ಹಳೆ ತಿಕ್ಕಲನ್ನು ಹೇಳುವ ಹೊಸಪದಗಳು…
ಸಾತ್ವಿಕ್ ಎನ್.ವಿ
ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ ಬಸ್ ಸ್ಟ್ಯಾಂಡಿನ ಸುಮಾರು ಒಂದೂವರೆ ಕಿಲೋ ಮೀಟರ್ ನಡೆದು ಕ್ಲಾಸ್ ಸೇರುವಾಗ ದಣಿವಾರಿಸಿಕೊಳ್ಳಲು ಒಂದತ್ತು ನಿಮಿಷವೂ ಉಳಿಯುತ್ತಿರಲ್ಲಿಲ್ಲ . ಬೆಳಿಗ್ಗೆಯೇ ಬೇಗ ಗಬಗಬನೇ ತಿಂದು ಬಂದ ಎರಡು ಇಡ್ಲಿ ಯಾವಾಗಲೋ ಕರಗಿ, ಹೊಟ್ಟೆಯ ಯಾವುದೇ ಮೂಲೆಯಲ್ಲಿ ಆಸ್ಯಿಡ್ ಸುರುವಿದ ಅನುಭವ. ಒಂದು ಕಡೆ ಸೆಖೆಯಿಂದ ಬೆವರು ಇಳಿಯುತ್ತಿದ್ದರೆ ಇನ್ನೊಂದು ಗಣಿತಶಾಸ್ತ್ರ ಹೇಳಿಕೊಡುವ ಮೇಡಂ ಟ್ರಿಗ್ನೋಮೆಟ್ರಿ ಕ್ಲಾಸ್ ನಲ್ಲಿ ‘ಟ್ಯಾನ್+ಕಾಸ್ ತೀಟ ಏನಾಗುತ್ತೆ’ ಅಂತ ಕೇಳಿ ಬೆಪ್ಪರಾಗಿಸುತ್ತಿದ್ದರು. ಇಡೀ ರಾತ್ರಿ ಬಾಯಿ ಪಾಠ ಮಾಡಿದ್ದು ವೇಸ್ಟ್ ಆಗುತ್ತಿತ್ತು. ನಾನು ಮೊದಲ ಬಾರಿಗೆ ಬ್ಯ ಬ್ಯ ಬ್ಯ ಅಂದದ್ದು ಕಾಲೇಜಿನ ದಿನಗಳಲ್ಲಿಯೇ ಇರಬೇಕು. ಮತ್ತಷ್ಟು ಓದು
ಗುಡ್ಡದ ಭೂತ: ಪ್ರಯೋಗಶೀಲತೆಯೋ? ಅನಿವಾರ್ಯತೆಯೋ?
-ಕಾಲಂ ೯
ಜನಶ್ರೀ ಸುದ್ದಿವಾಹಿನಿ 90ರ ದಶಕದ ದೂರದರ್ಶನದ ಜನಪ್ರಿಯ ಧಾರಾವಾಹಿಯ ಮರುಪ್ರಸಾರ ಆರಂಭಿಸಿದೆ. ತಾಂತ್ರಿಕತೆ, ಅಭಿನಯ, ನಿರೂಪಣೆಯ ದೃಷ್ತಿಯಿಂದ ಅಸಾಧಾರಣವೆನಿಸಿದ ಧಾರಾವಾಹಿಗೆ ಮತ್ತೆ ಮನ್ನಣೆ ಸಿಕ್ಕಿದ್ದು ಸ್ವಾಗತಾರ್ಹವೇ. ಈಗ ೪೦ರ ಗಡಿಯಲ್ಲಿರುವ ಧಾರಾವಾಹಿ ನಿರ್ದೇಶಕ ಸದಾನಂದ ಸುವರ್ಣರಿಗೆ ಮತ್ತವರ ತಂಡಕ್ಕೆ ಈ ಮನ್ನಣೆ ಖುಷಿ ತಂದಿರಬೇಕು.
ಆದರೆ ಸುದ್ದಿ ವಾಹಿನಿಯೊಂದು ಧಾರಾವಾಹಿಯ ಪ್ರಸಾರಾಕ್ಕೆ ಅದೂ ಮರು ಪ್ರಸಾರಕ್ಕೆ ಹೊರಟಿರುವುದು ಪ್ರಯೋಗಶೀಲತೆಯೇ ಅಥವಾ ಅದರಾಚೆಯ ಅನಿವಾರ್ಯತೆಗಳೂ ಕೆಲಸ ಮಾಡುತ್ತಿದೆಯೇ?
‘ಸುದ್ದಿ’ಯ ಸೋಂಕಿಲ್ಲದ ಜ್ಯೋತಿಷ್ಯ, ಸೆಕ್ಸು, ಕ್ರೈಮು, ಸಿನೆಮಾ, ಕ್ರಿಕೆಟ್ಟು, ಹಾಸ್ಯಗಳ ‘ಶೋ’ಗೆ ಹತ್ತಿರ ಹತ್ತಿರ ಶೇ 50ರಷ್ಟು ಸಮಯ ವಿನಿಯೋಗಿಸುವ ಸುದ್ದಿ ವಾಹಿನಿಗಳೇ ನಮಗಿಂದು ಕಾಣುತ್ತಿವೆ. ಟಿವಿ9 ಹಾಕಿಕೊಟ್ಟ ಮಾದರಿಯಿಂದ ಹೊರ ಬರಲಾಗದ ಎಲ್ಲ ವಾಹಿನಿಗಳು ಅದೇ ಚರ್ವಿತಗಳಲ್ಲೇ ಸುತ್ತುತ್ತಿವೆ.
ಕರ್ನಾಟಕದಂತಹ ಸೀಮಿತ ಪರಿಧಿಯಲ್ಲಿ ದಿನವಿಡೀ ವಿದ್ಯಮಾನಗಳು ಘಟಿಸುತ್ತಲೇ ಇರಬೇಕೆಂಬುದು ಅಸಾಧ್ಯದ ಮಾತು. ಈ ಕೊರತೆ ದೇಶ ವ್ಯಾಪ್ತಿಯ ರಾಷ್ಟ್ರೀಯ ಚಾನೆಲ್‍ಗಳನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ನಮ್ಮ ಸುದ್ದಿವಾಹಿನಿಗಳಿಗೆ ದಿನವಿಡೀ ಉಣಬಡಿಸಲು ಸುದ್ದಿ ಖಾದ್ಯಗಳಾದರೂ ಏನು ಉಳಿದಿರುತ್ತದೆ? ಈ ಅನಿವಾರ್ಯತೆಯ ಹೊಸ ಫಸಲೆಂಬಂತೆ ಗುಡ್ಡದ ಭೂತ ಮತ್ತೆ ಅವತರಿಸಿದೆ.
ಧಾರಾವಾಹಿ ರಂಗದ ಸಾಮ್ರಾಟರೆಂದೇ ಖ್ಯಾತರಾಗಿರುವ ಟಿಎನ್ ಸೀತಾರಾಂ ಬಿಜೆಪಿ ಸರ್ಕಾರದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಈ ಬಿಜೆಪಿ ಸರ್ಕಾರ ಬಂದ ಮೇಲೆ ನಮ್ಮ ಸೀರಿಯಲ್ ನೋಡೋರೇ ಇಲ್ಲದಂತಾಗಿದೆ. ಜನ ನ್ಯೂಸನ್ನೇ ಸೀರಿಯಲ್ ಅಂತ ಅಂದುಕೊಂಡಿದ್ದಾರೆ.’ ಅಂತ ಹೇಳಿಕೊಂಡಿದ್ದರು. ಮತ್ತಷ್ಟು ಓದು