ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 15, 2014

25

ಕಾಮನ ಹಬ್ಬ

‍ನಿಲುಮೆ ಮೂಲಕ

– ಹಂಸಾನಂದಿ

ಕಾಮನ ಹಬ್ಬಇವತ್ತು ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.

ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)

ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||

(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗುವರು!)

ಇದರ ಜೊತೆಗೇ, ಮಹಾ ವೀರ ಅರ್ಜುನ ಹುಟ್ಟಿದ್ದೂ ಈ ದಿನವೇ. ಅವನು ಹುಟ್ಟಿದ್ದು ಫಾಲ್ಗುಣ ಮಾಸದ ಹುಣ್ಣಿಮೆಯಲ್ಲಿ, ಚಂದ್ರ ಉತ್ತರಫಲ್ಗುಣೀ ನಕ್ಷತ್ರದ ಬಳಿ ಇದ್ದಾಗ ಅಂತ ಮಹಾಭಾರತ ಹೇಳುತ್ತೆ. ಆ ಕಾರಣಕ್ಕೇ ಅರ್ಜುನನಿಗೆ ಫಲ್ಗುಣ ಅನ್ನೋ ಹೆಸರೂ ಇದೆ.

ಆಕಾಶ ನೋಡೋ ಆಸಕ್ತಿ ಇದ್ದರೆ ಇವತ್ತು ರಾತ್ರಿ ನೋಡಿ ಪೂರ್ವದಲ್ಲಿ – ಚಂದ್ರ ಅದೇ ಉತ್ತರಾ ನಕ್ಷತ್ರದ (Beta Leonis) ಬಳಿಯಲ್ಲೇ ಇರ್ತಾನೆ. ನಿಜ ಹೇಳಬೇಕೆಂದರೆ, ಈ ಚಾಂದ್ರಮಾನ ತಿಂಗಳಿಗೆ ಫಾಲ್ಗುಣ ಅಂತ ಹೆಸರು ಬಂದಿರೋದೂ ಕೂಡ, ಚಂದ್ರ ಹುಣ್ಣಿಮೆಯಂದು ಪೂರ್ವಫಲ್ಗುಣೀ/ಉತ್ತರ ಫಲ್ಗುಣೀ ನಕ್ಷತ್ರಗಳ ಬಳೆ ಇರ್ತಾನೆ ಅಂತಲೇನೆ. ನಮ್ಮ ಚಾಂದ್ರಮಾನದ ಹನ್ನೆರಡೂ ತಿಂಗಳೂ ಇದೇ ರೀತಿಯಲ್ಲೇ ಬಂದಿವೆ – ಚೈತ್ರ – ಹುಣ್ಣಿಮೆಯಲ್ಲಿ ಚಂದ್ರ ಇರುವುದು ಚಿತ್ತಾ ನಕ್ಷತ್ರದಲ್ಲಿ; ವೈಶಾಖ – ವಿಶಾಖಾ, ಜ್ಯೇಷ್ಠಾ – ಜ್ಯೇಷ್ಠಾ, ಆಷಾಢ – ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ – ಶ್ರವಣ, ಭಾದ್ರಪದ – ಪೂರ್ವಾಭಾದ್ರ/ಉತ್ತರಾಭಾದ್ರ, ಆಶ್ವಯುಜ – ಅಶ್ವಿನೀ, ಕಾರ್ತೀಕ – ಕೃತ್ತಿಕಾ, ಮಾರ್ಗಶೀರ್ಷ – ಮೃಗಶಿರಾ, ಪೌಷ (ಪುಷ್ಯ) – ಪುಷ್ಯ, ಮಾಘ – ಮಖಾ ಹೀಗೆ ಆಯಾ ಹುಣ್ಣಿಮೆಯಂದು ಚಂದ್ರ ಆಯಾ ನಕ್ಷತ್ರದ ಬಳಿ ಇರ್ತಾನೆ ಅನ್ನೋ ಕಾರಣಕ್ಕೇನೇ. ಅಂದ ಹಾಗೆ ಮರೆಯೋದಕ್ಕೆ ಮುಂಚೆ ಮೊನ್ನೆಮೊನ್ನೆ ಓದಿದ ಒಂದು ವಿಷಯ ಹೇಳ್ಬಿಡ್ತೀನಿ. ಮೊನ್ನೆ ನಾನು ಓದಿದ್ದಷ್ಟೇ – ವಿಷಯ ಹಳೇದೇ! ಪುರಾತನ ಚೀನೀ ತಿಂಗಳುಗಳ ಹೆಸರುಗಳೂ ಕೂಡ ಭಾರತದಿಂದ ಹೋಗಿವೆ ಅನ್ನೋದಕ್ಕೆ ಅವರ ಪದ್ಧತಿಯಲ್ಲಿ ಅವುಗಳ ಹಳೆಯ ಹೆಸರೇ ಸಾಕ್ಷಿ ಅನ್ನೋದೇ ಆ ವಿಷಯ!

ಹಿಂದಿ ಟೆಲಿವಿಶನ್ ವಾಹಿನಿಗಳ(ಮತ್ತೆ ಹಿಂದಿ ಸಾಫ್ಟ್ವೇರ್ ಇಂಜಿನಿಯರ್ ಗಳ!) ದಾಳಿ ನಮ್ಮೂರ ಕಡೆ ಆಗೋ ಮೊದಲು, ಹೋಳಿ ಅನ್ನೋ ಹೆಸರು ನಮ್ಮ ಕಡೆ ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಬೀದಿಯಲ್ಲಿ ಓಡಾಡೋರಿಗೆ ಬಣ್ಣ ಎರಚೋದೂ ಇರಲಿಲ್ಲ. ಬಣ್ಣ ಹಾಕೋ ಓಕುಳಿ ಹಬ್ಬವನ್ನ ಹಳ್ಳಿ ಹಳ್ಳಿಯಲ್ಲಿ ಅವರ ದೇವರ ಉತ್ಸವದ ಹೊತ್ತಿನಲ್ಲಿ ಅವರವರ ಪದ್ಧತಿಯ ಪ್ರಕಾರ ಮಾಡ್ಕೋತಿದ್ದರು. ಈ ಫಾಲ್ಗುಣದ ಹುಣ್ಣಿಮೆಗೆ ಕಾಮನ ಹಬ್ಬ ಅಂತಲೋ, ಕಾಮನ ಹುಣ್ಣಿಮೆ ಅಂತಲೋ ಕರೆಯೋದೇ ರೂಢಿ ಆಗಿತ್ತು. ಸಂಜೆ ಹೊತ್ತಲ್ಲಿ ಚಂದಿರನ ಬೆಳಕಲ್ಲಿ, ಅಲ್ಲಲ್ಲಿ ಸೌದೆ ಕಸ ಕಡ್ಡಿ ಮೊದಲಾದ್ದೆಲ್ಲ ಸೇರಿಸಿ, ಅದಕ್ಕೆ ಬೆಂಕಿ ಹಚ್ಚಿ,”ಕಾಮಣ್ಣ ಕಟ್ಟಿಗೆ ಭೀಮಣ್ಣ ಬೆರಣಿ’ ಅಂತಲೋ ಏನೋ ಹಾಡುತ್ತಾ ಇರುತ್ತಿದ್ದ ಹುಡುಗರನ್ನ ಕಾಣಬಹುದಿತ್ತು. ಅದೊಂದು ತರಹ ಸಂಭ್ರಮದ ಕ್ಷಣಗಳಾಗಿರುತ್ತಿದ್ದವು.

ನನ್ನ ಮಟ್ಟಿಗೆ ಹೇಳೋದಾದ್ರೆ ಕಾಮನ ಹಬ್ಬ ಇನ್ನೂ ಒಂದು ದೃಷ್ಟಿಯಲ್ಲಿ ಸಂತೋಷಕ್ಕೆ ಕಾರಣವಾಗ್ತಿತ್ತು. ಏನಂದ್ರೆ, ಶಾಲೆ, ಪರೀಕ್ಷೆಗಳು ಇವೆಲ್ಲ ಮುಗಿಯೋ ಕಾಲ ತಾನೇ ಅದು? ಹದಿನೈದು ದಿನಗಳಲ್ಲಿ ಯುಗಾದಿ, ಮತ್ತೆ ಹದಿನೈದುದಿನಗಳಲ್ಲಿ ನಮ್ಮೂರಿನಲ್ಲಿ ತೇರು! ಅಂದ್ರೆ ಬೇಸಿಗೆ ರಜಾ! ಮಜವೇ ಮಜಾ!

ಆ ದಿನಗಳೆಲ್ಲ ಎಲ್ಲಿ ಹೋದವೋ? ಎಲ್ಲೋ ಕಾಣದಂತೆ ಮಾಯವಾಗಿ ಬಿಟ್ಟಿವೆ ಅನ್ಸುತ್ತೆ. ನನ್ನ ಬಾಳಿನಿಂದಂತೂ ಖಂಡಿತವಾಗಿ..

ಚಿತ್ರ ಕೃಪೆ :http://people.tribe.net ಮತ್ತು shadowchief.com

25 ಟಿಪ್ಪಣಿಗಳು Post a comment
  1. MohanRao .Kulkarni's avatar
    MohanRao .Kulkarni
    ಮಾರ್ಚ್ 16 2014

    ಸಂಶೋಧನಾತ್ಮಕ ವಿಷಯಗಳಿಂದೊಡಗೂಡಿದ ಲೇಖನ, ಈಗಿನ ಪೀಳಿಗೆಯವರಿಗೆ ಅತ್ಯುಪಯುಕ್ತವಾದದ್ದು ,ತಮ್ಮ ಬಾಲ್ಯದ ದಿನಗಳನ್ನು ನೆನೆಸಿ ಲೇಖನ ಓದಿ ಮುಗಿಸುವ ಹೊತ್ತಿಗೆ ,ನಮ್ಮ ಬಾಲ್ಯದ ನೆನಹುಗಳಿಗೆ ಕಳಿಸುತ್ತಾರೆ ಲೇಖಕಿಯರು ,ಧನ್ಯವಾದಗಳು keep it up ,From – Mohanrao.D.Kulkarni Dy Director of Industries & Commerce { rtd } Gulbarga

    ಉತ್ತರ
    • neelanjana's avatar
      ಮಾರ್ಚ್ 28 2014

      ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ, ಮೋಹನ್ ರಾವ್ ಅವರೆ.

      ಉತ್ತರ
  2. valavi's avatar
    valavi
    ಮಾರ್ಚ್ 16 2014

    [[ಆಕಾಶ ನೋಡೋ ಆಸಕ್ತಿ ಇದ್ದರೆ ಇವತ್ತು ರಾತ್ರಿ ನೋಡಿ ಪೂರ್ವದಲ್ಲಿ – ಚಂದ್ರ ಅದೇ ಉತ್ತರಾ ನಕ್ಷತ್ರದ (Beta Leonis) ಬಳಿಯಲ್ಲೇ ಇರ್ತಾನೆ. ನಿಜ ಹೇಳಬೇಕೆಂದರೆ, ಈ ಚಾಂದ್ರಮಾನ ತಿಂಗಳಿಗೆ ಫಾಲ್ಗುಣ ಅಂತ ಹೆಸರು ಬಂದಿರೋದೂ ಕೂಡ, ಚಂದ್ರ ಹುಣ್ಣಿಮೆಯಂದು ಪೂರ್ವಫಲ್ಗುಣೀ/ಉತ್ತರ ಫಲ್ಗುಣೀ ನಕ್ಷತ್ರಗಳ ಬಳೆ ಇರ್ತಾನೆ ಅಂತಲೇನೆ. ನಮ್ಮ ಚಾಂದ್ರಮಾನದ ಹನ್ನೆರಡೂ ತಿಂಗಳೂ ಇದೇ ರೀತಿಯಲ್ಲೇ ಬಂದಿವೆ – ಚೈತ್ರ – ಹುಣ್ಣಿಮೆಯಲ್ಲಿ ಚಂದ್ರ ಇರುವುದು ಚಿತ್ತಾ ನಕ್ಷತ್ರದಲ್ಲಿ; ವೈಶಾಖ – ವಿಶಾಖಾ, ಜ್ಯೇಷ್ಠಾ – ಜ್ಯೇಷ್ಠಾ, ಆಷಾಢ – ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ – ಶ್ರವಣ, ಭಾದ್ರಪದ – ಪೂರ್ವಾಭಾದ್ರ/ಉತ್ತರಾಭಾದ್ರ, ಆಶ್ವಯುಜ – ಅಶ್ವಿನೀ, ಕಾರ್ತೀಕ – ಕೃತ್ತಿಕಾ, ಮಾರ್ಗಶೀರ್ಷ – ಮೃಗಶಿರಾ, ಪೌಷ (ಪುಷ್ಯ) – ಪುಷ್ಯ, ಮಾಘ – ಮಖಾ ಹೀಗೆ ಆಯಾ ಹುಣ್ಣಿಮೆಯಂದು ಚಂದ್ರ ಆಯಾ ನಕ್ಷತ್ರದ ಬಳಿ ಇರ್ತಾನೆ ಅನ್ನೋ ಕಾರಣಕ್ಕೇನೇ. ಅಂದ ಹಾಗೆ ಮರೆಯೋದಕ್ಕೆ ಮುಂಚೆ ಮೊನ್ನೆಮೊನ್ನೆ ಓದಿದ ಒಂದು ವಿಷಯ ಹೇಳ್ಬಿಡ್ತೀನಿ. ಮೊನ್ನೆ ನಾನು ಓದಿದ್ದಷ್ಟೇ – ವಿಷಯ ಹಳೇದೇ! ಪುರಾತನ ಚೀನೀ ತಿಂಗಳುಗಳ ಹೆಸರುಗಳೂ ಕೂಡ ಭಾರತದಿಂದ ಹೋಗಿವೆ ಅನ್ನೋದಕ್ಕೆ ಅವರ ಪದ್ಧತಿಯಲ್ಲಿ ಅವುಗಳ ಹಳೆಯ ಹೆಸರೇ ಸಾಕ್ಷಿ ಅನ್ನೋದೇ ಆ ವಿಷಯ!]] ಮೇಲಿನ ಕೆಲವು ವಿಷಯಗಳು ನಮಗೆ ಗೊತ್ತೇ ಇರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. ಚೀನಾ ತಿಂಗಳ ಹೆಸರು ಇಂಡಿಯದಿಂದ ಹೋಗಿವೆ ಎಂದು ನೀವು ಓದಿರುವೆನೆಂದು ಹೇಳಿದಿರಿ. ಎಲ್ಲಿ ಎಂದು ಹೇಳಿಲ್ಲ. ದಯವಿಟ್ಟು ತಿಳಿಸುವಿರಾ??

    ಉತ್ತರ
  3. SSNK's avatar
    ಮಾರ್ಚ್ 17 2014

    [[ಚೀನಾ ತಿಂಗಳ ಹೆಸರು ಇಂಡಿಯದಿಂದ ಹೋಗಿವೆ ಎಂದು ನೀವು ಓದಿರುವೆನೆಂದು ಹೇಳಿದಿರಿ.]]
    “ಪುರಾತನ ಚೀನೀ ತಿಂಗಳುಗಳ ಹೆಸರುಗಳೂ ಕೂಡ ಭಾರತದಿಂದ ಹೋಗಿವೆ ಅನ್ನೋದಕ್ಕೆ ಅವರ ಪದ್ಧತಿಯಲ್ಲಿ ಅವುಗಳ ಹಳೆಯ ಹೆಸರೇ ಸಾಕ್ಷಿ ಅನ್ನೋದೇ ಆ ವಿಷಯ” – ಮೂಲ ಲೇಖನದಲ್ಲಿ ಈ ಸಾಲುಗಳು ಒಂದು Hyper Link. ಅದರ ಮೇಲೆ click ಮಾಡಿದರೆ, ಆ ವಿಷಯಕ್ಕೆ ಸಂಬಂಧಿಸಿದ ಪುಸ್ತಕದ ಪುಟಕ್ಕೆ ಒಯ್ಯುತ್ತದೆ. ಮೂಲ ಲೇಖನದಲ್ಲಿ, ಆ ಸಾಲಿನ ಮೇಲೆ ಒಮ್ಮೆ ಕ್ಲಿಕ್ಕಿಸಿ ನೋಡಿ.
    ಅಥವಾ, ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ:
    http://tinyurl.com/q9f77vt

    ಉತ್ತರ
    • valavi's avatar
      valavi
      ಮಾರ್ಚ್ 17 2014

      maahiti neediddakke tumba dhanyavadagalu sir.

      ಉತ್ತರ
  4. neelanjana's avatar
    ಮಾರ್ಚ್ 17 2014

    ಹೌದು, ಎಸ್ ಎಸ್ ಎನ್ ಕೆ ಅವರು ತೋರಿಸಿದಂತೆ ಅದೊಂದು ಹೈಪರ್ ಲಿಂಕ್.

    ಅಲ್ಲಿ ನೋಡಿದರೆ ನಿಮಗೆ ಈ ಕೆಳಗಿನ ಹೋಲಿಕೆಗಳು ಮನವರಿಕೆಯಾಗುತ್ತವೆ:

    ಪುಷ್ಯ -.> Peouha

    ಮಾಘ -> Mokue

    ಪಾಲ್ಗುಣ -> Polokuna

    ವೈಶಾಖ -> Teicheku

    ಜೇಷ್ಟಾ -> Checheto

    ಭಾದ್ರಪದ -> Potolo-podo

    ಮಾರ್ಗಶಿರ -> Mokieo-chilo

    ಉತ್ತರ
  5. Nagshetty Shetkar's avatar
    Nagshetty Shetkar
    ಮಾರ್ಚ್ 17 2014

    ಮಾನ್ಯರೇ, ಪ್ರಪಂಚದ ಎಲ್ಲಾ ಸಂಸ್ಕ್ರುತಿಗಳ ಜನರು ಹೇಲುವುದನ್ನು ಕಲಿತದ್ದೂ ಭಾರತದ ವೈದಿಕರಿಂದಲೇ ಅಂತ ಗ್ಹೆಂಟ್ ಪ್ರಾಯೋಜಿತ ಸಂಶೋಧನೆಯನ್ನು ಸಿ ಎಸ್ ಎಲ್ ಸಿ ಮೂಲಕ ಮಾಡಿಸಿ ಕನ್ನಡಪ್ರಭಾ ಪತ್ರಿಕೆಯಲ್ಲಿ ಪ್ರಕಟಿಸಿ, ನಿಮಗೆ ಸಮಾಧಾನವಾಗುತ್ತದೆ ಎನ್ನುವುದಾದರೆ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಮಾರ್ಚ್ 17 2014

      ಹೂಂ..ಅದರ ಜೊತೆಗೆ ಕೆಲವರು ‘ಬಾಯಿಯಿಂದ ಹೇಲುವುದನ್ನು ಕಲಿತಿದ್ದು ಎಡಬಿಡಂಗಿಗಳಿಂದ’ ಅನ್ನುವುದನ್ನೂ ಕೂಡ ಪ್ರಕಟಿಸಿ!.

      ಉತ್ತರ
    • SSNK's avatar
      ಮಾರ್ಚ್ 17 2014

      [[ಮಾನ್ಯರೇ, ಪ್ರಪಂಚದ ಎಲ್ಲಾ ಸಂಸ್ಕ್ರುತಿಗಳ ಜನರು ಹೇಲುವುದನ್ನು ಕಲಿತದ್ದೂ ಭಾರತದ ವೈದಿಕರಿಂದಲೇ ಅಂತ ಗ್ಹೆಂಟ್ ಪ್ರಾಯೋಜಿತ ಸಂಶೋಧನೆಯನ್ನು ಸಿ ಎಸ್ ಎಲ್ ಸಿ ಮೂಲಕ ಮಾಡಿಸಿ ಕನ್ನಡಪ್ರಭಾ ಪತ್ರಿಕೆಯಲ್ಲಿ ಪ್ರಕಟಿಸಿ, ನಿಮಗೆ ಸಮಾಧಾನವಾಗುತ್ತದೆ ಎನ್ನುವುದಾದರೆ.]]
      ಶೇಟ್ಕರರೇ,
      ನಿಮ್ಮ ಅಸಂಬದ್ಧ ಪ್ರತಿಕ್ರಿಯೆಗಳಿಗೆ ಎಣೆಯೇ ಇಲ್ಲ!
      ಲೇಖಕರು ತಾವು ಹೇಳಿದ ವಿಷಯಕ್ಕೆ ಸಂಬಂಧಿಸಿದ ಪುರಾವೆಯನ್ನು ಕೊಟ್ಟಿದ್ದಾರೆ.

      ನೀವು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಿದವರು, ಅಂದರೆ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲವರು ಎಂದು ತಿಳಿದಿದ್ದೇನೆ.
      ಆದರೆ, ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದರೆ, ಯಾರೋ ಶಾಲಾ ವಿದ್ಯಾರ್ಥಿಗಳು ಬರೆದಂತೆ ಅನ್ನಿಸುತ್ತದೆ.
      ನಿಮ್ಮನ್ನು ನೀವೇ ಏಕೆ ಚಿಕ್ಕವರನ್ನಾಗಿ ಮಾಡಿಕೊಳ್ಳುತ್ತಿರುವಿರಿ?
      ಲೇಖಕರು ಬರೆದದ್ದು ಸರಿಯಿಲ್ಲವೆಂದಾದರೆ, ನಿಮ್ಮ ಮಾತನ್ನು ಸಮರ್ಥಿಸುವ ಪುರಾವೆ ತೋರಿಸಿದರಾಯಿತಲ್ಲವೇ?

      ನೀವು ಪ್ರಾಯಶಃ ಲೇಖಕರು ತಿಳಿಸಿದ ಪುಸ್ತಕವನ್ನು ತೆರೆದು ನೋಡಲೂ ಇಲ್ಲವೆನಿಸುತ್ತದೆ.
      ನಿಜಕ್ಕೂ ನಿಮ್ಮ ಮಾತಿನಲ್ಲಿ ಸತ್ಯಾಂಶವಿದ್ದರೆ ಅವರು ಹೇಳಿದ ಪುಸ್ತಕದಲ್ಲಿನ ನಾಲ್ಕಕ್ಷರ ಓದಿ, ಅದರ ಕುರಿತಾಗಿ ವಿಶ್ಲೇಷಣೆ ಮಾಡಿ. ಅದು ಸಾಧ್ಯವಾಗದಿದ್ದರೆ, ಮೌನವಾಗಿರಿ.

      ಉತ್ತರ
    • Naani's avatar
      Naani
      ಮಾರ್ಚ್ 18 2014

      ಈ ಹೇತ್ಲಾಂಡಿ ಶೆಟ್ಕರ್, ತನ್ನ ಬಾಯಿಯೊಳಗೆ ಪ್ರತಿದಿನ ಏನು ಹೋಗುತ್ತೆ ಅನ್ನೊಧನ್ನ ಇಲ್ಲಿ ಪ್ರಮಾಣೀಕರಿಸಿದೆ.

      ಉತ್ತರ
      • Nagshetty Shetkar's avatar
        Nagshetty Shetkar
        ಮಾರ್ಚ್ 18 2014

        ಮಾಡರೇಟರ್ ಅವರೇ, ನಾಣಿ ಅವರ ಕಮೆಂಟು ಹೇಸಿಗೆ ಹುಟ್ಟಿಸುವಷ್ಟು ಅಸಹ್ಯಕರ ಹಾಗೂ ಕೀಳುಮಟ್ಟದ್ದಾಗಿದೆ. ನಾಣಿ ಅವರಿಗೆ ಛೀಮಾರಿ ಹಾಕಿ.

        ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಮಾರ್ಚ್ 18 2014

          ಪಾಪ..ಮೊದಲು ಸೆಗಣಿ ಹಾಕಿದ್ದೆ “[ಎಲ್ಲಾ ಸಂಸ್ಕ್ರುತಿಗಳ ಜನರು ಹೇಲುವುದನ್ನು ಕಲಿತದ್ದೂ ಭಾರತದ ವೈದಿಕರಿಂದಲೇ ]” ತಾನು ಎಂಬುದು ಮರೆತುಹೋಯಿತೇನೊ ನಮ್ಮ ಸಾಹೇಬರಿಗೆ..!

          ಉತ್ತರ
        • Naani's avatar
          Naani
          ಮಾರ್ಚ್ 18 2014

          ತಾವು ಹೇತಮೇಲೆ ಅದರಮೇಲೆ ಇತರರು ಕಲ್ಲು ಹೊಡೆದರೆ ನಿಮ್ಮ ಕೆಳಗೆ ಮತ್ತು ಬಾಯಿಗೆ ಬಂದು ಬಿದ್ದರೆ ಚಪ್ಪರಿಸಿಕೊಳ್ಳಿ. ಇಲ್ಲ ದಿನಾ ಬಂದು ಇಲ್ಲಿ ‘ಅದು’ ಮಾಡೋದನ್ನು ಬಿಟ್ಟು ಚರ್ಚೆಯ ವಿಷಯದ ಬಗ್ಗೆ ಸರಿಯಾದ ಪ್ರಶ್ನೆಗಳನ್ನು ಕೇಳಿ. ಇಲ್ಲ ಅಂದ್ರೆ ನಿಮ್ಮ ತಕರಾರುಗಳನ್ನು ಗಣ್ಯವಾಗಿ ಮುಂದಿಡಿ, ಎಲ್ಲರೂ ಗೌರವಿಸುತ್ತಾರೆ. ಇಲ್ಲವೇ ನೀವು ‘ಮಾಡಿದ್ದು’ ನಿಮ್ಮ ಬಾಯಿಗೇ ಬಂದು ಬೀಳುತ್ತೆ, ಅಷ್ಟೆ….

          ಉತ್ತರ
          • SSNK's avatar
            ಮಾರ್ಚ್ 18 2014

            [[ಜಾತಿವ್ಯವಸ್ಥೆಯಂತ]]

            ಎದ್ದು ನಿಲ್ಲಬೇಕಿರುವುದು ಜಾತಿವ್ಯವಸ್ಥೆಯ ವಿರುದ್ಧವಲ್ಲ, ಜಾತೀಯತೆಯ ವಿರುದ್ಧ.
            ಜಗತ್ತಿನ ಎಲ್ಲ ದೇಶಗಳಲ್ಲೂ ಜಾತಿಗಳಿವೆ – ಅವುಗಳಿಗೆ ಬೇರೆ ಹೆಸರು ನೀಡಿರುತ್ತಾರೆ ಅಷ್ಟೇ.
            ಪ್ರಾಣಿ-ಪಕ್ಷಿಗಳಲ್ಲೂ ಜಾತಿಯಿದೆ.
            ಜಾತಿ ಎನ್ನುವುದು ಪ್ರಕೃತಿದತ್ತವಾದದ್ದು. ಅದನ್ನು ತೊಲಗಿಸಲು ಸಾಧ್ಯವಿಲ್ಲ ಎನ್ನುವುದು ಇತಿಹಾಸದಲ್ಲಿ ಅನೇಕ ಬಾರಿ ನಿರೂಪಣೆಯಾಗಿದೆ.
            “ಎಲ್ಲರೂ ಒಂದೇ ಜಾತಿ; ಲಿಂಗ ಧರಿಸಿದವರೆಲ್ಲಾ ಒಂದೇ” ಎಂದು ಸಾರಿದ ಬಸವಣ್ಣನವರದೇ ಒಂದು ಹೊಸ ಜಾತಿಯಾಯಿತಲ್ಲವೇ?

            ನೀವು ಜಾತಿ ನಿರ್ಮೂಲನೆಯ ಕುರಿತಾಗಿ ಕೂಗಾಡುವುದು ಹೇಗಿದೆ ಎಂದರೆ, “ಕತ್ತಲು, ಕತ್ತಲು,….” ಎಂದು ಕೂಗುತ್ತಾ ಕತ್ತಲನ್ನು ಓಡಿಸಲು ಪ್ರಯತ್ನಿಸಿದಂತೆ. ಆ ರೀತಿ ಕೂಗಾಡುವುದರಿಂದ ಕತ್ತಲು ದೂರಾಗುವುದಿಲ್ಲ. ಒಂದು ಸಣ್ಣ ಹಣತೆಯೂ ಕತ್ತಲನ್ನು ಓಡಿಸಿಬಿಡುತ್ತದೆ.
            ಅದೇ ರೀತಿ, ಜಾತಿಯನ್ನು ಓಡಿಸಿ ಎಂದು ಕೂಗಾಡುವ ಬದಲು, ಜಾತಿಯನ್ನು ಸಣ್ಣದಾಗಿಸುವ ದೊಡ್ಡದನ್ನು ಜನರ ಮುಂದಿಡಿ; ಜಾತಿ ತಾನಾಗಿಯೇ ಅಲ್ಪವಾಗುತ್ತದೆ.
            ಒಂದು ಗೆರೆಯನ್ನು ಮುಟ್ಟದೆ ಸಣ್ಣದಾಗಿಸಲು, ಅದರ ಪಕ್ಕದಲ್ಲಿ ದೊಡ್ಡ ಗೆರೆ ಎಳೆದಂತೆ ಇದು.
            ಜಾತಿಯನ್ನು ಸಣ್ಣದಾಗಿಸಲು, ಜನರು ಜಾತಿ ಮರೆಯುವಂತೆ ಮಾಡಲು ಏನೆಲ್ಲಾ ಮಾಡಬಹುದು, ಜಾತಿಗಿಂತ ದೊಡ್ಡದಾದ ಸಿದ್ಧಾಂತ ಯಾವುದು ಎನ್ನುವುದನ್ನು ಕುರಿತು ಚಿಂತಿಸಿ. ಅದು ನಮ್ಮ ದೇಶಕ್ಕೆ ಅನ್ವಯವಾಗುವಂತಿದ್ದರೆ ಮಾತ್ರ, ಅದು ಇಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನೂ ನೆನಪಿಡಿ. ಎರವಲು ಸಿದ್ಧಾಂತಗಳು ಇಲ್ಲಿ ಯಶಸ್ವಿಯಾಗುವುದಿಲ್ಲ.

            ಉತ್ತರ
        • ರಾಕೇಶ್ ಶೆಟ್ಟಿ's avatar
          ಮಾರ್ಚ್ 18 2014

          ಶೆಟ್ಕರ್ ಅವರೇ,

          ಈ ಕಮೆಂಟನ್ನು ಕೆಟ್ಟದಾಗಿ ಶುರು ಮಾಡಿದ್ದು ಯಾರು ಮತ್ತು ಯಾರಿಗೆ ಮಾಡರೇಟರ್ ಛೀಮಾರಿ ಹಾಕಬೇಕು ಅನ್ನುವುದನ್ನು ನೀವೆ ಒಮ್ಮೆ ನೋಡಿಕೊಳ್ಳಿ.
          ಸಾರ್ವಜನಿಕ ವೇದಿಕೆಯಲ್ಲಿ ಹೀಗೆ ಕೆಟ್ಟದಾಗಿ ಬರೆಯುವುದ್ಯಾಕೆ?

          ಉತ್ತರ
          • Nagshetty Shetkar's avatar
            Nagshetty Shetkar
            ಮಾರ್ಚ್ 19 2014

            ಮಿ. ರಾಕೇಶ್, ನಿಮ್ಮ ನಿಜವಾದ ಬಣ್ಣ ಏನು ಅಂತ ತಿಳಿಯಿತು. ಒಬ್ಬ ಶರಣನ ಮೇಲೆ ನಮೋ ಪಡೆಯ ನವವೈದಿಕಶಾಹಿ ಮಾತಿನ ದೌರ್ಜನ್ಯ ಹಲ್ಲೆ ನಡೆಸುತ್ತಲೇ ಬಂದಿರುವುದನ್ನು ಸಮರ್ಥಿಸಿಕೊಳ್ಳುವ ನಿಮ್ಮಿಂದ ಸತ್ಯಪರತೆಯನ್ನು ನಿರೀಕ್ಷಿಸುವುದು ಮೂರ್ಖತನ.

            ಉತ್ತರ
            • SSNK's avatar
              ಮಾರ್ಚ್ 19 2014

              ಶೇಟ್ಕರ್ ಅವರೇ,

              “ಅವನು ನನ್ನನ್ನು ಕೀಟಲೆ ಮಾಡಿದ” ಎಂದು ಅಮ್ಮನ ಬಳಿ ಹೋಗಿ ಚಾಡಿ ಹೇಳಿ ಅತ್ತು ಗೋಳಾಡುವ ಮಗುವಂತೆ ಆಡುತ್ತಿರುವಿರಿ ಏಕೆ?
              “ಬೀಜ ಬಿತ್ತಿದಂತೆ ಬೆಳೆ ಬೆಳೆಯುತ್ತದೆ” ಎನ್ನುವುದನ್ನು ನೆನಪಿಡಿ.
              ಬಾಯಿಗೆ ಬಂದಂತೆ ಮಾತನಾಡಿ ಎಗರಾಡುವುದು. ನಂತರ ಶರಣನೆಂಬ ಸೋಗು ಹಾಕುವುದು. ಏನ್ರೀ ನಿಮ್ಮ ಅವಸ್ಥೆ!?

              ಈ ಲೇಖನಕ್ಕೆ ಸಂಬಂಧಿಸಿದಂತೆ ನೀವು ಒಂದಾದರೂ ಅರ್ಥವತ್ತಾದ ಪ್ರತಿಕ್ರಿಯೆ ಬರೆದಿದ್ದರೆ ತೋರಿಸಿ.
              “ಕಾಮನ ಹಬ್ಬ”ಕ್ಕೆ ಸಂಬಂಧಿಸಿದಂತೆ ಬರೆದು ಬಹಳ ಉತ್ತಮ ಬರಹದಲ್ಲೂ ಕೊಂಕು ನುಡಿಯುತ್ತಿರುವ ನೀವು, “ಮೊಸರಿನಲ್ಲೂ ಕಲ್ಲು ಹುಡುಕುವ” ಬುದ್ಧಿಯವರೆನ್ನುವುದು ಎಲ್ಲರಿಗೂ ತಿಳಿದು ಹೋಗಿದೆ.

              ನಾನು ಈ ಹಿಂದೆಯೇ ನಿಮಗೆ ಸವಾಲು ಹಾಕಿದ್ದೇನೆ. ನಿಮಗೆ ಲವಲೇಶದಷ್ಟು ಸ್ವಾಭಿಮಾನವಿದ್ದಿದ್ದರೂ, ನೀವು ಸವಾಲನ್ನು ಸ್ವೀಕರಿಸಿ ಅರ್ಥಪೂರ್ಣ ಪ್ರತಿಕ್ರಿಯೆ ಹಾಕುತ್ತಿದ್ದಿರಿ. ನಿಮ್ಮಲ್ಲಿ ‘ಅದಿಲ್ಲ’ ಎನ್ನುವುದನ್ನು ನೀವೇ ಒಪ್ಪಿಕೊಂಡಿರುವಿರಿ ಎನ್ನಿಸುತ್ತದೆ. ಸಿಕ್ಕಿಹಾಕಿಕೊಂಡಾಗ “Fake Id” ನಾಟಕವಾಡುತ್ತಿದ್ದವರು, ಇದೀಗ “ಹೊಸ ನಾಟಕ” ಶುರು ಮಾಡಿರುವಿರಿ ಅಷ್ಟೇ. ಇಲ್ಲಿಂದ ಪಲಾಯನಗೈಯ್ಯಲು ನಿಮಗೊಂದು ಕಾರಣ ಬೇಕಿತ್ತು.
              ದಿಲ್ಲಿಯಿಂದ ಕೇಜ್ರೀವಾಲ್ ಓಡಿದಂತೆ ನೀವು ಈ ಚರ್ಚೆಯಿಂದ ಓಡುತ್ತಿರುವುದು ಚೆನ್ನಾಗಿದೆ!! 😀

              ಉತ್ತರ
            • Naani's avatar
              Naani
              ಮಾರ್ಚ್ 19 2014

              ಮೂರ್ಖತನದ ಮಾತುಗಳು ಅನುಭವದಿಂದ ಬಂದಿದೆ. ‘ಶರಣ’ರ ಗುಣಗಳ ಲವಲೇಶವೂ ಇಲ್ಲದೆ ಬರೀಸುಳ್ಳು, ಬುರುಡೆ, ದ್ವೇಷ, ಮತ್ಸರ, ಕುಹಕಗಳನ್ನೇ ಆಡುತ್ತಿರುವ ತನ್ನನ್ನೂ ಯಾರಾದರೂ ಶರಣರೆಂದರೆ ಅದು ಶರಣಕುಲಕ್ಕೇ ಅವಮಾನ. ಸುಳ್ಳುಗಳ ಬುರಡೆಪುರಾಣಗಳ ಅವತಾರವೇ ಆಗಿರುವ ನಿಮಗೆ ಯಾರೂ ಸತ್ಯಪರರಾಗಿರುವಂತೆ ಕಾಣಲು ಸಾಧ್ಯವೇ ಇಲ್ಲ. ಹಾಗೆ ಕಂಡರೆ ಆತ ಸತ್ಯಪರನಾಗಿರಲು ಸಾಧ್ಯವೇ ಇಲ್ಲ. ಕಳ್ಳನಿಗೆ ಕಳ್ಳನೆ ಒಳ್ಳೆಯವನಂತೆ; ಆತನಿಗೆ ನೇರವಂತ ಕಳ್ಳನಂತೆ ಕಾಣುತ್ತಾನೆ ಸಹಜವಾಗಿ. ನೀವೆಷ್ಟು ಪರಚಿಕೊಂಡರೂ ನಿಮ್ಮ ದೇಹವೇ ಹುಣ್ಣಾಗುವುದೇ ವಿನಃ ಅನ್ಯರದ್ದಲ್ಲ. ಮೊದಲು ಪರಚಿಕೊಳ್ಳುವುದನ್ನು ಕೈಬಿಟ್ಟು ಸಂವಾದಗಳ ಪ್ರಾಥಮಿಕ ತಿಳುವಳಿಕೆಯನ್ನು ಕಲಿತುಕೊಂಡು ಬನ್ನಿ. ಇಲ್ಲವೇ ನೀವುಬಿತ್ತಿದ್ದನ್ನು ನೀವೇ ತಿನ್ನಬೇಕಾಗುತ್ತದೆ. ಅದೇ ಕರ್ಮಫಲ!!!! ಹ್ಹ ಹ್ಹ ಹ್ಹ ಹ್ಹ !!!!

              ಉತ್ತರ
              • Naani's avatar
                Naani
                ಮಾರ್ಚ್ 19 2014

                ತಿದ್ದುಪಡಿ: ಬರೀಸುಳ್ಳು, ಬುರುಡೆ, ದ್ವೇಷ, ಮತ್ಸರ, ಕುಹಕಗಳನ್ನೇ ಆಡುತ್ತಿರುವ “ತಮ್ಮನ್ನು” ಯಾರಾದರೂ ಶರಣರೆಂದರೆ ಅದು ಶರಣಕುಲಕ್ಕೇ ಅವಮಾನ.

                ಉತ್ತರ
  6. Nagshetty Shetkar's avatar
    Nagshetty Shetkar
    ಮಾರ್ಚ್ 17 2014

    ಮಿ. ಪೈ, ನಿಮ್ಮ ಮನಸ್ಸಿನಲ್ಲಿರುವ ಹೊಲಸನ್ನೇ ಇಲ್ಲಿ ಹರಿಸಿದ್ದೀರಿ. ಬಾಯಿಂದಲೋ ಮತ್ತಾವ ರಂಧ್ರ ಸಂದುಗಳಿಂದಲೋ ಅನ್ನುವುದನ್ನು ನೀವೇ ಬಲ್ಲಿರಿ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಮಾರ್ಚ್ 17 2014

      ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವೆ ಗುರುಗಳೆ?? ನಮ್ಮಲ್ಲಿ ಒಂದು ಮಾತಿದೆ..”ಹೇಳುವುದ್ಯಾಕೆ?ಹೇಳಿಸಿಕೊಳ್ಳಲಿಕ್ಕೆ” ಅಂತ.!
      ಅಂದ ಹಾಗೆ ಎಡಬಿಡಂಗಿಗಳು ‘ಮತ್ತಾವ ರಂಧ್ರ ಸಂದುಗಳಿಂದ’ ಏನೇನು ಮಾಡುತ್ತಾರೆ ಎಂಬ ಬಗ್ಗೆ ಉನ್ನತ ಸಂಶೋಧನೆ ನಡೆಸಲು ನೀವೇ ಅತ್ಯುತ್ತಮ ಅರ್ಹತೆಯುಳ್ಳವರು. ಮಾಡಿ..ಮಾಡಿದರೆ ಯಾವುದಾದರೂ ಮಾವೊ ಜಾತಿಯ ಕರಪತ್ರ ಪ್ರಕಟನಾ ವೇದಿಕೆ ಪ್ರಕಟಿಸಬಹುದು.

      ಉತ್ತರ
    • SSNK's avatar
      ಮಾರ್ಚ್ 18 2014

      ಶೇಟ್ಕರ್ ಅವರೇ,
      ನಿಮಗೆ ನಿಜಕ್ಕೂ ಸ್ವಾಭಿಮಾನವಿದ್ದರೆ, ನಿಮ್ಮ ಸ್ವಂತಿಕೆಯಲ್ಲಿ ನಂಬಿಕೆಯಿದ್ದರೆ, ನಿಮ್ಮ ಬುದ್ಧಿಯನ್ನು ಮಾರಿಕೊಂಡಿಲ್ಲದಿದ್ದರೆ, ಲೇಖಕರು ಉಲ್ಲೇಖಿಸಿದ ಪುಸ್ತಕದ ವಿಷಯದ ಮೇಲೆ ಚರ್ಚೆ ನಡೆಸಿ, ನಿಮ್ಮ ಮಾತು ಸತ್ಯವೆಂದು ನಿರೂಪಿಸಿ.

      ಉತ್ತರ
  7. neelanjana's avatar
    ಮಾರ್ಚ್ 17 2014

    ಅಯ್ಯೋ ದೇವರೇ ? ಕೆಲವರಿಗೆ ಇದ್ದದ್ದು ಇದ್ದ ಹಾಗೇ ಆಧಾರ ಸಮೇತ ಕೊಟ್ಟರೂ ಓದಿ ತಿಳಿಯುವಷ್ಟು ತಾಳ್ಮೆ ಇರುವುದಿಲ್ಲ ಎನ್ನುವುದು ಈಗ ಗೊತ್ತಾಯಿತು. ಅಷ್ಟಕ್ಕೂ ಈ ಆಧಾರ ಯಾವ “ವೈದಿಕ”ರೂ ಕೊಟ್ಟದ್ದಲ್ಲ ಅನ್ನುವುದು ಪಾಪ, ಸುಮ್ಮನೇ ಕಾಮೆಂಟ್ ಹಾಕುವವರಿಗೆ ತಿಳೀಲಿಲ್ಲ ಅಂತ ಕಾಣುತ್ತೆ!

    ಒಂದು ಕಾಲದಲ್ಲಿ ಈ hidden agenda ಇಟ್ಟುಕೊಂಡು ಬರೆಯುತ್ತಿದ್ದವರ ಹೆಸರಿನ ಹಿಂದಿರುವ ಡಿಗ್ರಿಯನ್ನು ನೋಡಿ, ಓಹೋ, ಒಂದು ವೇಳೆ ಇಂತಹವರು ಬರೆದಿರುವುದು ನಿಜವೇ ಇರಬಹುದು ಅಂತ ಅಂದ್ಕೋತಿದ್ದೆವು, ಈಗ ಇಂಟರ್ನೆಟ್ ಕಲಿಗಾಲ ಸ್ವಾಮೀ, ಬರೀ ಯೂನಿವರ್ಸಿಟಿ ಡಿಪಾರ್ಟ್ಮೆಂಟ್ ಗಳಲ್ಲಿ ಇರುತ್ತಿದ್ದ ಹಳೇ ಪುಸ್ತಕಗಳು ಈಗ ನಮ್ಮಂತಹ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಸಿಗ್ತಾ ಇದೆ. ಏನು ಮಾತಾಡೋಕೋ ಆಧಾರ ಕೊಟ್ಟೇ ಮಾತಾಡ್ಟಾರೆ, ಇಲ್ಲ ಅಂದ್ರೆ ಸಾಕ್ಷಿ ಪುರಾವೆ ಕೇಳುತ್ತಾರೆ.

    ಹಾಗಾಗಿ ಸ್ವಪ್ರಯೋಜನವನ್ನೇ ಮುಂದಿಟ್ಟುಕೊಂಡಿರುವ ಕೆಲವು ಮಹನೀಯರಿಗೆ ತಮಗೆ ಬೇಡವೆನಿಸಿದ ಸತ್ಯಗಳನ್ನ ಮುಚ್ಚಿಡಕ್ಕಾಗುತ್ತಿಲ್ಲ (Selective suppression of facts) ಅನ್ನೋ ಕೊರಗಿರಬಹುದು – ಏನು ಮಾಡಕ್ಕಾಗುತ್ತೆ?

    ನಾನು ಹೇಳಿದೆನಲ್ಲ, ಇದು ಇಂಟರ್ನೆಟ್ ಕಲಿಗಾಲ – ಕಾಲಧರ್ಮ ಯಾರನ್ನೂ ಬಿಡೋಲ್ಲ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments