ವಿಷಯದ ವಿವರಗಳಿಗೆ ದಾಟಿರಿ

Archive for

18
ಮಾರ್ಚ್

ಮಂಕು ತಿಮ್ಮನ ಕಗ್ಗ – ರಸಧಾರೆ (೨)

– ರವಿ ತಿರುಮಲೈ

ಜೀವ ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳನೆರೆದುಮಿಹುದಂತೆ ||
ಭಾವಕೊಳಪಡದಂತೆ ಅಳತೆಗಳವಡದಂತೆ |
ಆ ವಿಶೇಷಕೆ ಮಣಿಯೋ – ಮಂಕುತಿಮ್ಮ ||

(ಜೀವ ಜಡ ರೂಪ ಪ್ರಪಂಚವನು ಅದಾವುದೋ ಆವರಿಸಿಕೊಂಡು ಒಳನೆರೆದು ಇಹುದಂತೆ ಭಾವಕ್ಕೆ ಒಳಪಡದಂತೆ ಅಳತೆಗೆ ಅಳವಡದಂತೆ ಆ ವಿಶೇಷಕೆ ಮಣಿಯೋ- ಮಂಕುತಿಮ್ಮ )
(ಒಳನೆರೆದು=ಒಳಗೆ ತುಂಬಿ , ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ)

ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ ತುಂಬಿಕೊಂಡಿರುವ, ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ  ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ (ಪರಮಾತ್ಮನಿಗೆ) ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ.

ಮತ್ತಷ್ಟು ಓದು »

18
ಮಾರ್ಚ್

ನಯನ

– ಮೇಘ ಶ್ರೀಧರ್

ಕಣ್ಮುಚ್ಚಿ ಕಣ್ತೆರೆಯೆ ಹೀಗೊಂದು ಕವನ
ಬಚ್ಚಿಟ್ಟ ಭಾವಗಳ ಕನ್ನಡೀಕರಣ
ಪಲ್ಲವಿಸುವಾ ಮನಕೆ ಶಬ್ದಗಳ ಚರಣ
ಪದಗಳಲಿ ಪೋಣಿಸಿದ ಚಂದದಾಭಾರಣ
ಮತ್ತಷ್ಟು ಓದು »

18
ಮಾರ್ಚ್

ತುಂಬೆ ನಿನ್ನ ಮಹಿಮೆ ಏನೆಂಬೆ …

-ಅನಿತಾ ನರೇಶ್ ಮಂಚಿ

ವಾಮನನಲ್ಲಿ ಬಲಿ ಚಕ್ರವರ್ತಿ ‘ ನಾನಿನ್ನು ಭೂಮಿಗೆ ಬರುವ ದಿನ ಯಾವುದು ‘ಎಂದು ಕೇಳಿದಾಗ ವಾಮನನ ಉತ್ತರದಲ್ಲಿ’ ತುಂಬೆಯ ಮರದಡಿ ಮಕ್ಕಳು

ಆಟ ಆಡುವ ದಿನ ‘ ಎಂಬುದು ಒಂದಾಗಿತ್ತು.

ಏನು ಈ ತುಂಬೆಯ ಗಿಡ, ಏನಿದರ ಮಹತ್ವ ..? ನಮ್ಮ ಸುತ್ತು ಮುತ್ತೆಲ್ಲ ಕಾಣಸಿಗುವ ಪುಟ್ಟ ಎಲೆಗಳ ಮೈಯಲ್ಲೆಲ್ಲ ತೇರಿನಂತೆ ಹೂವನ್ನೇರಿಸಿಕೊಂಡ ಚೆಲುವೆಯೇ ಇವಳು..ತುಂಬಾ ಸಣ್ಣ ನಾಲ್ಕರಿಂದ ಐದು ಕವಲುಗಳಿಂದ ಕೂಡಿದ ಐದರಿಂದ ಎಂಟು ಇಂಚಿನವರೆಗೆ ಬೆಳೆಯುವ ಸಸ್ಯ.
ಇದರ ಸಸ್ಯ ಶಾಸ್ತ್ರೀಯ ಹೆಸರು ‘ Leacus indica .
ಪುಟ್ಟ ಚೆಂಡಿನಂತಹ ರಚನೆಯ ತುಂಬೆಲ್ಲ ಬಿಳಿ ಹೂಗಳು ಇದನ್ನು  ಅಂದಗಾತಿಯನ್ನಾಗಿ ಮಾಡಿದೆ.ಇದರ ಹೂಗಳ ಆಕಾರವನ್ನು ಆಗ ತಾನೇ ಹುಟ್ಟಿದ ಮಗುವಿನ ಸುಕೋಮಲ ಪಾದಗಳಿಗೆ ಹೋಲಿಸುತ್ತಾರೆ. ಇದಕ್ಕೆ  ಒಂದು ಪುಟ್ಟ ಕತೆ ಕೂಡ ಇದೆ.. ಕೇಳಿ .