ಅವರು ನಿಷ್ಕ್ರಿಯರ ‘ಗಾಂಧಿ’ ಆಗಿರಲಿಲ್ಲ.. ಕ್ರೀಯಾಶೀಲರ ‘ನೇತಾಜಿ’ ಆಗಿದ್ದರು…
-ಅಶ್ವಿನ್ ಅಮೀನ್
ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಹೇಳ ಹೊರಟರೆ ಅದು ಇಂದು ನಾಳೆಗೆ ಮುಗಿಯುವಂತದ್ದಲ್ಲ.. ಆ ಪ್ರವಾಹೋಪಾದಿಯ ಘಟನೆಗಳೇ ಹಲವು ಕೋಟಿ ಪುಟಗಳ ಮಹಾ ಗ್ರಂಥವಾದೀತು.! ಆ ಸಮಯದಲ್ಲಿ ಭಾರತ ಮಾತೆಯ ಬಿಡುಗಡೆಗಾಗಿ ಹೋರಾಡಿದ ಮಹಾನ್ ನಾಯಕರುಗಳೆಷ್ಟೋ, ಹೋರಾಟಗಾರರೆಷ್ಟೋ.. ಅಂತಹ ಹಲವರ ಮದ್ಯೆ ಭಿನ್ನವಾಗಿ ನಿಲ್ಲುವ, ಅಹಿಂಸಾವಾದವನ್ನು ಬಹಿರಂಗವಾಗಿ ವಿರೋಧಿಸಿದ, ಭಗವದ್ಗೀತೆಯ ತಿರುಳಾದ ದುಷ್ಟದಮನ ಶಿಷ್ಟಪಾಲನವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ ಧೀಮಂತ ನಾಯಕ, ಕ್ರಾಂತಿ ಪುರುಷ ನೇತಾಜಿ ಸುಭಾಶ್ ಚಂದ್ರ ಬೋಸ್ ರ ಜನ್ಮ ದಿನ (ಜನವರಿ 23).
ನೇತಾಜಿಯವರ ಹೋರಾಟದ ದಿನಗಳು ರಾಷ್ಟ್ರೀಯ ಕಾಂಗ್ರೆಸ್ ನಿಂದ ಆರಂಭವಾಯಿತು. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ಆದರೆ ಗಾಂಧೀಜಿ ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ತಮ್ಮ ನಾಯಕತ್ವದ ಚಳುವಳಿಗಳಲ್ಲಿ ಎಲ್ಲಾದರೂ ಹಿಂಸಾ ಘಟನೆಗಳು ನಡೆದರೆ ಅದನ್ನು ವಿರೋಧಿಸುತ್ತಿದ್ದರು. ಯಾಕೆಂದರೆ ಬ್ರಿಟಿಷರಿಗೆ ನೋವಾಗುವುದು ಗಾಂಧೀಜಿಯವರಿಗೆ ಇಷ್ಟವಿರಲಿಲ್ಲ. !!!! ಗಾಂಧೀಜಿಯವರ ಪ್ರತಿಯೊಂದು ಚಳುವಳಿಗಳಲ್ಲೂ ಇದು ಎದ್ದು ಕಾಣುತ್ತದೆ.! ಇದು ಬಿಸಿ ರಕ್ತದ ಯುವಕ ಸುಭಾಷ್ ಚಂದ್ರ ಬೋಸ್ ರಿಗೆ ಸಹ್ಯವಾಗಲಿಲ್ಲ. ಅದನೆಲ್ಲ ಒಪ್ಪಿಕೊಳ್ಳಲು ಅವರು ಗಾಂಧಿಯಾಗಿರಲಿಲ್ಲ..! ಅವರು ಸುಭಾಶ್ ಚಂದ್ರ ಬೋಸ್ ಆಗಿದ್ದರು..! ಕ್ರಾಂತಿ ಕ್ರಾಂತಿ ಎಂದು ಜಪಿಸುತಿದ್ದ ನೇತಾಜಿಯವರ ಮನಸ್ಸು ಈ ಗಾಂಧಿಯ ಶಿಖಂಡಿತನವನ್ನು ಒಪ್ಪಿಕೊಳ್ಳುವುದಾದರೂ ಹೇಗೆ..?! ಮುಂದೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದರೂ ಗಾಂಧೀಜಿ ಸುಭಾಷರ ಜಯವನ್ನು ಒಪ್ಪದ ಕಾರಣ ಹಾಗು ತನ್ನ ಮನಸ್ಸಿಗೆ ವಿರುದ್ಧವಾದ ಭಾವನೆ ಹೊಂದಿರುವ ಗಾಂಧೀಜಿಯೊಡನೆ ಮುಂದುವರಿಯಲು ಸಾಧ್ಯವಾಗದ ಕಾರಣ ನೇತಾಜಿ ಕಾಂಗ್ರೆಸ್ ನಿಂದ ಅನಿವಾರ್ಯವಾಗಿ ಹೊರಬಂದರು. ಅಲ್ಲಿಂದ ಸುಭಾಷರ ಕ್ರಾಂತಿಯ ಜೀವನ ಆರಂಭವಾಯಿತು. ಜೊತೆಗೆ ಭಾರತದ ಕ್ರಾಂತಿಯ ಪುಟಕ್ಕೆ ಹೊಸ ತಿರುವು ಕೂಡ..!
ಸುಭಾಷ್ ಚಂದ್ರ ಬೋಸರು ಅಪ್ರತಿಮ ದೇಶಭಕ್ತರಾಗಿದ್ದರು. ಸದಾ ಕ್ರಾಂತಿಗಾಗಿ ಬಯಸುತ್ತಿದ್ದರು. ನಿಷ್ಕ್ರಿಯತೆಯನ್ನು ಸಹಿಸುತ್ತಿರಲಿಲ್ಲ. ಮಹಾ ಜ್ಞಾನಿಗಳಾಗಿದ್ದರು. ಯಾವುದೇ ವಿಷಯವಿರಲಿ ಅಳೆದು ತೂಗಿ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಅವರಲ್ಲಿತ್ತು. ಆದರೆ ಗಾಂಧೀಜಿ ಇದಕ್ಕೆ ತದ್ವಿರುದ್ದರಾಗಿದ್ದರು. ಗಾಂಧೀಜಿಯ ಅಹಿಂಸಾವಾದ ಭಾರತೀಯರನ್ನು ನಿಷ್ಕ್ರಿಯರನ್ನಾಗಿ, ನಿರ್ವೀರ್ಯರನ್ನಾಗಿ, ಸೋಮಾರಿಗಳನ್ನಾಗಿ ಮಾಡಿತ್ತು.! ಗಾಂಧಿ ತಮ್ಮ ತತ್ವವನ್ನು ಜನರ ಮೇಲೆ ಸತ್ಯಾಗ್ರಹಗಳೆಂಬ ಮಾನಸಿಕ ಬಲ
ಪ್ರಯೋಗಗಳ ಮೂಲಕ ಹೇರುತ್ತಿದ್ದರು. ತನ್ನ ತತ್ವವನ್ನು ಒಪ್ಪದವರನ್ನು ತನ್ನ ಗುಂಪಿನಿಂದ ಹೊರಗಿಡುತ್ತಿದ್ದರು. ಅಷ್ಟೇ ಅಲ್ಲದೆ ಅಂತಹವರನ್ನು ದೇಶವಿರೋಧಿಗಳಂತೆ ನಡೆಸಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ ಗಾಂಧೀಜಿ ಸೋಮಾರಿಗಳ ನಾಯಕರಾಗಿದ್ದರೆ,
ಸುಭಾಷ್ ಚಂದ್ರ ಬೋಸರು ಕ್ರಾಂತಿಕಾರಿಗಳ, ಉತ್ಸಾಹದ ಚಿಲುಮೆಗಳ, ಬಿಸಿ ರಕ್ತದ ಯುವ ಜನತೆಯ, ಸದಾ ಕ್ರೀಯಾಶೀಲರಾಗಿರುವವರ, ಅಪ್ರತಿಮ ದೇಶ ಭಕ್ತ ಬಂಧುಗಳ ನಾಯಕರಾಗಿದ್ದರು.
ನೇತಾಜಿಯವರು ಉಳಿದೆಲ್ಲ ನಾಯಕರುಗಳಿಗಿಂತ ಶ್ರೇಷ್ಠರಾಗಿ ಕಾಣುವುದು ಅವರ ಕ್ರೀಯಾಶೀಲತೆಗೆ. ನೇತಾಜಿ ಸುಭಾಷ್ ಚಂದ್ರ ಬೋಸರು ಕಟ್ಟಿದ ‘ವಿದೇಶದಲ್ಲಿ ಸಂಘಟನೆಗೊಂಡ ಭಾರತದ ಮೊದಲ ಸೈನ್ಯ’ ಎಂಬ ಹೆಗ್ಗಳಿಕೆ ಹೊಂದಿದ ( INA ) ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗಾಗಿ ನೇತಾಜಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಇಟಲಿ. ಜಪಾನ್, ಜರ್ಮನ್, ರಷ್ಯ ಗಳಲ್ಲಿ ಸುತ್ತಾಡಿ ಆ ದೇಶಗಳ ಸಹಾಯ ಕೋರಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ವೀರರ ಯುವ ಸೈನ್ಯವನ್ನು ಹುಟ್ಟುಹಾಕಿದರು. ದುರ್ದೈವವಶಾತ್ ನೇತಾಜಿಯವರು 1945 ರ ವಿಮಾನ ಅವಘಡದಲ್ಲಿ ಕೊನೆಯುಸಿರೆಳೆಯದಿದ್ದರೆ(ಇನ್ನೂ ಶಂಕಾಸ್ಪದವಾಗಿಯೇ ಉಳಿದಿದೆ) ಹಾಗು 1945 ರ ವಿಶ್ವ ಮಹಾ ಯುದ್ಧದಲ್ಲಿ ಜಪಾನ್ ಇಟಲಿ ಜರ್ಮನ್ ರಾಷ್ಟ್ರಗಳು
ಸೋತುಹೋಗದಿದ್ದರೆ ಬಹುಶಃ INA ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಭಾರತವನ್ನು 1947 ರ ಮುಂಚೆಯೇ ಸ್ವತಂತ್ರ ಗೊಳಿಸುತ್ತಿತ್ತೇನೋ..
ಇಂತಹ ಧೀಮಂತ ರಾಷ್ಟ್ರ ಪುರುಷ ನೇತಾಜಿಗೆ ಪ್ರೇರಣೆಯಾದವರದ್ದೇ ಒಂದು ತೂಕವಿದೆ. ಸುಭಾಷರು ಮಹಾಯೋಗಿ ವಿವೇಕಾನಂದರ ಭೋಧನೆಗಳಿಂದ ಪ್ರೆರಿತರಾಗಿದ್ದರು. ಹಿರಿಯ ಮುತ್ಸದ್ದಿ ಅರವಿಂದ ಘೋಷರ ಬರಹಗಳನ್ನು ತಪ್ಪದೆ ಓದುತ್ತಿದ್ದರು. ದೇಶಬಂಧು ಚಿತ್ತರಂಜನ್ ದಾಸ್ ನೇತಾಜಿಯವರ ರಾಜಕೀಯ ಗುರುಗಳಾಗಿದ್ದರು. ಇಟಲಿಯ ದೇಶಭಕ್ತ ಕ್ರಾಂತಿಕಾರಿ ಜೋಸೆಫ್ ಮೆಟೆನ್ಸಿಯ ಸಂಘಟನಾ ಚತುರತೆಯಿಂದ ಆಕರ್ಷಿತರಾಗಿದ್ದರು. ಕ್ರೂರ ಆಡಳಿತಗಾರ ಎಂದು ಕರೆಸಿಕೊಂಡ ಹಿಟ್ಲರ್ ನೊಂದಿಗೆ ನೇತಾಜಿಗೆ ಆತ್ಮೀಯ ಭಾಂಧವ್ಯವಿತ್ತು. ಶ್ರೀ ಕೃಷ್ಣ ಭೋದಧಿಸಿದ ಭಗವದ್ಗೀತೆಯ ಪ್ರಮುಖ ಸಾಲುಗಳನ್ನು ಯಾವಾಗಲೂ ಮನನ ಮಾಡಿಕೊಳ್ಳುತ್ತಿದ್ದರು. ಇವರೆಲ್ಲರ ಆದರ್ಶಗಳನ್ನು ಸ್ವತಃ ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ಅಳವಡಿಸಿಕೊಂಡಿದ್ದರು ಕೂಡ. ಇದೇ ಕಾರಣಕ್ಕೆ ಸುಭಾಷ್ ಚಂದ್ರ ಬೋಸ್ ಉಳಿದೆಲ್ಲ ಸ್ವಾತಂತ್ರ ಹೋರಾಟಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.
ಎಲ್ಲರಿಂದಲೂ ‘ನೇತಾಜಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸರನ್ನು ಗಾಂಧೀ-ನೆಹರು ಹಾಗು ಅವರ ಹಿಂಬಾಲಕ ಕಾಂಗ್ರೆಸ್ ನಾಯಕರುಗಳು ಹೊರಗಿಡಲು ಯತ್ನಿಸಿದರು. ಅವರುಗಳಿಗೆ ನೇತಾಜಿಯವರ ಕ್ರೀಯಾಶೀಲತೆ ಹಿಡಿಸಿಲ್ಲವೇನೋ ಅಥವಾ ರಾಜಕೀಯ ಮತ್ಸರವೋ.! ಆದರೆ ಒಂದಂತೂ ಸತ್ಯ. ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವ ಯಾವಾಗಲೂ ಎತ್ತರದ ಸ್ಥಾನದಲ್ಲಿ ಕಂಡುಬರುತ್ತದೆ. ಮಹಾತ್ಮರಲ್ಲದವರನ್ನು ಮಹಾತ್ಮ ಎಂದು ಸ್ಮರಿಸುವ ಬದಲು ಮಹಾತ್ಮ ಎಂದು ಕರೆಸಿಕೊಳ್ಳಲು ಅರ್ಹರಾಗಿರುವ ‘ನೇತಾಜಿ’ಯಂತವರನ್ನು ಸ್ಮರಿಸೋಣ..!
ಕ್ರೀಯಾಶೀಲರಾಗಿ……………… ನಿಷ್ಕ್ರಿಯರಾಗದಿರಿ………………!
* * * * * * * * * *
ಚಿತ್ರಕೃಪೆ : folks.co.in





ನೇತಾಜಿವರನ್ನು ಗೌರವಿಸೋಣ ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಗಾಂಧಿ, ನೆಹರೂ ಮೊದಲಾದವರನ್ನು ನಿಷ್ಕ್ರಿಯ, ಪರಮ ಸ್ವಾರ್ಥಿ ಎಂದು ಲೇಖನದಲ್ಲಿ ಹೇಳಿರುವುದು ಸಮಂಜಸವಲ್ಲ. ಗಾಂಧಿ ಎಂದೂ ನಿಷ್ಕ್ರಿಯರಾಗಿರಲಿಲ್ಲ ಸದಾ ದೇಶಕ್ಕಾಗಿ ನಿಸ್ವಾರ್ಥವಾಗಿ ಹೋರಾಡಿದವರು ಅವರು. ಹೋರಾಟದ ದಾರಿಯಲ್ಲಿ ಭಿನ್ನಾಭಿಪ್ರಾಯ ಇದ್ದಿರಬಹುದು. ಲೇಖನದ ಕೊನೆಯಲ್ಲಿ ಗಾಂಧಿ ನೆಹರೂ ಅವರನ್ನು ನಿಷ್ಕ್ರಿಯ ಹಾಗೂ ಪರಮ ಸ್ವಾರ್ಥಿಗಳು ಎಂದು ಹೇಳಿರುವುದು ಪ್ರಜ್ಞಾವಂತರು ಒಪ್ಪುವಂಥದ್ದಲ್ಲ. ಗಾಂಧಿಯವರನ್ನು ಮಹಾತ್ಮ ಎಂದು ದೇಶವು ಒಪ್ಪಿಕೊಂಡಿದೆ. ಗಾಂಧಿಯವರ ಅಹಿಂಸೆಯ ತತ್ವದ ಬಗ್ಗೆ ಇಂದು ವಿಶ್ವದಾದ್ಯಂತ ಗೌರವವಿದೆ ಎಂಬುದನ್ನು ಮರೆಯದಿರೋಣ
ಗಾಂಧೀಜಿ ಏಕೆ ನಿಷ್ಕ್ರಿಯ ಹಾಗೂ ಪರಮಸ್ವಾರ್ಥಿಯಲ್ಲ ಎಂದು ಹೇಳಿದಿರಿ.. ಆದರೆ ನೆಹರುಗೆ ಯಾವುದೇ ಉದಾಹರಣೆ ಕೊಟ್ಟಿಲ್ಲ ನೀವು…
ಈ ವಿಷಯವೆಲ್ಲ ನಾವು ಓದಿದ ಪಠ್ಯ ಪುಸ್ತಕಗಳನ್ನೂ ಮೀರಿದೆ, ಅಶ್ವಿನ್ ರವರೇ ನಿಮ್ಮ ಈ ಲೇಖನಕ್ಕೆ ಸ್ಪೂರ್ತಿ ನೀಡಿದ ಪುಸ್ತಕ ಅಥವಾ ಇನ್ಯಾವುದೇ ವಿಷಯವನ್ನು ನಮಗೂ ಹೇಳ್ರಿ.
ಹೌದು ಸುಮನ ಅವರೇ, 🙂 ಇವೆಲ್ಲಾ ಎಲ್ಲೂ ಸಿಗದ ವಿಷಯಗಳು.. ಅಮೀನ್ ಅವರಿಗೆ ನಾವೆಲ್ಲಾ ಋಣಿಗಳು. 😀
ನೆಹರೂ ‘ಗುಣಗಾನ’ ವನ್ನು ರಾಜೀವ ದಿಕ್ಷಿತರ ಮಾತುಗಳಲ್ಲಿ ಕೇಳಿ.. ಚಾಚಾರ ನಿಸ್ವಾರ್ಥತೆಯ, ಒಳ್ಳೆಯ ಸ್ವಭಾವಗಳ ಪರಿಚಯವಾಗುತ್ತದೆ.
‘http://www.youtube.com/watch?v=_C6hlKMNH4k’
‘http://www.youtube.com/watch?v=FmwhMY2iqtQ&feature=related’
ಅಧ್ಯಯನ ಹಾಗೂ ಇತಿಹಾಸ ಪ್ರಜ್ಞೆಯಿರದ ಈ ಹಾಸ್ಯಾಸ್ಪದ ಲೇಖನವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗದು.
ಸತ್ಯೇಂದ್ರನಾಥ ಬೋಸ್ ನಂತರ ಸುಭಾಷರೊಬ್ಬರೇ ಐ.ಸಿ.ಎಸ್ ಪಾಸ್ ಮಾಡಿದವರು ಎಂಬ ಹಸೀ ಸುಳ್ಳನ್ನು ಹಬ್ಬಿಸುವ ಪ್ರತಾಪ ಸಿಂಹರಂತಹ ಲೇಖಕರು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಹಾಗೂ ಮುಂದಿನ ತಲೆಮಾರಿಗೆ ಆತಂಕ ತರುವ ಸಂಗತಿ..
ಈ ಲೆಕನವನ್ನ ಮೆಚ್ಚಿದ ಓದು ಬಲ್ಲವರೇ, ನಿಮಗೆ ಈ ಲೆಕನದಲ್ಲಿಲ್ ನಿಜವಾಗಿಯೂ ‘ವಿಷಯಗಳು’ ದೊರೆತವೆ?
ಅರ್ಥ ಆಗಲಿಲ್ಲ ಸ್ವಲ್ಪ ಬಿಡಿಸಿ ಹೇಳಿ ಸಿದ್ಧರಾಜು ಸರ್
ಈ ಲೇಖನದ ಪ್ರಕಾರ ಆಲೋಚಿಸುವುದಾದರೆ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹ ನಿಷ್ಕ್ರಿಯರ ಒಂದು ಶಿಖಂಡಿತನದ ಕೆಲಸ ಹಾಗೂ ಬದಲಾವಣೆಗಾಗಿ ಸಶಸ್ತ್ರ ಹೋರಾಟ ಮಾಡುತ್ತಿರುವ ನಕ್ಸಲರು ಕ್ರಾಂತಿಕಾರಿಗಳು ಎಂದಾಗುತ್ತದೆ ಮತ್ತು ಸಶಸ್ತ್ರ ಹೋರಾಟ ಮಾಡುತ್ತಿರುವ ನಕ್ಸಲರು ಹೀರೋಗಳು ಎಂದಾಗುತ್ತದೆ.
ಸ್ವತಂತ್ರಕ್ಕೆ ಮುಂಚೆ ಒಂದು ನ್ಯಾಯ ನಂತರ ಒಂದು ನ್ಯಾಯ..
1. ಗಾಂಧಿಜಿ ಸತ್ಯಾಗ್ರಹ ಮಾಡಿದರೆ ವಿರೋಧಿಸಬೇಕು, ಅಣ್ಣಾ ಮಾಡಿದರೆ ಬೆಂಬಲಿಸಬೇಕು.
2. ಕಮ್ಯುನಿಸ್ಟ್ ಭಗತ್ ಸಿಂಗ್ ಕೊಲೆ ಮಾಡಿದರೆ ಬೆಂಬಲಿಸಬೇಕು, ನಕ್ಸಲರಿಗೆ ಬೆಂಬಲಿಸಬಾರದು.
3. ಸುಭಾಷ್ ಚುನಾವಣೆಯಲ್ಲಿ ಹೆಂಡ ಹಂಚಿದರೆ ಬೆಂಬಲಿಸಬೇಕು, ಸೋನಿಯಾ ಹಂಚಿದರೆ ಬೆಂಬಲಿಸಬಾರದು.
4. ಕುಡಿತ,ಐಶಾರಾಮಿ ಜೀವನದಲ್ಲಿ ಕಾಲ ಕಳೆದ ಸುಭಾಷರನ್ನು ಬೆಂಬಲಿಸಬೇಕು, ಅದನ್ನೇ ಯಡಿಯೂರಪ್ಪ ಮಾಡಿದರೆ ವಿರೋಧಿಸಬೇಕು.
5. ಆಗ ಸ್ವತಂತ್ರಕ್ಕಾಗಿ ವಿದೇಶಿ ನೆರವು ಪಡೆದರೆ ಬೆಂಬಲಿಸಬೇಕು. ಈಗ ಹಣಕ್ಕಾಗಿ ವಿದೇಶಿಯರ ಮುಂದೆ ಕೈ ಚಾಚಿದರೆ ವಿರೋಧಿಸಬೇಕು.
ಸ್ವಾತಂತ್ರಕ್ಕೆ ಮುಂಚೆ ನೈತಿಕವಾಗಿದ್ದುದು ಸ್ವಾತಂತ್ರಾನಂತರ ಅನೈತಿಕವಾಯಿತೆ? ಆರೆಸ್ಸೆಸ್ ಹುಟ್ಟು ಹಾಕಿದ ಪೀಳಿಗೆಯ ದ್ವಂದ್ವನಿಲುವುಗಳಿಗೆ ಉತ್ತಮ ಉದಾಹರಣೆ ಈ ಲೇಖನ.
ಶ್ರೀಹರ್ಷನೀವು ಹೇಳೀದ ವಿಷಯಗಳಿಗೆ ದಾಖಲೆಗಳು ಉಂಟಾ?ಸುಖಾಸುಮ್ಮನೆ ಮಹಾತ್ಮರಜೊತೆ ಯಾರ್ಯಾರನ್ನೋ ತಂದು ತುರುಕಬೇಡಿ. ಆರೆಸ್ಸಿಸಿಗೆ ಬೈಯಬೇಕು ಅಂದ್ರೆ ನೇರವಾಗಿ ಬೈಯಿರಿ.
nandan karniku… mahatma andre yaaru mahatma gandi atava mahatma subaso…nim rss produce madthavrallappa BF na session alle..innenu olage rape agode ondu baki…nim rssu sistu sistu antha avavara basic neeeds thadudu thadedu ottadadlli sessionalli BF nodovangaithu idu rss mahime alde innenu…
ಸ್ವಾಮಿ, ನಾನು ನೇರವಾಗಿಯೇ ಬೈದಿದ್ದೇನೆ… ಆರೆಸ್ಸೆಸ್ ಗೆ..
ತಮಗೆ ಯಾವುದಕ್ಕೆ ಸಾಕ್ಷಿ ಬೇಕು ಸ್ವಾಮಿ?
ಗಾಂಧಿಜಿ ಸತ್ಯಾಗ್ರಹ ಮಾಡಿದ್ದಕ್ಕೆ? ಕೊಂಚವೂ ಕದನದ ಅನುಭವ ಇರದ ಸುಭಾಷ್ ನೂರಾರು ಸೈನಿಕರ ಸಾವಿಗೆ ಕಾರಣರಾಗಿದ್ದಕ್ಕೇ? ಭಗತ್ ಸಿಂಗ ಕಮ್ಯುನಿಸ್ಟ್ ಎಂಬುದಕ್ಕೇ? ಸುಭಾಷ್ ಮದ್ಯವ್ಯಸನಿಯಾಗಿದ್ದರು ಎಂಬುದಕ್ಕೇ?
ಐ ಎನ್ ಎ ಸೈನಿಕರು ಯುದ್ದದ್ದಲ್ಲಿ ಸತ್ತದ್ದಕ್ಕಿಂತ ತಿನ್ನಲು ಕೂಳಿಲ್ಲದೇ, ಮಲೇರಿಯಾಕ್ಕೆ ಔಷಧಿ ಇಲ್ಲದೇ ಸತ್ತರು. ಸುಬಾಷ್ ಸತ್ತದ್ದಕ್ಕಾಗಿ ಅಳುವವರು ನಲವತ್ತು ಸಾವಿರ ಸೈನಿಕರ ಸಾವಿಗೆ ಅಳುವುದಿಲ್ಲ.. ಇದಲ್ಲವೇ ದ್ವಂದ್ವ?
ಚೀನಾ ಯುದ್ಧದಲ್ಲಿ ನೆಹರೂ ಮಾಡಿದ್ದನ್ನು ಹದಿನಾರು ವರುಷ ಮೊದಲೇ ಸುಬಾಷ್ ಮಾಡಿದ್ದರು…
ಅರೆರೆ, ಕಣ್ಣು ತೆರೆಸುವಂತಹ ಪ್ರತಿಕ್ರಿಯೆ!
ಭಗತಸಿಂಗನನ್ನು ಕೊಲೆಗಡುಕ ಎಂದು ಕರೆಯಬೇಕೆಂದು ಇಲ್ಲಿಯವರೆಗೆ ಹೊಳೆದಿರಲಿಲ್ಲ. ಸ್ವಾತಂತ್ರ್ಯಯೋಧ,ಕ್ರಾಂತಿಕಾರಿ ಅಂತ ತಪ್ಪಾಗಿ ಕರೆಯುತ್ತಿದ್ದೆ. ಇನ್ನು ಮುಂದೆ ತಿದ್ಕೊಬೇಕು ‘ಹಲವು ಕೊಲೆಗಡುಕರು ಸ್ವಾತಂತ್ರ್ಹಹೋರಾಟದ ಹೆಸರಿನಲ್ಲಿ ಕೊಲೆ ಮಾಡಿದರು’ ಅಂತ.
–ಕುಡಿತ,ಐಶಾರಾಮಿ ಜೀವನದಲ್ಲಿ ಕಾಲ ಕಳೆದ ಸುಭಾಷರನ್ನು ಬೆಂಬಲಿಸಬೇಕು,–
ಬಹುಶ: ಇನ್ನು ಸ್ವಲ್ಪ ಬಿಟ್ಟು ಹೋಗಿದೆ ಅನಿಸುತ್ತೆ. ಅದು ‘ಕುಡಿತ,,ಐಶಾರಾಮಿ ಜೀವನ ಮತ್ತು ಪ್ರೇಯಸಿಯ ಜೊತೆ ಚಕ್ಕಂದವಾಡುವುದರಲ್ಲಿಯೇ ಕಾಲ ಕಳೆದ ಸುಭಾಷರನ್ನು ಬೆಂಬಲಿಸಬೇಕು’ ಎಂದಾಗಬೇಕಿತ್ತೇನೊ..
ಮತ್ತೊಮ್ಮೆ ತಮ್ಮ ಅಗಾಧ ಇತಿಹಾಸ ಪ್ರಜ್ಞೆ ಮತ್ತು ತಿಳುವಳಿಕೆಯೊಂದಿಗೆ ನಮ್ಮೆಲ್ಲರ ಕಣ್ಣು ತೆರೆಸಿದ್ದಕ್ಕೆ ಶಿರಬಾಗಿ ವಂದನೆಗಳು.
ಏಳಿ ಏಳಿ ಬಸವಯ್ಯನವರೆ…
ನನ್ನ ಆಶೀರ್ವಾದ ಸದಾ ನಿಮ್ಮ ಮೆಲಿರುತ್ತದೆ. ನನ್ನ ಆಶೀರ್ವಾದ ಬಲದಿಂದಾದರೂ ತಮಗೆ ಒಂದು ದಿನ ಸ್ವಂತ ಯೋಚನೆಯ ಶಕ್ತಿ ಬರುತ್ತದೆ… ಒಳಿತಾಗಲಿ.. ನನ್ನಲ್ಲಿ ಶರಣಾಗತರಾಗಿ ಒಳ್ಳೆಯ ಕೆಲಸ ಮಾಡಿದಿರಿ..
ಸುಭಾಷರು ಹೆಂಡ ಹಂಚಿದ್ದಕ್ಕೆ ಪುರಾವೆ ಇದೆಯಾ? ಇಲ್ಲ ಅಲ್ವಾ… ಗಾಂಧೀಜಿಯಂತ ಗಾಂಧೀಜಿಯ ವಿರುದ್ಧ ನಿಂತು ಆ ಕಾಲದಲ್ಲಿ ಗೆದ್ದು ಬಂದ ಗಂಡು ಅವರು.ಐಷಾರಾಮಿ ಜೀವನ ಮಾಡುವುದಾಗಿದ್ದರೆ ಐಸಿಎಸ್ ಅನ್ನ ಎಡಗಾಲಲ್ಲಿ ಒದ್ದು ಒಡಹುಟ್ಟಿದವರ/ಮದುವೆಯಾದವರ ಬಿಟ್ಟು ದೇಶ ತೊರೆದು ಮತ್ತೆ ಬದುಕಿಯೂ ಅಜ್ನಾತವಾಸ ಮಾಡುವ ದರ್ದು ಸುಭಾಷರಿಗಿತ್ತಾ?
ನಿಮಗೆ ಗಾಂಧೀಜಿಯನ್ನ ಹಾಡಿ ಹೊಗಳ ಬೇಕು ಅನ್ನಿಸಿದರೆ ಹೊಗಳಿ,ಅದಕ್ಕಾಗಿ ಇನ್ಯಾರನ್ನೋ ಕುಡುಕ,ಕೊಲೆಗಡುಕರನ್ನಾಗಿ ಮಾಡಬೇಕಿಲ್ಲ.
ಶೆಟ್ಟರೇ,
ಹರಿಹರಪುರ ಶ್ರೀಧರ ಅವರ ಸಮ್ಮುಖದಲ್ಲೇ ತಮಗೆ ಇದರ ಬಗೆಗೆ ರೆಫರೆನ್ಸ್ ಕೊಟ್ಟಿದ್ದೆ. ತಾವು ಅದೆಷ್ಟು ಮಮಕಾರದಿಂದ “ಸುಭಾಷ್ ಹೆಂಡ ಹಂಚಿದ್ದು ಸರಿ” ಎಂದು ಹೇಗೆ ಸಮರ್ಥಿಸಿಕೊಂಡಿರಿ ಎಂದು ಸ್ಮರಿಸಿಕೊಳ್ಳಿ..
ಜಾಣ ಮರೆವೇ?… 😉
ಆದರೆ,ನೀವೆಂದು ದಾಖಲೆ ಸಮೇತ ಹೇಳಿಲ್ಲ,ನೀವು ಅಂದು ಯಾರ ಹೆಸರು ಹೇಳಿದ್ದೀರಿ ಅನ್ನುವುದು ನೆನಪಿದೆ.ನಾನು ಸಮರ್ಥಿಸಿದೆ ಅಂದಾಕ್ಷಣ ಸುಭಾಷರು ಹಂಚಿದರೂ ಅಂತ ಒಪ್ಪಿಕೊಂಡ ಹಾಗೇ ಅಲ್ಲ ಹರ್ಷ 😉
ತೀರಾ ಮಹಾತ್ಮರು ರಚ್ಚೆ ಹಿಡಿದ ಮಕ್ಕಳಂತಾಡಿದಾಗ ಹೆಂಡ ಕುಡಿಸಿ ಸಮಾಧಾನ ಮಾಡಿದ್ದರೆ ಮಾಡಲಿಬಿಡಿ 🙂
ತಲೆ ಕೆಟ್ಟಿದ್ಯಾ ಸ್ವಾಮೀ ಏನ್ ಹೇಳ್ತಿದ್ದಿರ ಅಂತ ಗೊತ್ತಾ ? ದ್ವಂದ್ವ ಯಾರಲ್ಲಿದೆ ಅಂತ ಗೊತ್ತಾಗ್ತಿದೆ. ಯಾರ್ ಯಾರನ್ನ ಕಂಪೇರ್ ಮಾಡ್ಬೇಕ್ ಅಂತಾನು ಗೊತ್ತಿಲ್ವಾ ? ಸುಭಾಷರನ್ನು ಕಿತ್ತೋಗಿರೋ ಸೋನಿಯಾ ಗೆ ಹೋಲಿಸ್ತಿರಲ್ರಿ ಯಪ್ಪಾ ಕಾಂಗ್ರೆಸ್ ನ ಕಟ್ಟಾ ಅಭಿಮಾನಿ ಅನ್ಸುತ್ತೆ ನೀವು. ಬೇಗ ಹುಷಾರಾಗಿಪ.
sriharsha avare e mundaveke (avara balaso pada idu) pakka stereotypegalu enadru sensible agi yalidre arthamadkaladilla arthanu agalla…..maath yethidere naav rastra baktharu desha premigalu….ange inge badkothave….
೧. ಗಾಂಧೀಜಿಗೆ ಹಾಗು ಅಣ್ಣಾ ಹಜ್ಜರೆ ಸತ್ಯಾಗ್ರಹಕ್ಕೆ ಬೆಂಬಲ ನೀಡುವುದಿಲ್ಲ (ಉದ್ದೇಶ ಒಳ್ಳೆಯದೇ ಆದರೆ ಅತಿಯಾದ ಶಾಂತಿಯಿಂದ ದೇಶಕ್ಕೆ ವಾಂತಿ ಬರುತ್ತದೆ).
೨. ಭಗತ್ ಸಿಂಗ್ ಕಾರ್ಲ್ ಮಾರ್ಕ್ಸ್ ನ ಹಾಗೂ ಲೆನಿನ್ ನ ತತ್ವವನ್ನು ಉಪಯೋಗಿಸಿದ. ನಕ್ಸಲರು ಮೋ ಜೆದೊನ್ಗ(mao zedong) ನ ತತ್ವ ವನ್ನು ಉಪಯೋಗಿಸುತ್ತಿದ್ದಾರೆ.
೩. ವಿಮರ್ಶೆ ಕೊಡಿ (ಸುಭಾಷ್ ಚಂದ್ರ ಬೋಸರು ಚುನಾವಣೆ ಸಮಯದಲ್ಲಿ ಹೆಂಡ ಹಂಚುತಿದ್ದರು)
೪. ವಿಮರ್ಶೆ ಕೊಡಿ (ಕುಡಿತ, ಐಶಾರಾಮಿ ಜೀವನದಲ್ಲಿ ಕಾಲ ಕಳೆದ ಸುಭಾಷ್)
೫. ಹಿಟ್ಲರ್ ಜರ್ಮನಿ ದೇಶದ ಮಡಿದ ವಿಶ್ವ ಯುದ್ದದಿಂದಲೇ ನಮ್ಮ ದೇಶಕ್ಕೆ ಸ್ವತಂತ್ರ ಬಂದದ್ದು. ನಮ್ಮ ದೇಶದ ಕಪ್ಪು ಹಣ ಬೇರೆ ದೇಶದಲ್ಲಿ ಇರಬೇಕಾದರೆ ನಾವು ಏಕೆ ಬೇರೆ ದೇಶದ ಮುಂದೆ ಕೈ ಚಾಚಾ ಬೇಕು.
ಎಲ್ಲ ಕಾಲದಲ್ಲೂ ಒಂದೇ ರೀತಿಯಲ್ಲಿ ಯೋಚನೆ ಮಾಡಲು ಸಾದ್ಯವಿಲ್ಲ.
ಉದಾಹರಣೆ : ಯುದ್ದದ ಸಮಯದಲ್ಲಿ ಬುದ್ಧ ಅಥವಾ ಯೇಸು ಕ್ರಿಸ್ತನ ತತ್ವ ನಡೆಯುವುದಿಲ್ಲ,. ಅಲ್ಲಿ ಕೆಲವ ಕೃಷ್ಣನ ತತ್ವ ನಡೆಯುತ್ತದೆ.
೧. ಗಾಂಧೀಜಿಗೆ ಹಾಗು ಅಣ್ಣಾ ಹಜ್ಜರೆ ಸತ್ಯಾಗ್ರಹಕ್ಕೆ ಬೆಂಬಲ ನೀಡುವುದಿಲ್ಲ (ಉದ್ದೇಶ ಒಳ್ಳೆಯದೇ ಆದರೆ ಅತಿಯಾದ ಶಾಂತಿಯಿಂದ ದೇಶಕ್ಕೆ ವಾಂತಿ ಬರುತ್ತದೆ).
೨. ಭಗತ್ ಸಿಂಗ್ ಕಾರ್ಲ್ ಮಾರ್ಕ್ಸ್ ನ ಹಾಗೂ ಲೆನಿನ್ ನ ತತ್ವವನ್ನು ಉಪಯೋಗಿಸಿದ. ನಕ್ಸಲರು ಮೋ ಜೆದೊನ್ಗ(mao zedong) ನ ತತ್ವ ವನ್ನು ಉಪಯೋಗಿಸುತ್ತಿದ್ದಾರೆ.
೩. ವಿಮರ್ಶೆ ಕೊಡಿ (ಸುಭಾಷ್ ಚಂದ್ರ ಬೋಸರು ಚುನಾವಣೆ ಸಮಯದಲ್ಲಿ ಹೆಂಡ ಹಂಚುತಿದ್ದರು)
೪. ವಿಮರ್ಶೆ ಕೊಡಿ (ಕುಡಿತ, ಐಶಾರಾಮಿ ಜೀವನದಲ್ಲಿ ಕಾಲ ಕಳೆದ ಸುಭಾಷ್)
೫. ಹಿಟ್ಲರ್ ಜರ್ಮನಿ ದೇಶದ ಮಡಿದ ವಿಶ್ವ ಯುದ್ದದಿಂದಲೇ ನಮ್ಮ ದೇಶಕ್ಕೆ ಸ್ವತಂತ್ರ ಬಂದದ್ದು. ನಮ್ಮ ದೇಶದ ಕಪ್ಪು ಹಣ ಬೇರೆ ದೇಶದಲ್ಲಿ ಇರಬೇಕಾದರೆ ನಾವು ಏಕೆ ಬೇರೆ ದೇಶದ ಮುಂದೆ ಕೈ ಚಾಚಾ ಬೇಕು.
ಎಲ್ಲ ಕಾಲದಲ್ಲೂ ಒಂದೇ ರೀತಿಯಲ್ಲಿ ಯೋಚನೆ ಮಾಡಲು ಸಾದ್ಯವಿಲ್ಲ.
ಉದಾಹರಣೆ : ಯುದ್ದದ ಸಮಯದಲ್ಲಿ ಬುದ್ಧ ಅಥವಾ ಯೇಸು ಕ್ರಿಸ್ತನ ತತ್ವ ನಡೆಯುವುದಿಲ್ಲ,. ಅಲ್ಲಿ ಕೇವಲ ಕೃಷ್ಣನ ತತ್ವ ನಡೆಯುತ್ತದೆ.
ri,kattegu,kuduregu yakri holike maadtira?
Gandhiji was never inactive nd one can never forget the contributions of all the leaders who fought for Indipendence…..they were all very critical nd relevant in those contexts…..lets not comment acc to convienience about those mass leaders without selfishness…
illi RSS yake tandu nillisiddare sriharsha avaru? barediruvudu subhashara bagge. enu nimma prakara gaNdhi obbare svataNtra tandu kotra? gandhi yaje subhasharu congress adhyaksha agidakke virodisiddaru? congress samititalli bahumata idda patel pradhani agalu yake bidalilla? bhagat singh rajguru ivara mercy petition ge yaake munde nintu horadalilla?
vishayada bagge charche nadesi . adu bittu yabudo sanghatane bagge duruvudu murkhatanavaditu
ಸುಭಾಷರ ರಾಜಕೀಯ ನಡೆಗಳ ಕುರಿತ ಖಂಡಿತ ಭಿನ್ನಾಭಿಪ್ರಾಯವಿದೆ. ಶತ್ತುವಿನ ಶತ್ರು ಮಿತ್ರ ಎಂಬ ತತ್ವದಲ್ಲಿ ಸುಭಾಷರು ಜರ್ಮನ್ನರು ಮಾತ್ರ ಜಗತ್ತಿನಲ್ಲಿ ಶ್ರೇಷ್ಠರು ಎಂಬ ವಾದದ ಹಿಟ್ಲರ್ ನಂತಹ ಕ್ರೂರಿಯ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಕೇವಲ ರಾಜಕೀಯ ಸ್ಲಾತಂತ್ರ್ಯ ಬಂದಾಕ್ಣಣ ಎಲ್ಲ ಸಮಸ್ಯಗಳೂ ಪರಿಹಾರ ಎಂದಲ್ಲವಲ್ಲ.
Sriharsha ravarige uttara:
1. Gandhiji yavara hakikotta satyagrahada dari iduvarevigu namma janarannu shikhandiyannagi madide. Kanisuttillave, brashtachara, durachara, nammade hennu makkala maaraata, desha droha, dharma nasha; ella agta idru obba samanya manushyanu dani ettuttilla. Innu Anna Hazare nadesida horata ellige bantu anta gotte ide. Sonia, Kapil Sibal, Chidu avara mosagarikeyannu ariyada mugdha manassina anna, eega mulege hogi serkondiddare. Nijavada horata andre innu munde barabekide.
2. Bhagath singh communist iddirabahudu. adare avanu tannade deshastarannu kollalilla. parakeeyarannu deshadinda horadodisalu madida karya. adakke english adhikariyannu konda nantara sharanagi tanna uddeshavannu idee deshakke gottaguva hage madida. nimma communist, maoist snehitaru dina belagadare police, budakattu, swamigalannu kondu hakta iddaralla, avarigu, bhagat singh gu yakri holusteera
3. Subhash Bosaru henda hanchi sainya kattidrenri? INA anta sainya katta bekadre bekagiddu henda allappa hrudaya, gatti manassu. Enu history professor neevu, UR ananthamurthy helkotra nimge athava GK govindra rao. Ey hogri.
4. Subhash aisharami jeeva nadesiddu neevu hogi nodi bandiddri anta kanisutte. ondu dinavu biduvillade, deshada svatantryakke prapanchavannella sutti sainya kattida mahan veeranannu tegaluva neevu nimma kachada buddiyannu moriyalli haki toledu kolli. Adu sari illi yediyurappa yake bandru. nimma mavana magana hege avaru. Yediyurappa anta rolled-gold party nimagyake mecchigeyadru. tale sama illa ansutte nimge.
5. Videsh neravu ? Houdalla, nimmantavru irodrindale britisharu, mogalru deshana nungi hakidru. Allaa ri, neevenu ee deshadalli huttidavra, athava pakistanadalla? yava huccha nimage helida subhash padedaddu tappu antha. avarenu ‘namage sahaya madi, desha barkodtene’ anta Tippu tara helidra?
Eddu hogri.. elladru britisharaddo, chinadavaraddo enjalele toleyalu hogi.
ಉಳಿದವರು ಏನು ಹೇಳಬೇಕೆಂದಿದ್ದೀರೋ ಕನ್ನಡದಲ್ಲಿ ಹೇಳಿ… ನಿಮ್ಮ ಇಂಗ್ಲೀಷ್ ತೆವಲು ಇಲ್ಲಿ ತೋರಿಸಿಕೊಂಡು ಮತ್ತೊಬ್ಬ ಸುಭಾಷ್ -ನೆಹರೂ ಆಗಬೇಡಿ ಎಂಬುದು ನನ್ನ ಬಿಟ್ಟಿ ಸಲಹೆ..!!!
ನಿಮಗೆಲ್ಲ ದೇವರು ಒಳಿತು ಮಾಡಲಿ..
ಬಲಪಂಥೀಯ ಮೂಲಭೂತವಾದಿಗಳಿಂದ ನಡೆಸಲ್ಪಡುತ್ತಿರುವ ಹಾಗು ನೂಕಲ್ಪಡುತ್ತಿರುವ ಈ ತಾಣಕ್ಕೆ ಮತ್ತೆ ಭೇಟಿ ನೀಡಲಾರೆ.. ಏಕೆಂದರೆ ಸುಭಾಷ್ ಬಗ್ಗೆ ಸಾಕಷ್ಟು ಕಡೆ ಬರೆದಿದ್ದೇನೆ ಹಾಗೂ ಚರ್ಚಿಸಿದ್ದೇನೆ… ಮತ್ತೆ ಬರೆಯುವುದು ಸಮಯ ವ್ಯರ್ಥ..!!! “ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ” ರಾಜಕೀಯ ಬಿಟ್ಟು 😉 😉 ಅಲ್ಲವೇ ರಾಕೇಶ್???
ಈ ಕೋಮುವಾದಿಗಳು,ಮೂಲಭೂತವಾದಿಗಳು,ಬಲಪಂಥೀಯರು ಅನ್ನುವ ಹಣೆಪಟ್ಟಿ ಕಟ್ಟಿಸಿಕೊಂಡು, ಕೇಳಿಸಿಕೊಂಡು ಸಾಕಾಗಿದೆ.ಹೋಗ್ಬನ್ನಿ ಶುಭವಾಗಲಿ 🙂
ಅಲ್ರೀ ಹರ್ಷ,
ವಿಚಾರವಾದಿಗಳಾದ ನಿಮ್ಮ ಲೇಖನವನ್ನು ನಿಲುಮೆ ಪ್ರಕಟಿಸಿದೆ,ಹಾಗೆ ನಿಮ್ಮ ದೃಷ್ಟಿಯ ಕೋಮುವಾದಿ(?) ರಾಕೇಶ್ ಅವರ ಲೇಖನವನ್ನು ಪ್ರಕಟಿಸಿದೆ.ಅಂದ ಮೇಲೆ ಅದ್ಯಾವ ಬಾಯಿಯಿಂದ ನಿಲುಮೆ ತಾಣಕ್ಕೆ ಹಣೆಪಟ್ಟಿ ಕಟ್ಟುತ್ತೀರಿ.ಪ್ರತಿಯೊಂದು ವಿಷ್ಯದಲ್ಲೂ ಕೊಂಕನ್ನೆತ್ತಿ,ಬಹಳ ತಿಳಿದುಕೊಂಡಿರುವಂತೆ ಬರೆದುಕೊಳ್ಳುವ(ಹೇಳಿಕೊಳ್ಳುವ?) ನೀವು, ಚರ್ಚೆ ಮಾಡುವಾಗ ಮಾತ್ರ ಕೈಯಲ್ಲಿ ಕೆಸರನ್ನ ಮೊಗೆದು ಮೊಗೆದು ಎರಚುವ ಬುದ್ದಿ ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು … ಸ್ವಲ್ಪ ಬದಲಾಗಿ ಇಲ್ಲ ಜನ ಕೆಸರಿನ ವಾಸನೆಯಿಂದಾಗಿ ದೂರ ಹೋದಾರು ನಿಮ್ಮಿಂದ….
ನಿಲುಮೆಯಲ್ಲಿ “ಸ್ವಾತಂತ್ರ್ಯವೀರ”ನ ವ್ಯಕ್ತಿತ್ವ ಅನಾವರಣ..!! ಎಂಬ ಲೇಖನಕ್ಕೆ ಶ್ರೀ ರಮೇಶ್ ಅರವಿಂದ್ ಎಂಬವರು ಬರೆದ ಅಭಿಪ್ರಾಯ ಗಮನಿಸಿ:
“ಕಂಗ್ಲಿಷ್’ಗಿಂತ ಇಂಗ್ಲಿಷೇ ಮೇಲು. ಅಭಿಪ್ರಾಯ ಬರೆಯುವವರು ಕನ್ನಡ ಯೂನಿಕೋಡ್ ಬಳಸಿ ಪ್ಲೀಸ್.
ಇಲ್ಲದೇ ಹೋದರೆ, ಇಂಗ್ಲಿಷ್ ಲಿಪಿಯುಳ್ಳ ಕನ್ನಡ ವಾಕ್ಯ ಓದಲು ಅಪಾರ ತಾಳ್ಮೆ ಬೇಕಾಗುತ್ತದೆ.”
ಎಷ್ಟು ಸಭ್ಯವಾಗಿ, “ಕನ್ನಡ ಲಿಪಿ ಬಳಸಿ” ಎಂಬ ಸಲಹೆ ನೀಡಿದರು ಅವರು ?? 🙂 ಅವರು ಹೇಳಿದ ರೀತಿಗೂ ಶ್ರೀಹರ್ಷ ನೀಡಿದ “ಬಿಟ್ಟಿ ಸಲಹೆ”ಗೂ ಎಷ್ಟೊಂದು ವ್ಯತ್ಯಾಸ ಇದೆ ಅಲ್ವಾ ??? ಹರ್ಷ ಅವರ ಕಾಮೆಂಟುಗಳನ್ನು ನೋಡ್ತಾ ಇದ್ರೆ ‘ಜ್ಞಾನ ಪ್ರದರ್ಶನ’, ಇತರರನ್ನು ಹೀಗೆಲೆಯುವುದೇ ಅವರ ಮುಖ್ಯ ಉದ್ದೇಶ ಎಂಬುದು ಎದ್ದು ಕಾಣುತ್ತದೆ 😦 ಅದೂ ಅಲ್ಲದೇ ನಿಲುಮೆಯ ಬಗ್ಗೆಯೂ ಅಕ್ರೋಶ !!!! ಮೂಲಭೂತವಾದಿಗಳು, ಬಲಪಂಥೀಯರು ಎಂಬ ಪೂರ್ವಾಗ್ರಹ ಬೇರೆ !!!!
ನಾನು ಕಳೆದ ಒಂದೆರಡು ವರ್ಷಗಳಿಂದ ನಿಲುಮೆಯ ಓದುಗ 🙂 ಆದರೆ ಯಾವುದೇ ವಿಷಯದ ಮೇಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವನಲ್ಲ…. ಎಲ್ಲಾ ವಾದ, ಪ್ರತಿವಾದಗಳನ್ನೂ ದೂರದಿಂದಲೇ ಓದಿ ನನ್ನ ಪಾಡಿಗೆ ನಾನು ಇರುತ್ತಿದ್ದೆ 🙂 ನಾನು ಗಮನಿಸಿದ ಅಂಶವೇನೆಂದರೆ, ಶ್ರೀ ಹರ್ಷ ಪ್ರತಿಯೊಂದು ಚರ್ಚೆಯಲ್ಲೂ ಇದೇ ಚಾಳಿ ಪ್ರದರ್ಶಿಸುತ್ತಾರೆ !!! ಪ್ರತಿ ಬಾರಿಯೂ ಚರ್ಚೆಯ ಹಾದಿ ತಪ್ಪಿಸುತ್ತಾರೆ 😦 ಯಾಕೆ ಹರ್ಷ ಅವರೇ ?? ಈ ಕುಹಕ, ಮೊಂಡು ವಾದ ವಿವಾದಗಳಿಂದ ಏನನ್ನು ಸಾಧಿಸಲು ಸಾಧ್ಯ ??? ಒಂದು ಸಹೃದಯ ಚರ್ಚೆಗೆ ಏಕೆ ಅವಕಾಶ ನೀಡುತ್ತಿಲ್ಲ ??? ಚರ್ಚೆಯಾಗುತ್ತಿರುವ ವಿಷಯ ಬಿಟ್ಟು ವೈಯುಕ್ತಿಕ ಮೂದಲಿಕೆಗೆ ಏಕೆ ಅಡಿಯಿಡುತ್ತೀರಿ ?? ಕೊನೆಗೆ “ಹಿಟ್ ಅಂಡ್ ರನ್” ನಲ್ಲಿ ಚರ್ಚೆಗೆ ಮುಕ್ತಾಯ ಹಾಡುತ್ತೀರಿ 🙂 !!!!
ಯಾಕೆ ????
ಶ್ರೀಹರ್ಷ ಅವರೇ…. ಹೋಗಿ ಆದರೆ ಮತ್ತೆ ಬರಬೇಡಿ 🙂 (“ಮತ್ತೆ ಬರಬೇಡಿ ಅನ್ನಲು ನೀವು ಯಾರು ???” ಎಂಬ ಕ್ಷಿಪಣಿ ನಿಮ್ಮ ಬತ್ತಳಿಗೆಯಲ್ಲಿ ಇಷ್ಟೊತ್ತಿಗೆ ಆಗಲೇ ಸಿದ್ದವಾಗಿರುತ್ತದೆ ಅಲ್ವಾ ? 🙂 ) ‘ನಿಲುಮೆ’ ಬಲಪಂಥೀಯವೋ ಎಡಪಂಥೀಯವೋ ಅನ್ನುವುದು ಮುಖ್ಯ ಅಲ್ಲ ಆದರೆ ನಿಮ್ಮ ಪ್ರತಿಯೊಂದು ಪ್ರಲಾಪವನ್ನೂ ತಿದ್ದುಪಡಿ (“ಮಾಡರೇಟ್”) ಮಾಡದೆ ಪ್ರಕಟಿಸುವ ಸಭ್ಯ ತಾಣ ಎಂಬುದಂತೂ ಸ್ಪಷ್ಟ !!! 🙂 ತಮ್ಮ ಪ್ರಕಾಂಡ ಜ್ಞಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮಂಥ ಬಡಪಾಯಿಗಳಿಗೆ ಇಲ್ಲ ಸ್ವಾಮೀ 😦 ಕುರುಡ ಕವಣೆಕಲ್ಲು ಬೀಸಿದಂತೆ ಪ್ರತಿ ಚರ್ಚೆಯಲ್ಲೂ ರಾಕೇಶ್ ಶೆಟ್ಟರ ಮೇಲೆಯೇ ತಮ್ಮ “ವಾಗ್ವೈಭವ ಪ್ರಯೋಗ” ನೋಡಿ ನೋಡಿ ನಮಗೂ ಸಾಕಾಗಿದೆ 😦
ಬಹಳ ಹಿಂದೊಮ್ಮೆ ನಿಲುಮೆಯಲ್ಲಿ ಆಯುರ್ವೇದದ ಬಗೆಗಿನ ಚರ್ಚೆಯಲ್ಲಿ ನನ್ನ ಜೊತೆಯೂ ಕುಸ್ತಿ ಮಾಡಿದ್ರಿ ತಾವು 🙂 ಚರ್ಚೆಗೂ ವಿತಂಡ ವಾದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಅಲ್ವಾ ?? ಎಷ್ಟೊಂದು ಜನರಿಗೆ ಕಂಪ್ಯೂಟರಿನಲ್ಲಿ ಕನ್ನಡದ ಅಕ್ಷರಗಳನ್ನು ಮೂಡಿಸಲು ಕಷ್ಟವಾಗುತ್ತದೆ. ಆದರೂ ಅವರು ಆಂಗ್ಲ ಭಾಷೆಯಲ್ಲೇ ಕನ್ನಡದ ಶಬ್ದಗಳನ್ನು ಬರೆದಿದ್ದಾರೆ ಅಲ್ವಾ ?? ಮತ್ತೆ “ಉಳಿದವರು ಏನು ಹೇಳಬೇಕೆಂದಿದ್ದೀರೋ ಕನ್ನಡದಲ್ಲಿ ಹೇಳಿ… ನಿಮ್ಮ ಇಂಗ್ಲೀಷ್ ತೆವಲು ಇಲ್ಲಿ ತೋರಿಸಿಕೊಂಡು ಮತ್ತೊಬ್ಬ ಸುಭಾಷ್ -ನೆಹರೂ ಆಗಬೇಡಿ ಎಂಬುದು ನನ್ನ ಬಿಟ್ಟಿ ಸಲಹೆ..!!!” ಎನ್ನುವ ವಿಕೃತ ಮನೋಭಾವ ಯಾಕೆ ಮಹಾಸ್ವಾಮೀ ?? ಕನ್ನಡದಲ್ಲಿ “ಇಂಗ್ಲೀಷ್” ಎಂದು ಬರೆದ ಮಾತ್ರಕ್ಕೆ ಅದು ಕನ್ನಡದ ಶಬ್ದ ಆಗಿಬಿಡುತ್ತದೆಯೇ ಶ್ರೀ ಶ್ರೀ ಶ್ರೀ ಹರ್ಷನವರೇ ??? 🙂
ನಾವು ಎಷ್ಟೇ ಹೇಳಿದ್ರೂ ಏನೇ ಹೇಳಿದ್ರೂ ಅದು “ಗೋರ್ಕಲ್ಲ ಮೇಲೆ ನೀರು ಸುರಿದಂತೆ” ಆದರೆ ತಾವು “ಅಪ್ಪಣೆ ಕೊಡಿಸಿದ್ದನ್ನು” ಅಜ್ನರಾದ ನಮ್ಮಂಥವರು ಶಿರಸಾ ವಹಿಸಿ ಒಪ್ಪಿಕೊಳ್ಳಬೇಕು 🙂 ಸರಿ ಬಿಡಿ 🙂 ತಮಗೆ ಯಾವ ಜಾಲತಾಣ ಸರಿಯೇನಿಸುತ್ತದೋ ಅಲ್ಲಿಗೇ ಮತ್ತೆ ಮತ್ತೆ ಭೇಟಿ ನೀಡಿ ತಮ್ಮ ಮನಸ್ಸಂತೋಷಗೊಳಿಸಿಕೊಳ್ಳಿ 🙂
ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮ ಮಾತಿನ ಕೂರಂಬುಗಳಿಗೆ ನಾನು ಗುರಿಯಾಗುತ್ತೇನೆಂಬ ಅರಿವಿದ್ದೂ ಹೇಳುತ್ತಿದ್ದೇನೆ,
“ಶುಭವಿದಾಯ”
ಪರಮ ಸ್ವಾರ್ಥಿ, ಗಾಂಧಿಯ ಶಿಖಂಡಿತನ ಕಾಂಗ್ರೆಸ್ ನಿರ್ವೀರ್ಯತನ. ಭ್ರಷ್ಟಚಾರದ ಮೂಲವೇ ಇವರು……. ನೆಹರು ರವರು ಗುರು ಮೇಲಿನ ಭಕ್ತಿಯಿಂದ ಗಾಂಧಿಯವರನ್ನು ಮಹಾತ್ಮ ಎಂದು ದೇಶವು ಒಪ್ಪಿಕೊಳ್ಳುವಂತೆ ಮಾಡಿದರು.
ಮಂಜುನಾಥ್ ಆರ್. – ಕೊನೆಗೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
1946 ರಲ್ಲಿ ಸ್ವತಂತ್ರ ಭಾರತದ ಪ್ರಧಾನಿ ಯಾರಾಗಬೇಕೆಂದು ಮತ ಚಲಾಯಿಸಿದಾಗ 15ರಲ್ಲಿ 12 ಮತಗಳು ಸಿಕ್ಕಿರುವುದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರಿಗೆ. ಅದನ್ನು ತಿರಸ್ಕರಿಸಿ ಒಂದೂ ಮತ ಸಿಗದ ನಹರೂವನ್ನು ಗಾಂಧೀಜಿ ಯಾಕೆ ಪ್ರಧಾನಿ ಮಾಡಿದರು. ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕೆಂದ ಗಾಂಧಿ ಹಾಗೂ ನೆಹರೂ ’ಆ’ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡದೆ “ಇದನ್ನು ನಾನು ತಿರಸ್ಕರಿಸುತ್ತೇನೆ” ಎಂದ ಗಾಂಧಿಯನ್ನು ಸರ್ವಾಧಿಕಾರಿಯಲ್ಲದೆ ಮತ್ತಿನ್ನೇನೆಂದು ಕರೆಯಬೇಕು ?