ವಿಷಯದ ವಿವರಗಳಿಗೆ ದಾಟಿರಿ

Archive for

6
ಮಾರ್ಚ್

ಅ೦ಡ್- ಇ೦ಡ್

-ಶಿಹಾ ಉಳ್ಳಾಲ್

ಅ೦ಡ್ ಉಮ್ಮ ಬುಲ್ಪುಟ್ ತ್ತ್,

ಮೋನು ಚೋರು ಉ೦ಡುಲ್ಲೆ ಚೊ೦ತು.

ಇ೦ಡ್ ಉಮ್ಮ ಬುಲ್ಪುಡ್ ರ್ ,

ಮೋನು ಚೋರು ತ೦ಡಿಲ್ಲೆ ಚೊ೦ತು.

6
ಮಾರ್ಚ್

ಸಶಸ್ತ್ರಕ್ರಾಂತಿಯ ಪೀಠಿಕೆ – ಬರೆದಿತ್ತವನು ಫಡ್ಕೆ…!!!!!!

-ಭೀಮಸೇನ್ ಪುರೋಹಿತ್

ಆಗ ತಾನೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಭೀಕರತೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಬ್ರಿಟಿಷರಿಗೆ, ಅದರಷ್ಟೇ ಪ್ರಖರ ಭಯವನ್ನು ಒಬ್ಬನೇ ವ್ಯಕ್ತಿ ಮತ್ತೊಮ್ಮೆ ಹುಟ್ಟಿಸಿದ್ದ.. ಅವನ ಹೆಸರು “ವಾಸುದೇವ ಬಲವಂತ ಫಡ್ಕೆ”. ಮಹಾರಾಷ್ಟ್ರದ ಶಿರ್ಧೋನ್ ನಲ್ಲಿ ಜನನ. 1857 ಸಂಗ್ರಾಮ ನಡೆದಾಗ, ಆತ ಹೈಸ್ಕೂಲ್ ಓದುತ್ತಿದ್ದ. ಅದರಿಂದ ಪ್ರೇರಿತಗೊಂಡ ಫಡ್ಕೆ ಅರ್ಧಕ್ಕೆ ಶಾಲೆಗೆ ನಮಸ್ಕಾರ ಹೇಳಿದ.1860 ರಲ್ಲಿಯೇ ಅವನ ಮದುವೆಯೂ ಆಯಿತು. ಇಷ್ಟ ಇಲ್ಲದಿದ್ದರೂ ಸಂಸಾರದ  ನಿರ್ವಹಣೆಗೆ  ಒಂದು ವೈದ್ಯಕೀಯ ಕಾಲೇಜಿನಲ್ಲಿ ನೌಕರಿ ಸೇರಿದ. ಅದೊಮ್ಮೆ ಅವನ ತಾಯಿ ತೀರಾ ಅಸ್ವಸ್ಥರಾದ ಸಂದೇಶ ಬಂತು. ಕೂಡಲೇ ರಜೆಗೆ ಅರ್ಜಿ ಹಾಕಿದರೂ ಅನುಮತಿ ಸಿಗಲಿಲ್ಲ. ಆದರೂ ಲೆಕ್ಕಿಸದೆ ಊರಿಗೆ ಹೋದಾಗ ಅವನ ತಾಯಿ ಅದಾಗಲೇ ಸ್ವರ್ಗಸ್ಥರಾಗಿದ್ದರು. ಇದರಿಂದ ಆಕ್ರೋಶಗೊಂಡ ಫಡ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ..

ನಿಜವಾಗಿ ಇತಿಹಾಸ ಗಮನಿಸೋದಾದ್ರೆ, ಈ “ಸ್ವದೇಶೀ” ಚಳುವಳಿಯನ್ನು ಮನೆಮನೆಗೂ ಕೊಂಡೊಯ್ದ ಮೊದಲಿಗ ಅಂದ್ರೆ ಈ ಫಡ್ಕೇನೆ.. ಜಸ್ಟಿಸ್ ಮಹದೇವ್ ಗೋವಿಂದ್ ರಾನಡೆಯವರ ಸ್ವದೇಶೀ ವಿಚಾರಗಳಿಂದ ಸ್ಫೂರ್ತಿ ಪಡೆದ ಫಡ್ಕೆ, ಗಲ್ಲಿ ಗಲ್ಲಿಗಳಿಗೂ ಹೋಗಿ, ಸ್ವದೆಶಿತನದ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಿದ್ದ. ಆದರೆ, ಜನರಲ್ಲಿ ಅಂತಸ್ಸತ್ವ ಕಳೆದುಹೋಗಿತ್ತು. ಕೇವಲ ಭಾಷಣಗಳಿಂದ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬೇಗನೆ ಅರ್ಥವಾಯಿತು. ಅಲ್ಲದೆ ಯುವಕರಿಗೆ ರಾಷ್ಟ್ರೀಯ ಶಿಕ್ಷಣ ಅವಶ್ಯಕ ಎಂಬ ದೃಷ್ಟಿಯಲ್ಲಿ ಶಿಕ್ಷಣ ಸಂಸ್ಥೆಯನ್ನೂ ತೆರೆದ. ಇದರ ಮಧ್ಯೆಯೇ, ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿತು.ಜನ ಒಪ್ಪತ್ತು ತುತ್ತಿಗೂ ಗತಿಯಿಲ್ಲದೆ ಪರದಾಡುವಂತಾಯಿತು. ಆದ್ರೆ ಕ್ರೂರ ಬ್ರಿಟಿಶ್ ಸರ್ಕಾರ ಮಾತ್ರ, ಎಂದಿನಂತೆ ತೆರಿಗೆಯ ವಸೂಲಿಯನ್ನು ಮುಂದುವರೆಸಿತು.ಬ್ರಿಟಿಷರ ಈ ನೀಚಕೃತ್ಯಗಳಿಂದ ಕುಪಿತನಾದ ಫಡ್ಕೆ ಮುಂದೆ ಇಟ್ಟ ಹೆಜ್ಜೆಯೇ ಇತಿಹಾಸ..

ಮತ್ತಷ್ಟು ಓದು »

6
ಮಾರ್ಚ್

ಸಂಸ್ಕೃತಿ ಸಂಕಥನ – 25 – ಆನಂದದ ಮಾರ್ಗ ಅಧ್ಯಾತ್ಮ

-ರಮಾನಂದ ಐನಕೈ

ಭಾರತೀಯರ ಅಧ್ಯಾತ್ಮ ಒಂದು ಅದ್ಭುತ ವಿಜ್ಞಾನ. ಭಾರತೀಯ ಪ್ರಗತಿಪರ ಚಿಂತಕರು ಹಾಗೂ ಮನೋಭಾವದವರೆಲ್ಲ ಸಂಪ್ರದಾಯಕ್ಕೆ ಸಂಬಂಧಪಟ್ಟ ಸಂಗತಿಗಳನ್ನೆಲ್ಲ ಮೌಢ್ಯ ಎಂದು ಪರಿಗಣಿಸುತ್ತಾರೆ. ಅಚಿದರೆ ಅವರ ಪ್ರಕಾರ ಬ್ರಿಟಿಶ್ ವಸಾಹತುಶಾಹಿಯ ನಂತರವೇ ಈ ದೇಶದಲ್ಲಿ ಆಧುನಿಕತೆ ಬಂದಿದೆ. ನಾಗರಿಕತೆ ಬೆಳೆದಿದೆ. ಮನುಷ್ಯನ ಚಿಂತನಾಕ್ರಮ ಬದಲಾಗಿದೆ ಇತ್ಯಾದಿ ಇತ್ಯಾದಿ. ಹಾಗಾದರೆ ಕಳೆದ ಮೂರು ಸಾವಿರ ವರ್ಷಗಳಿಂದ ನಮ್ಮ ಪೂರ್ವಜರು ಏನು ಮಾಡಿದರು? ಏನನ್ನೂ ಮಾಡಿಲ್ಲವೇ? ಹಾಗಿದ್ದರೆ ಭಾರತೀಯ ಸಂಸ್ಕೃತಿ ಹೇಗೆ ಉಳಿದುಕೊಂಡು ಬಂತು? ಪಾಶ್ಚಾತ್ಯರಿಗೆ ಈ ಸಂಸ್ಕೃತಿಯ ಕುರಿತು ಏಕಿಷ್ಟು ಕುತೂಹಲ? ಇಂತಹ ನೂರಾರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಅವರಲ್ಲಿಲ್ಲ. ಹೆಚ್ಚೆಂದರೆ ಮೊಂಡುವಾದ ಮಾಡಬಹುದು ಅಷ್ಟೆ. ನಮ್ಮ ಪೂರ್ವಜರು ಸುಮ್ಮನೆ ಆಯಸ್ಸು ಕಳೆಯುತ್ತ ಬಂದಿಲ್ಲ. ಮನುಷ್ಯನ ಆನಂದ ಹಾಗೂ ಆರೋಗ್ಯದ ಬಗ್ಗೆ ಆಳವಾದ ಚಿಂತನೆ ಮಾಡಿದ್ದಾರೆ. ಇದಕ್ಕಾಗಿ ಸಾವಿರಾರು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಅದೇ ಅಧ್ಯಾತ್ಮ.

ಲಿಂಗಭೇದವಿಲ್ಲ, ವರ್ಣಭೇದವಿಲ್ಲ, ಬಡವ -ಶ್ರೀಮಂತ ಎಂಬ ತರತಮವಿಲ್ಲ. ಎಲ್ಲರೂ  ಈ ಮಾರ್ಗದಲ್ಲಿ ಹೋಗಬಹುದು. ಆ ಮೂಲಕ ಆನಂದ ಪಡೆಯಬಹುದು. ಆನಂದ ಎಂದರೇನು? ಅದು ಎಲ್ಲಿ ಸಿಗುತ್ತದೆ? ಹೇಗೆ ಸಿಗುತ್ತದೆ? ಯಾರಿಗೂ ಗೊತ್ತಿಲ್ಲ. ಆದರೆ ಆನಂದವನ್ನು ಪಡೆಯಬಹುದು. ಅಧ್ಯಾತ್ಮದ ದಾರಿಯ ಮೂಲಕ ಪ್ರತಿಯೊಬ್ಬನೂ ಆನಂದ ಪಡೆಯಬಹುದು. ಅಧ್ಯಾತ್ಮ ಇಂತಹ ಸಹಸ್ರ ದಾರಿಗಳನ್ನು ನಮ್ಮೆದುರು ತೆರೆದಿಟ್ಟಿದೆ. ಅಧ್ಯಾತ್ಮದ ಮೂಲಕ ಆನಂದ ಪಡೆಯಬಹುದು. ಆರೋಗ್ಯ ಪಡೆಯಬಹುದು, ನಮ್ಮೊಳಗಿನ ಜ್ಞಾನವನ್ನು ಉದ್ದೀಪನಗೊಳಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಭಾರತೀಯ ಸಮಾಜದ ಮಾನಸಿಕ ಭದ್ರತೆಯೇ ಈ ಅಧ್ಯಾತ್ಮದ ತಳದಲ್ಲಿದೆ.

ಮತ್ತಷ್ಟು ಓದು »