ಬಿಜೆಪಿಯ ಕಮಾಂಡಿಂಗ್ ಲೀಡರ್ಗೊಂದು ಪತ್ರ
-ಅರವಿಂದ್
ನಿಮ್ಮ ಹುಟ್ಟು ಹಬ್ಬಕ್ಕೆ ಕರ್ನಾಟಕದ ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಜೀವನದ ಸಂಜೆಯಲ್ಲಿ ೭೦ ವರ್ಷಗಳನ್ನು ದಾಟಿಹೊರಟಿರುವಿರಿ. ನಿಮ್ಮ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದೇ. ಮುಖ್ಯಮಂತ್ರಿಯಾಗಿದ್ದಾಗಲೂ ನೀವು ಇಷ್ಟು ವಿಜೃಂಭಣೆಯಿಂದ ಆಚರಿಸಿಕೊಳ್ಳದ ಹುಟ್ಟುಹಬ್ಬ, ಅಧಿಕಾರ ಕಳೆದುಕೊಂಡ ನಂತರ ಆಚರಿಸಿಕೊಂಡದ್ದು ನಿಮ್ಮ ವ್ಯೆರಿಗಳಿಗೆ ಒಂದು ಕಡೆ ನೋವಾದರೆ, ಮತ್ತೊಂದಿಷ್ಟು ಸಂತೋಷ ಸಾರ್. ನೋವು ಯಾಕೆಂದರೆ ನೀವು ೭೦ವರ್ಷವಾದರೂ ಇನ್ನು ಅಧಿಕಾರದ ಆಸೆ ಹೋಗದೇ ಇರೋದು. ಸಂತೋಷ ಏಕೆಂದರೆ ನೀವು ನಿಮ್ಮ ಪ್ರತಿ ಕೆಲಸಗಳಲ್ಲೂ ಅಪವಾದಕ್ಕೀಡಾಗೋದು.
ಒಮ್ಮೆ ಮನಬಿಚ್ಚಿ ಮಾತಾಡಿ ಸಾರ್, ನನ್ನ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಕೆ ಸಾಧ್ಯವಾದ್ರೆ ಉತ್ತರಿಸಿ. ಆಗದಿದ್ರೆ ಬಿಡಿ, ನಾವು ನಿಮ್ಮನ್ನು ಒಪ್ಪಿಕೊಂಡಿರುವ ತಪ್ಪಿಗೆ ಈ ಪ್ರಶ್ನೆಗಳ ಪ್ರಶ್ನೆಯೊಳಗೇ ಅಪ್ಪಿಕೊಂಡಿರ್ತೀವಿ.
೧. ೭೦ ರ ಇಳಿಸಂಜೆಯಲ್ಲೂ ಇಂಥಹ ಅದ್ದೂರಿ ಕಾರ್ಯಕ್ರಮಗಳು ಬೇಕಾ ?
೨. ಆರ್ ಎಸ್ ಎಸ್ ಪರಿವಾರದ ಕಟ್ಟಾ ಪಾಲಕರು ನೀವು ಕೇಕು ಹೆಚ್ಚಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳೋದು ಸರಿಯೇ ?
೩. ಕರ್ನಾಟಕದ ರಾಜಕಾರಣದಲ್ಲಿ ಹೊಳೆವ ನಕ್ಷತ್ರವಾಗಿದ್ದವರು, ಇದ್ದಕ್ಕಿದ್ದಂತೆ ಕಪ್ಪುಚುಕ್ಕೆಯಾದದ್ದೂ ಯಾಕೆ ?
೪. ಮುಖ್ಯಮಂತ್ರಿಯಾಗಿದ್ದ ಕಾಲಕ್ಕೆ ಡಿನೋಟಿಫಿಕೇಷನ್ (ನಾಗರಬಾವಿ) ಅಚಾತುರ್ಯದಿಂದ ಆದದ್ದು ಎಂದು ಜನತೆಯ ಮುಂದೆ ಕಂಬನಿ ಕರೆದದ್ದು ಯಾಕೆ ?
೫. ಮುಖ್ಯಮಂತ್ರಿಯಾಗುವ ಮುಂಚೆಗೂ ಹಾಗೂ ಈಗಿನ ದಿನಕ್ಕೂ ನೀವು ಇಂಕಂ ಟ್ಯಾಕ್ಸ್ ಕಟ್ಟಿದೆಷ್ಟು ?
೬. ಕರ್ನಾಟಕದ ರಾಜಕಾರಣದಲ್ಲಿ ನೀವು ಇಂದಿಗೂ ಅಭಿನಂದಿಸುವ ವ್ಯಕ್ತಿ ಯಾರು ?
೭. ಪ್ರಸ್ತುತ ಮುಖ್ಯಮಂತ್ರಿಗಳನ್ನು ನೀವೆ ಬೆಂಬಲಿಸಿ, ಈಗ ಅವರ ಸ್ಥಾನ ಕಿತ್ತೊಗೆಯಲು ನಡೆಸುತಿರುವ ಚಿತಾವಣೆಯ ಮರ್ಮವೇನು ?
೮. ಚಾಕುನಲ್ಲಿ ಯಾರಾದ್ರೂ ಕೇಕ್ ತಿನ್ನಿಸೋದನ್ನ ನೋಡಿದ್ರಾ, ಹೊಸತನ್ನು ಕೊಡುವ ಉತ್ಸಾಹದಲ್ಲಿ ಮಕ್ಕಳ ಬಾಯಿಗೆ ಚಾಕು ತುರುಕೋದು ಬೇಡವಾಗಿತ್ತು ಅಂತ ಅನ್ಸೋಲ್ವೆ ?
೯. ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಉಧ್ಘಾಟಿಸಿದ ಆಶ್ರಯ ಯೋಜನೆಯಲ್ಲಿ ಎಷ್ಟು ಮನೆಗಳನ್ನು ಕಟ್ಟಿಕೊಟ್ಟಿರಿ, ಯಾರ್ಯಾರಿಗೆ ಕೊಟ್ಟಿರಿ ?
೧೦. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜನತೆ ನೀಡಿದ ದೇಣಿಗೆಯ ಖರ್ಚು – ಬಾಬ್ತುಗಳ ವಿವರ ಕೊಡ್ತಿರಾ ?
೧೧. ವಿಶ್ವ ಕನ್ನಡ ಸಮ್ಮೇಳನಕ್ಕೆ ಐಶ್ವರ್ಯಾಳಿಗೆ ಕೊಟ್ಟ ದುಡ್ಡೆಷ್ಟು?
ಉತ್ತರ ಹೇಳ್ತೀರಾ ?…………
* * * * * * *
ಚಿತ್ರಕೃಪೆ : ಅಂತರ್ಜಾಲ




