ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 6, 2012

21

ದೇಶ – ಭಾಷೆಗಳ ನಡುವೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಆಗ ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಗಳು.ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!

ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ “ಚಿಂತನಗಂಗಾ” ಪುಸ್ತಕದ ಸುತ್ತ ಅಂತರ್ಜಾಲದಲ್ಲಿ ನಡೆಯುತ್ತಿರುವ ಚರ್ಚೆ ಫ಼ಾಲೋ ಮಾಡುವಾಗ “ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ” ಎನ್ನುವ ಪದ ಬಳಕೆ ನೋಡಿ ನಗು ಬಂತು.ಅಸಲಿಗೆ ಯಾವುದೇ ಸಂಘಟನೆ,ಸ್ವಸ್ಥ ಸಮಾಜದಲ್ಲಿ ವಿಚಾರ ಸ್ವಾತಂತ್ರ್ಯವಿರಲೇಬೇಕು ಅದು ಇರಲಿ ಅಂತ ಕೇಳುವುದು ತಪ್ಪೇನು ಅಲ್ಲ.ಆದರೆ ವಿಚಾರ ಸ್ವಾತಂತ್ರ್ಯದ ಬಗ್ಗೆ ಕೇಳಿದವರು ಯಾರು ಅನ್ನುವುದು ಮುಖ್ಯವಾಗುತ್ತದಲ್ಲವೇ? ವೇದಾಂತ ಇರೋದು ಬೇರೆಯವ್ರಿಗೆ ಹೇಳೋಕ್ ಮಾತ್ರ ಅಂದುಕೊಂಡವರಿಗಾಗಿಯೇ ಗಾಂಧೀಜಿಯವರು ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’  ಅಂದಿದ್ದು.

ಹಿಂದಿ ಹೇರಿಕೆಯ ಬಗ್ಗೆ ನನ್ನ ಅಭಿಪ್ರಾಯವನ್ನು ವರ್ಷದ ಹಿಂದೆಯೇ ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ ಅನ್ನುವ ಲೇಖನದಲ್ಲಿ ಹೇಳಿದ್ದೇನೆ.ಚಿಂತನಗಂಗಾ ಚರ್ಚೆಯಲ್ಲಿ ಹಿಂದಿ ಹೇರಿಕೆಯನ್ನ ಹಿಡಿದು ಅನ್ಯ ಧರ್ಮೀಯರ ಬಗ್ಗೆ ಆರ್.ಎಸ್.ಎಸ್ ನ ಧೋರಣೆ, ಬಿಜೆಪಿಯ ರಾಜಕೀಯದ ಬಗ್ಗೆ ಕೂಡ ಚರ್ಚೆಗಳಾಗಿವೆ.

ಹಿಂದಿ ಹೇರಿಕೆಯ ವಿಷಯ ಬಂದಾಗ ಬಳಗದವರು ಬಿಜೆಪಿಯ ಮೇಲೆ ಕೆಂಡಾಮಂಡಲರಾದಂತೆ, ಕಾಂಗ್ರೆಸ್ಸಿನ ಮೇಲೂ ಮತ್ತೆ ಹಿಂದಿ ಹೇರಿಕೆಯ ಬಗ್ಗೆ ಇದುವರೆಗೂ ಚಕಾರವೆತ್ತದ ಜೆಡಿಎಸ್ ನಂತಹ ಪಕ್ಷಗಳ ಮೇಲೆ ಯಾಕೆ ಮಾತನಾಡುವುದಿಲ್ಲ ಅನ್ನುವುದು ಪ್ರಶ್ನೆ…! ಅಸಲಿಗೆ ಭಾರತದಲ್ಲಿ ಹಿಂದಿ ಹೇರಿಕೆಯ ಕರ್ಮಕಾಂಡಕ್ಕೆ,ಹೋರಾಟಕ್ಕೆ ಮುನ್ನುಡಿ ಬರೆದವರು ನ್ಯಾಷನಲ್ ಕಾಂಗ್ರೆಸ್ಸಿನ ಚಕ್ರವರ್ತಿ ರಾಜಗೋಪಾಲಚಾರಿಯವರಲ್ಲವೇ? ಹಿಂದಿ ಹೇರಿಕೆಯ ವಿಷಯ ಬಂದಾಗ ಭಾರತದ ಎಲ್ಲ ರಾಜಕೀಯ ಪಕ್ಷಗಳದ್ದು (ದಕ್ಷಿಣದ ಪ್ರಾದೇಶಿಕ ಪಕ್ಷಗಳನ್ನ ಹೊರತುಪಡಿಸಿ) ಒಂದೇ ಚಾಳಿ,ಹಾಗಿದ್ದಾಗ ಅದ್ಯಾಕೆ ಕೇವಲ ಬಿಜೆಪಿಯ ಮೇಲೆ ಬಳಗದವರ ವಿಶೇಷ ಮಮಕಾರವೇಕೆ? ಭಾರತ ಅನ್ನುವ ಪದ ಕೇಳಿದರೆ ಮೈ ಪರಚಿಕೊಂಡಂತೆ ಮಾಡುವುದು ಕನ್ನಡ ಪ್ರೇಮವಲ್ಲ ,ಹಾಗೇಯೇ ಕನ್ನಡಾಭಿಮಾನ ಅನ್ನುವುದು ರಾಷ್ಟ್ರದ್ರೋಹವೇನಲ್ಲ ಅನ್ನುವುದು ಸೋ-ಕಾಲ್ಡ್ ಭಾಷಾಭಿಮಾನಿಗಳಿಗೆ ಮತ್ತು ದೇಶಾಭಿಮಾನಿಗಳಿಗೆ ತಿಳಿದಿರಬೇಕು.ಇಲ್ಲದಿದ್ದರೆ ಭಾಶಾಭಿಮಾನಿಗಳ-ದೇಶಾಭಿಮಾನಿಗಳ ನಡುವಿನ ಕಂದಕದಲ್ಲಿ ’ಶತ್ರುವಿನ ಶತ್ರು ಮಿತ್ರ ಅನ್ನುವು ಸಿದ್ಧಾಂತವಾದಿಗಳು ಬೇಳೆ ಬೇಯಿಸಿಕೊಳ್ಳುತ್ತರಾಷ್ಟೆ!’

ಈ ದೇಶಕ್ಕೆ ರಾಷ್ಟ್ರ ಭಾಷೆಯ ಅಗತ್ಯವಿಲ್ಲ ಅನ್ನುವುದು ಭಾಷಾಭಿಮಾನಿಗಳ ವಾದವಾದರೆ,ಸಂವಹನಕ್ಕಾಗಿ ಒಂದು ಭಾಷೆ ಬೇಕು,ಬಹು ರಾಜ್ಯಗಳಲ್ಲಿ ಹಿಂದಿ ಮಾತನಾಡುವುದರಿಂದ ಅದೇ ಇರಲಿ ಅನ್ನುವುದು ಇನ್ನೊಂದು ಬಣದ ಅಂಬೋಣ.ತ್ರಿ-ಭಾಷ ಸೂತ್ರದ ಮೂಲಕ ಅದನ್ನ ಹೇರುತ್ತಲೂ ಬಂದಿದ್ದಾರೆ,ತ್ರಿ-ಭಾಷಾ ಸೂತ್ರವನ್ನು ವಿರೋಧಿಸುವುದಕ್ಕಿಂತ ಉತ್ತರದ ರಾಜ್ಯಗಳಲ್ಲಿ ಮೂರನೇ ಭಾಷೆಯಾಗಿ ದಕ್ಷಿಣ ಭಾರತದ ಭಾಷೆಯನ್ನ ಕಲಿಯಲು ಒತ್ತಾಯಿಸಬಹುದಲ್ಲವೇ?

ಪಕ್ಕದ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ತಮಿಳು ಭಾಷೆಯನ್ನ ಆರನೇ ತರಗತಿಯವರೆಗೂ ಕಡ್ಡಾಯ ಮಾಡುವ ಮಾತುಗಳನ್ನಡುತ್ತಿರುವ ಈ ಸಮಯದಲ್ಲಿ ನಾವು ಕನಿಷ್ಠ ನಮ್ಮ ’ಮುಖ್ಯಮಂತ್ರಿ ಚಂದ್ರು’ ಕಳೆದ ಜೂನ್ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರಲ್ಲಾ ಅದರ ಕಥೆ ಏನಾಯಿತು ಅಂತ ಯೋಚಿಸಿದ್ದೇವಾ? ಅವರ ಪ್ರಸ್ತಾವನೆ ಬಂದ ೧೫-೨೦ ದಿನ ಹಾರಾಡಿ-ಚೀರಾಡಿ ತೆಪ್ಪಗಾದೆವಲ್ಲ.ಈ ವಿಷಯದ ಬಗ್ಗೆ ಚರ್ಚೆಯಾಗಬೇಕು ಅನ್ನಿಸಲಿಲ್ಲವೇ ಮಾನ್ಯರೇ? ಅಥವಾ ಎಲ್ಲವನ್ನೂ ನಾವೇ ಮಾಡಬೇಕು ಅಂತೇನಿಲ್ಲ ಅನ್ನುವ ಸಿದ್ಧ ಉತ್ತರ ಕೊಡುತ್ತಿರೋ?

ಈ ದೇಶವನ್ನ ಭಾಷೆಯ ಆಧಾರದ ಮೇಲೆ ವಿಂಗಡಿಸಿದ್ದೇ ತಪ್ಪು ಅನ್ನುವ ಸಂಘದ ಮಾತುಗಳು ನಗು ತರಿಸುವಂತದ್ದೇ ನಿಜ.ಬಹುರಾಷ್ಟ್ರೀಯ ಕಂಪೆನಿಗಳಿಲ್ಲದ ಕಾಲದಲ್ಲಿ ಬಹುಷಃ ಸಂಘದ ಈ ಥಿಯರಿ ವರ್ಕ್ ಆಗುತಿತ್ತೋ ಏನೋ ಆದರೆ, ಈಗ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವ ಸಂಘದ ಅಪ್ಪಟ ಅನುಯಾಯಿಗಳಿಗೂ ಸತ್ಯದ ಅರಿವಾಗಿರುವುದು ಸುಳ್ಳೇನಲ್ಲ.ಕಡೇ ಪಕ್ಷ ಈಗಲಾದರೂ ಸಂಘ ತನ್ನ ಈ ಹಳೆ ಹಾಡನ್ನ ನಿಲ್ಲಿಸಬೇಕು…

ಸಂಘದ ಸಭೆ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ-ಮಂತ್ರಿಗಳು ಭಾಗವಹಿಸುವುದು ತಪ್ಪು ಅನ್ನುವುದಾದರೇ , ಕರವೇ ಅವರ ದಶಮಾನೋತ್ಸವದಲ್ಲಿ ಭಾಗವಹಿಸಿದ್ದು ತಪ್ಪಾ!? ಸಂಘ ಮಾಡುವ ಸಮಾವೇಷದಿಂದ ಮಾತ್ರವೇ ದ್ವೇಷದ ಕಿಡಿ ಹೊತ್ತುತ್ತದಯೇ? ಯಾಕೆ ನಿಮ್ಮ ಕಣ್ಣಿಗೆ ಬೇರೆ ಸಂಘಟನೆಗಳ ಸಮಾವೇಷ ಕಾಣಿಸಲಿಲ್ಲವಾ? ಸಂಘವನ್ನ ಟೀಕಿಸಿದಷ್ಟು ಸುಲಭವಾಗಿ ಉಳಿದ ಸಂಘಟನಗಳನ್ನೂ ಟೀಕಿಸಬಲ್ಲಿರಾ? ಇನ್ನು ಅನ್ಯಧರ್ಮೀಯರ ಬಗ್ಗೆ ಸಂಘ ಮತ್ತು ಬಿಜೆಪಿಯ ಅಸಹನೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.ಅಸಲಿಗೆ ಈ ಸೆಕ್ಯುಲರ್ ಅನ್ನುವ ಪಕ್ಷಗಳೇ ತಾನೇ ನಮ್ಮ ದೇಶದಲ್ಲಿ ಹೆಚ್ಚು ಅಧಿಕಾರದಲ್ಲಿದಿದ್ದು.ಅವರನ್ನ ಕೇವಲ ವೋಟ್ ಬ್ಯಾಂಕ್ ಮಾಡಿಕೊಳ್ಳದೇ ಅನ್ಯ ಧರ್ಮೀಯರ ಒಳಿತಿಗೆ ಕೆಲ್ಸ ಮಾಡಿದ್ದಾರ ಅನ್ನುವುದು ಮುಖ್ಯವಲ್ಲವೇ? ಅಂತ ಕೆಲಸವೇನಾದರೂ ಮಾಡಿದ್ದರೆ ಸ್ವಾತಂತ್ರ್ಯ ಬಂದು ೬೪ ವರ್ಷಗಳಾದ ಮೇಲೆ ಮೀಸಲಾತಿ ಕೊಡುವಷ್ಟು ಅವರು ಹಿಂದುಳಿಯುತ್ತಿರಲಿಲ್ಲ ಅಲ್ವಾ?

ಸಂಘದ ಹಿಂದಿಯ ಪ್ರೀತಿಯ ಬಗ್ಗೆ ಮಾತನಾಡುತ್ತಲೇ ಬಳಗವೂ ಸೆಕ್ಯುಲರ್ ಪಕ್ಷದ ಹಾಗೆ ಮಾತನಾಡಿದ್ದು ರಾಜಕೀಯಕ್ಕಿಳಿಯುವ ಮುನ್ಸೂಚನೆಯೇ? ಇಳಿಯುವುದಾದರೆ ಇಳಿಯಲಿ ಆದರೆ ಹಿಂದಿಯನ್ನ ವಿರೋಧಿಸುವುದೇ ಕನ್ನಡ ಪ್ರೀತಿ,ಹಿಂದೂ ಸಮಾವೇಷಗಳನ್ನ ವಿರೋಧಿಸುವುದೇ ಸೆಕ್ಯುಲರಿಸಂ ಅಂದುಕೊಳ್ಳದೇ ಸರ್ವೇ ಜನಃ ಸುಖಿನೋ ಭವಂತು ಅನ್ನುವ ಧ್ಯೇಯವಿಟ್ಟುಕೊಂಡು ಮುಂದುವರೆಯಿರಿ ಒಳ್ಳೆಯದಾಗಲಿ.

21 ಟಿಪ್ಪಣಿಗಳು Post a comment
  1. govinda's avatar
    govinda
    ಫೆಬ್ರ 6 2012

    ನಿಮ್ಮ ಬಿಜೆಪಿ ಪರ ಮಾತುಗಳನ್ನು ನೋಡಿದರೆ ಬಿಜೆಪಿಯಿಂದ ರಾಜಕೀಯಕ್ಕೆ ಇಳಿಯುವ ಮುನ್ಸೂಚನೆಯೇ? ವಾಮಾನಾಚಾರ್ಯ, ಸಿಟಿರವಿ ಟಿವಿಯಲ್ಲಿ ಮಾತನಾಡುವುದು ಇದೇ ಶೈಲಿಯಲ್ಲಿ. ಇಳಿಯಿರಿ ಒಳ್ಳೆಯದಾಗಲಿ

    ಉತ್ತರ
    • ರಾಕೇಶ್ ಶೆಟ್ಟಿ's avatar
      ಫೆಬ್ರ 6 2012

      ಗೋವಿಂದಣ್ಣ,

      ನಮ್ ಸಂಸ್ಕೃತಿ,ನಮ್ ಮಣ್ಣು ಅನ್ನುತ್ತಾ ಮಲ್ಪೆ ಬೀಚಿನಲ್ಲಿ ನಂಗಾನಾಚ್ ಮಾಡಲು ಅನುಮತಿಕೊಟ್ಟ ಬಿಜೆಪಿ,ನಾಯಕರೇ ಇಲ್ಲದೇ ನಕಲಿ ಗಾಂಧಿಗಳಿಗೆ ಭೋ-ಪರಾಕ್ ಹೇಳುವ ನಿಮ್ಮ ಕಾಂಗ್ರೆಸ್ಸು ಇವೆರ್ಡು ಒಂದೇ ನಾಣ್ಯದ ಎರಡು ಮುಖಗಳು… ಕಾಲ ಬಂದಾಗ ನೋಡೋಣ ಬಿಡಿ ನಿಮ್ಮ ಕಾಂಗ್ರೆಸ್ಸಿಗೆ ಬೇಡ ಅಂತೀರಾ? 🙂

      ಉತ್ತರ
      • ಅವಿ's avatar
        ಅವಿ
        ಫೆಬ್ರ 7 2012

        ಈ ಹಿಪೊಕ್ರಸಿ ಬಿಡಿ ಶೆಟ್ರೆ.. ನೇರವಾಗಿ ಹೇಳಿ ನಾನು ಬಿಜೆಪಿ ಬೆಂಬಲಿಗ ಅಂತ. ನಿಮ್ಮ ಎಷ್ಟು ಅಂಕಣಗಳಲ್ಲಿ ರಾಹುಲ್ ಗಾಂಧಿಯನ್ನ, ಕಾಂಗ್ರೆಸ್ಸು, ಜನತಾದಳವನ್ನು ಬೈಕೊಂಡು ಓಡಾಡಿದ್ದೀರಿ, ಎಷ್ಟರಲ್ಲಿ ಬೆಜೆಪಿನ್ನು ಪ್ರಶ್ನಿಸಿದ್ದೀರಿ ಅನ್ನುವುದು ನಿಮ್ಮ ಓದುಗರಾದ ನಮಗೆಲ್ಲ ಗೊತ್ತಿಲ್ಲವೇ?

        ಉತ್ತರ
        • ರಾಕೇಶ್ ಶೆಟ್ಟಿ's avatar
          ಫೆಬ್ರ 7 2012

          ಅವಿನಾಶ್ ಅನ್ನೋದು ನಿಮ್ ಅಪ್ಪ-ಅಮ್ಮ ಇಟ್ಟ ಹೆಸ್ರಾ?ನೀವೆ ಎದೆ ಮುಟ್ಕೊಂಡು ಕೇಳಿ …
          ತಮ್ಮ ಪ್ರತಿಕ್ರಿಯೆಯ ಒಟ್ಟು ಸಾರಾಂಶ ನೋಡಿದ್ರೆ ತಾವು ಆರ್.ಎಸ್.ಎಸ್ ಜನ ಅನ್ನಿಸುತ್ತಿದೆ… ಇಂತ ಆಟವೆಲ್ಲ ನಮ್ಮತ್ರ ಬೇಡ ಸ್ವಾಮಿ… ರಾಹುಲ್ ಗಾಂಧಿಯನ್ನೋ,ಕಾಂಗ್ರೆಸ್ಸನ್ನೋ,ದಳವನ್ನೋ ಪ್ರಶ್ನಿಸಿದಾಕ್ಷಣ ಬಿಜೆಪಿಯನ್ನ ಒಪ್ಪಿದೆ ಅನ್ನಿಸುವ ನಿಮ್ಮ ಮುಗ್ದತೆಗೆ (?) ಏನು ತಾನೇ ಹೇಳಲಿ… ಮಡೆಸ್ನಾನದಲ್ಲಿ ಸ್ವಾಮೀಜಿಗಳು ಬಂದಿದ್ದಾರೆ,ಹಾಗೆ ಹುಡುಕಿ ನೋಡಿ ಯಡ್ಯೂರಪ್ಪನೂ ಸಿಗಬಹುದು ನನ್ನ ಲೇಖನದಲ್ಲಿ… ರಾಷ್ಟ್ರಭಾಷೆಯ ಬಗ್ಗೆ ಬರೆದಾಗ ನಿಮ್ಮಂತ ದೇಶಭಕ್ತರ ಬಗ್ಗೆಯೂ ಬರೆದಿದ್ದೇನೆ…

          ಅಷ್ಟಕ್ಕೂ ಬಿಜೆಪಿಯವನಾದರೂ,ಕಾಂಗ್ರೆಸ್ಸ್ ಬೆಂಬಲಿಗನಾದರೂ ಅದು ದೇಶದ್ರೋಹವೇನಲ್ಲ… ಹಾಗಾಗಿ ಕಿಡಿ ಹಚ್ಚಿ ಖುಷಿ ಪಡುವ ನಿಮ್ಮ ಆಸೆಗೆ ತಣ್ಣೀರೆ ಗತಿ… ಬೇರೆ ಯಾರನ್ನಾದರೂ ಹುಡುಕಿಕೊಳ್ಳಿ…

          ಇನ್ನ ತಾವು ಬಲಪಂಥೀಯರಾಗಿದ್ದಾರೆ ಸಂತೋಷ ಅಲ್ಲೇ ಇರಿ.ನನಗೇ ನಾನು ಏನು ಮಾಡುತಿದ್ದೀನಿ ಅನ್ನುವ ಅರಿವಿದೆ… ಮೊದ್ಲು ಡಬಲ್ ಗೇಮ್ ಆಡುವುದನ್ನ ನಿಲ್ಲಿಸಿ…

          ಉತ್ತರ
          • ಅವಿ's avatar
            ಅವಿ
            ಫೆಬ್ರ 8 2012

            ಇದೇ ಆಧಾರದಲ್ಲಿ ಹೇಳುವುದಾದರೆ ಅದ್ಯಾವುದೋ ಬಳಗ ಬಿಜೆಪಿ ಬಗ್ಗೆ ಬರೆದ್ರೆ ಅವರು ಕಾಂಗ್ರೆಸ್ ನವರು, ನಕಲಿ ಸೆಕ್ಯೂಲರ್ ವಾದಿಗಳು ಅಂತೆಲ್ಲ ಬಾಯಿ ಬಡಿದುಕೊಂಡು ನಿಮಗೇನು ಸಿಗುತ್ತೆ ಶೆಟ್ರೆ? ನಿಮ್ಮ ಒಲವು ಯಾರೆಡೆಗೆ ಅನ್ನುವುದನ್ನು ನೇರವಾಗಿ ಹೇಳಿಕೊಂಡು ರಾಜಕೀಯ ಮಾಡಿ.

            ಉತ್ತರ
            • ರಾಕೇಶ್ ಶೆಟ್ಟಿ's avatar
              ಫೆಬ್ರ 8 2012

              ನಿಮ್ಮ ಬುದ್ದಿಯ ಮಟ್ಟಕ್ಕೆ ನಿಲುಕುವುದು ಕೇವಲ ಬಲ ಮತ್ತು ಎಡ.ಅದರಾಚೆಗೆ ನಿಮಗೆ ನೋಡಲು ಸಾಧ್ಯವಿಲ್ಲ ಅನ್ನುವುದರ ಬಗ್ಗೆ ನಮಗೆ ಖೇದವಿದೆ ಮಿ.ಅವಿನಾಶ್ (ನಕಲಿ ಹೆಸರು)… ಇನ್ನ್ ಆರ್.ಎಸ್.ಎಸ್ ಬಗೆಗಿನ ನಿಮ್ಮ ಹುಸಿ ಆಕ್ರೋಶಕ್ಕೆ ಉತ್ತರ ನೀವೆ ವಾರ ವಾರ ಅಲ್ಲಿಗೆ ಖಾಕಿ ಚಡ್ಡಿ ಹಾಕಿ ಹೋಗ್ತಿರಲ್ಲ ಆಗ ಕೇಳಿ ನೋಡಿ…

              ಹಾಗೇ ಇನ್ನೊಂದು ಮುಖ್ಯವಾದ ಮಾತು… ಬಳಗದ ಜೊತೆಗಿನ ನನ್ನ ವೈಚಾರಿಕ ಭಿನ್ನಭಿಪ್ರಾಯಗಳ ಅವರೆಡೆಗಿನ ನನ್ನ ದ್ವೇಷ ಅಂತ ಅಂದುಕೊಂಡು ಇಬ್ಬರ ನಡುವೆ ತಂದಿಟ್ಟು ಮಜಾ ನೋಡುವ ನಿಮ್ಮ ಬುದ್ದಿಗೆ ನಗು ಬರುತ್ತಿದೆ… ಹೋಗಿ ಬೇರೆ ಯಾರನ್ನಾದರೂ ಹುಡುಕಿಕೊಳ್ಳಿ…

              ಉತ್ತರ
              • ಅವಿ's avatar
                ಅವಿ
                ಫೆಬ್ರ 9 2012

                ನಿಮಗೂ ಅದ್ಯಾವುದೋ ಬಳಗಕ್ಕೂ ತಂದಿಟ್ಟು ನನಗೇನಾಗಬೇಕಿದೆ ಮೈಲಾರಲಿಂಗೇಶ್ವರಾ ! ನನ್ನ ಹೆಸರೇ ನಕಲಿ ಅಂತಿರಲ್ಲ,, ಇನ್ನೇನು ಬರ್ತ್ ಸರ್ಟಿಫಿಕೇಟು, ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಿದ್ದು ಫೋಟೊಸ್ ಕಳಿಹುಸಿಲಾ ಶೆಟ್ರೆ? ನಾನೂ ಹಾಗೇ ಹೇಳ್ತಿನಿ,, ನೀವು ರಾಕೇಶ್ ಶೆಟ್ರೆ ಅಲ್ಲ ಅಂತ.. ,,ಹೇ,,, ಸ್ವಾಮಿ ಸುಮ್ಕೆ ವಿಷ್ಯದ ಬಗ್ಗೆ ಮಾತಾಡಿ.. ಆರ್.ಎಸ್.ಎಸ್ ಖಾಕಿ ಚೆಡ್ಡಿ ಮೇಲಾಣೆ ನಾನು ಅಲ್ಲಿಯವನಲ್ಲ. ಹೋಗಲಿ,, ಕಾಂಗ್ರೆಸ್ಸು, ರಾಹುಲ್ ಗಾಂಧಿ, ಜೆಡಿಎಸ್ ಕಂಡ್ರೆ ಕುದಿಯುವಷ್ಟು ತೀವ್ರವಾಗಿ ನಿಮ್ಮ ರಕ್ತ ಬಿಜೆಪಿಯವರನ್ನ ಕಂಡ್ರೆ ಯಾಕೆ ತಣ್ಣಗಾಗುತ್ತೆ? ಕಳೆದ ನಾಲ್ಕು ವರ್ಷದಲ್ಲಿ ಈ ಸರ್ಕಾರ ಮಾಡಿದ್ದೇನು ಶೆಟ್ರೆ ಚುನಾವಣೆ, ಮರುಚುನಾವಣೆ, ಆಪರೇಶನ್ ಕಮಲ, ಸೆಕ್ಸ್ ಸ್ಕ್ಯಾಂಡಲ್ಲು, ರೆಸಾರ್ಟ್ ರಾಜಕೀಯ, ಗುಂಪುಗಾರಿಕೆ,, ಇದನ್ನೆಲ್ಲ ತಾವು ಎಷ್ಟು ಪ್ರಶ್ನೆ ಮಾಡಿದ್ದೀರಿ? ರಾಹುಲ್ ಗಾಂಧಿ ಅನ್ನುವ ತೋಪು ನಾಯಕನ ಬಗ್ಗೆ ಇರುವ ಬರುವ ಉರಿನೆಲ್ಲ ತೋರಿಸುವ ನೀವು ಕರ್ನಾಟಕದಲ್ಲಿ ಆಡಳಿತ ಮಾಡುತ್ತಾ ಇರುವ ಪಕ್ಷದ ಬಗ್ಗೆ ಎಷ್ಟು ಕಿತಾ ಬರೆದಿದ್ದಿರಾ ಶೆಟ್ರೆ.. ನೀವು ನಿಜವಾಗಲೂ ಯಾವುದೇ ರಾಜಕೀಯ ಸಿಧ್ದಾಂತಕ್ಕೆ ಹೊರತಾಗಿರುವವರು ಆಗಿದ್ರೆ ನನ್ನ ಈ ಕಮೆಂಟ್ ಅನ್ನು ಬಿಡ್ತಿರಾ..

                ಉತ್ತರ
                • ರಾಕೇಶ್ ಶೆಟ್ಟಿ's avatar
                  ಫೆಬ್ರ 9 2012

                  ನನಗೆ ಯಾವ ವಿಷಯದ ಬಗ್ಗೆ ಬರೆಯಬೇಕು ಅನ್ನಿಸುತ್ತದೋ ಅದನ್ನೇ ನಾನು ಬರ್ಯೋದು…ನನ್ಗ್ಯಾವನ ಹಂಗೂ ಇಲ್ಲ….
                  ನಿಮ್ಮ ಬರ್ತ್ ಸರ್ಟಿಫ಼ಿಕೇಟ್ ನಲ್ಲಿರೋ ಹೆಸರು ಏನು ಅನ್ನುವುದು ನನಗೆ ಗೊತ್ತಿದೆ… ಬೇಕು ಅಂದರೆ ನಿಲುಮೆಯ ಓದುಗರಿಗೂ ಸಾಕ್ಷಿ ಸಮೇತ ಹೇಳಬಲ್ಲೆ… ಹೇಳಬೇಕಾ? ಸುಮ್ಮನೇ ಮುಖ ಕೆಡಿಸಿಕೊಳ್ಳೋ ಬದಲು ವ್ಯರ್ಥ ಪ್ರಲಾಪ ನಿಲ್ಲಿಸಿ…

                  ಉತ್ತರ
                  • ಅವಿ's avatar
                    ಅವಿ
                    ಫೆಬ್ರ 10 2012

                    ಅಯ್ಯೋ,, ತುಂಬಾ ಹೆದರಿಸುತ್ತಿರಪ್ಪ ನೀವು.. ನನಗೆ ಹೆದರಿಕೆ ಆಗ್ತಿದೆ.. ನಿಮ್ಮ ಸುದ್ದಿನೇ ಬೇಡಪ್ಪ..

                    ಉತ್ತರ
                    • ರಾಕೇಶ್ ಶೆಟ್ಟಿ's avatar
                      ಫೆಬ್ರ 10 2012

                      ಸುಮ್ಮನೆ ಹೆದರಿಸಿದ್ರೆ ಹೆದರಿ ಬಿಟ್ರಾ? ಇದಕ್ಕೆ ಅನ್ನೋದು ಕಳ್ಳನ ಮನಸ್ಸು ಹುಳ್ಳಗೆ ಅಂತಾ 🙂

                    • ಅವಿ's avatar
                      ಅವಿ
                      ಫೆಬ್ರ 13 2012

                      ಕರೆಕ್ಟು ಶೆಟ್ರೆ.. ಅದಕ್ಕೆ ಅಲ್ವೇ ತಾವು ತಮ್ಮ ಒಲವು ಬಿಜೆಪಿಯಾದರೂ ಸುಮ್ನೆ ಎಲ್ಲವನ್ನು ಬ್ಯಾಲೆನ್ಸು ಮಾಡುವಂತೆ ನಾಟಕ ಆಡುವುದು.. 🙂

  2. Pungidaasa's avatar
    Pungidaasa
    ಫೆಬ್ರ 6 2012

    ಉತ್ತಮವಾದ ಲೇಖನ ರಾಕೇಶ!!

    ಉತ್ತರ
  3. ಅವಿ's avatar
    ಅವಿ
    ಫೆಬ್ರ 6 2012

    ನಿಮಗೆ ಬೇಕಿರುವ ಕಮೆಂಟ್ಸ್ ಮಾತ್ರ ಬಿಟ್ಟು ಕೊಳ್ಳುವ ನೀವು ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಕತೆ ಕುಯ್ಯೋದು ಚೆನ್ನಾಗಿದೆ 🙂 ನನ್ನ ಹಳೆ ಕಮೆಂಟ್ ಅಲ್ಲಿ ಅಂತದ್ದೇನಿತ್ತು ಅಂತ ಅಳಿಸಿ ಹಾಕಿದ್ದೀರಿ? ನಾನೊಬ್ಬ ಸಾಮಾನ್ಯ ಮನುಷ್ಯ, ಯಾರ ಕಡೆಯವನು ಅಲ್ಲ. ನಿಮ್ಮ ಶಕ್ತಿಯನ್ನೆಲ್ಲ ಬರೀ ಇನ್ನೊಬ್ಬರ ತಪ್ಪು ಹುಡುಕುವುದರಲ್ಲಿ, ಅದ್ಯಾಕೆ ಮಾಡಿಲ್ಲ, ಇದ್ಯಾಕೆ ಮಾಡಿಲ್ಲ, ಹೀಗೆ ಮಾಡಿದ್ದು ಸರಿನಾ, ಹಾಗೆ ಮಾಡಿದ್ದು ಸರಿನಾ ಅಂತ ಕಳೆದು ಹೋದರೆ ಏನು ಬಂತು? ನಿಮಗೆ ಸಮಾಜದ ಸುತ್ತ ಇನ್ನೂ ಹಲವು ಕೆಲಸ ಮಾಡುವ ಶಕ್ತಿ ಇದೆ.. ಬರೀ ಅವರಿವರ ಬಗ್ಗೆ ಮಾತನಾಡುವುದರಲ್ಲೇ ಕಳೆದರೆ ಹೋದ ದಿನಗಳು ಮತ್ತೆ ಸಿಗಲ್ಲ ಶೆಟ್ರೆ..

    ಉತ್ತರ
    • ರಾಕೇಶ್ ಶೆಟ್ಟಿ's avatar
      ಫೆಬ್ರ 6 2012

      ಅಪ್ಪ-ಅಮ್ಮ ಇಟ್ಟ ಹೆಸರು ಹೇಳಲು ಹಿಂಜರಿಯುವ ಅನಾಥ ಶಿಶುಗಳೆಲ್ಲ ನನಗೆ ಬುದ್ದಿ ಹೇಳುವಂತಾಯ್ತು…!

      ಸರಿ ಮಹಾಸ್ವಾಮಿ.ಸತ್ಯ ಕಹಿ ಅಲ್ವೇ… ಮೊದ್ಲು ದಿನಕ್ಕೊಂದು ಹೆಸರಲ್ಲಿ ಬರ್ಯೋದ್ ಬಿಟ್ಟು ನಿಮ್ ಅಪ್ಪ-ಅಮ್ಮ ಇಟ್ಟ ಹೆಸ್ರು ಹೇಳೋ ಧೈರ್ಯ ತೋರ್ಸಿ ಆಮೇಲೆ ನನ್ ಬಗ್ಗೆ ಮಾತನಾಡಿ….

      ಇನ್ನ ಬಾಯಿಗೆ ಬಂದದ್ದನ್ನೆಲ್ಲ ಸಾರ್ವಜನಿಕ ವೇದಿಕೆಯಲ್ಲಿ ಬರೆದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನಿಮ್ಮ ಬಗ್ಗೆ ನಗು ಬರುತ್ತಿದೆ….

      ಉತ್ತರ
      • ಅವಿ's avatar
        ಅವಿ
        ಫೆಬ್ರ 7 2012

        ನನ್ನ ಹೆಸರು ಅವಿನಾಶ್ ಎಂದು ಬರೆದಿದ್ದೇನಲ್ಲ. ಇನ್ನೇನು ನಿಮ್ಮ ಮಂಗಳೂರಿನ ಯಾವುದಾದರೂ ಭಟ್ಟರಿಂದ ಬರೆಸಿದ ಜಾತಕ ಅಂಟಿಸಬೇಕಿತ್ತೇ? ಬಾಯಿಗೆ ಬಂದದ್ದು ಏನು ಬರೆದಿದ್ದೇನೆ ಸ್ವಾಮಿ? ಈ ಹಿಪೊಕ್ರಸಿ ಬಿಟ್ಟು, ನಿಮ್ಮ ಬಿಜೆಪಿ ಓಲವನ್ನು ಹೆದರದೇ ಹೇಳಿಕೊಂಡು ರಾಜಕೀಯ ಮಾಡಿ. ನನ್ನ ಹೃದಯಪೂರ್ವಕ ಶುಭಾಶಯಗಳು ತಮ್ಮೊಂದಿಗಿವೆ.

        ಉತ್ತರ
  4. ಅವಿ's avatar
    ಅವಿ
    ಫೆಬ್ರ 6 2012

    ಕಮೆಂಟ್ಸ್ ಮಾಡರೇಶನ್ ಬೇರೆ ಶುರುವಾಗಿದೆ ನಮ್ಮ ನಿಲುಮೆಯಲ್ಲಿ.. ಏನಿದು.. ನಿಮಗೆ ಖುಷಿಯಾಗುವುದನ್ನು ಮಾತ್ರ ಹೇಳಬೇಕು ಅಂತಲಾ?

    ಉತ್ತರ
  5. Ganesha Belthangady's avatar
    ಫೆಬ್ರ 6 2012

    @ರಾಕೇಶ್ ಶೆಟ್ಟಿ.. Lekhana thumba chennagide. Nishpakshapaatha niluvina, Vasthavika sathyagalannu chennagi niroopisiddeeri.

    ಉತ್ತರ
  6. Kumar's avatar
    ಫೆಬ್ರ 6 2012

    ಸತ್ಯವನ್ನು ನೇರವಾಗಿ ತಿಳಿಸಿರುವ ಲೇಖನ.
    ಆರೆಸ್ಸೆಸ್ಸಿನ ಕುರಿತಾಗಿ ಟೀಕಿಸುವುದು ಬಹಳ ಸುಲಭ.
    ಆದರೆ, ಆರೆಸ್ಸೆಸ್ಸಿನಂತಹ ಸಂಘಟನೆ ಕಟ್ಟಲಿ, ಸೇವಾ ಕಾರ್ಯ ನಡೆಸಲಿ, ರಾಷ್ಟ್ರಭಕ್ತರನ್ನು ಹುಟ್ಟಿಹಾಕಲಿ……ಟೀಕಿಸುವವರಿಗೆ ಇದೆಲ್ಲಾ ಬೇಕಾಗಿಲ್ಲ!

    ಉತ್ತರ
    • Pungidaasa's avatar
      Pungidaasa
      ಫೆಬ್ರ 7 2012

      ರಾಕೇಶ,
      ಸತ್ಯವಾದ ಮಾತು. RSS ನಂತಹ ಸಂಘಟನೆ ಯ ಹತ್ತಿರವೂ ಇರದ ಸಂಘಟನೆ ಕಟ್ಟಲು ಹೋಗಿ ಬುಡ ಸುಟ್ಟ ಬೆಕ್ಕಿನಂತಾಗಿ, ಈಗ ಅದರ ಬಗ್ಗೆ ಟೀಕಿಸಿ ತಮ್ಮ ಚಟ ತೀರಿಸ್ಕೊಳ್ಳುತ್ತಿದ್ದಾರೆ. ಇವರ ಗುಂಪಿನ ಸದಸ್ಯರನೇಕರು, RSS ನಲ್ಲಿ ಇದ್ದವರೆ!! ಶಾಖೆಯಲ್ಲಿ ಚಡ್ಡಿ ಧರಿಸಿ ಭಾಗವಹಿಸಿದವರೆ!! ಒಂದಿಬ್ಬರು ಮುಖ್ಯಶಿಕ್ಷಕರಾಗಿ ಕೂಡ ಅನುಭವ ಹೊಂದಿದವರು! ಈಗ ವಘೇಲನ ಹಾದಿ ತುಳಿಯಲು ಪ್ರಯತ್ನ ಪಡುತ್ತಿರುವವರು!!

      ಉತ್ತರ
  7. ದೇಶ ಮಿತ್ರ's avatar
    ದೇಶ ಮಿತ್ರ
    ಫೆಬ್ರ 7 2012

    ಮಿಸ್ಟರ್ ಪುಂಗಿ.. ನಿಮ್ಮ ಮಾತು ಸೂಪರ್ ಕಣ್ರೀ. ಇವರು ಅಲ್ಲೂ ಏನು ಸಿಗಲ್ಲ್ ಅಂತ ಗೊತ್ತಾದ್ರೆ ಅಲ್ಲಿಂದನೂ ಜಾಗ ಖಾಲಿ ಮಾಡ್ತಾರೆ. ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತ ಅರೆಸ್ಎಸ್ಸ್ ಗೆ ಬರುತ್ತವೆ. ಅದೇನೋ ಕನ್ನಡದಲ್ಲಿ ಒಂದು ಗಾದೆ ಇದೆಯಲ್ಲ.. ಆದ್ಯಾರದ್ದೋ ಕಾಲು ಹಸೆಮಣೆ ಮೇಲೂ ನಿಲ್ಲಲ್ಲ ಅಂತ.

    ದೇಶ ಮಿತ್ರ

    ಉತ್ತರ
  8. ಅವಿ's avatar
    ಅವಿ
    ಫೆಬ್ರ 8 2012

    ಸಂಸ್ಕೃತಿಯ ರಕ್ಷಕರು ವಿಧಾನಸಭೆಯಲ್ಲಿ 18 ಜಿಲ್ಲೆಯಲ್ಲಿರುವ ಬರದ ಸ್ಥಿತಿಯ ಬಗ್ಗೆ ಚರ್ಚೆ ನಡೆವಾಗ ಕಾಮಕೇಳಿಯ ದೃಶ್ಯಾವಳಿಯನ್ನು ಆನಂದಿಸುತ್ತಿದ್ದರು. ಅಧಿಕಾರಕ್ಕಾಗಿ ಇಂತಹದ್ದನ್ನೆಲ್ಲ ತಡೆದುಕೊಂಡಿರುವ ಆರ್.ಎಸ್.ಎಸ್ ಗೆ ಸಂಸ್ಕೃತಿಯ ಪಾಠ ಮಾಡುವ ನೈತಿಕತೆ ಇದೆಯೇ? ಯಡಿಯೂರಪ್ಪನವರ ಕಾಲದಲ್ಲಿ ಆರ್.ಎಸ್.ಎಸ್ ನ ಸಹ ಸಂಘಗಳು ಸರ್ಕಾರದಿಂದ ಮಾಡಿಕೊಂಡ ಆಸ್ತಿಯ ಬಗ್ಗೆ ಬಂದ ವರದಿಗಳ ಬಗ್ಗೆ ಏನಂತೀರಿ ಶೆಟ್ರೆ?

    ಉತ್ತರ

Leave a reply to govinda ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments