ಈ ರೀತಿಯ ವ್ಯವಸ್ಥೆಯ ಒಳಗೆಯೇ (in-built) ಭ್ರಷ್ಟಾಚಾರದ ಬೇರು ಅಡಗಿದೆ ಅಲ್ಲವೇ?

ಭ್ರಷ್ಟಾಚಾರದ ಕಲ್ಪನೆ ಮತ್ತು ಜನಸಾಮಾನ್ಯರ ಗ್ರಹಿಕೆ
ಭ್ರಷ್ಟಾಚಾರ ಪರಿಕಲ್ಪನೆಯ ನಿರೂಪಣೆಯಲ್ಲಿಯೂ ಒಂದು ಸಾಂಸ್ಕೃತಿಕ ಚೌಕಟ್ಟಿನ ಹಿನ್ನೆಲೆ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಚರ್ಚೆಗಳಲ್ಲಿ ಎಲ್ಲರೂ ಭ್ರಷ್ಟಾಚಾರ ವಿರೋಧಿ ನಿಲುವುಗಳನ್ನೇ ತಳೆಯುತ್ತಾರೆ. ಅದು ಅತ್ಯಂತ ಅನೈತಿಕವಾದದ್ದು ಎಂಬುದಾಗಿಯೇ ಭಾವಿಸುತ್ತಾರೆ, ನಿಜ. ಆದರೆ ಹೀಗೆ ಭಾವಿಸುವ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವ ಅಪಾದನೆಗಳು ಬಂದಾಗ ಮತ್ತು ಅದಕ್ಕಾಗಿ ಜೈಲಿಗೆ ಹೋಗಿ ಬಂದರೂ ಸಹ ತಾವು ಅತ್ಯಂತ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗಿದ್ದೆವೆಂಬ ಭಾವಕ್ಕಿಂತ ಮಿಗಿಲಾಗಿ ತಮ್ಮದು ಮೇಲ್ನೋಟಕ್ಕೆ ಭ್ರಷ್ಟಾಚಾರವೆಂದು ಕಂಡರೂ ಯಾರೂ ಮಾಡದೇ ಇದ್ದದ್ದೇನೂ ತಾನು ಮಾಡಿಲ್ಲವೆಂದು ನಿರಾಳವಾಗಿಯೇ ಪುನಃ ಸಾರ್ವಜನಿಕ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೆಯೇ ಅವರನ್ನು ಅದುವರೆಗೆ ಬೆಂಬಲಿಸಿದ್ದ ಜನಸ್ತೋಮವೂ ಸಹ ಅನೈತಿಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಎಂದು ಭಾವಿಸಿ ಅವರನ್ನು ನೋಡುವ ರೀತಿಯಲ್ಲಿ ಬದಲಾಯಿಸಿಕೊಳ್ಳುವುದು ಒತ್ತಟ್ಟಿಗಿರಲಿ ಜೈಲಿನಲ್ಲಿ ಹಾಕಿದೊಡನೆ ಪರಮಾಪ್ತನೋರ್ವ ಸಂಕಷ್ಟದಲ್ಲಿರುವನೆಂದು ಭಾವಿಸಿ ಅವರನ್ನು ಸಂತೈಸಲು ಧಾವಿಸುತ್ತಾರೆ. ಸಾಮಾನ್ಯರು ಮಾತ್ರವೇ ಅಲ್ಲ ನೀತಿಗಳನ್ನು ಭೋದಿಸುವ ಮತ್ತು ಧರ್ಮಕಾರ್ಯಗಳಲ್ಲಿ ತೊಡಗಿರುವ ಮಠಾಧೀಶರು, ಸ್ವಾಮೀಜಿಗಳು ಸಹ ಸಾಂತ್ವಾನ ನುಡಿಯಲು ಸ್ಪರ್ಧೆಗೆ ಬೀಳುತ್ತಾರೆ. ಇನ್ನು ಬಿಡುಗಡೆಯಾದೊಡನೆ ಜಾತಕ ಪಕ್ಷಿಗಳಂತೆ ಕಾದು ಅವರನ್ನು ಇನ್ನೂ ಹೆಚ್ಚಿನ ಅಭಿಮಾನದೊಂದಿಗೆ ಮೆರವಣಿಗೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅತ್ಯಂತ ಅನೈತಿಕವಾದ ಭ್ರಷ್ಟಾಚಾರದಲ್ಲಿ ತೊಡಗಿದ ವ್ಯಕ್ತಿಯೋರ್ವನನ್ನು ಸಾಮಾನ್ಯರಿಂದ ಮಠಾಧೀಶರವರೆಗೆ ಏಕೆ ಈ ಪರಿ ಸಂತೈಸುತ್ತಾರೆ, ಮೆರವಣಿಗೆ ಮಾಡುತ್ತಾರೆ ಮತ್ತು ಪುನಃನಾಯಕನೆಂದು ಒಪ್ಪಿಕೊಳ್ಳುತ್ತಾರೆ? ಮೇಲ್ನೋಟಕ್ಕೆ ಇವರೆಲ್ಲರೂ ಅನೈತಿಕತೆ ಪರವಾಗಿರುವವರು (ಅಂದರೆ ಜಾತಿ, ಹಣದಾಸೆ, ಅಧಿಕಾರಸ್ಥರ ಕೃಪೆಗಾಗಿ) ಬೆಂಬಲಿಸುವವರು ಎಂಬಂತೆ ತೋರಿದರೂ ವಾಸ್ತವದಲ್ಲಿ ಅವರಿಗೆ ಈ ನೈತಿಕ ಪ್ರಶ್ನೆ ಅಷ್ಟಾಗಿ ಭಾದಿಸಿರುವಂತೆ ಕಾಣುತ್ತಲೇ ಇಲ್ಲ. ಬದಲಿಗೆ ಭ್ರಷ್ಟಾಚಾರದ ನೆಪದಲ್ಲಿನ ಒಂದು ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಪಶುವಾದ ನಾಯಕನೆಂಬಂತೆ ಅವರಿಗಾಗಿ ಮರುಗುವುದು ಎದ್ದು ಕಾಣುತ್ತದೆ. ಈ ವಿದ್ಯಮಾನವನ್ನು ಹೇಗೆ ವಿವರಿಸುವುದು? ಒಂದು ಕಡೆ ಭ್ರಷ್ಟಾಚಾರದ ಬಗ್ಗೆ ಅದರ ಅನೈತಿಕತೆ ಮತ್ತು ಕರಾಳ ಪರಿಣಾಮಗಳ ಬಗ್ಗೆ ಸಾಮೂಹಿಕವಾದ ಆತಂಕ ಮತ್ತು ಚಳುವಳಿಗಳು ಹುಟ್ಟುತ್ತಿರುವ ಅದೇ ಸಂದರ್ಭದಲ್ಲಿಯೇ ಮತ್ತೊಂದೆಡೆ ಹೀಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿಕೊಂಡವರ ಬಗ್ಗೆ ತಾತ್ಸಾರ ಮತ್ತು ಅಸಹ್ಯ ತೋರದೆ ಅವರನ್ನು ಆದರಿಸುತ್ತಿರುವುದು ಎದ್ದು ಕಾಣುತ್ತದೆ. ಏಕೆ ಹೀಗೆ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಅದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವವರೆಲ್ಲರಿಗೂ ನೈತಿಕತೆ ಮಾನವೀಯತೆ ಇದೆ. ಭ್ರಷ್ಟರನ್ನು ವಿರೋಧಿಸುವವರು ಮತ್ತು ಅವರ ಪರವಾಗಿರುವವರೆಲ್ಲರೂ ಅನೈತಿಕರು ಮತ್ತು ಮಾನವೀಯ ಕಾಳಜಿಯಿಲ್ಲದವರು ಎಂದು ಕರೆದುಬಿಡುವುದು ಸುಲಭ. ಆದರೆ ಭ್ರಷ್ಟರೊಂದಿಗಿರುವವರು ಭ್ರಷ್ಟರ ಪರವಾಗಿರುವವರೂ ಮತ್ತು ಸ್ವತಃ ಭ್ರಷ್ಟರೂ ಸಹ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ವಿರೋಧಿಸುವವರೇ. ಹಾಗೆಯೇ ಅತ್ಯಂತ ಸಾಧುಗಳು, ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆಯಲ್ಲಿರುವವರೂ ಸಹ ಭ್ರಷ್ಟಾಚಾರದಲ್ಲಿ ತೊಡಗಿರುವುವರ ಬಗ್ಗೆ ಸಹಾನುಭೂತಿ ಹೊಂದಿದಂತೆ ಮಾತನಾಡುವುದು ಕಂಡುಬರುತ್ತದೆ. ಹಾಗಾಗಿ ಇಲ್ಲಿ ಅವರ ಅನುಭವ, ತಿಳುವಳಿಕೆ ಮತ್ತು ವಿವರಣೆ ಎಲ್ಲವೂ ಒಂದೊಕ್ಕೊಂದು ಸಂಬಂಧವಿಲ್ಲದೆ ಇರುವುದು ಅವರ ಈ ನಡವಳಿಕೆಗಳಿಂದ ದೃಢವಾಗುತ್ತದೆ.
ಪರಿಹಾರ ಮಾರ್ಗ…?

ಈ ಪ್ರಶ್ನೆಗಳನ್ನು ಬಿಡಿಸಲು ನಾವು ಬಹುಮುಖ್ಯವಾಗಿ ಮಾಡಬೇಕಿರುವುದು ಇಂದು ಈ ಪರಿಯ ಭ್ರಷ್ಟಾಚಾರದ ಹರವು ಹೆಚ್ಚಲಿಕ್ಕೂ ಭಾರತೀಯ ಪ್ರಭುತ್ವದ ಸ್ವರೂಪಕ್ಕೂ ಏನಾದರೂ ಸಂಬಂಧ ಇದೆಯೇ ಎಂಬುದನ್ನು ನೋಡಬೇಕು. ಈ ದಿಸೆಯಲ್ಲಿ ಮುಂದುವರಿದರೆ ನಮ್ಮ ಚರ್ಚೆಯ ದಿಕ್ಕು ಸೈದ್ಧಾಂತಿಕವಾಗಬೇಕಾಗುತ್ತದೆ. ಈ ಲೇಖನದ ಸ್ವರೂಪದ ಮತ್ತು ಗಾತ್ರದ ದೃಷ್ಟಿಯಿಂದ ಅದು ಹೆಚ್ಚು ಸಂಕೀರ್ಣ ಮತ್ತು ಧೀರ್ಘವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಬಿಡಿಸಲು ನಾವು ಸಾಗಬೇಕಿರುವ ದಾರಿಯನ್ನು ಸರಳವಾಗಿ ಮತ್ತು ಸೂಚ್ಯವಾಗಿ ಪರಿಚಯಿಸುವ ಕೆಲಸವನ್ನಷ್ಟೇ ಇಲ್ಲಿ ನೆರವೇರಿಸಲಾಗುವುದು.

ಭಾರತದ ಭ್ರಷ್ಟಾಚಾರದ ಸಮಸ್ಯೆಯನ್ನು ಒಂದು ಸಾಂಸ್ಕೃತಿಕ ಭಿನ್ನತೆಯಿಂದ ಹುಟ್ಟಿದ ಸಮಸ್ಯೆ ಎಂದು ನೋಡಲು ಸಾಧ್ಯವೇ ಎಂದು ಪ್ರಯತ್ನಿಸುವ. ಅಂದರೆ, ಭಾರತೀಯ ಪ್ರಭುತ್ವದ ಸ್ವರೂಪ ಮತ್ತು ಅದು ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯವು ಭಾರತೀಯ ಸಂಸ್ಕೃತಿಗೆ ಅಪರಿಚಿತವಾದ ಮತ್ತು ಪಶ್ಚಿಮದಿಂದ ಎರವಲು ಬಂದ ಸಂಗತಿಯಾಗಿರುವುದರಿಂದಲೇ ಈ ಸಮಸ್ಯೆ ಬೃಹತ್ ಸ್ವರೂಪವಾಗಿ ಕಾಡುತ್ತಿರಬಹುದೇ ಎಂಬ ಕುತೂಹಲ ನನ್ನದು. ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಪಶ್ಚಿಮವು ಹೇಗೆ ತನ್ನದೇ ಸಾಂಸ್ಕೃತಿಕ ಅನುಭವಗಳ ಹಿನ್ನೆಲೆಯಲ್ಲಿ ವಿವರಿಸಿದೆ ಮತ್ತು ಆ ವಿವರಣೆಯೇ ಇಂದಿಗೂ ಇಲ್ಲಿಯ ಸಮಾಜದ ಸಮಸ್ಯೆಗಳ ವಿವರಣೆಗೆ ಮತ್ತು ಅವುಗಳ ಪರಿಹಾರಕ್ಕೆ ತಳಹದಿಯಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತೋರಿಸಿರುವುದು ಈ ರೀತಿಯ ಕುತೂಹಲಕ್ಕೆ ಕಾರಣವಾಗಿದೆ.

ಈ ಸಾಂಸ್ಕೃತಿಕ ಭಿನ್ನತೆಗೂ ಪ್ರಭುತ್ವ ಮತ್ತು ಭ್ರಷ್ಟಾಚಾರ ಎರಡರ ಸಂದರ್ಭದಲ್ಲೂ ವಿಶ್ಲೇಷಿಸುವುದು ಅನಿವಾರ್ಯವಾಗಿದೆ. ಪ್ರಭುತ್ವವು ಪೌರಾತ್ಯ ಸಮಾಜಗಳಿಗೆ ಅಪರಿಚಿತವಾದ ವಿಶೇಷವಾದ ಸಾರ್ವಜನಿಕ ವಲಯವನ್ನು ಸೃಷ್ಟಿಸಿದ್ದರೆ ಭ್ರಷ್ಟಾಚಾರದ ಕಲ್ಪನೆಯು ಇಲ್ಲಿಯ ಜನರ ಸಾರ್ವಜನಿಕ ವ್ಯವಹಾರಗಳಿಗೆ ನೈತಿಕತೆಯ ಮಾನದಂಡದ ಪೋಷಾಕನ್ನು ತೊಡಿಸಿದೆ. ಈ ನೈತಿಕತೆಯ ಮಾನದಂಡವೂ ಸಹ ಇಲ್ಲಿಯವರಗೆ ಅನುಭವಕ್ಕೆ ನಿಲುಕದ ಸಂಗತಿಯಾಗಿದೆ. ಮೊದಲಿಗೆ ಪ್ರಭುತ್ವದ ವಿಚಾರವನ್ನು ತೆಗೆದುಕೊಳ್ಳುವ. (ಮುಂದುವರಿಯುವುದು)

Read more from ಲೇಖನಗಳು
35 ಟಿಪ್ಪಣಿಗಳು Post a comment
  1. komusouharda's avatar
    komusouharda
    ಮಾರ್ಚ್ 14 2014
  2. Nagshetty Shetkar's avatar
    Nagshetty Shetkar
    ಮಾರ್ಚ್ 14 2014

    ಷಣ್ಮುಖ ಅವರೇ, ” ಜಾತಕ ಪಕ್ಷಿಗಳಂತೆ ಕಾದು” ಅಂತ ಬರೆದಿದ್ದೀರಿ. ಯಾವುದೀ ಜಾತಕ ಪಕ್ಷಿ? ನಾನು ಚಾತಕ ಪಕ್ಷಿ ಬಗ್ಗೆ ಕೇಳಿದ್ದೆ, ಆದರೆ ಜಾತಕ ಪಕ್ಷಿಯ ಬಗ್ಗೆ ಇದುವರೆಗೆ ಕೇಳಿರಲಿಲ್ಲ. ಈ ನಿಮ್ಮ ಜಾತಕ ಪಕ್ಷಿ ಗೂಬೆ ಜಾತಿಗೆ ಸೇರಿದ್ದಾ? ಅಥವಾ ಕಣಿ ಹೇಳುವ ಗಿಣಿಯಾ?

    ಉತ್ತರ
    • Nagshetty Shetkar's avatar
      Nagshetty Shetkar
      ಮಾರ್ಚ್ 14 2014
      • ನವೀನ's avatar
        ನವೀನ
        ಮಾರ್ಚ್ 14 2014

        ತಮ್ಮನ್ನು ಶರಣದೆಂದುಕೊಳ್ಳುವ ಶೆಟ್ಕರ್ ಸರ್ ಅವರು ತಮಗೆ ತಾವೇ +೧ ಒತ್ತಿಕೊಳ್ಳುವ ಮತ್ತು ಇತರರನ್ನು ಮೂದಲಿಸುವುದು ಖಂಡನೀಯವೆನಿಸುತ್ತದೆ

        ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಮಾರ್ಚ್ 15 2014

          ಅಲ್ರಿ ನವೀನ್… ನೀವಂತೂ ಯಾವತ್ತೂ ಅವರಿಗೆ +೧ ಹಾಕುವುದಿಲ್ಲ. ಪಾಪ..ಅವರು ಅಪರೂಪಕ್ಕೊಮ್ಮೆ ಹೀಗೆ ತಪ್ಪು ಕಂಡು ಹಿಡಿದು, ಖುಷಿಪಟ್ಟರೆ, ಇರಲಿ ಎಂದು ತಮ್ಮ ಬೆನ್ನನ್ನು ತಾವು ಸ್ವಲ್ಪ ತಟ್ಟಿಕೊಂಡರೆ.. ನೀವು ಸಹಿಸುವುದಿಲ್ಲ. ಇಡಿ ಲೇಖನದಲ್ಲಿ ಮತ್ತೇನನ್ನೂ ಗಮನಿಸದೇ ‘ಜಾತಕ’ ಎಂಬ ತಪ್ಪನ್ನು ಹುಡುಕಿದ ಅವರ ಅಗಾಧ ಪ್ರತಿಭೆಗೆ ನೀವು ಮೆಚ್ಚುಗೆ ಸೂಚಿಸಬೇಕು..ಅದನ್ನು ಬಿಟ್ಟು…ಛೆ!.. ನಮ್ಮ ಗುರುಗಳಂತಹ ‘ಶರಣ’ ರಿಗಿದು ಕಾಲವಲ್ಲ :(.

          ಉತ್ತರ
    • Balachandra Bhat's avatar
      ಮಾರ್ಚ್ 22 2014

      ಇಷ್ಟು ದಿನಗಳಲ್ಲಿ ನಿಲುಮೆಯಲ್ಲಿ ಶೆಟ್ಕರ್ ರು ಪ್ರಪ್ರಥಮವಾಗಿ ಮಾಡಿದ ಅತ್ಯಂತ ಉಪಯೋಗದ ಕೆಲಸ ಎಂದರೆ ಇದು.
      ಕ್ಯುಡೊಸ್ ಶೆಟ್ಕರ್ ಅವರೆ. 🙂
      ನಿಲುಮೆ ತಂಡದವರೆ,
      ಶೆಟ್ಕರ್ ಅವರು ಇಲ್ಲಿಯ ತನಕ ನಿಲುಮೆಯಲ್ಲಿ ಮಾಡಿದ ಈ ’ಒಂದು’ ಒಳ್ಳೆಯ ಕೆಲಸವನ್ನು ಗುರುತಿಸಿ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಬೇಕಾಗಿ ವಿನಂತಿ. 🙂

      ಉತ್ತರ
      • ಷಣ್ಮುಖ ಎ's avatar
        ಷಣ್ಮುಖ ಎ
        ಮಾರ್ಚ್ 22 2014

        +100000000000000000000000000000000000000000000000000000000000000000000

        ಉತ್ತರ
        • Nagshetty Shetkar's avatar
          Nagshetty Shetkar
          ಮಾರ್ಚ್ 22 2014

          Mr. Shanmukha, your achievement is exactly this. Just one 1 and infinite 0’s. The 1 is due to your Dalit background and 0’s due to right wing association. What a pity! You could have become a Sharana but you became vandimagadha of Ghent Brahmins.

          ಉತ್ತರ
          • Naani's avatar
            Naani
            ಮಾರ್ಚ್ 22 2014

            ಬುರುಡ ಶೆಟ್ಕರ್ ಗೆ ಗಣಿತದಲ್ಲಿ 1 ಮತ್ತು 0 ಯ ಸ್ಥಾನಗಳ ಜ್ಞಾನವೂ ಇಲ್ವಲ್ಲಾ ಸಿವಾ!!! ಬರೆಯೋರ ಜಾತಿ ಹಿನ್ನೆಲೆನಾ ಕೆದಕ್ಕೊಂಡು ತೀರ್ಮಾನ ಕೊಡೋರು ಅಪ್ಪಟ ಜಾತಿವಾದಿಗಳಾದರೆ ಈ ಯಪ್ಪನಿಗೆ ಅದರಲ್ಲಿ ಮೊದಲ ಸ್ಥಾನ ಕೊಡ್ಲೇ ಬೇಕು. ಶರಣರ ಮರ್ಯಾಧೆ ಕಳೀತೀದೆಯಲ್ಲಪ್ಪ ಈ ‘ಎಡಬಿಡಂಗಿ’!!!!!. ಬರವಣಿಗೆಳ ಬಗ್ಗೆ ಮಾತಾಡದೆ, ಬರೆಯುವವರನ್ನು ಜಾತಿ ಕನ್ನಡಿಯಿಂದಲೇ ನೋಡಿ ಕೊಳಕು ಮಾತಗಳನ್ನು ಉದುರಿಸುತ್ತಿರುವ ತಮಗೆ Intellectual Bankruptcy ಬಗ್ಗೆ ಮಾತಾಡುವ ಯೋಗ್ಯತೆ ಇದೆಯೇ ಶೆಟ್ಕರ್.

            ಉತ್ತರ
            • Nagshetty Shetkar's avatar
              Nagshetty Shetkar
              ಮಾರ್ಚ್ 22 2014

              Are you a troll? Or are you a fake id of Shanumukha? 😉

              ಉತ್ತರ
              • Naani's avatar
                Naani
                ಮಾರ್ಚ್ 22 2014

                ಏಕೆ ಫೇಕ್ ಐಡಿ ಫೇಕ್ ಐಡಿ ಅಂತ ಒದರ್ಕೋತ್ತಿದ್ದೀರಿ??? ಅವರಿಗೆ ಬಹುಷಃ ನಿನ್ನಂಥ ಕಾಮಿಡಿ ಪೀಸುಗಳ ಜೋಕುಗಳಿಗೆ ನಗುವಷ್ಟು ಟೈಮಿರ್ಲಿಕ್ಕಿಲ್ಲ. ಬರೆಯೋರು ಯಾರು? ಅವರ ಜಾತಿ ಕುಲ ಗೋತ್ರ ಹುಡುಕ್ಕೋಂಡು ಹೋಗೋದೆ ನಿಮ್ಮ “ಜಾತ್ಯಾತೀತವಾದಾನಾ”? ಈ ಕೊಳಕು ಮನಸ್ಸನ್ನು ಬಿಟ್ಟು ಮೊದಲು ಸುಸಂಬದ್ದವಾಗಿ ಮಾತೋಡದನ್ನು ಕಲೀರಿ. ಪ್ರಶ್ನೆ ಕೇಳಿದೋರು ಯಾರಾದ್ರೆ ನಿಮಗೇನು? ಪ್ರಶ್ನೆಗಳಿಗೆ ಉತ್ತರ ಕೊಡೋ ತಾಕ್ಕತ್ತಿದ್ರೆ ತೋರ್ಸಿ/ ಸುಮ್ನೆ ಇದು ಅವರಾ? ಇಲ್ಲ ಈ trollಆ ಎಂದು ಕತ್ಲಲ್ಲಿ ಕಲ್ಲು ಹೊಡೆದು ಕಂಡುಹಿಡಿದುಬಿಟ್ಟೆ ಎನ್ನುವ ಸ್ವರತಿಯಲ್ಲಿ ತಲೆಕೆರ್ಕೊಂಡು ಹಲ್ಲಿಲ್ಲದ ಬಾಯಿಬಿಟ್ಟು ಜೋಕರ್ ನಗು ಏಕೆ ಬೀರ್ತಿರಿ.

                ಉತ್ತರ
                • Nagshetty Shetkar's avatar
                  Nagshetty Shetkar
                  ಮಾರ್ಚ್ 22 2014

                  “ನಗು ಏಕೆ ಬೀರ್ತಿರಿ”

                  ಮತ್ಯಾಕೆ ಷಣ್ಮುಖ ಅವರಿಗೆ ಕೇಳಿದ ಪ್ರಶ್ನೆಗೆ ತಾವು ಉತ್ತರ ಕೊಡುವ ಅಧಿಕ ಪ್ರಸಂಗತನ ತೋರಿದ್ದೀರಿ ಮಿ. ನಾಣಿ? ನೀವು ಒಂದೋ ತಲೆ ಹಿಡುಕ (ಟ್ರಾಲ್) ಅಲ್ಲವೋ ಶಂಭೂಕ ಇರಬೇಕು.

                  ಉತ್ತರ
                  • Naani's avatar
                    Naani
                    ಮಾರ್ಚ್ 22 2014

                    ಸಾರ್ವಜನಿಕ ಚರ್ಚಾತಾಣಗಳಲ್ಲಿ ನಿನ್ನ ತಲೆಕೆಟ್ಟ ಜಾತೀವಾದೀ ವಿಷತುಂಬಿದ ಹೇಳಿಕೆಗಳ ನೀಚತನವನ್ನು ಯಾರು ಬೇಕಾದರೂ ಬಯಲಿಗೆಳದು ಖಂಡಿಸಬಹುದು ಶೆಟ್ಕರ್. ಅದಕ್ಕೆ ನಿಮ್ಮಂತಹ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ. ಅಂದ ಹಾಗೆ ನಿನಗಿಲ್ಲಿ ಯಾರೂ ಪ್ರಶ್ನೆ ಕೇಳದಿದ್ದರೂ ಅಸಂಭದ್ದ ಪ್ರಲಾಪ ಮಾಡ್ತಿದ್ದೀಯಲ್ಲಾ ನಿನ್ನದು ತಲೆಹಿಡುಕತನವಲ್ವಾ???

                    ಉತ್ತರ
                    • Nagshetty Shetkar's avatar
                      Nagshetty Shetkar
                      ಮಾರ್ಚ್ 22 2014

                      ಏಕವಚನದಲ್ಲೇಕೆ ಸಂಬೋಧಿಸುತ್ತಿದ್ದೀರಿ ಮಿ. ನಾಣಿ? ನಾನು ಯಾವತ್ತೂ ಎಲ್ಲಿಯೂ ಜಾತಿವಾದಿ ಹೇಳಿಕೆಗಳನ್ನು ಕೊಟ್ಟಿಲ್ಲ. ನಾನೊಬ್ಬ ಶರಣ, ಶರಣರು ಜಾತಿಯಲ್ಲಿ ನಂಬಿಕೆ ಇಟ್ಟಿಲ್ಲ, ಜಾತಿಪದ್ಧತಿಯನ್ನು ಧಿಕ್ಕರಿಸಿದವರು. ನನ್ನ ಮೇಲೆ ಜಾತಿವಾದದ ಆರೋಪ ಹೊರಿಸುತ್ತಿರುವ ನಿಮ್ಮ ಮಾತೇ ನೀವೆಷ್ಟು ಚೀಪ್ ಅಂತ ಸಾರಿ ಹೇಳಿದೆ.

                    • Naani's avatar
                      Naani
                      ಮಾರ್ಚ್ 22 2014

                      ಮೇಲಿನ ಹೇಳಿಕೆಗಳೇ ನಿಮ್ಮ ಜಾತಿವಾದದ ನೀಚತನವನ್ನು ಬಯಲಿಗಿಟ್ಟದೆ. ನಿಮ್ಮ ನೀಚತಕ್ಕೆ ಶರಣರನೆಂಬ ಮುಖವಾಡವೇಕೆ?

                    • Nagshetty Shetkar's avatar
                      Nagshetty Shetkar
                      ಮಾರ್ಚ್ 22 2014

                      ನೀಚತನ ಯಾರದ್ದು ಮಿ. ನಾಣಿ? ಜಾತಿಪದ್ಧತಿ ಎಂಬ ವಿಷವೃಕ್ಷವನ್ನು ಬೆಳೆಸಿ ಪೋಷಿಸುತ್ತಿರುವ ಮನುವಾದಿಗಳದ್ದೋ ಅಥವಾ ಶರಣರ ಜಾತಿ ರಹಿತ ಸಮಾಜದ ಕನಸನ್ನು ಸಾಕ್ಷಾತ್ಕಾರಿಸಲು ಹೊರಟಿರುವ ಪ್ರಗತಿಪರರದ್ದೋ?

                    • Naani's avatar
                      Naani
                      ಮಾರ್ಚ್ 22 2014

                      ಶರಣರ ಮುಖವಾಡ ತೊಟ್ಟು ಇಲ್ಲದ ಮನುವಾದದ ಗುಮ್ಮ ತೋರಿಸಿ ಏಮಾರಿಸುತ್ತಿರುವ ನಿಮ್ಮಂತಹ ಮನುವ್ಯಾಧಿಗಳದ್ದು..

                    • Nagshetty Shetkar's avatar
                      Nagshetty Shetkar
                      ಮಾರ್ಚ್ 22 2014

                      ಜಾತಿಕಾರಣದಿಂದ ದೇಶದ ಕೋಟ್ಯಾಂತರ ಜನರು ಶೋಶಿತರೂ ಅವಮಾನಿತರೂ ಅವಕಾಶವನ್ಚಿತರೂ ಆಗಿದ್ದಾರೆ. ಆದರೂ ಮನುವಾದ ಇಲ್ಲ ಅಂತ ನೀವು ಸಾಧಿಸುತ್ತಿರುವುದು ಯಾವ ವ್ಯಾಧಿಯ ಲಕ್ಷಣ?

                    • Naani's avatar
                      Naani
                      ಮಾರ್ಚ್ 22 2014

                      ನೋವುಗಳನ್ನು ಮಾರಿಕೊಳ್ಳುತ್ತಿರುವ ತಮ್ಮಂತವರಿಗಿರುವ ಮನುವ್ಯಾಧಿಯ ಪರಿಣಾಮವಾಗಿ ಅವರು ಹಾಗೆಯೇ ಇದ್ದಾರೆ.

                    • Naani's avatar
                      Naani
                      ಮಾರ್ಚ್ 22 2014

                      ತಿದ್ದುಪಡಿ: ಅವರ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕದೆ ಸರ್ಕಾರೀ ಸ್ಥಾನ, “ಶ್ರೀ” ಮಾನಗಳಿಗಾಗಿ ಅವರ ಕಷ್ಟ ನೋವುಗಳನ್ನು ಮಾರಿಕೊಳ್ಳುತ್ತಿರುವ ತಮ್ಮಂತವರಿಗಿರುವ ಮನುವ್ಯಾಧಿಯ ಪರಿಣಾಮವಾಗಿ ಅವರು ಹಾಗೆಯೇ ಇದ್ದಾರೆ.

          • ವಿಜಯ್ ಪೈ's avatar
            ವಿಜಯ್ ಪೈ
            ಮಾರ್ಚ್ 22 2014

            ನಮ್ಮ ಶೆಟ್ಕರಪ್ಪ್ನೋರಿಗೆ..0 ಮತ್ತು 1 ಎಲ್ಲಿದ್ರೂ ನಡೆಯುತ್ತೆ..ಅದಕ್ಕೆ ಅವರಿಗೆ ನನ್ನ ಪರವಾಗಿ +00000000000000000000000000000001. ಕಡಿಮೆ ಅನಿಸಿದರೆ ಹೇಳಿ..ಇನ್ನೊಂದು ನಾಲ್ಕೆಂಟು ೦ ಹಾಕ್ತಿನಿ ಬೇಕಾದರೆ!
            ೦ ಗಳು ನಿಮ್ಮ ತಲೆಯಲ್ಲಿ ತುಂಬಿರೋ ಎಡ/ಜಾತಿ ಲದ್ದಿಗೆ..೧ ಎಷ್ಟು ಉಗಿಸಿಕೊಂಡರೂ ಮತ್ತೆ ಮತ್ತೆ ಮರಳಿ ಪ್ರಯತ್ನ ಮಾಡುವಿಕೆಗೆ ಮತ್ತು ತಾನು ಹೇಳಿದ್ದನ್ನು ಜನ ನಂಬುತ್ತಾರೆ ಅಂದುಕೊಂಡಿರುವ ನಿಮ್ಮ ಮುಗ್ಧತೆಗೆ!.
            ಈ ಯಪ್ಪನ ಕೈಯಲ್ಲಿ ಸಿಕ್ಕು ಆ ಶರಣ ಶಬ್ದ ವಿಲಿ ವಿಲಿ ಒದ್ದಾಡ್ತಾ…ಮರಣ ಬಂದರೆ ಸಾಕು ಅನ್ನುತ್ತಿರಬೇಕು 🙂

            ಉತ್ತರ
            • Nagshetty Shetkar's avatar
              Nagshetty Shetkar
              ಮಾರ್ಚ್ 22 2014

              ಬಸವಣ್ಣನವರ ಕಾಲದಲ್ಲಿ ಕಲ್ಯಾಣದ ಶರಣರ ಮಾರಣ ಹೋಮ ನಡೆಸಿದ್ದು ನೀವು ವೈದಿಕರೆ ಅಲ್ಲವೇ ಮಿ. ಪೈ? ಇಂದೂ ಕೂಡ ಶರಣರ ಮರಣದ ಕನಸನ್ನೇ ನೀವು ಕಾಣುತ್ತಿದ್ದೀರಿ ಅಲ್ಲವೇ?

              ಉತ್ತರ
              • Naani's avatar
                Naani
                ಮಾರ್ಚ್ 22 2014

                ಶಬ್ದ/ಪದದ ಮರಣಕ್ಕೂ ವ್ಯಕ್ತಿಗಳ ಮರಣಕ್ಕೂ ವ್ಯತ್ಯಾಸ ಗೊತ್ತಿಲ್ಲದ ಹೇತ್ಲಾಂಡಿಗಳಿಗೆ ಇನ್ನೇನು ಹೇಳ್ತೀರಿ ಪೈಗಳೇ!!!!!!

                ಉತ್ತರ
                • Nagshetty Shetkar's avatar
                  Nagshetty Shetkar
                  ಮಾರ್ಚ್ 22 2014

                  ಸಭ್ಯತೆಯ ಎಲ್ಲೆ ಮೀರದೆ ನಿಮ್ಮ ವಾದವನ್ನೇಕೆ ಮಂಡಿಸುತ್ತಿಲ್ಲ? ಬಹುಶಃ ನೀವು ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಹೆತ್ಲಾಂಡಿ/ಎಡಬಿದಂಗಿ ಮೊದಲಾದ ಶಬ್ದಗಳನ್ನು ನಿಮ್ಮ ವಾದದಲ್ಲಿ ಬಳಸುತ್ತಾ ಬಂದಿದ್ದೀರಿ.

                  ಉತ್ತರ
                  • Naani's avatar
                    Naani
                    ಮಾರ್ಚ್ 22 2014

                    ತಮ್ಮನ್ನು ಪ್ರಶ್ನಿಸುವವರ ಜಾತಿ ಕುಲ ಗೋತ್ರ ಗೊತ್ತಿಲ್ಲದಿದ್ರೆ ಅವರನ್ನು ತಾವು ತಲೆಹಿಡುಕರೆನ್ನುವುದು ಸಭ್ಯತೆ ಎಂದಾದರೆ, ನನ್ದು ಅದೇ ಸಭ್ಯತೆಯೇ…. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ, ಅಷ್ಟೇ.

                    ಉತ್ತರ
                    • Nagshetty Shetkar's avatar
                      Nagshetty Shetkar
                      ಮಾರ್ಚ್ 22 2014

                      “ತಮ್ಮನ್ನು ಪ್ರಶ್ನಿಸುವವರ ಜಾತಿ ಕುಲ ಗೋತ್ರ ಗೊತ್ತಿಲ್ಲದಿದ್ರೆ..” ತಮ್ಮ ಜಾತಿ ಕುಲ ಗೋತ್ರ ನಾನೇಕೆ ತಿಳಿದುಕೊಳ್ಳಬೇಕು? ಜಾತಿಯಲ್ಲಿ ನಂಬಿಕೆ ಇಲ್ಲದ ಶರಣರಿಗೆ ನಿಮ್ಮ ಜಾತಿ ಕುಲ ಗೋತ್ರ ತಿಳಿದು ಮಾಡುವಂಥದ್ದು ಏನಿದೆ? ನೀವೂ ಕೂಡ ಜಾತಿಗೆ ಧಿಕ್ ಅಂತ ಹೇಳಿ.

                    • Naani's avatar
                      Naani
                      ಮಾರ್ಚ್ 22 2014

                      ಬರಹಗಾರರ ಜಾತಿ ಹಿಡಿದು ಹಣೆಪಟ್ಟಿ ಕಟ್ಟುವ ನಿಮ್ಮ ಜಾತ್ಯಾತೀತತೆಯ ಸೋಗು ಮೇಲೆ ಜಾಹೀರಾಗಿರುವಾಗ ಇನ್ನೂ ಸಾಕ್ಷಿ ಬೇಕೇ???

                    • Nagshetty Shetkar's avatar
                      Nagshetty Shetkar
                      ಮಾರ್ಚ್ 22 2014

                      ಜಾಹೀರಾಗಿರುವುದು ತಮ್ಮ ವೈದಿಕ ಹಿನ್ನೆಲೆಯ ಆಷಾಢಭೂತಿತನ.

                    • Naani's avatar
                      Naani
                      ಮಾರ್ಚ್ 22 2014

                      ಭಂಡತನದ ಪರಮಾವಧಿ…. ಪುನಃ ಜಾತೀವಾದೀ ವಿಷ; ನಾಚಿಕೆಯಿಲ್ಲದ ಪ್ರದರ್ಶನ.

                    • Naani's avatar
                      Naani
                      ಮಾರ್ಚ್ 22 2014

                      ವೈದಿಕ ಹಿನ್ನೆಲೆಯ ಜಾತಿಯನ್ನು ನನ್ನಲ್ಲಿ ಹುಡುಕುವ ನೀಚತನವೇಕೆ? ನಿಮ್ಮ ಕಪಟಗಳನ್ನು ಕಂಡುಹಿಡಿಯುವ ಬುದ್ದಿವಂತಿಕೆ ಇನ್ನೂ ಬೇರೆ ಹಿನ್ನೆಲೆಯವರಿಗೆ ಬಂದಿಲ್ಲವೆನ್ನುವ ಹುಂಬತನವೇ ಶೆಟ್ಕರ್???? ಕಾಲಬದಲಾಗಿದೆ ಸ್ವಲ್ಪ ಎಚ್ಚರವಾಗಿ.

      • Nagshetty Shetkar's avatar
        Nagshetty Shetkar
        ಮಾರ್ಚ್ 22 2014

        New profile photo? Even that can’t hide your intellectual bankruptcy.

        ಉತ್ತರ
  3. Santhosh Shetty's avatar
    ಮಾರ್ಚ್ 18 2014

    ಅದು ಚಾತಕ ಪಕ್ಷಿ, ತಪ್ಪಾಗಿ ಜಾತಕ ವಾಗಿದೆ

    ಉತ್ತರ

Trackbacks & Pingbacks

  1. ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-3 | ನಿಲುಮೆ
  2. ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-3 – ನಿಲುಮೆ

Leave a reply to ನವೀನ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments