ವಿಷಯದ ವಿವರಗಳಿಗೆ ದಾಟಿರಿ

Archive for

28
ಮಾರ್ಚ್

ಮಂಕುತಿಮ್ಮನ ಕಗ್ಗ – ರಸಧಾರೆ (೧೨)

– ರವಿ ತಿರುಮಲೈ

ಮಾನವರೋ ದಾನವರೋ ಭೂಮಾತೆಯನು ತಣಿಸೆ
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ

ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ

ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ =

ಕಟುಕ, /ಕಟ್ಟೆ= ಜಗುಲಿ.

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೀರು ಸುರಿಸುವ ಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.
ಮತ್ತಷ್ಟು ಓದು »

28
ಮಾರ್ಚ್

ಜೋಡಿ ನಯನದ ಒಂಟಿ ನೋಟ

– ವಿಜಯಕುಮಾರ್  ಹೂಗಾರ್

ಹೀಗೊಂದು ನೋಟ.ವಿಚಿತ್ರ ನೋಟ.ಇಡಿ ಬೆಂಗಳೂರು ಒಂದೇ ನೋಟಕ್ಕೆ ನೋಡೋ ಹಟ.ಖೇಚರ ಜೀವಿಯಂತೆ ನಗರದ ತಲೆಯಮೇಲೆ ಹಾರಾಡೋ ಬಯಕೆ ಈ ಜೋಡಿ ನಯನಕ್ಕೆ.ಬಯಕೆ ಈಡೇರದೆ ಅದರ ಪಾದದಡಿ ನುಸುಳಿ ಸುತ್ತುತ್ತಿದೆ ನಿಘೂಡ ಮನಸ್ಸು ಭೇಧಿಸುವ ವ್ಯಾಧನ ಅಗೋಚರ ಬಿಲ್ಲಿನಂತೆ.ಬಯಕೆಯ ತೇವಕೆ ಸಮ್ಮತಿಸುವಂತೆ ಮಹಾನಗರ ಬಿಡಿ ಬಿಡಿಯಾಗಿ ನೀಗಿಸುತಿದೆ ನಯನದ ದಾಹ.ತುಂಡು ತುಂಡಾಗಿ ಚಲಿಸಲೋಲಿಸುತಿದೆ ಸೆಳೆಯುವ ದಾರಿಯ ಮೋಹ.

ಗಾಳಿಯ ರಭಸಕ್ಕೆ ನಯನ ಮನಬಂದಂತೆ ತೂರಿ ಹಾರಿದೆ,ಕುರುಡನ ಕೈ ಹಿಡಿದು.ನಯನದ ಜಾಡು ದಾರಿಗೆ ಹೆಜ್ಜೆಯ ಕುರುಹು ಹಾಕುತ್ತ ದೇಹ ಅದಕೆ  ಹಿಂಬಾಲಿಸಿದೆ.ಕಣ್ಣು ಓಡಿದಲೆಲ್ಲ ಬಣ್ಣದ ಲೋಕದಲ್ಲಿ ಬಣ್ಣಗೆಟ್ಟ ಜನರ ಓಟ.ನಡೆದಾಡುವ,ಸರಿಸೋಡುವ ಜನ.ಚಲಿಸುವ ದಾರಿಯ ಮೇಲೆ ಇಟ್ಟ ಬೊಂಬೆಯಂತೆ.ಯಾವ ಕಾಲಕ್ಕೂ ಲೆಕ್ಕಿಸದೆ ಉಳಿಗಾಲದ ಜೀವಂತ ಜನ ಓಡುತ್ತಿದ್ದಾರೆ ನಡೆದ ದಾರಿ ಮತ್ತಷ್ಟು ಸವೆಯುವಂತೆ.ಓಡಾಟದಲ್ಲಿ ಭಾರ ಹೊತ್ತಿ ಚಲಿಸುವ ಪಾರಗನ್ ಚಪ್ಪಲಿ ಮೈ ಮರೆತು ನಿಲ್ಲುವಹಾಗಿಲ್ಲ.ಮರೆತರೆ ಮರೆಯಲಾಗದ ನೆನಪು ಕೊಡುಗೆ ನೀಡುವ ಜನರು ಹದ್ದಿನಂತೆ ಕಾಯುತ್ತಿದ್ದಾರೆ.ಅವರೂ ಕಾದು ಕಾದು ಸುಸ್ತಾಗಿದ್ದಾರೆ,ಹಸಿದ ಹುಲಿಯ ಹೊಟ್ಟೆಯಂತೆ.ಕೈಯಲ್ಲಿ ಮಹಾನಗರದ ನಕ್ಷೆ.ಪೆನ್ನು.ಗತ ಕಾಲದ ಹಳಸು ಡೈರಿ ಹಿಡಿದು ಹೊಂಚು ಹಾಕುತ್ತಿದ್ದಾರೆ. ಮತ್ತಷ್ಟು ಓದು »