ಜಾತೀಯತೆ: ಏನು? ಎತ್ತ?
– ಡಾ. ಶ್ರೀಪಾದ ಭಟ್
ಸೆಪ್ಟೆಂಬರ್ 13, 2007ರಂದು 11 ನೇ ಪಂಚವಾರ್ಷಿಕ ಯೋಜನೆ ಕುರಿತ ಯೋಜನಾ ಆಯೋಗದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ “ಸ್ಪೆಶಲ್ ಅಟೆನ್ಷನ್ ವುಡ್ ನೀಡ್ ಟು ಬಿ ಪೇಯ್ಡ್ ಟು ಡಿಸ್ಟ್ರಿಕ್ಟ್ಸ್ ವಿತ್ ಎಸ್‍ಸಿ, ಎಸ್‍ಟಿ, ಒಬಿಸಿ ಆಂಡ್ ಮೈನಾರಿಟಿ ಕಾನ್ಸನ್‍ಟ್ರೇಶನ್’’ ಎಂದು ಭಾಷಣ ಮಾಡಿದ್ದರು. ಅಲ್ಪ ಸಂಖ್ಯಾತರಿಗೆ ಸರ್ಕಾರಿ ಯೋಜನೆಯಲ್ಲಿ ಸಿಂಹಪಾಲು ದೊರೆಯಬೇಕು ಎಂದೂ ಅವರು ಹೇಳಿದ್ದರು. ಸಿಂಗ್ ಮೂಲತಃ ಅರ್ಥಶಾಸ್ತ್ರಜ್ಞರು, ರಾಜಕಾರಣಿಯಲ್ಲ. ಆದರೆ ಅವರ ಧಾಟಿ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಯಾವ ರಾಜಕಾರಣಿಗೂ ಕಡಿಮೆ ಇರಲಿಲ್ಲ. ಅಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಎಲ್ಲ ಹಾಜರಿದ್ದರು. ಸರ್ಕಾರದ ಯೋಜನೆಯ ಲಾಭ ಬಡವರಿಗೆ ದೊರೆಯಬೇಕು ಎಂದು ಹೇಳುವ ಬದಲು ಅಲ್ಪ ಸಂಖ್ಯಾತರಿಗೆ ದೊರೆಯಬೇಕು ಎಂದು ಅವರು ಹೇಳಿದ್ದರಲ್ಲಿ ಅಭಿವೃದ್ಧಿಗಿಂತಲೂ ಮತಗಳಿಕೆಯ ವಾಸನೆ ಢಾಳಾಗಿ ರಾಚಿದರೆ ಅದರಲ್ಲಿ ಅವರ ತಪ್ಪಿಲ್ಲ. ಕರ್ನಾಟಕದಲ್ಲಿ ಶಾದಿ ಭಾಗ್ಯ ಯೋಜನೆ ಕುರಿತ ಸರ್ಕಾರದ ನಿಲುವನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡಬಹುದು. ಆ ಸರ್ಕಾರ, ಈ ಸರ್ಕಾರ ಎಂದಲ್ಲ ಎಲ್ಲ ಸರ್ಕಾರಗಳ ಯೋಜನೆಗಳೂ ಮತಗಳಿಕೆಯತ್ತ ನೆಟ್ಟಿರುವುದರಿಂದ ಅವರ ಘೋಷಣೆಗಳು ಹೀಗಾಗಿಬಿಡುತ್ತವೆ ಅಷ್ಟೆ.
ಸತ್ಕಾರದ ಸ್ವರೂಪ
-ಮಯೂರಲಕ್ಷ್ಮಿ
ಮನೆಗೆ ಬರುವ ಅತಿಥಿ ಅಭ್ಯಾಗತರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವುದು ನಮ್ಮ ಭಾರತೀಯ ಸಂಸ್ಕೃತಿಯಷ್ಟೇ! ಸುಭಾಷಿತವೊಂದು ಹೀಗಿದೆ:
ಯ: ಸಾಯಮತಿಥಿಂ ಪ್ರಾಪ್ತಂ
ಯಥಾಶಕ್ತಿ ನ ಪೂಜಯೇತ್|
ತಸ್ಯಾಸೌ ದುಷ್ಕೃತಂ ದತ್ತ್ವಾ
ಸುಕೃತಂ ಚಾಪಕರ್ಪತಿ||
ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ
– ರಾಘವೇಂದ್ರ ಅಡಿಗ ಎಚ್ಚೆನ್
ಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅದು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ.
ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು “ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.
ನಾಡು- ನುಡಿ:ಮರುಚಿಂತನೆ :– “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 5
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಕುರುಬರ ಮೂಲವನ್ನು ಕುರಿತಾದ ವಿಶ್ಲೇಷಣೆಗಳನ್ನು ನೋಡವುದಾದರೆ ಪ್ರಸ್ತುತ ಲಭ್ಯವಿರುವ ಸಾಹಿತ್ಯವು ಕುರುಬರ ಮೂಲಕ್ಕೆ ಕೆಲವು ಕಥೆ ಮತ್ತು ಪುರಾಣಗಳನ್ನು ಆಧಾರವಾಗಿರಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಾಲುಮತ ಪುರಾಣ ಮತ್ತು ಉಂಡಾಡು ಪದ್ಮಣ್ಣನ ಕಥೆಗಳು ಕುರುಬರ ಮೂಲದ ಕುರಿತಾದ ವಿಶ್ಲೇಷಣೆಗಳನ್ನು ಬಹಳವಾಗಿ ಪ್ರಭಾವಿಸಿದೆ. ಇದನ್ನು ನಾವು ಕುರುಬರ ಕುರಿತಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ಚಿಂತಕರಾದ ಎಡ್ಗರ್ ಥಸ್ರ್ಟನ್ ರವರ ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ ಆಫ್ ಸೌಥ ಇಂಡಿಯಾ (1987) ಮತ್ತು ಎಂಥೋವೆನ್ ರವರ ದಿ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಬಾಂಬೆ, (1990) ಪುಸ್ತಕಗಳ ವಿವರಗಳಲ್ಲಿಯೇ ಗುರುತಿಸಬಹುದಾಗಿದೆ. ಕುರುಬರ ಮೂಲವನ್ನು ಕುರಿತಾಗಿ ಹಲವಾರು ಕಥೆಗಳು ಚಾಲಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದಂತಹ ಕಥೆಗಳನ್ನು ಹೇಳುವುದು ಅಲ್ಲದೇ, ಈ ಎಲ್ಲಾ ಕಥೆಗಳು ಅಂದಿನ ಅಥವಾ ಆ ಪ್ರದೇಶದ ಜಾನಪದ ಹಿನ್ನೆಲೆಯಲ್ಲಿ ರೂಪ ಪಡೆದಿದ್ದು, ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬದಲಾವಣೆಗಳೊಂದಿಗೆ ಉಳಿದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಈ ಎಲ್ಲಾ ಕಥೆಗಳು ಕುರುಬರ ಮೂಲವನ್ನೇ ವಿವರಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಬಹುಪಾಲು ಉಪಜಾತಿಗಳು (ಅವುಗಳನ್ನು ಉಪಜಾತಿಗಳು ಎಂದು ಹೇಗೆ ಗುರುತಿಸುವುದು ಎನ್ನುವುದು ಬೇರೆಯದೇ ಪ್ರಶ್ನೆ) ತಮ್ಮದೇ ಆದಂತಹ ಬೇರೆ ಬೇರೆ ಕಥೆಗಳನ್ನು ಹೇಳುವುದು ಕಂಡುಬರುತ್ತದೆ. ಕುರುಬ ಸಮುದಾಯದಲ್ಲಿನ ಆಚರಣೆ ಮತ್ತು ಉಪಜಾತಿಗಳ ಕುರಿತಾದ ವಿವರವನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗಲಿದೆ.
‘ಗುಹೆ’ ತೊರೆದ ‘ಸಿಂಹ’
– ರಾಘವೇಂದ್ರ ಅಡಿಗ ಎಚ್ಚೆನ್
ಹೌದು ಸ್ನೇಹಿತರೆ, ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
ಚಿಕ್ಕಂದಿನಿಂದಲೂ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು. ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ 200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ ‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’ ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.
ಧರ್ಮದ ಅರ್ಥ ಮತ್ತು ಅದರ ಮೇಲಿನ ಹಣದ ಸಂಬಂಧ
-ನವೀನ್ ನಾಯಕ್
ಜಗತ್ತಿಗೆ ಕಮ್ಯುನಿಸಂನ ಕೊಡುಗೆ ಕತ್ತಲೆ!?
– ನರೇಂದ್ರ ಕುಮಾರ್
ರಷ್ಯಾ ಕಮ್ಯುನಿಸ್ಟ್ ದೇಶವಾಗಿತ್ತು. ಅದು ಕೂಡಾ “Super Power” ಎನಿಸಿಕೊಂಡು ಅಮೆರಿಕಕ್ಕೆ ಸರಿಸಮಾನವಾಗಿ ನಿಂತಿತ್ತು. ಅಮೆರಿಕ ಅಂತರಿಕ್ಷಕ್ಕೆ ಉಪಗ್ರಹವನ್ನು ಚಿಮ್ಮಿಸಿದರೆ, ರಷ್ಯಾವೂ ಉಪಗ್ರಹವನ್ನು ಕಳುಹಿಸಿತ್ತಿತ್ತು. ಹೀಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ, ತಾನು ಅಮೆರಿಕಕ್ಕಿಂತ ಹಿಂದಿಲ್ಲ ಎಂದು ತೋರಿಸುತ್ತಿತ್ತು. ಯುದ್ಧ ಸಾಮಾಗ್ರಿಗಳ ಉತ್ಪಾದನೆಯಲ್ಲೂ ಅದು ತನ್ನ ಸಾಮರ್ಥ್ಯ ತೋರ್ಪಡಿಸುತ್ತಿತ್ತು. ಒಟ್ಟಿನಲ್ಲಿ, ರಷ್ಯಾವೂ ಒಂದು ಮುಂದುವರೆದ ರಾಷ್ಟ್ರವೆಂದು ಜಗತ್ತು ನಂಬಿತ್ತು. ಆದರೆ, 80ರ ದಶಕದ ಅಂತ್ಯ ಭಾಗದಲ್ಲಿ ಗೋರ್ಬಚೇವ್ ಅವರು ಅಧಿಕಾರಕ್ಕೆ ಬಂದ ನಂತರ ಪೊರೆ ಹರಿಯಿತು. ರಷ್ಯಾದಿಂದ ಕಮ್ಯುನಿಸಂ ಉಚ್ಚಾಟಿಸಲಾಯಿತು. USSR ಎನ್ನುವ ರಾಷ್ಟ್ರ ಛಿದ್ರವಾಯಿತು. ಆಗ ತಿಳಿದ ಸತ್ಯವೆಂದರೆ, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಕಮ್ಯುನಿಸ್ಟ್ ದೇಶಗಳಲ್ಲಿ ಏನಾಗುತ್ತಿದೆ, ಅವುಗಳ ನಿಜವಾದ ಸ್ಥಿತಿ ಏನೆಂಬುದು ಹೊರಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಮಾದ್ಯಮಗಳೂ ಅಲ್ಲಿನ ಸರಕಾರದ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ, ತಮಗೆ ಬೇಕಾದ ಚಿತ್ರವನ್ನು ಮಾತ್ರ ಎಲ್ಲೆಡೆ ಅವರು ಬಿತ್ತರಿಸುತ್ತಿರುತ್ತಾರೆ.
ಒಂದು ಊರಿನ ಕಥೆ
– ಹಂಸಾನಂದಿ
ಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ. ಎಲ್ರೂ ಅವರವರ ಮನೆಯಲ್ಲಿ ಅಡುಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ ಬಡಿಸ್ತಿದ್ದರಂತೆ.
ಆಗ ಊರಿಗೊಬ್ಬ ಹೊಸ ಡೊಣೆ ನಾಯಕ ಬಂದು ಠರಾವು ಮಾಡಿದನಂತೆ. ಈಗ ಇರೋ ಅಡುಗೆಗೆಳಲ್ಲಿ ಪೌಷ್ಟಿಕತೆ ಸಾಲದು. ಯಾವ ಅಡಿಗೇಭಟ್ಟರಿಗೂ ಒಂದು ಚೂರೂ ಹೊಸತು ಮಾಡೋ ಆಸೆಯಾಗಲಿ, ಕ್ರಿಯಾಶೀಲತೆಯಾಗಲೀ ಒಂದೂ ಇಲ್ಲ. ಅದಲ್ಲದೆ ಇದು ಪೀಟ್ಜ್ಝಾ ಬರ್ಗರ್ ಕಾಲ. ನಾವೂ ಎಲ್ಲರ ಸಮಕ್ಕೆ ಇರಬೇಕಾದರೆ ಹೊಸತನ್ನೇನಾದರೂ ತರಲೇ ಬೇಕು. ಅದು ಬಿಟ್ಟು ಅಪ್ಪ ಹಾಕಿದ ಆಲದ ಮರ ಅಂತ ಬರೀ ಇಡ್ಲಿ ಸಾಂಬಾರ್ ತಿನ್ನುತ್ತಾ ಇರಬೇಕೇನು? ಪ್ರಪಂಚದಲ್ಲಿ ಇರೋದೆಲ್ಲ ನಾವು ಮಾಡೋಕಾಗ್ದೇನು? ನಾವು ಒಂದು ಹೊಸ ಆಡಿಗೇ ಕಾರ್ಖಾನೆಯನ್ನೇ ತೆಗೆಯೋಣ ಅಂದನಂತೆ. ಹಲವಾರು ಜನ ಚಪ್ಪಾಳೆ ತಟ್ಟಿದರಂತೆ. ಒಂದಷ್ಟು ಜನ ಅವನನ್ನೂ ಹಿಂಬಾಲಿಸಿದರಂತೆ. ಒಂದಷ್ಟು ಜನ ಸುಮ್ಮನೇ ಕುತೂಹಲದಿಂದ ನೋಡಿದರಂತೆ. ಒಂದಷ್ಟು ಜನ ಈ ಡೊಣೆನಾಯಕಂದೇನು, ನಾವೇ ನೋಡ್ಕೋತೀವಿ ನಮ್ಮ ನಮ್ಮ ಅಡಿಗೇ ಮನೇಲೇನೇ, ಅಕ್ಕಿ ರೊಟ್ಟಿ ಬದಲು ಜೋಳದ ರೊಟ್ಟಿ ಮಾಡ್ತೀವಿ. ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕಿ ಕೂಟಿನ ರುಚಿ ಚೆನ್ಣಾಗಿರತ್ತೋ ಇಲ್ವೋ ಅಂತ. ಅದಕ್ಕೆ ಕಾರ್ಖಾನೆ ಯಾಕೆ ಬೇಕು ಅಂದರಂತೆ. ಆದರೆ ಗುಂಪಿನ ಗದ್ದಲದಲ್ಲಿ ಅವರ ಮಾತು ಯಾರಿಗೂ ಕೇಳಲಿಲ್ಲವಂತೆ.







