ಹರೆಯ
–ಸತೀಶ್ ರಾಮನಗರ
ಹೆಂಡ ಕುಡಿದ ಕೋತಿಯಂತ ಮನಸ್ಸು
ಎಲ್ಲಂದರಲ್ಲೇ
ಕಾರಿಕೊಳ್ಳುವ ಕನಸುಗಳು
ಹಾದಿ ತಪ್ಪಿದ ಗಮ್ಯ
ಲಗ್ಗೆಯಿಟ್ಟಲ್ಲೆಲ್ಲ ಕಾಮನ ಚಿತ್ರಗಳೇ….!
ಕಣ್ಣು ಹಾಯಿಸಿದಲ್ಲೆಲ್ಲ
ಉಬ್ಬು ತಗ್ಗುಗಳ ಮೆರೆವಣಿಗೆ
ಬೆರಗಿನಾಕರ್ಷಣೆ
ನಿಂತಲ್ಲೇ ಬಿಸಿಯುಸಿರ ಸ್ನಾನ
ಕಣ್ಣ ತುಂಬೆಲ್ಲ ನಕ್ಷತ್ರಗಳೇ ….!
ಜಾರುವ ಮನಸಿನೋಳಗೊಂದು
ಹಸಿ ಬಿಸಿ ಬಯಕೆಗಳ ಮೇಲಾಟ…!
ಬೆವರ ವಾಸನೆಗೆ
ಕನಸಿನೂರಿನ ಬಾಗಿಲ ಬಡಿದು
ಒಮ್ಮೆ ಇಣುಕುವಾಸೆ…,
ಆವೇಗ ಆವಿಯಾಗುವ ಮೊದಲೇ
ಹೊಸಲೋಕವನ್ನೊಮ್ಮೆ ಸ್ಪರ್ಶಿಸಿ
ಪ್ರಕೃತಿಯಲಿ ಲೀನವಾಗಿ
ಬೀಗುವಾಸೆ…..?
ಚಿತ್ರಕೃಪೆ :poojary-manase.blogspot.in
ಶ್ರಾದ್ಧ … ಆಚರಣೆ
-ಪ್ರಕಾಶ್ ನರಸಿಂಹಯ್ಯ
ಹುಟ್ಟು ಅಂದಮೇಲೆ ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ ಮರಣದೊಂದಿಗೆ ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ ಕರ್ಮಅಥವಾ ತಿಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡುವುದು ರೂಡಿಯಲ್ಲಿದೆ.