ವಿಷಯದ ವಿವರಗಳಿಗೆ ದಾಟಿರಿ

Archive for

31
ಜನ

ನಿಲುಮೆ ಮಂಥನ

-ತ್ರಿವೇಣಿ, ಮ್ಯೆಸೂರು

ನಿಲುಮೆಯ ಆತ್ಮೀಯ ಬೆಂಬಲಿಗರೇ,

ನಿಲುಮೆಯು ಸತತ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕನ್ನಡ ಸಾರಸತ್ವ ಲೋಕದಲ್ಲಿ  ಸತತವಾಗಿ ಲೇಖನ, ಕವನ, ಚರ್ಚೆ, ಪ್ರಚಲಿತ ವಿದ್ಯಮಾನ, ಸಂಸ್ಕೃತಿ, ಕನ್ನಡ, ಕರ್ನಾಟಕ, ಭಾರತ, ವಿಜ್ಣಾನ, ಕನ್ನಡಿಗರಿಗೆ ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲಿದೆ. ಇದಕ್ಕೆ ಬೆನ್ನುತಟ್ಟಲು ನಿಮ್ಮೆಲ್ಲರ ಬೆಂಬಲವಿಲ್ಲದೆ ಅದು ಸಾಧ್ಯವಾಗಿಯೂ ಇಲ್ಲ, ಅನ್ನೋದು ಮರೆತಿಲ್ಲ. ಅದೆಷ್ಟೊ ಲಕ್ಷ ಓದುಗರು ನಿಲುಮೆಯೊಂದಿಗೆ ಅವಿನಾನುಭಾವ ಸಂಬಂಧ ಬೆಸೆದುಕೊಂಡಿರುವರು. ಈ ಹಂತಕ್ಕೆ ನಿಲುಮೆ ಬೆಳೆದು ಬರಲು ಹಾದಿಯೇನು ಅಷ್ಟು ಸುಲಭವಾಗೇನು ಇರಲಿಲ್ಲ. ಮೊದಲಿಗೆ ಸ್ನೇಹಿತರ ಸಣ್ಣ ಗುಂಪೊಂದು ವರ್ಡ್ ಪ್ರೆಸ್ಸಿನಲ್ಲಿ ತನ್ನ ಖಾತೆಯನ್ನು ತೆರೆದಾಗ ಅರವಿಂದ್ ಎಂಬುವವರ ಮೊದಲ ಲೇಖನ ರಂಗೋಲಿ.. ಚಿತ್ತ ಚಿತ್ತಾರಗಳ ನಡುವೆ ಎಂಬ ಶೀರ್ಷಿಕೆಯೊಂದಿಗೆ ೫ನೇ ಅಕ್ಟೋಬರ್ ೨೦೧೦ ಪ್ರಕಟವಾಯ್ತು. ಅಸಲಿಗೆ ನಿಲುಮೆ ನಾನು ನೋಡಿದ್ದು, ರಂಗೋಲಿಗಳು ಎಂದು ಗೂಗಲಿನಲ್ಲಿ ಹುಡುಕಲು ಹೋದಾಗ ನಾನು ಹುಡುಕ ಹೊದದ್ದೇ ಒಂದು, ಸಿಕ್ಕಿದ್ದು ಮಾತ್ರ ಭರಪೂರ ರೋಮಾಂಚನ, ನಿಲುಮೆ ಹೆಸರು ಯಾಕೋ ಅಂದು ಬಹಳ ಇಷ್ಟವಾಗಿತ್ತು. ನಂತರ ದಿನಕ್ಕೊಂದರಂತೆ ಅತ್ಯುತ್ತಮ ಲೇಖನಗಳು ಬರತೊಡಗಿದಾಗ ಆ ಬ್ಲಾಗ್ ದಿನಕ್ಕೆ ಒಂದೆರಡು ಸಾರಿಯಾದರೂ ತೆರೆಯದೆ ಇರುವ ಮನಸ್ಸಾಗದೇ ಇರಲಿಲ್ಲ. ಆ ಲೇಖನಗಳ ಸ್ಪೂರ್ತಿಯಿಂದ ನನ್ನಲ್ಲು ಬರೆಯುವ ಅಮಿತ ಉತ್ಸಾಹವಿದ್ದರೂ ಬರೆದದ್ದೂ ಮಾತ್ರ ಈಗಲೇ, ನನ್ನಂತವಳಲ್ಲಿ ಲೇಖಕಿಯನ್ನು ಬೆಳೆಸಿದ ನಿಲುಮೆಗೆ ಅನಂತ ಧನ್ಯವಾದಗಳು. ನನ್ನ ನೆನಪಂತೆ ದಿನಕ್ಕೆ ಕೆಲವೇ ಕೆಲವು ಬೆಂಬಲಿಗರು ಬಂದು ನಿಲುಮೆಯ ಕದ ತಟ್ಟಿ ಹೋಗುತ್ತಿದ್ದರು. ಅಂದಿಗೆ ದಿನದ ಭೇಟಿಗಳು ಹೆಚ್ಚೆಂದರೆ ನೂರರ ಆಸುಪಾಸಿನಲ್ಲಿ ಓಡಾಡುತ್ತಿತ್ತು.

ಮತ್ತಷ್ಟು ಓದು »