ಒಂದು ಸುಂದರ ನಗುವಿಗೆ…ಇಷ್ಟು ಸಾಕಲ್ಲವೇ.. ???
ನಮ್ಮ ಮೇಟ್ರೋದಲ್ಲಿ ಇನ್ನೂ ಸಿಗದ ಕನ್ನಡ
-ರವಿ ಸಾವ್ಕರ್
ವಿಶ್ವ ಗ್ರಾಹಕದ ದಿನದ ವಿಶೇಷ ಲೇಖನ [15ನೇ ಮಾರ್ಚ್]
ಕೆಲ ತಿಂಗಳ ಹಿಂದೆ “ನಮ್ಮ ಮೆಟ್ರೋ” ವಿನ ಅಧಿಕಾರಿಗಳು ದೈನಂದಿನ ಎಲ್ಲ ವ್ಯವಹಾರಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದಾಗಿ ಹೇಳಿದ್ದರು. ಹಾಗೆಯೇ ಹೊರಗುತ್ತಿಗೆ ಕೊಟ್ಟಿರುವ ಸೆಕ್ಯೂರಿಟಿ ಗಾರ್ಡ್ ಎಜೆನ್ಸಿ ನವರಿಗೆ ಕನ್ನಡ ಓದಲು ಬರೆಯಲು ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ನಿಯಮ ಹಾಕಿದೀವಿ ಅಂತ ಸಹ ಹೇಳಿದ್ದರು. ಮೆಟ್ರೋ ಅಧಿಕಾರಿಗಳ ಹೇಳಿಕೆಗಳ ತುಣುಕು ಹೀಗಿದೆ. ಇವರು ಎಷ್ಟರ ಮಟ್ಟಿಗೆ ತಮ್ಮ ನಿಯಮಗಳನ್ನು ತಾವೇ ಪಾಲಿಸುತ್ತಾ ಇದಾರೆ ಅಂತ ನೋಡೋಣ.
ಕನ್ನಡ ಕಟ್ಟುವಿಕೆಯ ಹತ್ತು ಹಲವು ವಿಷಯಗಳು
-ಡಾ. ಪಂಡಿತಾರಾಧ್ಯ
(ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ ಹಲವು ವಿಚಾರಗಳನ್ನು ತಿಳಿಸಲು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ಡಾ.ಪಂಡಿತಾರಾಧ್ಯ ಅವರು ಕರಪತ್ರವೊಂದನ್ನು ಸಿದ್ಧಪಡಿಸಿದ್ದರು. ಆ ಕರಪತ್ರದ ಪೂರ್ಣಪಾಠವಿಲ್ಲಿದೆ.)
೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕ್ರಿಶ.೬ನೇ ಶತಮಾದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.
ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಕ್ರಿ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ.
ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಅನಾನಿಮಸ್ ಹ್ಯಾಕರ್ ಗಳು ಭಾರತದಲ್ಲಿ ವಿಫಲರಾಗಿದ್ದೇಕೆ?
– ಆದೇಶ್ ಕುಮಾರ್
ಹೌದು ನನಗೆ ಇನ್ನೂ ನೆನೆಪಿದೆ. ಅದು ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತಿದ್ದ ಕಾಲ. ಆಗ ತಾನೆ ಕೆಲವೊಂದು ದೇಶಗಳಲ್ಲಿ ಹ್ಯಾಕರ್ ಗಳು ಅನಾನಿಮಸ್ (ಅಜ್ಞಾತ) ಎಂಬ ಗುಂಪೊಂದನ್ನು ಕಟ್ಟಿಕೊಂಡು ಹಲವು ದೇಶಗಳ ಸರ್ಕಾರಿ ವೆಬ್ಸೈಟ್ ಗಳಿಗೆ ಲಗ್ಗೆ ಹಾಕಿ ಭ್ರಷ್ಟಾಚಾರವನ್ನು ಕೊನೆಗಾಣಿಸಿ ಎಂಬ ಪೋಸ್ಟ್ ಗಳನ್ನು ಹಾಕುತ್ತಿದ್ದರು.
ಇತ್ತ ನಮ್ಮ ದೇಶದಲ್ಲೂ ಕೂಡ ಭ್ರಷ್ಟಾಚಾರದ ಹೋರಾಟ ತಾರಕಕ್ಕೇರುತ್ತಿದುದ್ದನ್ನು ಕಂಡು ಅದಕ್ಕೆ ಜೊತೆ ನೀಡಲು ಆ ಗುಂಪು ಭಾರತದಲ್ಲೂ ಉದಯಿಸಿತು. ಮೊದಲಿಗೆ ಅದು ತನ್ನ ಕಾರ್ಯಚರಣೆಯನ್ನು ನಮ್ಮ ದೇಶದ ಒಂದು ಸರ್ಕಾರಿ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದರೊಂದಿಗೆ ಪ್ರಾರಂಬಿಸಿತು. ಅದು ಸಾಮಾನ್ಯ ಸರ್ಕಾರಿ ವೆಬ್ಸೈಟ್ ಗಳನ್ನು ಮಾತ್ರ ಹ್ಯಾಕ್ ಮಾಡಿದ್ದರೆ ಅದು ಇನ್ನೂ ಇಲ್ಲೇ ಇರುತಿತ್ತೇನೊ. ಆದರೆ ಅದು ಭಾರತದ ಯಾವೊಬ್ಬ ಪ್ರಜೆಯು ಇಷ್ಟಪಡದ ಕೆಲಸಕ್ಕೆ ಕೈಹಾಕಿತು. ಅಂದರೆ ನಮ್ಮೆಲ್ಲರ ಹೆಮ್ಮೆಯ ಭಾರತ ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿತು.(ಅದು ಹ್ಯಾಕ್ ಮಾಡಿತೊ ಅಥವಾ ವೆಬ್ಸೈಟ್ ಅನ್ನು ಡೌನ್ ಮಾಡಿತೊ ಇದುವರೆಗೂ ತಿಳಿದಿಲ್ಲ).
ಇದನ್ನು ಯಾವೊಬ್ಬ ಭಾರತೀಯನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅನಾನಿಮಸ್ ಗುಂಪು ನಡೆಸುತಿದ್ದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಅದರ ವಿರುದ್ಡ ಟೀಕೆಗಳ ಸುರಿಮಳೆಯಾಯಿತು. ಕೆಲವೊಂದು ಕಾಮೆಂಟುಗಳು ಮತ್ತು ಟ್ವೇಟುಗಳು ಹೀಗಿದ್ದವು:
ಮತ್ತಷ್ಟು ಓದು