ಐಶ್ವರ್ಯ ಕಳೆದು ಹೋದಾಗ….!!
ಪುಟ್ಟನಿಗೆ ಕ್ರಿಕೆಟ್ ಎಂದರೆ ಪ್ರಾಣ, ಹರಿದ ಚಡ್ಡಿ ಹಾಕಿಕೊಂಡು ತೂತು ಬನಿಯನ್ನಲ್ಲೇ ಮರದ ತುಂಡೊಂದನ್ನು ಹಿಡಿದು ಆಡಲು ಹೋಗುತಿದ್ದ. ಕೈಗೆ ಸಿಕ್ಕಿದ ಉದ್ದಗಿನ ವಸ್ತುಗಳೆಲ್ಲಾ ಅವನ ಕೈಲಿ ಬ್ಯಾಟ್ ಆಗಿಬಿಡುತಿತ್ತು. ಅದಕ್ಕೆ ಬಹಳಾನೆ ಉದಾಹರಣೆಗಳು. ತೆಂಗಿನ ಮೊಟ್ಟೆ, ಮರದ ರಿಪೀಸು, ಅಷ್ಟೇ ಯಾಕೆ ಅಮ್ಮನ ಮುದ್ದೆ ಕೆಲಕುವ ಕೋಲನ್ನು ಬಿಡುತ್ತಿರಲಿಲ್ಲ. ಪುಟ್ಟನ ಅಪ್ಪ ರೈತ, ಪಾರ್ಟ್ ಟೈಮ್ ಎಲೆಕ್ಟ್ರಿಕ್ ಕೆಲಸ ಸಹ ಮಾಡುತಿದ್ದರು. ಮನೆಲಿ ೨ ಸೀಮೆ ಹಸುಗಳು ಸಹ ಇದ್ದವು, ಅಪ್ಪ ಎಲೆಕ್ಟ್ರಿಕ್ ಕೆಲಸಕ್ಕೆ ಸಾಮಾನ್ಯವಾಗಿ ಸಂಜೆ ಹೋಗುತಿದ್ದರು
ಪುಟ್ಟ ಅಷ್ಟು ಹೊತ್ತಿಗೆ ಶಾಲೆಯಿಂದ ಮನೆಗೆ ಬರುತಿದ್ದ. ಬರುವಾಗಲೇ ಆಟದ ಕನಸು ಹೊತ್ತು ಬರುತಿದ್ದ ಪುಟ್ಟ ಅಪ್ಪ ಲೋ ಮಗ ನಾನು ಕೆಲಸಕ್ಕೆ ಹೋಗ್ತಾ ಇದ್ದೇನೆ ಹಸುಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳುತಿದ್ದರು. ಅಪ್ಪನ ಮಾತಿಗೆ ಇಲ್ಲ ಎನ್ನದೆ ಮುಖ ಸೊಟ್ಟಗೆ ಮಾಡ್ಕೊಂಡು ಆಯ್ತು ಅಂತಿದ್ದ. ಆಗ ಅಪ್ಪ ಲೋ ಮಗನೆ ನಿಮ್ಮೊಳ್ಳೇದಕ್ಕೆ ಕಣೋ ದುಡೀತಾ ಇರೋದು ಬೇಜಾರು ಮಾಡ್ಕೋಳದೆ ಹೋಗೋ ಅನ್ನೋರು. ಪುಟ್ಟ ಸಹ ಸ್ವಲ್ಪ ಮೂತಿ ಸೊಟ್ಟ ಮಾಡ್ಕೊಂಡು ಹಸು ಮೇಸಕ್ಕೆ ಕೆರೆ ಬಯಲಿಗೆ ಹೋಗ್ತಾ ಇದ್ದ.
ಕೆರೆ ಬಯಲಲ್ಲಿ ಪುಟ್ಟನ ತರಹವೇ ಇನ್ನೂ ಸುಮಾರು ಹುಡುಗರು ಬರುತಿದ್ದರು. ಹಸುಗಳನ್ನು ಬಯಲಲ್ಲಿ ಬಿಟ್ಟು ಎಲ್ಲರೂ ಸೇರಿ ಕಲ್ಲನ್ನು ವಿಕೆಟ್ನಂತೆ ಜೋಡಿಸಿ ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಸೂರ್ಯ ಬೈದು ಮನೇಗೆ ಹೋಗ್ರೋ ಅನ್ನೋವರೆಗು ಆಡುತಿದ್ದರು. ಪುಟ್ಟ ಒಳ್ಳೆಯ ಬೌಲರ್ ಆಗಿದ್ದ. ಬಹಳ ದೂರದಿಂದ ಓಡಿ ಬರದಿದ್ದರೂ ವೇಗವಾಗಿ ಚೆಂಡು ಎಸೆಯುವ ತಂತ್ರಗಾರಿಕೆ ಅವನಲ್ಲಿತ್ತು. ಆಗಾಗ ಲೆಗ್ ಸ್ಪಿನ್ ಹಾಕುತಿದ್ದ ಇದ್ದಕ್ಕಿದ್ದಂತೆ ಆಫ್ ಸ್ಪಿನ್ ಹಾಕುತಿದ್ದ. ಅವನ ಎಸತದಲ್ಲೇ ವೇಗವಾಗಿ ಸ್ಪಿನ್ ಆಗತಿದ್ದುದ್ದನ್ನು ಆಡಲಾಗದೆ ಬ್ಯಾಟಿಂಗ್ ಮಾಡುತ್ತಿರುವರೆಲ್ಲ ತತ್ತರಿಸುತಿದ್ದರು. ಎಲ್ಲಾ ಆಡಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಸುಗಳನ್ನು ಕರೆದುಕೊಂಡು ಮನೆಗೆ ಮರಳುತಿದ್ದರು. ಮತ್ತಷ್ಟು ಓದು