‘ಗಾಂಧಿ ಬಂದ’ : ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ?
-ಡಾ| ಜಿ. ಭಾಸ್ಕರ ಮಯ್ಯ
ಇಂದಿನ ಕನ್ನಡದ ಸಾಹಿತ್ಯವಿಮರ್ಶೆ ಒಂದು ವಿಚಿತ್ರ ಪೂರ್ವಗ್ರಹದಿಂದ ಪೀಡಿತವಾಗಿದೆ. ಹಸಿವಿನಿಂದ ಸಾಯುತ್ತಿರುವ ಲಕ್ಷಾಂತರ ಗತಿಹೀನ ಜನರ ಬವಣೆಯ ಬಗೆಗಾಗಲಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಕಠೋರ ನೀತಿಗಳಿಂದಾಗಿ ಈ ಭಾರತವು ಇಥಿಯೋಪಿಯಾ, ಸೂಡಾನಿನಂತೆ ನಾಶವಾಗುತ್ತಿರುವ ಬಗೆಗಾಗಲಿ ಯಾವುದೇ ಸಂಕಟ ಅಥವಾ ನೋವು ನಮ್ಮ ಇಂದಿನ ಸೃಜನಶೀಲ ಲೇಖಕರಿಗಾಗಲೀ ವಿಮರ್ಶಕರಿಗಾಗಲೀ ಕಾಣಿಸುವುದಿಲ್ಲ. ಹಾಡಿದ್ದನ್ನೇ ಹಾಡುವ ಕಿಸುಬಾಯಿ ದಾಸನ ಹಾಗೆ ಇವರಿಗೆ ಕಾಣಿಸುತ್ತಿರುವುದು – ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಲೇಖಕರು ಹಾಗೂ ಅವರ ‘ಕೊಲೆಗಡುಕ’ ಕಾವ್ಯ! ಕೋಮುವಾದೀ ರಾಜಕಾರಣಕ್ಕೆ ಹೆಚ್ಚೆಂದರೆ 150 ವರ್ಷಗಳ ಇತಿಹಾಸವಿದ್ದರೆ, ಎಲ್ಲಾ ಮತಗಳಲ್ಲೂ ಇರುವ ಪುರೋಹಿತಶಾಹಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇನ್ನು ಮಾರ್ಕ್ಸ್ ಅವರಿಂದ ಮಾರ್ಕ್ಸ್ ವಾದ ಹೊರಹೊಮ್ಮಿ ಬೆಳೆದುಬಂದ ಹಾಗೆ ‘ಮನು’ವಿನಿಂದ ಮನುವಾದವು ಬೆಳೆದು ಬಂದಿದೆಯೆ? ಶ್ರೇಣೀಕೃತ ಜಾತಿವ್ಯವಸ್ಥೆ ಮನುವಿನ ಸೃಷ್ಟಿಯೇ? ಇದಕ್ಕೆ ಸಂಬಂಧಿಸಿದ ‘ಸಮಾಜಶಾಸ್ತ್ರ’ ಇದನ್ನು ಸಮರ್ಥಿಸುತ್ತದೆಯೇ?
ಇದೇ ರೀತಿ ಬ್ರಾಹ್ಮಣಶಾಹಿ ಎಂಬ ಪದವನ್ನು ಸಾಮಂತಶಾಹಿ, ಬಂಡವಾಳಶಾಹಿ ಎಂಬ ಪದಗಳ ಹಾಗೆ ಹೇಗೆ ವಿವರಿಸುವುದು? ಆದರೆ, ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಇತ್ಯಾದಿ ವಿಶೇಷಣಗಳನ್ನು ಯಾವ ಅರ್ಥಪರಿಭೇದವಿಲ್ಲದೇ ಲೀಲಾಜಾಲವಾಗಿ ಬಳಸುತ್ತಾ ಅಂದಿನಿಂದ ಇಂದಿನವರೆಗೆ ಆಗಿ ಹೋದ ಲೇಖಕರುಗಳಲ್ಲಿ ಯಾರು ‘ಬ್ರಾಹ್ಮಣ’ ಜಾತಿಯಲ್ಲಿ ಹುಟ್ಟಿದ್ದಾರೆಂದು ಶೋಧಿಸಿ ಅವರನ್ನು ಕಟೆಕಟೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯುವುದು ಆಧುನಿಕ ಕನ್ನಡ ವಿಮರ್ಶೆಯ ಒಂದು ಅತಿ ಪ್ರಮುಖ ಲಕ್ಷಣ. ಮತ್ತಷ್ಟು ಓದು
ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ

ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ.
ಬಿಜೆಪಿಯ ಕಮಾಂಡಿಂಗ್ ಲೀಡರ್ಗೊಂದು ಪತ್ರ
-ಅರವಿಂದ್
ನಿಮ್ಮ ಹುಟ್ಟು ಹಬ್ಬಕ್ಕೆ ಕರ್ನಾಟಕದ ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಜೀವನದ ಸಂಜೆಯಲ್ಲಿ ೭೦ ವರ್ಷಗಳನ್ನು ದಾಟಿಹೊರಟಿರುವಿರಿ. ನಿಮ್ಮ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದೇ. ಮುಖ್ಯಮಂತ್ರಿಯಾಗಿದ್ದಾಗಲೂ ನೀವು ಇಷ್ಟು ವಿಜೃಂಭಣೆಯಿಂದ ಆಚರಿಸಿಕೊಳ್ಳದ ಹುಟ್ಟುಹಬ್ಬ, ಅಧಿಕಾರ ಕಳೆದುಕೊಂಡ ನಂತರ ಆಚರಿಸಿಕೊಂಡದ್ದು ನಿಮ್ಮ ವ್ಯೆರಿಗಳಿಗೆ ಒಂದು ಕಡೆ ನೋವಾದರೆ, ಮತ್ತೊಂದಿಷ್ಟು ಸಂತೋಷ ಸಾರ್. ನೋವು ಯಾಕೆಂದರೆ ನೀವು ೭೦ವರ್ಷವಾದರೂ ಇನ್ನು ಅಧಿಕಾರದ ಆಸೆ ಹೋಗದೇ ಇರೋದು. ಸಂತೋಷ ಏಕೆಂದರೆ ನೀವು ನಿಮ್ಮ ಪ್ರತಿ ಕೆಲಸಗಳಲ್ಲೂ ಅಪವಾದಕ್ಕೀಡಾಗೋದು.
ಒಮ್ಮೆ ಮನಬಿಚ್ಚಿ ಮಾತಾಡಿ ಸಾರ್, ನನ್ನ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಕೆ ಸಾಧ್ಯವಾದ್ರೆ ಉತ್ತರಿಸಿ. ಆಗದಿದ್ರೆ ಬಿಡಿ, ನಾವು ನಿಮ್ಮನ್ನು ಒಪ್ಪಿಕೊಂಡಿರುವ ತಪ್ಪಿಗೆ ಈ ಪ್ರಶ್ನೆಗಳ ಪ್ರಶ್ನೆಯೊಳಗೇ ಅಪ್ಪಿಕೊಂಡಿರ್ತೀವಿ.
ಜನಶತಾಬ್ದಿ ರೈಲಿನೊಳಗೆ
-ಶಿವು.ಕೆ
ಹತ್ತಾರು ಬಾರಿ ಅರಸೀಕೆರೆಯಲ್ಲಿ ಈ ರೈಲಿಗೆ ಟಿಕೆಟ್ ಕೇಳಿದ್ದೇನೆ. ಕಣ್ಣ ಮುಂದೆ ನಿಂತು ಹೊರಡಲು ಸಿದ್ದವಾಗಿದ್ದರೂ ಒಮ್ಮೆಯೂ ಟಿಕೆಟ್ ಸಿಗದಿರುವುದು! ವಾರಕ್ಕೆ ಮೊದಲೇ ಟಿಕೆಟ್ಟುಗಳು ಬುಕ್ ಆಗಿಬಿಡುವ, ಅತ್ಯಂತ ವೇಗವಾಗಿ ಚಲಿಸುವ ಈ ರೈಲಿನ ಬಗ್ಗೆ ನನಗೆ ವಿಚಿತ್ರವಾದ ಕಲ್ಪನೆಯಿತ್ತು. ಈ ರೈಲು ಪ್ರಾರಂಭವಾಗಿ ಎರಡು ವರ್ಷಗಳಾದರೂ ಒಮ್ಮೆಯೂ ಪ್ರಯಾಣಿಸುವ ಅವಕಾಶ ಸಿಗಲಿಲ್ಲವಲ್ಲ ಎನ್ನುವ ನಿರಾಶೆ ಆಗಾಗ ಕಾಡುತ್ತಿತ್ತು. ಅದು ಮತ್ಯಾವುದು ಅಲ್ಲ ಬೆಂಗಳೂರು-ಹುಬ್ಬಳ್ಳಿ ನಡುವೆ ಚಲಿಸುವ ಜನಶತಾಬ್ದಿ ರೈಲು.
ಈ ರೈಲಿನ ಬಗ್ಗೆ ನನಗೆ ಕುತೂಹಲ ಹೆಚ್ಚಾಗಲು ಅನೇಕ ಕಾರಣಗಳಿವೆ. ರಾತ್ರಿ ಊಟ ಮುಗಿದ ಮೇಲೆ ಮುಕ್ಕಾಲು ಗಂಟೆ ನಮ್ಮ ಮಲ್ಲೇಶ್ವರಂ ರೈಲು ನಿಲ್ಡಾಣದ ಪ್ಲಾಟ್ ಫಾರ್‍ಂನಲ್ಲಿ ನನ್ನ ಶ್ರೀಮತಿ ಜೊತೆ ವಾಕಿಂಗ್ ಮಾಡುವಾಗ ಸರಿಯಾಗಿ ಒಂಬತ್ತು ವರೆಯ ಹೊತ್ತಿಗೆ ದೂರದಿಂದಲೇ ಕೂಗೆಬ್ಬಿಸಿಕೊಂಡು ನಿಲ್ಡಾಣದಲ್ಲಿ ನಿಂತು ಕುಳಿತವರೆಲ್ಲರ ಗಮನವನ್ನು ಸೆಳೆಯುತ್ತಾ, ಆಗಿನ ಕಾಲದಲ್ಲಿ ಪಾಳೆಯಗಾರನೊಬ್ಬ ಊರ ನಡುವಿನ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ವೇಗವಾಗಿ ಕುದುರೆ ಮೇಲೆ ಸಾಗುವಾಗ ಆ ರಬಸಕ್ಕೆ ತಲ್ಲಣಗೊಂಡು ದಿಗಿಲಿನಿಂದ ಒಬ್ಬರಿಗೊಬ್ಬರು ಗುಸುಗುಸು ಮಾತಾಡಿಕೊಳ್ಳುವಂತೆ ಇಲ್ಲಿಯೂ ಈ ಜನಶತಾಬ್ಧಿ ರೈಲು ಅದೇ ವೇಗದಲ್ಲಿ ಬಂದುಬಿಡುತ್ತದೆ. ನನ್ನ ಶ್ರೀಮತಿ ” ರೀ ಸ್ವಲ್ಪ ಇರ್ರೀ….ಆ ಧನ ಶತಾಬ್ಧಿ ಹೋಗಿಬಿಡಲಿ” ಎಂದು ನನ್ನ ತೋಳನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದು ನಿಂತುಬಿಡುವಳು. ಹಾಗೆ ನೋಡಿದರೆ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ಸಾಗುವಾಗ ಇತರೆಲ್ಲಾ ರೈಲಿಗಿಂತ ಇದು ವೇಗವಾಗಿಯೇ ಚಲಿಸುತ್ತದೆ. ಮತ್ತಷ್ಟು ಓದು