ವಿಷಯದ ವಿವರಗಳಿಗೆ ದಾಟಿರಿ

Archive for

31
ಮಾರ್ಚ್

ಶಿಕಾರಿ ಮಿಸ್ ಆಯ್ತು..!

– ಶ್ರೀಧರ್ ಜಿ.ಸಿ ಬನವಾಸಿ

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣನಾಯಕನಾಗಿ ಅಭಿನಯಿಸಿದ ಮಲಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಅಭಿನಯದ `ಶಿಕಾರಿ’ ಬಿಡುಗಡೆಯ ಭಾಗ್ಯವನ್ನು ಕಂಡಿದೆ. ಪ್ರಶಸ್ತಿ ಪುರಸ್ಕೃತ
`ಗುಬ್ಬಚ್ಚಿಗಳು’ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಇಡೀ ಚಿತ್ರಕ್ಕೆ ಮುಮ್ಮಟ್ಟಿ ಬೇಕಿತ್ತೋ, ಅಥವಾ ಇಲ್ಲವೋ ಅಂತ ನಾವು ತರ್ಕ ಹಾಕಿ ನೋಡಿದಾಗ ಮುಮ್ಟಟ್ಟಿ ಬದಲು ನಮ್ಮ ಕನ್ನಡದಲ್ಲಿಯ ಯಾವುದಾದರೂ ಹೀರೋಗಳನ್ನು ಬಳಸಿಕೊಳ್ಳಬಹುದಿತ್ತು ಎಂಬುದನ್ನು  ಒಂದೇ ಮಾತಿನಲ್ಲಿ ಹೇಳಬಹುದು. ಇಲ್ಲವೇ ಕನ್ನಡದಲ್ಲಿರುವ ದೇವರಾಜ್ ರಂತಹ ಜನಪ್ರಿಯ ಗಡಸು ದನಿಯ ಕಲಾವಿದರು ಮುಮ್ಮುಟ್ಟಿ ಪಾತ್ರಕ್ಕೆ ದನಿ ನೀಡಬಹುದಿತ್ತು. ಚಿತ್ರದಲ್ಲಿ ಅದು ಆಗಲಿಲ್ಲ. ಅದಕ್ಕೆ ಕಾರಣ ಕೂಡ ಸ್ಟಷ್ಟವಾಗಿದೆ, ಮುಮ್ಮಟ್ಟಿ ಕನ್ನಡದಲ್ಲಿ ಮಾತನಾಡಲು ರಿಸ್ಕು ತೆಗೆದುಕೊಂಡಿದ್ದು, ಕೊನೆಪಕ್ಷ ಮಾತನಾಡಿಸಿದ್ದರೂ, ಡಬ್ಬಿಂಗ್ನಲ್ಲಿ ನಿರ್ದೇಶಕರು ಸ್ವಲ್ಪ ಹುಷಾರಾಗಿರಬೇಕಿತ್ತು.ಮುಮ್ಮಟ್ಟಿ ಕನ್ನಡ ಮಾತನಾಡುತ್ತಿದ್ದಾರೋ, ಮಲಯಾಳಂ ಮಾತನಾಡುತ್ತಿದ್ದಾರೋ ಎಂಬುದು ಅರ್ಥವಾಗುವುದೇ ಇಲ್ಲ. ಏಷ್ಟೋ ಸೀನ್ಗಳಲ್ಲಿ ಅವರು ಶಬ್ಗಗಳನ್ನು ನುಂಗಿ ಮಾತನಾಡುತ್ತಾರೆ. ಅವರು ಏನು ಹೇಳಿದರು ಅನ್ನುವುದೇ ಅರ್ಥವಾಗುವುದೇ ಇಲ್ಲ.  ಮುಮ್ಮಟ್ಟಿ ಮಾತನಾಡಿದ ಕನ್ನಡ,ನಮ್ಮ ಕನ್ನಡದವರಿಗೆ ಅರ್ಥವಾಗುವುದು ತುಂಬಾ ಕಷ್ಟ.  ಅದೇನಿದ್ದರೂ ಮಲಯಾಳಂ ಶೈಲಿಯಲ್ಲಿ ಕನ್ನಡ ಮಾತನಾಡುವ ಮಲ್ಲುಗಳಿಗೆ ಮಾತ್ರ ಅರ್ಥವಾದೀತು. ಹೆಚ್ಚಿನವರಿಗೆ ಇದು ಇಷ್ಟವಾಗಲೂಬಹುದು.