ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2014

35

ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು

‍ನಿಲುಮೆ ಮೂಲಕ

ಪ್ರೊ.ರಾಜಾರಾಮ ಹೆಗಡೆ, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

Recently Updated1

“ನಾನು ದೇವರ ನಿರಾಕಾರ ರೂಪವನ್ನು ಒಪ್ಪುತ್ತೇನೆ, ಆದರೆ ಅವುಗಳಿಗೆ ಆಕಾರ ಕೊಡುವುದನ್ನು ವಿರೋಧಿಸುತ್ತೇನೆ.” “ಒಂದು ಶಕ್ತಿ ಈ ಪ್ರಪಂಚವನ್ನು ಆಳುತ್ತಿದೆ ಎಂದು ನಂಬುತ್ತೇನೆ ಆದರೆ ಈ ದೇವತೆಗಳು, ಪುರಾಣಗಳು ಎಲ್ಲ ಸುಳ್ಳು, ಅವನ್ನು ನಂಬಬಾರದು” ಎಂಬ ಧೋರಣೆ ಬಹಳಷ್ಟು ಆಧುನಿಕ ಚಿಂತಕರಲ್ಲಿ ಇದೆ. ಈ ಹೇಳಿಕೆಯನ್ನು ಮಾಡುವವರು ತಾವು ಭಾರತೀಯ ಅಧ್ಯಾತ್ಮ ಸಂಪ್ರದಾಯದ ಸತ್ಯವನ್ನೇ ಹೇಳುತ್ತಿದ್ದೇವೆ ಎಂದುಕೊಂಡಿದ್ದಾರೆ. ಏಕೆಂದರೆ ನಮ್ಮ ಅಧ್ಯಾತ್ಮ ಸಂಪ್ರದಾಯಗಳು ಪರಮಾತ್ಮನ ನಿಜಸ್ವರೂಪವು ನಿರಾಕಾರವೇ ಆಗಿದೆ ಎಂದು ಹೇಳುತ್ತವೆ. ಹಾಗೂ ಅವುಗಳಲ್ಲಿ ಕೆಲವಂತೂ ಮೂರ್ತಿಪೂಜೆಯ ನಿರರ್ಥಕತೆಯ ಕುರಿತು ಸಾಧಕರನ್ನು ಎಚ್ಚರಿಸುತ್ತವೆ. ಅಷ್ಟಾದರೂ ಕೂಡ ಅವನ ಸಾಕಾರೋಪಾಸನೆಯನ್ನು ಅವು ವಿರೋಧಿಸುವುದಿಲ್ಲ, ಸಾಕಾರೋಪಾಸನೆ ಅಧ್ಯಾತ್ಮ ಸಾಧನೆಯಲ್ಲಿ ದಾರಿತಪ್ಪಿಸುವ ಮೋಸ, ಅದನ್ನು ಮಾಡಲೇಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಸಾಕಾರೋಪಾಸನೆಯು ನಿರಾಕಾರ ತತ್ವವನ್ನು ತಿಳಿಯಲಿಕ್ಕೆ ದಾರಿಯಾಗಿದೆ. ಈ ಕಾರಣದಿಂದಲೇ ಸಾಕಾರೋಪಾಸನೆಯಲ್ಲೇ ತೃಪ್ತಿಪಟ್ಟುಕೊಂಡ ಸಾಧಕರನ್ನು ಟೀಕಿಸಿ ಎಚ್ಚರಿಸುವ ಸಂದರ್ಭದಲ್ಲಿ ಮೂರ್ತಿರೂಪಗಳ ಮಿತಿಯನ್ನು ತಿಳಿಸಿಕೊಡುವ ಕೆಲಸವನ್ನು ಅವು ಮಾಡುತ್ತವೆ. ಅಜ್ಞಾನದಲ್ಲಿ ಬಂಧಿತನಾದ ಮನುಷ್ಯನ ಬುದ್ಧಿಗೆ ಏಕಾಏಕಿಯಾಗಿ ನಿರಾಕಾರ ತತ್ವವನ್ನು ಅರಿಯಲು ಅಸಾಧ್ಯ. ಅಂಥವನಿಗೆ ಮೂರ್ತಿಪೂಜೆ ಒಂದು ಸಾಧನ. ಜನಸಾಮಾನ್ಯರ ಮನೋಸ್ಥಿತಿಯ ಹೀಗೇ ಇರುವುದರಿಂದ ನಮ್ಮಲ್ಲಿ ಎಲ್ಲಾ ಸಂಪ್ರದಾಯಗಳೂ ಮೂರ್ತಿಪೂಜೆಯ ಉಪಾಯವನ್ನು ಕಲ್ಪಿಸಿವೆ ಎನ್ನುತ್ತವೆ. ಹಾಗಾಗಿ ಈ ಮೇಲಿನ ಹೇಳಿಕೆಗಳನ್ನು ನೀಡುವವರು ಭಾರತೀಯ ಅಧ್ಯಾತ್ಮ ಸಂಪ್ರದಾಯದ ವಕ್ತಾರರಂತೂ ಅಲ್ಲ.

“ದೇವರೆಂಬವನೇ ಇಲ್ಲ, ಹಾಗಾಗಿ ಈ ಮೂರ್ತಿಪೂಜೆ ಒಂದು ಪುರೋಹಿತರ ಕಣ್ಕಟ್ಟು” ಎಂಬ ಮತ್ತೊಂದು ಥರದ ಹೇಳಿಕೆಗಳೂ ಇವೆ. ಈ ಹೇಳಿಕೆಯನ್ನು ಮಾಡುವವರು ತಾವು ನಾಸ್ತಿಕರು ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ ಹಾಗೂ ಮೂರ್ತಿಪೂಜೆಯನ್ನು ತೊಡೆಯುವುದೇ ನಮ್ಮ ಸಮಾಜದ ಉದ್ಧಾರಕ್ಕೆ ಮಾರ್ಗ ಎನ್ನುತ್ತಾರೆ. ಅಷ್ಟೇ ಅಲ್ಲ ಅವರನ್ನು ವಿರೋಧಿಸುವವರೂ ಕೂಡ ಅವರನ್ನು ನಾಸ್ತಿಕರೆಂದು ಪದೇ ಪದೇ ಜರಿಯುವುದು ಕೂಡ ಕಂಡುಬರುತ್ತದೆ. ಆದರೆ ಹಾಗೆ ಅವರನ್ನು ಕರೆಯುವು ತಪ್ಪು. ನಮ್ಮಲ್ಲಿ ನಾಸ್ತಿಕರಾದ ಬೌದ್ಧರು ಹಾಗೂ ಜೈನರು ಕೂಡಾ ಮೂರ್ತಿಪೂಜೆಯನ್ನು ಅಳವಡಿಸಿಕೊಂಡಿದ್ದಾರೆ. ಜೈನ ಬೌದ್ಧರು ಪರಮಾತ್ಮ ತತ್ವವನ್ನು ಒಪ್ಪುವುದಿಲ್ಲ. ಹಾಗಾಗೇ ಅವರನ್ನು ನಾಸ್ತಿಕರೆಂದು ಹೇಳಲಾಗುತ್ತದೆ. (ಅಸ್ತಿ=ಇದೆ; ನಾಸ್ತಿ=ಇಲ್ಲ. ಆಸ್ತಿಕ ನೆಂದರೆ ಆ ತತ್ವ ಇದೆ ಎಂದು ಒಪ್ಪುವವನು, ನಾಸ್ತಿಕನು ಅದು ಇಲ್ಲ ಎನ್ನುವವನು. ಈ ಪರಿಭಾಷೆಗಳಿಗೆ ಅಧ್ಯಾತ್ಮದ ಸಂದರ್ಭದ ಹಿನ್ನೆಲೆಯಿದೆ). ಆದರೆ ನಾಸ್ತಿಕರಾದವರು ಮೂರ್ತಿಪೂಜೆಯನ್ನು ನಿರಾಕರಿಸಬೇಕೆಂದಿಲ್ಲ. ನಾಸ್ತಿಕರ ಪರಮ ಜ್ಞಾನವನ್ನು ಹೊಂದಲು ಕೂಡ ಮೂರ್ತಿ ಪೂಜೆ ಸಹಕರಿಸಿದೆ. ಅದಿಲ್ಲದಿದ್ದರೆ ಅವೇಕೆ ಸಾವಿರಾರು ವರ್ಷ ಮೂರ್ತಿಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದವು? ಆಸ್ತಿಕ ಹಾಗೂ ನಾಸ್ತಿಕ ಸಂಪ್ರದಾಯಗಳೆರಡೂ ಕೂಡ ತಂತಮ್ಮ ಗುರಿ ಸಾಧನೆಗೆ ಮೂರ್ತಿಪೂಜೆ ಸಾಧನವಾಗಿದೆ ಎಂದು ಒಪ್ಪಿಕೊಂಡಿದ್ದವು. ಹಾಗಾಗಿ ದೇವರಿಲ್ಲವೆಂದು ನಂಬಿದಾಕ್ಷಣ ಮೂರ್ತಿಪೂಜೆ ನಿಲ್ಲಬೇಕೆಂಬ ವಾದವು ನಾಸ್ತಿಕ ದೃಷ್ಟಿಯೂ ಅಲ್ಲ.

ಭಾರತದಲ್ಲಿ ಒಂದೆಡೆ ಈ ಪರಿಸ್ಥಿತಿಯಿದ್ದರೆ, ಮತ್ತೊಂದೆಡೆ ಮೂರ್ತಿಪೂಜೆಯೇ ಆತ್ಯಂತಿಕ ಎಂದು ನಾಸ್ತಿಕರು ಹೋಗಲಿ, ಆಸ್ತಿಕ ಸಂಪ್ರದಾಯಗಳು ಕೂಡ ಒಪ್ಪಿರಲಿಲ್ಲ ಎಂಬುದು ಗಮನಾರ್ಹ. ವೇದಾಂತ ಸಂಪ್ರದಾಯವು ನಿರಾಕಾರ ಬ್ರಹ್ಮವೇ ತಿಳಿಯಬೇಕಾದ ವಸ್ತು, ಮೂರ್ತಿಪೂಜೆಯು ಅದಕ್ಕೆ ಸಾಧನ ಎನ್ನುತ್ತದೆ. ದೇವತೆಗಳಿಗೆ ಈ ಸಂಪ್ರದಾಯಗಳಲ್ಲಿ ಆತ್ಯಂತಿಕ ಸ್ಥಾನವಿಲ್ಲ. ಅಧ್ಯಾತ್ಮವನ್ನು ಲಕ್ಷ್ಯದಲ್ಲಿಟ್ಟುಕೊಳ್ಳದಿದ್ದರೆ ಮೂರ್ತಿಪೂಜೆಯು ಮನುಷ್ಯನನ್ನು ಪುನರ್ಜನ್ಮಕ್ಕೆ ಕಟ್ಟುವ ಸಾಧನವಾಗುತ್ತದೆ ಎನ್ನುತ್ತಾರೆ ಅವರು. ಅದೇ ರೀತಿ, ಒಮ್ಮೆ ಪರಮಾತ್ಮ ಜ್ಞಾನವಾದವನಿಗೆ ಮೂರ್ತಿಪೂಜೆಯ ಅಗತ್ಯವೇ ಇಲ್ಲ. ಮೂರ್ತಿಪೂಜೆಯನ್ನೇ ಮಾಡದೇ ಧ್ಯಾನದಿಂದ, ತಪಸ್ಸಿನಿಂದ, ಇಲ್ಲವೇ ಪೂರ್ವಜನ್ಮ ಸಂಸ್ಕಾರದಿಂದ ಪರಮಾತ್ಮನ ಜ್ಞಾನ ಸಾಧ್ಯ ಎಂದೂ ಅವು ಅನ್ನುತ್ತವೆ. ಶಿವ, ವಿಷ್ಣು ಪಾರಮ್ಯವನ್ನು ಎತ್ತಿಹಿಡಿಯುವ ಭಕ್ತಿ ಸಂಪ್ರದಾಯಗಳೂ ಕೂಡ ಅವರ ಪರಾ ರೂಪವನ್ನು ನಿರಾಕಾರ ತತ್ವಗಳನ್ನಾಗಿ ಕಲ್ಪಿಸಿ ಮೂರ್ತಿಯೂ ಅವನ ಒಂದು ರೂಪವೆನ್ನುತ್ತವೆ. ಅಂದರೆ ಮೂರ್ತಿಯು ಈ ಪರಾತತ್ವದ ದೇಹವೆನ್ನುತ್ತವೆ. ಈ ದೇಹವನ್ನು ದಾಟಿ ಪರಾತತ್ವವನ್ನು ಕಾಣದಿದ್ದರೆ ಪಜೆಯ ಉದ್ದೇಶ ಈಡೇರುವುದಿಲ್ಲ. ಮೂರ್ತಿಗಳನ್ನು ಹೇಗೆ ರಚಿಸಬೇಕೆಂದು ನಿರ್ದೇಶಿಸುವ ಆಗಮ ಶಾಸ್ತ್ರಗಳೇ ‘ಪ್ರತಿಮೆಗಳು ಅಲ್ಪಬುದ್ಧಿಯವರಿಗಾಗಿ ಯೋಜಿತವಾಗಿವೆ,’ ‘ಕಾಷ್ಟ, ಲೋಷ್ಟ, ಲೋಹಗಳ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ಜನನ ಮರಣದ ಬಂಧನಕ್ಕೆ ಸಿಲುಕುತ್ತಾರೆ,’ ಇತ್ಯಾದಿ ವಾಕ್ಯಗಳನ್ನೂ ನಮಗೆ ನೀಡುತ್ತವೆ. ಅಂದರೆ, ಅದನ್ನು ಸಾಧನವನ್ನಾಗಿಸಿಕೊಂಡು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸರಿಯಾದ ಗುರಿ ಎನ್ನುತ್ತವೆ. ಆದರೆ ಇವರ್ಯಾರೂ ಮೂರ್ತಿಪೂಜೆ ನಿಲ್ಲಬೇಕು ಎನ್ನುವುದಿಲ್ಲ. ಅದನ್ನು ಅರಿತು ಆಚರಿಸುವುದು ಮಾರ್ಗವಾಗಬಲ್ಲದು ಎಂದೇ ಅನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯ ಟೀಕೆ ಏನಾದರೂ ಬಂದರೆ ಅದಕ್ಕೆ ಈ ಆಧ್ಯಾತ್ಮಿಕ ಸಂದರ್ಭವಿದೆ. ಮೂರ್ತಿಪೂಜೆಯನ್ನು ಪಾಪ ಎಂಬಂತೇ ನೋಡುವುದು ಭಾರತೀಯ ಆಧ್ಯಾತ್ಮಿಕ ದೃಷ್ಟಿ ಅಲ್ಲ. ಅಂದರೆ, ಮೂರ್ತಿಪೂಜೆಯನ್ನು ನಿರಾಕರಿಸುವವರು ಆಸ್ತಿಕರೂ ಅಲ್ಲ, ನಾಸ್ತಿಕರೂ ಅಲ್ಲ.

ಮೂರ್ತಿಪೂಜೆಯ ಈ ಭಾರತೀಯ ಸಂದರ್ಭವು ಆಧುನಿಕ ವಿದ್ಯಾವಂತರನೇಕರಲ್ಲಿ ಕಳಚಿಹೋಗಿದೆ ಎಂಬುದು ಅವರ ನಿರಾಕರಣೆಯ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಂದರೆ ಆಧುನಿಕ ವಿದ್ಯಾಭಾಸ ಮಾಡಿದವರಿಗೆ ಹಾಗೂ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸರಿಯಾಗಿ ಅರಿತುಕೊಳ್ಳುವ ಕುತೂಹಲ ಇಲ್ಲದವರಿಗೆ ನಮ್ಮ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯನ್ನು ಯಾವ ನಿರ್ದಿಷ್ಟ ಕಾರಣಕ್ಕಾಗಿ ಟೀಕಿಸುತ್ತಾರೆ ಎಂಬ ತಿಳುವಳಿಕೆ ಹೊರಟುಹೋಗಿದೆ. ಅವರಿಗಿರುವುದು ಒಂದೇ ತಿಳುವಳಿಕೆ. ಆಧುನಿಕ ವಿದ್ಯಾಭಾಸವು ಕಟ್ಟಿಕೊಡುವ ತಿಳುವಳಿಕೆಯಾಗಿದೆ. ಅಂದರೆ ಮೂರ್ತಿಪೂಜೆ ಎಂದರೆ ಐಡೋಲೇಟ್ರಿ ಹಾಗೂ ಅನೈತಿಕ, ಅದು ನಾಶಮಾಡಬೇಕಾದ ಆಚರಣೆ. ಈ ನಿರ್ದಿಷ್ಟ ಧೋರಣೆಯು ಸೆಮೆಟಿಕ್ ರಿಲಿಜನ್ನುಗಳ, ಅದರಲ್ಲೂ ಪ್ರೊಟೆಸ್ಟಾಂಟ್ ಥಿಯಾಲಜಿಯ ಧೋರಣೆಯಾಗಿದೆ. ಹಾಗೂ ದೇವರೇ ಇಲ್ಲ ಎಂಬ ಧೋರಣೆಯ ಭಾಗವಾಗಿ ಮೂರ್ತಿಪೂಜೆಯನ್ನು ವಿರೋಧಿಸುವವರು ನಿರ್ದಿಷ್ಟವಾಗಿ ಪಾಶ್ಚಾತ್ಯ ಅಥೇಯಿಸ್ಟ್ ಪರಂಪರೆಗೆ ಸೇರುತ್ತಾರೆ. ಏಕೆಂದರೆ ಅಲ್ಲಿ ಗಾಡ್ ಇಲ್ಲ ಎಂಬುದೊಂದು ಸೆಕ್ಯುಲರ್ ಚಳವಳಿಯೇ ನಡೆದಿದೆ. ಅದನ್ನು ನಾವು ವಿದ್ಯಾವಂತರು ಬಳುವಳಿಯಾಗಿ ಪಡೆದುಕೊಂಡಿದ್ದೇವೆ. ಹಾಗಾಗಿ ಈ ಎರಡೂ ಪ್ರಕಾರದ ಮೂರ್ತಿಪೂಜೆಯ ವಿರೋಧಿಗಳಿಗೂ ಭಾರತೀಯ ಆಸ್ತಿಕ-ನಾಸ್ತಿಕ ಸಂಪ್ರದಾಯಗಳಿಗೂ ಯಾವುದೇ ಸಂಬಂಧವಿಲ್ಲ.

ಪ್ರೊಟೆಸ್ಟಾಂಟರೇಕೆ ಮೂರ್ತಿಪೂಜೆಯನ್ನು ತೊಡೆಯಬೇಕೆಂದು ಪಣತೊಟ್ಟರು? ಏಕೆಂದರೆ, ಅದು ಸುಳ್ಳು ರಿಲಿಜನ್ನಿನ ಪ್ರತೀಕವಾಗಿದೆ. ಸೈತಾನ ಅಥವಾ ಡೆವಿಲ್ಲನ ಪ್ರತಿರೂಪವಾಗಿದೆ. ಅದನ್ನು ಪೂಜಿಸಿದ ತಕ್ಷಣ ನೀವು ಗಾಡ್ ನಿಂದ ದೂರವಾಗಿ ಶೈತಾನನ ವಶವಾಗುತ್ತೀರಿ. ಶೈತಾನನ ಪ್ರಭಾವದಿಂದ ನಿಮ್ಮ ತಲೆ ಕೆಟ್ಟುಹೋಗುತ್ತದೆ. ಅನೈತಿಕತೆ, ಅನಾಚಾರಗಳ ಪೃವೃತ್ತಿ ನಿಮ್ಮೊಳಗೆ ನುಸುಳುತ್ತದೆ. ಸುಳ್ಳು ಹೇಳುವುದು, ಮೋಸಮಾಡುವುದು, ಭ್ರಷ್ಟತೆ, ಲೈಂಗಿಕ ವಿಕಾರಗಳು, ಕೆಟ್ಟ ಹವ್ಯಾಸಗಳು ಎಲ್ಲವೂ ನಿಮ್ಮನ್ನು ಅಂಟಿಕೊಳ್ಳುತ್ತವೆ. ನೀವು ಗಾಡ್ನ ಆಜ್ಞೆಯನ್ನು ಧಿಕ್ಕರಿಸಿ ನಡೆಯುತ್ತೀರಿ. ಗಾಡ್ನ ಆಜ್ಞೆಯೇ ನೀತಿ ನಿಯಮವಾಗಿರುವುದರಿಂದ ನೀವು ಅನೀತಿವಂತರಾಗುತ್ತೀರಿ. ಹಾಗಾಗಿ ಡೆವಿಲ್ ಅಥವಾ ಶೈತಾನ ಎಂಬ ಕಲ್ಪನೆಗೂ ಮೂರ್ತಿಪೂಜೆಗೂ ಸಂಬಂಧವಿರುವುದರಿಂದ ಅದು ಪಾಪವೆಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಧಿಕ್ಕರಿಸುತ್ತವೆ. ಎಲ್ಲೆಲ್ಲಿ ಮೂರ್ತಿಪೂಜೆ ಕಾಣುತ್ತದೆಯೋ ಅಲ್ಲಿ ಶೈತಾನನ ಉಪಸ್ಥಿತಿಯಿದೆ ಎಂಬುದಾಗಿ ನಂಬುವ ಈ ಮತಗಳು ಅಂಥ ಮೂರ್ತಿಗಳನ್ನು ಭಂಜಿಸಿ, ಅಥವಾ ಅಪವಿತ್ರಗೊಳಿಸಿ ಅದನ್ನು ನಂಬಿದವರನ್ನು ನಿಜವಾದ ಗಾಡ್ನ ದಾರಿಗೆ ಹಚ್ಚಲು ಪ್ರಯತ್ನಿಸಿದ ನಿದರ್ಶನಗಳೂ ಇತಿಹಾಸದಲ್ಲಿ ಇವೆ.

ಮೂರ್ತಿಗಳಲ್ಲಿ ಶಕ್ತಿ ಇಲ್ಲ ಎಂದು ನಿದರ್ಶನ ಮಾಡುವ ಪ್ರಯತ್ನಗಳೆಲ್ಲವೂ ಈ ರೀತಿಯಾಗಿ ಪ್ರೊಟೆಸ್ಟಾಂಟ್ ಅಥವಾ ಸೆಕ್ಯುಲರ್ ಆಚರಣೆಗಳು. ನಮ್ಮ ಭಾರತೀಯರು ಹೇಗೆ ಈ ಪರಕೀಯ ಆಚರಣೆಯನ್ನೇ ನೈತಿಕ ಆಚರಣೆ ಎಂದು ನಂಬಲು ಸಾಧ್ಯ? ಇದೊಂದು ವಿಚಿತ್ರವಾದರೂ ನಿಜ. ಅದಕ್ಕೆ ಹತ್ತೊಂಭತ್ತನೆಯ ಶತಮಾನದಿಂದಲೂ ಇಲ್ಲಿ ನಡೆದ ಸುಧಾರಣಾ ಚಳವಳಿಗಳ ಹಿನ್ನೆಲೆಯಿದೆ. ಭಾರತೀಯ ಧಾರ್ಮಿಕ ಸುಧಾರಣಾವಾದಿಗಳು ಪ್ರೊಟೆಸ್ಟಾಂಟ್ ಥಿಯಾಲಜಿಯನ್ನೇ ಸತ್ಯವೆಂದು ನಂಬಿ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅದರ ಮೂಲಕ ಒರೆಗೆ ಹಚ್ಚಿದರು. ಆಗ ನಿರಾಕಾರೋಪಾಸನೆಯೇ ಸತ್ಯವಾದುದು, ಸಾಕಾರೋಪಾಸನೆ ಒಂದು ತಪ್ಪು ಬೆಳವಣಿಗೆ, ಹಿಂದೂಯಿಸಂ ಎಂಬುದು ಬ್ರಾಹ್ಮಣ ಪ್ರೀಸ್ಟ್ಗಳಿಂದ ಭ್ರಷ್ಟಗೊಂಡು ಇಂಥ ಆಚರಣೆಗಳು ಪ್ರಚಲಿತದಲ್ಲಿ ಬಂದಿವೆ ಎಂಬುದಾಗಿ ಅವರು ನಿರೂಪಿಸಿದರು. ಅಂದರೆ ಕ್ಯಾಥೋಲಿಕರ ಕುರಿತ ಪ್ರೊಟೆಸ್ಟಾಂಟ್ ಕಥೆಯನ್ನು ಅವರು ಬಳಸಿಕೊಂಡರು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಎಷ್ಟೆಷ್ಟು ಪ್ರೊಟೆಸ್ಟಾಂಟ್ಗೊಳಿಸುತ್ತೀರೋ ಅಷ್ಟಷ್ಟು ಅದು ಶುದ್ಧವಾಗುತ್ತದೆ ಎಂದು ತಿಳಿದರು. ಈ ಪ್ರಯತ್ನದಲ್ಲಿ ಆಧ್ಯಾತ್ಮ ಸಂಪ್ರದಾಯಗಳು ನಿಜವಾಗಿಯೂ ಮೂರ್ತಿಪೂಜೆಯ ಬಗೆಗೆ ಏನು ಧೋರಣೆ ಇಟ್ಟುಕೊಂಡಿವೆ ಎಂಬುದರ ಕುರಿತು ಒಂದು ಮರೆವು ವಿದ್ಯಾವಂತರನ್ನು ಆವರಿಸತೊಡಗಿತು. ಬದಲಾಗಿ ಪ್ರೊಟೆಸ್ಟಾಂಟ್ ಧೋರಣೆಯೇ ಅವುಗಳ ಧೋರಣೆ ಎಂಬ ತಪ್ಪು ಅಭಿಪ್ರಾಯವು ಅವರನ್ನು ಆವರಿಸಿಕೊಂಡಿತು.

ಹತ್ತೊಂಭತ್ತನೆಯ ಶತಮಾನದ ನಂತರ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅಧ್ಯಯನಕ್ಕೊಳಪಡಿಸಿದ ವಿದ್ವಾಂಸರು ನಿರಾಕಾರೋಪಾಸನೆಯೇ ಅದರ ಹೆಚ್ಚುಗಾರಿಕೆ ಎಂಬಂತೇ ಬಿಂಬಿಸುವುದರಲ್ಲಿ ಆಸಕ್ತಿ ತೋರಿಸಿದರು. ಆ ಸಂದರ್ಭದಲ್ಲಿ ನಿರಾಕಾರ ಬ್ರಹ್ಮವೊಂದೇ ಸತ್ಯವೆಂದೆನ್ನುವ ಅದ್ವೈತ ವೇದಾಂತವು ಮಹತ್ವ ಪಡೆಯಿತು. ಹಾಗೂ ಅದು ಭಾರತದ ಸತ್ಯವಾದ ರಿಲಿಜನ್ನಿನ ವಕ್ತಾರನಾಯಿತು. ಜೊತೆಗೆ ಮಧ್ಯಕಾಲೀನ ನಿರ್ಗುಣ ಭಕ್ತಿ ಸಂಪ್ರದಾಯಗಳು ಕೂಡ ಮಹತ್ವ ಪಡೆದವು. ಅವನ್ನು ಸುಧಾರಣಾ ಚಳವಳಿಗಳು ಎಂಬುದಾಗಿ ಕರೆಯಲಾಯಿತು. ಇದೇ ದೇವತೆಗಳಿಗೆ ಸಂಬಂಧಿಸಿದ ಆಗಮ ಸಂಪ್ರದಾಯಗಳು ಖಂಡನೆಗೆ ಒಳಗಾದವು. ದೇವಾಲಯ ಹಾಗೂ ಮೂರ್ತಿಪೂಜೆಗಳು ಹಿಂದೂಯಿಸಂನ ಅವನತಿಯ ಸಂಕೇತಗಳು ಎಂಬುದಾಗಿ ವಿದ್ವಾಂಸರು ಭಾವಿಸಿದರು. ಮೂರ್ತಿಪೂಜೆಗೂ ಬ್ರಾಹ್ಮಣ ಪುರೋಹಿತಶಾಹಿಗೂ, ಜಾತಿ ವ್ಯವಸ್ಥೆಗೂ, ಹಿಂದೂಯಿಸಂನ ಅವನತಿಗೂ ಕೊಂಡಿ ಬೆಳೆಯಿತು. ಈ ಕೊಂಡಿ ಏಕೆ ಬೆಳೆಯಿತೆಂದರೆ, ಪ್ರೊಟೆಸ್ಟಾಂಟರು ಕ್ಯಾಥೋಲಿಕರಲ್ಲಿ ಈ ಕೊಂಡಿಯನ್ನು ಗುರುತಿಸಿ ಖಂಡಿಸಿದ್ದರು. ಕ್ಯಾಥೋಲಿಕ್ ಪ್ರೀಸ್ಟ್ಗಳ ಐಡೋಲೇಟ್ರಿಯಿಂದಾಗಿ ಅವರಲ್ಲಿ ಅನೈತಿಕತೆ ಬೆಳೆದು ಕ್ರೈಸ್ತರಲ್ಲಿ ತರತಮದ ಶ್ರೇಣೀಕರಣವನ್ನು ಬೆಳೆಸಿದರು, ಅದು ಕ್ರಿಶ್ಚಿಯಾನಿಟಿಯ ಅವನತಿಗೆ ಕಾರಣವಾಯಿತು ಎಂಬ ಕಥೆಯೇ ಈ ಕೊಂಡಿಯನ್ನು ರಚಿಸುತ್ತದೆ.

ಭಾರತದಲ್ಲಿ ಈ ಕೊಂಡಿ ನಿಜವಾಗಿಯೂ ಇದೆಯೆ ಎಂಬುದನ್ನು ಯಾರೂ ಪರೀಕ್ಷಿಸಲಿಲ್ಲ. ಆದರೆ ಅದೇ ದೇವತೆಯನ್ನು ಪೂಜಿಸುವವರಲ್ಲೇ ಒಂದು ವರ್ಗವನ್ನು ಪುರೋಹಿತಶಾಹಿ ಎಂದು ಪರಿಗಣಿಸಿ ಮತ್ತೊಂದನ್ನು ಸುಧಾರಣಾವಾದಿಗಳು ಎಂಬುದಾಗಿ ಭಾವಿಸುವ ಅಧ್ಯಯನಗಳು ನಡೆದವು. ಈ ಭರಾಟೆಯಲ್ಲಿ ಸಾಕಾರ ಹಾಗೂ ನಿರಾಕಾರೋಪಾಸನೆಯವರು ನಿಜವಾಗಿಯೂ ಮೂರ್ತಿಪೂಜೆಯ ಕುರಿತು ಯಾವ ಧೋರಣೆ ಇಟ್ಟುಕೊಂಡಿದ್ದರು ಎಂಬುದು ಮರೆವಿಗೆ ಸರಿಯಿತು. ಇವೆರಡೂ ರಿಲಿಜನ್ನುಗಳಂತೇ ಪರಸ್ಪರ ವಿರುದ್ಧವಾದ ವೈರಿ ಪಂಥಗಳೋ ಎಂಬಂತೇ ಬಿಂಬಿಸಲಾಯಿತು. ಉದಾಹರಣೆಗೆ ಆಗಮಿಕ ಶೈವರು ಹಾಗೂ ಕನ್ನಡ ಶಿವಶರಣ ದೃಷ್ಟಿಕೋನ.

ಮೂರ್ತಿಗಳು ಹಾಗೂ ಪೌರಾಣಿಕ ದೇವತೆಗಳ ಆಕೃತಿ ಹಾಗೂ ಕಥೆಗಳನ್ನು ಸುಳ್ಳು ಎಂದು ಮನದಟ್ಟು ಮಾಡುವುದು ಸುಲಭ. ಮನುಷ್ಯ ದೇಹಕ್ಕೆ ನಾಲ್ಕು ಕೈಗಳು, ನಾಲ್ಕು ತಲೆ ಇತ್ಯಾದಿಗಳು, ದೇವತೆಗಳ ಪವಾಡಗಳು, ಮಾಯೆ, ಇವುಗಳ ಕುರಿತು ಸತ್ಯ ಸುಳ್ಳಿನ ಪರಿಭಾಷೆಯಲ್ಲಿ ಮಾತನಾಡಿದಾಗ ಯಾರಿಗಾದರೂ ತರ್ಕಬದ್ಧವಾಗಿ ತೋರುತ್ತದೆ. ಹಾಗಾಗಿ ಈ ತರ್ಕವನ್ನೇ ಇಟ್ಟುಕೊಂಡು ಅವು ಸುಳ್ಳು ಎಂದು ಅದರ ವಿರೋಧಿಗಳು ತಾವೇನೋ ಅದ್ಭುತವಾದದ್ದನ್ನು ತಿಳಿಸುತ್ತಿದ್ದೇವೆಂಬುದಾಗಿ ತಿಳಿದಿದ್ದಾರೆ. ಇದು ಹಿಂದೊಮ್ಮೆ ಕ್ರೈಸ್ತ ಮಿಶನರಿಗಳು ಮಾಡಿದ ಕೆಲಸ. ಏಕೆಂದರೆ ಅವರಿಗೆ ನಮ್ಮ ದೇವತೆಗಳು ಸುಳ್ಳು ದೇವತೆಗಳಾಗಿ ಕಂಡಿದ್ದರು. ಅದನ್ನು ನಮಗೆ ಮನದಟ್ಟು ಮಾಡಿಬಿಟ್ಟರೆ ನಾವೆಲ್ಲರೂ ಸತ್ಯದೇವನ ರಿಲಿಜನ್ನಿಗೆ ಪರಿವರ್ತನೆ ಆಗಿಬಿಡುತ್ತೇವೆ ಎಂಬುದಾಗಿ ಅವರು ತಿಳಿದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಏಕೆಂದರೆ ಭಾರತೀಯರು ಕೂಡ ಅವನ್ನು ನಿಜ ವ್ಯಕ್ತಿ ಹಾಗೂ ಘಟನೆಗಳೆಂದುಕೊಂಡಿರಲಿಲ್ಲ. ಆದರೂ ಅವು ತಮ್ಮ ಜೀವನಕ್ಕೆ ಅತ್ಯಗತ್ಯ ಎಂದುಕೊಂಡಿದ್ದರು. ಅಧ್ಯಾತ್ಮ ಸಂಪ್ರದಾಯಗಳು ಈ ಆಕೃತಿ ಹಾಗೂ ಕಥೆಗಳಿಗೆಲ್ಲ ಬೇರೆ ಯಾವುದೋ ಪಾತಳಿಯಲ್ಲಿ ಅರ್ಥ ಕಲ್ಪಿಸಿ ತಮ್ಮ ಸಾಧನೆಗೆ ಅವುಗಳನ್ನು ವಸ್ತುಗಳನ್ನಾಗಿ ಒಗ್ಗಿಸಿಕೊಂಡಿದ್ದವು. ಉದಾಹರಣೆಗೆ ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಶಂಕರರು ‘ಈ ದೇವ ಅಸುರ ಇವೆಲ್ಲ ವಾಸ್ತವಿಕ ವ್ಯಕ್ತಿಗಳಲ್ಲ ಹಾಗೂ ಘಟನೆಗಳಲ್ಲ. ಅವು ಅವಿದ್ಯೆಯನ್ನು ಕಳೆದುಕೊಂಡು ಆತ್ಮಜ್ಞಾನವನ್ನು ಸಾಧಿಸಲು ಮಾರ್ಗಗಳು’ ಎಂಬ ನಿರೂಪಣೆಯನ್ನು ಮಾಡುತ್ತಾರೆ. ದೇವರಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕನ್ನಡದ ಸಾಹಿತಿಗಳಾದ ಪುತಿನ ಅವರ ಸುಪ್ರಸಿದ್ಧ ಹೇಳಿಕೆ ಇದೆ: ‘ದೇವರು ಇಲ್ಲ, ಅದಕ್ಕಾಗೇ ಒಬ್ಬನನ್ನು ಕಲ್ಪಿಸಿಕೊಳ್ಳಬೇಕಪ್ಪಾ’. ಮೂರ್ತಿಪೂಜೆ ಹಾಗೂ ಪವಾಡಗಳು ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು ಎಂಬುದನ್ನಲ್ಲ, ಮೂರ್ತಿಪೂಜೆಯನ್ನು ಮಾಡಿದಾಕ್ಷಣ ಪರಮಾತ್ಮನ ಜ್ಞಾನದ ಸಾಧ್ಯತೆಯೇ ಮುಚ್ಚಿಹೋಗುತ್ತದೆ ಎಂಬುದನ್ನು. ಆದರೆ ಅದನ್ನು ತೋರಿಸಲು ಸಾಧ್ಯವೇ ಇಲ್ಲ. ಏನೇ ಆಗಲಿ, ಸೆಮೆಟಿಕ್ ವಾದವಂತೂ ಇಲ್ಲಿ ನಿರರ್ಥಕವೇ ಸರಿ.

ಚಿತ್ರಕೃಪೆ
http://blogs.nazarene.org/kpprobst/files/2010/11/idols.
http://www.smh.com.au/ffximage/2007/02/16/snaps17207_india_gallery__470x380.jp

Read more from ಲೇಖನಗಳು
35 ಟಿಪ್ಪಣಿಗಳು Post a comment
  1. Universal's avatar
    Universal
    ಜೂನ್ 20 2014

    ಒಂದೇ ಮಾತಿನಲ್ಲಿ ಹೇಳುವುದಾದರೆ, ದೇವರು ಎನ್ನುವ ಶಕ್ತಿಯೇ ಈ ಲೋಕದಲ್ಲಿಲ್ಲ. ಹಾಗೇನಾದರೂ ಇದ್ದರೆ ನಮಗೆ ಬದುಕಲು ಬೇಕಾದ ಸಕಲವನ್ನೂ ನೀಡಿರುವ, ಕಣ್ಣಿಗೆ ಕಾಣುವ ನಿರಾಕಾರ ಮೂರ್ತಿಯೆಂದರೆ ‘ಪ್ರಕೃತಿ ಮಾತೆ’ ಮಾತ್ರ.

    ಉತ್ತರ
    • Radhika Chitnis's avatar
      Radhika Chitnis
      ಜೂನ್ 20 2014

      ಈ ಲೇಖನ ಇರುವುದು ಮೂರ್ತಿ ಪೂಜೆಯ ಕುರಿತು. ನಿಮ್ಮ ನೆಚ್ಚಿನ philosophy ಕುರಿತಲ್ಲ.

      ಉತ್ತರ
  2. shripad's avatar
    shripad
    ಜೂನ್ 20 2014

    ಎಕ್ಸಲೆಂಟ್ ಲೇಖನ.

    ಉತ್ತರ
  3. Mandagadde srinivasaiah's avatar
    ಜೂನ್ 23 2014

    By a concept of idöl worship we can get high spiritual morality provided if he totally surrenders himself. A person with a weak mind can do this if he cannöt concentrate on dhyana marga or jnana marga. This we call as ‘AVIDYE’. Achivement of ‘perfection’ can be achieved through ‘JNANA MARGA’ only. ‘aham brahmasmi’ shows the way which we call ‘vidye’.

    ಉತ್ತರ
    • Nagshetty Shetkar's avatar
      Nagshetty Shetkar
      ಜೂನ್ 23 2014

      ಇದೆಲ್ಲ ವೈದಿಕ ಕಂತೆ ಬೊಂತೆ.

      ಉತ್ತರ
      • Naani's avatar
        Naani
        ಜೂನ್ 23 2014

        ನಿಮ್ಮ ಹಳಿಯಿಲ್ಲದ ರೈಲು ಬಿಡುವ ಕಾಯಕವನ್ನು ಈ ಲೇಖನದಲ್ಲಿ ಹುಡುಕಿದರೆ ನಿಮೆಗೆ ಹಾಗೆಯೇ ಕಾಣುವುದು ಶೇಟ್ಕರ್. ನಿಮಗೆ ಈ ಲೇಖನ ನಿಮಗೆ ಹಾಗೆ ಕಾಣದಿದ್ದರಷ್ಟೇ ನಮಗೆ (ಇವರಿಗೆ ತಿಕ್ಕಲುತನ ಇಷ್ಟುಬೇಗ ಗುಣವಾಯಿತೇ ಎಂದು) ಆಶ್ಚರ್ಯವಾಗಬೇಕು!!! 🙂

        ಉತ್ತರ
        • simha sn's avatar
          simha sn
          ಜೂನ್ 27 2014

          ಆ ಹುಚ್ಚು ಮುಂಡೇದರ ಮಾತಿಗೆ ಯಾಕೆ ತಲೆ ಕೆಡಿಸಿಕೊಳ್ತೀರಿ ? ಉದಾಸೀನವೇ ಮದ್ದು

          ಉತ್ತರ
      • shripad's avatar
        shripad
        ಜೂನ್ 27 2014

        ಈ ಶೆಟ್ಕರ್ ಎಂಬವರಿಗೆ ತಮಗೆ ಜ್ನಾನೋದಯವಾಗಿದೆ ಎಂಬ ಭ್ರಮೆಯೋ ಅಹಂಕಾರವೋ ಈ ಎರಡರಲ್ಲಿ ಒಂದಿದೆ, ಎರಡೂ ಇರಬಹುದು?! ಈ ಮಹಾಶಯರು ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿ ಹೀಗನಿಸಿತು.

        ಉತ್ತರ
      • shripad's avatar
        shripad
        ಜೂನ್ 28 2014

        ಶೆಟ್ಕರ್ ಅವರೇ, ಫೇಸ್ ಬುಕ್ಕಿನಲ್ಲಿ ನೀವು ಬಸವಾದಿ ಪ್ರಮಥರ ಚಿತ್ರ, ಫೋಟೋ ಇತ್ಯಾದಿ ಮೂರ್ತಿಗಳನ್ನು ಹಾಕಿಕೊಂಡದ್ದು ಆದರೆ ಇನ್ನೊಂದೆಡೆ ಅದನ್ನು ವಿರೋಧಿಸುವುದು ಯಾಕೆಂದು ಅರ್ಥವಾಗಿರಲಿಲ್ಲ. ಪ್ರೊ. ರಾಜಾರಾಮ್ ಅವರ ಲೇಖನ ಓದಿದ ಮೇಲೆ ಇಂಥ ಎಡಬಿಡಂಗಿತನದ ಮೂಲ ತಿಳಿಯಿತು! ಪ್ರೊಫೆಸರ್ ಅವರಿಗೆ ಧನ್ಯವಾದಗಳು.

        ಉತ್ತರ
        • Nagshetty Shetkar's avatar
          Nagshetty Shetkar
          ಜೂನ್ 29 2014

          “ಆತ ಕಂಪ್ಯೂಟರ್ ಎಂಜಿನಿಯರ್. ಕ್ಯಾಂಟೀನ್‌ನಲ್ಲಿ ಉಣ್ಣುವ ಹೊತ್ತಲ್ಲಿ ಯಾರೋ ಕೇಳಿದರು ‘‘ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತೆ…’’ ‘‘ಗೂಗಲ್‌ಗೆ ಹೋಗಿ ಸರ್ಚ್ ಮಾಡಿ. ತಕ್ಷಣ ಸಿಗತ್ತೆ’’ ಕಂಪ್ಯೂಟರ್ ಎಂಜಿನಿಯರ್ ಹೇಳಿದ.”

          This is the relationship between nilume readers and cslc researchers.

          ಉತ್ತರ
          • Naani's avatar
            Naani
            ಜೂನ್ 29 2014

            ಸ್ವಂತಬುದ್ದಿಯಿಂದ ಉತ್ತರಿಸಲಾಗದಿದ್ದಾಗ ಕಾಪಿಪೇಸ್ಟ್ ಶುೂರತನ!!!! ಹ್ಹೆ ಹ್ಹೆ ಹ್ಹೆ…..

            ಉತ್ತರ
          • ಸ್ವಾಮಿ ಶೆಟ್ಕರ್ ಮಹಾಶಯರೇ,
            ನಮ್ಮಂತ ಕಂಪ್ಯೂಟರ್ ಎಂಜೀನಿಯರ್ ಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೀಗೆಲ್ಲ ಯಾಕೆ ಹೊಟ್ಟೆ ಉರಿದುಕೊಳ್ಳುತ್ತೀರಿ.
            ಗೂಗಲ್ ಸರ್ಚ್ ಮಾಡಿ, ನಮ್ಮ ಪಾಲಿನ ಅನ್ನವನ್ನು ದಕ್ಕಿಸಿಕೊಳ್ಳುವುದು “ಪರಾವಲಂಬಿ ಜೀವಿ”ಗಳಾಗಿ ಬದುಕುವುದಕ್ಕಿಂತ ಸಾವಿರ ಪಾಲು ಉತ್ತಮ

            ಉತ್ತರ
        • Balachandra's avatar
          Balachandra
          ಜೂನ್ 29 2014

          @shreepad:
          [ಶೆಟ್ಕರ್ ಅವರೇ, ಫೇಸ್ ಬುಕ್ಕಿನಲ್ಲಿ ನೀವು ಬಸವಾದಿ ಪ್ರಮಥರ ಚಿತ್ರ, ಫೋಟೋ ಇತ್ಯಾದಿ ಮೂರ್ತಿಗಳನ್ನು ಹಾಕಿಕೊಂಡದ್ದು ಆದರೆ ಇನ್ನೊಂದೆಡೆ ಅದನ್ನು ವಿರೋಧಿಸುವುದು ಯಾಕೆಂದು ಅರ್ಥವಾಗಿರಲಿಲ್ಲ.]
          ಫೇಸ್ ಬುಕ್ ನಲ್ಲಿರುವವರು ನಿಜವಾದ ಶೆಟ್ಕರ್. ಇವರು ಅವರಲ್ಲ. ಇವರು ಶೆಟ್ಕರ್ ಹೆಸರಲ್ಲಿ ಬರೆಯುತ್ತಿರುವ ಬೇರೊಬ್ಬ ಮನುಷ್ಯ.

          ಉತ್ತರ
          • shripad's avatar
            shripad
            ಜುಲೈ 10 2014

            ಅಸಲಿಯೋ ನಕಲಿಯೋ ಶೆಟ್ಕರ್ ಎಂಬವರು ಮಾಡುವ ದರ್ಗಾರಾಧನೆ ಅಥವಾ ದರ್ಗಾಪೂಜೆಯ ಮನೋಧರ್ಮದ ವಿಸ್ತ್ರತ ಹಾಗೂ ಆಳ ರೂಪವೇ ಮೂರ್ತಿಪೂಜೆ!

            ಉತ್ತರ
          • Nagshetty Shetkar's avatar
            Nagshetty Shetkar
            ಜುಲೈ 11 2014

            ದರ್ಗಾ ಸರ್ ಅವರ ಮೂರ್ತಿ ಪೂಜೆಯನ್ನು ನಾನೆಂದೂ ಮಾಡಿಲ್ಲ. ದರ್ಗಾ ಸರ್ ಅವರ ವಿಚಾರಗಳನ್ನು ವಸ್ತುನಿಷ್ಠವಾಗಿ ಸ್ವೀಕರಿಸುತ್ತೇನೆ. ಅವರ ಸೈದ್ಧಾಂತಿಕ ನಿಲುವುಗಳಿಗೆ, ಬದ್ಧತೆಗೆ, ಜೀವಪರ ಹೋರಾಟಗಳಿಗೆ, ಹೃದಯವಂತಿಕೆಗೆ, ಮಾನವೀಯತೆಗೆ ನನ್ನ ನೈತಿಕ ಬೆಂಬಲವಿದೆ.

            @ಬಾಲು ಭಟ್: ಇನ್ನೊಬ್ಬರ ಅಸಲಿಯತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸುವ ಬದಲು ನಿಮ್ಮೊಳಗಿರುವ ನಂಜನ್ನು ತೊಳೆದುಕೊಳ್ಳಿ.

            ಉತ್ತರ
            • shripad's avatar
              shripad
              ಜುಲೈ 11 2014

              ಎಲ್ಲ ಆರಾಧನೆಯ ಹಿಂದೆಯೂ ತತ್ವ ಸಿದ್ಧಾಂತಗಳಿಗೆ ಮಾರು ಹೋದ ಮನಸ್ಸುಗಳಿರುತ್ತವೆ ಎಂದು ಹೇಳುವುದಷ್ಟೆ ನನ್ನ ಉದ್ದೇಶ. ನಿಮ್ಮ ಕತೆಯೂ ಅಷ್ಟೆ!

              ಉತ್ತರ
              • Nagshetty Shetkar's avatar
                Nagshetty Shetkar
                ಜುಲೈ 11 2014

                ನನ್ನದು ಆರಾಧನೆ ಅಲ್ಲ. ವಸ್ತುನಿಷ್ಠ ವಿಷಯಾಧಾರಿತ ಬೆಂಬಲ.

                ಉತ್ತರ
  4. Nagshetty Shetkar's avatar
    Nagshetty Shetkar
    ಜೂನ್ 28 2014
    • shripad's avatar
      shripad
      ಜೂನ್ 28 2014

      ಇದೊಂದು ಬಗೆಯ ದರ್ಗಾ ಪೂಜೆ!

      ಉತ್ತರ
      • Naani's avatar
        Naani
        ಜೂನ್ 29 2014

        ದರ್ಗಾದ್ದು ಕೂಡ ಈ ಶೆಟ್ಕರರಂಗೆ ವಿಚಾರಗಳನ್ನು ಗ್ರಹಿಸದೆ ಸುಮ್ಮನೆ ಐಡಿಯಾಲಜಿಗಳ ಆಧಾರದಲ್ಲಿ ಕುರುಡಾಗಿ ಬೆಂಬಲಿಸುವ ಇಲ್ಲ ವಿರೋಧಿಸುವ ಕಾಯಕ ಎನ್ಸುತ್ತೆ. ಬಾಲಗಂಗಾಧರರ-ರಾಜಾರಾಮ ಹೆಗಡೆಯವರದ್ದೇ ವಿಚಾರಗಳನ್ನು ಶಿವಪ್ರಕಾಶರು ಹೇಳುತ್ತಿದ್ದಾರೆ ಎನ್ನುವುದನ್ನೂ ಗುರುತಿಸದ ಅಜ್ಞಾನ ಈ ವಿದ್ವಾಂಸರದ್ದು… ಅಲ್ಲಿ ಇಲ್ಲಿ ಯಾವ್ಯಾವುದೋ ಸಾಲುಗಳನ್ನು ಉಲ್ಲೇಖಿಸಿ ಅದಕ್ಕೇ ಸಂಬಂದವೇ ಇಲ್ಲದ ಒಣ ಭಾಷಣ ಮಾಡುವುದೇ ವಿದ್ವತ್ತು ಎನ್ನೋ ಅಜ್ಞಾನ ಬೇರೆ. ಹ್ಹ ಹ್ಹ ಹ್ಹ್ಹ…… ಮೊದಲು ಲೇಖನಗಳ ವಿಚಾರಗಳನ್ನು ಅವು ಇದ್ದಂತೆಯೇ ಸರಿಯಾಗಿ ಗ್ರಹಿಸುವುದನ್ನು ದರ್ಗಾರವರು ಕಲಿಯಲಿ. ನಂತರ ಅವುಗಳನ್ನು ತರ್ಕಬದ್ದವಾಗಿ ವಾಕ್ಯಾನಿಸಿಕೊಂಡು ತಮ್ಮ ನಿಲುವುಗಳಿಗೆ ಬರುವುದನ್ನೂ ಕಲಿಯಲಿ. ಇಲ್ಲಾಂದ್ರೆ ಲೇಖನಗಳನ್ನು ಹೇಗೇಗೋ ಅರ್ಥಮಾಡಿಕೊಂಡು ಹಾಸ್ಯಾಸ್ಪದ ರೀತಿಯಲ್ಲಿಯೇ ಬರೆಯಬೇಕಾಗುತ್ತದೆ, ಈ ಲೇಖನದಲ್ಲಿರುವ ಎಡಬಿಡಂಗಿತನದಂತೆ!!!!

        ಉತ್ತರ
        • Nagshetty Shetkar's avatar
          Nagshetty Shetkar
          ಜೂನ್ 29 2014

          “ಬಾಲಕ ಅನಂತಮೂರ್ತಿಯವರ ಪ್ರಯೋಗ ಮತ್ತು ಪ್ರಬುದ್ಧ ಅನಂತಮೂರ್ತಿಯವರ ವಿಜನ್ (ಕಾಣ್ಕೆ) ಅನ್ನು ಅರ್ಥೈಸಿಕೊಳ್ಳಲಿಕ್ಕಾಗದವರು ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.”

          ಉತ್ತರ
          • Naani's avatar
            Naani
            ಜೂನ್ 29 2014

            ಎಡಂಬಿಡಂಗಿಗಳು ಅನಂತಮೂರ್ತಿ ತಮ್ಮ ಲೇಖನದಲ್ಲಿ ದೆವ್ವದ ಕಲ್ಲಿನ ಮೇಲಿನ ಮೂತ್ರಿಸಿದ ಪ್ರಸಂಗ ಬರುವ ಆ ಒಂದು ಪ್ಯಾರಾವನ್ನಷ್ಟೇ ಅದು ಇದ್ದ ಹಾಗೆ ಅರ್ಥ ಮಾಡಿಕೊಂಡು ವಿವರಿಸುವ ತಾಕತ್ತು ತೋರಿಸಲಿ ನಂತರ ಆ ಅಪ್ರಭುದ್ದ ಬಾಲಕ ಅಮೂ ಮಾಡಿದ ಕುಛೇಷ್ಟೆಯನ್ನು ವಯೋವೃದ್ದ ಅನಂತಮೂರ್ತಿ ಹೇಗೆಲ್ಲ ತಮ್ಮ ವಸಾಹತುಶಾಹಿಪ್ರಣಿೀತ ವಿಚಾರಗಳ ವಿರೂಪದ ಪ್ರಯೋಗವಾಗಿ ಈ ಪ್ರಸಂಗವನ್ನು ನಿರೂಪಿಸಿಕೊಂಡಿದ್ದಾರೆ ಎನ್ನುವುದು ಮಂದಬುದ್ದಿಗಳಿಗೆ ತಿಳಿಯುತ್ತೆ. ಆ ಇಡೀ ಲೇಖನವೇ ಅನಂತಮೂರ್ತಿಗಳು ತಾವು ಅದುವಗೆ ಪ್ರತಿಪಸುತ್ತದ್ದ ವಿಚಾರಗಳಿಂದ U ಟರ್ನ್ ತೆಗೋಂಡ ಗೊಂದಲಮಯ ನಿರೂಪಣೆ ಎನ್ನೋದಾದರೂ ಈ ಎಡಬಿಡಂಗಿಗಳಿಗೆ ತಿಳಿದರೆ ಒಳತು. ಅಂದಹಾಗೆ ಬಸವಣ್ಣ ನವರನ್ನು ಮಾರ್ಕ್ಸ್ ವಾದಿಯಾಗಿಸಿದವರಿಗೆ ಪರಮಹಂಸರ ಪ್ರಸಂಗದ ಉಉಲ್ಲೇಖವೇ ತನ್ನ ವಾದಕ್ಕೆ ವಿರುದ್ದವಾದದ್ದೆಂಬ ಅರಿವಾದರೆ ಚೆನ್ನ. ಈ ಪ್ರಸಂಗವನ್ನ ಸರಿಯಾಗಿ ಗ್ರಹಿಸಿ ಆನೆಲೆಯಿಂದಾದರುೂ ಬಸವಣ್ಣನ ವಿಚಾರಗಳ ಜ್ಞಾನೋದಯ ವಾಗಲಿ ಈ ಎಡಬಿಡಂಗಿಗಳಿಗೆ.

            ಉತ್ತರ
  5. Rajaram Hegde's avatar
    Rajaram Hegde
    ಜೂನ್ 30 2014

    ದರ್ಗಾ ಅವರ ಲೇಖನದಲ್ಲೂ ನಾನು ತಿಳಿಸಿದ ಗೊಂದಲವಿದೆ. ಪೌರ್ವಾತ್ಯ ಸಂಸ್ಕೃತಿಗಳಲ್ಲಿ ಅವರು ತಿಳಿಸಿದಂಥ ಅಸಂಖ್ಯ ಉದಾಹರಣೆಗಳು ಇವೆ. ಆದರೆ ಅವುಗಳ ಮೂಲ ನಿಲುವು ಏನು? ಮೂರ್ತಿಪೂಜೆ ಪಾಪ ಎಂದೆ? ಮೂರ್ತಿಗಳನ್ನು ಒಡೆದರೆ ಪುಣ್ಯ ಬರುತ್ತದೆ ಎಂದೆ? ಇಂಥ ಪೌರ್ವಾತ್ಯ ಕಥೆಗಳು ಏನು ಹೇಳು್ತ್ತವೆ? ಮೂರ್ತಿಯನ್ನು ಮೀರಬೇಕು ಅಂತ. ಮೂರ್ತಿಪೂಜೆ ಪಾಪ ಅಂತಲ್ಲ. ಒಂದೊಮ್ಮೆ ಅನಂತಮೂರ್ತಿಯವರಿಗೆ ಉಚ್ಚೆಹೊಯ್ದಮೇಲೆ ರಾಮಕೃಷ್ಣ ಪರಮಹಂಸರಂತೆ
    ಜ್ಞಾನೋದಯವಾಗಿದ್ದಿದ್ದರೆ ದರ್ಗಾ ಅವರ ಹೇಳಿಕೆಯನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು. ನಾಗಲಿಂಗ ಅಜ್ಜನವರು ಮೂರ್ತಿಯಲ್ಲಿ ದೇವರಿಲ್ಲ ಎಂದು ಸಾಬೀತು ಪಡಿಸಲಿಕ್ಕೆ ಅದನ್ನು ಮುರಿದು ಬೆಂಕಿ ಒಟ್ಟಿದರಾ? ಪುಣ್ಯ ಸಂಪಾದಿಸಲಿಕ್ಕೆ ಹಾಗೆ ಮಾಡಿದರಾ? ಹಾಗೆ ಮಾಡಿದ ಮೇಲೆ ಭಯದಿಂದ ನಿದ್ದೆ ಕೆಟ್ಟರಾ? ಭಾರತೀಯರು ಮೂರ್ತಿಗಳಿಗೆ ಭಯಪಟ್ಟು ಅವನ್ನು ಪೂಜಿಸುತ್ತಾರಾ?
    ನನ್ನ ಲೇಖನದಲ್ಲಿ ಆಧುನಿಕರ ಗೊಂದಲದ ಕುರಿತು ನನಗೆ ದರ್ಗಾರ ಲೇಖನದಷ್ಟು ಒಳ್ಳೆಯ ಉದಾಹರಣೆಗಳು ಸಿಕ್ಕಿರಲಿಲ್ಲ, ಏಕೆಂದರೆ ಆಗ ಅವರು ಇದನ್ನು ಬರೆದೇ ಇರಲಿಲ್ಲ.

    ಉತ್ತರ
    • Nagshetty Shetkar's avatar
      Nagshetty Shetkar
      ಜೂನ್ 30 2014

      ಹೆಗ್ಗಡೆ ಅವರೇ, ಗೊಂದಲ ಇರುವುದು ದರ್ಗಾ ಸರ್ ಅವರ ಚಿಂತನೆಯಲ್ಲಿ ಅಲ್ಲ. ದರ್ಗಾ ಸರ್ ಅವರ ಚಿಂತನೆ ವಚನ ಸಾಹಿತ್ಯದ ಅಧ್ಯಯನ ಹಾಗೂ ಮಾರ್ಕ್ಸ್ ತತ್ವ ಮಂಥನಗಳ ಕುಲುಮೆಯಲ್ಲಿ ಶುದ್ಧವಾಗಿರುವ ಚಿನ್ನ. ದರ್ಗಾ ಅವರ ಚಿಂತನೆಯ ಬಗ್ಗೆ ಗೊಂದಲ ಹುಟ್ಟಿಸುವ ಪ್ರಯತ್ನ ವೈದಿಕರದ್ದು. ವೈದಿಕರಿಗೆ ಮೂರ್ತಿ ಪೂಜೆ ಮುಖ್ಯ, ಮೂರ್ತಿಯನ್ನು ಪೂಜೆ ಮಾಡುವ ಪುರೋಹಿತರೂ ಮುಖ್ಯ. ಆದರೆ ಭಾರತವೆಂದರೆ ವೈದಿಕ ಸಂಸ್ಕೃತಿ ಮಾತ್ರವಲ್ಲ. ಇಲ್ಲಿ ಸಹಸ್ರಾರು ಅವೈದಿಕ ಸಂಸ್ಕ್ರುತಿಗಳಿವೆ. ಅವು ಮೂರ್ತಿ ಪೂಜೆಯನ್ನು ಧಿಕ್ಕರಿಸುತ್ತವೆ. ಬಾಲಕ ಅನಂತಮೂರ್ತಿ ವೈದಿಕ ಸಂಸ್ಕೃತಿಯಲ್ಲಿ ಬೆಳೆದವರು ಅಂತ ಮರೆಯಬಾರದು. ವೈದಿಕ ಸಂಸ್ಕೃತಿ ಪುರಸ್ಕರಿಸುವ ಮೂರ್ತಿ ಪೂಜೆಯನ್ನು ಬಾಲಕ ಅನಂತ ಮೂರ್ತಿ ಪ್ರಶ್ನಿಸಿದ್ದಾರೆ (ಕ್ರಿಟಿಕಲ್ ಇನ್ಸೈಡರ್). ತನ್ಮೂಲಕ ಅವೈದಿಕ ಸಂಸ್ಕೃತಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಪ್ರೊಟೆಸ್ಟಾಂಟ್ ಥಿಯಾಲಜಿಯ ಸರಕನ್ನು ಯೂರೋಪಿನಿಂದ ಕಡ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.

      ಉತ್ತರ
      • Naani's avatar
        Naani
        ಜುಲೈ 1 2014

        {ಇಲ್ಲಿ ಸಹಸ್ರಾರು ಅವೈದಿಕ ಸಂಸ್ಕ್ರುತಿಗಳಿವೆ. ಅವು ಮೂರ್ತಿ ಪೂಜೆಯನ್ನು ಧಿಕ್ಕರಿಸುತ್ತವೆ.}

        ಹೌದಾ??? ಮೂರ್ತಿಪೂಜೆಯನ್ನು ಧಿಕ್ಕರಿಸುವ ಸಹಸ್ರಾರು ಸಂಸ್ಕೃತಿಗಳು ಭಾರತದಲ್ಲಿವೆಯಾ??? ಹಾಗಿದ್ದರೆ ಕೊನೆಪಕ್ಷ ಒಂದು 50 ನ್ನಾದರೂ ಹೆಸರಿಸಿ ಶೆಟ್ಕರರೇ?? ಇಲ್ಲಾಂದ್ರೆ ತಮಗಿರುವ ‘ಬುರಡೆ ಶೆಟ್ಕರ್’ ಎನ್ನುವ ಅನ್ವರ್ಥನಾಮಕ್ಕೆ ಮತ್ತೊಂದು ಸಮರ್ಥನೆ ಸಿಕ್ಕಂತಾಗಿಬಿಡುತ್ತದೆ, ನೋಡಿ.

        ಇದನ್ನು ನೀವು ತೋರಿಸಿದ ಮೇಲೆ ಈ ‘ಆತ್ಮರಥಿ’ಯ “ಚಿನ್ನ” “ರನ್ನ” “ಮುತ್ತು” ಗಳ ಅಸಲಿಯತ್ತು ತಾನಾಗೆ ಗೊತ್ತಾಗುತ್ತೆ, ಬುಡಿ.

        ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಜುಲೈ 1 2014

        ವಿಚಾರ ಮಾಡಲು ಕಿಡ್ನಿಯನ್ನು ಬಳಸಿದರೆ, ಅದರ ಕಾರ್ಯಕ್ಷಮತೆಯಲ್ಲಿ ತೊಂದರೆ ಉಂಟಾಗಿ..ಡಯಾಲಿಸಿಸ ಮಾಡಿಸಿಕೊಳ್ಳುವ ಪ್ರಮೇಯ ಬರುವ ಸಾಧ್ಯತೆ ಇರುತ್ತದೆ..ಹಾಗೆಯೇ ಈ ಪ್ರಗತಿ ಪರಾವಲಂಬಿಗಳ ವೈದ್ಯಕೀಯ ಖರ್ಚಿನ ಹೊಣೆ ಜನಸಾಮಾನ್ಯರ ಮೇಲೆ ಬಿಳುತ್ತದೆ. ಆದ್ದರಿಂದ ನಮ್ಮ ಶೆಟ್ಕರ್ ಗುರುಗಳು ದಯವಿಟ್ಟು ವಿಚಾರ ಮಾಡುವ ಕ್ರಿಯೆಗೆ ಮಿದುಳನ್ನೇ ಬಳಸಬೇಕು, ತನ್ಮೂಲಕ ಭವಿಷ್ಯದಲ್ಲಿ ಜನ-ಸಾಮಾನ್ಯರ ಮೇಲಾಗಬಹುದಾದ ಹೆಚ್ಚಿನ ಹೊರೆಯನ್ನು ತಪ್ಪಿಸಬೇಕು ಎಂಬ ನಮೃ ಕೋರಿಕೆ..

        ಉತ್ತರ
      • simha sn's avatar
        simha sn
        ಜುಲೈ 2 2014

        who is this darga?

        ಉತ್ತರ
        • Manohar Naik's avatar
          Manohar Naik
          ಜುಲೈ 3 2014

          ಅವನ್ಯಾರೋ ರಂಜಾನ್ ದರ್ಗಾ,
          ಇವನು ಅವನ ಶಿಷ್ಯ ದೀಪಾವಳಿ ದುರ್ಗ

          ಉತ್ತರ
          • Nagshetty Shetkar's avatar
            Nagshetty Shetkar
            ಜುಲೈ 5 2014

            “ಅವನ್ಯಾರೋ ರಂಜಾನ್ ದರ್ಗಾ”

            Ranjan Darga is an eminent journalist, Vachana scholar, poet of repute, and distinguished recipient of Basavashree and Rajyotsava awards. He is a Sufi with Marxist background and proponent of Basavadvaita. A true humanist.

            You NaMo cyber rowdies should learn basic decency.

            ಉತ್ತರ
            • Naani's avatar
              Naani
              ಜುಲೈ 5 2014

              ಬರೀ ಬುರುಡೆ ಬಿಡ್ಕಂಡ್ ತಿರುಗಿದ್ರೆ ಇನ್ನೇನ್ ಅನ್ತಾರೆ, ಶೆಟ್ಕರ್…??? !!! ಮೂರ್ತಿ ಪೂಜೆ ವಿರೋದಿಸುವ ಸಹಸ್ರ ಸಂಸ್ಕೃತಿಗಳು ಭಾರತದಲ್ಲಿದೆ ಎಂದು ಬುರೆಡೆ ಬಿಟ್ರಲ್ಲ ಒಂದು 50 ಉಧಾಹರಣೆ ಕೊಡಿ ಅಂದ್ರೆ ಓಡಿಹೋಗಿ ಬಿಟ್ರಿ… ಇನ್ನೇನಂತಾರೆ ನಿಮ್ಮ ಭಂಡಗೆಟ್ಟ ಹೇಡಿತನ ಮತ್ತು ಬೌದ್ದಿಕ ದಿವಾಳಿತನಕ್ಕೆ??? ಆ ಉಧಾಹರಣೆ ಕೊಡಿ, ಇಲ್ಲಾಂದ್ರೆ ಇತ್ತ ತಲೆಹಾಕದೆ (ಪಲಾಯನ ಮಾಡಿ) ನಿಮ್ಮ ಮಾನ ಉಳುಸ್ಕೊಳಿ .

              ಉತ್ತರ
  6. KP Bolumbu's avatar
    ಜುಲೈ 8 2014

    @Manohar Naik
    ಇಂಥ ಅಭಿರುಚಿಯ ಕಮೆಂಟುಗಳನ್ನು ದಯವಿಟ್ಟು ನೀಡದಿರಿ.
    @ರಾಕೇಶ್ ಶೆಟ್ಟಿ
    trollಗಳನ್ನು ಆಹ್ವಾನಿಸುವ ಕಮೆಂಟುಗಳನ್ನು ಮೋಡರೇಟ್ ಮಾಡಬಾರದೇಕೆ?
    @ನಾಗಶೆಟ್ಟಿ ಶೆಟ್ಕರ್
    ದಯವಿಟ್ಟು ವಿಷಯಕ್ಕೆ ಉತ್ತರಿಸಿರಿ. ಎಲ್ಲಾ ಪ್ರಶ್ನೆಗೂ ಒಂದೇ ಉತ್ತರವಲ್ಲ.
    @ಇತರರಿಗೆ
    ರಾಡಿ ಎಬ್ಬಿಸುವ ಕಮೆಂಟುಗಳನ್ನು ಒಂದರ ಮೇಲೆ ಒಂದರಂತೆ ಒಗೆದರೆ ಯಾರಿಗೂ ಲಾಭವಿಲ್ಲ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಜುಲೈ 8 2014

      ಕ್ಷಮಿಸಿ :). ನಮ್ಮ ಶೆಟ್ಕರ್ ಸಾಹೇಬರನ್ನು ನಾವು ಅಲಕ್ಷಿಸಿದರೆ ಅವರು ತಪ್ಪು ತಿಳಿದುಕೊಳ್ಳುವ ಸಾಧ್ಯತೆಯಿದೆ!. 🙂

      ಉತ್ತರ

Trackbacks & Pingbacks

  1. ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು | ಸಿ.ಎಸ್.ಎಲ್.ಸಿ. CSLC

Leave a reply to shripad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments