ವಿಷಯದ ವಿವರಗಳಿಗೆ ದಾಟಿರಿ

Archive for

2
ಮಾರ್ಚ್

ಬೇಕಾಗಿದ್ದಾರೆ – ಬಿಇ ಅನನುಭವಿಗಳು (ಫ್ರೆಶರ್ಸ್) – ಕನ್ನಡಿಗರಿಗೆ ಆದ್ಯತೆ

-ಅರವಿಂದ್

ಮೊಬ್ಯೆಲ್ ತಂತ್ರಜ್ನಾನದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಸಂಸ್ಥೆಯಲ್ಲಿ ಉದ್ಯೋಗವಕಾಶ

೨೦೧೧ರಲ್ಲಿ ಪಾಸಾದ ಬಿಇ ತಾಂತ್ರಿಕ ಶಿಕ್ಷಣದಲ್ಲಿ ಟೆಲಿಕಾಂ ಮಾಹಿತಿ ತಂತ್ರಜ್ಣಾನ, ಎಲೆಕ್ಟ್ರಾನಿಕ್ಸ್ ವಿಭಾಗದವರು ಬೇಕಿರುವವರು

ಸಂಸ್ಥೆಯ ಹೆಸರು : ರಿನೆಸೆಸ್ ಮೊಬ್ಯೆಲ್ ಇಂಡಿಯಾ ಪ್ರ್ಯೆ ಲಿ. ಬೆಂಗಳೂರು

ವಿದ್ಯಾರ್ಹತೆ : ಬಿಇ

ತಾಂತ್ರಿಕೆ ವಿಶೇಷತೆ : ಯೂನಿಕ್ಸ್ ಮತ್ತು ಸ್ಕ್ರಿಪ್ಟ್ಸ್ ಭಾಷೆಯ ಅರಿವು

ನಿಮ್ಮ ಪರಿಚಯ ಪತ್ರಗಳನ್ನು  aravindhDOTraoATgmailDOTcomಗೆ ಕಳುಹಿಸಿಕೊಡಿ..

* * * * * * * *

2
ಮಾರ್ಚ್

ತುರ್ತಾಗಿ ಬೇಕಾಗಿದ್ದಾರೆ – ಪಧವೀಧರರು ಟ್ಯಾಲಿ – ಕನ್ನಡಿಗರಿಗೆ ಮಾತ್ರ

-ನಾಗರಾಜ್ ಬೂದಿಕೋಟೆ

ಸಂಸ್ಥೆಯ ಹೆಸರು : ಸಂಚಯನೆಲೆ ಸ್ವಯಂಸೇವಾ ಸಂಸ್ಥೆ,

ಕೆಲಸದ ಸ್ಥಳ : ಆನೇಕಲ್, ಬೆಂಗಳೂರು ಗ್ರಾಮಾಂತರ

ವಿದ್ಯಾರ್ಹತೆ : ಪದವೀಧರರು, ಬಿ.ಕಾಂನವರಿಗೆ ಪ್ರಾಶಸ್ತ್ಯ

ಅನುಭವ : ೧ ರಿಂದ ೨ ವರ್ಷ

ಅರ್ಹತೆ : ಟ್ಯಾಲಿ ಅಕೌಂಟಿಂಗ್ ತಂತ್ರಾಂಶ ಗೊತ್ತಿರಬೇಕು, ಕನ್ನಡ ಕೀಲಿಮಣೆ ಗೊತ್ತಿರಬೇಕು

ಮತ್ತಷ್ಟು ಓದು »

2
ಮಾರ್ಚ್

ನೇತಾಜಿ ಕಣ್ಮರೆ – ಒಂದು ವಿಶ್ಲೇಷಣೆ

-ಆನಂದ್ ಪ್ರಸಾದ್

ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ.  ನಾಯಕತ್ವದ  ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ.  ಹೀಗಾಗಿ ನೇತಾಜಿಯವರ ಕಣ್ಮರೆಯನ್ನು  ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ.  ನೇತಾಜಿಯವರು ೧೯೪೫ರ ಆಗಸ್ಟ್ ೧೮  ರಂದು ತೈಹೊಕು (ಇಂದಿನ ತೈವಾನ್ ದೇಶದಲ್ಲಿ) ಎಂಬಲ್ಲಿ ನಡೆದ ವಿಮಾನ ಅಪಘಾತದಲ್ಲಿ  ಮೃತರಾದರು ಎಂದು ಹೇಳಲಾಗುತ್ತಿದೆ.  ಇದನ್ನು ಎಷ್ಟೋ ಜನ ನಂಬುವುದಿಲ್ಲ.  ಹೀಗಾಗಿ ಈ  ರಹಸ್ಯವನ್ನು ಭೇದಿಸಲು ಎನ್.ಡಿ.ಎ. ಆಡಳಿತಾವಧಿಯಲ್ಲಿ ಸಮಿತಿ ನೇಮಕ ಮಾಡಲಾಗಿತ್ತು.  ಆ  ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಆ ದಿನ ಯಾವುದೇ ವಿಮಾನ ಅಪಘಾತ ನಡೆದ  ದಾಖಲೆ ಲಭ್ಯವಿಲ್ಲ ಎಂದು ಹೇಳಿತು.  ನೇತಾಜಿಯವರು ರಶಿಯಕ್ಕೆ ಹೋಗಿ ಅಲ್ಲಿ ಬಂಧಿಯಾಗಿ  ಸೈಬೀರಿಯಾದಲ್ಲಿ ಸೆರೆವಾಸದಲ್ಲಿ ಸತ್ತರು ಎಂದು ಇನ್ನೊಂದು ವದಂತಿಯೂ ಇದೆ.  ಹೀಗಾಗಿ  ರಶಿಯಕ್ಕೂ ಆ ಸಮಿತಿ ತನಿಖೆಗಾಗಿ ಹೋಗಿ ಅಲ್ಲಿ ಸರಿಯಾದ  ಸಹಕಾರ ಸಿಗದೇ ವಾಪಸಾಯಿತು ಎಂದು  ಹೇಳಲಾಯಿತು.  ರಷಿಯದಲ್ಲಿ ರಾಯಭಾರಿಯಾಗಿದ್ದ, ನಂತರ ಭಾರತದ ರಾಷ್ಟ್ರಪತಿಯಾಗಿದ್ದ  ರಾಧಾಕೃಷ್ಣನ್ ಅವರು ಸೆರೆವಾಸದಲ್ಲಿದ್ದ ನೇತಾಜಿಯವರನ್ನು ಭೇಟಿ ಮಾಡಿದ್ದರು, ಆದರೆ  ನೇತಾಜಿಯವರ ಬಿಡುಗಡೆಯ ಬಗ್ಗೆ ಅಂದಿನ ಸರ್ಕಾರ ಕಾಳಜಿ ವಹಿಸಲಿಲ್ಲ ಎಂಬ ವದಂತಿಯೂ ಇದೆ.   ಇದೆಲ್ಲ ನಂಬಿಕೆಗೆ ಅರ್ಹ ಎನಿಸುವುದಿಲ್ಲ ಏಕೆಂದರೆ ರಾಧಾಕೃಷ್ಣನ್ ಅವರು ಬೋಸರ ಭೇಟಿ  ಮಾಡಿದ್ದಿದ್ದರೆ ಅದನ್ನು ಮುಚ್ಚಿಡುತ್ತಿರಲಿಲ್ಲ ಏಕೆಂದರೆ ರಾಧಾಕೃಷ್ಣನ್ ಒಬ್ಬ  ತತ್ವಜ್ಞಾನಿ ಹಾಗೂ ಪ್ರಾಧ್ಯಾಪಕರಾಗಿದ್ದವರು.

ಮತ್ತಷ್ಟು ಓದು »