ವಿಷಯದ ವಿವರಗಳಿಗೆ ದಾಟಿರಿ

Archive for

30
ಜನ

ಉದ್ಯೋಗಾವಕಾಶ ಅಲ್ಲಲ್ಲಿ…

ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ 2000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2012. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್‌ ಒಟ್ಟು ಹುದ್ದೆ: 2000

ವೇತನ ಶ್ರೇಣಿ: ರೂ.14500-25700/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರದ ಮೇಲೆ, ಗುಂಪು ಸಂದರ್ಶನ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ http://www.canarabank.com ವೆಬ್‌ಸೈಟ್ ಸಂಪರ್ಕಿಸಿ.

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 618 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012.

ಹುದ್ದೆ ಹೆಸರು: 1) ಹೆಡ್-ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)

ಒಟ್ಟು ಹುದ್ದೆ: 58 ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 19 ವರ್ಷ.ಗರಿಷ್ಠ 25 ವರ್ಷ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಮೋಟಾರ್ ಮೆಕಾನಿಕಲ್‌ನಲ್ಲಿ ಸರ್ಟಿಫಿಕೇಟ್.

ಹುದ್ದೆ ಹೆಸರು: 2) ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)

ಒಟ್ಟು ಹುದ್ದೆ: 135

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಆಟೊ ಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಸರ್ಟಿಫಿಕೇಟ್.

ಹುದ್ದೆ ಹೆಸರು: 3) ಕಾನ್‌ಸ್ಟೇಬಲ್ (ಡ್ರೈವರ್)

ಒಟ್ಟು ಹುದ್ದೆ: 425

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಅರ್ಜಿ ಶುಲ್ಕ: ರೂ. 50/- ವಿಳಾಸ: ಇನ್‌ಸ್ಪೆಕ್ಟರ್ ಜನರಲ್ (ನಾರ್ಥ್) ಫ್ರಾಂಟಿಯರ್, ಐಟಿಬಿಪಿ, ಪೋಸ್ಟ್-ಸೀಮದ್ವಾರ್ (ಇಂದಿರಾ ನಗರ), ಡಿಸ್ಟ್ರಿಕ್ಟ್ ಡೆಹಡ್ರೂನ್-248156 (ಉತ್ತರಾಖಂಡ) ಹೆಚ್ಚಿನ ವಿವರ ಹಾಗೂ ಮಾಹಿತಿಗೆ http://itbp.gov.in/ ವೆಬ್‌ಸೈಟ್ ಸಂಪರ್ಕಿಸಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ 775 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012.

ಹುದ್ದೆ ಹೆಸರು: ಮ್ಯಾನೇಜ್‌ವೆುಂಟ್ ಟ್ರೈನೀಸ್

ಒಟ್ಟು ಹುದ್ದೆ: 775

ವೇತನ ಶ್ರೇಣಿ: ರೂ.14500-25700/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.

ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರ ಮೇಲೆ ಹಾಗೂ ಸಂದರ್ಶನ * ಏಪ್ರಿಲ್-ಮೇನಲ್ಲಿ (2012) ನಡೆಯಲಿದೆ. ಹೆಚ್ಚಿನ ಮಾಹಿತಿಗೆ http://www.pnbindia.in ವೆಬ್‌ಸೈಟ್ ಸಂಪರ್ಕಿಸಿ. ದಿ ಓರಿಯಂಟಲ್ ಇನ್ಸುರೆನ್ಸ್ ದಿ ಓರಿಯಂಟಲ್ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್‌ನಲ್ಲಿ 477 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012. ಲಿಖಿತ ಪರೀಕ್ಷೆ: 08-04-2012

ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟೀವ್ ಆಫೀಸರ್ (ಎಒ)

ಒಟ್ಟು ಹುದ್ದೆ: 477

ವೇತನ ಶ್ರೇಣಿ: ರೂ.17240-32640/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಶುಲ್ಕ: ರೂ. 500/- * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ http://www.orientalinsurance.org.in ವೆಬ್‌ಸೈಟ್ ಸಂಪರ್ಕಿಸಿ.

ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012. ಲಿಖಿತ ಪರೀಕ್ಷೆ ದಿನಾಂಕ: 22-04-2012.

ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) ಗ್ರೇಡ್-ಎ

ಒಟ್ಟು ಹುದ್ದೆ: 07

ವೇತನ ಶ್ರೇಣಿ: ರೂ.17100-33200/-

ವಯೋಮಿತಿ: 30 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ಇದೆ. * ಪೋಸ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2012

ವಿಳಾಸ: ಜನರಲ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸ್ ಬೋರ್ಡ್, ಪೋಸ್ಟ್ ಬಾಕ್ಸ್ ನ. 4618, ಮುಂಬೈ ಸೆಂಟ್ರಲ್ ಪೋಸ್ಟ್ ಆಫೀಸ್, ಮುಂಬೈ-400008

ಹೆಚ್ಚಿನ ಮಾಹಿತಿಗೆ http://www.rbi.org.in ವೆಬ್‌ಸೈಟ್ ಸಂಪರ್ಕಿಸಿ. http://www.canarabank.com/ http://www.canarabank.com

30
ಜನ

ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.

– ಪೂರ್ಣಚಂದ್ರ

(ಇತ್ತೀಚಿಗೆ ದಿನೇಶ್ ಅಮಿನ್  ಮಟ್ಟು ಅವರು ಬರೆದ ಬಹುಚರ್ಚಿತ ಲೇಖನಕ್ಕೆ ಪೂರ್ಣಚಂದ್ರ ಅವರು ಪ್ರತಿಕ್ರಿಯಯನ್ನು ಕಳುಹಿಸಿದ್ದಾರೆ. ಓದಿ..)

ಪ್ರೀತಿಯ ಮಟ್ಟು ಸರ್,

ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.
ನಮಸ್ಕಾರಗಳು. ನನ್ನ ಪರಿಚಯ ನಿಮಗೆ ಇಲ್ಲ ಎಂದು ಕಾಣುತ್ತೆ. ಆದರೆ, ನಿಮ್ಮ ಪರಿಚಯ ನನಗೆ ೧೦ ವರ್ಷದ್ದು. ನಿಮ್ಮ ಅಂಕಣಗಳನ್ನು ಓದುತ್ತಾ ಬೆಳೆದವನು ನಾನು.

ವಿವೇಕಾನಂದರ ಬಗ್ಗೆ ನೀವು ಬರೆದ ಲೇಖನ ಓದಿದ ಬಳಿಕ, ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಅಷ್ಟರಲ್ಲಿಯೇ ವಿವೇಕಾನಂದರ ಪರ ಎಂದು ಭ್ರಮಿಸಿರುವ, ಭಾವಿಸಿಕೊಂಡಿರುವ ಬಲಪಂಥೀಯ ಮೂಲಭೂತವಾದಿಗಳು ನಿಮ್ಮ ವಿರುದ್ಧ ಕತ್ತಿ ಬೀಸಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ, ತಾವು ಮಟ್ಟು ಪರ(ವಿವೇಕನಂದ ಪರ ಅಲ್ಲ) ಎಂದು ಭ್ರಮಿಸಿರುವ ಎಡಪಂಥೀಯ ಹಾಗೂ ಪ್ರಗತಿಪರ ಮೂಲಭೂತವಾದಿಗಳು ಕೂಡ ತಮ್ಮ ಕತ್ತಿಗೆ ಸಾಣೆ ಹಿಡಿಯಲಾರಂಭಿಸಿದರು.

ಈ ಎರಡೂ ವರ್ಗದ ಮೂಲಭೂತವಾದಿಗಳು ಶಿವಮೊಗ್ಗ ಮತ್ತು ಬೆಂಗಳೂರಿನ ಬೀದಿಗಳಲ್ಲಿ, ನಿಮ್ಮ ಕಚೇರಿ ಎದುರು, ಬ್ಲಾಗ್‌ಗಳಲ್ಲಿ ಕತ್ತಿ ಬೀಸಾಡುವಾಗ ಮಧ್ಯೆ ಪ್ರವೇಶಿಸಲು ಭಯವಾಯಿತು. ಯಾರದ್ದಾದರೂ ಕತ್ತಿ ನನ್ನನ್ನೇ ತಿವಿದುಬಿಡಬಹುದು ಎಂದು ಸುಮ್ಮನಾದೆ. ಈಟಿ, ಭರ್ಜಿ, ಕತ್ತಿ ಗುರಾಣಿಗಳ ಅಬ್ಬರ ಕಡಿಮೆಯಾಗಿದೆ. ಹಾಗಾಗಿ ಇದು ಸೂಕ್ತ ಸಮಯ ಎಂದು ನನಗನಿಸಿದ್ದ ಕೆಲ ಸಂಗತಿಗಳನ್ನು ಹೇಳಲು ಪ್ರಯತ್ನಿಸುವೆ. ಮತ್ತಷ್ಟು ಓದು »

30
ಜನ

ಸಂಸ್ಕೃತಿ ಸಂಕಥನ – 20 – ಬುದ್ಧನನ್ನು ಹೈಜಾಕ್ ಮಾಡಿದ ಪ್ರೊಟೆಸ್ಟಾಂಟರು

-ರಮಾನಂದ ಐನಕೈ

ಎಲ್ಲರಿಗೂ ಅಚ್ಚರಿಯಾಗಬಹುದು. ಪ್ರೊಟೆಸ್ಟಾಂಟರು ಹೇಗೆ ಮತ್ತು ಏಕೆ ಬುದ್ಧಿಸಂನ್ನು ಹೈಜಾಕ್ ಮಾಡಿದರು ಎಂಬುದು. ಇಲ್ಲಿ ಹೈಜಾಕ್ ಅಂದರೆ ಅಪಹರಣ ಎಂಬ ಅರ್ಥವಲ್ಲ. ಪ್ರೊಟೆ ಸ್ಟಾಂಟರು ಬುದ್ಧಿಸಂನ್ನು ಹೇಗೆ ತಮ್ಮ ಸಮರ್ಥನೆ ಗಾಗಿ ಬಳಸಿಕೊಂಡರು ಎಂಬುದು. ಇದರ ಹಿಂದೆ ಸ್ವತಃ ಭಾರತೀಯರಿಗೆ ಅರ್ಥವಾಗದ ಹಲವು ರಹಸ್ಯಗಳಿವೆ. ಈ ರಹಸ್ಯಗಳನ್ನು ಬಾಲಗಂಗಾಧರರು ಸ್ವಾರಸ್ಯವಾಗಿ ಭೇದಿಸುತ್ತಾರೆ.

ಸಮಕಾಲೀನ ಭಾರತೀಯ ಚಿಂತಕರಿಗೆ ಬುದ್ಧಿಸಂ ಕುರಿತಾಗಿ ಒಂದು ಪೂರ್ವಗ್ರಹಿತ ಅಭಿ ಪ್ರಾಯಗಳಿವೆ. ಬುದ್ಧಿಸಂ ಮಾನವೀಯತೆಗಾಗಿ ಹೋರಾಡುತ್ತಿದೆ. ಇದು ಸಮಾಜದಲ್ಲಿನ ಅನಿಷ್ಟ ವನ್ನು ವಿರೋಧಿಸಿದೆ. ಯಜ್ಞಯಾಗಾದಿಗಳನ್ನು ಧಿಕ್ಕರಿಸಿದೆ. ಪ್ರಾಣಿ ಬಲಿ ವಿರೋಧಿಸಿ ಅಹಿಂಸಾ ತತ್ವ ಮೆರೆದಿದೆ. ಈ ಮೂಲಕ ಹಿಂದೂ ಯಿಸಂನ್ನು ವಿರೋಧಿಸಿದೆ. ಭಾರತದ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದೆ. ಇಲ್ಲಿನ ವರ್ಣಾ ಶ್ರಮವನ್ನು ವಿರೋಧಿಸಿದೆ. ಇಲ್ಲಿನ ಪುರೋಹಿತ ಶಾಹಿಯನ್ನು ಹಾಗೂ ಬ್ರಾಹ್ಮಣರನ್ನು ವಿರೋಧಿಸಿದೆ. ಹಾಗಾಗಿ ಇದೊಂದು ವಿಶ್ವಮಾನ್ಯವಾದ ರಿಲಿಜನ್. ಬುದ್ಧಿಸಂ ಸಮಾಜದಲ್ಲಿನ ತರತಮ ವನ್ನು ಸಹಿಸುವುದಿಲ್ಲ. ಮನುಷ್ಯರ ಏಳ್ಗೆಗಾಗಿ ಹಂಬಲಿಸುತ್ತದೆ ಇತ್ಯಾದಿ. ಈ ಕಾರಣಕ್ಕಾಗೆ ನಮ್ಮ ದೇಶದ ದಲಿತ ಚಿಂತಕರೆಲ್ಲ ಬುದ್ಧಿಸಂ ಕಡೆಗೆ ಆಕರ್ಷಿತರಾದರು. ಅಂಬೇಡ್ಕರರು ಕೂಡ ಬುದ್ಧಿಸಂಗೆ ಮತಾಂತರ ಹೊಂದಿದ್ದು ಈ ಆಕರ್ಷಣೆಯಿಂದ. ನಿಜವಾಗಿಯೂ ಇದು ನಿಜವೆ? ಭಾರತೀಯ ಸಂಸ್ಕೃತಿಯೊಂದಿಗೆ ಬುದ್ಧಿಸಂ ವಿರೋಧವಾಗಿಯೇ ನಡೆದುಕೊಂಡು ಬಂದಿ ದೆಯೇ? ನಿಜವಾಗಿಯೂ ಬುದ್ಧ ವರ್ಣಾಶ್ರಮ ದಿಂದ ಹೊರಗುಳಿದು ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿದನೇ? ಈಗ ನಾವು ವಿಸ್ಮೃತಿಯಿಂದ ಸ್ಮೃತಿಗೆ ಬರಬೇಕಾಗಿದೆ.

ಮತ್ತಷ್ಟು ಓದು »