”ಇಂದು’ ಆಕೆ ಬದುಕಿದ್ದರೆ!?’
– ರಾಕೇಶ್ ಶೆಟ್ಟಿ
(ವಾಜಪೇಯಿಯವರ ಬಗ್ಗೆ ನರೇಂದ್ರ ಅವರು ಬರೆದ ಲೇಖನದಲ್ಲಿ ’ಆಪರೇಶನ್ ಬ್ಲೂ ಸ್ಟಾರ್ ಅನ್ನು ಎಳೆದು ತಂದಿದ್ದು ನೋಡಿ ಈ ಹಿಂದೆ ನಾನು ದೇಶ ಕಂಡ ಖಡಕ್ ಪ್ರಧಾನಿಯವರ ಬಗ್ಗೆ ಬರೆದ ಲೇಖನ ನೆನಪಾಯಿತು.ವಾಜಪೇಯಿಯಂತವರನ್ನ ಹೊಗಳಲು ಬೇರೆ ಇನ್ಯಾರನ್ನು ತೆಗಳಬೇಕಾದ ಅವಶ್ಯಕತೆಯೇನಿಲ್ಲ)
ಅದು ೧೯೭೭ – ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ ದಿನ ನಡು ರಾತ್ರಿಯಲ್ಲಿ ಏಕಾಂಗಿಯಾಗಿ ದಿಲ್ಲಿಯಿಂದ ಹೊರಟು,ಜೀಪಿನಿಂದ ಪ್ರಯಾಣ ಶುರು ಮಾಡಿ,ನಂತರ ಜೀಪು ಮುಂದೆ ಸಾಗದಿದ್ದಾಗ ರೈತನ ಟ್ರಾಕ್ಟರ್ ನಲ್ಲಿ ಮುಂದೆ ಸಾಗಿ, ನಡುವಲ್ಲಿ ನದಿ ಬಂದಾಗ ಆನೆಯೇರಿ ಘಟನೆ ನಡೆದ ಸ್ಥಳಕ್ಕೆ ಒಬ್ಬಂಟಿಯಾಗಿ ಬಂದ ಅವರನ್ನು ನೋಡಿದಾಗ ನೊಂದವರಿಗೆ ಸಾಕ್ಷಾತ್ ‘ತಾಯಿ’ಯನ್ನು ನೋಡಿದಂತೆ ಆಯ್ತು. ಆ ತಾಯಿ ‘ಇಂದಿರಾ ಗಾಂಧೀ’ ಅವರ ಕಣ್ಣೀರು ಒರೆಸಿದ್ದಳು.
೧೯೭೧ರ ಸಮಯದಲ್ಲಿ ಪಾಕಿಗಳು ಅವರ ಸಹೋದರರು ಎಂದೆ ಹೇಳಿಕೊಳ್ಳುವ ಬಾಂಗ್ಲಾದೇಶದವರ ಮೇಲೆ ದೌರ್ಜನ್ಯ ಮಾಡುತಿದ್ದಾಗ,ಸೈನ್ಯವನ್ನು ನುಗ್ಗಿಸಿ ಪಾಕಿಗಳಿಗೆ ಮರೆಯಲಾಗದ ಪಾಠವನ್ನೇ ಕಲಿಸಿದ್ದರು, ಆಗಿನ ವಿರೋಧ ಪಕ್ಷದ ನಾಯಕರಾಗಿದ್ದಂತಹ ‘ವಾಜಪೇಯಿ’ ಅವರೇ ಅವರನ್ನು ‘ದುರ್ಗಾ’ ಅಂತ ಕರೆದಿದ್ದರು.ಆ ಯುದ್ಧದಲ್ಲಿ ಇಂದಿರಾ ಗಾಂಧಿಯವರು ನಡೆದು ಕೊಂಡ ರೀತಿಯತ್ತಲ್ಲ, ಆ ಯುದ್ಧದಲ್ಲಿ ಅವರು ತೋರಿದ ಗಟ್ಟಿತನವನ್ನ ಮತ್ಯಾವ ಭಾರತದ ಪ್ರಧಾನಿಯೂ ತೋರಿಸಿಲ್ಲ ಬಿಡಿ.ಖುದ್ದು ಅವರಪ್ಪನನ್ನೇ ಈ ವಿಷಯದಲ್ಲಿ ಅವರು ಮೀರಿಸಿದ್ದರು.
ಮತ್ತಷ್ಟು ಓದು
ಸಂಸ್ಕೃತಿ ಸಂಕಥನ – 26 – ಭಾರತೀಯರ ನೈತಿಕ ಸ್ವರೂಪ
-ರಮಾನಂದ ಐನಕೈ
ನೈತಿಕತೆ ಅಂದರೆ ಏನು? ಜಗತ್ತಿನ ಎಲ್ಲಾ ಸಂಸ್ಕೃತಿಗಳ ನೈತಿಕ ಪ್ರಜ್ಞೆ ಒಂದೇ ತೆರನಾಗಿದೆಯೇ? ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು ಸ್ಪಷ್ಟವಾಗದಿದ್ದರೆ ನಾವು ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಲು ತೊಡಕಾಗುತ್ತದೆ.
ಯುರೋಪಿಯನ್ನರ ನೈತಿಕ ಪ್ರಜ್ಞೆಗೂ ಭಾರತೀಯರ ನೈತಿಕಪ್ರಜ್ಞೆಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಶ್ಚಾತ್ಯರು ನೈತಿಕತೆಯನ್ನು ಗ್ರಹಿಸುವ ರೀತಿಯೇ ಬೇರೆ, ನಾವು ನಿರ್ಣಯಿಸುವ ರೀತಿಯೇ ಬೇರೆ. ಭಾರತೀಯ ಪುರಾಣಗಳು ನೈತಿಕತೆಯ ಬುನಾದಿ ಅನ್ನುತ್ತೇವೆ. ನಮ್ಮ ಸಂಸ್ಕೃತಿಯಲ್ಲಿರುವಷ್ಟು ನೀತಿ ಬೇರೆಲ್ಲೂ ಇಲ್ಲ ಅನ್ನುತ್ತೇವೆ. ರಾಮ, ಕೃಷ್ಣ, ಬುದ್ಧ, ಬಸವ, ಸೀತಾ, ತಾರಾ, ಮಂಡೋದರಿ ಮುಂತಾಗಿ ನೈತಿಕ ಆದರ್ಶದ ಮಾಡೆಲ್ಗಳೇ ನಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಸಿಗುತ್ತವೆ. ಇಷ್ಟಾಗಿಯೂ ಐರೋಪ್ಯರು ಭಾರತೀಯರನ್ನೇಕೆ ಅನೈತಿಕರು ಅಂದರು?
ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ ಅರ್ಥವಾಗಲಿಲ್ಲ. ಇಡೀ ಭಾರತೀಯ ಸಂಸ್ಕೃತಿಗೆ ನೈತಿಕ ತಳಪಾಯವೇ ಇಲ್ಲ ಎಂದು ನಿರ್ಣಯಿಸಿದರು. ಭಾರತೀಯರಿಗೆ ಮೊರಲ್ ಹಾಗೂ ಎಥಿಕ್ಸ್ನ ಕಲ್ಪನೆಯೇ ಇಲ್ಲ. ನಾಗರಿಕತೆಯಿಂದ ಬಹಳ ಹಿಂದುಳಿದಿದ್ದಾರೆ. ಇದೊಂದು ಪತನಗೊಂಡ ಸಂಸ್ಕೃತಿ. ಇಲ್ಲಿನ ಮೂತರ್ಿಪೂಜೆ, ಜಾತಿಪದ್ಧತಿ, ಸಾಮಾಜಿಕ ಆಚರಣೆಗಳೆಲ್ಲವೂ ಅವರಿಗೆ ಅನೈತಿಕ ಆಚರಣೆಗಳಂತೆ ಕಂಡವು. ಭಾರತೀಯರು ಅಪ್ರಾಮಾಣಿಕರು, ಸುಳ್ಳು ಹೇಳುವವರು ಹಾಗೂ ಮೋಸಗಾರರು ಎಂಬುದಾಗಿ ವಣರ್ಿಸಿದರು. ಭಾರತೀಯ ಸಂಸ್ಕೃತಿ ಭ್ರಷ್ಟಗೊಂಡಿದೆ ಎಂದು ವ್ಯಾಖ್ಯಾ ನಿಸಿದರು. ಆದ್ದರಿಂದ ಭಾರತದ ಪುನರುದ್ಧಾರಕ್ಕೆ ಕೈಹಾಕಿದರು. ಈ ಕಾರಣಕ್ಕಾಗೇ ಹಲವು ಕಾನೂನು ಗಳನ್ನು ಮಾಡಿದರು. ಭಾರತದ ಜಾತಿ ವ್ಯವಸ್ಥೆಯನ್ನಂತೂ ಎಥಿಕಲ್ ಭ್ರಷ್ಟಾಚಾರದ ಮೂರ್ತರೂಪ ಎಂದರು. ಭಾರತೀಯರ ಎಥಿಕ್ಸೇ ಅನೈತಿಕವೆಂದು ಜರಿದ ಬಗ್ಗೆ ಸಹಸ್ರ ಉದಾಹರಣೆಗಳಿವೆ.