ವಿಷಯದ ವಿವರಗಳಿಗೆ ದಾಟಿರಿ

Archive for

2
ಜನ

ಸಂಸ್ಕೃತಿ ಸಂಕಥನ – 16 ನೆಹರೂ ಸೆಕ್ಯುಲರಿಸಂ

 -ರಮಾನಂದ ಐನಕೈ

ನೆಹರೂರವರು ಸಂಪೂರ್ಣ ಪಾಶ್ಚಾತ್ಯ ಶಿಕ್ಷಣ ಹಾಗೂ ಪ್ರಭಾವದಿಂದ ರೂಪಗೊಂಡವರು. ಹಾಗಾಗಿ ಅವರು ಭಾರತದ ಕುರಿತು ಚಿಂತಿಸುವಾಗ ಪಶ್ಚಿಮದಿಂದ  ಪ್ರವೇಶಿಸುತ್ತಾರೆ. ಮೂಲಭೂತವಾಗಿ ನೆಹರೂರವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಸಡ್ಡೆಯ ಭಾವನೆ ಇದೆ. ಈ ಭಾವನೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯಿಂದ ಬಂದಿದ್ದು. ಹಾಗಾಗಿ ನೆಹರೂ ಸೆಕ್ಯುಲರಿಸಂನಲ್ಲಿ  ಪ್ರಭುತ್ವ ಈ ಮೌಢ್ಯವನ್ನು ನಿವಾರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂದರೆ ಪ್ರಭುತ್ವ ಹೇಗೆ ‘ತಟಸ್ಥ’ ಇದ್ದಂತಾಯಿತು?

ನೆಹರೂ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ. ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗ್ಗೆ ಕಸನು ಕಂಡವರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಹಂತಹಂತವಾಗಿ ಪ್ರಗತಿಗೆ ತರಲು ಹೆಗಲು ಕೊಟ್ಟವರು. ಭಾರತ ಲಿಬರಲ್ ಸೆಕ್ಯುಲರ್ ರಾಷ್ಟ್ರವಾಗಿ ಪ್ರಗತಿ ಮತ್ತು ಸಮಾ ನತೆಯ ತುತ್ತತುದಿಗೆ ಹೋಗಬೇಕೆಂಬ ದೃಢವಾದ ಸಂಕಲ್ಪ ಹೊಂದಿದವರು. ಹಾಗಾದರೆ ನೆಹರೂರವರ ಪ್ರಕಾರ ಲಿಬರಲ್ ಸೆಕ್ಯುಲರ್ ನೀತಿಯೆಂದರೆ ಏನು? ಅದನ್ನೇ ನೆಹರೂ ಸೆಕ್ಯುಲರ್ ಎನ್ನುವುದು.

ಪ್ರಭುತ್ವ ಎಲ್ಲಾ ರಿಲಿಜನ್ಗಳಿಂದ ತಟಸ್ಥವಾಗಿರ ಬೇಕು ಹಾಗೂ ರಿಲಿಜನ್ನನ್ನು ತನ್ನ ಎಲ್ಲಾ ವ್ಯವಹಾರ ಗಳಿಂದ ಹೊರಗಿಡಬೇಕೆಂದು ನೆಹರೂ ಅಭಿ ಪ್ರಾಯಪಡುತ್ತಾರೆ. ಪ್ರಭುತ್ವ ರಿಲಿಜನ್ನನ್ನು ಪುರಸ್ಕರಿ ಸಿದರೆ ಆ ರಾಷ್ಟ್ರ ಒಂದು ಪ್ರಗತಿಹೀನ ರಾಷ್ಟ್ರವಾಗು ತ್ತದೆ ಎಂಬುದು ಅವರ ದೃಢವಾದ ನಂಬಿಕೆ. ನೆಹರೂ ಸೆಕ್ಯುರಿಸಂನ್ನು ವೈಜ್ಞಾನಿಕ ಸೆಕ್ಯುಲರಿಸಂ ಅಂತಲೂ ಕರೆಯುತ್ತಾರೆ. ಹಾಗಾದರೆ ಈ ವೈಜ್ಞಾನಿಕ ಸೆಕ್ಯುಲರಿಸಂ ಅಂದರೆ ಏನು?

ಮತ್ತಷ್ಟು ಓದು »