ವಿಷಯದ ವಿವರಗಳಿಗೆ ದಾಟಿರಿ

Archive for

30
ಮಾರ್ಚ್

ಮಂಕು ತಿಮ್ಮನ ಕಗ್ಗ – ರಸಧಾರೆ (೧೪)

– ರವಿ ತಿರುಮಲೈ

ಲೋಕಜೀವನ ಮಂಥನ
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ  ಈ

ಉಣ್ಣು = ತಿನ್ನು,ಉಸಿರ್ವ= ಉಸಿರಾಡುವ , ನರಜಾತಿ = ಮಾನವ ಜನಾಂಗ.   ವೈಷಮ್ಯ = ದ್ವೇಷ . ಎಂತು- ಹೇಗೆ.

ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ  ಒಳಗೆ ಈ ದ್ವೇಷ  ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ
ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.

ಈ ಜಗತ್ತಿನಲ್ಲಿರುವ ಮಾನವರೆಲ್ಲರಿಗೂ, ಮಾನವರಿಗಷ್ಟೇ ಏನು ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡು ಕೊಳ್ಳಲು ಪ್ರಯತ್ನ ಆಗಿದೆ.
ಮತ್ತಷ್ಟು ಓದು »

30
ಮಾರ್ಚ್

ರಸ್ತೆಯ ಪಕ್ಕ ನಿಂತಿತ್ತು ದೆವ್ವ!?

– ರಾಜ್ ಕುಮಾರ್

ಇದೊಂದು ನಂಬಲಾಗದ ಘಟನೆ. ಬಹುಷಃ ತರ್ಕಗಳು ಏನಿದ್ದರೂ ನಾನು ನನ್ನ ಅನುಭವವನ್ನು ಮಾತ್ರವೇ ಹೇಳುವುದು. ಇದು ಪ್ರಚಾರಕ್ಕಾಗಿ ಅಗಲಿ ಅಥವಾ ಬೇರೆ ಸ್ವ ಸಾಧನೆಗಾಗಿ ಅಗಲಿ ಹೇಳಿಕೊಳ್ಳುವುದಲ್ಲ. ನಾನು ಸ್ವತಹ ಅನುಭವಿಸಿ ಮನಸ್ಸಿನ ಗೊಂದಲವನ್ನಷ್ಟೇ ಇಲ್ಲಿ ವಿವರಿಸುತ್ತ ಇದ್ದೇನೆ.

ಕಳೆದ ಮಂಗಳವಾರ ಅಂದರೆ ದಿನಾಂಕ ೧೭-೦೨-೨೦೦೯ ರಂದು ನಾನು ಮಂಗಳೂರಿನ ಬಂಧುಗಳ ಮನೆಗೆ ಚಂಡಿಕಾ ಹವನದ ನಿಮಿತ್ತ ಹೋಗಿ ಬರುವ ಸಂದರ್ಭ.ನಾನು ಹಾಗು ನನ್ನ ಸಂಬಂಧಿಗಳು ಒಟ್ಟು ನಾಲ್ಕು ಮಂದಿ ಮಾರುತಿ ಕಾರ್ ನಲ್ಲಿ ಬೆಂಗಳೂರು ಕಡೆಗೆ ಬರುತ್ತಾ ಇದ್ದೆವು. ಹೋಗುವಾಗ ಶಿರಾಡಿ ಘಾಟ್ ಮೂಲಕ ಹೋದವರು ಬರುವಾಗಲೂ ಅಲ್ಲೇ ಬರೋಣವೆಂದು ನೆಲ್ಯಾಡಿ ಕೊಕ್ಕಡ ಕ್ರಾಸ್ ತನಕ ಬಂದಾಗ ಘಟ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಮಾರುತಿ ಕಾರ್ ಸ್ವತಹ ನಾನೇ ಚಲಾಯಿಸುತ್ತಿದ್ದೆ. ನನ್ನ ಪಕ್ಕ ನನ್ನ ಭಾವ ಹಾಗೆ ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತಿದ್ದರು.ನನ್ನನ್ನು ಉಳಿದು ಅವರೆಲ್ಲ ವೃತ್ತಿಪರ ಪುರೋಹಿತರಾಗಿದ್ದರು. ರಸ್ತೆ ಬ್ಲಾಕ್ ನೋಡಿ ನಾವು ಚಾರ್ಮಾಡಿ ಮೇಲೆ ಹೋಗೋಣವೆಂದು ಧರ್ಮಸ್ಥಳ ಕಡೆಗೆ ಕಾರ್ ತಿರುಗಿಸಿ, ಚಾರ್ಮಾಡಿ ಮೇಲೆ ಬಂದೆವು.

ರಾತ್ರಿಯ ಸುಮಾರು ೧೧ ಗಂಟೆಯ ಸಮಯ .ಘಾಟಿ ತಿರುವುಗಳೆಲ್ಲ ಕಳೆದು ರಸ್ತೆ ನೇರವಾಗಿ ಹೋಗುತ್ತಾ ಇತ್ತು. ಗಾಢವಾಗಿ ಇರುಳು ಹಬ್ಬಿತ್ತು. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ಮರ ವಿರಳವಾಗಿ ಇತ್ತು. ಕಾರು ಗಂಟೆಗೆ ೮೦ ಕಿ. ಮಿ. ವೇಗದಲ್ಲಿ ನಾನು ಚಲಾಯಿಸುತ್ತಿದ್ದೆ. ತುಂಬ ದೂರದಲ್ಲಿ ಲಾರಿಯೊಂದು ನಿಧಾನವಾಗಿ ಹೋಗುತ್ತಿತ್ತು.

ಮತ್ತಷ್ಟು ಓದು »