ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 28, 2014

9

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-3

‍CSLC Ka ಮೂಲಕ

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

ಭಾಗ 1,   ಭಾಗ 2

Social Science Column Logo
ಭ್ರಷ್ಟಾಚಾರ ಮತ್ತು ನೈತಿಕತೆಯ ಚೌಕಟ್ಟು

ಪ್ರಭುತ್ವದ ಚೌಕಟ್ಟಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸುವುದನ್ನು ಸಾಮಾನ್ಯವಾಗಿ ಭ್ರಷ್ಟಾಚಾರ ಎಂದು ಕರೆಯುತ್ತಾರೆ, ಮತ್ತು ಅದು ಈ ಚೌಕಟ್ಟಿನೊಳಗೆ ಅನೈತಿಕವೆಂದೂ ಸಹ ಗುರುತಿಸಲ್ಪಡುತ್ತದೆ. ಆದರೆ ಸಾಮಾಜಿಕ ನೆಲೆಯಲ್ಲಿ ಹೀಗೆ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳದಿರುವುದಕ್ಕೂ ಅನೈತಿಕತೆಗೂ ಸಂಬಂಧವನ್ನು ಇಲ್ಲಿಯ ಜನರು ಭಾವಿಸಿಕೊಳ್ಳದಿರುವುದನ್ನು ಮೇಲಿನ ಉದಾಹರಣೆಗಳಲ್ಲಿ ಉಲ್ಲೇಖಿಸಿದ್ದೆ. ಪ್ರಭುತ್ವದ ಚೌಕಟ್ಟಿನ ಸಾರ್ವಜನಿಕ ಜೀವನದ ನೆಲೆಯಲ್ಲಿ ಈ ರೀತಿಯ ನಡವಳಿಕೆಯು ಅನೈತಿಕ ಮತ್ತು ಅದರಿಂದಲೇ ಅದು ಭ್ರಷ್ಟಾಚಾರ ಎಂದು ಸಾಮಾನ್ಯವಾಗಿ ಸಮಾಜಶಾಸ್ತ್ರೀಯವಾಗಿ ಮತ್ತು ಮಾದ್ಯಮ ವಲಯದಲ್ಲಿ ಗುರುತಿಸಲ್ಪಡುತ್ತಿದ್ದರೂ ಜನರು ಹಾಗೆ ಪರಿಭಾವಿಸುವುದು ಕಂಡುಬರುವುದಿಲ್ಲ. ಏಕೆ ಹೀಗೆ? ಇದನ್ನೂ ನಾನು ಒಂದು ಸಾಂಸ್ಕೃತಿ ಭಿನ್ನತೆಯ ಪ್ರಶ್ನೆಯಾಗಿಯೇ ನೋಡುವ ಪ್ರಯತ್ನ ಮಾಡಿದ್ದೇನೆ.
ಯಾವುದೇ ವ್ಯಕ್ತಿ ಅಥವಾ ಸಮೂಹದ ಯಾವುದೇ ಒಂದು ನಡವಳಿಕೆ ಭ್ರಷ್ಟನಡವಳಿಕೆ ಎಂದು ಗುರುತಿಸುವುದು ಹೇಗೆ ಆರಂಭವಾಯಿತು? ಈ ಪ್ರಶ್ನೆ ಇಟ್ಟುಕೊಂಡು ಹುಡುಕಿದರೆ ಸಿಗುವ ಉತ್ತರ ವಿಶೇಷವಾದದ್ದು. ಭಾರತದಲ್ಲಿ ಈ ರೀತಿಯ ವಿವರಣೆಗಳು ಬ್ರಿಟೀಷರಿಂದ ಆರಂಭವಾಗುತ್ತದೆ. ಬ್ರಿಟೀಷರು ಸುಳ್ಳು ಆಚರಣೆಗಳನ್ನೇ ಭ್ರಷ್ಟ ಆಚರಣೆಗಳೆಂದು ಗುರುತಿಸುತ್ತಾರೆ. ಇದಕ್ಕೂ ನಿಜ ರಿಲಿಜನ್ ಮತ್ತು ಸುಳ್ಳು ರಿಲಿಜನ್ ಎನ್ನುವ ಪಶ್ಚಿಮದ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿಗೂ ಸಂಬಂಧವಿದೆ. ನಿಜವಾದ ರಿಲಿಜನ್ (ಗಾಡ್ನ)ನೈತಿಕ ನಿಯಮಗಳ ಆಧಾರದಲ್ಲಿದ್ದು ಅದನ್ನು ಪಾಲಿಸುವವರು ನೈತಿಕರು ಎಂದಾದರೆ ಸುಳ್ಳು ರಿಲಿಜನ್ ಅನ್ನು ಅನುಸರಿಸುವವರು ನಿಜ ರಿಲಿಜನ್ನ ನೈತಿಕ ನಿಯಮಗಳಿಗೆ ವಿರುದ್ಧವಾದ ಅನೈತಿಕ ಆಚರಣೆಗಳನ್ನು ಮಾಡುವವರು ಎಂದು ಗುರುತಿಸಲಾಗುತ್ತದೆ. ಭ್ರಷ್ಟತೆಯ ಇಂಗ್ಲೀಷ್ ರೂಪವಾದ ಕರಪ್ಟ್ (Corrupt) ಅಂದರೆ ಸತ್ಯವು ಭ್ರಷ್ಟಗೊಳ್ಳುವುದು ಅಥವಾ ವಿರೂಪಗೊಳ್ಳುವುದು ಎಂದರ್ಥ. ಭಾರತೀಯ ಸಮಾಜ ಮತ್ತು ಇಲ್ಲಿಯ ಆಚರಣೆಗಳನ್ನು ವಿವರಿಸಬೇಕಾದರೆ ಅವರು ಬಳಸಿದ ಭ್ರಷ್ಟ ರಿಲಿಜನ್(Corrupt Religion), ಭ್ರಷ್ಟ ಸಮಾಜ(Corrupt Society), ಮತ್ತು ಭ್ರಷ್ಟ ಆಚರಣೆಗಳು(Corrupt Practices) ಎಂಬ ವಿವರಣೆಗಳು ಈ ಹಿನ್ನೆಲೆಯಿಂದಲೇ ಬರುತ್ತವೆ. ಹಾಗಾಗಿ, ಪಾಶ್ಚಿಮಾತ್ಯರ ರಿಲಿಜನ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭ್ರಷ್ಟ ಆಚರಣೆ ಅಥವಾ ನಡವಳಿಕೆ ಎಂದರೇನೆ ಅದು ಅನೈತಿಕ ಆಚರಣೆ ಅಥವಾ ಅನೈತಿಕ ನಡವಳಿಕೆ ಎಂದರ್ಥವಾಗುತ್ತದೆ. ಹಾಗಾಗಿ, ಈ ಸಾಂಸ್ಕೃತಿಕ ಹಿನ್ನೆಲೆಯ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರೇನೆ ಈ ಚೌಕಟ್ಟಿನ ಪ್ರಕಾರ ಅನೈತಿಕತೆಯಲ್ಲಿ ತೊಡಗಿದ್ದಾರೆ ಎಂದಾಗುತ್ತದೆ. ಆದರೆ ಭಾರತೀಯ ಸಂದರ್ಭದಲ್ಲಿ ಈ ರಿಲಿಜಸ್ ಸಂಸ್ಕೃತಿಯ ಹಿನ್ನೆಲೆ ಇಲ್ಲದಿರುವುದರಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಅನೈತಿಕ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಮನೋಭಾವನೆ ಜನರಲ್ಲಿ ಬರುವುದಿಲ್ಲ. ಬದಲಾಗಿ ಹೆಚ್ಚೆಂದರೆ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡು ತಪ್ಪುಮಾಡಿದ್ದಾರೆ ಎಂದುಕೊಳ್ಳುತ್ತಾರೆ ಅಷ್ಟೇ.

ಪ್ರಭುತ್ವ ಮತ್ತು ಭ್ರಷ್ಟಾಚಾರ:
ಒಟ್ಟಾರೆ ಭಾರತದಲ್ಲಿನ ವಸಾಹತು ಪೂರ್ವ ರಾಜಕೀಯ ರಚನೆಗಳ ಕುರಿತ ಬರವಣಿಗೆಗಳನ್ನು ಗಮನಿಸಿದರೆ ಆಗ ಇಂದು ನಾವು ಹೊಂದಿರುವ ರಾಜಕೀಯ ರಚನೆಗಳೆಲ್ಲವೂ ಬಹುತೇಕ ಅಸ್ತಿತ್ವದಲ್ಲಿ ಇಲ್ಲದಿರುವುದು ಕಾಣುತ್ತದೆ. ಮೂಲಭೂತವಾಗಿ ಇಲ್ಲಿದ್ದ ಪ್ರಭುತ್ವಗಳು ಜನರ ಸಾಮಾಜಿಕ ವ್ಯವಹಾರಗಳನ್ನು ಯಾವುದೇ ರೀತಿಯಲ್ಲಿ ನಿರ್ವಹಿಸುವ ಅಥವಾ ನಿಯಂತ್ರಿಸುವ ಕೆಲಸ ಮಾಡುತ್ತಿರಲಿಲ್ಲ. ಮತ್ತು ಆ ರೀತಿಯ ಯಾವುದೇ ಕಾನೂನು ವ್ಯವಸ್ಥೆಗಳು ಇಲ್ಲಿ ಅಸ್ತಿತ್ವದಲ್ಲಿದ್ದುದು ನಮಗೆ ಕಂಡುಬರುವುದಿಲ್ಲ. ಎಲ್ಲವನ್ನೂ ಜನರೇ ನಿರ್ವಹಿಸಿಕೊಳ್ಳುತ್ತಿದ್ದರು. ಹಾಗಾಗಿ ಇಲ್ಲಿ ಆಗ ಈಗಿನಂತೆ ಪ್ರಭುತ್ವದಿಂದ ನಿರ್ವಹಿಸಲ್ಪಡುವ ಸಾರ್ವಜನಿಕ ಜೀವನದ ಕಲ್ಪನೆಯೇ ಇರಲಿಲ್ಲ. ಈ ರೀತಿಯ ಸಾಂಸ್ಕೃತಿಕ ಜೀವನ ಕ್ರಮಕ್ಕೆ ಒಗ್ಗಿಕೊಂಡಿದ್ದಂತಹ ಮತ್ತು ಅದರ ಆಧಾರದ ಮೇಲೆಯೇ ತಮ್ಮ ವ್ಯವಹಾರ ನಡೆಸುವ ಜೀವನವಿಧಾನವನ್ನು ಬೆಳೆಸಿಕೊಂಡು ಬಂದ ಇಲ್ಲಿಯ ಜನರಿಗೆ ಇಂದಿನ ಪ್ರಭುತ್ವ ನಿಯಂತ್ರಿತ ಸಾರ್ವಜನಿಕ ವಲಯ ಎನ್ನುವುದೇ ಒಂದು ರೀತಿಯಲ್ಲಿ ಅಪರಿಚಿತವಾದ ಸಂಗತಿಯಾಗಿದೆ. ಆಳಿಸಿಕೊಳ್ಳುತ್ತಿರುವವರು ಮಾತ್ರವಲ್ಲ ಆಳುವ ಸ್ಥಾನದಲ್ಲಿರುವ ಆಡಳಿತಗಾರರೂ ಸಹ ಇದೇ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಅವರಿಗೂ ಪಶ್ಚಿಮ ಸಂಸ್ಕೃತಿಯಲ್ಲಿ ಒಂದು ನಿಗಧಿತ ಸಾಂಸ್ಕೃತಿಕ ಸಂದರ್ಭದ ಚೌಕಟ್ಟಿನಲ್ಲಿ ಬೆಳೆದು ಬಂದ ಈ ಸಾರ್ವಜನಿಕ ಜೀವನದ ರೀತಿನೀತಿಗಳು ಅಪರಿಚಿತವೇ!

ಅಲ್ಲದೇ ಇನ್ನೂ ಕುತೂಹಲದ ಸಂಗತಿ ಎಂದರೆ, ಪ್ರಭುತ್ವದ ಚೌಕಟ್ಟಿನಲ್ಲಿ ಮಾತ್ರ ಒಂದು ಕ್ರಿಯೆ ಭ್ರಷ್ಟಾಚಾರವೆನಿಸಿಕೊಳ್ಳುತ್ತದೆಯೇ ಹೊರತು ಅದರ ಹೊರಗೆ ಅಲ್ಲ. ಇದಕ್ಕೆ ಕಾರಣ ಮೇಲೆ ಹೇಳಿದ ಹಾಗೆ ಭ್ರಷ್ಟಾಚಾರ ಎನ್ನುವುದು ಒಂದು ಅನೈತಿಕ ಎಂದಾಗುವುದು ರಿಲಿಜಸ್ ಸಂಸ್ಕೃತಿ ಹಿನ್ನೆಲೆಯಲ್ಲಿ. ಪ್ರಭುತ್ವದಲ್ಲಿರುವ ಸಾರ್ವಜನಿಕವಲಯಕ್ಕೆ ಈ ಹಿನ್ನೆಲೆ ಇದೆ (ಭಾರತಕ್ಕೆ ‘ಸ್ಟೇಟ್’ ಎನ್ನುವ ಸಂಸ್ಥೆಯನ್ನು ಪಶ್ಚಿಮದಿಂದ ಎರವಲು ಪಡೆದಿದ್ದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ). ಆದರೆ ಇಲ್ಲಿ ಕೆಲಸಮಾಡುತ್ತಿರುವ ಜನರು ಆ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರಲ್ಲ. ಇಲ್ಲಿಯವರ ದೃಷ್ಟಿಯಲ್ಲಿ ಇದು ಬೇರೆಯದೇ ರೀತಿಯ ಗ್ರಹಿಕೆ ಇದೆ. ಅಂದರೆ ಸರ್ಕಾರ ನಿಗಧಿ ಪಡಿಸಿದ ಕಾನೂನುಗಳ ಪ್ರಕಾರ ಒಂದು ಚಟುವಟಿಕೆ ನಡೆಯದೇ ಇರುವುದನ್ನು, ಸರ್ಕಾರಿ ಕೆಲಸಗಳಿಗೆ ಇತರೆ ಹಣ/ಕಾಣಿಕೆಯನ್ನು ಸ್ವೀಕರಿಸುವುದನ್ನು ಭ್ರಷ್ಟಾಚಾರ ಎಂದು ಪರಿಗಣಿಸಲ್ಪಡುತ್ತದೆ. ಅದೇ ನಾವು ಒಂದು ಹೊಟೆಲ್ನಲ್ಲಿ ಊಟದ ನಂತರ ಕೊಡುವ ‘ಟಿಪ್ಸ್’ನ್ನು ಯಾರೂ ಸಹ ಭ್ರಷ್ಟಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಸರ್ಕಾರಿ ವಲಯದಲ್ಲಿ ಈ ರೀತಿಯ ಕಾರ್ಯವು ಭ್ರಷ್ಟಾಚಾರವೆಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಭ್ರಷ್ಟಾಚಾರ ಎಂಬುದು ಪ್ರಭುತ್ವದ ಜೊತೆಗೆ ತಳುಕುಹಾಕಿಕೊಂಡಿರುವಂತದ್ದೇ ವಿನಹ ಭಾರತೀಯ ಸಂಸ್ಕೃತಿ, ಸಮಾಜದ ಜೊತೆಗಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಆದ್ದರಿಂದಲೇ ಭ್ರಷ್ಟಾಚಾರ ಮಾಡಿದವರಾಗಲೀ, ಭಾರತೀಯರಾಗಲೀ ಒಂದು ಅನೈತಿಕ ಚಟುವಟಿಕೆ, ಮಾಡಲೇ ಬಾರದ ಕೆಲಸ ಎಂಬಂತೆ ಭಾವಿಸದಿರುವುದನ್ನು ಕಾಣುತ್ತೇವೆ. ಹಾಗಾಗಿಯೇ, ವಿಪರ್ಯಾಸವೆಂದರೆ, ಜನಲೋಕಪಾಲ್ ಮಸೂದೆಯನ್ನು ಮಂಡಿಸಿದವರ ವಿರುದ್ಧವೇ ಭ್ರಷ್ಟಾಚಾರ ಆರೋಪಗಳು ಕೇಳಿಬರುವುದು.

ಹೀಗಾಗಿಯೇ ಭ್ರಷ್ಟಚಾರಿಗಳೆಂದು ಆರೋಪ ಹೊತ್ತವರು ಮತ್ತು ಆರೋಪಿಸುವವರು ಮಾಧ್ಯಮಗಳಲ್ಲಿ ಅದೊಂದು ಅತ್ಯಂತ ಅನೈತಿಕವೆಂಬಂತೆ ಬಿಂಬಿಸಿದರೂ ಸಹ ಅವರ ಸಾಮಾನ್ಯ ಅನುಭವದಲ್ಲಿ ಅದೇನು ದೊಡ್ಡ ಅಪರಾಧವಲ್ಲ ಎಂಬಂತೆ ಅವರೂ ಇರುತ್ತಾರೆ ಮತ್ತು ಜನಸಾಮಾನ್ಯರೂ ಸಹ ಅವರನ್ನು ಮಾಧ್ಯಮವಲಯದಲ್ಲಿ ಆರೋಪಿಸುವಷ್ಟು ಅನೀತಿವಂತರೆಂದೇನು ಭಾವಿಸದೆ ಸಹಜವೆಂಬಂತೆ ಸ್ವೀಕರಿಸಿಬಿಡುತ್ತಿದ್ದಾರೆ. ಈ ಧ್ವಂಧ್ವ ಪ್ರತಿನಿತ್ಯದ ನಮ್ಮೆಲ್ಲರ ಅನುಭವಕ್ಕೂ ಬರುತ್ತದೆ. ಹೀಗಿರುವಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಎನ್ನುವುದನ್ನು ಭಾರತದ ಸಾರ್ವಜನಿಕ ವಲಯದಿಂದ ತೊಲಗಿಸಬೇಕೆಂದರೆ ನಮ್ಮ ಮುಂದಿರುವ ದಾರಿ ಏನು?

ಕೊನೆಯದಾಗಿ:
ಈ ಮೇಲಿನ ಪ್ರಶ್ನೆಗೆ ಉತ್ತರಿಸಬೇಕೆಂದರೆ ನಮ್ಮ ಮುಂದಿರುವ ದಾರಿ ಒಂದೇ ಅದು ಸಾಂಸ್ಕೃತಿಕ ಭಿನ್ನತೆಯ ಅಧ್ಯಯನ. ಭಾರತೀಯರು ಏಕೆ ಹೆಚ್ಚಿನ ಮಟ್ಟದಲ್ಲಿ ಸಾರಾಸಗಟಾಗಿ ಭ್ರಷ್ಟಾಚಾರದ ಭಾಗವಾಗಿಬಿಡುತ್ತಿದ್ದಾರೆ ಮತ್ತು ಅದನ್ನು ಸಹಜವೆನ್ನುವಂತೆ ಸ್ವೀಕರಿಸುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲ ಏನನ್ನು ತೊಲಗಿಸಬೇಕೆಂದು ತಿಳಿದುಕೊಳ್ಳಲೂ ಸಹಾ ಅದಕ್ಕೆ ಇರುವ ದಾರಿ ಇದೊಂದೇ. ಭಾರತ ಮತ್ತು ಪಶ್ಚಿಮದ ನಡುವೆ ಇರುವ ಭಿನ್ನತೆಯನ್ನು ಅರ್ಥೈಸಿಕೊಳ್ಳದೆ ಈ ಸಮಸ್ಯೆಗೆ ದಾರಿ ದೊರೆಯದು. ಏಕೆಂದರೆ ಈ ಸಮಸ್ಯೆ ಉದ್ಭವಾಗಿರುವುದು ಪಶ್ಚಿಮದ ಸಾರ್ವಜನಿಕ ವಲಯ, ರಾಜಕೀಯ ವ್ಯವಸ್ಥೆ ಮತ್ತು ಅದರ ನೈತಿಕ ಚೌಕಟ್ಟುಗಳ ಒಳಗಿನಿಂದ ಈ ಭ್ರಷ್ಟಾಚಾರದ ಸಮಸ್ಯೆ ದಿನೇ ದಿನೇ ಇಲ್ಲಿ ಬೆಳೆಯುತ್ತಿದೆ ಎಂದೇ ಹೇಳಬಹುದು. ಹೀಗಾಗಿ ಭಾರತದ ಸಮಾಜ ಮತ್ತು ಸಂಸ್ಕೃತಿಯ ಸ್ವರೂಪವೇನು? ಪಶ್ಚಿಮದ ಸಮಾಜ ಮತ್ತು ಸಂಸ್ಕೃತಿಯ ಸ್ವರೂಪವೇನು? ಇದೆರಡರ ನಡುವಿನ ಭಿನ್ನತೆ ಏನು? ಈ ಭಿನ್ನತೆಗಳಿಗೂ ಭಾರತೀಯ ಸಂದರ್ಭದಲ್ಲಿ ವಿವರಿಸಲಾಗುತ್ತಿರುವ ಭ್ರಷ್ಟಾಚಾರದ ಸಮಸ್ಯೆಗೂ ಏನು ಸಂಬಂಧ? ಎಂಬ ಪ್ರಶ್ನೆಗಳನ್ನು ಬಿಡಿಸಲು ಸಾಧ್ಯವಾದರೆ ಮಾತ್ರವೇ ಭ್ರಷ್ಟಾಚಾರ ಸಮಸ್ಯೆಯಿಂದ ಹೊರಬರುವ ಮಾರ್ಗ ಯಾವುದು? ಒಂದು ಕ್ರಿಯೆ ಯಾವ ಸಂದರ್ಭದಲ್ಲಿ ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ? ಎಂಬುದಕ್ಕೆ ಉತ್ತರಗಳು ಗೋಚರವಾಗುತ್ತವೆ.

Read more from ಲೇಖನಗಳು
9 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಮಾರ್ಚ್ 28 2014

    ಭ್ರಷ್ಟಾಚಾರವನ್ನು ಬೆಂಬಲಿಸಿ ಈ ಲೇಖನ ಬರೆದಿರುವ ಲೇಖಕರಿಗೆ ಧಿಕ್ಕಾರ.

    ಉತ್ತರ
    • Balachandra Bhat's avatar
      ಮಾರ್ಚ್ 29 2014

      ವೈದಿಕ ಧರ್ಮದಿಂದಲೇ ಬೆಳೆದುಬಂದ ಶರಣ ಧರ್ಮವನ್ನು ಸ್ವಲಾಭಕ್ಕೋಸ್ಕರ ಬೇರೆ ರಿಲಿಜಿಯನ್ನಿನ ಸ್ಥಾನಮಾನ ನೀಡಬೇಕೆಂದು ಭಂಡ ಸೆಕ್ಯುಲರಿಸ್ಟ್ ಗಳು ಸರ್ಕಾರದ ಹಿಂಬಾಗಿಲಿನ ಮೂಲಕ ನಡೆಸುತ್ತಿರುವ ಹೇಯ ಕೃತ್ಯವು ಪಭುತ್ವಕ್ಕೆ ಒಳಪಟ್ಟು ತನ್ಮೂಲಕವೇ ನಡೆಯಲ್ಪಡುತ್ತಿರುವ ಅತಿ ದೊಡ್ಡ ಬೃಷ್ಟಾಚಾರವಾಗಿದೆ.
      ಇದು ಪ್ರಭುತ್ವಕ್ಕೆ ಒಳಪಟ್ಟು ನಡೆಯಲ್ಪಟ್ಟಿರುವದರಿಂದ ಅಧಿಕೃತವಾಗಿ ಬೃಷ್ಟಾಚಾರ ಎಂದು ಕರೆಯಲಾಗದಿದ್ದರೂ ’ಅನೈತಿಕ’ ಎಂದು ನಿಸ್ಸಂಶಯವಾಗಿ ಹೇಳಬಹುದು.

      ಉತ್ತರ
      • Nagshetty Shetkar's avatar
        Nagshetty Shetkar
        ಮಾರ್ಚ್ 29 2014

        “ವೈದಿಕ ಧರ್ಮದಿಂದಲೇ ಬೆಳೆದುಬಂದ ಶರಣ ಧರ್ಮ”

        ನೀವೊಬ್ಬ ಮೂರನೇ ದರ್ಜೆಯ ಕಮೇಡಿಯನ್. ಇಂತಹ ಕೀಳು ಜೋಕು ಮಾಡಿ ಶರಣರ ಸಂಯಮವನ್ನು ಪ್ರಶ್ನಿಸಬೇಡಿ ಮಿ. ಭಟ್.

        ಉತ್ತರ
        • Balachandra Bhat's avatar
          ಮಾರ್ಚ್ 29 2014

          @Shetkar, ಹೌದು. ಶರಣ ಎಂಬುದು ವೈದಿಕ ಶಬ್ದ. ಬಸವಾದ್ವೈತ ಎಂಬುದು ವೈದಿಕರ ಅದ್ವೈತದಿಂದ ಬಂದಿದ್ದೆಂದು ಒಮ್ಮೆಯೆ ನಿಮಗೆ ಸಾಬೀತು ಪಡಿಸಿದ್ದೇನೆ. ಆದರೆ ನಿಮಗಿನ್ನೂ ಅದನ್ನು ಅಲ್ಲಗೆಳೆಯಲು ಸಾಧ್ಯವಾಗಿಲ್ಲ. ಸಾಧ್ಯವಿದ್ದರೆ ಸಾಭೀತುಪಡಿಸಿ.
          ನೀವು ನನ್ನ ಮೊದಲ ಪ್ರತಿಕ್ರಿಯೆಯಲ್ಲಿನ ಉಳಿದೆಲ್ಲಾ ಸಂಗತಿಗಳಿಗೆ ಮೌನವಾಗಿದ್ದನ್ನು ಗಮನಿಸಿದರೆ ಶರಣ ಧರ್ಮಕ್ಕೆ ಪ್ರತ್ಯೇಕ ರಿಲಿಜಿಯನ್ನಿನ ಸ್ಥಾನಮಾನವನ್ನು ಕೊಡುವಂತೆ ಹೋರಾಟ ಮಾಡುವದನ್ನು ಬೃಷ್ಟಾಚಾರ ಹಾಗೂ ಅನೈತಿಕತೆ ಎಂದು ತಾವು ಒಪ್ಪಿಕೊಂಡಿದ್ದೀರೆಂದಾಯಿತು. 🙂 ಥ್ಯಾಂಕ್ಸ್

          ಉತ್ತರ
          • Nagshetty Shetkar's avatar
            Nagshetty Shetkar
            ಮಾರ್ಚ್ 29 2014

            ಹೇ! ಹೇ! ನೀವು ಹೂಸಿದಷ್ಟೇ ಸುಲಭವಾಗಿ ಬಹಳಷ್ಟನ್ನು ಸಾಬೀತು ಪಡಿಸಿತ್ತಿರುತ್ತೀರಿ ಮಿ. ಭಟ್. ನಿಮ್ಮ ಜೊತೆಗೆ ಅಪಾನವಾಯು ಸ್ಪರ್ಧೆಗೆ ನಾನು ಇಳಿಯಬಯಸುವುದಿಲ್ಲ.

            ಉತ್ತರ
            • Balachandra Bhat's avatar
              ಮಾರ್ಚ್ 29 2014

              ಶರಣರ ಬಾಯಲ್ಲಿ ಎಂತಹ ಸುಸಂಸ್ಕೃತ ಮಾತು. ನಿಮ್ಮ ಯೋಗ್ಯತೆ ನಮಗೆ ಗೊತ್ತು ಬಿಡಿ, ಅಪಾನವಾಯು ಸ್ಪರ್ಧೆಗಷ್ಟೆ ಸೀಮಿತ ನಿಮ್ಮ ಯೋಗ್ಯತೆ.

              ಉತ್ತರ
      • ಗಿರೀಶ್'s avatar
        ಗಿರೀಶ್
        ಮಾರ್ಚ್ 29 2014

        ಬಾಲಚಂದ್ರ+೧೦೦೦,

        ಅಪ್ಪನನ್ನು ಅನುಮಾನಿಸುವುದು ಅವರ ಗುಣ ಬಿಡಿ. ಅಪ್ಪನಿಗೆ ಅನುಮಾನ ಬೇಕಿಲ್ಲ 😉

        ಉತ್ತರ
        • Balachandra Bhat's avatar
          ಮಾರ್ಚ್ 29 2014

          ನಿಜ ಗಿರಿಶ್ ಅವರೆ, ಅದೇ ಈ ಮೇಲ್ಕಂಡ ಶರಣರ ದೌರ್ಭಾಗ್ಯ. 😀

          ಉತ್ತರ
    • Naani's avatar
      Naani
      ಏಪ್ರಿಲ್ 2 2014

      “ಭ್ರಷ್ಟಾಚಾರವನ್ನು ಬೆಂಬಲಿಸಿ ಈ ಲೇಖನ ಬರೆದಿರುವ ಲೇಖಕರಿಗೆ ಧಿಕ್ಕಾರ.” ಥೂ ಥೂ ಥೂ ಥೂ…. ಈ ಕಾಮಿಡಿ ಪೀಸಿಗೆ ಲೇಖನ ಅರ್ಥ ಆಗದಿದ್ದರೆ ತನ್ನ ರಂದ್ರಗಳನ್ನು (ಬಾಯಿಗೂ ಇರುತ್ತೆ) ಮುಚ್ಚಿಕೊಂಡು ಇರೋದು ಬಿಟ್ಟು ಕಡ್ಡಿ ಆಡ್ಸೋ ಕೆಲ್ಸಾ ಏಕಪ್ಪಾ ಮಾಡ್ತಿದೆ??? ಇದೊಂದೇ ಸಾಲು ಈ ಯಪ್ಪನ ತಲೆಯೊಳಗೆ ಬರೀ ಲದ್ದಿ ತುಂಬಿದೆ ಅನ್ನೋಕೆ ಸಾಕ್ಷಿ ಅಲ್ವಾ? ಇನ್ನೇನಾದರೂ ಸಾಕ್ಷಿ ಬೇಕಾ? ನನಗಂತೂ ಬೇಕಿಲ್ಲಪ್ಪ.

      ಉತ್ತರ

Leave a reply to Balachandra Bhat ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments