ಮಂಕು ತಿಮ್ಮನ ಕಗ್ಗ – ರಸಧಾರೆ (೭)
– ರವಿ ತಿರುಮಲೈ
ಏನು ಜೀವನದರ್ಥ?
ಬದುಕಿಗಾರ್ ನಾಯಕರು, ಏಕನೋ ಅನೇಕರೋ?
ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?
ಕುದುರುವುದೆಂತು ಈಯವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ
ಬದುಕಿಗಾರ್= ಬದುಕಿಗೆ=ಯಾರ್, ಧರುಮವೋ= ಧರ್ಮವೋ, ಅಂಧಬಲವೋ= ಅಂಧ ಶ್ರದ್ಧೆಯೋ, ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ.
ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.
ಮತ್ತಷ್ಟು ಓದು
ಕಹಾನಿ, ವಿದ್ಯಾಬಾಲನ್ ಮತ್ತೆ ಮಿಂಚಿಂಗ್
ಫಿಲ್ಮಿ ಪವನ್
ಈ ನಡುವೆ ಎಲ್ಲಾ ಕಡೆಯೂ ವಿದ್ಯಾಬಾಲನ್ ದೇ ದುನಿಯಾ, ಡರ್ಟಿ ಪಿಕ್ಚರ್ ಬಂದಮೇಲೇನೆ ವಿದ್ಯಾ ಬಾಲನ್ ಗೆ ಈ ಪಾಟಿ ಡಿಮ್ಯಾಂಡ್ ಬಂದಿದ್ದು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸಹ ಬಾಚಿಕೊಂಡಿದ್ದರು ವಿದ್ಯಾ, ಅವರಿಗೆ ನಿಲುಮೆ ತಂಡದಿಂದ ಶುಭಾಶಯಗಳು. ಶನಿವಾರ ಭಾನುವಾರ ಐ.ಟಿ ಹುಡುಗರಿಗೆ ಹಬ್ಬ ಇದ್ದ ಹಾಗೆ, ಗುರುವಾರವೇ ಎಲ್ಲ ಪ್ಲಾನ್ ಆಗಿ ಬಿಡುತ್ತೆ ಶುಕ್ರವಾರ ಮತ್ತು ಶನಿವಾರದ ಪ್ರೋಗ್ರಾಮ್. ಹಾಗೇ ಪ್ಲಾನ್ ಮಾಡಿ ಶನಿವಾರ ಕಹಾನಿ ಚಿತ್ರ ನೋಡಲು ಹೋಗಿದ್ದೆವು, ಮೊದಲ ಬಾರಿ ನನ್ನ ಸಹೋದ್ಯೋಗಿಗಳೊಂದಿಗೆ ಸಿನಿಮಾ ಪಯಣ.
ಕೊಲ್ಕತ್ತಾದಂತಹ ಮಹಾನಗರದಲ್ಲಿ ತೆಗೆದುಕೊಳ್ಳುವ ಸಿನಿಮಾ ಕೊಲ್ಕತ್ತಾದ ದೈನಂದಿನ ಬದುಕನ್ನು ತೆರೆದುಕೊಳ್ಳುತ್ತಾ ನಾಯಕಿಯ ಎಂಟ್ರಿ ಕೊಡಿಸುತ್ತೆ. ನಾಯಕಿ ಕೊಲ್ಕತ್ತಾ ಬಂದೊಡನೆ ಪೋಲೀಸ್ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ನೀಡುತ್ತಾಳೆ. ಆಗ ಪ್ರೇಕ್ಷಕನಿಗೂ ಸಹ ಟ್ಯಾಕ್ಸಿ ಚಾಲಕನಿಗೆ ಬಂದ ಅನುಮಾನವೆ ಬರುತ್ತೆ, ಯಾಕೆ ನೇರ ಪೋಲೀಸ್ ಠಾಣೆ ಅಂತ. ನಾಯಕಿ ತುಂಬು ಗರ್ಭಿಣಿ, ಲಂಡನ್ ಅಲ್ಲಿದ್ದ ಪತಿ ಕೊಲ್ಕತ್ತಾಗೆಂದು ಹೊರಟು ಬಂದವರು ಮತ್ತೆ ಕರೆ ಮಾಡಿಲ್ಲ, ಸಂದೇಶ ಕಳುಹಿಸಿಲ್ಲ, ಕಾಣೆಯಾಗಿದ್ದಾರೆ ಎಂದು ನೀಡುವ ದೂರನ್ನು ಪೋಲೀಸರು ಯುವ ಆಫೀಸರ್ ರಾಣಾಗೆ ವಹಿಸುತ್ತಾರೆ. ರಾಣಾ ಮತ್ತು ಪೋಲೀಸ್ ಅಲ್ಲದಿದ್ದರು ಪೋಲೀಸರಂತೆ ತನಿಖೆಯ ಎಲ್ಲ ಕಡೆಗಳಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳುವ ವಿದ್ಯಾಬಾಲನ್ ಜೊತೆಯಾಗಿ ನಡೆಸುವ ಸಸ್ಪನ್ಸ್ ಥ್ರಿಲ್ಲರ್ ಕಹಾನಿ.
ವಿದ್ಯಾ ಬಾಲನ್ ಗೆ ಸಿನಿಮಾದಲ್ಲಿ ಸಹ ವಿದ್ಯಾ ಎಂಬ ಹೆಸರು, ತಮ್ಮ ಪತಿ ಕಳೆದು ಹೋದ ಎಂದು ದೂರು ನೀಡಿದ ದಿನದಿಂದ ಸಂಪೂರ್ಣ ತನಿಖೆ ಮುಗಿಯುವವರೆಗೂ ಪೋಲೋಸರೊಂದಿಗೇ ಇರುತ್ತಾರೆ. ವಿದ್ಯಾ ವೃತ್ತಿಯಲ್ಲಿ ನೆಟ್ವರ್ಕ್ ಸೆಕ್ಯೂರಿಟಿ ಇಂಜಿನಿಯರ್, ಈ ತನಿಖೆ ನಡೆಯುವಾಗ ಅವರ ಕಂಪ್ಯೂಟರ್ ತಲೆ ಬಹಳವಾಗಿ ಉಪಯೋಗವಾಗುತ್ತದೆ, ಅದೇ ಭರದಲ್ಲಿ ನಿರ್ದೇಶಕರು ಪೋಲೀಸರಿಗೆ ಕಂಪ್ಯೂಟರ್ ಬಗೆಗಿನ ಅಲ್ಪ ತಿಳುವಳಿಕೆಯನ್ನೂ ಸಹ ತೋರಿಸಿದ್ದಾರೆ. ಬರೀ ಫೋನಿನಲ್ಲಿ ಮಾತನಾಡಿದ್ದನ್ನೆ ಅರ್ಥ ಮಾಡಿಕೊಂಡು ನನ್ನ ಗಂಡ ಇದೇ ಲಾಡ್ಜಿನಲ್ಲಿ ಇರುತಿದ್ದರು, ಇದೇ ಅಂಗಡಿಯಲ್ಲಿ ಟೀ ಕುಡಿಯುತಿದ್ದರು ಎಂದೆಲ್ಲ ಗೆಸ್ ಮಾಡುವ ವಿದ್ಯಾ ಬುದ್ದಿವಂತಿಕೆ ನಂಬಲು ಸಾಧ್ಯವಾಗದಿದ್ದರು ಸಿನಿಮಾ ಆದ್ದರಿಂದ ನಂಬಿ ಬಿಡಬೇಕಾಗುತ್ತದೆ. ಮತ್ತಷ್ಟು ಓದು