ವಿಷಯದ ವಿವರಗಳಿಗೆ ದಾಟಿರಿ

Archive for

10
ಮಾರ್ಚ್

ಮುತ್ತು ಪಲಕ

ಸ್ವರ್ಗ ಉಮ್ಮರೆ ಕಾಲ್ ರಡಿಲ್ ಉ೦ಡು.


ತಾನ್ ಪರನ್ನೆ ರಾಯತ್ತೆ ಮೇಲ್ ಪಿರ್ಸ  ಆಕಾತಙ ನ೦ಡವುನಲ್ಲ.


ಆರ್ ತ೦ಡೆ ಚ೦ಙೈಗ್ ನಲ್ಲವುನು ಅವುಡನ. ಅವುನು ಪಡಚವುನುಗು೦ ನಲ್ಲೆ ಆಲಯಿಟ್ಟ್ ಇಕ್ಕ್ ರ.


ಆರಾಯೆ೦ಗು೦ ಜ೦ಡ್ ಪೆನ್ಮಕ್ಕಲೆ ಕಾತೆ೦ಗ್ ಪರಲೋಗತ್ತ್ ನ೦ಙ ಚಮ್ಮೆ ಮುಟ್ಟತ್ ಲ್ ಇಕ್ಕ್ ರ.


ಮರ್ಯಾದಿ ಒಲಿಕ್ಕೋಗಾಯಿಟ್ಟ್ ಪಾವತನತ್ತೆ ಪರ್ತ್ ಗ್ ಕಾಟಾ೦ಟ್ ನಾಲ್ ಎಡ್ಕ್ಡವುನೆ ಮಿಸ್ಕೀನ್

.
ಮಾಪ್ಲೆ ಮರಿಚ್ಚೆ ಪೆನ್ನಙೋಗು, ಪಾವತ೦ಕ್, ಯತೀಮ್ ಮಕ್ಕೋಗು, ಕಿದ್ಮತ್ ಎಡ್ಕ್ನುನು ಪಡಚವು೦ಡೆ ತೆರುಲು ಸೊರಪನಿ ಆಕ್ ರ೦ಕ್ ಸಮಾನ.


ಉಮ್ಮ ಅಬ್ಬೋಗು ಮರ್ಯಾದಿ ಕೊಡ್ಕೋರ. ಅ೦ಙಲೆ ಕಿದ್ಮತ್ ಎಡ್ಕೊರು.


ಹರಾಆಯೆ ಸೊರಪನಿರೆ ದೂರ ಆಕಿಟ್ಟ್ ನಲ್ಲೆ ನಲ್ಲ ಸೊರಪನಿರೆ ಆಕೋರು.


ತಡಿ ಪಿನ್ನೆ ಚಟ್ಟೆ ತುನಿ ಶುದ್ದ ಆಕ್ಯೋ೦ಟ್ ಇನ್ನಿಲ್ಲೆ೦ಗ್ ಸೀಕ್ ಬ೦ಡ್.


ಕನಕ್ ರೆ ವಜಿನ , ಕನಕ್ ರೆ ಪಲಕ, ಕನಕ್ ರೆ ವರಕ್ಕ್ ತಡೀಗ್ ನಲ್ಲೆದ್.

10
ಮಾರ್ಚ್

ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ….ಹೂ

-ಸುಗುಣ ಮಹೇಶ್

ತ್ರಿದಲಂ ತ್ರಿಗುಣಕಾರಂ
ತ್ರಿನೇತ್ರಂ ಚ ತ್ರಯಾಯುಧಂ
ತ್ರಿಜನ್ಮಪಾಪ ಸಂಹಾರಮ್
ಏಕ ಬಿಲ್ವಮ್ ಶಿವಾರ್ಪಣಂ||
ಈ ಶ್ಲೋಕ ಎಲ್ಲರೂ ಕೇಳಿರಲೇ ಬೇಕಲ್ಲವೇ..
ಮೂರು ದಳದಂತಿರುವ ಈ ಪತ್ರೆಯನ್ನು ತ್ರಿನೇತ್ರನಾದವನು, ತ್ರಿಗುಣಗಳಂತಿರುವ ಮೂರು ನಯನಗಳುಳ್ಳವನೂ ಆದ ಹಾಗೂ ಅತಿ ಚೂಪಾದ ಮೂರು ಭಾಗಗಳಿರುವ ಆಯುಧವಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುತ್ತಾನೋ ಅವನು ನನ್ನೇಲ್ಲಾ ಮೂರು ಜನ್ಮದ ಪಾಪಗಳನ್ನು ನಾಶ ಮಾಡೆಂದು ಬೇಡುತ್ತ ಈ ಬಿಲ್ವಪತ್ರೆಯನ್ನು ಸರ್ಪಿಸುತ್ತೇನೆ.. ಎಂಬುದೇ ಈ ಶ್ಲೋಕದ ಅರ್ಥ….
ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದೆ ಮನಃಶಾಸ್ತ್ರದ ಕಾರಣಗಳೂ ಇವೆಯೆಂದು ಹೇಳುತ್ತಾರೆ.. ಸತ್ತ್ವ,ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಉತ್ಪನ್ನವಾಗುತ್ತದೆ. ಬಾಲ್ಯಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ.
ಬಿಲ್ವ ಪತ್ರೆಯ ತೊಟ್ಟು ಲಿಂಗದ ಕಡೆಯೂ ಮತ್ತು ಎಲೆಗಳ ತುದಿಗಳು ನಮ್ಮೆಡೆಗೂ ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕೆಂಬ ಪ್ರತೀತಿ ಇದೆ.