ಕನ್ನಡಿಗರಿಗೆ ಮೋಸ ಮಾಡಿದ ಸಿಸಿಎಲ್ ಆಡಳಿತ ಮಂಡಳಿ !?
-ನಿತಿನ್ ರೈ ಕುಕ್ಕುವಳ್ಳಿ
ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಸರಿಸಾಟಿಯಾಗೆ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕೊನೆಯ ಹಂತದಲ್ಲಿ ವಿವಾದದ ಗೂಡಾಗಿ ಪರಿವರ್ತನೆಗೊಂಡು ವಿವಾದದಲ್ಲೇ ಅಂತ್ಯಗೊಂಡಿತು.
ಫೈನಲ್ ತನಕ ಅತ್ಯಂತ ಶುದ್ಧವಾಗಿ ನಡೆದುಕೊಂಡು ಬಂದ ಸಿಸಿಎಲ್ ಪಂದ್ಯಾವಳಿ ಫೈನಲ್ ನಲ್ಲಿ ಮಾತ್ರ ಆಡಳಿತ ಮಂಡಳಿ ನಡೆದುಕೊಂಡ ರೀತಿ ಕನ್ನಡಿಗರನ್ನ ಸೋಲಿಸಲು ಪೂರ್ವ ತಯಾರಿ ಮಾಡಿದಂತಿತ್ತು. ಪಂದ್ಯ ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆನೇ ಇದಕ್ಕೆಲ್ಲ ಸಿದ್ದತೆಗಳನ್ನ ಆಡಳಿತ ಮಂಡಳಿ ಮಾಡಿದಂತಿತ್ತು. ಪಂದ್ಯ ಸರಿಯಾದ ಸಮಯಕ್ಕಿಂತ ಸುಮಾರು ಎರಡು ತಾಸುಗಳಷ್ಟು ತಡವಾಗಿ ಪ್ರಾರಂಭಗೊಂಡದ್ದು, ಸುದೀಪ್ ಮತ್ತು ತಂಡ ಸರಿಯಾದ ಹೊತ್ತಿಗೆ ಬಂದು ಮೈದಾನದಲ್ಲಿ ಚೆನ್ನೈ ರೈನೋಸ್ ತಂಡದ ಆಟಗಾರರಿಗೆ ಕಾದು ಕುಳಿತು ಸುಸ್ತಾಗಿದ್ದರು. ಚೆನ್ನೈ ತಂಡ ಮೈದಾನ ಪ್ರವೇಶ ಮಾಡಿದ್ದು ಎರಡು ಗಂಟೆ ತಡವಾಗಿ ಇದರ ಬಗ್ಗೆ ಆಡಳಿತ ಮಂಡಳಿ ಕಿಂಚೀತು ಚಕಾರ ಎತ್ತಲಿಲ್ಲ ಯಾಕೆ ?, ಪಂದ್ಯ ಆರಂಭದ ನಂತರ ತಮಿಳು ನಟರ ತಂಡ ಪ್ರತಿ ಹಂತದಲ್ಲೂ ಕರ್ನಾಟಕದ ನಟರ ವಿರುದ್ದ ಜಿದ್ದಾಜಿದ್ದಿಗೆ ಬಿದ್ದಿತ್ತು. ಗುಂಪು ಸೇರಿ ಅಂಪೈರ್ ಗಳ ಮೇಲೆ ಒತ್ತಡ ತರುತ್ತಿದ್ದರು. ಸಕ್ರಮವಲ್ಲದ ರನೌಟ್ ತೀರ್ಪನ್ನು ಅಂಪೈರ್ ಗಳಿಂದ ಹೊರಡಿಸಿದ ನಂತರ, ಡೆಡ್ ಬಾಲ್ ಅನ್ನೋ ತೀರ್ಪಿಗೂ ಅವರು ಅವಕಾಶ ನೀಡಲಿಲ್ಲ.
ಎಲ್ಲಾ ವಿವಾದಗಳು ಗರಿಬಿಚ್ಚಿದ್ದು ಪ್ರಶಸ್ತಿ ವಿತರಣ ಸಮಾರಂಭದಲ್ಲಿ : ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಮೊದಲು ರನ್ನರ್-ಅಪ್ ಪ್ರಶಸ್ತಿ ನೀಡಲಾಗುತ್ತದೆ. ನಂತರ ಗೆದ್ದ ತಂಡಕ್ಕೆ ಪ್ರಶಸ್ತಿ. ಆದರೆ ಇಲ್ಲಿ ನಡೆದ್ದದ್ದು ನಾಟಕೀಯ ಪ್ರಸಂಗ. ಸಿಸಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಗೆದ್ದವರಿಗೆ ಪ್ರಶಸ್ತಿ ನೀಡಲಾಯಿತು. ರನ್ನರ್ ಅಪ್ ಗೆ ಪ್ರಶಸ್ತಿ ಪ್ರಧಾನ ಮಾಡಲು ನಂತರ ಹೊರಟರು ಕೊನೆಗೆ ಅದನ್ನೂ ನೀಡಲಿಲ್ಲ. ಆ ಹೊತ್ತಿಗಾಗಲೇ ನೇರಪ್ರಸಾರವಾಗುತ್ತಿದ್ದ ಟಿವಿ ಪ್ರಸಾರವನ್ನ ಬೇರೆಡೆಗೆ ತಿರುಗಿಸಿದರು. ಇದು ಚೆನ್ನೈ ರೈನೋಸ್ ಮತ್ತು ಸಿಸಿಎಲ್ ಆಡಳಿತದ ಕುತಂತ್ರ ಅನ್ನೋದಕ್ಕೆ ಹಿಡಿದ ಕನ್ನಡಿಯಂತಿತ್ತು. ಕರ್ನಾಟಕ ತಂಡವನ್ನ ಹೇಗಾದರೂ ಸೋಲಿಸಬೇಕೆಂದು ಸಿಸಿಎಲ್ ಆಡಳಿತ ಮಂಡಳಿ ಪಣ ತೊಟ್ತಂತಿತ್ತು.
ಇನ್ನೊಂದು ನಾಚಿಕೆಗೇಡಿನ ಪ್ರಸಂಗ ಅಂದರೆ “ಸರಣಿ ಶ್ರೇಷ್ಠ” ಪ್ರಶಸ್ತಿಯನ್ನ ಸಿಸಿಎಲ್ ಆಡಳಿತ ಮಂಡಳಿ ವಿತರಣೆ ಮಾಡದೆ ಇರುವಂತದ್ದು. ಅದು ಖಂಡಿತವಾಗಿಯೂ ಕರ್ನಾಟಕ ತಂಡದ ರಾಜೀವ್ ಪಾಲಾಗುವುದಿತ್ತು. ಕೊನೆಯ ಘಟ್ಟದಲ್ಲಿ ಅದನ್ನ ಕೂಡ ಸಿಸಿಎಲ್ ಆಡಳಿತ ಮಂಡಳಿ ವಿತರಣೆ ಮಾಡಲಿಲ್ಲ.
ಕರ್ನಾಟಕ ತಂಡದ ಬೆಂಬಲಕ್ಕೆ ನಿಂತ ಸುನಿಲ್ ಶೆಟ್ಟಿ, ಸೋಹೈಲ್ ಖಾನ್ : ಚೆನ್ನೈ ತಂಡದ ವರ್ತನೆ ಹಾಗು ಸಿಸಿಎಲ್ ಆಡಳಿತ ಮಂಡಳಿಯ ವರ್ತನೆ ಯಾರಿಗೂ ಸರಿಯೆನಿಸಲಿಲ್ಲ. ಮುಂಬೈ ಹಿರೋಸ್ ತಂಡದ ನಾಯಕ ಸುನಿಲ್ ಶೆಟ್ಟಿ ಹಾಗು ಸೋಹೈಲ್ ಖಾನ್ ಕರ್ನಾಟಕ ತಂಡದ ಬೆಂಬಲಕ್ಕೆ ನಿಂತರು. ಪ್ರಶಸ್ತಿ ವಿತರಣ ಸಮಾರಂಭವನ್ನ ಅವರು ಬಹಿಷ್ಕರಿಸಿದರು. ಸಿಸಿಎಲ್ ಆಡಳಿತ ಮಂಡಳಿಗೆ ಬೇಕಿದ್ದದ್ದು ಚೆನ್ನೈ ರೈನೋಸ್ ತಂಡ ಪ್ರಶಸ್ತಿ ಗೆಲ್ಲಬೇಕು ಅಷ್ಟೇ, ಅದಕ್ಕೆ ಕನ್ನಡ ನಾಡಿನ ಹಣ ಅಷ್ಟೇ ಬೇಕಿದ್ದದ್ದು, ಕನ್ನಡಿಗರಿಗೆ ಪ್ರಶಸ್ತಿ ಸಿಗುವಂತದ್ದು ಬೇಕಿರಲಿಲ್ಲ. ಅವರಿಗೆ ಕರ್ನಾಟಕ ಬುಲ್ಡೋಜರ್ಸ್ ಮಾಲಕ ಅಶೋಕ್ ಖೇಣಿಯವರ ದುಡ್ಡು ಮಾತ್ರ ಬೇಕಿದ್ದದ್ದು. ಪಂದ್ಯ ಮುಗಿದ ನಂತರ ಚೆನ್ನೈ ತಂಡದ ಕೆಲವರು ಕರ್ನಾಟಕ ನಟಿಮಣಿಯರ ಹಾಗು ಆಟಗಾರರ ಸನಿಹಕ್ಕೆ ಬಂದು ಮಿಡ್ಲ್ ಫಿಂಗರ್ ತೋರಿಸಿ ಅಸಭ್ಯವಾಗಿ ನಡೆದುಕೊಂಡರು. ಇಷ್ಟೆಲ್ಲಾ ವಿವಾದ ನಡೆದರೂ ಸಿಸಿಎಲ್ ಆಡಳಿತ ಮಂಡಳಿ ಗಪ್ ಚುಪ್ ಎನ್ನುತ್ತಿಲ್ಲ, ಕಾರಣ ಹುಡುಕುವವರು ಯಾರು ?. ಪ್ರತಿಭಟಿಸುವವರು ಯಾರು ?
* * * * * * * *
ಚಿತ್ರಕೃಪೆ : ಅಂತರ್ಜಾಲ





ಇನ್ನೆಂತ ಅಸಹ್ಯಕರವಾದ ಆಯೋಜಕರವರು, ಅಷ್ಟು ತೆವಲಿದ್ದರೆ ಯಾವುದೂ ಪಂದ್ಯವಾಡಿಸದೆ, ಚೆನ್ನ್ಯೆನವರಿಗೆ ಪ್ರಶಸ್ತಿ ಕೊಟ್ಟು ಖುಷಿಪಡಬೇಕಿತ್ತು. ಅಶೋಕ್ ಖೇಣಿಯ ಖರ್ಚು, ಕನ್ನಡಿಗರ ಸ್ಥಳ, ಸಮಯ ಇನ್ಯಾವುದಾದರೂ ಒಳ್ಳೆಯ ಕೆಲಸಕ್ಕೆ ಮೀಸಲಾಗುತ್ತಿತ್ತು. ಸಿನಿಮಾ ತಾರೆಯರು ಒಂದಷ್ಟು ಚಿತ್ರಗಳ ಶೂಟಿಂಗಳಾನ್ನಾದರೂ ಮುಗಿಸಿಕೊಂಡು ಕನ್ನಡ ಪ್ರೇಕ್ಷಕರಿಗೆ ಖುಷಿನೀಡುತ್ತಿದ್ದರು. ಡರ್ಟಿ ಸಿಸಿಎಲ್ ಪಾಲಿಟಿಕ್ಸ್.
ಖಂಡಿತ ಹೌದು +ಅರವಿಂದ್
ಸಿ.ಸಿ.ಎಲ್. ನಿಂದ ಹೊರಬರುವುದೇ ಲೇಸು.. ಆಗಲಾದರೂ ಬುದ್ದಿ ಬಂದೀತು
ಕ್ರಿಕೆಟ್ ಹುಚ್ಚರಿಗೆ ಈಗಲಾದರೂ ಬುದ್ಧಿ ಬರುತ್ತಾ ಅಂತ ನೋಡಬೇಕು .
ನಂದೀಶ್
ನಿಲುಮೆ ಅಂಗಳದಲ್ಲಿ ನಾನು ಕಂಡ ಅತ್ಯಂತ ಸ್ವಚ್ಛ ಹಾಗು ಅತ್ಯುತ್ತಮ ಲೇಖನ ……….. ಕನ್ನಡಿಗರಿಗೆ ಅನ್ಯಾಯ ಅದಾಗ ದ್ವನಿ ಎತ್ತುವ ಇಂತ ಲೇಖಕರು ನಮ್ಮ ಮುಂದೆ ಇದ್ದಾರೆ ಅನ್ನೋದೇ ಸಂತೋಷದ ವಿಚಾರ …
ಅತ್ಯುತ್ತಮ ಅಂದ್ರೆ ಸರಿ ಸ್ವಾಮಿ.ಅದೇನದು “ಸ್ವಚ್ಚ?” ಸ್ವಲ್ಪ ವಿವರಿಸಿ ಪುಣ್ಯ ಕಟ್ಟಿಕೊಳ್ಳಿ
ರವಿ ಅವರ ಮಾತು ೧೦೦ ಕ್ಕೆ ೧೦೦ ಸರಿಯಾಗಿದೆ , ರಾಜಕೀಯ ಗುಂಗಿನಲ್ಲಿ ಇದ್ದ ನಿಲುಮೆ ಓದುಗನಿಗೆ ಮರುಭೂಮಿಯಲ್ಲಿ “ನೀರು ಸಿಕ್ಕಂತೆ ಸಿಕ್ಕಿದೆ ಈ ಲೇಖನ … . ರಾಕೇಶ್ ಶೆಟ್ಟಿ ಯವರೇ ….. ನಿಜ ಹೇಳಬೇಕು ಅಂದ್ರೆ ನನಗೆ ಸಿಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಇಷ್ಟೊಂದು ಅನ್ಯಾಯ ಆಗಿದೆ ಅಂತ ಈ ಲೇಖನ ಓದಿದ ನಂತರವೇ ಗೊತ್ತಾಗಿದ್ದು .. ಫೈನಲ್ ನಲ್ಲಿ ಪ್ರಶಸ್ತಿ ವಿತರಣೆ ನಡೆಯುವ ಸಂದರ್ಬ ಟಿವಿ ಚಾನೆಲ್ ನವರು ತಮ್ಮ ಪ್ರಸಾರವನ್ನ ಬೇರೆಕಡೆ ತಿರುಗಿಸಿ ದ್ವಂದ್ವ ಸೃಷ್ಟಿಸಿದ್ದರು …… ಆದರೆ ಈ ಲೇಖನ “ಚಕ್ರ ವ್ಯೂಹ ” ಪ್ರವೇಶ ಮಾಡಿ ಸತ್ಯ ವನ್ನ ಹೊರ ತಂದಿದೆ …. ಅಭಿನಂದನೆಗಳು …… ಲೇಖಕರಿಗೆ ……..
Rajakeeyavillada bahalashtu lekhanagalive nishanth, dayavittu odi pratikrayisi 🙂 baredavarige protsaha needidantaguttade 🙂
ಇದು ಒಳ್ಳೆಯ ಲೇಖನ ಅನ್ನುವುದಕ್ಕೆ ಸಹಮತವಿದೆ..ಆದರೆ ಸ್ವಚ್ಚ ಅಂದಿರಲ್ಲ ಅದೇಕೆ ಅನ್ನುವುದು ನನ್ನ ಪ್ರಶ್ನೆಯಾಗಿತ್ತು… ನಿಮಗೆ ರಾಜಕಾರಣ ಇಷ್ಟವಿಲ್ಲದಿದ್ದರೆ ಅಡ್ಡಿ ಇಲ್ಲ.ಪ್ರಚಲಿತ ವಿಷ್ಯಗಳ ಬಗ್ಗೆ ಹೆಚ್ಚು ಲೇಖನ ಬರುವುದು ಸಾಮಾನ್ಯ ಅಲ್ಲವೇ?ಆದರೆ ನಿಲುಮೆ ಎಂದಿಗೂ ಇಂತದ್ದೇ ಲೇಖನಗಳೀಗೆ ಬ್ರಾಂಡ್ ಆಗಿಲ್ಲ ನಿಶಾಂತ್.
AAvi anna nimag yake hage kansutto gottaglilla, nilumeyalli ollolle sanna kathegalive, kavanagalu ive, adannu swalpa nodi 🙂 🙂 vivadatmaka lekhanagalige antane kayta iddira ansutte 😉 🙂
ಬ್ರಷ್ಟಾಚಾರ ವಿರುಧ್ಹ ದ್ವನಿ ಎತ್ತಿದ ಅಣ್ಣ ಹಜಾರೆ ಅವರಿಗೆ ಬೆಂಗಳೂರಿನ ಜನ ನೀಡಿದಂತ ಬೆಂಬಲ ಅಸಾಧಾರಣ … ಆದರೆ ನಮ್ಮ ತನಕ್ಕೆ , ನಮ್ಮ ನಾಡಿಗೆ ಅನ್ಯಾಯ ಅದಾಗ ಪ್ರತಿಭಟನೆ ಮಾಡಿದವರೆಷ್ಟು ಜನ ? ಕನ್ನಡ ಮಣ್ಣಿನ ರಕ್ಷಣೆ ಹೊತ್ತ ಸಂಘ ಸಂಸ್ಥೆಗಳ ನಾಯಕರು ಎಲ್ಲಿ ? ಇವರಿಗೆ ಗೊತ್ತಿರುವನ್ತದ್ದು ಮಸಿ ಎರಚುದು ಅಷ್ಟೇ …. ಜೈ ಕರ್ನಾಟಕ ,ಕರ್ನಾಟಕ ರಕ್ಷಣಾ ವೆಧಿಕೆ , ಮುಂತಾದ ರಕ್ಷಣಾ ಕವಚಗಳು ಎಲ್ಲಿ ಹೋಗಿವೆ ??????????????????…ಇವರ ಕೆಲಸ ಪ್ರೇಮಿಗಳಿಗೆ ವಿವಾಹ ಮಾಡುವಂತದ್ದು ಇತ್ಯಾದಿ ಇತ್ಯಾದಿ ಆದರೆ ನಮ್ಮ ಮಣ್ಣಿಗೆ ಅನ್ಯಾಯ ಅದಾಗ ಈ ನಮ್ಮ ರಕ್ಷಣಾ ಕವಚ ಕಾಣ ಸಿಗುವುದಿಲ್ಲ .. ಕರಣ ಕೊಡಬಹುದೇ ಯಾಕೆ ಈ ಥರ ???????
ಸಿನೆಮಾ ಮಂದಿಯ ಕ್ರಿಕೆಟ್ ತಂಡಕ್ಕಷ್ಟೇ ಮೋಸವಾಗಿದ್ದು… ನಮ್ಮ ಮಣ್ಣಿಗಲ್ಲ… ಬೇಕಾದ್ರೆ ಇಡಿ ಚಿತ್ರರಂಗಕ್ಕೆ ಬಾಯಿಬಡಿದುಕೊಳ್ಳಲು ಹೇಳಿ.ಜನ ಯಾಕೆ ಬರ್ಬೇಕು? ಇವ್ರೇನು ಆವತ್ತು ಫ಼್ರೀಡಂ ಪಾರ್ಕಿಗೆ ಪರಿವಾರ ಸಮೇತ ಚಿತ್ರರಂಗಕ್ಕೆ ರಜೆ ಹಾಕಿ ಬಂದು ಉಪವಾಸ ಕೂತಿದ್ರಾ?