ರಿಲಿಜನ್ನಿನ ಅಫೀಮು “ಶಂಕರಾಚಾರ್ಯ ಹಿಲ್” ಅನ್ನು “ತಖ್ತ್-ಈ-ಸುಲೇಮಾನ್” ಆಗಿಸುತ್ತದೆ
– ರಾಕೇಶ್ ಶೆಟ್ಟಿ
ಬೆಳಗ್ಗೆ ಎದ್ದು ನಮ್ಮಲ್ಲಿ ಕೆಲವರು ಹೇಳುತಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅನ್ನುವ ಉದ್ಘೋಷವನ್ನು ಇನ್ಮುಂದೆ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು ಅನ್ನಿಸುತ್ತಿದೆ.ಯಾಕೆಂದರೆ, ನಮ್ಮ ’ಭಾರತೀಯ ಪುರಾತತ್ವ ಇಲಾಖೆ’ ಮಾಡುತ್ತಿರುವ ಕೆಲಸವೇ ಅಂತದ್ದು.
ಟ್ರಿಬ್ಯೂನ್ ಪೇಪರಿನಲ್ಲಿ ಬಂದ ವರದಿಯ ಪ್ರಕಾರ,ಜಮ್ಮು-ಕಾಶ್ಮೀರದ “ಶಂಕರಾಚಾರ್ಯ ಹಿಲ್” ಅನ್ನು ಭಾರತೀಯ ಪುರಾತತ್ವ ಇಲಾಖೆ “ತಖ್ತ್-ಈ-ಸುಲೇಮಾನ್” ಅಂತ ಬದಲಾಯಿಸಿದೆ.ಕಾಶ್ಮೀರವನ್ನು ಈ ಹಿಂದೆ ಶಾರದ ದೇಶ,ಶಾರದ ಪೀಠ ಅಂತೆಲ್ಲ ಕರೆಯುತಿದ್ದರು.ಮೇಲೆ ಹೇಳಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅದನ್ನೇ ಸಾರುತ್ತಿದೆ.ಇನ್ನು ಶಂಕರಾಚಾರ್ಯರು ದೇಶದ ನಾಲ್ಕು ಮೂಲೆಗಳಿಗೂ ಸಾಗಿ ಶಾರದ ಪೀಠಗಳನ್ನು ಸ್ಥಾಪಿಸಿದ್ದು ಎಲ್ಲರಿಗೂ ತಿಳಿದಿರುವುದೇ,ಹಾಗಿದ್ದ ಮೇಲೆ,ಇವನೆಲ್ಲಿಂದ ಬಂದ ಸುಲೇಮಾನ್?
ದಾಲ್ ನದಿಯ ಕಡೆಗೆ ಮುಖಮಾಡಿ ನಿಂತಿರುವ ಈ ಪರ್ವತವಿರುವುದು ಶ್ರೀನಗರದಲ್ಲಿ.ಇದೇ ಜಾಗದಲ್ಲಿ ಆದಿ ಶಂಕರಾಚಾರ್ಯರು 788-820 ADರಲ್ಲಿ ನೆಲೆಸಿದ್ದರು ಅನ್ನುತ್ತದೆ ಇತಿಹಾಸ.ಪಂಡಿತ್ ಆನಂದ್ ಕೌಲ್ ಅವರ ಪ್ರಕಾರ ಈ ದೇವಸ್ಥಾನದ ನಿರ್ಮಾಣ ಮಾಡಿದ್ದು ಸಂಡಿಮನ್ ಎಂಬುವವ 2629 -2564 BC ಯಲ್ಲಿ.ಆ ನಂತರ ರಾಜ ಗೋಪಾದಿತ್ಯ 426–365 BCರಲ್ಲಿ ಮತ್ತು ರಾಜ ಲಲಿತಾಧಿತ್ಯ 697–734BC ರಲ್ಲಿ ಇದರ ಪುನುರುಜ್ಜೀವನ ಮಾಡಿಸಿದ್ದರು.ಝೈನ್-ಉಲ್-ಅಬಿದ್ದೀನ್ ಅವರು ದೇವಸ್ಥಾನದ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಿದ್ದರು.1841–1846ರಲ್ಲಿ ಸಿಖ್ ಗವರ್ನರ್ ಶೇಕ್ ಗುಲಾಂ ಮೊಹಿದುದ್ದೀನ್ ಕೂಡ ದುರಸ್ತಿ ಮಾಡಿಸಿದ್ದರು.ಇದನ್ನು ಜ್ಯೋತೇಶ್ವರ ದೇವಸ್ಥಾನವೆಂದು ಕರೆಯಲಾಗುತಿತ್ತು.ಬೌದ್ಧರಿಗೂ ಪೂಜ್ಯನೀಯವಾದ ಸ್ಥಳವಿದು.ಅವರಿದನ್ನು ಪಾರಸ್- ಪಹಾರ್ ಅನ್ನುತ್ತಾರೆ.ಶಂಕರರು ಇಲ್ಲಿ ಶಿವಲಿಂಗ ಪ್ರತಿಷ್ಟಾಪಿಸಿದ್ದರು.ಶಂಕರರು ಇಲ್ಲಿ ಬಂದನಂತರ,ಈ ಪರ್ವತ ಮತ್ತು ದೇವಸ್ಥಾನವನ್ನು ಶಂಕರಾಚರ್ಯರ ಹೆಸರಿನಿಂದಲೇ ಗುರಿತಿಸಲಾಗುತ್ತಿದೆ.
ಇತಿಹಾಸ ಹೀಗಿರುವಾಗ ,”ಪುರಾತತ್ವ ಇಲಾಖೆಯು ಹಾಕಿರುವ ಮಾಹಿತಿ ಫಲಕದಲ್ಲಿ ದೇವಸ್ಥಾನದ ಮೇಲ್ಛಾವಣಿಯನ್ನು ಮುಘಲ್ ದೊರೆ ಷಹಜಹಾನ್ ಕಟ್ಟಿಸಿದ ಅಂತಷ್ಟೇ ಹೇಳುತ್ತಿದೆಯೇ ಹೊರತು,ಈ ಮೊದಲು ದೇವಸ್ಥಾನ ನಿರ್ಮಾಣವಾಗಿದ್ದು ಯಾರ ಕಾಲದಲ್ಲಿ ಅನ್ನುವ ಮಾಹಿತಿಯನ್ನು ಹಾಕಲಾಗಿಲ್ಲ…! ಮುಘಲ್ ದೊರೆ ಜಹಂಗೀರನ ಹೆಂಡತಿಯ ನೂರ್ ಜಹಾನ್ ಆದೇಶದ ಮೇರೆಗೆ ದ್ವಂಸಗೊಳಿಸಲಾಗಿದ್ದ ಲಿಂಗವನ್ನು ಮತ್ತೆ ಪ್ರತಿಷ್ಟಾಪಿಸಿದ್ದು ಡೋಗ್ರಾ ರಾಜಮನೆತನದ ಅರಸರು ಅನ್ನುವ ಮಾಹಿತಿಯೂ ಇಲ್ಲ.” ಅನ್ನುತ್ತಾರೆ ಕಾಶ್ಮೀರಿ ಇತಿಹಾಸಕಾರ ಪ್ರೇಂದುಮಾನ್ ಜೋಸೆಫ್ ಧರ್.
ಆದರೆ, ಭಾರತೀಯ ಪುರಾತತ್ವ ಇಲಾಖೆ ಈಗ ಹೆಸರು ಬದಲಾಯಿಸುತ್ತಿರುವುದರ ಹಿಂದಿನ ಉದ್ದೇಶವೇನು? ನಮ್ಮ ಸಂಸ್ಕೃತಿಯ ಕುರುಹುಗಳನ್ನು ಆದಷ್ಟು ಬೇಗ ಕಾಶ್ಮೀರದಿಂದ ಅಳಿಸುವುದೇ? ಇಲ್ಲವೆಂದಾದರೆ, ಎಲ್ಲಿಯ ಆದಿ ಶಂಕರಾಚಾರ್ಯರು,ಎಲ್ಲಿಯ ಸುಲೇಮಾನ್? ಗೋಕುಲಾಷ್ಟಮಿ-ಇಮಾಂ ಸಾಬಿಯ ಸಂಬಂಧ…!? ಇದು ಕಾಶ್ಮೀರಿ ಮುಸಲ್ಮಾರನ್ನು ಓಲೈಸುವ ಸೆಕ್ಯುಲರ್ ರಾಜಕೀಯದ ಮುಂದುವರೆದ ಭಾಗವಲ್ಲದೇ ಮತ್ತಿನ್ನೇನು?
ಹೆಸರು ಬದಲಾಗಿದ್ದೇಕೆ ಅನ್ನುವುದರ ಹಿಂದೆ ಜೀಸಸ್ ಕಾಶ್ಮೀರದಲ್ಲಿದ್ದರು ಅನ್ನುವ ಒಂದು ಊಹೆಯ ಕತೆಯ ಕಾರಣವಿದೆ.ಇತಿಹಾಸಕಾರರು ಜೀಸಸ್ ಅನ್ನುವ ವ್ಯಕ್ತಿ ಐತಿಹಾಸಿಕವಾಗಿ ಇದ್ದನೆಂಬುದಕ್ಕೆ ಸಾಕ್ಷ್ಯವಿಲ್ಲ ಎನ್ನುತ್ತಿದ್ದಾರೆ.ಆದರೂ ಈಗಲೂ ಕೆಲವರು ಕ್ರಿಸ್ತ ಕಾಶ್ಮೀರಕ್ಕೆ ಬಂದಿದ್ದರು ಅನ್ನುವ ಸುದ್ದಿಯ ಉಸಿರು ಕಾಪಾಡುತ್ತಲೇ ಇದ್ದಾರೆ.ಈ “ತಖ್ತ್-ಈ-ಸುಲೇಮಾನ್” ಅನ್ನುವ ಹೆಸರು ಹುಟ್ಟಿಕೊಂಡಿದ್ದು ಅಲ್ಲಿಂದಲೇ, “Jesus in Kashmir- The Lost Tomb’ ಅನ್ನುವ ಪುಸ್ತಕ ಬರೆದಿರುವ ಸುಜಾನೆ ಒಲ್ಸನ್ ಅವರ ಪ್ರಕಾರ ಒಂದು ಕಾಲದಲ್ಲಿ ಕಾಶ್ಮೀರ ಯಹೂದಿಗಳಿಂದ ಆಳಲ್ಪಡುತಿತ್ತು.ಮತ್ತು ಸುಲೇಮಾನ್ ಎಂದರೆ,ಇಸ್ರೇಲಿನ ರಾಜ ಸೋಲೋಮನ್ ಅಂತೆ.ಒಂದು ವೇಳೆ ಒಲ್ಸನ್ ಹೇಳುವ ಪ್ರಕಾರ ಯಹೂದಿಗಳು ಕಾಶ್ಮೀರವನ್ನು ಆಳಿದ್ದರೆ,ಅದಕ್ಕೆ ಸಂಬಂಧಿಸಿದ ಕುರುಹುಗಳು,ಸ್ಥಳಗಳೇಕಿಲ್ಲ?
ಸಾಧು ರಂಗರಾಜನ್ ಅವರು ’ಜೀಸಸ್ ಇನ್ ಇಂಡಿಯಾ’ ಲೇಖನದಲ್ಲಿ, ಜೀಸಸ್ ಹಿಮಾಲಯದ ದಕ್ಷಿಣ ಭಾಗದಲ್ಲಿದ್ದರು.ಅವರ ವಯಸ್ಸಿನ ೧೩ನೇ ವಯಸ್ಸಿಗೆ ಇಲ್ಲಿಗೆ ಬಂದು, ೨೯ನೇ ವರ್ಷದಲ್ಲಿ ಇಲ್ಲಿಂದ ಸಿದ್ಧಿ ಪಡೆದು ಜೆರುಸಲೇಂ ಕಡೆಗೆ ಹೊರಟರು,ಶಿಲುಬೆಗೇರಿಸಿದಾಗ ಆದ ಆಘಾತವನ್ನು ಯೋಗಶಕ್ತಿಯ ಮೂಲಕ ತಡೆದುಕೊಂಡು ನಂತರ ಮತ್ತೆ ಹಿಮಾಲಕ್ಕೆ ಬಂದು ತಮ್ಮ ದೇಹವನ್ನು ಇಲ್ಲೇ ತ್ಯಜಿಸಿದರು ಅಂತೆಲ್ಲ ಬರೆಯುತ್ತಾರೆ.
ಸಾಧು ರಂಗರಾಜನ್ ಅವರ ಈ ಕತೆಯನ್ನು ಟೀಕಿಸಿ ಪತ್ರ ಬರೆದ ಪಾಂಡಿಚೇರಿಯ ಸ್ವಾಮಿ ದೇವಾನಂದ ಸರಸ್ವತಿಯವರು ಈ ವಾದ ಪೊಳ್ಳು ಎಂದು ಹಲವು ಅಂಶಗಳನ್ನು ದಾಖಲಿಸುತ್ತಾರೆ.ಈ ಜೀಸಸ್ ಇನ್ ಇಂಡಿಯಾ ಅನ್ನುವ ಕತೆಯನ್ನು ಹುಟ್ಟು ಹಾಕಿದ್ದು ರಷ್ಯಾದ ಪತ್ರಕರ್ತ ನಿಕೋಲಸ್ ನೊಟೊವಿಚ್.ಪ್ರೊಫೆಸರ್ ಮಾಕ್ಸ್ ಮುಲ್ಲರ್ ಅವರು ಈ ಬಗ್ಗೆ ಸಾಕ್ಷ್ಯಗಳನ್ನು ಕೇಳಿದಾಗ ನಿಕೋಲಸ್ ಅವರಿಗೆ ಅದನ್ನು ಸಾಬೀತು ಮಾಡಲಾಗಲಿಲ್ಲ ಅನ್ನುತ್ತಾರೆ ಖ್ಯಾತ ಇತಿಹಾಸಕಾರರಾದ ಸೀತರಾಂ ಗೋಯೆಲ್ ಅವರು.ಇನ್ನು ಆಸ್ಟ್ರೇಲಿಯಾದ ಥಿಯಾಲಜಿಸ್ಟ್ ಬಾರ್ಬರ ಥಿಯರಿಂಗ್ ಅವರ ಪ್ರಕಾರ ಜೀಸಸ್ ಅವರ ಕೊನೆಯ ದಿನಗಳ ಬಗ್ಗೆ ಯಾವುದೇ ದಾಖಲೆಯಿಲ್ಲ.
ಜೀಸಸ್ ಅವರು ಐತಿಹಾಸಿಕವಾಗಿ ಇದ್ದರೋ ಇಲ್ಲವೋ,ಅಥವಾ ಅವರು ಹಿಮಾಲಯದಲ್ಲಿ ಬಂದು ನೆಲೆಸಿದ್ದರೋ,ಇಲ್ಲವೋ ಇವೆಲ್ಲವೂ ಸೆಕೆಂಡರಿ.ಸದ್ಯದ ವಿಷಯ ಶಂಕರಾಚಾರ್ಯ ಪರ್ವತದ ಹೆಸರು ಬದಲಾವಣೆಯೇಕೆ ಆಗಬೇಕು? ಅದೇಕೆ ಪ್ರತಿಬಾರಿಯೂ ಹಿಂದೂ ಶ್ರದ್ಧೆಯನ್ನೇ ಅಲುಗಾಡಿಸಲಾಗುತ್ತದೆ? ಪ್ರಶ್ನಿಸಲಾಗುತ್ತದೆ? ಎಲ್ಲವನ್ನೂ ಸುಮ್ಮನೇ ಒಪ್ಪಿಕೊಳ್ಳುತ್ತೇವೆ ಎಂದೇ? ಅಸಲಿಗೆ ಕಾಶ್ಮೀರಿಗಳಿಗೆ ಹೆಸರು ಬದಲಾವಣೆಯಿಂದ ಆಗುವುದೇನು? ಅವರ ಹಸಿವು ನೀಗುತ್ತದೆಯೇ? ಯುವಕರಿಗೆ ಕೆಲಸಗಳು ಸಿಗುತ್ತವೆಯೇ? ಇಲ್ಲ.ಅದ್ಯಾವುದನ್ನು ಕೊಡಲಾಗುವುದಿಲ್ಲವಲ್ಲ.ಹಾಗಾಗಿ ಸರ್ಕಾರದ ವಿರುದ್ಧದ ಅವರ ಸಿಟ್ಟನ್ನು ರಿಲಿಜನ್ನು ಅನ್ನುವ ಅಫೀಮು ತಿನ್ನಿಸುವ ಮೂಲಕ ಕಡಿಮೆ ಮಾಡಿಸುವ ಕೆಲಸವಷ್ಟೇ ಇದು.
ಹಾಗೆ ನೋಡ ಹೋದರೆ, ಕಾಶ್ಮೀರದ ಸಮಸ್ಯೆ ಕೇವಲ ರಿಲಿಜನ್ನಿನದಲ್ಲ,ಸರ್ಕಾರಿ ವ್ಯವಸ್ಥೆಯದ್ದು ಕೂಡ ಗಣನೀಯ ಕೊಡುಗೆಯಿದೆ.ಕಾಶ್ಮೀರವನ್ನು ಆಳಿದ ಅಬ್ದುಲ್ಲಾಗಳು,ಮುಫ್ತಿಗಳು ಅಥವಾ ಕಾಂಗ್ರೆಸ್ಸು ಮಾಡಿದ್ದು ಬ್ರಹ್ಮಾಂಡ ಭ್ರಷ್ಟಚಾರವನ್ನೇ.ಆಡಳಿತ ಯಂತ್ರ ಕುಸಿದು ಬಿದ್ದು ಜನರು ಕೆಂಗಣ್ಣು ಬೀರಿದಾಗಲೆಲ್ಲ ಇವರು ಬಳಸಿದ್ದು ರಿಲಿಜನ್ನು ಎನ್ನುವ ಅಫೀಮಿನ ಗುರಾಣಿಯನ್ನೇ.ಅದಿನ್ನೂ ಜೀವಂತವಾಗಿದೆ.ವಿಪರ್ಯಾಸವೆಂದರೆ,ತಮ್ಮದೇ ನಾಡಿನಲ್ಲಿ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು,ಕಾಶ್ಮೀರದಲ್ಲಿ ಇದ್ದೂ ಇಲ್ಲದಂತಿರುವ ಹಿಂದುಳಿದ,ದಲಿತ,ಬುಡಕಟ್ಟುಗಳ ನೋವು ’ಮಾನವ ಹಕ್ಕುಗಳ ಗುತ್ತಿಗೆ’ದಾರರಿಗೆ,ಸರ್ಕಾರಕ್ಕೆ,ಸಂಘಟನೆಗಳಿಗೆ ಕೇಳುತ್ತಿಲ್ಲ.ಖುದ್ದು ಉಗ್ರರ ಗುಂಡಿಗೆ ಬಲಿಯಾದ ಕಾಶ್ಮೀರಿ ಮುಸ್ಲಿಮರ ರಕ್ತವೂ ಕೆಲವರಿಗೆ ಕಾಣುವುದಿಲ್ಲ.ಇನ್ನು ಆರ್ಟಿಕಲ್ ೩೭೦ ಅನ್ನುವ ಶೋಷಕ ವಿಧಿಯನ್ನು ಕಿತ್ತುಬಿಸಾಡುವ ಗಂಡು ಪ್ರಧಾನಿಯೊಬ್ಬ ನಮಗಿನ್ನು ಸಿಕ್ಕಿಯೇ ಇಲ್ಲ.ಅಂತವನೊಬ್ಬ ಸಿಗುವವರೆಗೆ ಈ ರೀತಿಯ ಅಫೀಮು ತಿನ್ನಿಸುವ ಕೆಲಸ ನಡೆಯುತ್ತಲೇ ಇರುತ್ತದೆ.ಮತ್ತು ನಮ್ಮಂತವರು ಅದನ್ನು ವಿರೋಧಿಸುತ್ತ ನಮ್ಮ ದನಿಯನ್ನು ದಾಖಲಿಸುತ್ತಲೇ ಇರಬೇಕಾಗುತ್ತದೆ.
ಖುಷಿಯ ವಿಷಯವೆಂದರೆ, ನಾನು ಈ ಲೇಖನವನ್ನು ಬರೆದು ಪಬ್ಲಿಷ್ ಮಾಡಬೇಕು ಎನ್ನುವಾಗ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಭಾನುವಾರದ ಟ್ವೀಟ್ ನೋಡಿದೆ.ಅವರು ಹೆಸರು ಬದಲಾಯಿಸುವ ಯಾವ ಪ್ರಸ್ತಾಪವೂ ನಮ್ಮ ಮುಂದಿಲ್ಲ ಅಂದಿದ್ದಾರೆ.ಆದರೆ, ಸುಮ್ಮ ಸುಮ್ಮನೇ ಸುದ್ದಿ ಹುಟ್ಟಿಕೊಳ್ಳುವುದೇಗೆ ಸಾಧ್ಯ? ಅದಕ್ಕೆ ಉತ್ತರವಿಲ್ಲ.ಕಾಶ್ಮೀರದ ಹಲವು ಪ್ರಶ್ನೆಗಳಂತೆ!





ಪ್ರತಿಯೊಬ್ಬ ಹಿಂದುವೂ ಯೋಚಿಸಬೇಕಾದ ವಿಚಾರವಿದು.
ಹಿಂದುಗಳು ಎಚ್ಚರಗೊಳ್ಳದೆ, ಈ ದೇಶದ ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕೆ ಉಳಿಗಾಲವಿಲ್ಲ ಎನ್ನುವುದು ಸ್ಪಷ್ಟ.
its really shame to central govt… hindusthan name changed to india, next what all we bear??
ಒಮರ್ ಅಬ್ದುಲ್ಲಾ ಅವರ ಭಾನುವಾರದ ಟ್ವೀಟ್ ನೋಡಿದೆ.ಅವರು ಹೆಸರು ಬದಲಾಯಿಸುವ ಯಾವ ಪ್ರಸ್ತಾಪವೂ ನಮ್ಮ ಮುಂದಿಲ್ಲ ಅಂದಿದ್ದಾರೆ.ಆದರೆ, ಸುಮ್ಮ ಸುಮ್ಮನೇ ಸುದ್ದಿ ಹುಟ್ಟಿಕೊಳ್ಳುವುದೇಗೆ ಸಾಧ್ಯ?…ರಾಕೇಶ್ ಜೀ ಇಷ್ಟೊಂದು ಮುಗ್ಧರಾಗ ಬಾರದು. ‘ಕಾನ್ ಆರ್ಟಿಸ್ಟ್’ ಗುಜರಾತ್ ಯೂರೋಪ್ ಆಗಿಬಿಟ್ಟಿದೆ, ಎಷ್ಟೊಂದು ಅಭಿವೃದ್ಧಿ ಆಗಿದೆ ಎಂದರೆ ಇನ್ನು ಅಭಿವೃದ್ಧಿ ಹೊಂದಲು ಜಾಗವೇ ಉಳಿದಿಲ್ಲ ಎಂದ ಸುಳ್ಳನ್ನು ಕೇಜರಿ ಜಿ ಸುಳ್ಳು ಎಂದು ಸಾಬೀತು ಪಡಿಸಲಿಲ್ಲವೇ? ಅಭಿವೃದ್ಧಿ ಮಂತ್ರ ತಂತಾನೇ ಹುಟ್ಟಿ ಕೊಂಡಿದ್ದಲ್ಲವೇ?
ಅಷ್ಟೇಕೆ, ನಿನ್ನೆಯ ವಿಕಿಲೀಕ್ ನ ಫಜೀತಿ ನೋಡಿ. ಜೂಲಿಯಾನ್ ಅಸಾಂಜ್ ಮೋದಿ ಸತ್ಯಸಂಧ ಎಂದು ಸರ್ಟಿಫಿಕೆಟ್ ಕೊಟ್ಟ ಎಂದು ನೊಬೆಲ್ ಸಿಕ್ಕಂತೆ ಆಡಿದವರಿಗೆ ಆದ ಮುಖಭಂಗ. ಇದೂ ತಂತಾನೇ ಹುಟ್ಟಿ ಕೊಂಡಿದ್ದು ತಾನೇ?
ತಾಜ್ ಮಹಲನ್ನು ತೇಜೋ ಮಹಲ್ ಎಂದು ಕರೆಯೋದು ಅಫೀಮೋ? (marijuana) ‘ಮಾರಿಹ್ವಾನ’ ವೋ?
ನಾವು ಯಾವುದೇ ಐಡಿಯಾಲಜಿ ಗೆ ಚಂದಾದಾರರಾಗದೆ ಇದ್ದರೆ ಇಕ್ಕಟ್ಟಿಗೆ ಸಿಕ್ಕಿಕೊಳ್ಳೋದು ಕಡಿಮೆ.
ವಿನಯಪೂರ್ವಕ ನಮಸ್ಕಾರಗಳು.
+1
ಪರಮ ಪಾವನ ಕೇಜ್ರಿವಾಲ್ ಅವರ ಬಗ್ಗೆ ಮಾತಾಡುವಷ್ಟು ಪ್ರಾಮಾಣಿಕ ನಾನಲ್ಲ.ಅವರೇನದರೂ ಪ್ರಾಮಾಣಿಕತನಕ್ಕೆ ಸರ್ಟಿಫಿಕೇಶನ್ ಕೊಡುತ್ತಾರಾದರೇ ಸೇರಿಕೊಳ್ಳಬೇಕು ಅಂತಿದ್ದೇನೆ ಅಬ್ದುಲ್ ಜೀ. ಮಾತು ಗುಜರಾತ್,ಯುರೋಪ್ ಬದಲಿಗೆ ಕಾಶ್ಮೀರಕ್ಕಷ್ಟೇ ಸೀಮಿತವಾಗಿಡೋಣ.
ಒಮರ್ ಅಬ್ದುಲ್ಲ ಟ್ವೀಟ್ ಮಾಡಿದ ಮೇಲೂ ಪುರಾತತ್ವ ಇಲಾಖೆಯು ಹಾಕಿರುವ ಮಾಹಿತಿ ಫಲಕದಲ್ಲಿನ ಮಾಹಿತಿ ಏನೇನೂ ಬದಲಾಗಿಲ್ಲ.ಅದರಲ್ಲಿ ಈಗಲೂ “ತಖ್ತ್-ಈ-ಸುಲೇಮಾನ್” ಅನ್ನುವ ಹೆಸರು ಇದೆ.ಕಾಶ್ಮೀರದ ಇತಿಹಾಸವನ್ನ ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ, ಇಂತ ರೂಮರ್ರುಗಳು,ಇಂತ ಮನೆ ಹಾಳು ಕೆಲಸಗಳು ಎಲ್ಲಿಂದ ಹುಟ್ಟಿಕೊಳ್ಳುತ್ತವೆಯೇ ಎಂದು.ಒಮರ್ ಗಂತೂ ಇದೆಲ್ಲ ಚಿಕ್ಕಂದಿನಿಂದ (ಅಂದರೆ,ಅವರಜ್ಜ ಶೇಕ್ ಕಾಲದಿಂದಲೂ ಗೊತ್ತಿರುತ್ತದೆ ಬಿಡಿ)
ಹಾಡಹಗಲೇ ಕಾಶ್ಮೀರಿ ಪಂಡಿತರನ್ನು ಗುಂಡಿಟ್ಟುಕೊಲ್ಲುವಾಗ ಸುಮ್ಮನಿದ್ದ ಮುಟ್ಟಾಳರು,ಅವರನ್ನು ಕಾಶ್ಮೀರದಿಂದ ಓಡಿಸಿದ ಉಗ್ರರ ಬಗ್ಗೆ ಮಾತನಾಡಲಿಲ್ಲ,ಬದಲಿಗೆ ಪಂಡಿತರನ್ನು ಕಣಿವೆಯಿಂದ ಹೊರಕಳಿಸಿ ಎಲ್ಲರನ್ನು ಬಾಂಬ್ ಹಾಕಿ ಮುಗಿಸುವ ಸಂಚು ಅನ್ನುವ ಪುಕಾರೆಬ್ಬಿಸಿದ್ದು ಯಾರು ಅನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.ಸತ್ಯ ಕಾಣುತ್ತದೆ ನೋಡುವ ಕಣ್ಣಿರಬೇಕಷ್ಟೇ.
ಇನ್ನು ತಾಜ್ ಮಹಲ್ ಬಗ್ಗೆ ಓಕ್ ಹೇಳಿದ್ದರ ಬಗ್ಗೆ ತನಿಖೆಯಾಕಾಗಬಾರದು? ಅದನ್ನು ಪರಿಶೀಲಿಸಿ ಅದೇನು ? (marijuana) ‘ಮಾರಿಹ್ವಾನ’ವೋ ಇಲ್ಲ ಅಫೀಮೋ ನಿರ್ಧರಿಸಬಹುದು ಅಲ್ಲವೇ?
ಕಾಶ್ಮೀರದಲ್ಲಿ ವೈದಿಕಶಾಹಿಯ ಪುನರ್ ಪ್ರತಿಷ್ಟಾಪನೆಯ ಹುನ್ನಾರ ಈ ನವವೈದಿಕರದ್ದು.
ಶೆಟ್ಕರ್,
ನಿಮಗೆ ಕಾಶ್ಮೀರಿ ಇತಿಹಾಸದ ಅರಿವಿದೆಯೇ?
ಮಿ. ರಾಕೇಶ್ ಶೆಟ್ಟಿ, ಸಭ್ಯತೆಯ ಎಲ್ಲೆಯನ್ನು ಮೀರಿದ್ದೀರಿ, ಶರಣರು ಸಿಟ್ಟಿಗೆದ್ದರೆ ಲೋಕ ನಡುಗುತ್ತದೆ, ಜೋಕೆ.
ಲೋಕಸಭಾ ಎಲೆಕ್ಷನ್ ನಡೆದು, ರಿಸಲ್ಟ್ ಬರುವ ತನಕ ಲೋಕ ನಡುಗಿಸಿ, ಪ್ರಳಯ ಮಾಡಬಾರದಾಗಿ ‘ಶರಣ’ ರಲ್ಲಿ ಸವಿನಯ ವಿನಂತಿ 🙂
ಶೆಟ್ಕರ್ ಅವರೇ,ನೀವು ಬಹಳ ಹೆದರಿಸ್ತೀರಿಪ್ಪಾ 🙂
ಮೊದಲಿಗೆ, ಅಸಭ್ಯ ಭಾಷೆ ಬಳಸಿದ ಕಮೆಂಟುದಾರರನ್ನು ಬ್ಲಾಕ್ ಮಾಡಲಾಗಿದೆ.
ಇನ್ನು ಎರಡನೆಯದಾಗಿ, ನಿಮ್ಮ ಬೆದರಿಕೆಗೆ ಲೋಕ ನಡುಗಬಹುದು, ನಾವಲ್ಲ.ಹಾಗಾಗಿ ಈ ಎಚ್ಚರಿಕೆ ಕೊಡುವುದನ್ನೆಲ್ಲ ಬಿಟ್ಟುಬಿಡಿ.
ದಿನದ ೨೪ ಗಂಟೆಯೂ ನಾವು ಎದುರು ಕುಳಿತು ಕಮೆಂಟುಗಳನ್ನು ನೋಡಲು ಸಾಧ್ಯವಿಲ್ಲ.ಈ ರೀತಿಯ ಅನಾಗರೀಕ ಕಮೆಂಟುದಾರರು ಒಮ್ಮೊಮ್ಮೆ ನುಸುಳಿಬಿಡುತ್ತಾರೆ.ನಾವು ಉಳಿದವರಂತೆ, ಪ್ರತಿ ಕಮೆಂಟನ್ನು ತಪಾಸಣೆಗೊಳಪಡಿಸುವುದರಲ್ಲಿ ನಂಬಿಕೆಯಿಟ್ಟಿಲ್ಲ.
ಕಮೆಂಟುದಾರರಿಗೆ ನಿಲುಮೆಯಲ್ಲಿ ಸ್ವಾತಂತ್ರ್ಯವಿದೆ.ಹಾಗಂತ ಅದನ್ನು ಸ್ವೇಚ್ಚೆಯಾಗಿ ಬಳಸಲು ಬಿಡುವುದಿಲ್ಲ.
Mr.Sub have some sense while commenting in social forums.I condemn these kind of words.
You can be critic of Mr.Nagshetty Shetkar, I know he takes those sportively.But these kind of comments are highly annoying
ಸ್ವಾಮಿ Sub ಮಹೋದಯರೆ…ಶೆಟ್ಕರ್ ಜೊತೆಗೆ ಜಗಳ/ವಾದ ಮಾಡಬೇಕೆಂದರೆ ನೀವು ಕೆಸರಿಗಿಳಿದು, ಇಂತಹ ಹೈಸ್ಕೂಲ್, ಕಾಲೇಜ್ ಹುಡುಗರ ತರಹ ಮಾತುಗಳನ್ನು ಆಡಬೇಕಾಗಿಲ್ಲ. .ನಿಮ್ಮ ಈ ರೀತಿಯ ಮಾತುಗಳು ಚರ್ಚೆಯ ದಿಕ್ಕು ತಪ್ಪಿಸಿ, ಪಲಾಯನ ಮಾಡಲು ಅವಕಾಶ ನೀಡುತ್ತವೆ ಅಷ್ಟೆ!.
Tell me what is vaidikashahi??
‘ಓಕ್’ ಅನ್ನು ಕರೆದರೆ wendy doniger ವಕ್ಕರಿಸಿ ಕೊಳ್ಳುತ್ತಾಳೆ. ಇದೆಲ್ಲಾ ಬೇಕಾ? ನಮ್ಮ ಇತಿಹಾಸ ಓದೋಕೆ ವಿದೇಶೀಯರು ಬೇಕಾ? ಡಿ. ಎನ್. ಝಾ ರಂಥ ಇತಿಹಾಸಕಾರರು ಸಾಲದಾ? ಸವಾಲಿಗೆ ಪ್ರತೀ ಸವಾಲು ಎಲ್ಲರಲ್ಲೂ ಇದೆ, ರಾಕೇಶ್. ದೇಶ ಕಟ್ಟೋದನ್ನ ಬಿಟ್ಟು ತಾಜ್ ಮಹಲು, ತೇಜೋ ಮಹಲು ಎಂದು ಬಡ ಬಡಿಸುತ್ತಾ ಕೂತರೆ ಯಾರಿಗೂ ಪ್ರಯೋಜನವಿಲ್ಲ. ಪಂಡಿತರು ಅನುಭವಿಸಿದ್ದಕ್ಕಿಂತ ಹೆಚ್ಚು ಮುಸ್ಲಿಮರು, ಕ್ರೈಸ್ತರು, ಸಿಕ್ಖರು ಅನುಭವಿಸಿದ್ದಾರೆ.
[[‘ಓಕ್’ ಅನ್ನು ಕರೆದರೆ wendy doniger ವಕ್ಕರಿಸಿ ಕೊಳ್ಳುತ್ತಾಳೆ. ಇದೆಲ್ಲಾ ಬೇಕಾ? ನಮ್ಮ ಇತಿಹಾಸ ಓದೋಕೆ ವಿದೇಶೀಯರು ಬೇಕಾ?]]
‘ಓಕ್’ ಅವರೇನೂ ವಿದೇಶೀಯರು ಅಲ್ಲವಲ್ಲಾ.
[[ಡಿ. ಎನ್. ಝಾ ರಂಥ ಇತಿಹಾಸಕಾರರು ಸಾಲದಾ]]
ಸಾಲದು. ಇತಿಹಾಸವನ್ನು ಸಂಶೋಧಿಸಲು ಒಬ್ಬ ಇತಿಹಾಸಕಾರ ಸಾಲದು. ಸಹಸ್ರಾರು ಇತಿಹಾಸಕಾರರೇ ಬೇಕು.
‘ಝಾ’ ಅವರೂ ಬೇಕು, ‘ಓಕ್’ ಅವರೂ ಬೇಕು.
[[ದೇಶ ಕಟ್ಟೋದನ್ನ ಬಿಟ್ಟು ತಾಜ್ ಮಹಲು, ತೇಜೋ ಮಹಲು ಎಂದು ಬಡ ಬಡಿಸುತ್ತಾ ಕೂತರೆ]]
ದೇಶವನ್ನು ನೈಜ ಇತಿಹಾಸದ ತಳಪಾಯದ ಮೇಲೇ ಕಟ್ಟಬೇಕು. ಸತ್ಯವನ್ನು ತಿಳಿಯಲು ಅಷ್ಟೊಂದು ಭಯವೇಕೆ?
‘ಓಕ್’ ಹೇಳಿದ್ದು ನಿಮಗೆ ಇಷ್ಟವಾಗಲಿಲ್ಲವೆಂದ ಮಾತ್ರಕ್ಕೆ ಅದು ಇತಿಹಾಸವೇ ಅಲ್ಲವೆನ್ನುವುದು ಏಕೆ?
ಅವರು ಹೇಳಿದ್ದು ಸುಳ್ಳಾಗಿದ್ದರೆ ಇತಿಹಾಸದ ಸಂಶೋಧನೆಯ ಆಧಾರದ ಮೇಲೆ ಸಾಬೀತು ಪಡಿಸಬಹುದಲ್ಲಾ?
‘ಓಕ್’ ಬೇಡವೇ ಬೇಡ ಎನ್ನುವುದು ಯಾವ ಮನೋಭಾವವನ್ನು ಸೂಚಿಸುತ್ತದೆ ಅಬ್ದುಲ್?
[[ಪಂಡಿತರು ಅನುಭವಿಸಿದ್ದಕ್ಕಿಂತ ಹೆಚ್ಚು ಮುಸ್ಲಿಮರು, ಕ್ರೈಸ್ತರು, ಸಿಕ್ಖರು ಅನುಭವಿಸಿದ್ದಾರೆ]]
ಅನುಮಾನವೇ ಇಲ್ಲ. ಆದರೆ, ಪ್ರಸ್ತುತ ಲೇಖನದ ವಿಷಯ ಕಾಶ್ಮೀರ ಮತ್ತು ಅಲ್ಲಿನ ಇತಿಹಾಸ.
ಕಾಶ್ಮೀರಕ್ಕಾಗಿ ಸಿಖ್ಖರೂ ತ್ಯಾಗ ಮಾಡಿದ್ದಾರೆ. ಮುಸಲ್ಮಾನ ರಾಜರಿಂದ ಹಿಂದುಗಳಿಗಾಗುತ್ತಿದ್ದ ತೊಂದರೆಯನ್ನು ಪ್ರತಿಭಟಿಸಿದ್ದರಿಂದಾಗಿಯೇ ಮುಸಲ್ಮಾನ ರಾಜರು ಗುರು ತೇಗ ಬಹಾದ್ದೂರರ ತಲೆ ತೆಗೆದರು. ಕಾಶ್ಮೀರಕ್ಕಾಗಿ ಸಾಕಷ್ಟು ಬಲಿದಾನಗಳಾಗಿವೆ.
ಸ್ವಾತಂತ್ರ್ಯ ಬಂದ ನಂತರವೂ ನಮ್ಮ ನೆಲ-ಜಲ-ಸಂಸ್ಕೃತಿಯ ಉಳಿವಿಗಾಗಿ ನಾವು ಬಲಿದಾನಗಳನ್ನು ಮಾಡಬೇಕೆ? ನಮ್ಮದೇ ಸರಕಾರಗಳು ನಡೆಯುತ್ತಿದ್ದರೂ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿದೆ ಎಂದರೆ, ಅದರ ಕುರಿತಾಗಿ ಚಿಂತಿಸಬೇಕಲ್ಲವೇ? 90ರ ದಶಕದಲ್ಲಿ ಕಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸಿದ್ದೂ ದೇಶವಿದ್ರೋಹಿ ಷಡ್ಯಂತ್ರದ ಭಾಗವೇ. ಕಾಶ್ಮೀರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲೂ ಆಗದಂತಹ ಸ್ಥಿತಿ ಬಂದಿತ್ತೆನ್ನುವುದು ನಿಮಗೆ ನೆನಪಿರಬೇಕಲ್ಲವೇ? ಆಗಲೇ ಅಲ್ಲವೇ “ಏಕತಾ ಯಾತ್ರೆ” ನಡೆಸಬೇಕಾಗಿ ಬಂದದ್ದು?
ಅಬ್ದುಲ್, ನೀವು ವಿದ್ಯಾವಂತರು, ದೇಶದ ಕುರಿತಾಗಿ ಶ್ರದ್ಧೆ-ಭಕ್ತಿಗಳಿರುವವರು. ದೇಶದ ಆಗುಹೋಗುಗಳ ಬಗ್ಗೆ ಆಸಕ್ತಿಯಿಟ್ಟುಕೊಂಡಿರುವವರು. ವಿದೇಶೀ ನೆಲದಲ್ಲಿದ್ದರೂ, ನಮ್ಮ ದೇಶವು ಅಭಿವೃದ್ಧಿ ಹೊಂದಬೇಕೆಂಬ ಹಂಬಲವುಳ್ಳವರು. ಇಂತಹವರು, ಲೇಖನದ ಪ್ರತಿಕ್ರಿಯೆಯಲ್ಲಿ ಎಲ್ಲಿಯೂ, ಹೆಸರು ಬದಲಾವಣೆಗೆ ನಿಮ್ಮ ಒಂದು ಸಣ್ಣ ವಿರೋಧವನ್ನೂ ವ್ಯಕ್ತಪಡಿಸದಿರುವುದು ನನಗೆ ಕಳವಳವನ್ನುಂಟು ಮಾಡುತ್ತಿದೆ! ಓಮರ್ ಅಬ್ದುಲ್ಲಾ ಮುಸಲ್ಮಾನರಿರಬಹುದು. ಆದರೆ, ಆ ಒಂದೇ ಕಾರಣಕ್ಕೆ ಅವರು ಮಾಡಿದ್ದೆಲ್ಲಾ ಸರಿ ಎಂದೆನ್ನುವವರೇ ನೀವು!? ಕಾಶ್ಮೀರದಿಂದ ಲಕ್ಷಾಂತರ ಹಿಂದೂ ಪಂಡಿತರನ್ನು ಓಡಿಸಿದರು. ಓಡಿಸಿದವರು ಮುಸಲ್ಮಾನರೆಂಬ ಕಾರಣಕ್ಕೆ, ಓಡಿಸಿದ್ದನ್ನು ಟೀಕಿಸುತ್ತಿಲ್ಲವೇ!!? ಅಬ್ದುಲ್, ನಿಜಕ್ಕೂ ನನಗೆ ಆಶ್ಚರ್ಯವಾಗುತ್ತಿದೆ!!
“90ರ ದಶಕದಲ್ಲಿ ಕಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸಿದ್ದೂ ದೇಶವಿದ್ರೋಹಿ ಷಡ್ಯಂತ್ರದ ಭಾಗವೇ. ಕಾಶ್ಮೀರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲೂ ಆಗದಂತಹ ಸ್ಥಿತಿ ಬಂದಿತ್ತೆನ್ನುವುದು ನಿಮಗೆ ನೆನಪಿರಬೇಕಲ್ಲವೇ?”
ನರೇಂದ್ರ, ದೇಶದ ಬಗ್ಗೆ ಕಾಳಜಿ ಇರುವ ನೀವು, ನಾನು ಎಲ್ಲರಿಗೂ ಇರಬೇಕಾದ ಹಂಬಲ ಒಡಕನ್ನು ಮುಚ್ಚಿ ಒಗ್ಗಟ್ಟನ್ನು ಮೆರೆಯೋದು. ಒಡಕನ್ನು ಮತ್ತಷ್ಟು ಮಾಗ್ನಿಫೈ ಮಾಡೋದ್ರಿಂದ ಕ್ಷಣಿಕ ಖುಷಿ, ಸ್ಯಾಡಿಸ್ಟ್ ಸುಖ, ಸಿಗುತ್ತದೆಯೇ ವಿನಃ ಮತ್ತೇನೂ ಸಿಗದು. ಪಂಡಿತರನ್ನು ಓಡಿಸಿದ ಘಟನೆ ನನಗೆ ಖೇದ, ಲಜ್ಜೆಯನ್ನು ತರುತ್ತದೆ. ಹಾಗೆಯೇ ಹತ್ತಾರು ಸಾವಿರ ಮುಸಲ್ಮಾನರು ಮುಸ್ಲಿಂ ವಿರೋಧೀ ದಂಗೆ ಕಾರಣ ತಮ್ಮ ತಮ್ಮ ಮನೆಗಳಿಗೆ ಇನ್ನೂ ಮರಳಿಲ್ಲ, ಗುಜರಾತ್, ಮುಜಫ್ಫರ್ ಮುಂತಾದೆಡೆಯಲ್ಲಿ ಮುಸ್ಲಿಮರ ಜಮೀನು ಮನೆಗಳನ್ನು ಕಬಳಿಸಿ ಅವರು ತಮ್ಮ ಗ್ರಾಮಗಳಿಗೆ ಮರಳದಂತೆ ಮಾಡಿದ್ದಾರೆ. ಇದರ ಬಗೆಗೂ ನನಗೆ ಅತೀವ ಕಾಳಜಿ, ನಾಚಿಕೆ ಇದೆ, ಈ ದೇಶ ಯಾಕೆ ಮುಖವಾಡ ಹಾಕಿ ಕೊಂಡು ಕೂತಿದೆ ಎಂದು. ಹೆಸರನ್ನು ಬದಲಿಸಿ, ‘ಟೈಲರ್ ಮೇಡ್’ ಇತಿಹಾಸ ಹೊಲಿದು ಮುಸ್ಲಿಮರಿಗೆ ಸಿಗುವ ಲಾಭ ಏನೂ ಇಲ್ಲ. ಅದು ಸಾಧ್ಯವೂ ಅಲ್ಲ. ನೀವು ಪ್ರಸ್ತಾಪಿಸಿದ ದೇವಸ್ಥಾನ ನಿಜವಾಗಿಯೂ ಬೌದ್ಧ ಧರ್ಮಕ್ಕೆ ಸೇರಿದ್ದೆಂದೂ, ಅದನ್ನು ಹಿಂದೂ ದೇವಾಲಯವಾಗಿ ಪರಿವರ್ತನೆ ಮಾಡಿದ ಬಗ್ಗೆಯೂ ಓದಿದ್ದೇನೆ. ಮತ್ತು ನಾನು ಚರಿತ್ರೆಯ ದೊಡ್ಡ ಫ್ಯಾನ್ ಅಲ್ಲ. ಜ್ಞಾನಾರ್ಜನೆಗಾಗಿ ಮಾತ್ರ ಅದರ ಉಪಯೋಗ ಮಾಡುತ್ತೇನೆ. ‘ವಿಚ್ ಹಂಟಿಂಗ್’ ಕೆಲಸಕ್ಕೆ ಖಂಡಿತಾ ನಾನು ಇತಿಹಾಸವನ್ನು ಉಪಯೋಗಿಸೋಲ್ಲ. ಬೇಕಾದ ರೀತಿಯಲ್ಲಿ, ಬೇಕಾದ ಶೈಲಿಯಲಿ ಪ್ರತಿಯೊಬ್ಬರೂ ಇತಿಹಾಸ ಬರೆಯಬಹುದು. ಒಬ್ಬ ತರುಣಿ ಕಾಲು ಜಾರಿ ಬಾವಿಗೋ ಕೆರೆಗೋ ಬಿದ್ದರೆ, ಆಕೆಗೆ ಅನೈತಿಕ ಸಂಬಂಧ ಇತ್ತು, ಮನೆಯವರೇ ಆಕೆಯನ್ನು ನೂಕಿದ್ದಾರೆ ಕೆರೆಗೆ, ಪಕ್ಕದ ಮನೆಯ ಹುಡಗನ ಜೊತೆ ಅವಳಿಗೆ ಲವ್ ಇತ್ತು, ಗರ್ಭಿಣಿ ಸಹ ಆಗಿದ್ದಳಂತೆ…..ಇದು ಇತಿಹಾಸ. ಹುಡುಗಿ ಸತ್ತು ಹೆಣ ತೆಗೆಯೋ ಮೊದಲೇ ಹುಟ್ಟಿ ಕೊಳ್ಳೋ ಇತಿಹಾಸ. ಇನ್ನು ಸಾವಿರ ವರುಷಗಳ ಹಿಂದಿನ ಪುರಾಣ ರೆಕ್ಕೆ ಪುಕ್ಕ, ಎಲ್ಲಾ ಕಟ್ಟಿ ಕೊಂಡು ಕುಣಿಯುತ್ತಿರಬಹುದಲ್ಲವೇ? ಸಾಲದ್ದಕ್ಕೆ ವಿದೇಶೀ ಇತಿಹಾಸಕಾರ ಮೇಲಿನ ಅವಲಂಬನೆ. ಈ ಅವಲಂಬನೆಗೆ ಕಾರಣ ಹತ್ತೊಂಬತ್ತನೇ ಶತಮಾನದವರೆಗೆ ಲೇಖನಿ ಕಾಗದ ಪರಿಚಯವೇ ಇರಲಿಲ್ಲ ಅಂತೆ ನಾಡಿನಲ್ಲಿ (ದಿವಂಗತ ಲಂಕೇಶ್ ಬರೆದ ಪ್ರಬಂಧದಲ್ಲಿ).
ಭಾರತದ ಧ್ವಜ ಕಾಶ್ಮೀರದಲ್ಲಿ ಹಾರದ ಬಗ್ಗೆ ನಿಮಗೆ ಗೊತ್ತಿರುವಷ್ಟೇ ನನಗೂ ನಾಗಪುರದ ‘ಸಂಘ’ಟನೆ ಯ ಕೇಂದ್ರ ಕಚೇರಿ ಮೇಲೂ ಭಾರತದ ಬಾವುಟ ಹಾರದ ಬಗ್ಗೆ ಅರಿವಿದೆ. ಭಾರತದಲ್ಲಿ ಮುಸ್ಲಿಂ ಅರಸರ ಪುಂಡತನದ ಬಗ್ಗೆ ನಾಡಿನ ಇತಿಹಾಸಕಾರ ಬರೆದದ್ದನ್ನು ಓದಿದ ನಂತರ ಪಕ್ಕದ ಮನೆ ಹೇಗೆ ಎಂದು ಸ್ವಲ್ಪ ಇಣುಕು ಹಾಕಿದೆ. ಬಂಗಾಳದ ಬ್ರಾಹ್ಮಣ ದೊರೆ ಶಶಾಂಕನ ಪುಂಡಾಟಿಕೆ ಕಂಡು ನಿಬ್ಬೆರಗಾದೆ. ಬೌದ್ಧ ಧರ್ಮ ತನ್ನ ಹುಟ್ಟಿನ ನಾಡಿನಿಂದ ಸಂಪೂರ್ಣ ನಿರ್ನಾಮ ಆಗಲು, ಹೊರ ನಾಡಿಗೆ ವಲಸೆ ಹೋಗಲು ಕಾರಣ ಯಾರ್ಯಾರು ಎಂದು ತಮಗೆ ಹೇಳೋ ಅವಶ್ಯಕತೆ ಇಲ್ಲ. ಇಂಥ ವಿಷಯಗಳು ನನಗೆ ಕಚಗುಳಿ ಕೊಡುತ್ತಿಲ್ಲ. ನನ್ನ ಜನರ ‘ಶಾರ್ಟ್ ಕಮಿಂಗ್ಸ್’ ಬಗ್ಗೆ ಕೆದಕುತ್ತಾ ಹೋದಾಗ ಇಂಥವೂ ಕಣ್ಣಿಗೆ ಬಿತ್ತು.
ಸವಿನಯ ವಂದನೆಗಳೊಂದಿಗೆ
“ಬಂಗಾಳದ ಬ್ರಾಹ್ಮಣ ದೊರೆ ಶಶಾಂಕನ ಪುಂಡಾಟಿಕೆ ಕಂಡು ನಿಬ್ಬೆರಗಾದೆ.”
ನಿಬ್ಬೆರಗಾಗಿದ್ದು ಯಾತಕ್ಕೆ? ಇದೇನು ಅಸಾಮಾನ್ಯ ಸಂಗತಿಯೇ? ದರ್ಗಾ ಸರ್ ಅವರ ಬರಹಗಳನ್ನು ಓದಿ ಭದ್ರಾವತಿ ಅವರೇ. ಭೂಸುರರೇ ಆಗಿದ್ದ ಬ್ರಾಹ್ಮಣರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತದೆ ನಿಮಗೆ.
ದರ್ಗಾ ವಿಶ್ವವಿದ್ಯಾಲಯ..ಲಡಾಯಿ ವಿಶ್ವಕೋಶ!!. ಸ್ವಂತ ವಿಚಾರದಿಂದ, ಸ್ವಂತ ಕಾಲುಗಳ ಮೇಲೆ ನಿಂತ ದಿನ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ!
ಸ್ವಾಮಿ..ನಿಮ್ಮ ಈ ದರ್ಗಾ ಸಾಹೇಬರು ಅವಧಿಯಲ್ಲಿ ಒಮ್ಮೆ ಮೊಹಮ್ಮದ್ ಬಿನ್ ಕಾಸಿಂ ಮತ್ತು ಬ್ರಾಹ್ಮಣನ ಕತೆ ಬರೆದಿದ್ದರು…ಒಬ್ಬ ಬ್ರಾಹ್ಮಣನಿಂದ ಈ ದೇಶ ಲೂಟಿಗೊಳಗಾಯಿತು ಅಂತ. ಆಮೇಲೆ ಸಾಕ್ಷಾಧಾರ ಎಲ್ಲ ಇಟ್ಟ ಮೇಲೆ ಪಿಳ್ಳೆ ನೆವ ತೆಗೆದು ನಾಪತ್ತೆ!. ಓದಿ ನೋಡಿ..ಪ್ರತಿಕ್ರಿಯಾ ವಿಭಾಗದ ಕೊನೆಯಲ್ಲಿದೆ..ನಿಮ್ಮ ಗುರುಗಳ ಪರದಾಟ.
http://avadhimag.com/2013/06/29/ಶರಣರ-ಮೇಲೆ-ದಂಡೆತ್ತಿ-ಬಂದವರ-5/
[[ಒಡಕನ್ನು ಮುಚ್ಚಿ ಒಗ್ಗಟ್ಟನ್ನು ಮೆರೆಯೋದು. ಒಡಕನ್ನು ಮತ್ತಷ್ಟು ಮಾಗ್ನಿಫೈ ಮಾಡೋದ್ರಿಂದ ಕ್ಷಣಿಕ ಖುಷಿ]]
ನಾನೂ ಇದನ್ನೇ ಹೇಳುತ್ತಿರುವುದು. ಕಾಶ್ಮೀರದ “ಶಂಕರಾಚಾರ್ಯ ಹಿಲ್”ಗೆ ನಮ್ಮ ದೇಶಕ್ಕೆ ಸಂಬಂಧಿಸದ ಯಾವುದೋ ಹೆಸರಿಡುವುದು ಒಡಕನ್ನು ಹೆಚ್ಚಿಸುವ ಪ್ರಯತ್ನವಲ್ಲವೇ?
[[ಹತ್ತಾರು ಸಾವಿರ ಮುಸಲ್ಮಾನರು ಮುಸ್ಲಿಂ ವಿರೋಧೀ ದಂಗೆ ಕಾರಣ ತಮ್ಮ ತಮ್ಮ ಮನೆಗಳಿಗೆ ಇನ್ನೂ ಮರಳಿಲ್ಲ, ಗುಜರಾತ್, ಮುಜಫ್ಫರ್ ಮುಂತಾದೆಡೆಯಲ್ಲಿ]]
ಧಂಗೆಗಳಲ್ಲಿ ತೊಂದರೆಗೊಳಗಾದವರು ಯಾವುದೇ ಜಾತಿ/ಮತಗಳಿಗೆ ಸೇರಿರಲಿ, ಅವರಿಗೆ ಸಹಾಯ ಮಾಡಲೇಬೇಕು. ಸರಕಾರ ಮುಂದೆ ನಿಂತು ಈ ರೀತಿಯ ಘಟನೆಗಳು ಮರುಕಳಿಸದಂತೆ ಪ್ರಯತ್ನಿಸಬೇಕು. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಲ್ಲವೇ?
ಕಾಶ್ಮೀರದ ವಿಷಯ ಮಾತನಾಡುವಾಗ, ಅಲ್ಲಿನ ಹಿಂದೂ ಪಂಡಿತರನ್ನು ಓಡಿಸಿದ ಘಟನೆ ಪ್ರಸ್ತಾಪಗೊಳ್ಳುವುದು ಸ್ವಾಭಾವಿಕ. ಆದರೆ, ಅದು ಪ್ರಸ್ತಾಪವಾದ ಕೂಡಲೇ, ಬೇರೆ ಕಡೆಗಳಲ್ಲಿ ಮುಸಲ್ಮಾನರಿಗೂ ತೊಂದರೆಯಾಗಿದೆ, ಸಿಖ್ಖರೂ ಬಹಳ ಕಷ್ಟ ಅನುಭವಿಸಿದ್ದಾರೆ, ಇತ್ಯಾದಿ ಮಾತುಗಳು, ಕಾಶ್ಮೀರದಲ್ಲಾದ ಧಂಗೆಗಳನ್ನು ಸಮರ್ಥಿಸಿದಂತೆ ಅಲ್ಲವೇ? ಕಾಶ್ಮೀರದ ವಿಷಯ ಮಾತನಾಡುವಾಗ, ಮುಜ್ಜಫರನಗರ ಧಂಗೆಗಳು ಅಪ್ರಸ್ತುತ ಅಲ್ಲವೇ? ಇದನ್ನು ಕಾಶ್ಮೀರದ ಚರ್ಚೆಯಲ್ಲಿ ಪ್ರಸ್ತಾಪಿಸುವ ಉದ್ದೇಶವೇನು?
[[ಭಾರತದ ಧ್ವಜ ಕಾಶ್ಮೀರದಲ್ಲಿ ಹಾರದ ಬಗ್ಗೆ ನಿಮಗೆ ಗೊತ್ತಿರುವಷ್ಟೇ ನನಗೂ ನಾಗಪುರದ ‘ಸಂಘ’ಟನೆ ಯ ಕೇಂದ್ರ ಕಚೇರಿ ಮೇಲೂ ಭಾರತದ ಬಾವುಟ ಹಾರದ ಬಗ್ಗೆ ಅರಿವಿದೆ.]]
ನಾನು ಮೇಲೆ ಹೇಳಿದಂತೆಯೇ ಇಲ್ಲಿಯೂ, ನೀವು ಕಾಶ್ಮೀರದಲ್ಲಾದ ಘಟನೆಯನ್ನು, ನಾಗಪುರದ ಘಟನೆಯ ಮೂಲಕ ಸಮರ್ಥನೆ ಮಾಡುತ್ತಿರುವುದು ತಪ್ಪಲ್ಲವೇ?
ನೀವು ಪ್ರಸ್ತಾಪಿಸುತ್ತಿರುವ ನಾಗಪುರದ ಸಂಘಟನೆ ಆರೆಸ್ಸೆಸ್. ಆರೆಸ್ಸೆಸ್ಸಿನ ಕೇಂದ್ರ ಕಛೇರಿಯ ಮೇಲೆ ಭಾರತದ ಬಾವುಟ ಹಾರಿಲ್ಲ ಎನ್ನುವುದು ನಿಮ್ಮ ಆರೋಪ. ಆರೆಸ್ಸೆಸ್ ಎಂದೂ, ಭಾರತದ ಬಾವುಟ ಹಾರಿಸುವುದಿಲ್ಲ ಎಂದೋ, ಹಾರಿಸಲು ಬಿಡುವುದಿಲ್ಲ ಎಂದೋ ಹೇಳಿಲ್ಲ. ಆರೆಸ್ಸೆಸ್ಸಿನ ಸರಸಂಘಚಾಲಕರೇ ಸ್ವತಃ ರಾಷ್ಟ್ರಧ್ವಜವನ್ನು ಹಾರಿಸಿದ್ದನ್ನು ನಾನೇ ಪ್ರತ್ಯಕ್ಷ ನೋಡಿದ್ದೇನೆ. ಈ ವರ್ಷವೂ ಅವರು ಜನವರಿ 26ರಂದು ಪ್ರವಾಸದಲ್ಲಿದ್ದ ಊರಿನ ಶಾಖೆಯಲ್ಲಿ ಮತ್ತು ಕಛೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಈಗ್ಗೆ ಒಂದೆರಡು ವರ್ಷದ ಹಿಂದೆ ಕೆಲವು ಸ್ವಘೋಷಿತ ಪ್ರಗತಿಪರರು ಆರೆಸ್ಸೆಸ್ ಕಛೇರಿಯ ಮೇಲೆ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸುವುದಾಗಿ ಘೋಷಿಸಿದರು. ಕೂಡಲೇ ಆರೆಸ್ಸೆಸ್ ಹೇಳಿಕೆಯನ್ನು ನೀಡಿ, ಅವರನ್ನು ಸ್ವಾಗತಿಸಿತು. ಆಗಸ್ಟ್ 15ರಂದು ಆರೆಸ್ಸೆಸ್ ಕಛೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಮಯಕ್ಕೆ ಈ ಯಾವ ಪ್ರಗತಿಪರರೂ ಬರಲೇ ಇಲ್ಲ. ಅಂದು ಅಲ್ಲಿದ್ದ ಆರೆಸ್ಸೆಸ್ ಮುಖಂಡರೇ ಧ್ವಜ ಹಾರಿಸಿದರು.
ಆರೆಸ್ಸೆಸ್ ಎಂದೂ ರಾಷ್ಟ್ರಧ್ವಜಾರೋಹಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ.
ಆದರೆ, ಕಾಶ್ಮೀರದಲ್ಲಿ ಉಗ್ರಗಾಮಿಗಳು ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿದ್ದನ್ನು, ಆರೆಸ್ಸೆಸ್ ಹೆಸರು ಮುಂದು ಮಾಡಿಕೊಂಡು ಸಮರ್ಥಿಸಿಕೊಳ್ಳುವ ಅಗತ್ಯ ನಿಮಗೇಕೆ? ಈ ದೇಶದ ಪ್ರತಿಯೊಬ್ಬ ಮಗನೂ ಈ ದೇಶವಿರೋಧಿ ಕೃತ್ಯವನ್ನು ಖಂಡಿಸಬೇಕಲ್ಲವೇ?
ನೀವೇಕೆ ಈ ದೇಶದ್ರೋಹಿ ಕೃತ್ಯಗಳನ್ನು ಸಮರ್ಥಿಸುತ್ತಿರುವಿರಿ ಎನ್ನುವುದು ತಿಳಿಯುತ್ತಿಲ್ಲ!
Mr.bhadravathi, How can you forget these names when you are quoting Indian Historians? ರೋಮಿಲಾ ಥಾಪರ್,ಪ್ರೊ.ಇರ್ಫಾನ್ ಹಬೀಬ್, ಪ್ರೊ.ಸತೀಶ್ ಚಂದ್ರ,ತಸ್ನೀಮ್ ಅಹಮದ್,ಆರ್.ಎಸ್.ಶರ್ಮಾ,ಬಿಪನ್ ಚಂದ್ರ
[[ರೋಮಿಲಾ ಥಾಪರ್,ಪ್ರೊ.ಇರ್ಫಾನ್ ಹಬೀಬ್, ಪ್ರೊ.ಸತೀಶ್ ಚಂದ್ರ,ತಸ್ನೀಮ್ ಅಹಮದ್,ಆರ್.ಎಸ್.ಶರ್ಮಾ,ಬಿಪನ್ ಚಂದ್ರ]]
ಭಾರತದ ಇತಿಹಾಸದಲ್ಲಿ ಆಸಕ್ತಿಯಿರುವವರೆಲ್ಲಾ ಓದಲೇಬೇಕಾದ ಪುಸ್ತಕ ಅರುಣ್ ಶೌರಿಯವರು ಬರೆದಿರುವ “Eminent Historians”.
ಅದನ್ನು ಓದಿದರೆ, ನೀವು ಹೇಳಿರುವ ಈ ಹೆಸರುಗಳು ಮತ್ತು ಹೇಳಲು ಮರೆತಿರುವ ಇನ್ನೂ ಅನೇಕ ಹೆಸರುಗಳು, ಅವರು ‘ಇತಿಹಾಸಕಾರ’ರಾದ ಬಗೆ, ಅವರು ‘ಪ್ರಸಿದ್ಧ’ರಾದ ರೀತಿ, ಅವರು ಬರೆದದ್ದು ‘ಇತಿಹಾಸ’ವೆಂಬ ಹೆಸರು ಪಡೆದು ನಮ್ಮ ಶಾಲಾ ಪಠ್ಯಗಳಲ್ಲಿ ಸೇರಿದ್ದು, ಇತ್ಯಾದಿಗಳೆಲ್ಲಾ ವಿವರವಾಗಿ ತಿಳಿಯುತ್ತವೆ.
ಕನ್ನಡಕ್ಕೂ ಈ ಪುಸ್ತಕ ಅನುವಾದಗೊಂಡಿದೆ ಮತ್ತು ಬಹಳ ಜನ ಕೊಂಡು ಓದುತ್ತಿದ್ದಾರೆ.
ಕನ್ನಡದಲ್ಲಿ ಅದರ ಹೆಸರು: “ಮಹಾನ್ ಇತಿಹಾಸಕಾರರು”.
ಮಾರ್ಕ್ಸ್ ಮಂಜು ಅವರೇ– ತಾವು ಹೆಸರಿಸಿದ ಆ ಇತಿಹಾಸಕಾರರು “ಮಾರ್ಕ್ಸ್ ವಾದಕ್ಕೆ” ತಕ್ಕಂತೆ ಭಾರತದ ಇತಿಹಾಸವನ್ನು ತಿದ್ದಿ ಬರೆದವರು.
ಮಿ. ಶ್ರೀರಂಗ, ಮಾರ್ಕ್ಸ್ ವಾದವು ಯಾವತ್ತೂ ಸತ್ಯವನ್ನೇ ಹೇಳಿದೆ ಹಾಗೂ ಸತ್ಯಕ್ಕೆ ನಿಷ್ಠವಾಗಿದೆ. ಅದು ನಿಮ್ಮ ವೈದಿಕರ ವೇದಾಂತವಲ್ಲ ಲಾಭಕ್ಕೋಸ್ಕರ ಸುಳ್ಳನ್ನು ಹೇಳಲು. ಸುಖಾಸುಮ್ಮನೆ ಮಾರ್ಕ್ಸ್ ವಾದದ ಅಪಪ್ರಚಾರ ಮಾಡಿ ಮರ್ಯಾದೆ ಕಳೆದುಕೊಲ್ಲಬೇಡಿ.
ಶೆಟ್ಕರ್ ಅವರೇ ಮಾರ್ಕ್ಸ್ ವಾದದ ಪುಸ್ತಕಗಳು ಹೇಳಿರುವ ಭಾರತದ ಚರಿತ್ರೆಯನ್ನು ತಿಳಿಯಬೇಕೆಂದರೆ ತಾವು ಕೇಂದ್ರೀಯ ವಿದ್ಯಾಶಾಲೆಗಳ social studies ಪುಸ್ತಕವನ್ನು ಒಮ್ಮೆ ಓದಿ ನೋಡಿ. ಒಂದು ವಾದಕ್ಕೆ ತಕ್ಕಂತೆ ಚರಿತ್ರೆ ರಚಿಸುವುದು ತಪ್ಪು ಎಂದು ನಾನು ಹೇಳಿದೆ ಅಷ್ಟೇ. ತಾವೇ ನನ್ನಲ್ಲಿ ಒಬ್ಬ ವೈದಿಕ ಶತ್ರುವನ್ನು ಕಂಡರೆ ಅದು ನಿಮ್ಮ ನಿಸ್ಸಾಹಯಕತೆ. ನನ್ನ ಮಾನ ಅಪಮಾನಗಳ ಜತೆ ಅದನ್ನೇಕೆ link ಮಾಡುತ್ತೀರಿ?
“ತಾವು ಕೇಂದ್ರೀಯ ವಿದ್ಯಾಶಾಲೆಗಳ social studies ಪುಸ್ತಕವನ್ನು ಒಮ್ಮೆ ಓದಿ ನೋಡಿ.”
ತಮಗೆ ಮಾಡಲು ಕಾಯಕವಿಲ್ಲ, ಶಾಲಾ ಪುಸ್ತಕಗಳನ್ನೂ ಓದಿ ಟೈಮ್ ಪಾಸ ಮಾಡುತ್ತೀರಿ. ಆದರೆ ನನಗೆ ಬಹಳಷ್ಟು ಕೆಲಸವಿದೆ. ನಾನೂ ನಿಮ್ಮ ಹಾಗೆ ಕಾಲಕ್ಷೇಪ ಮಾಡುತ್ತಾ ಕುಳಿತರೆ ದೇಶ ಮುಂದುವರೆಯುವುದು ಹೇಗೆ?
“ತಾವೇ ನನ್ನಲ್ಲಿ ಒಬ್ಬ ವೈದಿಕ ಶತ್ರುವನ್ನು ಕಂಡರೆ ಅದು ನಿಮ್ಮ ನಿಸ್ಸಾಹಯಕತೆ.”
ವೈದಿಕರು ನನ್ನ ಶತ್ರುಗಳಲ್ಲ. ಶರಣರಿಗೆ ಯಾರೂ ಶತ್ರುಗಳಲ್ಲ. ಯೂ ಆರ್ ಮಿಸ್ಟೇಕನ್.
ಶ್ರೀರಂಗವರೆ…
ಸಾತ್ವಿಕತೆ, ಮೃದುತನವನ್ನು ಅರ್ಥವಾಗುವವರ ಹತ್ತಿರ ತೋರಬೇಕು. ನಿದ್ದೆಯ ನಟನೆ ಮಾಡುವವವರನ್ನು ಎಬ್ಬಿಸಲು ಆಗುವುದಿಲ್ಲ.. ಕತ್ತೆಗೆ ಲತ್ತೆಯ ಪೆಟ್ಟು!
I Second Mr.Nagshetty Shetkar’s comments
+1
“ಮಾರ್ಕ್ಸ್ ವಾದವು ಯಾವತ್ತೂ ಸತ್ಯವನ್ನೇ ಹೇಳಿದೆ ಹಾಗೂ ಸತ್ಯಕ್ಕೆ ನಿಷ್ಠವಾಗಿದೆ. ಅದು ನಿಮ್ಮ ವೈದಿಕರ ವೇದಾಂತವಲ್ಲ ಲಾಭಕ್ಕೋಸ್ಕರ ಸುಳ್ಳನ್ನು ಹೇಳಲು.”
ಸ್ವಾಮಿ..ನಿಮ್ಮ (ಅಂದರೆ ಕರ್ನಾಟಕ ಗಂಜಿಕೇಂದ್ರ ಸಂಘಟನೆ (ರಿ) ಅವರ) ಈ ಮಿಸಳಭಾಜಿ ಸಿದ್ಧಾಂತವನ್ನು ಅಪ್ಪಟ ಮಾರ್ಕ್ಸ ವಾದ ಎಂದು ಕರೆದು ಮಾರ್ಕ್ಸ ನನ್ನು ಅವಮಾನ ಮಾಡಬೇಡಿ!.. ಯಾರದೋ ಮನೆ ಹುಡುಗರನ್ನು ಕಾಡಿಗೆ ಕಳಿಸಿ ನಕ್ಸಲ್ ರನ್ನಾಗಿ ಮಾಡುವವರು ಗಾಂಧಿ ಜಯೋತಿ ಆಚರಣೆ ಮಾಡಿ, ಗಾಂಧಿಯ ವಾರಸುದಾರರೆಂದು ಬಿಂಬಿಸಿಕೊಂಡ ಹಾಗೆ!.
ಇಲ್ಲಿದೆ ನೋಡಿ ನಿಮ್ಮ ಮಾರ್ಕ್ಸ ಬರೆದಿದ್ದು..ಬ್ರಿಟೀಶ್ ಕಾಲದ ಭಾರತದ ಬಗ್ಗೆ..ಓದಿದರೆ ಮಿದುಳಿನಲ್ಲಿ ತಾತ್ಕಾಲಿಕವಾಗಿ ರೋಗಗ್ರಸ್ಥವಾಗಿರುವ ಕೋಶಗಳು ಕೆಲಸ ಮಾಡಲು ಪ್ರಾರಂಭಿಸಬಹುದು.
http://www.marxists.org/archive/marx/works/1853/07/22.htm
ಮಾರ್ಕ್ಷ ಮಂಜಣ್ಣ..
ಹಲವು ವಿಶ್ವ ವಿದ್ಯಾಲಯಗಳ ಆಕರಗೃಂಥಗಳು, ಒರಿಜಿನಲ್ ವರ್ಕಗಳು ಅಂತರಜಾಲದಲ್ಲಿ ಸಿಗುವ ಈ ಕಾಲದಲ್ಲಿ ನಿಮ್ಮ ಈ ರೋಮಿಲಾ ಥಾಪರ್,ಪ್ರೊ.ಇರ್ಫಾನ್ ಹಬೀಬ್, ಪ್ರೊ.ಸತೀಶ್ ಚಂದ್ರ,ತಸ್ನೀಮ್ ಅಹಮದ್,ಆರ್.ಎಸ್.ಶರ್ಮಾ,ಬಿಪನ್ ಚಂದ್ರ ಗಳ ಪುರಾಣ ನಡೆಯುವುದಿಲ್ಲ. ಸ್ವಲ್ಪ ಕಿಡಕಿ ತೆಗೆಯಿರಿ..ಮನೆಯೊಳಗೆ ಗಾಳಿ-ಬೆಳಕು ಬರಲಿ!! 🙂
Mr.ವಿಜಯ್ ಪೈ, ಈ ಮಹನೀಯರನ್ನು ಇಷ್ಟು ಕೇವಲವಾಗಿ ನೋಡುವುದು ಸರಿಯಲ್ಲ.ನೀವು ಓದಿ ಬೆಳೆದಿದ್ದು ಇವರು ಕಟ್ಟಿಕೊಟ್ಟ ಇತಿಹಾಸದಿಂದ ತಿಳಿಯಿರಿ.ನಮ್ಮ ದೇಶದ ಜಾತ್ಯಾತೀತ ತತ್ವಕ್ಕೆ ಇವರ ಕೊಡುಗೆ ಗಣನೀಯವಾಗಿದೆ
ಮಾರ್ಕ್ಸ ಮಂಜಣ್ಣ ನಾನು ಅದನ್ನೇ ಹೇಳಿದ್ದು..ಈ ಮಹನೀಯರು ‘ಕಟ್ಟಿಕೊಟ್ಟ’ ಇತಿಹಾಸ ಅಂತ!! :).
[ನಮ್ಮ ದೇಶದ ಜಾತ್ಯಾತೀತ ತತ್ವಕ್ಕೆ ಇವರ ಕೊಡುಗೆ ಗಣನೀಯವಾಗಿದೆ]
ಹೌದು..ಇವರ ಕೊಡುಗೆಯ ಭಾರ ಎಷ್ಟಿದೆಯೆಂದರೆ….ಆ ಹೊರೆ ಹೊತ್ತು ಹೊತ್ತು ದೇಶ ಸುಸ್ತಾಗಿದೆ…ಈಗ ಸ್ವಲ್ಪ ಅವರ ‘ಜಾತ್ಯತೀತ’ ತತ್ವವನ್ನು ಕೆಳಗಿಳಿಸಿ..ನಿಜ ಜಾತ್ಯತೀತ ತತ್ವವನ್ನು ತರೋಣವೆ?
Mr.ವಿಜಯ್ ಪೈ ನಿಜ ಜಾತ್ಯತೀತ ತತ್ವ ಸುಳ್ಳು ಜಾತ್ಯತೀತ ತತ್ವ ಅಂತೇನು ಇರುವುದಿಲ್ಲ
ಜಾತ್ಯತೀತ ತತ್ವ ಎನ್ನುವುದು ಅತ್ಯಂತ ಜೀವಪರವಾದ ತತ್ವವಾಗಿದೆ.ಸಾಧ್ಯವಾದರೆ ಇದರ ಮೌಲ್ಯವನ್ನು ಅರಿತುಕೊಳ್ಳಿ
ಶೆಟ್ಕರ್ ಅವರೇ ಓದುವುದೂ ಒಂದು ಕಾಯಕ. ಕೋಶ ಓದಬೇಕು; ದೇಶ ಸುತ್ತ ಬೇಕು.
ನಿಮ್ಮ ಹಾಗೆ ಹೈಸ್ಕೂಲ್ ಚರಿತ್ರೆ ಟೆಕ್ಸ್ಟ್ ಪುಸ್ತಕ ಓದುವುದನ್ನೇ ಮಹಾಸಾಧನೆ ಅಂತೀರಲ್ಲ ಶ್ರೀರಂಗ!!!
ಏನು ಮಾಡುವುದು ಶೆಟ್ಕರ್ ಅವರೇ? ಕಾರ್ಲ್ ಮಾರ್ಕ್ಸ್ ವಚನಗಳನ್ನು ಓದಿ ನಂತರ ತನ್ನ ಮಾರ್ಕ್ಸ್ ವಾದ ಬರೆದ ಎಂದು ತಿಳಿಯಬೇಕಾದರೆ ಹೈಸ್ಕೂಲ್ ಪುಸ್ತಕಗಳಿಂದ ಪ್ರಾರಂಭಿಸಿ ನಂತರ ಕಾಲೇಜು, ವಿ ವಿ ಗಳ ಪುಸ್ತಕ ಓದಬೇಕಲ್ಲವೇ? ಅದಕ್ಕೆ ಓದುತ್ತಿದ್ದೇನೆ. ತಮ್ಮ ಮಾರ್ಗದರ್ಶನ ಆಗಾಗ ಹೇಗೂ ಸಿಗುತ್ತಿರುತ್ತದಲ್ಲ. ಇನ್ಯಾಕೆ ಯೋಚಿಸಲಿ?
“ಕಾರ್ಲ್ ಮಾರ್ಕ್ಸ್ ವಚನಗಳನ್ನು ಓದಿ ನಂತರ ತನ್ನ ಮಾರ್ಕ್ಸ್ ವಾದ ಬರೆದ”
ಇದು ತಮ್ಮ ಥಿಯರಿ. ಅದನ್ನು ನನ್ನ ಬಾಯಿಗೆ ಒರೆಸುವ ಯತ್ನ ಬಿಡಿ.
ಶೆಟ್ಕರ್ ಅವರೇ ಇದು “ತಮ್ಮದೇ ಥಿಯರಿ”. ನಿಲುಮೆಯಲ್ಲಿನ ಚರ್ಚೆಗಳಲ್ಲಿ ತಾವೇ ಹೇಳಿದ್ದೀರಿ. ಒಮ್ಮೆ ಜ್ಞಾಪಿಸಿಕೊಳ್ಳಿ. ಅದನ್ನು ನಿಲುಮೆಯಲ್ಲಿ ಓದಿದವರು ಸಾಕಷ್ಟು ಜನ ಇದ್ದಾರೆ!!
ಶ್ರೀರಂಗ ಅವರೇ, ನೀವು ವೈದಿಕರು ಸುಳ್ಳನ್ನೂ ಸತ್ಯ ಎಂದು ಮೋಡಿ ಮಾತಿನಲ್ಲಿ ಸಾಧಿಸುವ ಕುತಂತ್ರಿಗಳು. “ಕಾರ್ಲ್ ಮಾರ್ಕ್ಸ್ ವಚನಗಳನ್ನು ಓದಿ ನಂತರ ತನ್ನ ಮಾರ್ಕ್ಸ್ ವಾದ ಬರೆದ” ಅಂತ ದರ್ಗಾ ಸರ್ ಆಗಲಿ ನಾನಾಗಲಿ ಎಲ್ಲಿಯೂ ಹೇಳೇ ಇಲ್ಲ. ಹೇಳದೇ ಇರುವುದನ್ನು ಜ್ಞಾಪಿಸಿಕೊಳ್ಳುವ ಮಾತೇ ಇಲ್ಲ. ನಿಮಗೆ ಪ್ರಾಮಾಣಿಕತೆ ಎಂಬುದು ಸ್ವಲ್ಪವಾದರೂ ಇದ್ದರೆ ಪುರಾವೆ ಸಹಿತ ಆಪಾದನೆ ಮಾಡಿ. ಇಲ್ಲವಾದರೆ ನಿಮ್ಮ ಹಾಸ್ಯಾಸ್ಪದ ಆಪಾದನೆಗಳ ಕಾರಣದಿಂದ ನಗೆಪಾಟಲಿಗೆ ಒಳಗಾಗುತ್ತೀರಿ.
ಶೆಟ್ಕರ್ ಅವರೇ– , ದಿನಾ ತಮ್ಮಂತಹ ಕಾಯಕಯೋಗಿ,ಶರಣರಿಂದ ವೈದಿಕರು ಎಂದು ಆರೋಪ ಹೊರಿಸಿಕೊಳ್ಳುತ್ತಿರುವ ನನಗೆ ಜ್ಞಾಪಕವಿದೆ. ಬೈದವರು ಮರೆಯುವುದು ಸಹಜ. ಏಕೆಂದರೆ ಅದೇ ಅವರಿಗೆ ಕಾಯಕ. ಆದರೆ ಬೈಸಿಕೊಂಡವರು ಮರೆಯುವುದು ಹೇಗೆ? ನೀವು ಪ್ರತಿ ದಿನ ಮಾಡುತ್ತಿರುವ ಗಾಯದ ಗುರುತುಗಳು ಇನ್ನೂ ಹಾಗೇ ಇದೆಯಲ್ಲ.
“ನನಗೆ ಜ್ಞಾಪಕವಿದೆ”
aravattara aralu marulu. show proof if u have it.
ರೀ ಶೇಟ್ಕರ್ ಮಹಾಶಯರೇ, ಸಹನಾರವರು ತಮ್ಮ ತಮ್ಮ ಜ್ಞಾನಾಮೃತದ ಹೇಳಿಕೆಗಳಿಗೆ ಈ ರೀತ ಪ್ರಶ್ನಿಸಿದ್ದರು: “If you really have self respect then first you give a single vacana about “surplus value” as a evidence to prove your claim that ‘BASAVANNA foresaw MARXISM’. IF NOT YOU MUST BE ASHAMED OF YOURSELF FOR TELLING SUCH LIES again and again in this forum,,,,” ತಮಗೆ ಮಾನಮರ್ಯಾದೆ ಶಬ್ದಗಳ ಪರಿಚಯ ಇದ್ದರೆ ಅದು ತಮಗೂ ಇದೆ ಎಂದಾದರೆ ಮೊದಲು ಅವರ ಕೇಳಿದಂತೆ ನಿಮ್ಮ ‘BASAVANNA foresaw MARXISM’ ಎನ್ನುವ ವಾದಕ್ಕೆ ಮೊದಲು ಬಸವಣ್ಣನವರ ಒಂದಾದರೂ ವಚನದ ಉಲ್ಲೇಖ ಕೊಟ್ಟು ನಂತರ ಇಲ್ಲಿ ಉಳಿದವರ ಹೇಳಿಕೆಗಳಿಗೆ ನೀವು ಪ್ರೂಫ್ ಕೇಳಿ. ಎಲ್ಲಿಯವರೆಗೆ ನಿಮ್ಮ ವಾದಗಳಿಗೆ ಪ್ರೂಫ್ ಕೊಡುವ ಯೋಗ್ಯತೆ ನಿಮಗೆ ಇಲ್ಲವೋ ಅಲ್ಲಿಯವರಗೆ ಇನ್ನೊಬ್ಬರಿಗೆ ಪ್ರೂಫ್ ಕೇಳುವ ಯಾವ ಯೋಗ್ಯತೆಯೂ ನಿಮಗಿಲ್ಲ.
ullavaru shivaalayava maaduvaru
ಇಷ್ಟೊಂದು ದಿನಾ ದುರ್ಬೀನು ಹಾಕಿದರೂ ಏನೂ ಸಿಗದೆ ಕಾಟಾಚಾರಕ್ಕೆ ‘ಉಳ್ಳವರು’ ಪದ ಇದ್ದ ತಕ್ಷಣ ಅದು ಮಾರ್ಕ್ಸ್ ವಾದವೇ ಎನ್ನುವ ಮುಠ್ಠಾಳತನದಿಂದ ಈ ಸಾಲನ್ನು ಪೇಸ್ಟ್ ಮಾಡ್ತೀರಲ್ಲಾ!!!
ಇದನ್ನಿಟ್ಕೊಂಡು ಸಹನಾ ಕೇಳಿದ ಹಾಗೆ surplus value, Dialectical materialism ಗೆಲ್ಲಾ ಯಾವ ವಚನಗಳನ್ನು ಉಲ್ಲೇಖಿಸ್ತೀರಿ?
ಇದೇ ವಚನವನ್ನು Captitalism ಗೆ ಸಾಕ್ಷಿಯಾಗಿ ಯಾಕೆ ಕೊಡಬಾರದು? ಅಂದ ಹಾಗೆ ಮಾರ್ಕ್ಸ್ ಯಾವಾ ರಿಲಿಜನ್ನುಗಳನ್ನು ನಂಬಿ ತನ್ನ ದೇಹವೇ ದೇಗುಲವೆನ್ನುಂತಹ “ಆಸ್ತಿಕ’ನಾಗಿದ್ದ? ಅಬ್ಬ!!!! ಬಿಟ್ರೆ ಮಾರ್ಕ್ಸ್ ಕೂಡ ಲಿಂಗಧೀಕ್ಷೆ ಪಡಕೊಂಡು ಶರಣನಾಗಿದ್ದವನೇ ಎಂದು ಬಿಡೋಕ್ಕೂ ಹಿಂಜರಿಯೋಲ್ಲ ಅನ್ಸುತ್ತೆ !!!!…..
ರಾಕೇಶ್..
ತಲೆಯಲ್ಲಿ ವೈಚಾರಿಕ ವಿಷ, ನಿರ್ಧಿಷ್ಟ ಅಜೆಂಡ, ತಾರತಮ್ಯ, ತಪ್ಪಿಗೆ ಇನ್ನೊಬ್ಬರ ಕಡೆ ಬೆರಳು ತೋರಿ ‘ಸಂತೃಸ್ಥ’ ಬಾವುಟ ಹಾರಿಸುವ ಚಾಣಾಕ್ಷತೆ,. ‘ಮಾನವತಾ’ವಾದಿಗಳ ಸೋಗು ಹಾಕುವ ಈ ಮಾನಸಿಕ ಮೂಲಭೂತವಾದಿಗಳು, ಎಡ ಗಂಜಿಗಿರಾಕಿಗಳು ಇರುವ ತನಕ ದೇಶ ಉದ್ಧಾರವಾದಂತೆಯೆ!.
ಅಬ್ಬಾ!! ಪ್ರಗತಿಪರರ ಬಗ್ಗೆ ಎಷ್ಟೆಲ್ಲಾ ದ್ವೇಷ ಹಗೆತನ ಅಸೂಯೆಯ ಭಾವ ತಮ್ಮದು!! ನಿಮ್ಮ ಮನಸ್ಸಿನಲ್ಲಿರುವ ನಂಜನ್ನು ಕಾರಿಕೊಳ್ಳಲು ನಿಲುಮೆ ವೇದಿಕೆಯಾಗಿದೆ. ನಿಮ್ಮ ಹೇಟ್ ಸ್ಪೀಚಿಗೆ ಮಾಡರೇಟರ್ ಅವರ ಕುಮ್ಮಕ್ಕೂ ಇದೆ!
ಸ್ವಾಮಿ ಪೈಗಳೇ, ದೇಶದ ಉದ್ಧಾರ ನೀವು ಸಹಸ್ರಾರು ವರ್ಷಗಳ ಕಾಲ ಮಾಡಿದ್ದನ್ನು ಇಡೀ ಜಗವೇ ನೋಡಿದೆ. ಹೇಸಿಗೆ ಹುಟ್ಟಿಸುವ ಜಾತಿ ಪದ್ಧತಿ ಅಸ್ಪೃಶ್ಯತೆ ಸತಿ ಪದ್ಧತಿಯನ್ನು ದೇಶೋದ್ಧಾರದ ಹೆಸರಿನಲ್ಲಿ ಅವೈದಿಕರ ಮೇಲೆ ಹೇರಿದ ನೀವುಗಳು ಈಗ ನಮೊಸುರನ ಒಡಗೂಡಿ ಮಾಡಲು ಹೊರಟಿರುವ ದೇಶೋದ್ಧಾರದ ಒಳಹೊರಗಿನ ಅರಿವು ನಮಗಿದೆ. ನಮ್ಮನ್ನು ಬಗ್ಗು ಬಡೆಯಲು ನೀವೆಷ್ಟೇ ಹುನ್ನಾರ ಮಾಡಿದರೂ ನಾವು ಹೆದರುವುದಿಲ್ಲ. ನಮ್ಮ ನೆರವಿಗೆ ಬಾಬಾಸಾಹೇಬ್ ಪ್ರಣೀತ ಸಂವಿಧಾನವಿದೆ. ಸಂವಿಧಾನ ದತ್ತ ಹಕ್ಕುಗಳನ್ನು ಚಲಾಯಿಸಿ ನಿಮ್ಮ ಮನುಶಾಸನವನ್ನು ಮಣಿಸಿಯೇ ತೀರುತ್ತೇವೆ ನೋಡುತ್ತಿರಿ. ಚುನಾವಣೆ ಫಲಿತಾಂಶ ಬರಲಿ ಆಮೇಲೆ ಒಂದು ಕೈ ನೋಡಿಯೇ ಬಿಡೋಣ.
@’ಶೆಟ್ಕರ್’ ಸಾಹೇಬರು..
[ಅಬ್ಬಾ!! ಪ್ರಗತಿಪರರ ಬಗ್ಗೆ ಎಷ್ಟೆಲ್ಲಾ ದ್ವೇಷ ಹಗೆತನ ಅಸೂಯೆಯ ಭಾವ ತಮ್ಮದು!! ]
ನನ್ನ ವರ್ಣನೆ ಕೇಳಿ ಇದು ಸ್ವಯಂ ಅಪಾದಿತ ‘ಪ್ರಗತಿ’ಪರರ ಬಣ್ಣನೆ ಎಂದು ತಿಳಿದುಕೊಂಡ ನಿಮ್ಮ ಪ್ರತಿಭೆಗೆ ಅಭಿನಂದನೆಗಳು. ಇನ್ನು ‘ದ್ವೇಷ ಹಗೆತನ’ ವಂತೂ ಇದೆ ಮತ್ತು ಮುಂದೆಯೂ ಇರುತ್ತದೆ..ನಿಮ್ಮ ಎಡಬಿಡಂಗಿ ಗುಂಪಿನ ಬಗ್ಗೆ!. ‘ಅಸೂಯೆ’ ಹ್ಮ ಇಲ್ಲ ಸ್ವಾಮಿ..ಇವತ್ತು ಯಾರಾದ್ರೂ ಪ್ರಗತಿಪರ ಅಂತ ಕರೆದರೆ ಮುಖ ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ..ಅಷ್ಟು ಗಬ್ಬೆಬ್ಬಿಸಿ ಬಿಟ್ಟಿದ್ದೀರಿ ಆ ಶಬ್ದವನ್ನು!.
[ನಿಮ್ಮ ಮನಸ್ಸಿನಲ್ಲಿರುವ ನಂಜನ್ನು ಕಾರಿಕೊಳ್ಳಲು ನಿಲುಮೆ ವೇದಿಕೆಯಾಗಿದೆ. ನಿಮ್ಮ ಹೇಟ್ ಸ್ಪೀಚಿಗೆ ಮಾಡರೇಟರ್ ಅವರ ಕುಮ್ಮಕ್ಕೂ ಇದೆ!]
ನಿಮ್ಮ ‘ಸಧ್ಭಾವನೆ’, ‘ಮಾನವೀಯತೆ’ ಯನ್ನು ಕೂಡ ಇಲ್ಲಿಯೇ, ಇದೇ ವೇದಿಕೆಯಲ್ಲಿ ಹಂಚಿಕೊಂಡಿದ್ದೀರಿ ಎಂಬುದು ನಿಮ್ಮ ನೆನಪಿನಲ್ಲಿ ಇದ್ದರೆ ಸಾಕು. ನಾನು ನಿಲುಮೆಯ ನಿರ್ವಾಹಕರಿಗೊಂದು ಈ-ಮೇಲ್ ಹಾಕಿದ್ದೆ..’ನಾಗಶೆಟ್ಟಿ ಶೆಟ್ಕರ್” ಹೆಸರಿನಲ್ಲಿ ಯಾರೋ ಕಂಡ-ಕಂಡ ಲೇಖನಗಳಲ್ಲಿ ತಮ್ಮ ‘ಸದ್ಭಾವನೆ’ಯನ್ನು ಹರಡುವ ಕೆಲಸ ಮಾಡುತ್ತಿದ್ದಾರೆ..ದಯವಿಟ್ಟು ಅವರನ್ನು ಹೊರಗೆ ಹಾಕಿ ಅಂತ. ಇಂದಿಗೂ ನಿಲುಮೆಯ ನಿರ್ವಾಹಕರು ನಿಮ್ಮ ಈ ‘ಸದ್ಭಾವನಾ ಕಾಯಕ’ ಕ್ಕೆ ಕಡಿವಾಣ ಹಾಕಿಲ್ಲ..ಅಂದರೆ ನಿರ್ವಾಹಕರಿಗೆ ನಿಮ್ಮ ಮೇಲೆಯೂ ಪ್ರೀತಿ ಇದೆ ಎಂದಾಯಿತು. 🙂
[ಸ್ವಾಮಿ ಪೈಗಳೇ, ದೇಶದ ಉದ್ಧಾರ ನೀವು ಸಹಸ್ರಾರು ವರ್ಷಗಳ ಕಾಲ ಮಾಡಿದ್ದನ್ನು ಇಡೀ ಜಗವೇ ನೋಡಿದೆ. ಹೇಸಿಗೆ ಹುಟ್ಟಿಸುವ ಜಾತಿ ಪದ್ಧತಿ ಅಸ್ಪೃಶ್ಯತೆ ಸತಿ ಪದ್ಧತಿಯನ್ನು ದೇಶೋದ್ಧಾರದ ಹೆಸರಿನಲ್ಲಿ ಅವೈದಿಕರ ಮೇಲೆ ಹೇರಿದ .]
ಮತ್ತೆ ಅದೇ ಘೀಸಾ-ಪೀಟಾ ಕ್ಯಾಸೆಟ್!!. ಹೂಂ..ನಾನೂ ಕೇಳಿದ್ದೆ..
– ಕೆಳ ಎಂದು ಕರೆದುಕೊಳ್ಳುವ ವರ್ಗಗಳಲ್ಲಿ ಉಪಪಂಗಡ, ಎಡ/ಬಲ ಎಲ್ಲ ಮಾಡಿದ್ದೂ ವೈದಿಕರೇ ಅಂತ.
– ಇನ್ನೊಬ್ಬ ಬೂಸಿ ಸಂಪಾದಕರು ಬರೆದಿದ್ದರು, ಮುಸಲ್ಮಾನರ ಧಾಳಿಯಿಂದಾಗಿಯೇ ಭಾರತದಲ್ಲಿ ಉಳಿದ ಜಾತಿಯವರಿಗೆ ಪ್ರಾತಿನಿಧ್ಯ ಸಿಗಲು ಸುರುವಾಯಿತು.ಅದಕ್ಕಾದರೂ ನಾವು ಧಾಳಿಕೋರರಿಗೆ ಕೃತಜ್ಞರಾಗಿರಬೇಕು ಎಂದು!.
– ಏನೇ ಇದ್ದರೂ ಯಾವತ್ತೂ ಜನಸಂಖ್ಯೆಯ ನಾಲ್ಕು ಪ್ರತಿಶತ ಮೀರದ ವರ್ಗವೊಂದು, ಕೇವಲ ತಲೆಯ ಬಲದಿಂದಲೇ ಎಲ್ಲರನ್ನೂ ಆಳಿ, ಎಲ್ಲರನ್ನೂ ಒಡೆದು, ಸಂಪತ್ತನ್ನೆಲ್ಲ ತಮ್ಮದಾಗಿಸಿಕೊಂಡು ‘ಭೂಸುರ’ರಾಗಿ ಮೆರೆದರು ಎಂಬುದು ಹೆಮ್ಮೆ ಪಡುವಂತದ್ದು!. ನೀವು ಇದಕ್ಕೆ ನಿಮ್ಮ ಎಡಬಿಡಂಗಿ ತಲೆ ಉಪಯೋಗಿಸಿ ಇನ್ನಷ್ಟು ಕತೆಗಳನ್ನು ಜೋಡಿಸಿದರೆ ಸಂತೋಷವೆ..’ವೈದಿಕ’ ಶಬ್ದದಿಂದಾದರೂ ನಿಮ್ಮ ಗಂಜಿ ಹುಟ್ಟಲಿ! 🙂
[ನೀವುಗಳು ಈಗ ನಮೊಸುರನ ಒಡಗೂಡಿ ಮಾಡಲು ಹೊರಟಿರುವ ದೇಶೋದ್ಧಾರದ ಒಳಹೊರಗಿನ ಅರಿವು ನಮಗಿದೆ]
ಹೂಂ..ಜಾತಿ ಪದ್ಧತಿ ಅಸ್ಪೃಶ್ಯತೆ ಸತಿ ಪದ್ಧತಿಯನ್ನು ಮತ್ತೆ ಪ್ರಾರಂಭ ಮಾಡೋಣ ಅಂತಿದ್ದೇವೆ. ನಿಮ್ಮ ಸಲಹೆಗಳಿದ್ದಿರೆ ಕೊಡಬಹುದು. ಮೊನ್ನೆ ಯೂಟ್ಯೂಬ್ ನಲ್ಲಿ ವಿಡಿಯೊವೊಂದನ್ನು ನೋಡಿದೆ. ಯಾರೋ ಮುಲ್ಲ ಟಿವಿ ಗೆ ಇಂಟರ್ ವ್ಯೂ ಕೊಡುತ್ತ ಹೇಳುತ್ತಿದ್ದ ‘ಇದು ಕೊನೆಯ ಅವಕಾಶ ನಮಗೆ..ಮೋದಿ ಬಂದ ದಿನದಿಂದಲೇ ಮಸೀದಿಗಳನ್ನು ಕೆಡವಲು ಪ್ರಾರಂಭ ಮಾಡುತ್ತಾನೆ. ಪಾಕ್ ನ ಮೇಲೆ ಯುದ್ಧ ಸಾರಿ ನಾಶ ಮಾಡುತ್ತಾನೆ” ಎಂದು ಭಯಾನಕ ಚಿತ್ರಣವೊಂದನ್ನು ಕೊಡುತ್ತಿದ್ದ!. ಇಬ್ಬರಲ್ಲೂ ಅಂತಹ ವ್ಯತ್ಯಾಸವೇನಿಲ್ಲ!!.
[ ನಮ್ಮನ್ನು ಬಗ್ಗು ಬಡೆಯಲು ನೀವೆಷ್ಟೇ ಹುನ್ನಾರ ಮಾಡಿದರೂ ನಾವು ಹೆದರುವುದಿಲ್ಲ. ನಮ್ಮ ನೆರವಿಗೆ ಬಾಬಾಸಾಹೇಬ್ ಪ್ರಣೀತ ಸಂವಿಧಾನವಿದೆ. ಸಂವಿಧಾನ ದತ್ತ ಹಕ್ಕುಗಳನ್ನು ಚಲಾಯಿಸಿ ನಿಮ್ಮ ಮನುಶಾಸನವನ್ನು ಮಣಿಸಿಯೇ ತೀರುತ್ತೇವೆ ನೋಡುತ್ತಿರಿ. ಚುನಾವಣೆ ಫಲಿತಾಂಶ ಬರಲಿ ಆಮೇಲೆ ಒಂದು ಕೈ ನೋಡಿಯೇ ಬಿಡೋಣ]
ಕೆಳವರ್ಗಗಳಲ್ಲಿ ಶಿಕ್ಷಣ, ಉದ್ಯಮಶೀಲತೆ, ವೃತ್ತಿಪರತೆ ಹೆಚ್ಚಿಸಲು ಇವತ್ತಿನವರೆಗೆ ಏನಾದರೂ ಕಾರ್ಯಕ್ರಮ ಮಾಡಿದ್ದೀರಾ?? ೧೨ ನೆಯ ಶತಮಾನದ ಪ್ರವಚನ ಮಾಡುತ್ತಾ ಸುತ್ತು ಹೊಡೆಯುವವರು..ಶಿಕ್ಷಣದಿಂದಲೇ ಪ್ರಗತಿ ಎಂದು ಎಲ್ಲಾದರೂ ನಾಲ್ಕು ಕಡೆ ಪ್ರವಚನ ಕೊಟ್ಟಿದ್ದಾರೆಯೆ?. ಪೇಜಾವರರ ಜೊತೆ ಪಂಕ್ತಿಭೋಜನ/ಪೇಜಾವರ ಪೀರದಲ್ಲಿ ಕೂಡುವುದು ಇವೇ ಪಂಚವಾರ್ಷಿಕ ಯೋಜನೆಗಳನ್ನು ಡಂಗುರ ಹೊಡೆಯುತ್ತ, ಇವುಗಳಿಂದಲೇ ಕೆಳವರ್ಗದವರ ಉದ್ಧಾರವಾಗಿಬಿಡುತ್ತದೆ ಎಂಬ ಭ್ರಮೆ ಹುಟ್ಟಿಸುತ್ತ, ಇನ್ನೂ ಉಳಿದ ಸಮಯಕ್ಕೆ ಇರಲೆಂದು ಆರ್.ಎಸ್.ಎಸ್ / ಬಿಜೆಪಿ ಗಳ ಬಗ್ಗೆ ಸುಳ್ಳು ಬಿತ್ತಿ, ಹೆದರಿಕೆ ಹುಟ್ಟಿಸುತ್ತ ಮನುಶಾಸನ, ವೈದಿಕಶಾಹಿ ಗಳ ಹಳೆ ಕ್ಯಾಸೆಟ್ ಹಾಕಿಕೊಂಡು ತಿರುಗಾಡುವ ಗಿರಾಕಿಗಳು ನೀವು. ಇದ್ದ ಒಡಕು ಸಾಲದೆಂದು, ದೇವರಲ್ಲೂ ಜಾತಿ/ಶೋಷಣೆ ಹುಡುಕುವ ದಂಧೆ ಸುರು ಹಚ್ಚಿಕೊಂಡಿದ್ದೀರಿ. ನಿಮ್ಮ ಈ ಸ್ವಾರ್ಥದ ಎಡಬಿಡಂಗಿ ಅಜೆಂಡಾಗಳಿಗೆ ಬಾಬಾಸಾಹೇಬರ ಹೆಸರನ್ನು ಎಳೆದು ತರಲು ನಾಚಿಕೆಯಾಗಬೇಕು ನಿಮಗೆ. ಅಂಬೇಡ್ಕರರು ಬಯಸಿದ್ದು ಎಡ ಗಂಜಿ ಗಿರಾಕಿಗಳ ಕ್ಷೇಮವನ್ನಲ್ಲ..ನಿಜವಾದ ಶೋಷಿತರ ಮೇಲೆತ್ತುವಿಕೆಯನ್ನು!!
“ನಾನು ನಿಲುಮೆಯ ನಿರ್ವಾಹಕರಿಗೊಂದು ಈ-ಮೇಲ್ ಹಾಕಿದ್ದೆ..’ನಾಗಶೆಟ್ಟಿ ಶೆಟ್ಕರ್” ಹೆಸರಿನಲ್ಲಿ ಯಾರೋ ಕಂಡ-ಕಂಡ ಲೇಖನಗಳಲ್ಲಿ ತಮ್ಮ ‘ಸದ್ಭಾವನೆ’ಯನ್ನು ಹರಡುವ ಕೆಲಸ ಮಾಡುತ್ತಿದ್ದಾರೆ..ದಯವಿಟ್ಟು ಅವರನ್ನು ಹೊರಗೆ ಹಾಕಿ ಅಂತ. ”
ನಿಮ್ಮ ಪ್ರತಿಗಾಮಿ ಧೋರಣೆಗಳನ್ನು ವಿರೋಧಿಸುವ ಎಲ್ಲಾ ಪ್ರಗತಿಪರರನ್ನೂ ಬಹಿಷ್ಕರಿಸಿ ನಿಮ್ಮ ಅಸಲಿ ಫ್ಯಾಸಿಸ್ಟ್ ಚಹರ ತೋರಿಸಿಯೇ ಬಿಡಿ ಮಿ. ವಿಜಯ್.
“ನಿಮ್ಮ ಪ್ರತಿಗಾಮಿ ಧೋರಣೆಗಳನ್ನು ವಿರೋಧಿಸುವ ಎಲ್ಲಾ ಪ್ರಗತಿಪರರನ್ನೂ ಬಹಿಷ್ಕರಿಸಿ ನಿಮ್ಮ ಅಸಲಿ ಫ್ಯಾಸಿಸ್ಟ್ ಚಹರ”
ಅಂದರೆ, ವಚನ ಸಾಹಿತ್ಯ ಚರ್ಚೆಯಲ್ಲಿ ’ಸಿ.ಎಸ್.ಎಲ್.ಸಿ’ಯವರ ಮೇಲೆ ನಿಮ್ಮ ಸೆಕ್ಯುಲರ್ ಬಳಗ ಪ್ರಯೋಗಿಸಿದ ಅಸ್ತ್ರದ ಬಗ್ಗೆ ಮಾತನಾಡುತಿದ್ದೀರಾ?
[ನಿಮ್ಮ ಪ್ರತಿಗಾಮಿ ಧೋರಣೆಗಳನ್ನು ವಿರೋಧಿಸುವ ಎಲ್ಲಾ ಪ್ರಗತಿಪರರನ್ನೂ ಬಹಿಷ್ಕರಿಸಿ ನಿಮ್ಮ ಅಸಲಿ ಫ್ಯಾಸಿಸ್ಟ್ ಚಹರ ತೋರಿಸಿಯೇ ಬಿಡಿ ಮಿ. ವಿಜಯ್.]
ನಿಮ್ಮ ‘ಅಸಲಿ’ ಶರಣ ಚಹರೆಯನ್ನು ಅವಧಿಯಲ್ಲಿ ನೋಡಿ ಬಂದೆ. ಲೇಖನದ ತುಂಬ ‘ಸಧ್ಭಾವನೆ’ ತುಂಬಿ ತುಳುಕುತ್ತಿತ್ತು. ಅಗಾಧ ‘ಶರಣ’ ಪ್ರತಿಭೆ ತಮ್ಮದು!! 🙂
ಮತ್ತೆ ಅದೇ ಹಳೆಯ ಗ್ರಾಮಾಫೋನ್ ರೆಕಾರ್ಡಿಂಗ್ ಪ್ಲೇ ಮಾಡ್ತಿದ್ದೀರಲ್ಲ ಮಿ. ವಿಜಯ್! ಹೊಸತೇನಾದರೂ ಹೇಳುತ್ತೀರಾ?
ಹನ್ನೆರಡನೆಯ ಶತಮಾನದ ಕತೆಗಳನ್ನೇ ಈಗ ಇಲ್ಲೇ ನಡೀತಾ ಇದೆ ಎನ್ನುವಂತೆ ಹೇಳುವ ಮತ್ತು ಜನ ತಾನು ಹೇಳಿದ್ದನ್ನು ಇನ್ನೂ ನಂಬುತ್ತಾರೆ ಎನ್ನುವ ಭ್ರಮೆಯಲ್ಲಿರುವ ಎಡಬಿಡಂಗಿಗಳಿಂದ ನಿರೀಕ್ಷಿತ ಪ್ರತಿಕ್ರಿಯೆ!..ಇರಲಿ… ಎಷ್ಟಂದರೂ ಉಲ್ಟಾ ಗಿರಾಕಿ!! :).
ಈ http://avadhimag.com/2014/03/20/’ಅಲ್ಪಸಂಖ್ಯಾತರು-ಹಿಂದುಳಿದ/ ಗ್ರಾಮಾಫೋನ ನ್ನು ನಾವು ಎಂದಾದರೂ ಮೀರಿಸಲಾಗುತ್ತದೆಯೆ?? ಈ ಪುಂಗಿದಾಸರ ಪ್ರತಿಭೆ ನಮಗೆ ಎಂದಾದರೂ ಬರುತ್ತದೆಯೆ??. ಗುರುಗಳೆ..ಅಲ್ಲಿಗೆ ಹೋಗಿ ಒಂದೆರಡು ನಿಮ್ಮ ‘ಸಧ್ಭಾವನೆ’ ಯ ಪ್ರತಿಕ್ರಿಯೆ ಹಾಕಿ ಬೆಂಬಲ ನೀಡಿ. ಪಾಪ..ಕುದ್ದು ನಿಮ್ಮ ಜನರಿಗೆ ಈ ಪುಂಗಿ ಕೇಳಿ, ಕೇಳಿ ಚಿಟ್ಟು ಹಿಡಿದಿರಬೇಕು. ಚಪ್ಪಾಳೆ ತಟ್ಟುವವರೆ ಇಲ್ಲ!
Talk sense Mr. Pai. You are behaving like third rate standup comedian of late. But your jokes are flat tire.
[You are behaving like third rate standup comedian of late.]
ಛೆ..ನಿಮ್ಮಗಳ ಜೊತೆ ಅದ್ಹೇಗೆ ಸ್ಫರ್ಧೆ ಮಾಡಲು ಬರುತ್ತದೆ ಗುರುಗಳೆ?..ಒಂದೇ ವೇದಿಕೆಯಡಿಯಲ್ಲಿ, ಒಂದೇ ಹೆಸರಿನಲ್ಲಿ ಇಬ್ಬರು ಮನರಂಜನೆ ಕೊಡುವುದು ಸಾಮಾನ್ಯ ಸಂಗತಿಯಲ್ಲ. ಅಂದ ಹಾಗೆ ಗುರುಗಳೆ..ಈಗೀಗ ನೀವು ನಿಮ್ಮ ಬಿರುದುಗಳನ್ನು ಬೇರೆಯವರಿಗೆ ಅಪಾದಿಸುವ ಉದಾರ ಬುದ್ಧಿ ತೋರುತ್ತಿರುವುದು ಹೇಗೆ? ಮನೆಯಲ್ಲಿನ ಕನ್ನಡಿ ಏನಾದರೂ ಮಾರಿದ್ರಾ?? 🙂
I read this thoughtful piece of words.Very nicely written. I quote “ಭಾರತೀಯ ಪ್ರಜಾಪ್ರಭುತ್ವದ ತಳಹದಿ: ಗೌತಮ ಬುದ್ಧ ಮಹಾಪರಿನಿರ್ವಾಣ ಹೊಂದುವುದಕ್ಕೆ ಮುನ್ನ ಆತನ ಪರಮ ಶಿಷ್ಯ ಆನಂದನು ಬೌದ್ಧ ಸಂಘಕ್ಕೆ ನಾಯಕನನ್ನು ಸೂಚಿಸುವ ಬಗ್ಗೆ ಮನವಿ ಮಾಡಿದ. ಸಂಘದ ಭಿಕ್ಕುಗಳೇ ತಮ್ಮ ನಾಯಕನ ಆಯ್ಕೆ ಮಾಡಿಕೊಳ್ಳುವರು ಎಂದು ಬುದ್ಧ ತಿಳಿಸಿದ. ಹೀಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಉದಯವಾಯಿತು ”
ಆಗ ಮಹರ್ಷಿ ಮಾರ್ಕ್ಸ್ ಇದ್ದಿದ್ದರೆ, ಮಾರ್ಕ್ಸ್ ವಾದವೇ ಭಾರತದಲ್ಲಿ ಉದಯವಾಗುತಿತ್ತು.ಭಾರತದ ದೌರ್ಭಾಗ್ಯವೆನ್ನಬಹುದು ಇದನ್ನು
ದರ್ಗಾ ಸರ್ ಅವರು ನುರಿತ ವೈದ್ಯನ ತರಹ ಮಾರ್ಕ್ಸ್ ವಾದ ಹಾಗೂ ಬಸವಾದ್ವೈತವನ್ನು ಬೆರೆಸಿ ಮನುವಾದವೆಂಬ ಮನೋರೋಗಕ್ಕೆ ಸಶಕ್ತವಾದ ಮದ್ದನ್ನು ತಯ್ಯಾರಿಸುತ್ತಿದ್ದಾರೆ. ಭಾರತದ ಭಾಗ್ಯವೆನ್ನಬಹುದು ಇದನ್ನು.
+1
ವಾವ್..ನ್ಯಾಶನಲ್ ವೈದ್ಯರಿಗೆ ಚೆನ್ನಾಗಿ ಅರೆಯಲು ಹೇಳಿ. ಈಗ ಪ್ರಸ್ತುತದಲ್ಲಿ ಅವರು ಕೊಡುತ್ತಿರುವ ಔಷಧಗಳು ತೃಪ್ತಿಕರವಾಗಿ ಮಾರಾಟವಾಗುತ್ತಿಲ್ಲ., ನಿರಿಕ್ಷಿತ ಪರಿಣಾಮನ್ನೂ ಕೊಡುತ್ತಿಲ್ಲ 😉
ಅರೆಯಲು ಅದು ಅಳಲೇಕಾಯಿ ಪಂಡಿತರ ಮದ್ದಲ್ಲ Mr.ವಿಜಯ್ ಪೈ
ಹೌದಿರಬಹುದು..ಆದರೆ ಏನು ಮಾಡುವುದು. ಇಷ್ಟು ದಿವಸ ಪ್ರಯೋಗಕ್ಕಾಗಿ ಸರಿಯಾಗಿ ಅರೆಯದೆ ಕುಡಿಸಿ, ಕುಡಿಸಿ ತಮ್ಮ ನ್ಯಾಷನಲ್ ವೈದ್ಯರ ಗಿರಾಕಿಗಳೇ ಕಡಿಮೆ ಆಗಿಬಿಟ್ಟಿದ್ದಾರೆ :(.
ದರ್ಗಾ ಸರ್ ಮಾರ್ಕ್ಸ್ ಬರೋಕ್ಕೆ ಮುಂಚೆಯೇ ಇದ್ದಿದ್ದರೆ……ಮಾರ್ಕ್ಸ್ ಕೂಡಾ ಬಸವಾದ್ವೈತ ಸ್ವೀಕರಿಸಿ, ದರ್ಗಾ ಅವರ ಶಿಷ್ಯರಾಗಿ ಶರಣರಾಗಿಬಿಡುತ್ತಿದ್ದರೇನೋ!! 😉
ಹುಚ್ಚು ಹಿಡಿದಿರೋ ಕೋತಿಗೆ, ಕಳ್ಳು ಕುಡಿಸಿ, ಚೇಳಿನ ಕೈಯ್ಯಲ್ಲಿ ಕಚ್ಚಿಸಿದರೆ ಹೇಗಾಗತ್ತೋ, ಆ ರೀತಿ ಆಗಿಬಿಡುತ್ತೆ ಅಷ್ಟೇ!
ವಿಜಯ್ ಪೈ ಅವರಿಗೆ–“ಶರಣರ ಮೇಲೆ ದಂಡೆತ್ತಿ ಬಂದವರು” ಸರಣಿ ಓದಿದೆ. ಈ ಹಿಂದೆ ಪ್ರಜಾವಾಣಿಯಲ್ಲಿ ಈ ಬೌದ್ಧಿಕ ವಾದ ವಿವಾದ ಓದಿದ್ದೆ. ಅಲ್ಲಿ ಆ ಪತ್ರಿಕೆಯವರು “ತಮಗೆ ಬೇಕಾದ ಲೇಖನಗಳನ್ನು ಮಾತ್ರ” ಪ್ರಕಟಿಸಿದ್ದರು. ಆದರೂ ಸಹ ಅವು at least ಓದುವ ಹಾಗಿದ್ದವು. ಆದರೆ ಈ ‘…… ದಂಡೆತ್ತಿ ಬಂದವರಲ್ಲಿ’ ಅದೂ ಇಲ್ಲ. ಪುರೋಹಿತ ಶಾಹಿಗಳ ಕೈವಾಡ ಎಂದು ಆರೋಪಿಸೋಣ ಎಂದುಕೊಂಡರೆ ಅದೂ ಸಾದ್ಯವಿಲ್ಲ. ಎಲ್ಲೋ cloud computerನಲ್ಲಿ ಕುಳಿತ ವೈದಿಕರು ಏನೋ ಮಾಡಿಬಿಟ್ಟಿರಬೇಕು. ಛೆ ಛೆ !!!
ಮಧ್ಯದಲ್ಲಿ ಜೂಲಿಯಾನ್ ಅಸ್ಸಾಂಜ್ ನನ್ನು ತಂದು ಮುಖಭಂಗವಾದ ಕಥೆ ಮತ್ತು ಕೇಜ್ರಿವಾಲ್ ಎಲ್ಲರಿಗೂ ಗುಜರಾತ್ ಅಭಿವೃದ್ಧಿಯ ನಿಜಸ್ಥಿತಿ ತಿಳಿಸಿ ಕಣ್ಣುತೆರೆಸಿದ ಎಂದೆಲ್ಲ ಹೇಳಿ ವಿಚಿತ್ರ ಕಚುಗುಳಿ ಅನುಭವಿಸಿದ ಶ್ರೀಯುತರ ಗಮನಕ್ಕೆ.”.Economic Freedom States of India – 2013″ ಬಿಡುಗಡೆಯಾಗಿದೆ. ಸಂಪಾದಿಸಿದವರು ನಿಮ್ಮವರೇ ಆದ Bibek Debroy, Lavlesh Bhandari, Swamynathan S. Anklesaria Aiyar. ಓದಿ ನೋಡಬಹುದು..
The Economic Freedom of the States of India (EFSI), 2013, estimates economic
freedom in the 20 biggest Indian states, based to the extent possible on
data for 2012, using a methodology adapted from the Fraser Institute’s
Economic Freedom of the World (EFW) annual reports. The main highlights of
our report this year are as follows:
1. Gujarat has widened its lead at the top of the economic freedom
table, with an index score of 0.65 (on a scale from 0 to 1.0). Tamil
Nadu remains in second position, but some distance behind,
with a score of 0.54. Next in line come Andhra Pradesh (0.50),
Haryana (0.49), Himachal Pradesh (0.47) and Madhya Pradesh (0.47)
(see Table 0.1).
2. Overall, the states have become freer over time. The median score
for economic freedom among states had earlier declined from 0.38
in 2005 to 0.36 in 2009, but has now improved to 0.43. However, this
is way behind the top score of 0.65 registered by Gujarat, showing
that most states have a long way to go yet.
——
@ನಾಗಶೆಟ್ಟಿ ಶೆಟ್ಕರ್..
ಇದು ನಿಮಗಾಗಿ..
೧) Jharkhand has worsened more than any other state, with
its index score falling from 0.40 in 2005 to 0.33 in 2013. Because of
this, it has slipped from 8th position to 18th. It has also recorded one
of the lowest rates of economic growth (7.3%). Jharkhand claims
that it has been held back by Maoist insurrection in several districts,
but this is a weak excuse for poor governance. Assam and Jammu &
Kashmir have been other relatively slow-growing states (see
Table 1.8).
೨) The biggest improvement has been recorded by Chhattisgarh, which
has moved up from 16th to 8th position. This state has an even worse
problem of Maoism than Jharkhand, but has shown that improved
governance and rapid gross domestic product (GDP) growth are
nevertheless possible in such diffcult circumstances.
ಇದನ್ನು ಓದಿದ ಮೇಲೆ..ತಾವು ಹೇಳಬಹುದಾದ ಬಂಡವಾಳಶಾಹಿ, ಉದ್ಯಮಪರ ಕಥೆಯ ಬಗ್ಗೆ ಉತ್ತರ ಅಲ್ಲೇ ಆ ಅಧ್ಯಯನದಲ್ಲಿಯೇ ಇದೆ..ಕೇಳಬಾರದಂತಹ ಕೆಳಮಟ್ಟದಲ್ಲಿದ್ದ, ‘ಕ್ರಾಂತಿ’ಕಾರರ ಬಿಡಾಗಿದ್ದ ಬಿಹಾರ ಹೇಗೆ ತನ್ನ ಪರಿಸ್ಥಿತಿ ಸುಧಾರಿಸಿಕೊಂಡಿತು ಎಂದು. ಮುಂದುವರೆಯಲಿ ನಿಮ್ಮ ಎರವಲು ಎಡಬಿಡಂಗಿ ಕಾರ್ಯಕ್ರಮ ಬೇರೆ ಬೇರೆ ವೇಷಗಳಲ್ಲಿ! 🙂
!!!
ತಿಂಗಳು ಬಿಟ್ಟು ಬಂದು ಹಣುಕಿದರೂ ಅದೇ ಕತೆ, ನಾನಂತೂ ಈ ಯಪ್ಪನ ಬಾಲ ನೆಟ್ಟಗೆ ಮಾಡುವ ಕೆಲಸಕ್ಕೆ ಕೈ ಹಾಕಿ ಸುಸ್ತಾಗಿ ಬಿಟ್ಟೆ. ಈಗ ನೀವು ಮುಂದುವರೆಸಿ, ಶುಭಹಾರೈಕೆ. ಈಗ ನಿಮಗೆಲ್ಲ ಏಪ್ರಿಲ್ ಒಂದಕ್ಕೆ ಮುಂಗಡವಾಗಿ ಒಂದು ಹಾಸ್ಯ ಲೇಖನ. ಕ್ರಾಂತಿಕಾರಿ ಹಾಸ್ಯಲೇಖನ. ನಮ್ಮ ಆಧುನಿಕ *ಣಾ ಬಸವಣ್ಣನವರದು. ಒಂದೂ ಸಾಲು ಬಿಡದೇ ಓದಿ. ಸಕತ್ತಾಗಿದೆ. 🙂 .(ನಮ್ಮ ಶೆಟ್ಕರ್ ವರು ಈಗಾಗಲೇ ಅದನ್ನಿಲ್ಲಿ ತಂದು ಹಾಕಿದ್ದರೆ ಕ್ಷಮಿಸಿ)
http://ladaiprakashanabasu.blogspot.in/2014/03/blog-post_7296.html
ಸಾರ್ವಕಾಲಿಕ ಶ್ರೇಷ್ಠ ಬರಹವನ್ನು ಹಾಸ್ಯಲೇಖನ ಅನ್ನುವವರ ತಲೆಯ ಸ್ಕ್ರೂ ಲೂಸ್ ಆಗಿದೆಯಾ ಅಥವಾ ತಲೆಯೇ ಲಾಸ್ ಆಗಿದೆಯಾ?
ಮನೋಹರ್..
ಸಾರ್ವಕಾಲಿಕ ಶ್ರೇಷ್ಠ ಹಾಸ್ಯಲೇಖನದ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು :). ನಾವು ನಳಿಕೆಯನ್ನು ಬಾಲಕ್ಕೆ ಹಾಕಿ ವೆಲ್ಡ್ ಮಾಡೋಣ ಅಂತಿದೀವಿ..
ಮನೋಹರ್ ಅವರಿಗೆ– ತಾವು ಕೊಟ್ಟಿರುವ linkನ ಲೇಖನ ಅವಧಿಯಲ್ಲಿಯೂ ಬಂದಿದೆ. ಅಲ್ಲಿ ಈಗಾಗಾಲೇ ಪ್ರತಿಕ್ರಿಯೆಗಳು publish ಆಗಿವೆ. ಆದರೆ ಲಡಾಯಿ ಯಲ್ಲಿ ಈ ಹೊತ್ತಿನ ತನಕ (ರಾತ್ರಿ ೯ ಘಂಟೆ) ಒಂದೂ ಪ್ರತಿಕ್ರಿಯೆ ಇಲ್ಲ.
ಅಬ್ದುಲ್,
ನಾನು ಹೇಳಬೇಕಿದ್ದ ಕೆಲವು ಮಾತುಗಳನ್ನು ನರೇಂದ್ರ ಹೇಳಿದ್ದಾರೆ.
{{ಪಂಡಿತರು ಅನುಭವಿಸಿದ್ದಕ್ಕಿಂತ ಹೆಚ್ಚು ಮುಸ್ಲಿಮರು, ಕ್ರೈಸ್ತರು, ಸಿಕ್ಖರು ಅನುಭವಿಸಿದ್ದಾರೆ}}
ನಿಮ್ಮ ಮಾತು ಪೂರ್ಣ ಸತ್ಯವಲ್ಲ ಅಬ್ದುಲ್. ದಂಗೆಯಲ್ಲಿ ಬೀದಿಗೆ ಬೀಳುವುದಕ್ಕೂ, ಹಾಡುಹಗಲೇ ಉಗ್ರರಿಂದ,ನೆರೆ-ಹೊರೆಯವರಿಂದ ಹತ್ಯೆಯಾಗುವುದಕ್ಕೂ (ಹಾಗೆ ಹತ್ಯೆ ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿರುವುದು ಬೇರೆ!) ಖಂಡಿತ ವ್ಯತ್ಯಾಸವಿದೆ.ಹಾಡಹಗಲೇ ಪಂಡಿತರ ಕಗ್ಗೊಲೆಯಾಗುವಾಗ,ಅವರು ಕೈ ಮುಗಿದು ಸಹಾಯಕ್ಕೆ ಬೇಡುವಾಗ ಶ್ರೀಮಾನ್ ಸೆಕ್ಯುಲರ್ ಫಾರೂಕ್ ಅಬ್ದುಲ್ಲ ಕಣ್ಮುಚ್ಚಿ-ಕೈ ಕಟ್ಟಿ ಕುಳಿತಿದ್ದ,ಸೆಕ್ಯುಲರ್ ಮೀಡಿಯಾಗಳು ಆಗಲೂ ಇದು ಸರ್ಕಾರಿ ಪ್ರಾಯೋಜಿತ ವಲಸೆ ಅಂತ (ಆಗ ಫಾರೂಕ್ ಕುರ್ಚಿಯಲ್ಲಿರಲಿಲ್ಲ) ಸುಳ್ಳು ಸುದ್ದಿ ಹಬ್ಬಿಸಿದವು ಅದು ಎಷ್ಟರಮಟ್ಟಿಗೆಂದರೆ ಪಂಡಿತರನ್ನು ಕಣಿವೆಯಿಂದ ಹೊರಕಳಿಸಿ ಆಮೇಲೆ ಬಾಂಬು ಹಾಕುವವರೆಗೆ ಕಿಡಿಗೇಡಿಗಳು ಪುಕಾರೆಬ್ಬಿಸಿದರು.
ಮುಸ್ಲಿಮರು,ಕ್ರೈಸ್ತರಿಗೂ ಅನ್ಯಾಯವಾಗಿದ್ದಿರಬಹುದು,ಆದರೆ ಆಗ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.ಉದಾಹರಣೆಗೆ, ಮಂಗಳೂರಿನ ಚರ್ಚಿಗೆ ಕಲ್ಲು ಬಿದ್ದರೆ ಫ್ರಾನ್ಸಿನ ಅಧ್ಯಕ್ಷ ನಮ್ಮ ಪ್ರಧಾನಿಯನ್ನು ಪ್ರಶ್ನೆ ಮಾಡುತ್ತಾನೆ! ಆದರೆ,ಪಂಡಿತರಿಗಾಗಿ ಯಾರು ಪ್ರಶ್ನೆ ಕೇಳಿದರು?
ತಮ್ಮ ಪಾಡಿಗೆ ತಾವು ಅಂತ ಬದುಕುತಿದ್ದ ಸಿಖ್ಖರನ್ನು ದಾಳ ಮಾಡಿಕೊಂಡು ರಕ್ತಪಾತಕ್ಕೆ ಕಾರಣವಾಗಿದ್ದು ಸೆಕ್ಯುಲರ್ ಇಂದಿರಾ.
ರಕ್ತ ಯಾರದೇ ಚೆಲ್ಲಿದರೂ ಅದು ಮನುಷ್ಯನ ರಕ್ತವೇ,ಅದೆಂದಿಗೂ ಚೆಲ್ಲಬಾರದು ಅಲ್ಲವೇ ಅಬ್ದುಲ್? ಅನ್ಯಾಯವನ್ನು ಪ್ರಶ್ನಿಸುವುದು ಒಡಕನ್ನುಂಟು ಮಾಡುವುದಿಲ್ಲ ಮನೆ ಮುರಿಯುವುದನ್ನು ತಡೆಯುತ್ತದೆ.ಅವತ್ತು ಪಂಡಿತರ ಮನೆಗೆ ಉಗ್ರ ಬಂದಾಗ ಪಕ್ಕದ ಮನೆಯ ಪ್ರಶ್ನಿಸಿದ್ದರೆ ಇವತ್ತಿಗೆ ಅವನ ಮನೆ ಮುರಿಯುತ್ತಿರಲಿಲ್ಲ!
{{ ನೀವು ಪ್ರಸ್ತಾಪಿಸಿದ ದೇವಸ್ಥಾನ ನಿಜವಾಗಿಯೂ ಬೌದ್ಧ ಧರ್ಮಕ್ಕೆ ಸೇರಿದ್ದೆಂದೂ, ಅದನ್ನು ಹಿಂದೂ ದೇವಾಲಯವಾಗಿ ಪರಿವರ್ತನೆ ಮಾಡಿದ ಬಗ್ಗೆಯೂ ಓದಿದ್ದೇನೆ. ಮತ್ತು ನಾನು ಚರಿತ್ರೆಯ ದೊಡ್ಡ ಫ್ಯಾನ್ ಅಲ್ಲ. ಜ್ಞಾನಾರ್ಜನೆಗಾಗಿ ಮಾತ್ರ ಅದರ ಉಪಯೋಗ ಮಾಡುತ್ತೇನೆ. ‘ವಿಚ್ ಹಂಟಿಂಗ್’ ಕೆಲಸಕ್ಕೆ ಖಂಡಿತಾ ನಾನು ಇತಿಹಾಸವನ್ನು ಉಪಯೋಗಿಸೋಲ್ಲ. ಬೇಕಾದ ರೀತಿಯಲ್ಲಿ, ಬೇಕಾದ ಶೈಲಿಯಲಿ ಪ್ರತಿಯೊಬ್ಬರೂ ಇತಿಹಾಸ ಬರೆಯಬಹುದು….ಸಾಲದ್ದಕ್ಕೆ ವಿದೇಶೀ ಇತಿಹಾಸಕಾರ ಮೇಲಿನ ಅವಲಂಬನೆ.}}
ಬೌದ್ಧ ಧರ್ಮ ಯಾರ ಖಡ್ಗಕ್ಕೆ ಸಿಕ್ಕಿತು,ಯಾರಿಟ್ಟ ಬೆಂಕಿಗೆ ನಳಂದ ಭಸ್ಮವಾಯಿತು ಅನ್ನುವುದನ್ನು ಅಂಬೇಡ್ಕರ್ ಹೇಳಿದ್ದಾರೆ ನೋಡಿ. ಒಂದೆಡೆ ವಿದೇಶಿ ಇತಿಹಾಸಕಾರರು ಬೇಡ ಅನ್ನುತ್ತೀರಿ ಮತ್ತೊಂದೆಡೆ ಅವರ ಪ್ರೇರಣೆಯ “ಬೌದ್ಧ ಧರ್ಮ ತನ್ನ ಹುಟ್ಟಿನ ನಾಡಿನಿಂದ ಸಂಪೂರ್ಣ ನಿರ್ನಾಮ ಆಗಲು, ಹೊರ ನಾಡಿಗೆ ವಲಸೆ ಹೋಗಲು ಕಾರಣ ಯಾರ್ಯಾರು ” ಅನ್ನುತ್ತೀರಿ…!
{{ ಈ ಅವಲಂಬನೆಗೆ ಕಾರಣ ಹತ್ತೊಂಬತ್ತನೇ ಶತಮಾನದವರೆಗೆ ಲೇಖನಿ ಕಾಗದ ಪರಿಚಯವೇ ಇರಲಿಲ್ಲ ಅಂತೆ ನಾಡಿನಲ್ಲಿ (ದಿವಂಗತ ಲಂಕೇಶ್ ಬರೆದ ಪ್ರಬಂಧದಲ್ಲಿ).}}
ಇನ್ನು ಲಂಕೇಶ್ ಇತಿಹಾಸಕಾರರಾಗಿದ್ದು ಯಾವಾಗ? 😛