ವಿಷಯದ ವಿವರಗಳಿಗೆ ದಾಟಿರಿ

Archive for

8
ಮಾರ್ಚ್

ಇದು ಭರತವರ್ಷ : ಆ ಹೆಣ್ಣು ಮಗಳ ಹೋರಾಟಕ್ಕೆ ಅಂತ್ಯ ಇದೆಯಾ???

– ರಾಕೇಶ್ ಶೆಟ್ಟಿ

ಕಾಶ್ಮೀರದಲ್ಲಿ ಕಲ್ಲೊಂದು ಬಿದ್ದ ಮರುಕ್ಷಣದಲ್ಲೇ ಮಂಡಿಯೂರಿ ಕ್ಯಾಮೆರ ಹಿಡಿದು ಜಗತ್ತಿಗೆ ಸಾರುವ ಮಾಧ್ಯಮಗಳು,ತಡವಾಗಿಯಾದರೂ ಪ್ರತಿಕ್ರಿಯಿಸುವ ಕೇಂದ್ರ ಸರ್ಕಾರ,ಅಥವಾ ಇನ್ನುಳಿದ ಯಾವುದೆಂದರೆ ಯಾವುದೇ ರಾಜಕೀಯ ಪಕ್ಷಗಳು,ಕಳೆದ ವರ್ಷ ಅಲ್ಲಿನ ಪ್ರತ್ಯೇಕವಾದಿ ಹೋರಾಟಗಾರು ಇಡಿ ರಾಜ್ಯವನ್ನ ೨-೩ ತಿಂಗಳು ದಿಗ್ಭಂದನದಲ್ಲಿಟ್ಟು, ಜನ ಸಾಮಾನ್ಯರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಪರದಾಡುತಿದ್ದರೂ ಸಹ, ಆ ‘ನತದೃಷ್ಟ ರಾಜ್ಯ’ಕ್ಕೂ ನಮಗೂ ಯಾವ ಸಂಬಂದವೇ ಇಲ್ಲ ಅನ್ನುವಂತೆ ಕುಳಿತಿದ್ದರು.ಭಾರತದ ಆ ನತದೃಷ್ಟ ರಾಜ್ಯದ ಹೆಸರು ‘ಮಣಿಪುರ’.ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲೊಂದಾದ ಮಣಿಪುರವನ್ನ ನೆಹರೂ ಭಾರತದ ಮುಕುಟ ಮಣಿ ಅಂದಿದ್ದರಲ್ಲ ಅದೇ ಮಣಿಪುರ…! ಆ ಮಣಿಪುರದ ರಕ್ತ ಸಿಕ್ತ ಅಧ್ಯಾಯದ ಬಗ್ಗೆ ಮುಂದೊಮ್ಮೆ ಬರೆಯುವೆ.
  
ಇಂದು ‘ವಿಶ್ವ ಮಹಿಳಾದಿನ’, ಬೇರೆ ಬೇರೆ ದೇಶದ ಮಹಿಳೆಯರನ್ನ ನೆನಪಿಸಿಕೊಳ್ಳುವ ಮಾಧ್ಯಮಗಳ ಕಣ್ಣಿಗೆ, ಮಣಿಪುರದ (ಭಾರತದ) ಉಕ್ಕಿನ ಮಹಿಳೆ ಇರೋ ಚಾನು ಶರ್ಮಿಲ ಕಾಣಿಸುವುದಿಲ್ಲ. ಇರಲಿ ಬಿಡಿ ದೊಡ್ಡವರ ಪತ್ರಿಕೆಗಳು ತಣ್ಣಗಿರಲಿ,ಆ ಮಹಿಳೆಯ ಹೋರಾಟದ ಚಿತ್ರಣವನ್ನ ದಾಖಲಿಸುವ ಪುಟ್ಟ ಪ್ರಯತ್ನ ನನ್ನದು.ಈ ಹಿಂದೆಯೇ ಈಕೆಯ ಬಗ್ಗೆ ಬರೆದಿದ್ದೆ,ಆಕೆಯ ಹೋರಾಟದ ಬದುಕು ನಮಗೆಲ್ಲ ಸ್ಪೂರ್ತಿಯಾಗಲಿ.
 
8
ಮಾರ್ಚ್

‘ರಸಋಷಿಯ ರಮ್ಯಲೋಕದೆಡೆಗೆ’

-ಹೃದಯ ಶಿವ

ಕನ್ನಡ ಸಾಹಿತ್ಯ ಜಗತ್ತಿನ ಮೇರು ಶೃಂಗದಲ್ಲಿ ಶಾಶ್ವತವಾಗಿ ನಿಂತಿರುವ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಕೇಳದ ಕನ್ನಡಿಗ ಬಹುಷಃ ಇರಲಾರ. ಬಾಲ್ಯದಲ್ಲಿ ಆಂಗ್ಲ ಸಾಹಿತ್ಯದ ವ್ಯಾಮೋಹಕ್ಕೊಳಗಾಗಿ ಹಲವು ಆಂಗ್ಲ ಕವಿತೆಗಳನ್ನು ಬರೆದರೂ ಕ್ರಮೇಣ ಕನ್ನಡ ಸಾಹಿತ್ಯ ಕೃಷಿಗೆ ಕೈ ಹಾಕಿ ಇಂದು ಕನ್ನಡ, ಕರ್ನಾಟಕದಷ್ಟೇ ಚಿರಾಯುವಾಗಿರುವ ಪುಟ್ಟಪ್ಪನವರು ೧೯೦೪ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದರು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಮಲೆನಾಡಿನೊಂದಿಗೆ ಆಟವಾಡುತ್ತ, ಮೋಹಕ ಮಂಜನೊಂದಿಗೆ ಮಾತಿಗಿಳಿಯುತ ಬೆಳೆದ ಇವರು ಮೂಲತಃ ನಿಸರ್ಗದ ಆರಾಧಕರಾಗಿದ್ದರು. ಪ್ರೌಢರಾಗುತ್ತಾ ಹೃದಯ ಆರ್ದ್ರಗೊಳ್ಳುತ್ತಿದ್ದಂತೆಯೇ ಮೆದುಳ ಬತ್ತಳಿಕೆಯಲ್ಲಿ ತುಂಬಿಕೊಂಡ ಕಲ್ಪನೆಯ ಸೂಕ್ಷ್ಮತೆಗಳು ಅಕ್ಷರ ರೂಪ ಪಡೆಯುತ್ತಾ ಸಾಗಿ ಕೊನೆಗೆ ಬ್ರಹದಾಕಾರದ ಹೆಮ್ಮರವಾಗಿದ್ದು ಈಗ ಜಗಜ್ಜ್ರಾಹೀರಾಗಿದೆ.

ಕೊಳಲು, ಪಾಂಚಜನ್ಯ, ಅಗ್ನಿಹಂಸ, ಕುಟೀ ಚಕ, ಮಂತ್ರಾಕ್ಷತೆ, ವಿಭೂತಿ ಪೂಜೆ, ಕದರಡಕೆ, ಮರಿ ವಿಜ್ಞಾನಿ, ದ್ರೌಪತಿಯ ಶ್ರೀಮುಡಿ, ರಕ್ತಾಕ್ಷಿ, ಶ್ಮಶಾನ ಕುರುಕ್ಷೇಂತ್ರಂ, ಮಹಾರಾತ್ರಿ ಸೇರಿದಂತೆ ಇನ್ನು ಅನೇಕ ಕೃತಿಗಳನ್ನು ರಚಿಸಿದ ಕುವೆಂಪು ಅವರಿಗೆ ಒಲಿಯದ ಪ್ರಶಸ್ತಿ, ಪುರಸ್ಕಾರಗಳಿಲ್ಲ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿ ಜ್ಞಾನಪೀಠ ಲಭಿಸಿದ್ದು ಜೊತೆಗೆ ಪಂಪ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನಗಳೊಂದಿಗೆ ಹಲವು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ಗಳು ಬಂದಿವೆ. ಅಧ್ಯಾಪಕರಾಗಿದ್ದುಕೊಂಡೇ ಎಲ್ಲಾ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಸೈ ಎನಿಸಿಕೊಂಡ ಇವರು ಬರೆದ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿ ಎಂಬೆರಡು ಕಾದಂಬರಿಗಳು ಮಲೆನಾಡಿನ ಚಿತ್ರಣ, ಜೀವನವನ್ನು ವಿಸ್ತಾರವಾಗಿ ಬಿಚ್ಚಿಟ್ಟ ಮಹಾಗ್ರಂಥಗಳೇ ಸರಿ. ಈ ಮೇರು ಕವಿಯ ಲೇಖನಿಯಿಂದ ಮೂಡಿ ಬಂದ ತೆರೆದಿದೆ ಓ ಬಾ ಅತಿಥಿ ಭಾವಗೀತೆಯು ನಿರ್ದೇಶಕದ್ವಯರಾದ ದೊರೈ – ಭಗವಾನ್ ನಿರ್ದೇಶನದ ’ಹೊಸಬೆಳಕು’ ಚಿತ್ರದಲ್ಲಿ ದೃಶ್ಯರೂಪ ಪಡೆದುದ್ದು ನಮ್ಮೆಲ್ಲರ ಸೌಭಾಗ್ಯ.

ಮತ್ತಷ್ಟು ಓದು »

8
ಮಾರ್ಚ್

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

-ಓಂಶಿವಪ್ರಕಾಶ್

ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್‌ಸೈಟ್ ಇತ್ಯಾದಿಗಳು ಈಗ  ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ.

ಇದಾದ ನಂತರವೂ ವಿಕಿಪೀಡಿಯ ಕನ್ನಡ (http://kn.wikipedia.org) ಪುಟವನ್ನು ತೆರೆದಾಗ ವಿಕಿಪೀಡಿಯ ಮೊಬೈಲ್ ಪುಟವನ್ನು ಮರೆ ಮಾಡಿ, ಎಂದಿನ ಆವೃತ್ತಿಯಲ್ಲಿ ಈ ಪುಟ ನೋಡಿ ಎಂಬ ಮಾಹಿತಿ ಮಾತ್ರ ನಮಗೆ ದೊರಕುತ್ತಿತ್ತು. ಈಗ ಅದಕ್ಕೆ ಕೊನೆ. ಕನ್ನಡ ವಿಕಿಪೀಡಿಯದ ಮೊಬೈಲ್ ಪುಟ ಈಗ ಲಭ್ಯವಿದೆ. ಖುದ್ದಾಗಿ ಇದನ್ನು ಸರಿ ಪಡಿಸಬೇಕು ಎಂದು ಕೊಂಡಿದ್ದು ವಿಕಿಪೀಡಿಯದ ಇನ್ನೊಬ್ಬ ಗೆಳೆಯ ಹರೀಶ್ ಎಂ.ಜಿ ಗೆ ಹೇಗೆ ಕೇಳಿಸಿತೋ ತಿಳಿಯದು.

ಮತ್ತಷ್ಟು ಓದು »