ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2012

1

ಮುಳುಗದಿರು ಕರುವೇ!

‍ನಿಲುಮೆ ಮೂಲಕ

-ಪುಷ್ಪರಾಜ್ ಚೌಟ

ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ

ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!

ಮುಂಜಾನೆಯ ಹೊಂಗಿರಣದ ಹಿತವ ಉಂಡು
ಕಣ್ಣು ತಂಪುಗೊಳಿಸಲು ಬರದದಕೆ
ಅಲ್ಲಿರಲಿಲ್ಲ ಹುಲ್ಲ ಹೊದಿಕೆಯ ಮೈದಾನದೊಳಗೆ
ಕಣ್ಣರಳಿಸಿ ಸವಿಯ ಉಣಬರದದಕೆ!

ಬರಡು ಆಲದ ಬುಡದ ಬಾವಿಯಲಿ ಇಣುಕಿದೆ
ಇಲ್ಲ, ಸುಳಿವಿಲ್ಲ ಕಲ್ಲು ಮುಳ್ಳಿನ ಕಾಡು ದಾರಿಯಲೂ
ಎತ್ತ ಓಡಿದೆ? ಅದೆಷ್ಟೂ ದೂರ? ಒಂಟಿಯದು
ನಿನ್ನೆ ಹುಟ್ಟಿದಷ್ಟೇ ಇನ್ನೂ ಬಲಿತಿಲ್ಲ ಹಲ್ಲುಗಳು!

ಮೊನ್ನೆ ಗರ್ಭದೊಳಗಿತ್ತು, ಇಂದು ಜಗದೊಳಗೆ
ಹೊಟ್ಟೆಯೊಳಗೆ ಕಾಲು ಅಲ್ಲಾಡಿಸುತ್ತಿರಲಿಲ್ಲ
ಇಂದು ಕೈಕಾಲು ನೆಗೆದಿದೆ, ಬಾಲ ನಿಗುರಿದೆ
ಓಟ, ಹರಿವ ನದಿಯ ಮೇಲೆ, ನೀರು ಬಂಡೆಯೇ?
ಮುಳುಗದಿರಲಷ್ಟೇ ಸಾಕು, ಕರಗದಿರಲಿ ಉತ್ಸುಕ!

ಚಿತ್ರಕೃಪೆ: en.wikipedia.org

Read more from ಕವನಗಳು
1 ಟಿಪ್ಪಣಿ Post a comment
  1. dhananjay madikeri's avatar
    ಫೆಬ್ರ 24 2012

    ನಿಮ್ಮ ಕವನ ಚೆನ್ನಾಗಿದೆ. ಒಂದರ್ಥದಲ್ಲಿ ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಕವನವನ್ನು ನೆನಪಿಸುತ್ತದೆ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments