ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 24, 2012

ಚಿತ್ರ ವಿಮರ್ಶೆ – ಪಿ ಎಸ್ ಐ ಲವ್ ಯು

‍ನಿಲುಮೆ ಮೂಲಕ

-ಸಂದೀಪ್ ಎನ್

“I just want to see you

When youre all alone

I just want to catch you if I can

I just want to be there

When the morning light explodes

On your face it radiates

I cant escape

I love you till the end…”  ಎಂಬ ಹಿನ್ನೆಲೆ ಗಾಯನದೊಂದಿಗೆ, ಇಬ್ಬರು ಯುವ ಜೋಡಿಗಳಾದ  Holly ಮತ್ತು Gerryಯ ನಡುವಿನ ಸರಸ/ವಿರಸದ  ಸಂಬಾಷಣೆಯೊಂದಿಗೆ ಚಿತ್ರವನ್ನು Richard Lagravenese ನಿರ್ದೇಶಿಸಿದ್ದಾರೆ. ಚಿತ್ರವೂ 2004 ನೇ ಇಸವಿಯಲ್ಲಿ Ceclia Ahern  ಎಂಬ Irish ಕವಿ ಬರೆದ  ಕಾದಂಬರಿ ಆಧಾರಿತವಾಗಿದೆ.

Holly ಮತ್ತು Gerry ಇಬ್ಬರು Manhattan(Newyork) ನಗರದಲ್ಲಿ ವಾಸಿಸುತ್ತಿರುತಾರೆ. ಇಬ್ಬರು ಎಷ್ಟು ಪ್ರೀತಿಸುತ್ತಿರುತರೋ ಅಷ್ಟೇ ಜಗಳವು ಸಹ. ಈ ನಡುವೆ ಸದಾ ಹಸನ್ಮುಖಿ  ಹಾಗು ಸಂಗೀತ ಪ್ರಿಯನಾದ  Gerryಯು “Brain Tumor” ನಿಂದ ಅಸುನೀಗುತ್ತಾನೆ.ಕಾಯಿಲೆ ಇರುವ ವಿಷಯ Gerry ಗೆ ತಿಳಿದಿದ್ದರು ತನ್ನ ಪ್ರಿಯದನ್ನೆಗೆ ತಿಳಿಸುವುದಿಲ್ಲ. ಅವನ ಸಾವಿನ ದು:ಖದಿಂದ Holly ಗೆ ಹೊರಬರಲಾಗುವುದಿಲ್ಲ . ಈ ನಡುವೆ  Holly ಯ ತಾಯಿ, ತಂಗಿ ಹಾಗು ಸ್ನೇಹಿತರು ತನ್ನ ದು:ಖದಿಂದ ಹೊರಬಂದು ಹೊಸ ಜೀವನ  ಹಾಗು ವೃತ್ತಿಯ ಬಗ್ಗೆ ಚಿಂತಿಸಲು ಪ್ರಯತ್ನಿಸುತ್ತಾರೆ.

Holly ತನ್ನ 30ನೇ ಹುಟ್ಟುಹಬ್ಬವನ್ನು ತಾಯಿ,ತಂಗಿ ಹಾಗು ಸ್ನೇಹಿತರ ಜೊತೆ ಆಚರಿಸಬೇಕಾದರೆ ಉಡುಗೊರೆಯಾಗಿ ಒಂದು cake ಅಂಚೆಯ ಮೂಲಕ ಬರುತ್ತದೆ. ಅದನ್ನು ತೆರೆದಾಗ ಒಂದು ಆಶ್ಚರ್ಯ ಉಂಟು ಮಾಡುವಂತಹ ಸಂಗತಿ ಜರಗುತ್ತದೆ. ಅದೇನೆಂದರೆ, cake ನ ಜೊತೆಗೆ  Gerry  ಯ ಧ್ವನಿ  ಇರುವ ಒಂದು Recorder ಸಿಗುತ್ತದೆ. Gerry ಗೇ ತನ್ನ ಸಾವಿನ ಬಗ್ಗೆ ಮೊದಲೇ ಅರಿವಿದ್ದ ಕಾರಣ ಈ ಅಂಚೆ ಹಾಗು ಮತ್ತಷ್ಟು ಅಂಚೆಗಳನ್ನು ತಿಂಗಳಿಗೆ ಒಮ್ಮೆ ಬರುವಂತೆ ವ್ಯವಸ್ಥೆ ಮಾಡಿರುತ್ತಾನೆ ಮತ್ತು ಆ ಪತ್ರದಲ್ಲಿ ಬರೆದಿರುವಂತೆ ನಡೆದುಕೊಳ್ಳಲು  ವಿನಂತಿಸಿರುತ್ತಾನೆ. ಅದರಂತೆ ಅವಳ ಹುಟ್ಟುಹಬ್ಬದ ಸಲುವಾಗಿ ತನ್ನ ಸ್ನೇಹಿತೆಯರೊಂದಿಗೆ  “Night Party ” ಗೆ ತೆರಳುತ್ತಾಳೆ. ಕೆಲವು ತಿಂಗಳ ನಂತರ ಮತ್ತೊಂದು ಪತ್ರ Holly ಕೈ ಸೇರುತ್ತದೆ. ಆ ಪತ್ರದಲ್ಲಿ Gerry ಯ ಹುಟ್ಟುರಾದ “Ireland” ಗೆ ಅವಳ ಸ್ನೇಹಿತೆಯರೊಡನೆ ಪ್ರವಾಸ ತೆರಳಲು ವ್ಯವಸ್ತೆ ಮಾಡಿರುವುದಾಗಿ ತಿಳಿಸಿತ್ತಾನೆ.

ಅದರಂತೆ Holly ತನ್ನ ಸ್ನೇಹಿತೆಯರಾದ  Denise ಹಾಗು Sharon  ಜೊತೆ ಪ್ರಕೃತಿಗೆ ಹೆಸರುವಾಸಿಯಾದ Ireland ಗೆ ತೆರಳುತ್ತಾಳೆ . ಸವಿಯಾದ ಸಮಯವನ್ನು ಕಳೆಯುವಾಗ ಒಬ್ಬ ಸ್ನೇಹಿತೆ ಮದುವೆ ನಿಶ್ಚಯದ ಬಗ್ಗೆ ಮತ್ಹೊಬ್ಬ ಸ್ನೇಹಿತೆ  ಗರ್ಬವತಿ ಎಂದು ತಿಳಿದು ಅವಳ ಜೀವನದ ಬಗ್ಗೆ ಚಿಂತಿಸುತ್ತಾಳೆ. ಈ ನಡುವೆ Williams ಎಂಬ ಒಬ್ಬ ಗಾಯಕನ ಪರಿಚಯವಾಗುತ್ತದೆ. ದಿನ ಕಳೆದಂತೆ  Williams  ತನ್ನ ಗಂಡನ ಬಾಲ್ಯ ಸ್ನೇಹಿತ ಎಂಧು ತಿಳಿದು ದೂರವಾಗುತ್ತಾಳೆ .ಈ ಎಲ್ಲ ಜಂಜಾಟದಿಂದ ಹೊರಬರಲು ತಾನು ಅಬ್ಯಸಿಸುತ್ತಿದ್ದ Shoe ವಿನ್ಯಾಸದ  ಕೆಲಸವನ್ನು ಮುಂದುವರಿಸುತ್ತಾಳೆ. ಅದರ ಸಫಲತೆ ಇಂದ ತನ್ನ ಸ್ನೇಹಿತೆಯ ಮದುವೆಗೆ ಹೊಸ ರೀತಿಯ Shoe  ಒಂದನ್ನು ಸಿದ್ದಪಡಿಸುತ್ತಾಳೆ. ಇದೆ ಆತ್ಮವಿಶ್ವಾಸ ಅವಳ ವೃತ್ತಿಗೆ  ಒಂದು ಹೊಸ ಆಯಾಮ ಸಿಗುತ್ತದೆ. ಆದರೆ, Holly  ಎಂದಿಗೂ ಮತ್ತೊಬ್ಬರನ್ನು ಪ್ರೀತಿಸುವ ಧೈರ್ಯ ಮಾಡುವುದಿಲ್ಲ.

* * * * * * * *

ಚಿತ್ರಕೃಪೆ : ಅಂತರ್ಜಾಲ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments